Kannada Astrology

Category: ಜ್ಯೋತಿಷ್ಯ

  • ಶತ್ರುಗಳು ಮಿತ್ರರಾಗಬೇಕೆಂದರೆ ಏನು ಮಾಡಬೇಕೆಂಬುದು ತಿಳಿದಿದೆಯೇ ನಿಮಗೆ ?

    ಈಗಿನ ಕಾಲದಲ್ಲಿ ನಮ್ಮ ಸುತ್ತಮುತ್ತಲಿನಲ್ಲಿರುವವರೇ ಹಾಗೂ ನಮ್ಮ ಜೊತೆಯಲ್ಲಿ ಇರುವವರು ಶತ್ರುಗಳಾಗಿರುತ್ತಾರೆ, ಕೆಲವೊಮ್ಮೆ ನಮ್ಮ ಜೊತೆಯಲ್ಲೇ ಇದ್ದು ನಮ್ಮ ಬೆನ್ನಿಗೆ ಚೂರಿ ಹಾಕುವಂತ ಹಿತಶತ್ರುಗಳು ಸಹ ಇರುತ್ತಾರೆ. ಒಂದು ವೇಳೆ ಶತ್ರುಗಳ ಮನಪರಿವರ್ತನೆಯಾಗಬೇಕೆಂದರೆ ಶನಿವಾರ ಅಥವಾ ಭಾನುವಾರ ದಿನದಂದು ಈ ಕೆಲಸವನ್ನು ಮಾಡಬೇಕಾಗುತ್ತದೆ.ಶನಿವಾರ ಹಾಗೂ ಭಾನುವಾರದಂದು ಅರಳಿ ಮರದ ಕೆಳಗೆ ಬಿದ್ದಿರುವ ಅರಳಿ ಎಲೆಯನ್ನು ತೆಗೆದುಕೊಂಡು ಬರಬೇಕು. ಮನೆಗೆ ತಂದ ಅರಳಿ ಮರದ ಎಲೆಯನ್ನು ಶುದ್ಧವಾದ ನೀರಿನಿಂದ ತೊಳೆದು ಶುದ್ಧವಾದ ಬಟ್ಟೆಯಿಂದ ಒರೆಸಿ ಇಡಬೇಕು. ನಂತರ ದಾಳಿಂಬೆ ಗಿಡದ ಕಾಂಡದ ಕಡ್ಡಿಯನ್ನು ತೆಗೆದುಕೊಂಡು ಕುಂಕುಮವನ್ನು ಪೇಸ್ಟ್ ರೀತಿ ಮಾಡಿಕೊಂಡು ಅರಳಿ ಎಲೆಯ ಮೇಲೆ ನಿಮಗೆ ತೊಂದರೆಯನ್ನು ಕೊಡುತ್ತಿರುವ ಶತ್ರುಗಳ ಹೆಸರನ್ನು ದಾಳಿಂಬೆ ಕಡ್ಡಿಯಿಂದ ಕುಂಕುಮವನ್ನು ಅದ್ದಿ ಅರಳಿ ಎಲೆಯ ಮೇಲೆ ಬರೆಯಬೇಕು. ಹೆಸರನ್ನು ಬರೆದ ನಂತರ ಅರಳಿ ಎಲೆಯನ್ನು ಒಂದು ತಟ್ಟೆಯ ಮೇಲೆ ಮಡಚಿ ಇಡಬೇಕು, ನಂತರ ಉದ್ದರಣೆ ಇಂದ 11 ಬಾರಿ ನೀರನ್ನು ಹಾಕಬೇಕು.ಓಂ ರಿಹ್ಮ್ ಶ್ರೀಮ್ ಕ್ಲೀಮ್ ನಮಃ ಈ ಮೇಲಿನ ಮಂತ್ರವನ್ನು ಜಪಿಸುತ್ತಾ ಪಂಚಪಾತ್ರೆಯಲ್ಲಿ ಇರುವ ನೀರನ್ನು ಉದ್ದರಣೆ ಯಿಂದ 11 ಬಾರಿ ಅರಳಿ ಎಲೆಯ ಮೇಲೆ ಹಾಕಬೇಕು. ನಂತರ ಅರಳಿ ಎಲೆಯನ್ನು ಯಾರೂ ತುಳಿಯದ ಜಾಗದಲ್ಲಿ ಅಥವಾ ಯಾವುದಾದರೂ ಗಿಡದ ಬುಡದಲ್ಲಿ ಹಾಕಬೇಕು. ಈ ರೀತಿಯಾಗಿ ಮಾಡುವುದರಿಂದ ಶತ್ರುಬಾಧೆ ಖಂಡಿತವಾಗಿಯೂ ದೂರವಾಗುತ್ತದೆ.

    ಒಂದು ವೇಳೆ ನಿಮ್ಮ ಸುತ್ತಮುತ್ತಲಿನಲ್ಲಿ ಸಾಕಷ್ಟು ಜನ ಶತ್ರುಗಳು ಇದ್ದಾರೆ ಎಂದರೆ ಭಾನುವಾರದ ದಿನ ಎರಡರಿಂದ ಮೂರು ಲವಂಗವನ್ನು ಕೈಯಲ್ಲಿಟ್ಟುಕೊಂಡು ನಿಮಗಿರುವ ಶತ್ರುಗಳು, ಹಿತಶತ್ರುಗಳು, ಸುತ್ತಮುತ್ತಲಿನಲ್ಲಿರುವ ಶತ್ರುಗಳ ಹೆಸರನ್ನು ಹೇಳಿಕೊಂಡು ಲವಂಗವನ್ನು ಅಗ್ನಿಯಲ್ಲಿ ಹಾಕಬೇಕು. ಈ ರೀತಿಯಾಗಿ ಮಾಡುವುದರಿಂದ ಶತ್ರುಗಳ ಬಾಧೆಯು ತುಂಬಾ ಜಾಸ್ತಿ ಇದ್ದರೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.ಭಾನುವಾರ ದಿನದಂದು ಕೈಯಲ್ಲಿ ಸ್ವಲ್ಪ ನಾಣ್ಯವನ್ನು ತೆಗೆದುಕೊಂಡು ಹತ್ತಿರ ಇರುವ ಬಾವಿಯ ಒಳಗೆ ಹಾಕಿ ಹಿಂತಿರುಗಿ ನೋಡದೆ ಬರುವುದರಿಂದ ಶತ್ರು ಬಾಧೆಯು ದೂರವಾಗುತ್ತದೆ. ಭಾನುವಾರದ ದಿನ ಅರಿಶಿನದ ಕೊಂಬನ್ನು ತೆಗೆದುಕೊಂಡು ಶತ್ರುಗಳ ಹೆಸರನ್ನು ಹೇಳಿ ಹರಿಯುವ ನದಿಯಲ್ಲಿ ಬಿಡುವುದರಿಂದ ಶತ್ರುಗಳ ಕಾಟ ಕಡಿಮೆಯಾಗುತ್ತದೆ.

    ಓಂ ಹರಿ ಮರ್ಕಟ ಮರ್ಕಟಾಯ ನಮಃ ಎಂಬ ಈ ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ಶತ್ರುಗಳು ಸಹ ಮಿತ್ರರಾಗುವ ಸಂಭವ ಹೆಚ್ಚಿರುತ್ತದೆ.

  • ಶತ್ರು ದೋಷವು ಸಂಪೂರ್ಣವಾಗಿ ನಿವಾರಣೆಯಾಗಬೇಕಾದರೆ ಏನು ಮಾಡಬೇಕೆಂದು ತಿಳಿದಿದೆಯೇ ನಿಮಗೆ ?

    ನರಸಿಂಹ ಸ್ವಾಮಿಯನ್ನು ಕೆಲವೊಂದು ವಿಧಾನಗಳಿಂದ ಪೂಜೆ ಮಾಡಿದ್ದೇ ಆದಲ್ಲಿ ಶತ್ರುಗಳ ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಸಿರಿಸಂಪತ್ತಿನ ಜೀವನವನ್ನು ನಡೆಸಬೇಕೆಂದರೆ ಲಕ್ಷ್ಮೀನರಸಿಂಹಸ್ವಾಮಿ ಅನುಗ್ರಹವು ಮುಖ್ಯವಾಗಿರುತ್ತದೆ. ಹಾಗಾದರೆ ನರಸಿಂಹಸ್ವಾಮಿ ಯನ್ನು ಯಾವ ವಿಧವಾಗಿ ಪೂಜೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ನರಸಿಂಹಸ್ವಾಮಿಗೆ ತುಂಬಾ ಪ್ರಿಯವಾದ ವಾರವೆಂದರೆ ಮಂಗಳವಾರ, ಹಾಗಾಗಿ ಮಂಗಳವಾರದ ದಿನದಂದು ಮನೆಯಲ್ಲಿ ನರಸಿಂಹಸ್ವಾಮಿಯ ಚಿತ್ರಪಟ ಅಥವಾ ವಿಗ್ರಹವನ್ನು ಇಟ್ಟು ಪೂಜೆ ಮಾಡುವವರಿದ್ದರೆ ತುಂಬಾ ಒಳ್ಳೆಯದು. ಈ ವಿಧಾನವನ್ನು ಅನುಸರಿಸಿಕೊಂಡು ನರಸಿಂಹಸ್ವಾಮಿಯ ಪೂಜೆಯನ್ನು ಮಂಗಳವಾರದ ದಿನದಂದು ಮಾಡುವುದರಿಂದ ಸಂಪೂರ್ಣವಾಗಿ ಶತ್ರುಬಾಧೆ ಎಂಬುದು ನಿವಾರಣೆಯಾಗುತ್ತದೆ.ಮೊದಲಿಗೆ ಮಂಗಳವಾರದ ದಿನದಂದು ಮನೆಯನ್ನು ಶುಚಿ ಮಾಡಿ ನರಸಿಂಹಸ್ವಾಮಿಗೆ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಿ, ಕೆಂಪು ಅಕ್ಷತೆ ಯಿಂದ ಅರ್ಚನೆಯನ್ನು ಮಾಡಿ, ಕೆಂಪು ಹೂವುಗಳಿಂದ ಅಲಂಕಾರವನ್ನು ಮಾಡಿ ಪೂಜೆಯನ್ನು ಮಾಡಬೇಕು.

    ನರಸಿಂಹ ಸ್ವಾಮಿಗೆ ಪೂಜೆಯನ್ನು ಮಾಡಬೇಕಾದರೆ ಓಂ ನರಸಿಂಹಾಯ ನಮಃ ಎಂಬ ಮಂತ್ರವನ್ನು 108 ಬಾರಿ ಜಪ ಮಾಡಿ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು. ನರಸಿಂಹ ಸ್ವಾಮಿಗೆ ತುಂಬಾ ಪ್ರಿಯವಾಗಿರುವುದು ಹೆಸರುಬೇಳೆಯ ಪಾನಕ. ಆದ್ದರಿಂದ ಹೆಸರುಬೇಳೆಯ ಪಾನಕವನ್ನು ನೈವೇದ್ಯವಾಗಿ ಇಟ್ಟು, ನೈವೇದ್ಯ ಮಾಡಿದ ಪಾನಕವನ್ನು ಕಡು ಬಡವರಿಗೆ ಹಂಚಿ ಅದನ್ನು ನಂತರ ನೀವು ಸೇವಿಸುವುದರಿಂದ ನರಸಿಂಹಸ್ವಾಮಿಯ ಸಂಪೂರ್ಣ ಅನುಗ್ರಹವು ಪ್ರಾಪ್ತಿಯಾಗುತ್ತದೆ.ಸರ್ವ ಶತ್ರುವು ಸಂಪೂರ್ಣವಾಗಿ ನಿವಾರಣೆಯಾಗಬೇಕು ಎಂದರೆ ನರಸಿಂಹಸ್ವಾಮಿಯ ಸುದರ್ಶನ ಮಂತ್ರವನ್ನು ಹೇಳುವುದರಿಂದ ಸರ್ವ ಶತ್ರು ದೋಷಗಳು ನಿವಾರಣೆಯಾಗುತ್ತದೆ. ಈ ಪೂಜೆಯನ್ನು ಪ್ರತಿವಾರವೂ ಮಾಡುವುದರಿಂದ ಸಂಪೂರ್ಣವಾಗಿ ಶತ್ರು ದೋಷವು ನಿವಾರಣೆಯಾಗುತ್ತದೆ. ಮಂಗಳವಾರದ ದಿನದಂದು ಸುದರ್ಶನ ಮಂತ್ರದ ಜೊತೆಗೆ ನರಸಿಂಹ ಕರಾವಲಂಬ ಸ್ತೋತ್ರವನ್ನು ಹೇಳುವುದರಿಂದ ಯಾವುದೇ ದುಷ್ಟಶಕ್ತಿಗಳ ಪ್ರಭಾವವು ಬೀಳುವುದಿಲ್ಲ,ಇದರ ಜೊತೆಗೆ ನರದೃಷ್ಟಿ,ನರ ದೋಷ,ಶತ್ರು ದೋಷವೆಲ್ಲವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

  • ಮಹಾವಿಷ್ಣು ಗರುಡನಿಗೆ ಹೇಳಿದ ಆರೋಗ್ಯದ ಮಂತ್ರ ಯಾವುದು ಎಂದು ತಿಳಿದಿದೆಯೇ ನಿಮಗೆ ?

    ಗರುಡನು ಶ್ರೀ ಮಹಾವಿಷ್ಣುವಿನ ಬಳಿ ಎಂತಹದೇ ಕಷ್ಟದ ಕಾಲದಲ್ಲಿ, ಎಂತಹ ಪರಿಸ್ಥಿತಿಯಲ್ಲೂ ಏನು ಆಗಬಾರದು ಅಂತಹ ಒಂದು ಮಂತ್ರವನ್ನು ತಿಳಿಸಿಕೊಡಿ ಎಂದು ಕೇಳಿದಾಗ, ಗರುಡನಿಗೆ ಮಹಾವಿಷ್ಣು ಈ ಮಂತ್ರವನ್ನು ಹೇಳುತ್ತಾರೆ. ಈ ಮಂತ್ರವನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ. ಗರುಡ ಪುರಾಣದಲ್ಲಿ ಉಲ್ಲೇಖವಾಗಿರುವ ಈ ಮಂತ್ರದ ಹೆಸರು ಏನಂದರೆ ಗಾರುಣಿ ಪರಾವಿದ್ಯ ಮಂತ್ರ. ಈ ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ಆರೋಗ್ಯವು ವೃದ್ಧಿಯಾಗುತ್ತದೆ. ಈ ಮಂತ್ರದಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ. ಈ ಮಂತ್ರವನ್ನು ಹೇಳಬೇಕಾದರೆ ಶ್ರದ್ಧಾಭಕ್ತಿಯಿಂದ ನಂಬಿಕೆಯನ್ನು ಇಟ್ಟು ಹೇಳಬೇಕು. ದೇವರನ್ನು ನಂಬಿ ಈ ಮಂತ್ರವನ್ನು ಹೇಳಿದರೆ ಎಲ್ಲವೂ ಒಳ್ಳೆಯದಾಗುತ್ತದೆ.

    ಓಂ ಯಕ್ಷಿ ಓಂ ಅಂ ಸ್ವಾಹಾ ಈ ಮಂತ್ರವನ್ನು ಪ್ರತಿನಿತ್ಯ ಮುಂಜಾನೆ ಸ್ನಾನ ಮಾಡಿದ ನಂತರ 108 ಬಾರಿ ಹೇಳುವುದರಿಂದ ಜೀವನದಲ್ಲಿ ತುಂಬಾ ಒಳ್ಳೆಯದಾಗುತ್ತದೆ. ಒಂದು ವೇಳೆ 108 ಬಾರಿ ಜಪಿಸುವುದಕ್ಕೆ ಸಮಯವಿಲ್ಲ ಎಂದರೆ ಕನಿಷ್ಠ 21 ಬಾರಿ ಜಪಿಸಬೇಕು. ಈ ಮಂತ್ರವನ್ನು ಸಮಯ ಸಿಕ್ಕಾಗಲೆಲ್ಲಾ ಯಾವುದೇ ಜಾಗದಲ್ಲಿ ಇದ್ದರು ಜಪಿಸಬಹುದು. ಒಂದು ವೇಳೆ ಯಾರಾದರೂ ಆರೋಗ್ಯದ ಸಮಸ್ಯೆ ಇಂದ ಹಾಸಿಗೆಯನ್ನು ಹಿಡಿದಿದ್ದರೆ ಅಂತವರು ಮಲಗಿಕೊಂಡೆ ಈ ಮಂತ್ರವನ್ನು ಜಪಿಸಬಹುದು. ಇದರಿಂದ ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ.

    ಗಾರುಣಿ ಪರಾವಿದ್ಯ ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ಆರೋಗ್ಯ ಸ್ಥಿರವಾಗಿರುತ್ತದೆ ಹಾಗೂ ಯಾವುದೇ ರೀತಿಯ ಆರೋಗ್ಯದ ಸಮಸ್ಯೆಯೂ ಬರುವುದಿಲ್ಲ.ಗಾರುಣಿ ಪರಾವಿದ್ಯ ಮಂತ್ರವನ್ನು ಜಪಿಸುವ ದಿನ ಮುಂಜಾನೆ ಎದ್ದು, ಮನೆಯನ್ನು ಶುಚಿ ಮಾಡಿ, ದೇವರಿಗೆ ತುಪ್ಪದ ದೀಪವನ್ನು ಹಚ್ಚಿ ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಜಪಿಸುವುದರಿಂದ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ ಎಂದರೆ ತಪ್ಪಾಗಲಾರದು.

  • ಮನೆಯಲ್ಲಿರುವ ಎಲ್ಲಾ ಕಷ್ಟಗಳು ದೂರವಾಗಬೇಕು ಎಂದರೆ ಐಶ್ವರ್ಯ ಕಾಳಿಕಾದೇವಿಯ ಚಿತ್ರಪಟವನ್ನು ಇಟ್ಟುಕೊಳ್ಳಿ.

    ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರು ಸಂತೋಷದಿಂದ ಬಾಳಬೇಕು, ಯಾರ ಕೆಟ್ಟದೃಷ್ಟಿಯು ಮನೆಗೆ ತಾಗಬಾರದು, ಮನೆ ಯಜಮಾನನು ಒಳ್ಳೆಯ ರೀತಿಯಿಂದ ಧನ ಸಂಪತ್ತನ್ನು ಪಡೆದುಕೊಳ್ಳಬೇಕು ಹಾಗೂ ಕುಟುಂಬದ ಸದಸ್ಯರೆಲ್ಲರೂ ಆರೋಗ್ಯವಂತರಾಗಿರಬೇಕು ಎಂದು ಆಶಿಸುವುದು ಸರ್ವೇ ಸಾಮಾನ್ಯ. ಮನೆ ಯಜಮಾನನು ಹಾಗೂ ಕುಟುಂಬದವರು ಸುಖವಾಗಿ ಇರಬೇಕೆಂದರೆ ಐಶ್ವರ್ಯ ಕಾಳಿಕಾ ದೇವಿ ಫೋಟೋವನ್ನು ಅಥವಾ ಚಿತ್ರಪಟವನ್ನು ಮನೆಯಲ್ಲಿ ಇಡಬೇಕು.

    ಐಶ್ವರ್ಯ ಕಾಳಿಕಾ ದೇವಿ ಬಹಳ ಶಕ್ತಿವಂತಳು ಹಾಗೂ ಅವಳು ಮನೆ ಯಜಮಾನನಿಂದ ಹಿಡಿದು ಪುಟ್ಟ ಮಕ್ಕಳನ್ನು ಕಾಯುತ್ತಾಳೆ. ನರ ದೋಷ, ನರದೃಷ್ಟಿ, ಕೆಟ್ಟದೃಷ್ಟಿ ಹೀಗೆ ಹಲವಾರು ರೀತಿಯ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕೆಂದರೆ ಮನೆಯಲ್ಲಿ ಐಶ್ವರ್ಯ ಕಾಳಿಕಾದೇವಿಯ ಚಿತ್ರಪಟವನ್ನು ಇಟ್ಟುಕೊಳ್ಳಬೇಕು.ಐಶ್ವರ್ಯ ಕಾಳಿಕಾದೇವಿಯ ಚಿತ್ರಪಟವನ್ನು ಮನೆಯ ಮುಖ್ಯ ದ್ವಾರದ ಮೇಲೆ ಹಾಕಬೇಕು. ಇದರಿಂದ ಯಾವುದೇ ದುಷ್ಟಶಕ್ತಿಗಳು ಮನೆಯೊಳಗೆ ಪ್ರವೇಶವನ್ನು ಮಾಡುವುದಿಲ್ಲ. ದೇವಿಯ ಮೇಲೆ ನಂಬಿಕೆಯನ್ನಿಟ್ಟು ಚಿತ್ರಪಟವನ್ನು ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಹಾಕಿದರೆ ಶುಭಫಲವನ್ನು ನೀಡುತ್ತಾರೆ. ಒಳ್ಳೆಯ ಮನಸ್ಸಿನಿಂದ ಹಾಗೂ ಭಕ್ತಿಯಿಂದ ಭಗವಂತನನ್ನು ಬೇಡಿಕೊಂಡರೆ ಯಾವುದೇ ಸಮಯದಲ್ಲಾದರೂ ಸರಿ ಭಗವಂತನು ನಮ್ಮನ್ನು ಕೈಬಿಡುವುದಿಲ್ಲ.

    ಐಶ್ವರ್ಯ ಕಾಳಿಕಾದೇವಿಯಿಂದ ಧನ ಸಂಪತ್ತು ಲಭಿಸುತ್ತದೆ. ದೇವಿಯ ಚಿತ್ರಪಟವನ್ನು ಶುಕ್ರವಾರದಂದು ಅಥವಾ ಅಮಾವಾಸ್ಯೆ ದಿನದಂದು ತಂದರೆ ತುಂಬಾ ಒಳ್ಳೆಯದು. ಐಶ್ವರ್ಯ ಕಾಳಿಕಾದೇವಿಯ ಮಂತ್ರವನ್ನು 108 ಬಾರಿ ಜಪಿಸಿದರೆ ತುಂಬಾ ಒಳ್ಳೆಯದು. ಒಂದು ವೇಳೆ 108 ಬಾರಿ ಹೇಳುವುದಕ್ಕೆ ಸಮಯವಿಲ್ಲವೆಂದರೆ ಕನಿಷ್ಠ 21 ಬಾರಿ ಜಪಿಸಬೇಕು.ಓಂ ಹಿಂ ರಿಂ ಕ್ಲೀಮ್ ಶ್ರೀ ಐಶ್ವರ್ಯ ಕಾಳಿಕಾಯೆ ನಮಃ

    ಈ ಮೇಲಿನ ಮಂತ್ರವನ್ನು ಜಪಿಸುವುದರಿಂದ ಧನಸಂಪತ್ತು ವೃದ್ಧಿಯಾಗುತ್ತದೆ ಹಾಗೂ ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದು ಮತ್ತು ಕೈಗೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಈ ಮಂತ್ರದಿಂದ ಮನೆಯಲ್ಲಿರುವ ವಾಸ್ತು ದೋಷ ನಿವಾರಣೆಯಾಗುತ್ತದೆ ಹಾಗೂ ಯಾವುದೇ ರೀತಿಯ ದುಷ್ಟ ಶಕ್ತಿಗಳ ಪ್ರಭಾವವು ಮನೆಯ ಮೇಲೆ ಬೀಳುವುದಿಲ್ಲ.

  • ಉದ್ಯೋಗ ಸಮಸ್ಯೆ, ಪ್ರೀತಿ ಪ್ರೇಮ ಕಲಹಕ್ಕೆ ಇಲ್ಲಿದೆ ಸೂಕ್ತ ಪರಿಹಾರ..

    ಸಾಲಬಾಧೆ, ಹಣದ ಸಮಸ್ಯೆ, ಉದ್ಯೋಗ, ವಿದ್ಯಾಭ್ಯಾಸದಲ್ಲಿ ತೊಂದರೆ ಹಾಗೂ ಪ್ರೀತಿಯ ವಿಚಾರದಲ್ಲಿ ತೊಂದರೆಗಳು ಇದ್ದರೆ ಈ ಚಿಕ್ಕ ಕೆಲಸ ಮಾಡುವುದರಿಂದ ನಿವಾರಣೆಯಾಗುತ್ತದೆ.
    ಒಂದು ಒಳ್ಳೆ ಮನೆಯಲ್ಲಿ ಯಾವಾಗಲೂ ಕಲಹಗಳು, ವಾಸ್ತು ಸಮಸ್ಯೆ, ಯಾವುದೇ ಕೆಲಸವನ್ನು ಮಾಡಲು ಹೋದರೂ ಅಡೆತಡೆಗಳು ಆಗುತ್ತಿದ್ದರೆ ಅಂಥವರು ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಈ ಚಿಕ್ಕ ಕೆಲಸವನ್ನು ಮಾಡಬೇಕು. ಅರಿಶಿನವನ್ನು ಮನೆಯಲ್ಲಿರುವ ಎಲ್ಲಾ ಮೂಲೆಗಳಿಗೂ ಹಾಕಬೇಕು. ಇದರಿಂದ ವಾಸ್ತು ದೋಷ ಹಾಗೂ ನಕಾರಾತ್ಮಕ ಶಕ್ತಿಯ ದೋಷದಿಂದ ದುರವಾಗಬಹುದು ಹಾಗೂ ಧನ ಸಂಪತ್ತಿನ ಸಮಸ್ಯೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

    ಗುರುವಾರದಂದು ಅರಿಶಿಣವನ್ನು ನೀರಿನಲ್ಲಿ ಮಿಕ್ಸ್ ಮಾಡಿ ಬೇವಿನ ಎಲೆಯಿಂದ ಮನೆಯಲ್ಲಿರುವ ಎಲ್ಲಾ ಕೋಣೆಗಳಿಗೆ ಹಾಕಬೇಕು, ಇದರಿಂದ ನಕಾರಾತ್ಮಕ ಶಕ್ತಿ ಹಾಗೂ ಧನ ಸಂಪತ್ತಿನ ಸಮಸ್ಯೆಗಳು ದೂರವಾಗುತ್ತದೆ. ಸಾಮಾನ್ಯವಾಗಿ ಕೆಲವರಿಗೆ ರಾತ್ರಿ ವೇಳೆ ಮಲಗಿದ್ದ ಸಂದರ್ಭದಲ್ಲಿ ಕೆಟ್ಟ ಕನಸುಗಳು ಬೀಳುತ್ತದೆ. ಕೆಲವರಿಗೆ ಕೆಟ್ಟ ಕನಸು ಬಿದ್ದಾಗ ನಿದ್ದೆ ಬರುವುದಿಲ್ಲ ಹಾಗೂ ಭಯವಾಗುತ್ತಿರುತ್ತದೆ. ಹೀಗೆ ಭಯ ಬಂದಾಗ ಹಳದಿ ಹಾಗೂ ಕೆಂಪು ದಾರವನ್ನು ಅರಿಶಿಣದ ಕೊಂಬಿಗೆ ಸುತ್ತಬೇಕು. ಹಳದಿ ಹಾಗೂ ಕೆಂಪು ದಾರವನ್ನು ಅರಿಶಿಣದ ಕೊಂಬಿಗೆ ಸುತ್ತಿದ ನಂತರ ಮಲಗುವ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಈ ರೀತಿಯಾಗಿ 15 ದಿನ ಪ್ರತಿನಿತ್ಯವೂ ಮಾಡಬೇಕು ನಂತರ ಅರಿಶಿನದ ಕೊಂಬನ್ನು ಮಣ್ಣಿನಲ್ಲಿ ಮುಚ್ಚಬೇಕು. ಈ ರೀತಿಯಾಗಿ ಮಾಡಿದಾಗ ಕೆಟ್ಟ ಕನಸು ಬಿದ್ದಾಗ ಭಯವಾಗುವುದಿಲ್ಲ ಹಾಗೂ ಚೆನ್ನಾಗಿ ನಿದ್ರೆ ಮಾಡಬಹುದು.ಒಂದು ವೇಳೆ ಕುಟುಂಬದಲ್ಲಿ ಏನಾದರೂ ಸಮಸ್ಯೆ ಇದ್ದರೆ ಶುಕ್ರವಾರ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದೇವರ ಕೋಣೆಯಲ್ಲಿ ಪೂರ್ವಾಭಿಮುಖವಾಗಿ ಕುಳಿತುಕೊಂಡು ಒಂದು ತಟ್ಟೆಯಲ್ಲಿ ಅರಿಶಿನದ ಕೊಂಬನ್ನು ಇಟ್ಟು ಪೂಜಿಸಬೇಕು. ಪ್ರೀತಿಸುತ್ತಿರುವವರ ಹೆಸರನ್ನು ಸ್ಮರಿಸಿಕೊಂಡು ಮಂತ್ರವನ್ನು ಪಠಿಸುವುದರಿಂದ ಆ ವ್ಯಕ್ತಿಯ ಪ್ರೀತಿಯು ಲಭಿಸುತ್ತದೆ.

    ಓಂ ಕ್ಲಿಂ ಕೃಷ್ಣಾಯ ನಮಃ

    ಈ ಮೇಲಿನ ಮಂತ್ರವನ್ನು 108 ಬಾರಿ ಪಠಿಸಬೇಕು. ಈ ಮಂತ್ರವನ್ನು ಪಠಿಸಿದ ನಂತರ ತಟ್ಟೆಯಲ್ಲಿದ್ದ ಅರಿಶಿನದ ಕೊಂಬನ್ನು ಪುಡಿಮಾಡಿ ಒಂದು ಡಬ್ಬದಲ್ಲಿ ಇಡಬೇಕು. ಈ ಪರಿಹಾರವನ್ನು ಶುಕ್ರವಾರ ದಿನದಂದು ಮಾತ್ರ ಮಾಡಬೇಕು. ಮನೆಯಲ್ಲಿರುವ ಸದಸ್ಯರು ಒಂದು ವೇಳೆ ಯಾವುದಾದರೂ ಸಣ್ಣ ಸಣ್ಣ ವಿಷಯಕ್ಕೂ ಕೋಪಗೊಳ್ಳುತ್ತಿದ್ದರೆ ಅರಿಶಿನದ ಪುಡಿಗೆ ರೋಜ್ ವಾಟರ್ ಅನ್ನು ಹಾಕಿಕೊಂಡು ಹಣೆಗೆ ಇಟ್ಟುಕೊಳ್ಳಬೇಕು. ಇದರಿಂದ ಕೋಪಗೊಳ್ಳುವುದು ಕಡಿಮೆಯಾಗುತ್ತದೆ ಹಾಗೂ ಸಂತೋಷದಿಂದ ಜೀವನವನ್ನು ನಡೆಸಬಹುದು.
    ಈ ಮೇಲಿನ ಎಲ್ಲಾ ಉಪಾಯವನ್ನು ಗಂಡಸರಾಗಲಿ ಹೆಂಗಸರಾಗಲಿ ಮಾಡಬಹುದು ಮತ್ತು ಹೆಂಗಸರು ಋತುಚಕ್ರದಲ್ಲಿ ಇದ್ದಾಗ ಯಾವುದೇ ಕಾರಣಕ್ಕೂ ಮಾಡಬಾರದು.

  • ವಿಧವೆಯರು ಶುಭಕಾರ್ಯಗಳಿಗೆ ಹೋದರೆ ಅದು ಶುಭವೋ ಅಥವಾ ಅಶುಭವೋ ತಿಳಿದಿದೆಯೇ ನಿಮಗೆ ?

    ಹುಟ್ಟು ಮತ್ತು ಸಾವು ಎಂಬುದು ಯಾರ ಕೈಯಲ್ಲೂ ಇರುವುದಿಲ್ಲ, ಆದ್ದರಿಂದ ಹಿರಿಯರು ಹೇಳುವುದು ಹುಟ್ಟು ಉಚಿತ ಸಾವು ಖಚಿತ ಎಂದು. ವ್ಯಕ್ತಿಯು ಸತ್ತ ಮೇಲೆ ಅವನು ಸಂಪಾದನೆ ಮಾಡಿದ ಹಣ ವನ್ನಾಗಲಿ,ವಾಹನವನ್ನು ಆಗಲಿ ಅಥವಾ ಚಿನ್ನಾಭರಣವನ್ನು ಆಗಲಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆದರೆ ವ್ಯಕ್ತಿಯು ಸತ್ತ ನಂತರ ಅವನು ಮಾಡಿದ ಪಾಪ ಕರ್ಮಗಳನ್ನು ತೆಗೆದುಕೊಂಡು ಹೋಗುತ್ತಾನೆ. ಪತಿಯು ಸತ್ತ ನಂತರ ಯಾವ ರೀತಿ ಪತ್ನಿಯನ್ನು ವಿಧವೆ ಎಂದು ಕರೆಯುತ್ತೇವೋ ಹಾಗೆಯೇ ಒಂದು ವೇಳೆ ಪತ್ನಿಯು ಸತ್ತರೆ ಗಂಡನನ್ನು ವಿಧುರ ಎಂದು ಕರೆಯಲಾಗುತ್ತದೆ.

    ಒಂದು ಹೆಣ್ಣಿಗೆ ಗಂಡನು ಸತ್ತ ನಂತರ ಅರಿಶಿನ ಕುಂಕುಮ ಕೊಡುವುದಕ್ಕೂ ಹಾಗೂ ಶುಭ ಸಮಾರಂಭಗಳಲ್ಲಿ ಆರತಿ ಮಾಡುವುದಕ್ಕೆ ಕರೆಯುವುದಿಲ್ಲವೂ ಅದೇ ರೀತಿ ಪತ್ನಿಯು ಸತ್ತು ಹೋಗಿದ್ದರೆ ಗಂಡನನ್ನು ಯಾವುದೇ ರೀತಿಯ ಒಳ್ಳೆಯ ಕೆಲಸವನ್ನು ಶುಭಕಾರ್ಯದಲ್ಲಿ ಮಾಡಲು ಕರೆಯುವುದಿಲ್ಲ, ಏಕೆಂದರೆ ಪತಿಯೂ ಕೂಡ ಆಶುಭನಾಗಿರುತ್ತಾನೆ.ಒಂದು ಹೆಣ್ಣು ಹುಟ್ಟಿದರೆ ಅರಿಶಿನ ಕುಂಕುಮ ಶೋಭಿತಳಾದಳು ಎಂದು ಹೇಳಲಾಗುತ್ತದೆ. ಮದುವೆಯಾದಾಗ ಅರಿಶಿನ ಕುಂಕುಮವನ್ನು ಯಾರೂ ಕೊಡುವುದಿಲ್ಲ, ಹುಟ್ಟಿದ ತಕ್ಷಣವೇ ಅವಳು ಅದನ್ನು ಗಳಿಸಿರುತ್ತಾಳೆ. ಆದ್ದರಿಂದ ಒಂದು ವೇಳೆ ಗಂಡನ ಸತ್ತು ಹೋದರು ಅರಿಶಿನ-ಕುಂಕುಮವನ್ನು ಇಟ್ಟುಕೊಳ್ಳಬಹುದು ಆದರೆ ಅಲಂಕಾರವನ್ನು ಮಾಡಿಕೊಳ್ಳಬಾರದು.ಒಂದು ವೇಳೆ ಅಲಂಕಾರ ಮಾಡಿಕೊಂಡರೆ ಶಾಸ್ತ್ರದ ವಿರುದ್ಧವಾಗುತ್ತದೆ.ಒಂದು ವೇಳೆ ಪತಿಯು ಸತ್ತು ಹೋಗಿದ್ದರೆ ಪತ್ನಿಯ ಕೈಯಲ್ಲಿ ಮೊದಲನೇ ಶುಭಕಾರ್ಯವನ್ನು ಮಾಡಿಸುವುದಿಲ್ಲ. ಹಾಗೆಯೇ ಪತ್ನಿ ಸತ್ತು ಹೋಗಿದ್ದಾರೆ ಪತಿಯ ಕೈಯಲ್ಲಿ ಯಾವುದೇ ರೀತಿಯ ಮೊದಲನೆಯ ಶುಭಕಾರ್ಯವನ್ನು ಮಾಡಿಸುವುದಿಲ್ಲ. ಏಕೆಂದರೆ ಇವೆರಡೂ ವಿಷಯಗಳು ಅತಿ ಮುಖ್ಯವಾಗಿರುತ್ತದೆ ಒಂದು ವೇಳೆ ಮಾಡಿಸಿದರೆ ಅದು ಶಾಸ್ತ್ರದ ವಿರುದ್ಧವಾಗಿರುತ್ತದೆ. ಹಾಗೆಂದು ಯಾವುದೇ ಕಾರಣಕ್ಕೂ ಅಂತವರ ಮನಸ್ಸನ್ನು ನೋಯಿಸಬಾರದು ಮತ್ತು ಅವರಿಗೂ ಒಂದು ಒಳ್ಳೆಯ ಸ್ಥಾನಮಾನವನ್ನು ನೀಡಬೇಕು.

  • ಕಾಲಿನಲ್ಲಿರುವ ಉದ್ದವಾದ ಬೆರಳಿನ ರಹಸ್ಯ ತಿಳಿದಿದೆಯೇ ನಿಮಗೆ ?

    ಸಾಮಾನ್ಯವಾಗಿ ಕಾಲಿನಲ್ಲಿರುವ ಬೆರಳುಗಳು ನೇರವಾಗಿ ಸಮನಾಗಿರುತ್ತದೆ. ಆದರೆ ಕೆಲ ಜನರ ಕಾಲಿನ ಬೆರಳುಗಳು ಅಂಕುಡೊಂಕಾಗಿ ಇರುತ್ತದೆ. ಕೆಲವೊಮ್ಮೆ ಕಾಲಿನ ಹೆಬ್ಬೆರಳಿಗಿಂತ ಕಿರು ಬೆರಳುಗಳು ಎತ್ತರವಾಗಿರುತ್ತದೆ. ಆದ್ದರಿಂದ ಕಾಲಿನ ಬೆರಳುಗಳಿಗೆ ವಿಭಿನ್ನವಾದ ಮಹತ್ವವಿರುತ್ತದೆ. ಶಾಸ್ತ್ರಗಳ ಪ್ರಕಾರ ದೇಹದಲ್ಲಿರುವ ಪ್ರತಿಯೊಂದು ಅಂಗವೂ ಅವರವರ ಬಗ್ಗೆ ತಿಳಿಸಿಕೊಡುತ್ತದೆ. ಒಂದು ವೇಳೆ ವ್ಯಕ್ತಿಯ ಶರೀರದ ಅಂಗಗಳನ್ನು ಸರಿಯಾಗಿ ಗಮನಿಸಿದರೆ ಆ ವ್ಯಕ್ತಿಯ ಬಗ್ಗೆ ಹಲವಾರು ರಹಸ್ಯಗಳು ಗೊತ್ತಾಗುತ್ತದೆ. ಇದರಿಂದ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ಹಾಗೂ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಹಾಗಾದರೆ ಕಾಲಿನಲ್ಲಿರುವ ಉದ್ದವಾದ ಬೆರಳು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

    ಒಂದು ವೇಳೆ ಯಾವ ವ್ಯಕ್ತಿಯ ಕಾಲಿನ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿದ್ದು ಮತ್ತು ಉಳಿದೆಲ್ಲ ಬೆರಳುಗಳು ಚಿಕ್ಕದಾಗಿದ್ದರೆ ಆ ವ್ಯಕ್ತಿಯು ತುಂಬಾ ಶಕ್ತಿಶಾಲಿಯಾಗಿರುತ್ತಾರೆ. ಯಾವುದಾದರೂ ಹೊಸ ಆಲೋಚನೆಯಿಂದ ಸಾಧನೆಯನ್ನು ಮಾಡಲು ತುಂಬಾ ಉತ್ಸುಕರಾಗಿರುತ್ತಾರೆ. ಇಂಥವರು ಅಂದುಕೊಂಡ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ.ಒಂದು ವೇಳೆ ಕಾಲಿನ ಹೆಬ್ಬೆರಳಿನ ಪಕ್ಕದ ಬೆರಳು ಚಿಕ್ಕದಾಗಿದ್ದರೆ ಅಂತಹ ವ್ಯಕ್ತಿಗಳು ಜೀವನದಲ್ಲಿ ಎಂದಿಗೂ ಖುಷಿಯಾಗಿರುತ್ತಾರೆ. ಒಂದು ವೇಳೆ ಹೆಬ್ಬೆರಳಿನ ಪಕ್ಕದ ಬೆರಳು ಸಮನಾಗಿದ್ದರೆ ಅಂದರೆ ಹೆಬ್ಬೆರಳು ಹಾಗೂ ಪಕ್ಕದ ಬೆರಳು ಒಂದೇ ಸಮವಿದ್ದು ಹಾಗೂ ಉಳಿದೆಲ್ಲ ಬೆರಳುಗಳು ಚಿಕ್ಕದಾಗಿದ್ದರೆ ಅಂತಹ ವ್ಯಕ್ತಿಗಳು ಸಮಾಜದಲ್ಲಿ ದೊಡ್ಡ ಹೆಸರನ್ನು ಸಂಪಾದಿಸುತ್ತಾರೆ ಎಂದು ಸೂಚಿಸುತ್ತದೆ. ಇಂಥ ವ್ಯಕ್ತಿಗಳು ಶಾಂತ ಸ್ವಭಾವದಿಂದ ಕೂಡಿರುತ್ತಾರೆ ಹಾಗೂ ಯಾರೊಂದಿಗೂ ವಿನಾಕಾರಣ ಜಗಳವನ್ನು ಮಾಡುವುದಿಲ್ಲ.ಒಂದು ವೇಳೆ ಕಾಲಿನ ಬೆರಳುಗಳು ಯಾವ ವ್ಯಕ್ತಿಯಲ್ಲಿ ಇಳಿಮುಖವಾಗಿ ಹೋಗಿರುತ್ತದೆಯೋ ಅಂತ ವ್ಯಕ್ತಿಗಳು ತಮ್ಮ ಶ್ರೇಷ್ಟತೆಯನ್ನು ತೋರಿಸಿಕೊಳ್ಳಲು ಶ್ರಮವಹಿಸುತ್ತಾರೆ, ಅಧಿಕಾರದ ಮಾತುಗಳನ್ನು ಜಾಸ್ತಿಯಾಗಿ ಆಡುತ್ತಾರೆ, ಇಂತಹ ವ್ಯಕ್ತಿಗಳು ಏನು ಯೋಚನೆ ಮಾಡುತ್ತಾರೋ ಅದು ಸರಿ ಎಂದು ಭಾವಿಸುತ್ತಾರೆ. ಒಂದು ವೇಳೆ ಇಂಥ ವ್ಯಕ್ತಿಗಳ ಮಾತನ್ನು ಮನೆಯಲ್ಲಿ ಕೇಳದಿದ್ದರೆ ಅವರ ಮೇಲೆ ಕೋಪಗೊಳ್ಳುತ್ತಾರೆ.

  • ಆಕಸ್ಮಿಕವಾಗಿ ಸಾವನ್ನಪ್ಪಿದರೆ ಏನಾಗುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?

    ಪ್ರತಿನಿತ್ಯ ಓಡಾಡುವ ಹಾಗೆ ಆ ದಿನವೂ ವಾಹನದಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಅಪಘಾತವಾಗಿ ಮರಣವನ್ನು ಹೊಂದಿದರೆ ಜನರು ಹೇಳುತ್ತಾರೆ ಇವತ್ತು ವಾಹನದಲ್ಲಿ ಹೋಗಿಲ್ಲ ಅಂದಿದ್ದರೆ ಅಪಘಾತವಾಗುತ್ತಿರಲಿಲ್ಲ ಎಂದು ಕಾರಣವನ್ನು ಹೇಳುತ್ತಾರೆ. ಯಾವುದೇ ರೀತಿಯ ದುರ್ಘಟನೆ ಗಳಿಂದ ಆಕಸ್ಮಿಕವಾಗಿ ಮರಣವಾದರೆ ಜನರು ಹಲವಾರು ರೀತಿಯಲ್ಲಿ ಮಾತನಾಡಿಕೊಳ್ಳುತ್ತಾರೆ.

    ರಾಮಚರಿತ ಮಾಸದಲ್ಲಿ ಈ ರೀತಿ ಬರೆಯಲಾಗಿದೆ ನಮ್ಮ ನಿಮ್ಮ ಜೊತೆಗೆ ಏನು ಆಗಬೇಕಾಗಿದೆಯೋ ಅದು ನಡೆದೇ ನಡೆಯುತ್ತದೆ. ಯಾವ ಕಾರ್ಯವೂ ನಮ್ಮಿಂದ ಆಗಬಾರದು ಎಂದು ಇರುತ್ತದೆಯೊ ಅದು ಎಂದಿಗೂ ನಮ್ಮ ಕೈಯಿಂದ ಆಗುವುದಿಲ್ಲ. ಮರಣವು ಕೂಡ ವಿಧಿಯ ಅನುಸಾರ ಹೇಗೆ ಬರೆದಿದೆಯೋ ಹಾಗೆ ಆಗುವುದು. ಹುಟ್ಟುವುದು ಹಾಗೂ ಮರಣ ಹೊಂದುವುದು ಮೊದಲೆ ನಿಶ್ಚಯವಾಗಿರುತ್ತದೆ. ಹಾಗಾದರೆ ಎಲ್ಲರಲ್ಲೂ ಮೂಡುವ ಸಂಶಯವೇನೆಂದರೆ ಅಕಾಲಿಕ ಮರಣ ಯಾಕೆ ಆಗುತ್ತದೆ ಎಂದು.ಶಾಸ್ತ್ರಗಳ ಪ್ರಕಾರ ಯಾವ ವ್ಯಕ್ತಿ ಮುಂಜಾನೆ ಎದ್ದ ತಕ್ಷಣ ಭಗವಂತನನ್ನು ಪೂಜೆ ಮಾಡಿ ನಮಸ್ಕರಿಸಿ ಚರಣ ಅಮೃತವನ್ನು ಸೇವಿಸಿ ಯಾರು ಮನೆಯಿಂದ ಹೊರಗೆ ಹೋಗುತ್ತಾರೋ ಅವರಿಗೆ ಎಂದಿಗೂ ಅಕಾಲಿಕ ಮೃತ್ಯು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಅಕಾಲಿಕ ಮೃತ್ಯು ಎಂದರೆ ಆಕಸ್ಮಿಕವಾಗಿ ರಸ್ತೆಯಲ್ಲಿ ಅಪಘಾತವಾಗುವುದು ಅಥವಾ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಹೋಗುವುದು ಇದನ್ನು ಜನರು ಅಕಾಲಿಕ ಮರಣ ಎಂದು ಹೇಳುತ್ತಾರೆ. ಶಾಸ್ತ್ರಗಳ ಪ್ರಕಾರ ಅಕಾಲಿಕ ಮರಣ ಎಂದು ಯಾವುದು ಇಲ್ಲ ಎಲ್ಲವೂ ಪೂರ್ವ ನಿಶ್ಚಿತವಾಗಿರುತ್ತದೆ.ಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ ಒಂದು ವೇಳೆ ಯಾರಾದರೂ ಒಬ್ಬ ವ್ಯಕ್ತಿಯನ್ನು ಸಾಯಿಸಿದರೆ, ಆ ವ್ಯಕ್ತಿಯು ಪ್ರೇತಗಳು ಆಗುತ್ತಾರೆ. ಒಂದು ವೇಳೆ ವ್ಯಕ್ತಿಯು ಜೀವನವನ್ನು ಪಾರದರ್ಶಕವಾಗಿ, ಜನರಿಗೋಸ್ಕರ ಕೆಲಸವನ್ನು ಮಾಡಿ ನಿಸ್ವಾರ್ಥ ಭಾವನೆಯಿಂದ ಜೀವನ ನಡೆಸುತ್ತಿದ್ದರೆ ಹಾಗೂ ಒಂದು ವೇಳೆ ಆ ವ್ಯಕ್ತಿ ಆಕಸ್ಮಿಕವಾಗಿ ಸತ್ತರೆ ಅವನು ಭಗವಂತನ ಪಾದವನ್ನು ಸೇರುತ್ತಾನೆ ಎಂದು ಹೇಳಲಾಗಿದೆ. ಯಾವ ವ್ಯಕ್ತಿಯು ತಂದೆ-ತಾಯಿಯನ್ನು ಅವಮಾನ ಮಾಡುತ್ತಾರೋ, ಹಿರಿಯರಿಗೆ ಗೌರವ ಕೊಡುವುದಿಲ್ಲವೋ, ಭಗವಂತನನ್ನು ನಂಬುವುದಿಲ್ಲವೋ, ಜೀವನದಲ್ಲಿ ಯಾವ ವ್ಯಕ್ತಿಯು ಬರೀ ಕೆಟ್ಟ ಕೆಲಸವನ್ನೇ ಮಾಡುತ್ತಾ ಬರುತ್ತಾನೋ ಇಂತಹ ವ್ಯಕ್ತಿಯು ಆಕಸ್ಮಿಕವಾಗಿ ಮರಣವನ್ನು ಹೊಂದಿದರೆ ಪ್ರೇತಾತ್ಮವಾಗಿ ಇನ್ನುಳಿದ ಜೀವನವನ್ನು ಕಳೆಯಬೇಕಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

  • ಭೂತವು ಮನುಷ್ಯನನ್ನು ಪ್ರವೇಶ ಮಾಡಿದರೆ ಗೋಚರಿಸುವ ಲಕ್ಷಣಗಳು ಯಾವುವು ಎಂದು ತಿಳಿದಿದೆಯೇ ?

    ದೈವ ಇರುವುದು ಎಷ್ಟು ಸತ್ಯವೋ ಅಷ್ಟೇ ಆತ್ಮವು ಇರುವುದು ಸತ್ಯ. ದೇವರು ನಮ್ಮ ಮೇಲೆ ದೃಷ್ಟಿಯನ್ನು ಇಟ್ಟು ನಮ್ಮನ್ನು ರಕ್ಷಣೆ ಮಾಡುತ್ತಾರೆ ಎಂಬುದು ನಂಬಿಕೆ. ಅದೇ ರೀತಿ ಒಬ್ಬ ವ್ಯಕ್ತಿ ಬದುಕಿದ್ದಾಗ ಅವರನ್ನು ತುಂಬಾ ಆತ್ಮೀಯತೆಯಿಂದ ಪ್ರೀತಿಸುತ್ತೇವೆ, ಆದರೆ ಅದೇ ವ್ಯಕ್ತಿ ಸತ್ತ ಬಳಿಕ ಒಬ್ಬರ ಮೇಲೆ ಪ್ರವೇಶ ಪಡೆಯುತ್ತಿದ್ದಾನೆ ಎಂದರೆ ಈ ಕೆಲವೊಂದು ಗುಣ ಲಕ್ಷಣಗಳು ಗೋಚರಿಸುತ್ತವೆ. ಈ ರೀತಿಯಾಗಿ ಲಕ್ಷಣಗಳು ಕಂಡುಬಂದರೆ ಭೂತವು ಪ್ರವೇಶವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ ಅಥವಾ ಪ್ರೇತಾತ್ಮ ಯಾವುದೋ ಒಂದು ಉದ್ದೇಶವನ್ನು ಇಟ್ಟುಕೊಂಡು ನಿಮ್ಮನ್ನು ಪ್ರವೇಶ ಮಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ.

    ಭೂತ ಪ್ರೇತಗಳು ಆವರಿಸಿದರೆ ವ್ಯಕ್ತಿಯು ಹೇಗಿರುತ್ತಾನೆ ಎಂದರೆ ಏಕಾಂತವಾಗಿ ಕೋಣೆಯಲ್ಲಿ ಒಬ್ಬರೇ ಇರುತ್ತಾರೆ, ಒಬ್ಬರೇ ಕುಳಿತುಕೊಂಡು ನರಳುತ್ತಿರುತ್ತಾರೆ ಅಥವಾ ದುಃಖ ಪಡುತ್ತಿರುತ್ತಾರೆ, ಯಾರೊಂದಿಗೂ ಸೇರುವುದಿಲ್ಲ, ಯಾರೊಬ್ಬರ ಜೊತೆ ಮಾತನಾಡುವಾಗ ಆಕಸ್ಮಿಕವಾಗಿ ಸಿಟ್ಟುಗೊಳ್ಳುತ್ತಾರೆ, ಏನು ಮಾತನಾಡುತ್ತಿರುತ್ತೇನೆ ಎಂಬುದು ಅರಿವಿರುವುದಿಲ್ಲ, ನಗುನಗುತ್ತಾ ಅಳುತ್ತಿರುತ್ತಾರೆ, ಆತ್ಮ ವ್ಯಕ್ತಿಯನ್ನು ನೋಡಿ ಹೆದರುತ್ತದೆ, ಒಂದು ವೇಳೆ ಆತ್ಮವು ವ್ಯಕ್ತಿಯನ್ನು ಪ್ರವೇಶ ಮಾಡುತ್ತಿದೆ ಎಂದರೆ ತನ್ನ ರಕ್ಷಣೆಗಾಗಿ ಪ್ರವೇಶ ಮಾಡುತ್ತದೆ.ಕೆಲವು ಆತ್ಮಗಳು ರಕ್ಷಣೆಗಾಗಿ ಬಂದು ಸೇರುತ್ತವೆ, ಮತ್ತೆ ಕೆಲವು ಆತ್ಮಗಳು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಬಂದು ಸೇರುತ್ತವೆ, ಮತ್ತೆ ಇನ್ನು ಕೆಲವು ಆತ್ಮಗಳು ಶತ್ರು ದೃಷ್ಟಿಯಿಟ್ಟುಕೊಂಡು ಬಂದು ಸೇರುತ್ತವೆ. ಆತ್ಮವು ಒಬ್ಬ ವ್ಯಕ್ತಿಯನ್ನು ಪ್ರವೇಶ ಮಾಡಿದಾಗ ಆತನು ಎಲ್ಲರಿಂದ ದೂರ ಇರಲು ಇಚ್ಛಿಸುತ್ತಾನೆ, ಊಟದ ಸಮಯದಲ್ಲಿ ಏನಾದರೂ ಕಿರಿಕಿರಿ ಮಾಡುತ್ತಾರೆ, ಇಷ್ಟವಾದ ಊಟವನ್ನು ಬಹಳಷ್ಟು ಇಚ್ಚೆ ಪಡುತ್ತಾನೆ, ಊಟವನ್ನು ಸೇವಿಸಬೇಕಾದಾಗ ರಾಕ್ಷಸರ ರೀತಿ ಸೇವಿಸುತ್ತಾನೇ, ಯಾವುದೇ ಕೆಲಸ ಕಾರ್ಯಕ್ಕೂ ಹೋಗದೆ ಯಾವಾಗಲೂ ಮನೆಯಲ್ಲಿ ಕೂತಿರುತ್ತಾರೆ, ಪ್ರತಿನಿತ್ಯ ಸ್ನಾನ ಮಾಡಬೇಕು ಎಂದು ಅನಿಸುವುದಿಲ್ಲ, ಬಟ್ಟೆಯನ್ನು ಬದಲಾಯಿಸಬೇಕು ಎಂದು ಅನಿಸುವುದಿಲ್ಲ, ರಾತ್ರಿಯ ಸಮಯದಲ್ಲಿ ಒಬ್ಬರೇ ಮಾತನಾಡಿಕೊಳ್ಳುತ್ತಿರುತ್ತಾರೆ ಅಥವಾ ಅಳುತ್ತಿರುತ್ತಾರೆ ಈ ರೀತಿಯ ಸಮಸ್ಯೆ ಇದ್ದಾಗ ಪ್ರೇತ ಉಚ್ಚಾಟನೆಯನ್ನು ಮಾಡಬೇಕು.

  • ಮಕ್ಕಳ ಮೇಲೆ ವಾಮಾಚಾರವಾಗಿದ್ದರೆ ಗುಣಲಕ್ಷಣಗಳು ಹೇಗಿರುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?

    ಒಂದು ವೇಳೆ ಮಕ್ಕಳ ಮೇಲೆ ಕೆಟ್ಟದೃಷ್ಟಿ ಬಿದ್ದು ವಾಮಾಚಾರ ನಡೆದರೆ ಆ ಮಕ್ಕಳ ದೇಹವು ಒಣಗುತ್ತ ಹೋಗುತ್ತದೆ, ಊಟದ ಮೇಲೆ ಯಾವುದೇ ರೀತಿಯ ಆಸಕ್ತಿ ಇರುವುದಿಲ್ಲ, ತಂದೆ-ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ, ಮಾನಸಿಕವಾಗಿ ನರಳುತ್ತಿರುತ್ತಾರೆ, ವಿದ್ಯಾಭ್ಯಾಸದ ಕಡೆ ಆಸಕ್ತಿ ಇರುವುದಿಲ್ಲ, ಕುಟುಂಬದವರು ಯಾವುದಾದರೂ ಶುಭ ಸಮಾರಂಭಕ್ಕೆ ಹೋಗಬೇಕೆಂದರೆ ಅಡೆತಡೆಗಳು ಉಂಟಾಗುತ್ತದೆ, ಬೆಳಿಗ್ಗೆ ಎಷ್ಟು ಸಮಯ ಕಳೆದರೂ ಏಳದೆ ಹಾಸಿಗೆಯ ಮೇಲೆ ಇರುತ್ತಾರೆ, ಮಲಗಿರುವಂತ ಸ್ಥಿತಿಯಲ್ಲಿ ಯಾವಾಗಲೂ ಇರುತ್ತಾರೆ, ಇದು ಮಹಾ ದರಿದ್ರವನ್ನು ತಂದುಕೊಡುತ್ತದೆ ಹಾಗೂ ಅವರ ವೇಷಭೂಷಣಗಳು, ಹಾವಭಾವ ಎಲ್ಲವೂ ದರಿದ್ರತನದ ಕಡೆ ಬರುತ್ತದೆ. ತಂದೆ-ತಾಯಿ ಯಾವುದೇ ಒಂದು ಸಣ್ಣ ವಿಷಯವನ್ನು ಹೇಳಿದರೂ ಅವರ ಮೇಲೆ ಕಲಹ ಮಾಡುವುದು ಅಥವಾ ಕೋಪ ಆವೇಶ ಗಳಿಂದ ವರ್ತನೆ ಮಾಡುತ್ತಾರೆ ಇವೆಲ್ಲವೂ ಮಕ್ಕಳ ಮೇಲೆ ಬಲವಾಗಿ ವಾಮಾಚಾರ ನಡೆದಿದೆ ಎಂಬುದನ್ನು ಸೂಚಿಸುತ್ತದೆ.

    ವಾಮಾಚಾರ ಏಕೆ ಮಾಡುತ್ತಾರೆ ಎಂದರೆ ನಿಮ್ಮ ಏಳಿಗೆಯನ್ನು, ಅಭಿವೃದ್ಧಿಯನ್ನು ಸಹಿಸಲಾಗದೆ ಹಾಗೂ ಮನೆಯ ಮೇಲಿರುವ ಶತ್ರು ದೃಷ್ಟಿ ಹಾಗೂ ನಾಶ ಮಾಡಲೇಬೇಕು ಎಂದು ಕಾಯುತ್ತಿರುವವರು ಈ ಪ್ರಯೋಗಕ್ಕೆ ಮುಂದಾಗುತ್ತಾರೆ. ಈ ಪ್ರಭಾವದಿಂದ ಹೆಚ್ಚಾಗಿ ನರಳುವ ವ್ಯಕ್ತಿಯೆಂದರೆ ತಂದೆ ತಾಯಿ, ಏಕೆಂದರೆ ಮಕ್ಕಳಿಗೆ ಏನೇ ಆದರೂ ತಂದೆ-ತಾಯಿಗೆ ಅದನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಮಕ್ಕಳಲ್ಲಿ ಕೋಪ, ಆವೇಶ, ಮೊಂಡುತನ ಈ ರೀತಿ ಲಕ್ಷಣಗಳು ಕಂಡು ಬಂದಾಗ ತಂದೆ-ತಾಯಿಯರು ಎಚ್ಚರವಹಿಸಬೇಕು, ಏಕೆಂದರೆ ಒಂದು ವೇಳೆ ವಾಮಾಚಾರ ನಡೆದರೆ ದುಶ್ಚಟಗಳಿಗೆ ಮುಂದಾಗುತ್ತಾರೆ, ಪದೇ ಪದೇ ಮರಣ ವಾಗಬೇಕು ಎಂದು ಅಪೇಕ್ಷಿಸುತ್ತಾರೆ, ಮನೆಯನ್ನು ಬಿಟ್ಟು ಹೋಗಬೇಕು ಎಂದು ಅನ್ನಿಸುತ್ತಿರುತ್ತದೆ, ಒಂಟಿಯಾಗಿ ಇರಬೇಕು ಎಂದೆನಿಸುತ್ತದೆ, ತಂದೆತಾಯಿಯನ್ನು ದ್ವೇಷದ ಸ್ವಭಾವದಿಂದ ನೋಡುವಂತ ಆಗುತ್ತಾರೆ, ವಾಹನದಿಂದ ಪದೇಪದೇ ಬೀಳುತ್ತಿರುತ್ತಾರೆ, ವಾರದಲ್ಲಿ ಒಂದೆರಡು ದಿನ ಮಾತ್ರ ಆರಾಮಾಗಿ ಇರುತ್ತಾರೆ ಇನ್ನು ಮಿಕ್ಕಿದ ದಿನವೆಲ್ಲ ನರಕಯಾತನೆಯನ್ನು ಅನುಭವಿಸುತ್ತಿರುತ್ತಾರೆ. ಆದ್ದರಿಂದ ಈ ಗುಣ ಲಕ್ಷಣಗಳು ಕಂಡುಬಂದರೆ ತಂದೆ-ತಾಯಿಯರು ಎಚ್ಚರದಿಂದ ಇರಬೇಕು.