ದೇವರ ಮುಂದೆ ಈ ರೀತಿ ಬೇಡಿಕೊಳ್ಳುವುದರಿಂದ ಕೋರಿಕೆಗಳು ಅಥವಾ ಇಷ್ಟಾರ್ಥಗಳು ಬಹುಬೇಗ ಪಲಿಸುತ್ತದೆ..ಜೀವನದಲ್ಲಿ ಕಷ್ಟ ಬಂದಾಗ ಪ್ರತಿಯೊಬ್ಬರು ಬೇಡಿಕೊಳ್ಳುವುದು ದೇವರಲ್ಲಿ. ಹಾಗೆಯೇ ಇನ್ನು ಕೆಲವರು ತಮ್ಮ ಕಷ್ಟಗಳು ಹಾಗೂ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಹರಕೆಗಳನ್ನು ಸಹ ಹೊತ್ತುಕೊಳ್ಳುತ್ತಾರೆ. ಕೋರಿಕೆಗಳು ಈಡೇರಿದ ನಂತರ ಕಾಣಿಕೆ ನೀಡುವುದಾಗಿ ಅಥವಾ ಮುಡಿಯನ್ನು ಕೊಡುವುದಾಗಿ ಹರಕೆಯನ್ನು ಹೊತ್ತುಕೊಳ್ಳುವುದು ಉಂಟು.
ದೇವರ ಮುಂದೆ ನಮ್ಮ ಕಷ್ಟಗಳು ಹಾಗೂ ಇಚ್ಛೆಗಳನ್ನು ಹೇಳಿಕೊಂಡು ನಮ್ಮ ಕೋರಿಕೆಗಳನ್ನು ಇಡೇರಿಸು ಎಂದು ಕೇಳಿಕೊಳ್ಳುತ್ತೇವೆ. ಒಂದು ವೇಳೆ ದೇವರಿಗೆ ಕಾಣಿಕೆ ನೀಡುವುದಾಗಿಯೂ ಅಥವಾ ಮುಡಿಯನ್ನು ಕೊಡುವುದಾಗಿ ಹೇಳಿದರೆ ದೇವರಿಗೆ ಲಂಚ ಕೊಟ್ಟಂತೆ ಆಗುತ್ತದೆ, ಹಾಗಾಗಿ ನಿಮಗೇನಾದರೂ ಕಷ್ಟಗಳು ಇದ್ದರೆ ಭಕ್ತಿಯಿಂದ ದೇವರನ್ನು ಬೇಡಿಕೊಳ್ಳಬೇಕಾಗುತ್ತದೆ.
ಒಂದು ವೇಳೆ ಉದ್ಯೋಗ ಹುಡುಕುತ್ತಿರುವವರು ಉದ್ಯೋಗ ಸಿಗಲಿ ಎಂದು ದೇವರಿಗೆ ಈ ರೀತಿಯಾಗಿ ಕೇಳಿಕೊಳ್ಳಬೇಕು. ದೇವರೇ ಈ ಉದ್ಯೋಗದ ಅವಶ್ಯಕತೆ ತುಂಬಾ ಇದೆ, ಈ ಕೆಲಸ ಸಿಕ್ಕರೆ ಸ್ವತಂತ್ರವಾಗಿ ನನ್ನ ಬದುಕನ್ನು ನಾನು ಕಟ್ಟಿಕೊಳ್ಳಬಹುದು ಹಾಗೂ ನನ್ನ ಮನೆಯವರಿಗೂ ಸಹ ಸಹಾಯವನ್ನು ಮಾಡಬಹುದು. ಇದರಿಂದ ಮನೆಯಲ್ಲಿರುವ ಕಷ್ಟಗಳು ಸಹ ಕಡಿಮೆಯಾಗುತ್ತದೆ ಆದ್ದರಿಂದ ದಯಮಾಡಿ ಈ ಕೆಲಸ ಸಿಗುವ ಹಾಗೆ ನೋಡಿಕೋ ದೇವರೇ ಎಂದು ಭಕ್ತಿಯಿಂದ ಬೇಡಿಕೊಳ್ಳಬೇಕು.
ದೇವರು ನಿಮ್ಮ ಕೋರಿಕೆಗಳನ್ನು ಈಡೇರಿಸಿದ ನಂತರ ದೇವರ ಮೇಲೆ ಮುಂಚೆಯಿದ್ದ ಭಕ್ತಿಯ ತರವೇ ಕೋರಿಕೆಗಳು ಈಡೇರಿದ ನಂತರವೂ ಭಕ್ತಿ, ಪೂಜ್ಯಭಾವನೆ ಇರಬೇಕು. ಜೀವನದಲ್ಲಿ ಚೆನ್ನಾಗಿರುವ ವೇಳೆಯಲ್ಲಿ ದೇವರನ್ನು ಭಕ್ತಿಯಿಂದ ಪೂಜಿಸಿದರೆ ಮುಂದಿನ ದಿನಗಳಲ್ಲಿ ಕಷ್ಟಗಳು ಬರುವುದು ಕಡಿಮೆ ಇರುತ್ತದೆ. ಒಂದು ವೇಳೆ ಕೋರಿಕೆಗಳು ಈಡೇರಿದ ನಂತರ ದೇವರ ಬಳಿ ಹೋಗಲೇ ಇಲ್ಲವೆಂದರೆ ದೇವರು ಕಷ್ಟಗಳನ್ನು ಪುನಃ ಕೊಡುತ್ತಾನೆ. ಆದ್ದರಿಂದ ಭಕ್ತಿಯಿಂದ ದೇವರಲ್ಲಿ ಬೇಡಿಕೊಂಡರೆ ಎಂತಹ ಕಷ್ಟಗಳನ್ನು ಮತ್ತು ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬಹುದು.