ಕ್ಷೀರಸಾಗರದಲ್ಲಿದ್ದ ಅಮೃತವನ್ನು ಪಡೆಯಬೇಕೆಂದು ದೇವತೆಯರು ಹಾಗೂ ರಾಕ್ಷಸರು ಸಮುದ್ರ ಮಂಥನವನ್ನು ಮಾಡಲು ಮುಂದಾಗುತ್ತಾರೆ. ಆಗ ಮಹಾವಿಷ್ಣು ಹಿಮಾಲಯದಲ್ಲಿರುವ ಮಂದಾರ ಪರ್ವತವನ್ನು ಕಡಗೊಲಾಗಿ ಉಪಯೋಗಿಸುವಂತೆ ಸಲಹೆಯನ್ನು ಸೂಚಿಸುತ್ತಾರೆ. ಅದೇ ಪ್ರಕಾರವಾಗಿ ದೇವಾನುದೇವತೆಗಳು ಹಾಗೂ ಅಸುರರು ಮಂದಾರ ಪರ್ವತವನ್ನು ಹೊತ್ತುತಂದು ಅದನ್ನು ಕಡಗೋಲಾಗಿ ಉಪಯೋಗಿಸಿ, ವಾಸುಕಿ ಸರ್ಪವನ್ನು ಹಗ್ಗವನ್ನಾಗಿ ಉಪಯೋಗಿಸಿ ಸಮುದ್ರ ಮಂಥನವನ್ನು ನಡೆಸುತ್ತಾರೆ. ಸಮುದ್ರ ಮಂಥನದ ಸಮಯದಲ್ಲಿ ಮಂದಾರ ಪರ್ವತ ಕುಸಿಯಲು ಪ್ರಾರಂಭವಾದಾಗ ನಾರಾಯಣಸ್ವಾಮಿ ಪೂರ್ಮ ಅವತಾರವನ್ನು ತಾಳಿ ಸಮುದ್ರವನ್ನು ಹೊತ್ತುಕೊಂಡು ಸಮುದ್ರ ಮಂಥನ ಕಾರ್ಯವೂ ಸರಾಗವಾಗಿ ನಡೆಯುವಂತೆ […]