ಲಕ್ಷ್ಮೀದೇವಿ ಪೂಜೆಯನ್ನು ಯಾವ ಪ್ರಕಾರ ಹಾಗೂ ಯಾವ ದಿಕ್ಕಿನಲ್ಲಿ ಕುಳಿತುಕೊಂಡು ಮಾಡಬೇಕು ಎಂಬುದರ ಅರಿವಿದೆಯ..ಲಕ್ಷ್ಮಿ ಪೂಜೆಯನ್ನು ಮಾಡಬೇಕಾದರೆ ಯಾವ ದಿಕ್ಕಿನಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಬೇಕು ಹಾಗೂ ಪೂಜೆ ಮಾಡುವವರು ಯಾವ ದಿಕ್ಕಿನಲ್ಲಿ ಕುಳಿತುಕೊಂಡು ಪೂಜೆ ಮಾಡಬೇಕು ಎಂಬುದರ ಬಗ್ಗೆ ವಿಶೇಷವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಮನೆಯಲ್ಲಿ ಲಕ್ಷ್ಮೀದೇವಿಯನ್ನು ಯಾವ ದಿಕ್ಕಿಗೆ ಪ್ರತಿಷ್ಠಾಪನೆ ಮಾಡಬೇಕೆಂದರೆ ಉತ್ತರ ದಿಕ್ಕಿಗೆ. ಏಕೆಂದರೆ ಲಕ್ಷ್ಮಿಗೆ ತುಂಬಾ ಪ್ರಿಯವಾದ ದಿಕ್ಕು ಉತ್ತರ. ಆದ್ದರಿಂದ ಉತ್ತರ ದಿಕ್ಕಿನಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ಪೂಜೆ ಮಾಡುವವರು ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿಕೊಂಡು ಪೂಜೆಯನ್ನು ಮಾಡಬೇಕು. ಒಂದು ವೇಳೆ ನಿಮ್ಮ ದೇವರಕೋಣೆಯಲ್ಲಿ ಜಾಗದ ತೊಂದರೆ ಇದ್ದರೆ ಪೂರ್ವ ದಿಕ್ಕಿನಲ್ಲಿ ಕುಳಿತುಕೊಂಡು ಪೂಜೆಯನ್ನು ಮಾಡಬಹುದು. ಆದರೆ ಉತ್ತರ ದಿಕ್ಕಿನಲ್ಲಿ ಕುಳಿತುಕೊಂಡು ಪೂಜೆ ಮಾಡುವುದು ತುಂಬಾ ಒಳ್ಳೆಯದು.
ಲಕ್ಷ್ಮಿ ದೇವಿಯ ಪೂಜೆ ಮಾಡುವುದಕ್ಕೂ ಮೊದಲು ಗಣೇಶನ ಪೂಜೆಯನ್ನು ಮಾಡಬೇಕು ಇದರಿಂದ ಲಕ್ಷ್ಮೀದೇವಿಗೆ ತುಂಬಾ ಇಷ್ಟವಾಗುತ್ತದೆ. ಆದ್ದರಿಂದ ಲಕ್ಷ್ಮೀದೇವಿಯ ಬಲಭಾಗದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಮೊದಲಿಗೆ ಗಣೇಶನ ಪೂಜೆಯನ್ನು ಮಾಡಬೇಕು. ಲಕ್ಷ್ಮೀ ದೇವಿಗೆ ತುಂಬಾ ಪ್ರಿಯವಾದ ಹೂವು ಕಮಲದ ಹೂವು. ಕಮಲದ ಹೂವು ಕೆಲವೊಂದು ಸಲ ಎಲ್ಲಾ ಕಡೆಯೂ ಸಿಗುವುದಿಲ್ಲ, ಆದ್ದರಿಂದ ಕೆಂಪು ಹೂವು,ಮಲ್ಲಿಗೆ ಹೂವು ಈ ರೀತಿ ಸುಗಂಧ ಭರಿತವಾದ ಹೂವುಗಳನ್ನು ಲಕ್ಷ್ಮೀದೇವಿಗೆ ಅರ್ಪಿಸಬೇಕು. ಈ ರೀತಿಯಾಗಿ ಪೂಜೆ ಮಾಡುವುದರಿಂದ ಲಕ್ಷ್ಮೀದೇವಿ ಶಾಶ್ವತವಾಗಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ಹಾಗೂ ನಿಮ್ಮ ಕೋರಿಕೆಗಳನ್ನು ಬಹಳ ಬೇಗ ಈಡೇರಿಸುತ್ತಾಳೆ.ಪ್ರತಿ ಶುಕ್ರವಾರದ ದಿನದಂದು ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡಬೇಕು. ಕೆಂಪು ಹೂವುಗಳಿಂದ, ಕುಂಕುಮದಿಂದ, ಹಸಿರು ಕುಂಕುಮಗಳಿಂದ ಲಕ್ಷ್ಮೀದೇವಿಗೆ ಅರ್ಚನೆಯನ್ನು ಮಾಡಬೇಕು. ಈ ರೀತಿಯಾಗಿ ಹೂವಿನಿಂದ, ಕುಂಕುಮದಿಂದ ಅರ್ಚನೆಯನ್ನು ಮಾಡುವುದರಿಂದ ಲಕ್ಷ್ಮಿ ದೇವಿಯು ಸಂತೃಪ್ತಳಾಗಿ ನಿಮ್ಮ ಮೇಲೆ ತನ್ನ ಅನುಗ್ರಹವನ್ನು ಇರಿಸುತ್ತಾಳೆ ಎಂದರೆ ತಪ್ಪಾಗಲಾರದು.