Kannada Astrology

Category: ಜ್ಯೋತಿಷ್ಯ

  • ಮಾಟ-ಮಂತ್ರ ಮಾಡುವಾಗ ನಿಂಬೆ ಹಣ್ಣನ್ನು ಯಾವ ಕಾರಣಕ್ಕೆ ಉಪಯೋಗಿಸುತ್ತಾರೆ ಎಂಬುದು ತಿಳಿದಿದೆಯೇ ನಿಮಗೆ ?

    ಮಾಟ-ಮಂತ್ರ ಮಾಡುವಾಗ ನಿಂಬೆ ಹಣ್ಣನ್ನು ಯಾವ ಕಾರಣಕ್ಕೆ ಉಪಯೋಗಿಸುತ್ತಾರೆ ಎಂಬುದು ತಿಳಿದಿದೆಯೇ ನಿಮಗೆ..ಸಾಮಾನ್ಯವಾಗಿ ಕೆಡುಕನ್ನು ಉಂಟು ಮಾಡಲು ತಾಂತ್ರಿಕರು ಬಳಸುವ ವಿಧಾನದಲ್ಲಿ ಮೊದಲು ವ್ಯಕ್ತಿಗೆ ಮಾಡುವ ಕೆಡುಕನ್ನು ಶಕ್ತಿಯ ರೂಪದಲ್ಲಿ ಇರಿಸಿ ನಿಂಬೆಹಣ್ಣಿನಲ್ಲಿ ಸಂಗ್ರಹವಾಗುವಂತೆ ಮಾಡುತ್ತಾರೆ. ತದನಂತರ ನಿಂಬೆಹಣ್ಣಿನ ಮೂಲಕ ಶಕ್ತಿಯು ವ್ಯಕ್ತಿಯ ಹತ್ತಿರ ನಾಟುವಂತೆ ಮಾಡುತ್ತಾರೆ. ಇದೇ ವಿಧಾನವನ್ನು ಜನಸಾಮಾನ್ಯರು ಮಾಟ ಮಂತ್ರ ಮಾಡುವುದು ಎಂದು ಹೇಳುತ್ತಾರೆ. ಇದೇ ವಿಷಯವನ್ನು ಮಾಂತ್ರಿಕರು ನಿಂಬೆಹಣ್ಣನ್ನು ದಾಟಿದರೆ ಮಾಟ-ಮಂತ್ರ ವ್ಯಕ್ತಿಗೆ ಪ್ರಯೋಗವಾಗುತ್ತದೆ ಎಂಬುದನ್ನು ಹೇಳುತ್ತಾರೆ.

    ನಿಂಬೆಹಣ್ಣಿನಲ್ಲಿ ಅಲೌಕಿಕ ಶಕ್ತಿ ಇರುವ ಕಾರಣ ಮಾಟ ಮಂತ್ರ ಮಾಡುವ ಕಾರ್ಯಗಳಿಗೆ ಬಳಸಲಾಗುತ್ತದೆ. ಅದೇ ರೀತಿ ಜನಸಾಮಾನ್ಯರಿಂದ ಕೆಟ್ಟದೃಷ್ಟಿ ಬಿದ್ದರೆ ವಿಮುಕ್ತಿಯನ್ನು ಪಡೆದುಕೊಳ್ಳಲು ಸಹ ಇದೇ ನಿಂಬೆಹಣ್ಣನ್ನು ಬಳಸಲಾಗುತ್ತದೆ. ಇದೇ ಕಾರಣಕ್ಕಾಗಿ ಹೊಸ ಮನೆ , ಹೊಸ ವಾಹನವನ್ನು ಖರೀದಿ ಮಾಡಿದಾಗ ನಿಂಬೆಹಣ್ಣನ್ನು ಉಪಯೋಗಿಸಲಾಗುತ್ತದೆ ಅಥವಾ ವಾಹನಗಳಿಗೆ ಕಟ್ಟಲಾಗುತ್ತದೆ.

    ನಿಂಬೆಹಣ್ಣು ಎಲ್ಲಾ ಕಾಲದಲ್ಲಿಯೂ ಸಿಗುವುದರಿಂದ ತಾಂತ್ರಿಕರು ಮಾಟ ಮಂತ್ರ ಪ್ರಯೋಗಕ್ಕೆ ನಿಂಬೆಹಣ್ಣನ್ನು ಬಳಸುತ್ತಾರೆ. ಇಷ್ಟೇ ಅಲ್ಲದೆ ನಿಂಬೆಹಣ್ಣು ಕಡಿಮೆ ಬೆಲೆಯಲ್ಲಿ ಸಿಗುವುದರಿಂದ ತಾಂತ್ರಿಕರು ಯಾವಾಗಲೂ ನಿಂಬೆಹಣ್ಣು ಅವರ ಬಳಿ ಇರುವ ಹಾಗೆ ಇಟ್ಟುಕೊಳ್ಳುತ್ತಾರೆ.

  • ಈ ಲಕ್ಷಣಗಳು ಕಂಡು ಬಂದರೆ ಕೆಟ್ಟದೃಷ್ಟಿ ನಿಮ್ಮ ಮೇಲೆ ಪ್ರಭಾವ ಬೀರಿದೆ ಎಂಬುದನ್ನು ತಿಳಿಸುತ್ತದೆ.

    ಈ ಲಕ್ಷಣಗಳು ಕಂಡು ಬಂದರೆ ಕೆಟ್ಟದೃಷ್ಟಿ ನಿಮ್ಮ ಮೇಲೆ ಪ್ರಭಾವ ಬೀರಿದೆ ಎಂಬುದನ್ನು ತಿಳಿಸುತ್ತದೆ..ನಿಮಗೆ ತಿಳಿಯದೆ ಒಂದು ವೇಳೆ ಸ್ತ್ರೀಯರಿಗೆ ಪದೇಪದೇ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದರೆ, ಯಾವುದೇ ಕೆಲಸದಲ್ಲೂ ಆಸಕ್ತಿ ಇಲ್ಲದೆ ಯಾವಾಗಲೂ ಬೇಸರದಿಂದ ಕೂಡಿದ್ದರೆ ಮತ್ತು ನಿಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲದಂತೆ ಆಗುತ್ತಿದ್ದರೆ ಯಾವುದೋ ಒಂದು ದುಷ್ಟ ಶಕ್ತಿಯ ಪ್ರಭಾವ ಅಥವಾ ಕೆಟ್ಟದೃಷ್ಟಿ ನಿಮ್ಮ ಮೇಲೆ ಬಿದ್ದಿದೆ ಎಂಬುದನ್ನು ತಿಳಿಸುತ್ತದೆ.

    ಕಣ್ಣಿನ ಕೆಳಗೆ ಕಪ್ಪಾಗುವುದು,ಮೂಗಿನ ಮೇಲೆ ಚುಕ್ಕಿ ಬೀಳುವುದು, ದೇವರಿಗೆ ಪೂಜೆ ಮಾಡುವುದಕ್ಕೆ ಆಸಕ್ತಿ ಬಾರದೆ ಇರುವುದು, ಯಾವುದೇ ಕೆಲಸವನ್ನು ಮಾಡಲು ಹೋದರೂ ನಾಳೆ ಮಾಡೋಣ ಎಂದು ಅನಿಸುವುದು, ದೇವಸ್ಥಾನಕ್ಕೆ ಹೋಗುವ ಆಸಕ್ತಿ ಬಾರದೆ ಇರುವುದು ಮತ್ತು ಯಾರ ಜೊತೆಯು ಮಾತನಾಡುವುದಕ್ಕೆ ಆಸಕ್ತಿ ಬಾರದಿದ್ದರೆ ಯಾವುದು ಒಂದು ಕೆಟ್ಟ ದೃಷ್ಟಿಯ ಪ್ರಭಾವ ನಿಮ್ಮ ಮೇಲೆ ಆಗಿದೆ ಎಂಬುದನ್ನು ಉಲ್ಲೇಖಿಸುತ್ತದೆ.

    ಈ ಎಲ್ಲಾ ರೀತಿಯ ದೋಷಗಳಿಂದ ಮುಕ್ತಿಯನ್ನು ಪಡೆದು ಕೊಳ್ಳಬೇಕೆಂದರೆ ಒಂದು ಬೊಗಸೆಯಲ್ಲಿ ವೀಳ್ಯದೆಲೆಯನ್ನು ತೆಗೆದುಕೊಂಡು 8 ಶನಿವಾರಗಳ ಕಾಲ ಹನುಮನಿಗೆ ಅರ್ಪಿಸಿ ಬರಬೇಕು. ಹನುಮನಿಗೆ ಅರ್ಪಿಸಿದ ನಂತರ ಅಲ್ಲಿ ನಿಮ್ಮ ಹೆಸರಿನಿಂದ ಅರ್ಚನೆಯನ್ನು ಮಾಡಿಸಿ ತದನಂತರ ಹನುಮನ ದೇವಸ್ಥಾನದಿಂದ ಸ್ವಲ್ಪ ಬೆಣ್ಣೆಯನ್ನು ತೆಗೆದುಕೊಂಡು ಬಂದು ವೀಳ್ಯದೆಲೆಯ ಹಿಂಭಾಗ ಲೇಪಿಸಬೇಕು. ತದನಂತರ ಬೆಂಕಿಯ ಮೇಲೆ ಹಾಕಿ ಸುಡಬೇಕು ಅದರಿಂದ ಕಾಡಿಗೆ ಹೊರಹೊಮ್ಮುತ್ತದೆ. ಅಲ್ಲಿಂದ ಬಂದ ಕಾಡಿಗೆಯನ್ನು ಹುಬ್ಬಿಗೆ, ಹಣೆಗೆ ಹಚ್ಚಿಕೊಳ್ಳಬೇಕು. ಈ ರೀತಿಯಾಗಿ ಶನಿವಾರದ ದಿನ ಮಾಡುತ್ತಾ ಬಂದರೆ ಎಂತಹದ್ದೆ ದುಷ್ಟಶಕ್ತಿಗಳ ಪ್ರಭಾವವಿದ್ದರೂ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.

  • ವಾಮಾಚಾರ ಪ್ರಯೋಗವಾಗಿದ್ದರೆ ಅದನ್ನು ಹೇಗೆ ತಿಳಿದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ ನಿಮಗೆ ?

    ವಾಮಾಚಾರ ಪ್ರಯೋಗ ಎಂದರೆ ಎಲ್ಲರೂ ಭಯ ಪಡುವಂತಹ ವಿಷಯ, ಹೀಗೆ ವಾಮಾಚಾರ ಮಾಡಿದರೆ ಸಮಸ್ಯೆಗಳು ಹೇಗಾಗುತ್ತದೆ ಎಂದರೆ ಯಾರೋ ಕೆನ್ನೆಯ ಮೇಲೆ ಹೊಡೆದಂತೆ ಅನುಭವ ಆಗುತ್ತದೆ ಆದರೆ ಯಾರೆಂದು ತಿಳಿಯುವುದಿಲ್ಲ. ಎದುರಿಗೆ ನಿಂತು ಹೋರಾಡುವ ಶತ್ರುವಾದರೆ ಎದುರಿಸಬಹುದು, ಆದರೆ ಹಿಂದೆ ನಿಂತು ಯುದ್ಧ ಮಾಡುವವರರನ್ನು ಹೇಗೆ ಅರಿತುಕೊಳ್ಳುವುದು ಎಂಬುದೇ ದೊಡ್ಡ ಸವಾಲಾಗಿರುತ್ತದೆ. ಹಾಗಾದರೆ ಮಾಟ ಮಂತ್ರ ಪ್ರಯೋಗವಾದರೆ ಯಾವ ರೀತಿಯ ಲಕ್ಷಣಗಳು ಕಂಡು ಬರುತ್ತದೆ ಹಾಗೂ ಅದಕ್ಕೆ ಪರಿಹಾರ ಏನು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ವಾಮಾಚಾರ ಆಗಿರುವುದರ ಬಗ್ಗೆ ಜಾತಕದಲ್ಲಿ ತಿಳಿಯುವುದಿಲ್ಲ.ವಾಮಾಚಾರ ಆದರೆ ಮುಖವು ವಿಖಾರವಾಗಿರುತ್ತದೆ, ಮೊದಲ ಹಂತದಲ್ಲಿ ದೈಹಿಕ ಬದಲಾವಣೆಯಾಗುವುದು ಕಂಡುಬರುತ್ತದೆ, ಇಷ್ಟೇ ಅಲ್ಲದೆ ವಿಪರೀತವಾಗಿ ಕೂದಲು ಉದುರುತ್ತದೆ ಹಾಗೂ ಮುಖದಲ್ಲಿ ವಿಕಾರತೆ ಗೋಚರಿಸುತ್ತದೆ ಮತ್ತು ಊಟ ಮಾಡುವಾಗ ಪದೇಪದೇ ಕೂದಲ ಸಿಗುತ್ತದೆ. ಮನೆಯಲ್ಲಿ ಬಳಕೆಯಾಗುವ ಸ್ಥಳದಲ್ಲಿ ಪಟ್ಟಣ ಕಟ್ಟಿರುವಂತೆ ಕುಂಕುಮ, ಅರಿಶಿನ, ನಿಂಬೆಹಣ್ಣು,ಬಸ್ಮಾ, ದಾರ, ಸೂಜಿ,ಚುಚ್ಚಿದ ವಸ್ತುವಾದ ಮೊಟ್ಟೆ, ಮೆಣಸಿನಕಾಯಿ ಪದೇ ಪದೇ ಸಿಗುತ್ತಿದ್ದರೆ ಮಾಟ-ಮಂತ್ರ ಪ್ರಯೋಗದ ಬಗ್ಗೆ ಸುಳಿವನ್ನು ನೀಡುತ್ತದೆ.

    ಒಂದು ವೇಳೆ ವ್ಯಾಪಾರದಲ್ಲಿ ಮೇಲಿಂದ ಮೇಲೆ ನಷ್ಟವಾಗುತ್ತಿದ್ದರೆ ಮತ್ತು ಜಾತಕವನ್ನು ತೋರಿಸಿದಾಗ ಜಾತಕದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದಾಗ ಮಾಟ-ಮಂತ್ರದ ಬಗ್ಗೆ ಅನುಮಾನ ಮೂಡುತ್ತದೆ. ಇಷ್ಟೇ ಅಲ್ಲದೆ ಯಾವಾಗಲೂ ಕೆಟ್ಟ ಕನಸುಗಳು ಬೀಳಲು ಪ್ರಾರಂಭವಾಗಿ ಯಾರೋ ಕತ್ತು ಹಿಸುಕಿದಂತೆ ಆಗುತ್ತಿದ್ದರೆ ಸ್ವಲ್ಪ ಎಚ್ಚರದಿಂದ ಇದ್ದರೆ ಒಳಿತು. ವಾಮಾಚಾರ ಪ್ರಯೋಗಕ್ಕೆ ಪರಿಹಾರವೇನೆಂದರೆ ಪ್ರಶ್ನಶಾಸ್ತ್ರ,ತಾಂಬೂಲ ಶಾಸ್ತ್ರ, ಕವಡೆ ಶಾಸ್ತ್ರ ಮೂಲಕ ಮಾಟ-ಮಂತ್ರದ ಪ್ರಯೋಗ ಆಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ತದನಂತರ ಚಂಡಿಕಾ ಪಾರಾಯಣ, ದೀಪ ನಮಸ್ಕಾರ ಪೂಜೆ,ಕೇರಳಿಯ ತಂತ್ರ ಪೂಜೆಯ ಮೂಲಕ ಆಕರ್ಷಣ ಉಚ್ಚಾಟನ,ಸುದರ್ಶನ ಹೋಮ ಹೀಗೆ ನಾನಾ ಬಗೆಯ ಪರಿಹಾರಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಷ್ಟೇ ಅಲ್ಲದೆ ಶಾಶ್ವತ ಪರಿಹಾರಕ್ಕಾಗಿ ರಕ್ಷಾ ಹೋಮಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

  • ಈ ಮೂರು ದಿನದಲ್ಲಿ ಈ ಒಂದು ವಸ್ತುವಿನಿಂದ ಸುಲಭ ಪರಿಹಾರವನ್ನು ಮಾಡಿದರೆ ಶತ್ರುನಾಶ ಖಚಿತ.

    ಯಾವಾಗಲೂ ಹಾಗೆ ಶತ್ರುಗಳು ಎಲ್ಲಿರುತ್ತಾರೋ ಎಂಬುದು ತಿಳಿಯುವುದಿಲ್ಲ, ಕೆಲಸ ಮಾಡುವ ಜಾಗದಲ್ಲಿ, ಕಚೇರಿಗಳಲ್ಲಿ ಹಾಗೂ ನೀವು ಜೀವನದಲ್ಲಿ ಏಳಿಗೆಯನ್ನು ಕಾಣುತ್ತಿದ್ದರೆ ಅದನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿರುವುದಿಲ್ಲ. ಇದರಿಂದ ನಿಮ್ಮ ಮೇಲೆ ಶಟ್ರುತ್ವವನ್ನು ಬೆಳೆಸಿಕೊಳ್ಳುತ್ತಾರೆ.ಹಾಗಾದರೆ ಈ ರೀತಿಯ ಶತ್ರುಗಳನ್ನು ಯಾವ ರೀತಿ ಸಂಹಾರ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಮೊದಲಿಗೆ ನಿಂಬೆಹಣ್ಣನ್ನು ತೆಗೆದುಕೊಂಡು ಮೂರರಿಂದ ನಾಲ್ಕು ದಿನಗಳ ಕಾಲ ಒಣಗಿಸಬೇಕು. ಮೂರರಿಂದ ನಾಲ್ಕು ದಿನ ಒಣಗಿಸಿದ ಮೇಲೆ ಆ ನಿಂಬೆಹಣ್ಣಿನ ಮೇಲೆ ನಿಮ್ಮ ಶತ್ರುವಿನ ಹೆಸರನ್ನು ಬರೆಯಬೇಕು. ಒಂದುವೇಳೆ ಆ ಶತ್ರು ಪುರುಷರು ಆಗಿರಲಿ ಅಥವಾ ಸ್ತ್ರೀಯರು ಆಗಿರಲಿ ಯಾರಾದರೂ ಸರಿ ಅವರ ಹೆಸರನ್ನು ಬರೆಯಬೇಕು. ಶತ್ರುನಾಶವನ್ನು ಅಥವಾ ಈ ಪ್ರಯೋಗವನ್ನು ವಾರದ ಕೊನೆಯ ದಿನಗಳಾದ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮಾಡಬೇಕು.

    ಈ ಮೂರು ದಿನಗಳಲ್ಲಿ ಮಾಡುವುದರಿಂದ ಶತ್ರುಗಳ ನಾಶವು ಖಚಿತವಾಗಿ ಆಗುತ್ತದೆ ಹಾಗೂ ಕೇವಲ ಎರಡೇ ದಿನದಲ್ಲಿ ಶತ್ರು ನಾಶ ಆಗಿರುವ ಬಗ್ಗೆ ಬದಲಾವಣೆಯನ್ನು ನಿಮ್ಮ ಜೀವನದಲ್ಲಿ ಕಾಣಬಹುದು. ಆದ್ದರಿಂದ ಈ ನಿಂಬೆ ಹಣ್ಣಿನ ಮೇಲೆ ಶತ್ರುವಿನ ಹೆಸರನ್ನು ಬರೆದ ಮೇಲೆ ನೀವು ಮಲಗುವ ಕೋಣೆಯಲ್ಲಿ ದಿಂಬಿನ ಕೆಳಭಾಗದಲ್ಲಿ ಇಟ್ಟುಕೊಳ್ಳಬೇಕು, ಈ ರೀತಿ ನಿಂಬೆಹಣ್ಣನ್ನು ಇಟ್ಟುಕೊಳ್ಳುವುದರಿಂದ ಕೇವಲ ಎರಡೇ ದಿನದಲ್ಲಿ ಶತ್ರುನಾಶ ಆಗುತ್ತದೆ.

  • ಅಕ್ಷಯಪಾತ್ರೆಯನ್ನು ಹೇಗೆ ಸಿದ್ದ ಮಾಡಿಕೊಳ್ಳಬೇಕು ತಿಳಿದಿದೆಯೇ ನಿಮಗೆ ?

    ಅಕ್ಷಯಪಾತ್ರೆಯನ್ನು ಸಿದ್ದ ಮಾಡಿಕೊಳ್ಳಬೇಕಾದರೆ ಒಂದು ಮಣ್ಣಿನ ಮಡಿಕೆಯನ್ನು ನಿಮಗೆ ಅನುಕೂಲವಾಗುವ ದಿನದಂದು ಮನೆಗೆ ತರಬೇಕು. ಮನೆಗೆ ಮಣ್ಣಿನ ಮಡಕೆಯನ್ನು ತಂದ ನಂತರ ಶುದ್ಧವಾದ ನೀರಿನಿಂದ ತೊಳೆಯಬೇಕು. ತದನಂತರ ಒಂದು ತಟ್ಟೆಯನ್ನು ತೆಗೆದುಕೊಂಡು ಅರಿಶಿನವನ್ನು ಹಾಕಬೇಕು. ಅರಿಶಿನಕ್ಕೆ ಕರ್ಪೂರ, ಪಚ್ಚಕರ್ಪೂರ, ಜವ್ವಾದಿ ಈ ಮೂರು ವಸ್ತುಗಳನ್ನು ಅರಿಶಿನಕ್ಕೆ ಹಾಕಿ ರೋಸ್ ವಾಟರ್ ನಿಂದ ಪೇಸ್ಟ್ ಮಾಡಿಕೊಂಡು ಮಡಿಕೆ ಸುತ್ತಾ ಲೇಪನ ಮಾಡಬೇಕು. ಲೇಪನ ಮಾಡಿದ ನಂತರ ಕುಂಕುಮದಿಂದ ಶ್ರೀಂ ಎಂದು ಬೊಟ್ಟನ್ನು ಇಡಬೇಕು.

    ಅಕ್ಷಯ ಪಾತ್ರೆಗೆ ಮೊದಲಿಗೆ ಅರಿಶಿನ-ಕುಂಕುಮ, ಸ್ವಲ್ಪ ಪಚ್ಚಕರ್ಪೂರ, ಜವ್ವಾದಿ, ಕರ್ಪೂರ ಹಾಕಬೇಕು. ಈ ಪದಾರ್ಥಗಳನ್ನು ಹಾಕಿದ ನಂತರ ಸ್ವಲ್ಪ ಕಲ್ಲುಪ್ಪನ್ನು ಹಾಕಬೇಕು. ಕಲ್ಲುಪ್ಪನ್ನು ಹಾಕಿದ ನಂತರ ಒಂದು ವಸ್ತ್ರದಿಂದ ಮುಚ್ಚಬೇಕು. ಈ ರೀತಿ ಮಾಡಿದರೆ ಅಕ್ಷಯಪಾತ್ರೆ ಸಿದ್ಧವಾಗುತ್ತದೆ. ಇದರಿಂದ ಲಕ್ಷ್ಮೀದೇವಿಯು ಸ್ಥಿರವಾಗಿ ವಾಸಿಸಲು ಇಷ್ಟಪಡುತ್ತಾಳೆ.

    ಈ ರೀತಿಯಾಗಿ ಅಕ್ಷಯಪಾತ್ರೆಯನ್ನು ಸಿದ್ದಮಾಡಿಕೊಂಡು ಪ್ರತಿನಿತ್ಯ ಮನೆಯಲ್ಲಿ ಪೂಜೆಯನ್ನು ಮಾಡುವುದರಿಂದ ಲಕ್ಷ್ಮೀದೇವಿ ಅನುಗ್ರಹವು ಪ್ರಾಪ್ತಿಯಾಗುತ್ತದೆ ಹಾಗೂ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಇದ್ದರೂ ಪರಿಹಾರವಾಗುತ್ತದೆ ಮತ್ತು ಬಾಕಿ ಬರಬೇಕಾಗಿದ್ದ ಹಣ ಕೈ ಸೇರುತ್ತದೆ ಮತ್ತು ಧನ ಸಂಪತ್ತು ವೃದ್ಧಿಯಾಗುತ್ತದೆ.

    ಒಂದು ವೇಳೆ ಮನೆಯಲ್ಲಿ ಅನವಶ್ಯಕ ಖರ್ಚುಗಳು ಜಾಸ್ತಿಯಾಗುತ್ತಿವೆ ಮತ್ತು ಎಷ್ಟೇ ಸಂಪಾದನೆ ಮಾಡಿ ಹಣವನ್ನು ತಂದರು ಅದು ಕೈಯಲ್ಲಿ ನಿಲ್ಲುತ್ತಿಲ್ಲ ಎನ್ನುವವರು ಸಂಬಳ ತಂದ ದಿನದಂದು ಹಣವನ್ನು ಅಕ್ಷಯ ಪಾತ್ರೆಯ ಒಳಗೆ ಹಾಕಿ ತದನಂತರ ಉಪಯೋಗಿಸುವುದರಿಂದ ಅನವಶ್ಯಕ ಖರ್ಚುಗಳು ಕಡಿಮೆಯಾಗಿ ಧನ ಸಂಪತ್ತು ವೃದ್ಧಿಯಾಗುತ್ತದೆ.

    ಸಾಲದಿಂದ ಕೊರಗುತ್ತಿರುವವರು ಶುಕ್ರವಾರದ ದಿನದಂದು ನಿಮ್ಮ ಹತ್ತಿರ ಎಷ್ಟು ಹಣ ಇರುತ್ತದೆಯೋ ಅಷ್ಟು ಹಣವನ್ನು ಅಕ್ಷಯಪಾತ್ರೆಗೆ ಹಾಕಿ ಮಂಗಳವಾರದಂದು ಆ ಹಣವನ್ನು ತೆಗೆದುಕೊಂಡು ಉಪಯೋಗಿಸುವುದರಿಂದ ಸಾಲಬಾಧೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.ಮಡಿಕೆಯಲ್ಲಿರುವ ಕಲ್ಲುಪ್ಪನ್ನು ಮೂರು ತಿಂಗಳಿಗೊಮ್ಮೆ ಬದಲಾಯಿಸಬೇಕು. ಕಲ್ಲುಪ್ಪನ್ನು ಬದಲಾಯಿಸುವಾಗ ಭಾನುವಾರ ದಿನದಂದು ಮಡಿಕೆಯಿಂದ ತೆಗೆದು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಈ ರೀತಿಯಾಗಿ ಮಾಡುವುದರಿಂದ ಅಕ್ಷಯ ಪಾತ್ರೆಯಿಂದ ನಿಮ್ಮ ಮನೆಯಲ್ಲಿ ಸುಖ,ಸಂತೋಷ ಅಕ್ಷಯವಾಗುತ್ತಿರುವುದುರಲ್ಲಿ ಸಂಶಯವಿಲ್ಲ.

  • ಈ ಮಂತ್ರ ಜಪಿಸಿದರೆ ಕಳೆದುಕೊಂಡ ಹಣ ಬಂಗಾರಗಳು ಮರಳಿ ಬರುತ್ತದೆ.

    ಕೆಲವೊಂದು ಬಾರಿ ಕೆಲವೊಬ್ಬರು ತಾವು ಸಂಪಾದಿಸಿದ ಹಣವನ್ನು ಸಂಪೂರ್ಣವಾಗಿ ಕಳೆದುಕೊಂಡಿರುತ್ತಾರೆ ಅಥವಾ ಬಂಗಾರವನ್ನು ಯಾರಾದರೂ ಕಳ್ಳತನ ಮಾಡಿರುತ್ತಾರೆ.ಇನ್ನೂ ಕೆಲವೊಂದು ಬಾರಿ ಸಂಕಷ್ಟಗಳು ಬಂದಾಗ ಬಂಗಾರವನ್ನು ಅಡವಿಟ್ಟು ಅದನ್ನು ಬಿಡಿಸಿಕೊಳ್ಳಲಾಗದೆ ಕಳೆದುಕೊಂಡಿರುತ್ತೇವೆ. ವ್ಯಕ್ತಿಗಳನ್ನು ಹೊರತುಪಡಿಸಿ ನಾವು ಸಾಕಿದ ಹಸುಗಳು, ನಾಯಿಗಳು ಕಳೆದು ಹೋದರು ಮನುಷ್ಯನಿಗೆ ತುಂಬಾ ಬೇಸರವಾಗುತ್ತದೆ ಯಾಕೆಂದರೆ ಅವುಗಳ ಜೊತೆಗೆ ಭಾವನಾತ್ಮಕವಾಗಿ ಸಂಬಂಧವನ್ನು ಹೊಂದಿರುತ್ತಾನೆ. ಆದ್ದರಿಂದ ಈ ಮಂತ್ರವನ್ನು ಜಪಿಸಿದರೆ ಕಳೆದುಹೋದ ವಸ್ತುಗಳು, ವ್ಯಕ್ತಿಗಳು, ಸಾಕುಪ್ರಾಣಿಗಳು ನಿಮ್ಮ ಕೈ ಸೇರುತ್ತದೆ.ಕಾರ್ತಿವೀರ್ಯಾರ್ಜುನ ನಾಮಮ್ ರಾಜಬಾಹು ಸಹಸ್ರ ಮುಖಂ ತಸ್ಮೈ ಸ್ಮರಣಮಾರ್ಥ ಗದಂ ನಷ್ಟ ಲಭ್ಯತೆ. ಈ ಮೇಲಿನ ಮಂತ್ರವನ್ನು ಜಪಿಸುವುದರಿಂದ ನೀವು ಕಳೆದುಕೊಂಡಿರುವ ವಸ್ತುವಾಗಲಿ, ಹಣವಾಗಲಿ, ಒಡವೆ ಆಗಲಿ ಅಥವಾ ವ್ಯಕ್ತಿಗಳಾಗಲಿ ಅಥವಾ ಸಾಕುಪ್ರಾಣಿಗಳು ಆಗಲಿ ಒಂದು ವೇಳೆ ಕಾಣೆಯಾಗಿದ್ದರೆ ಅಥವಾ ಕಳೆದು ಹೋಗಿದ್ದರೆ ಅವುಗಳನ್ನು ಹಿಂತಿರುಗಿ ಪಡೆದುಕೊಳ್ಳಬಹುದು.

    ಹಣವನ್ನು ಯಾರಿಗಾದರೂ ಕೊಟ್ಟಿ ಕಳೆದುಕೊಳ್ಳಬಾರದು ಎಂದು ಜಾಗೃತಿ ವಹಿಸುವುದಾದರೆ ಕೆಲವೊಂದು ನಕ್ಷತ್ರಗಳು ಬಂದಾಗ ಯಾರಿಗೂ ಹಣವನ್ನು ನೀಡಬಾರದು. ಒಂದು ವೇಳೆ ಈ 5 ನಕ್ಷತ್ರಗಳು ಬಂದಾಗ ಹಣವನ್ನು ಆಗಲಿ ಅಥವಾ ಯಾವುದಾದರೂ ವಸ್ತುವನ್ನಾಗಲಿ ಅವರಿಗೆ ನೀಡಿದರೆ ಅದು ಎಂದಿಗೂ ಹಿಂತಿರುಗಿ ಬರುವುದಿಲ್ಲ. ಹಾಗಾದರೆ ಆ 5 ನಕ್ಷತ್ರಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.
    ಭರಣಿ ನಕ್ಷತ್ರ, ಹಸ್ತ ನಕ್ಷತ್ರ, ಮಕರ ನಕ್ಷತ್ರ, ಪೂರ್ವಭಾದ್ರ ನಕ್ಷತ್ರ ಮತ್ತು ಮೂಲ ನಕ್ಷತ್ರ ಬಂದಾಗ ಯಾವುದೇ ಕಾರಣಕ್ಕೂ ಯಾರಿಗೂ ಹಣವನ್ನು ನೀಡಬೇಡಿ. ಈ ರೀತಿಯಾಗಿ ಜಾಗೃತಿ ವಹಿಸಿ ಜೀವದಲ್ಲಿ ನಡೆದರೆ ಸುಖಕರವಾಗಿ ಜೀವನವನ್ನು ನಡೆಸಬಹುದು.

  • ನೀವು ಇಷ್ಟಪಟ್ಟವರನ್ನು ಲವಂಗದಿಂದ ವಶೀಕರಣವನ್ನು ಹೇಗೆ ಮಾಡಬಹುದು ಎಂದು ತಿಳಿದಿದೆಯೇ ನಿಮಗೆ ?

    ನೀವು ಇಷ್ಟಪಟ್ಟವರನ್ನು ಲವಂಗದಿಂದ ವಶೀಕರಣವನ್ನು ಹೇಗೆ ಮಾಡಬಹುದು ಎಂದು ತಿಳಿದಿದೆಯೇ ನಿಮಗೆ…ಲವಂಗದಿಂದ ವಶೀಕರಣ ಮಾಡಿದರೆ ನೀವು ಯಾರನ್ನು ಇಷ್ಟಪಡುತ್ತಿರೋ ಅವರನ್ನು ನಿಮ್ಮ ಕೈವಶ ಮಾಡಿಕೊಳ್ಳಬಹುದು. ಹಾಗಾದರೆ ಈ ತಂತ್ರವನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ.

    ಮೊದಲಿಗೆ ಲವಂಗವನ್ನು ಕೈಯಿಯ ಮುಷ್ಟಿಯಲ್ಲಿ ಹಿಡಿದುಕೊಂಡು ನೀವು ಯಾರನ್ನು ಇಷ್ಟಪಡುತ್ತಿರುತ್ತೀರೋ ಅಥವಾ ಯಾರನ್ನು ನಿಮ್ಮ ಕೈವಶ ಮಾಡಿಕೊಳ್ಳಬೇಕು ಎಂದು ಅಂದುಕೊಂಡಿರುತ್ತೀರೋ ಅವರ ಹೆಸರನ್ನು ಮನಸ್ಸಿನಲ್ಲಿ ಜಪಿಸಿಕೊಂಡು ನಾವು ಹೇಳುವ ಈ ಶಕ್ತಿಶಾಲಿ ವಶೀಕರಣದ ಈ ಒಂದು ಪದವನ್ನು ಪಠಿಸಬೇಕು. ಹಾಗಾದರೆ ವಶೀಕರಣದ ಆ ಒಂದು ಪದ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.

    ನೀವು ಇಷ್ಟಪಟ್ಟವರನ್ನು ಒಲಿಸಿಕೊಳ್ಳುವ ವಶೀಕರಣದ ಆ ಒಂದು ಪದ ಯಾವುದೆಂದರೆ ಓಂ ನಮೋ ಗಂಧರ್ವ ಸಂಮೋಹಿನಿ ಕುರು ಕುರು ವಶ ಸ್ವಾಹ.

    ಈ ವಶೀಕರಣದ ಪದವನ್ನು ಪ್ರಯೋಗ ಮಾಡಬೇಕಾದರೆ 21 ಬಾರಿ ಜಪಿಸಬೇಕು. 21 ಬಾರಿ ಜಪಿಸಿದ ಮೇಲೆ ನಿಮ್ಮ ಕೈಯಿಯ ಮುಷ್ಟಿಯಲ್ಲಿ ಇರುವ ಲವಂಗವನ್ನು ನಿಮ್ಮ ನಾಲಿಗೆಯ ಮೇಲೆ ಇಟ್ಟುಕೊಳ್ಳಬೇಕು. ಈ ರೀತಿಯಾಗಿ ವಶೀಕರಣ ವನ್ನು ಮಾಡಿದರೆ ನೀವು ಇಷ್ಟಪಡುವವರು ಅಥವಾ ಪ್ರೀತಿಸುವವರು ಕೇವಲ 24 ಗಂಟೆಯೊಳಗೆ ನಿಮ್ಮ ಕೈವಶ ಆಗುತ್ತಾರೆ.

    ಈ ವಶೀಕರಣ ಪ್ರಯೋಗವನ್ನು ಕೇವಲ ಒಳ್ಳೆಯ ಕೆಲಸಗಳಿಗೆ ಮಾತ್ರ ಪ್ರಯೋಗಿಸಿ ಕೆಟ್ಟ ಕೆಲಸಕ್ಕೆ ಪ್ರಯೋಗಿಸ ಬೇಡಿ. ಒಂದು ವೇಳೆ ಒಳ್ಳೆಯ ಕೆಲಸಕ್ಕೆ ಪ್ರಯೋಗಿಸಿದರೆ ಫಲಪ್ರದವಾಗುವುದು.

  • ಆರ್ಥಿಕ ಸಂಕಷ್ಟದಿಂದ ಹೊರಬರಲು ಈ ಒಂದು ವಸ್ತು ಇದ್ದರೆ ಸಾಕು.

    ಯಾವುದೇ ರೀತಿಯ ಆರ್ಥಿಕ ಸಂಕಷ್ಟದ ಸಮಸ್ಯೆಯಿಂದ ಹೊರಬರಬೇಕೆಂದರೆ ಮನೆಯಲ್ಲಿಯೇ ಈ ಒಂದು ವಸ್ತುವಿನಿಂದ ಪರಿಹಾರವನ್ನು ಮಾಡಿಕೊಂಡರೆ ಆರ್ಥಿಕ ಸಮಸ್ಯೆಯಿಂದ ಹೊರಬರುವುದಲ್ಲದೆ ಶ್ರೀ ಮಹಾವಿಷ್ಣುವಿನ ಕೃಪೆಗೂ ಸಹ ಪಾತ್ರರಾಗಬಹುದು.

    ಪಚ್ಚಕರ್ಪೂರ ಎಂಬುದು ಮಹಾವಿಷ್ಣು ಹಾಗೂ ಶ್ರೀನಿವಾಸ ದೇವರಿಗೆ ಬಹಳ ಪ್ರಿಯವಾದದ್ದು. ಪಚ್ಚ ಕರ್ಪೂರದಿಂದ ಈ ಪರಿಹಾರವನ್ನು ಮಾಡುವುದರಿಂದ ವಿಷ್ಣುವಿನ ಜೊತೆಗೆ ಲಕ್ಷ್ಮಿ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಇದರಿಂದ ನಿಮಗಿರುವ ಯಾವುದೇ ಸಣ್ಣಪುಟ್ಟ ಆರ್ಥಿಕ ಸಮಸ್ಯೆಗಳಿದ್ದರೂ ಅದು ಕೂಡ ಬಗೆಹರಿಯುತ್ತದೆ. ಈ ಪರಿಹಾರವನ್ನು ಬುಧವಾರ ಅಥವಾ ಶುಕ್ರವಾರ ದಿನದಂದು ಮಾಡಬೇಕು.

    ಬುಧವಾರ ಅಥವಾ ಶುಕ್ರವಾರ ದಿನ ಆಯ್ಕೆ ಮಾಡಿಕೊಂಡ ನಂತರ ಮೊದಲಿಗೆ ಸ್ನಾನವನ್ನು ಮಾಡಿ ಹಳದಿ ಬಣ್ಣದ ವಸ್ತ್ರ ಅಥವಾ ಬಿಳಿ ಬಣ್ಣದ ವಸ್ತ್ರವನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಬಿಳಿ ಬಣ್ಣದ ವಸ್ತ್ರವನ್ನು ತೆಗೆದುಕೊಂಡರೆ ಅದಕ್ಕೆ ಅರಿಶಿಣವನ್ನು ಸವರಬೇಕು. ತದ ನಂತರ ವಸ್ತ್ರದ ಒಳಗೆ ಪಚ್ಚ ಕರ್ಪೂರವನ್ನು ಹಾಕಿ ಗಂಟನ್ನು ಕಟ್ಟಿ ದೇವರಕೋಣೆಯಲ್ಲಿ ಒಂದು ಹಿತ್ತಾಳೆಯ ತಟ್ಟೆಯ ಮೇಲೆ ಓಂ ಅಥವಾ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಉತ್ತರ ದಿಕ್ಕಿನಲ್ಲಿ ಇಡಬೇಕು. ಪ್ರತಿನಿತ್ಯ ಪೂಜೆ ಮಾಡುವಾಗ ಹಳದಿ ಬಣ್ಣದ ವಸ್ತ್ರಕ್ಕೂ ಧೂಪವನ್ನು ತೋರಿಸಬೇಕು. ಹಾಗೆಯೇ ಪಚ್ಚ ಕರ್ಪೂರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಸಹಾಯವಾಗುತ್ತದೆ.ಒಂದು ವೇಳೆ ದೇವರಕೋಣೆಯಲ್ಲಿ ಜಾಗವಿಲ್ಲವೆಂದರೆ ಯಾವುದಾದರೂ ಕೋಣೆಯಲ್ಲಿ ಪೀಠದ ರೀತಿ ಮಾಡಿಕೊಂಡು ಅಲ್ಲಿ ಹಳದಿ ವಸ್ತ್ರದ ಪಚ್ಚಕರ್ಪೂರದ ಗಂಟನ್ನು ಇಟ್ಟು ಪ್ರತಿನಿತ್ಯ ಪೂಜೆ ಮಾಡುವಾಗ ಧೂಪವನ್ನು ಹಳದಿ ವಸ್ತ್ರದ ಗಂಟಿಗೆ ತೋರಿಸಬೇಕು. ಇದರಿಂದ ನಿಮಗಿರುವ ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ.

    ವ್ಯಾಪಾರ ಮಾಡುವವರು ವ್ಯಾಪಾರ ಮಾಡುವ ಸ್ಥಳದಲ್ಲಿ ಹಳದಿಬಣ್ಣದ ಪಚ್ಚಕರ್ಪೂರದ ಗಂಟನ್ನು ಇಟ್ಟು ಪ್ರತಿನಿತ್ಯ ಪೂಜೆ ಮಾಡುವುದರಿಂದ ವ್ಯಾಪಾರದಲ್ಲಿ ಚಮತ್ಕಾರವನ್ನು ಕಾಣಬಹುದು ಮತ್ತು ಅಧಿಕ ಲಾಭವನ್ನು ಗಳಿಸಬಹುದು.

    ಗಂಧವನ್ನು ತೆಗೆದುಕೊಂಡು ಒಂದು ಹಿತ್ತಾಳೆಯ ತಟ್ಟೆಯಲ್ಲಿ ಸ್ವಲ್ಪ ನೀರಿನೊಂದಿಗೆ ಪೇಸ್ಟ್ ಮಾಡಿಕೊಂಡು ನಂತರ ಒಂದೊಂದು ರೂಪಾಯಿಯ 8 ನಾಣ್ಯವನ್ನು ತೆಗೆದುಕೊಂಡು ಅಷ್ಟ ಲಕ್ಷ್ಮಿಯರ ಸಂಕೇತ ಎಂದು ಭಾವಿಸಿಕೊಂಡು 8 ನಾಣ್ಯವನ್ನು ತಟ್ಟೆ ಸುತ್ತ ಜೋಡಿಸಬೇಕು. ತದನಂತರ ಹಿತ್ತಾಳೆ ತಟ್ಟೆಯನ್ನು ದೇವರಕೋಣೆಯಲ್ಲಿ ಇಟ್ಟು ಪ್ರತಿನಿತ್ಯ ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಯ ಅನುಗ್ರಹವು ಪ್ರಾಪ್ತಿಯಾಗಿ ಧನ ಸಂಪತ್ತು, ಐಶ್ವರ್ಯಗಳು ವೃದ್ಧಿಸುತ್ತದೆ.

  • ನಿತ್ಯ ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಬೇಕೆಂದರೆ ಲಲಿತಾ ದೇವಿಯ ಈ ಮಂತ್ರವನ್ನು ಜಪಿಸಿ.

    ನಾವು ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸು ಸಿಗಬೇಕೆಂದರೆ ಮತ್ತು ಅರ್ಧಕ್ಕೆ ನಿಂತುಹೋಗಿರುವ ಕೆಲಸಗಳು ಯಾವುದೇ ವಿಘ್ನಗಳು ಅಥವಾ ಅಡೆತಡೆಯಿಲ್ಲದೆ ಸಂಪೂರ್ಣವಾಗಬೇಕೆಂದರೆ ಲಲಿತಾ ದೇವಿಯ ಈ ಮಂತ್ರವನ್ನು ಜಪಿಸುವುದರಿಂದ ನೀವು ಮಾಡುವಂತಹ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ. ಲಲಿತಾ ದೇವಿಗೆ ಮೂರು ಶುಕ್ರವಾರಗಳು ಕಮಲದ ಹೂವನ್ನು ಅರ್ಪಿಸಿ ಕುಂಕುಮಾರ್ಚನೆ ಮಾಡುವುದು ತುಂಬಾ ಒಳ್ಳೆಯದು ಮತ್ತು ಶ್ರೇಯಸ್ಕರವಾಗಿರುತ್ತದೆ.

    ಓಂ ಭಾವನಗಮ್ಮಾಯೇ ನಮಃ ಮೊದಲಿಗೆ ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ನಂತರ ದೇವರ ಕೋಣೆಯನ್ನು ಸ್ವಚ್ಛಮಾಡಿ ತದ ನಂತರ ಅಲಂಕಾರವನ್ನು ಮಾಡಿ ಈ ಮಂತ್ರವನ್ನು ಮೂರು ಶುಕ್ರವಾರ ಗಳು 108 ಬಾರಿ ಜಪಿಸುತ್ತಾ ಲಲಿತಾ ದೇವಿಯ ಚಿತ್ರಪಟಕ್ಕೆ ಅಥವಾ ವಿಗ್ರಹಕ್ಕೆ ಕುಂಕುಮಾರ್ಚನೆ ಅಥವಾ ಪುಷ್ಪಾರ್ಚನೆ ಮಾಡಬೇಕು.

    ಒಂದು ವೇಳೆ ಪ್ರತಿದಿನ ಈ ಮಂತ್ರವನ್ನು ಜಪಿಸಿ ಪೂಜೆ ಮಾಡಿದರೆ ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭವನ್ನು ಗಳಿಸಬಹುದು. ಯಾವ ವ್ಯಕ್ತಿಯು ಪ್ರತಿನಿತ್ಯ ಈ ಪೂಜೆಯನ್ನು ಮಾಡಿ ಮಂತ್ರವನ್ನು ಜಪಿಸಿ ಹೊರಗೆ ಹೋಗುತ್ತಾನೋ ಅವನಿಗೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಅಖಂಡ ಯಶಸ್ಸು ದೊರೆಯುತ್ತದೆ. ಒಂದು ವೇಳೆ ಪ್ರತಿನಿತ್ಯ 108 ಬಾರಿ ಜಪಿಸಲು ಸಾಧ್ಯವಾಗದಿದ್ದರೆ ಕನಿಷ್ಠ 21 ಬಾರಿ ಜಪಿಸುವುದು ಒಳ್ಳೆಯದು.ಒಂದು ವೇಳೆ ಯಾರಿಗಾದರೂ ಮನಸ್ಸಿನಲ್ಲಿ ನೆಮ್ಮದಿ, ಮನೆಯಲ್ಲಿ ಸಂತೋಷವಿಲ್ಲವೆಂದರೆ ಅವರು ಲಲಿತ ದೇವಿಗೆ ಶರಣಾಗಿ ಈ ಮಂತ್ರವನ್ನು 21 ಬಾರಿ ಜಪಿಸಿ ತದನಂತರ ರಾತ್ರಿ ಮಲಗುವುದರಿಂದ ಸಕಲ ಸಂಕಷ್ಟಗಳು ಕೂಡ ನಿವಾರಣೆಯಾಗುವುದರಲ್ಲಿ ಸಂಶಯವಿಲ್ಲ.
    ಪ್ರೇಮಿಗಳು 18 ಶುಕ್ರವಾರಗಳ ಕಾಲ ಈ ಮಂತ್ರವನ್ನು 108 ಬಾರಿ ಜಪಿಸಬೇಕು. 18 ಶುಕ್ರವಾರಗಳು ಮುಗಿದ ಮೇಲೆ ಲಲಿತಾ ದೇವಿಯ ಸನ್ನಿಧಿಗೆ ಹೋಗಿ ಪ್ರದಕ್ಷಿಣೆ ಹಾಕಿ ಅಲ್ಲಿ ಕೊಡುವ ಪ್ರಸಾದವನ್ನು ಮನೆಗೆ ತಂದು ತಾವು ಸೇವಿಸಿ ಕುಟುಂಬದ ಸದಸ್ಯರಿಗೂ ಕೊಡುವುದರಿಂದ ಪ್ರೀತಿಯ ವಿಚಾರದಲ್ಲಿ ಕೆಲಸವು ಸಲೀಸಾಗಿ ಆಗುತ್ತದೆ.

    ರಾಜಕೀಯ ಕ್ಷೇತ್ರದಲ್ಲಿರುವವರು ವಾರದಲ್ಲಿ ಒಂದು ದಿನ ಲಲಿತಾ ದೇವಿಗೆ ಕಮಲದ ಹೂವಿನಿಂದ ಪೂಜೆ ಮಾಡಿಸುವುದರಿಂದ ರಾಜಕೀಯದಲ್ಲಿ ಅವರಿಗೆ ಏಳಿಗೆಯು ಆಗುತ್ತದೆ. ಲಲಿತಾ ದೇವಿಗೆ ಶ್ರದ್ಧೆಯಿಂದ, ಭಕ್ತಿಯಿಂದ ನಂಬಿಕೆ ಇಟ್ಟು ಪೂಜೆ ಮಾಡಿದರೆ ಎಲ್ಲಾ ಸಂಕಷ್ಟಗಳನ್ನು ತಾಯಿಯು ದೂರ ಮಾಡುತ್ತಾರೆ.

  • ಮನೆಯಲ್ಲಿ ಲಕ್ಷ್ಮೀದೇವಿ ಸ್ಥಿರವಾಗಿ ವಾಸಿಸಬೇಕೆಂದರೆ ಈ ರೀತಿ ಮಾಡಿ.

    ಮನೆಯಲ್ಲಿ ಲಕ್ಷ್ಮೀದೇವಿ ಸ್ಥಿರವಾಗಿ ವಾಸಿಸ ಬೇಕೆಂದರೆ ಮನೆಯಲ್ಲಿ ವಾಸ್ತು ದೋಷ, ಜಾತಕದಲ್ಲಿ ದೋಷ, ಸೂರ್ಯ ಗ್ರಹ, ಶುಕ್ರ ಗ್ರಹ, ಕುಜ ಗ್ರಹ, ಕೇತು, ಶನಿ ಪ್ರಭಾವ ಬಲಹೀನ ವಾಗಿದ್ದು ಮತ್ತು ಆರ್ಥಿಕ ಸಮಸ್ಯೆ ಇದ್ದರೆ ಮನಸ್ಸಿಗೆ ಶಾಂತಿ ಇರುವುದಿಲ್ಲ. ಈ ಪರಿಹಾರವನ್ನು ಮಾಡುವುದರಿಂದ ಅನವಶ್ಯಕ ಖರ್ಚುಗಳು ಕಡಿಮೆಯಾಗಿ ಧನ ಲಾಭವಾಗುತ್ತದೆ ಮತ್ತು ಲಕ್ಷ್ಮೀದೇವಿಯ ಸ್ಥಿರವಾಗಿ ವಾಸಿಸುತ್ತಾಳೆ.

    ಈ ಪರಿಹಾರವನ್ನು ಮಂಗಳವಾರ ಹಾಗೂ ಭಾನುವಾರ ದಿನದಂದು ಮಾಡಬೇಕು. ಈ ಪರಿಹಾರವನ್ನು ಮಂಗಳವಾರ ಹಾಗೂ ಭಾನುವಾರ ಸಂಜೆ 5 ಗಂಟೆಯಿಂದ 6 ಗಂಟೆಯ ಒಳಗೆ ಮಾಡಬೇಕು. ಈ ಉಪಾಯವನ್ನು 7 ಮಂಗಳವಾರ ಅಥವಾ 7 ಭಾನುವಾರ ಮಾಡಬೇಕು.

    ಮೊದಲಿಗೆ ಒಂದು ಹಿತ್ತಾಳೆಯ ತಟ್ಟೆಯ ಒಳಗೆ ಕಲ್ಲುಪ್ಪನ್ನು ಹಾಕಬೇಕು, ತದನಂತರ ಅದರ ಮೇಲೆ ಒಂದು ಮಣ್ಣಿನ ದೀಪವನ್ನು ಇಡಬೇಕು. ಮಣ್ಣಿನ ದೀಪಕ್ಕೆ ಸಣ್ಣದಾಗಿ ಹೆಚ್ಚಿದ 7 ಪೀಸ್ ಬೆಲ್ಲವನ್ನು , 7 ಲವಂಗವನ್ನು , 7 ಕರಿಮೆಣಸಿನ ಕಾಳು ಮತ್ತು 7 ಕರ್ಪೂರ ಹಾಕಬೇಕು. ತದ ನಂತರ ಮಣ್ಣಿನ ದೀಪಕ್ಕೆ 7 ಬಾರಿ ಸ್ವಲ್ಪ-ಸ್ವಲ್ಪ ಹಸುವಿನ ತುಪ್ಪವನ್ನು ಹಾಕಬೇಕು.ಹಸುವಿನ ತುಪ್ಪವನ್ನು ದೀಪಕ್ಕೆ ಹಾಕಿದ ನಂತರ ಇಷ್ಟ ದೇವತೆಯನ್ನು ಅಥವಾ ಕುಲದೇವರನ್ನು ಸ್ಮರಣೆ ಮಾಡಿಕೊಂಡು ಮತ್ತು ಕೋರಿಕೆಗಳು ಅಥವಾ ಸಮಸ್ಯೆಗಳು ಇದ್ದರೆ ಹೇಳಿಕೊಂಡು ದೀಪವನ್ನು ಹಚ್ಚಬೇಕು. ಈ ಕೆಲಸವನ್ನು ಮನೆಯ ಮುಖ್ಯದ್ವಾರದ ಬಳಿ ಮಾಡಬೇಕು ಹಾಗೂ ಸ್ತ್ರೀಯರು ಮುಟ್ಟಾದ ಸಮಯದಲ್ಲಿ ಈ ಉಪಾಯವನ್ನು ಮಾಡಬಾರದು.

    ದೀಪವು ಸಂಪೂರ್ಣವಾಗಿ ಉರಿದ ನಂತರ ಒಂದು ಕವರಿನ ಒಳಗೆ ಕಲ್ಲುಪ್ಪನ್ನು ಹಾಕಿಕೊಂಡು ಹಾಗೂ ದೀಪ ಉರಿದ ನಂತರ ದೀಪದ ಒಳಗಿರುವ ಬೂದಿಯನ್ನು ಹಾಕಿಕೊಂಡು ಯಾರು ಓಡಾಡದೆ ಇರುವ ನಿರ್ಜನವಾದ ಪ್ರದೇಶದಲ್ಲಿ ಯಾರೂ ತುಳಿಯದ ಹಾಗೆ ಅದನ್ನು ಎಸೆದು ಬರಬೇಕು. ಒಂದು ವೇಳೆ ನಿರ್ಜನವಾದ ಪ್ರದೇಶ ಇಲ್ಲದಿದ್ದರೆ ಹರಿಯುವ ನೀರಿನಲ್ಲಿ ಬಿಟ್ಟು ಬರಬಹುದು.

    ಈ ರೀತಿಯಾಗಿ ಮಾಡುವುದರಿಂದ ಲಕ್ಷ್ಮೀದೇವಿ ಸ್ಥಿರವಾಗಿ ಮನೆಯಲ್ಲಿ ನೆಲೆಸುತ್ತಾಳೆ ಹಾಗೂ ಮನೆಯಲ್ಲಿ ಶಾಂತಿಯ ವಾತಾವರಣ ಮೂಡುತ್ತದೆ ಹಾಗೂ ಕಷ್ಟಗಳೆಲ್ಲ ನಿವಾರಣೆಯಾಗಿ ಧನ ಸಂಪತ್ತು ಪ್ರಾಪ್ತಿಯಾಗಿ ಸುಖಕರವಾದ ಜೀವನವನ್ನು ನಡೆಸುವಂತೆ ಆಗುತ್ತದೆ.