Home / ಜ್ಯೋತಿಷ್ಯ / ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಬುಧವಾರದ ದಿನ ಈ ಸುಲಭ ಪರಿಹಾರವನ್ನು ಮಾಡಿ.

ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಬುಧವಾರದ ದಿನ ಈ ಸುಲಭ ಪರಿಹಾರವನ್ನು ಮಾಡಿ.

ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಬುಧವಾರದ ದಿನ ಈ ಸುಲಭ ಪರಿಹಾರವನ್ನು ಮಾಡಿ..ಯಾವ ವ್ಯಕ್ತಿಗೆ ಶತ್ರುವಿನಿಂದ ಸಾಕಷ್ಟು ತೊಂದರೆಯು ಇರುತ್ತದೆಯೋ ಮತ್ತು ಕೆಲಸ ಮಾಡುವ ಜಾಗದಲ್ಲಿ ಶತ್ರುವಿನ ಕಾಟ ಜಾಸ್ತಿಯಾಗಿ ಸಾಕಪ್ಪ ಸಾಕು ಎಂದೆನಿಸಿದರೆ ಅಥವಾ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ಏಳಿಗೆ ಆಗುವುದನ್ನು ಸಹಿಸಲಾಗದೆ ಕೆಲವರ ಕೆಟ್ಟದೃಷ್ಟಿ ಬೀಳುತ್ತಿದ್ದರೆ ಅಂಥವರು ಈ ಸುಲಭ ಪರಿಹಾರವನ್ನು ಮಾಡುವುದರಿಂದ ಶತ್ರು ಕಾಟ ದೂರವಾಗಿ ನೆಮ್ಮದಿಯಿಂದ ಜೀವನವನ್ನು ಸಾಗಿಸಬಹುದು. ಹಾಗಾದರೆ ಶತ್ರುವಿನ ಕಾಟದಿಂದ ವಿಮುಕ್ತಿಯನ್ನು ಯಾವ ರೀತಿ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ಲೋಳೆರಸದ ಗಿಡದ ಎಲೆಯನ್ನು ತೆಗೆದುಕೊಳ್ಳಬೇಕು ನಂತರ ಎಕ್ಕದ ಗಿಡದ ಬೇರನ್ನು ತೆಗೆದುಕೊಳ್ಳಬೇಕು ಹಾಗೆಯೇ ವೀಳ್ಯದೆಲೆಯನ್ನು ಸಹ ತೆಗೆದುಕೊಳ್ಳಬೇಕು. ಈ ಪರಿಹಾರವನ್ನು ಬುಧವಾರ ಅಥವಾ ಶನಿವಾರದ ದಿನದಂದು ಮನೆಯಲ್ಲಿ ಮಾಡಬೇಕು. ಬುಧವಾರ ಸಾಯಂಕಾಲ ನಿಮ್ಮ ಮನೆಯಲ್ಲಿರುವ ಆಂಜನೇಯಸ್ವಾಮಿಯ ಚಿತ್ರಪಟದ ಮುಂದೆ ಲೋಳೆರಸದ ಗಿಡದ ಎಲೆ, ಒಂದು ಎಕ್ಕದ ಗಿಡದ ಬೇರು ಹಾಗೂ ವೀಳ್ಯದೆಲೆಯನ್ನು ಇಟ್ಟು ಪೂಜೆಯನ್ನು ಮಾಡಬೇಕು.

ವೀಳ್ಯದೆಲೆಯ ಮೇಲೆ ನಿಮಗೆ ಆಗದೆ ಇರುವ ಅಥವಾ ನಿಮ್ಮ ಶತ್ರುವಿನ ಹೆಸರನ್ನು ಬರೆಯಬೇಕು.ಶತ್ರುವಿನ ಹೆಸರನ್ನು ಬರೆದನಂತರ ಲೋಳೆರಸದ ಗಿಡದ ಎಲೆ,ಎಕ್ಕದ ಗಿಡದ ಬೇರು ಹಾಗೂ ವೀಳ್ಯೆದೆಲೆಯನ್ನು ಕೆಂಪು ದಾರದಿಂದ ಕಟ್ಟಬೇಕು. ಕೆಂಪು ದಾರದಿಂದ ಕಟ್ಟಿದ ನಂತರ ಪೂಜೆಯನ್ನು ಮಾಡಬೇಕು. ಮರುದಿನ ಬೆಳಿಗ್ಗೆ ಕೆಂಪು ದಾರದಿಂದ ಕಟ್ಟಿದ ಗಂಟನ್ನು ತೆಗೆದುಕೊಂಡು ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಮೂರು ದಿನಗಳ ಕಾಲ ಇಡಬೇಕು.

ಮೂರು ದಿನಗಳು ಕಳೆದ ನಂತರ ಕೆಂಪು ದಾರದಿಂದ ಕಟ್ಟಿದ್ದ ಲೋಳೆರಸದ ಗಿಡದ ಎಲೆ, ಒಂದು ಎಕ್ಕದ ಗಿಡದ ಬೇರು ಹಾಗೂ ವೀಳ್ಯದೆಲೆಯನ್ನು ಹರಿಯುವ ನೀರಿನಲ್ಲಿ ಬಿಟ್ಟು ಬರಬೇಕು. ಈ ರೀತಿ ಮಾಡುವುದರಿಂದ ಆಂಜನೇಯಸ್ವಾಮಿಯ ಪ್ರಭಾವದಿಂದ ಶತ್ರುವಿನ ಕಾಟದಿಂದ ಮುಕ್ತಿ ದೊರೆತು ಜೀವನದಲ್ಲಿ ಸುಖ ಶಾಂತಿ ಹಾಗೂ ನೆಮ್ಮದಿಯಿಂದ ಇರಬಹುದು.

Leave a Reply

Your email address will not be published. Required fields are marked *