ವಾರದ ಏಳು ದಿನ ಯಾವ ಯಾವ ಮಂತ್ರವನ್ನು ಜಪಿಸಬೇಕು ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಒಂದು ವೇಳೆ ಪ್ರತಿದಿನವೂ ನಾವು ಚೆನ್ನಾಗಿರಬೇಕು ಎಂದರೆ ಮೊದಲಿಗೆ ನಮ್ಮ ಮನಸ್ಸು ಸ್ವಚ್ಛವಾಗಿರಬೇಕು, ಶಾಂತಿಯಿಂದ ಇರಬೇಕು. ನಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಬೇಕೆಂದರೆ ದೈವಬಲ ಎಂಬುದು ನಮ್ಮ ಜೊತೆ ಇರಬೇಕು. ದೇವರನ್ನು 24 ಗಂಟೆಗಳ ಕಾಲ ಪೂಜಿಸಬೇಕು ಎಂಬುದು ಇಲ್ಲ, ಆದರೆ ಮುಂಜಾನೆ ಸ್ನಾನವನ್ನು ಮಾಡಿ ಕೆಲವು ಸಮಯ ದೇವರ ಮಂತ್ರವನ್ನು ಭಕ್ತಿಯಿಂದ ಜಪಿಸಿದರೆ ಸಾಕು ಭಗವಂತನು ಸಂತುಷ್ಟನಾಗುತ್ತಾನೆ. ಹಾಗಾದರೆ ವಾರದ ಏಳು ದಿನ ಯಾವ ಯಾವ ಮಂತ್ರವನ್ನು ಜಪಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.

ಭಾನುವಾರ ಶಕ್ತಿದೇವತೆ ಹಾಗೂ ಸೂರ್ಯದೇವನ ದಿನ ಎಂದು ಕರೆಯಲಾಗುತ್ತದೆ. ಹಾಗಾಗಿ ಭಾನುವಾರದಂದು ದುರ್ಗಾದೇವಿಯನ್ನು ಸ್ಮರಿಸಿಕೊಂಡು ಓಂ ದುರ್ಗಾಯ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸುವುದರಿಂದ ದುರ್ಗಾದೇವಿಯ ಅನುಗ್ರಹಕ್ಕೆ ಪ್ರಾಪ್ತಿಯಾಗಬಹುದು. ಹಾಗೆಯೇ ಭಾನುವಾರದಂದು ಓಂ ಸೂರ್ಯದೇವಾಯ ನಮಃ ಎಂಬ ಮಂತ್ರವನ್ನು ಜಪಿಸುವುದು ಒಳ್ಳೆಯದು. ಸೂರ್ಯದೇವನ ಏಳು ಕುದುರೆಗಳು ವಾರದ ಏಳು ದಿನಗಳನ್ನು ಸೂಚಿಸುತ್ತದೆ.ಸೋಮವಾರ ಶಿವನ ಆರಾಧನೆಯ ದಿನವಾಗಿದೆ ಹಾಗಾಗಿ ಶಿವನ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜಪಿಸುವುದರಿಂದ ಕಷ್ಟಗಳೆಲ್ಲ ಕರಗಿ ಹೋಗುತ್ತದೆ. ಯಾವ ವ್ಯಕ್ತಿಯು ಈ ಮಂತ್ರವನ್ನು ಪ್ರತಿನಿತ್ಯ ಜಪಿಸುತ್ತಾನೋ ಅವನಿಗೆ ಕಷ್ಟಗಳು ಹತ್ತಿರವೂ ಸುಳಿಯುವುದಿಲ್ಲ. ಶಿವನ ಈ ಮಂತ್ರವು 5 ಅಕ್ಷರಗಳಿಂದ ಕೂಡಿದೆ. ಈ 5 ಅಕ್ಷರವೂ ಭೂಮಿ,ನೀರು, ಬೆಂಕಿ, ಗಾಳಿ ಹಾಗೂ ಆಕಾಶವನ್ನು ಸೂಚಿಸುತ್ತದೆ ಮತ್ತು ಇವುಗಳನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ.

ಮಂಗಳವಾರ ಆಂಜನೇಯಸ್ವಾಮಿಗೆ ಅರ್ಪಿತವಾದ ದಿನವಾಗಿದೆ. ಮಂಗಳವಾರದಂದು ಓಂ ಶ್ರೀ ಹನುಮತೇ ನಮಃ ಹಾಗೂ ಹನುಮನ್ ಗಾಯತ್ರಿ ಮಂತ್ರವನ್ನು ಯಾರು ಜಪಿಸುತ್ತಾರೋ ಅವರೇ ಪುಣ್ಯವಂತರು ಹಾಗೂ ಅವರು ಮಾಡುವ ಕೆಲಸಕಾರ್ಯಗಳಲ್ಲಿ ಯಶಸ್ಸು ಎಂಬುದು ಕಟ್ಟಿಟ್ಟ ಬುತ್ತಿ.

ಬುದುವಾರ ವಿಘ್ನವಿನಾಶಕ ಗಣೇಶನನ್ನು ನೆನೆಯುವ ದಿನ. ಓಂ ಶ್ರೀ ಗಣೇಶಾಯ ನಮಃ ಎಂಬ ಮಂತ್ರವನ್ನು ಹೇಳಿಕೊಂಡು ಭಗವಂತನನ್ನು ಪೂಜಿಸಬೇಕು. ಯಾರ ಮನೆಯಲ್ಲಿ ಪ್ರತಿನಿತ್ಯ ಈ ಮಂತ್ರವನ್ನು ಜಪಿಸುತ್ತಾರೋ ಅಂತವರು ಸುಖ-ಶಾಂತಿ ಹಾಗೂ ನೆಮ್ಮದಿಯಿಂದ ಜೀವನವನ್ನು ನಡೆಸಬಹುದು.ಗುರುವಾರ ಮಹಾವಿಷ್ಣು, ರಾಘವೇಂದ್ರ ಸ್ವಾಮಿಯ ಹಾಗೂ ಸಾಯಿಬಾಬಾ ದೇವರ ಪೂಜಿಸುವ ದಿನ. ಮಹಾವಿಷ್ಣುವನ್ನು ಸ್ಮರಿಸಿಕೊಂಡು ಓಂ ನಮೋ ನಾರಾಯಣಾಯ ನಮಃ ಮಂತ್ರ ಹೇಳಬೇಕು. ಗುರುರಾಯರನ್ನು ನೆನಪಿಸಿಕೊಂಡು ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ಮಂತ್ರವನ್ನು ಹೇಳಬೇಕು. ಸಾಯಿಬಾಬಾರನ್ನು ನೆನಪಿಸಿಕೊಂಡು ಶಾಂತಚಿತ್ತ ಮಹಾ ಪ್ರಜ್ಞೆ ಸಾಯಿನಾಥ ದಯಾ ಧನ ದಯಾಸಿಂಧು ಸತ್ಯ ಸ್ವರೂಪ ಮಾಯಾತಮವಿನಾಶನ ಎಂಬ ಶ್ಲೋಕವನ್ನು ಸ್ಮರಣೆ ಮಾಡಬೇಕು.

ಶುಕ್ರವಾರ ಮಹಾಲಕ್ಷ್ಮಿಯ ದಿನ. ಓಂ ಶ್ರೀ ಮಹಾಲಕ್ಷ್ಮಿಚ ವಿದ್ಮಹೆ ವಿಷ್ಣು ಪತ್ನೈಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಎಂಬ ಮಂತ್ರವನ್ನು ಹೇಳುವುದರಿಂದ ಮನಸ್ಸು ಹಾಗೂ ಮನೆಯೂ ಬೆಳಗುತ್ತದೆ.

ಶನಿವಾರ ಶನಿದೇವರಿಗೆ ಅರ್ಪಿತವಾದ ದಿನ. ಹಂ ಹನುಮತೇ ರುದ್ರಾತ್ಮಕಾಯ ಹುಂ ಘಟ್ ಓಂ ಶನಿದೇವಾಯ ನಮಃ ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ ಛಾಯಾ ಮಾರ್ತಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ಎಂಬ ಮಂತ್ರವನ್ನು ಜಪಿಸುವುದರಿಂದ ಶನೇಶ್ವರ ಹಾಗೂ ಆಂಜನೇಯನ ಕೃಪಾಕಟಾಕ್ಷವೂ ಲಭಿಸುತ್ತದೆ.