ಸಾಮಾನ್ಯವಾಗಿ ದಾರಿಯಲ್ಲಿ ಓಡಾಡುವಾಗ ಹಲವರಿಗೆ ನಾಣ್ಯಗಳು, ನೋಟುಗಳು ಸಿಗುತ್ತಿರುತ್ತವೆ. ಆದರೆ ಸಿಕ್ಕಿದ ಹಣವನ್ನು ಹಾಗೂ ನಾಣ್ಯವನ್ನು ಏನು ಮಾಡಬೇಕೆಂಬ ಅರಿವಿಲ್ಲದೆ ಕೆಲವರು ದೇವರ ಹುಂಡಿಗೆ ಹಾಕುತ್ತಾರೆ ಮತ್ತೆ ಕೆಲವರು ಲಕ್ಷ್ಮೀದೇವಿ ಅನುಗ್ರಹ ಎಂದು ತಮ್ಮ ಖರ್ಚಿಗೆ ಉಪಯೋಗಿಸಿಕೊಳ್ಳುತ್ತಾರೆ. ಹೀಗೆ ದಾರಿಯಲ್ಲಿ ಸಿಕ್ಕ ಹಣವನ್ನು ಖರ್ಚು ಮಾಡಬಾರದು ಹಾಗೂ ದೇವರ ಹುಂಡಿಗೂ ಹಾಕಬಾರದು. ಹಾಗಾದರೆ ದಾರಿಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.ಮೊದಲಿಗೆ ದಾರಿಯಲ್ಲಿ ಹೋಗುವಾಗ ನಾಣ್ಯಗಳು, ಹಣವು ಸಿಕ್ಕರೆ ಅದರ ಅರ್ಥ ಏನೆಂಬುದನ್ನು ತಿಳಿದುಕೊಳ್ಳಬೇಕು. ಒಂದು ವೇಳೆ ನಾಣ್ಯವು ಸಿಕ್ಕರೆ ಪೂರ್ವಜರ ಆಶೀರ್ವಾದ ಸಿಕ್ಕಂತೆ ಎಂಬ ಅರ್ಥವನ್ನು ಕೊಡುತ್ತದೆ. ನಾಣ್ಯಗಳು ಸಿಕ್ಕರೆ ಅದು ಶುಭಸೂಚನೆಯಾಗಿ ಇರುತ್ತದೆ. ನಿಂತುಹೋದ ಕೆಲಸ ಕಾರ್ಯಗಳು ಪರಿಪೂರ್ಣವಾಗುತ್ತದೆ, ಕೆಲಸದಲ್ಲಿ ಯಾವಾಗಲೂ ಪ್ರಗತಿ ಇರುತ್ತದೆ. ಹಣವು ಲಕ್ಷ್ಮಿಯ ಸಂಕೇತವಾಗಿರುವುದರಿಂದ ಶುಭ ಸೂಚನೆಯಾಗಿರುತ್ತದೆ.ಒಂದು ವೇಳೆ ನೀವು ಯಾವುದಾದರೂ ಕೆಲಸದ ಬಗ್ಗೆ ಯೋಚನೆ ಮಾಡಿಕೊಂಡು ಹೋಗುವಾಗ ಅಥವಾ ವ್ಯಾಪಾರದ ಬಗ್ಗೆ ಅಥವಾ ಕೆಲಸ ಹುಡುಕುವ ಯೋಜನೆಯನ್ನು ಹಾಕಿಕೊಂಡು ಹೋಗುವಾಗ ನಾಣ್ಯ ಅಥವಾ ನೋಟು ಸಿಕ್ಕರೆ ಅದು ಶುಭ ಸೂಚನೆಯಾಗಿರುತ್ತದೆ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿ ಹಾಗೂ ಕೆಲಸ ಹುಡುಕುತ್ತಿರುವವರಿಗೆ ಕೆಲಸವು ಸಿಗುತ್ತದೆ. ಜೀವನದಲ್ಲಿ ತುಂಬಾ ಕಷ್ಟ ಪಡುತ್ತಿದ್ದಾರೆ ಈ ನಾಣ್ಯದಿಂದ ಮುಂದಿನ ದಿನಗಳಲ್ಲಿ ಲಕ್ಷ್ಮಿಯ ಕೃಪೆಯಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬ ಸೂಚನೆಯನ್ನು ನೀಡುತ್ತದೆ.ಈ ನಾಣ್ಯವು ನಿಮಗೇನಾದರೂ ಮಂಗಳವಾರ ಹಾಗೂ ಶುಕ್ರವಾರ ದಿನ ಸಿಕ್ಕರೆ ಅದನ್ನು ಮನೆಗೆ ತೆಗೆದುಕೊಂಡು ಬಂದು ಹಾಲಿನಿಂದ ಅಥವಾ ಗೋಮೂತ್ರದಿಂದ ತೊಳೆದು ದೇವರಮುಂದೆ ಇಟ್ಟು ನಮಸ್ಕಾರ ಮಾಡಿ ಪ್ರತಿನಿತ್ಯ ಪೂಜೆ ಮಾಡುತ್ತಾ ಬರಬೇಕು. ಹೀಗೆ ಪ್ರತಿನಿತ್ಯ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ. ಈ ರೀತಿಯಾಗಿ ಸಿಕ್ಕ ನಾಣ್ಯವನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಲು ಹೋಗಬೇಡಿ. ಒಂದು ವೇಳೆ ನಿಮಗೆ ಏನಾದರೂ ದಾರಿಯಲ್ಲಿ ದೊಡ್ಡ ಮೊತ್ತದ ಹಣ ಅಥವಾ ಪರ್ಸ್ ಸಿಕ್ಕರೆ ಅದನ್ನು ಯಾರು ಕಳೆದುಕೊಂಡಿರುತ್ತಾರೋ ಅವರಿಗೆ ಹಿಂದಿರುಗಿಸಲು ಪ್ರಯತ್ನಪಡಿ ಏಕೆಂದರೆ ಅವರೇನಾದರೂ ನೊಂದಿಕೊಂಡರೆ ನಿಮಗೆ ಸಿಕ್ಕಿರುವ ದುಡ್ಡಿನಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಹಾಗೂ ಅದರಿಂದ ಕಷ್ಟದ ದಿನಗಳು ನಿಮ್ಮ ಜೀವನದಲ್ಲಿ ಪ್ರಾರಂಭವಾಗುತ್ತದೆ.