Kannada Astrology

Category: ಜ್ಯೋತಿಷ್ಯ

  • ಧನಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ಸಿಗುವ ಲಾಭಗಳು ಏನೇನು ಎಂದು ತಿಳಿದಿದೆಯೇ ನಿಮಗೆ ?

    ಧನಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ಸಿಗುವ ಲಾಭಗಳು ಏನೇನು ಎಂದು ತಿಳಿದಿದೆಯೇ ನಿಮಗೆ..ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗಿ ಧನಸಂಪತ್ತನ್ನು ಗಳಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಈ ರೀತಿಯ ಆಸೆ ಇದ್ದವರು ಆಸೆಯನ್ನು ಅಥವಾ ಕನಸನ್ನು ಈಡೇರಿಸಿಕೊಳ್ಳಲು ಲಕ್ಷ್ಮಿಯ ಪೂಜೆಯನ್ನು ಯಾವ ರೀತಿ ಮಾಡಿದರೆ ಲಕ್ಷ್ಮಿ ಕೃಪಾಕಟಾಕ್ಷವೂ ಒಲಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

    https://youtu.be/zNradaUZRlw

    ಬೆಳ್ಳಿ ಮತ್ತು ತಾಮ್ರದಿಂದ ಮಾಡಿರುವ ಧನಲಕ್ಷ್ಮಿ ಸೇರನ್ನು ತೆಗೆದುಕೊಂಡು ಬರಬೇಕು. ಈ ಸೇರನ್ನು ಧನಲಕ್ಷ್ಮಿ ಕುಂಚ ಅಥವಾ ಧನಲಕ್ಷ್ಮಿ ಸೇರು ಎಂದು ಕೂಡ ಕರೆಯಲಾಗುತ್ತದೆ. ಧನಲಕ್ಷ್ಮಿ ಸೇರಿನೊಳಗೆ ಯಾವ ಯಾವ ಪದಾರ್ಥಗಳನ್ನು ಹಾಕಿ ಪೂಜೆ ಮಾಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.ಮೊದಲಿಗೆ ಧನಲಕ್ಷ್ಮಿ ಸೇರನ್ನು ತೆಗೆದುಕೊಂಡು ಬಂದ ನಂತರ ಶುದ್ಧವಾದ ನೀರಿನಿಂದ ತೊಳೆದು ನಂತರ ಒರೆಸಿ ಇಡಬೇಕು. ಧನಲಕ್ಷ್ಮಿ ಸೇರನ್ನು ಒರೆಸಿದ ನಂತರ ಅರಿಶಿನ-ಕುಂಕುಮವನ್ನು ಹಚ್ಚಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು. ಧನಲಕ್ಷ್ಮಿ ಸೇರಿನೊಳಗೆ ಅಕ್ಕಿ, ಉಪಯೋಗಿಸದ ಬಂಗಾರ, ಬೆಳ್ಳಿಯ ನಾಣ್ಯ, 5 ಗುಲಗಂಜಿ, 5 ಗೋಮತಿ ಚಕ್ರ, 5 ಕಮಲದ ಬೀಜಗಳು, ತಾಮ್ರದಲ್ಲಿ ಮಾಡಿರುವಂತಹ ಕುಬೇರ ಲಕ್ಷ್ಮಿ ಯಂತ್ರವನ್ನು ಸೇರಿನ ಒಳಗೆ ಹಾಕಬೇಕು.

    ಸೇರನ್ನು ಇಡುವುದಕ್ಕೂ ಮೊದಲು ತಾಮ್ರದ,ಹಿತ್ತಾಳೆಯ ಅಥವಾ ಬೆಳ್ಳಿಯ ತಟ್ಟೆಯ ಮೇಲೆ ಪದ್ಮಕಾರದಲ್ಲಿ ನಾಣ್ಯಗಳನ್ನು ಹರಡಿ ಅದರ ಮೇಲೆ ಸೇರನ್ನು ಇಡಬೇಕು. ಸೇರಿನ ಒಳಗೆ ಮೇಲೆ ಹೇಳಿರುವ ವಸ್ತುಗಳನ್ನು ಹಾಕಬೇಕಾದರೆ ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಂಡು ಕಷ್ಟಗಳೆಲ್ಲ ಕರಗಿ ಹೋಗಿ ಅಷ್ಟೈಶ್ವರ್ಯಗಳು ತುಂಬಿ ತುಳುಕಲಿ ಎಂದು ಹೇಳಿಕೊಂಡು ಒಂದೊಂದು ಪಧಾರ್ಥವನ್ನು ಹಾಕಬೇಕು.

    ಧನಲಕ್ಷ್ಮಿ ಸೆರನ್ನು ಲಕ್ಷ್ಮಿದೇವಿ ಆಶೀರ್ವಾದ ಮಾಡುತ್ತಿರುವ ಫೋಟೋದ ಕೆಳಭಾಗದಲ್ಲಿ ಇಡಬೇಕು. ಈ ರೀತಿಯಾಗಿ ಭಕ್ತಿಯಿಂದ ಪೂಜೆಯನ್ನು ಮಾಡಿದರೆ ಸಕಲ ಸಂಕಷ್ಟಗಳೂ ದೂರವಾಗಿ ಧನಸಂಪತ್ತು ಪ್ರಾಪ್ತಿಯಾಗುವುದರಲ್ಲಿ ಸಂಶಯವಿಲ್ಲ. ಧನಲಕ್ಷ್ಮಿ ಪೂಜೆಯನ್ನು ಶುಕ್ರವಾರದ ದಿನದಂದು ಮಾಡಬೇಕು.

    ಸೇರಿನಲ್ಲಿರುವ ಅಕ್ಕಿಯನ್ನು ಮೂರು ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ಗುರುವಾರದ ದಿನ ಬದಲಾಯಿಸಿ ಮತ್ತೆ ಶುಕ್ರವಾರ ಹೊಸದಾದ ಅಕ್ಕಿಯನ್ನು ಹಾಕಿ ದೇವರ ಚಿತ್ರಪಟದ ಮುಂದೆ ಇಟ್ಟು ಪೂಜೆಯನ್ನು ಭಕ್ತಿಯಿಂದ ಮಾಡಬೇಕು.

  • ಬೀರುವಿನ ಒಳಗೆ ಯಾವ ವಸ್ತುವನ್ನು ಇಟ್ಟರೆ ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?

    ಸಾಮಾನ್ಯವಾಗಿ ಬೀರುವನ್ನು ಕುಬೇರನ ಸ್ಥಾನವಾದ ಉತ್ತರದಿಕ್ಕಿನಲ್ಲಿ ಇಟ್ಟುಕೊಳ್ಳುತ್ತೇವೆ. ಲಕ್ಷ್ಮಿ ಹಾಗೂ ಕುಬೇರರ ದಿಕ್ಕಾಗಿರುವ ಉತ್ತರ ದಿಕ್ಕಿನ ಕಡೆ ಬೀರುವನ್ನು ಇಡುವುದರಿಂದ ಲಕ್ಷ್ಮೀದೇವಿಯ ಹಾಗೂ ಕುಬೇರನ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಬೀರುವಿನ ಒಳಗೆ ಯಾವ ವಸ್ತುವನ್ನು ಇಟ್ಟರೆ ಲಕ್ಷ್ಮೀದೇವಿ ಅನುಗ್ರಹದಿಂದ ಧನ ಸಂಪತ್ತು ವೃದ್ಧಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.ಬೀರುವಿನ ಒಳಗೆ ಬಿಳಿಯ ವಸ್ತ್ರದ ಮೇಲೆ ಅತಾರ್ ಎಂಬುವ ಸುಗಂಧ ದ್ರವ್ಯವನ್ನು ಲೇಪಿಸಿ ಅದರ ಮೇಲೆ ಹಣ,ಚಿನ್ನಾಭರಣ ಹಾಗೂ ಮುಖ್ಯವಾದ ಹಾಗೂ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಳ್ಳಬಹುದು. ಬಿಳಿ ವಸ್ತ್ರದ ಮೇಲೆ ಚಿನ್ನಾಭರಣ,ನಾಣ್ಯಗಳು,ಹಣ ಹಾಗೂ ಮುಖ್ಯವಾದ ಕಾಗದ ಪತ್ರಗಳು ಹೀಗೆ ಎಲ್ಲವನ್ನೂ ಒಟ್ಟಿಗೆ ಇಡಬಾರದು ಅದರ ಬದಲು ಒಂದೊಂದು ವಸ್ತುವನ್ನು ಒಂದೊಂದು ಕಡೆ ಬೇರೆ ಬೇರೆಯಾಗಿ ಇಡಬೇಕು.

    https://youtu.be/mLy7Vw74Xjg

    ಬೀರುವಿನ ಒಳಗೆ ಪಚ್ಚ ಕರ್ಪೂರವನ್ನು ಇಡುವುದರಿಂದ ಲಕ್ಷ್ಮೀದೇವಿ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಪಚ್ಚಕರ್ಪೂರದ ಜೊತೆಗೆ ಲಾವಂಚದ ಬೇರನ್ನು ಇಡುವುದರಿಂದ ಲಕ್ಷ್ಮೀದೇವಿ ಸಂತುಷ್ಟರಾಗುತ್ತಾರೆ. ಲಕ್ಷ್ಮೀದೇವಿಯು ಕಮಲದ ಹೂವಿನ ಮೇಲೆ ಕುಳಿತುಕೊಂಡು ಬಂಗಾರದ ನಾಣ್ಯವನ್ನು ಬಲ ಕೈಯಿಂದ ಸುರಿಸುತ್ತಿರುವ ಹಾಗೆ ಹಾಗೂ ಎರಡು ಆನೆಯು ಲಕ್ಷ್ಮೀದೇವಿಗೆ ಕ್ಷೀರಾಭಿಷೇಕ ಮಾಡುತ್ತಿರುವ ಚಿತ್ರಪಟವನ್ನು ಬೀರುವಿನ ಮೇಲೆ ಹಾಕಿಕೊಳ್ಳಬಹುದು. ಅದೇ ರೀತಿ ಅರಿಶಿನದಿಂದ ಸ್ವಸ್ತಿಕ್ ಗುರುತನ್ನು ಬರೆದುಕೊಂಡು ಅದರ ಕೆಳಗೆ ಶುಭಂ ಲಾಭಂ ಎಂದು ಬರೆದುಕೊಳ್ಳುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.

  • ಏಕಮುಖ ರುದ್ರಾಕ್ಷಿಯಿಂದ ಆಗುವ ಚಮತ್ಕಾರದ ಬಗ್ಗೆ ತಿಳಿದಿದೆಯೇ ನಿಮಗೆ ?

    ಸಾಮಾನ್ಯವಾಗಿ ರುದ್ರಾಕ್ಷಿಗಳಲ್ಲಿ ಹಲವಾರು ವಿಧಾನಗಳನ್ನು ನೋಡಬಹುದು. ರುದ್ರಾಕ್ಷಿಗಳಲ್ಲಿ ಒಂದಾಗಿರುವ ಏಕಮುಖ ರುದ್ರಾಕ್ಷಿಯನ್ನು ಯಾರು ಧರಿಸುತ್ತಾರೋ ಹಾಗೂ ಯಾರ ಮನೆಯಲ್ಲಿ ಏಕಮುಖ ರುದ್ರಾಕ್ಷಿಯನ್ನು ಇಟ್ಟು ಪೂಜೆ ಮಾಡುತ್ತಾರೋ ಅಂತವರ ಮನೆಯಲ್ಲಿ ಎಂದಿಗೂ ಕಷ್ಟಗಳು ಬರುವುದಿಲ್ಲ. ದೇವರ ಮನೆಯಲ್ಲಿ ಏಕಮುಖ ರುದ್ರಾಕ್ಷಿ ಇಟ್ಟು ಪೂಜೆ ಮಾಡುವುದರಿಂದ ಸರ್ವ ಸುಖಗಳು, ಸರ್ವ ಸಂಪತ್ತು ಲಭಿಸುತ್ತದೆ.ಶಿವನಿಗೆ ಪ್ರಿಯವಾಗಿರುವ ರುದ್ರಾಕ್ಷಿಗಳಲ್ಲಿ ಏಕಮುಖ ರುದ್ರಾಕ್ಷಿಯು ಸಹ ಒಂದು. ಯಾರು ಅನುಷ್ಠಾನವನ್ನು ಮಾಡಿ ಏಕಮುಖದ ದ್ರಾಕ್ಷಿಯನ್ನು ಧರಿಸುತ್ತಾರೋ ಅಂತವರು ಸೂರ್ಯ ಪ್ರಕಾಶಮಾನವಾಗಿರುವ ತೇಜಸ್ಸನ್ನು ಹೊಂದುತ್ತಾರೆ. ಮನೆಯಲ್ಲಿ ಏಕಮುಖ ರುದ್ರಾಕ್ಷಿಯನ್ನು ಇಟ್ಟು ಪೂಜೆ ಮಾಡುವುದರಿಂದ ಮನೆಯು ಲಕ್ಷ್ಮಿ ನಿವಾಸವಾಗಿರುತ್ತದೆ ಹಾಗೂ ಸರ್ವ ಸುಖ, ಸರ್ವ ಸಂಪತ್ತು ಲಭಿಸುತ್ತದೆ. ಯಾವ ವ್ಯಕ್ತಿಗೆ ಸೊಂಟದ ನಾಡಿನಲ್ಲಿ ತೊಂದರೆ ಇರುತ್ತದೆಯೋ ಅಂತವರು ಅನುಷ್ಠಾನ ಮಾಡಿರುವ ಏಕಮುಖ ರುದ್ರಾಕ್ಷಿಯನ್ನು ಧರಿಸುವುದರಿಂದ ಸೊಂಟದ ನಾಡಿನಲ್ಲಿ ಇರುವ ಸಮಸ್ಯೆಯು ನಿವಾರಣೆಯಾಗುತ್ತದೆ. ಇಷ್ಟೇ ಅಲ್ಲದೆ ಯಾರಿಗೆ ಕಣ್ಣಿನ ದೃಷ್ಟಿಯ ಕೊರತೆ ಇರುತ್ತದೆಯೋ ಅಂತವರು ಏಕಮುಖ ರುದ್ರಾಕ್ಷಿ ಧರಿಸುವುದರಿಂದ ಚಮತ್ಕಾರದ ಫಲವನ್ನು ಪಡೆದುಕೊಳ್ಳಬಹುದು.ಮುಂಜಾನೆ ಬೆಳಗಿನ ಸಮಯದಲ್ಲಿ ಅಂದರೆ ಆರರಿಂದ ಏಳು ಗಂಟೆಯೊಳಗೆ ಸೂರ್ಯನಿಂದ ಬರುವ ಕಿರಣವನ್ನು ರುದ್ರಾಕ್ಷಿಯ ಸಹಾಯದಿಂದ ಎರಡು ಕಣ್ಣಿನಿಂದ ಸೂರ್ಯನ ಕಿರಣವನ್ನು ನೋಡಬೇಕು. ಹೀಗೆ ನೋಡುವುದರಿಂದ ಕಣ್ಣಿನ ದೃಷ್ಟಿಯ ಸಮಸ್ಯೆಯು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ರುದ್ರಾಕ್ಷಿಗಳಲ್ಲಿ ಒಂದು ಮುಖದ ರುದ್ರಾಕ್ಷಿಯಿಂದ ಹಿಡಿದು 21 ಮುಖದ ರುದ್ರಾಕ್ಷಿ ಇರುತ್ತದೆ. ಯಾವ ವ್ಯಕ್ತಿಯು ಒಂದು ಮುಖದ ರುದ್ರಾಕ್ಷಿ ಯಿಂದ ಹಿಡಿದು 21 ಮುಖದ ರುದ್ರಾಕ್ಷಿ ತನಕ ಹಾರವನ್ನು ಮಾಡಿಕೊಂಡು ಧರಿಸುತ್ತನೋ,ಆ ವ್ಯಕ್ತಿಯು ಬಹಳ ಜ್ಞಾನಿ ಯಾಗಿರುತ್ತಾರೆ ಹಾಗೂ ವಿಶೇಷವಾದ ಶಕ್ತಿಯನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಧರಿಸಬಹುದಾದಂತಹ ರುದ್ರಾಕ್ಷಿ ಅಂದರೆ ಪಂಚಮುಖ ರುದ್ರಾಕ್ಷಿ. ಏಕಮುಖ ರುದ್ರಾಕ್ಷಿ ಧರಿಸುವುದರಿಂದ ಸರ್ವ ಸುಖಗಳು, ಸರ್ವಸಂಪತ್ತು ಹಾಗೂ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು.

  • ಆಷಾಢ ಮಾಸದಲ್ಲಿ ಏನು ಮಾಡಬೇಕು ಹಾಗೂ ಏನನ್ನು ಮಾಡಬಾರದು ಎಂಬುದು ತಿಳಿದಿದೆಯೇ ನಿಮಗೆ ?

    ಆಷಾಢ ಮಾಸವೆಂದರೆ ಕೆಲವರ ಮನಸ್ಸಿನಲ್ಲಿ ಅಶುಭ ಮಾಸ ಎಂದು ಬಿಂಬಿತವಾಗಿರುತ್ತದೆ. ಆದರೆ ಆಷಾಢ ಮಾಸ ಅಶುಭವೆಂದು ಯಾವುದೇ ಶಾಸ್ತ್ರಗಳಲ್ಲಿ ಉಲ್ಲೇಖವಾಗಿಲ್ಲ. ಹಾಗೆ ನೋಡಿದರೆ ಆಷಾಢ ಮಾಸವು ತುಂಬಾ ಪವಿತ್ರತೆಯನ್ನು ಹೊಂದಿರುವ ಮಾಸವಾಗಿದೆ. ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯದೆ ಇದ್ದರೂ ಈ ಮಾಸದಲ್ಲಿ ಮಾಡುವ ಪೂಜೆಗಳಿಂದ ವಿಶೇಷವಾದ ಫಲಗಳು ಲಭಿಸುತ್ತದೆ. ಹಾಗಾದರೆ ಆಷಾಢ ಮಾಸದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಆಷಾಢ ಮಾಸದಲ್ಲಿ ವಿಪರೀತವಾದ ಗಾಳಿ ಹಾಗೂ ಮಳೆ ಬರುವುದರಿಂದ ಶೀತವಾಗುವ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಬೇಕು. ಆಷಾಢ ಮಾಸದಲ್ಲಿ ಎಲ್ಲರಿಗೂ ತಿಳಿದಿರುವ ಹಾಗೆ ನಾಮಕರಣ, ಮದುವೆ, ಮುಂಜಿ, ನಿಶ್ಚಿತಾರ್ಥದ ಮಾತುಕತೆ ಹೀಗೆ ಯಾವುದೇ ಶುಭಕಾರ್ಯವನ್ನು ಮಾಡುವುದಿಲ್ಲ. ಆಷಾಢ ಮಾಸದಲ್ಲಿ ದೇವರಿಗೆ ವ್ರತವನ್ನು, ಪೂಜೆಯನ್ನು ಭಕ್ತಿಯಿಂದ ಮಾಡುವುದರಿಂದ ಭಗವಂತನನ್ನು ಬಹಳ ಬೇಗ ಒಲಿಸಿಕೊಳ್ಳಬಹುದು. ಆಷಾಢ ಮಾಸವು ದೇವ ಪಾರಾಯಣವನ್ನು ಮಾಡಲು ಸೂಕ್ತವಾದ ಸಮಯವಾಗಿದೆ.

    ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾಗಿರುವ ನವದಂಪತಿಗಳು ಒಟ್ಟಿಗೆ ಸೇರಬಾರದು ಎಂದು ಕೂಡ ಹೇಳಲಾಗುತ್ತದೆ, ಏಕೆಂದರೆ ಒಂದು ವೇಳೆ ಈ ಸಮಯದಲ್ಲಿ ಹೆಣ್ಣು ಮಗು ಗರ್ಭವತಿಯಾದರೆ ಆ ಮಗುವಿನ ಮೇಲೆ ಈ ವಾತಾವರಣದ ಪ್ರಭಾವವು ಬೀಳುವುದರಿಂದ ಮಗುವಿನ ಆರೋಗ್ಯದ ಮೇಲೆ ಏರುಪೇರು ಆಗುತ್ತದೆ. ಆದ್ದರಿಂದ ಆಷಾಢ ಮಾಸದಲ್ಲಿ ಹೆಣ್ಣುಮಕ್ಕಳನ್ನು ತವರಿಗೆ ಕಳಿಸುವ ಪದ್ಧತಿಯು ರೂಢಿಯಲ್ಲಿದೆ.ಆಷಾಢ ಮಾಸದಲ್ಲಿ ಶಿವನ ವ್ರತವನ್ನು ಮಾಡುವುದು , ಲಕ್ಷ್ಮೀದೇವಿಯ ವ್ರತವನ್ನು ಸಹ ಮಾಡಬಹುದು. ಆಶಾಡ ಮಾಸದಲ್ಲಿ ದೀಪದ ಪೂಜೆಯನ್ನು ಮಾಡುವುದು ಬಹಳ ಶ್ರೇಷ್ಠಕರವಾಗಿರುತ್ತದೆ. ಆಷಾಢ ಮಾಸದಲ್ಲಿ ದಾನ ಮಾಡುವುದರಿಂದ ತುಂಬಾ ವಿಶೇಷವಾದ ಫಲಗಳು ಲಭಿಸುತ್ತವೆ. ಆಷಾಢ ಮಾಸದಲ್ಲಿ ಉಪ್ಪು, ನಲ್ಲಿಕಾಯಿ, ಚಪ್ಪಲಿ, ಛತ್ರಿ ಈ ರೀತಿ ವಸ್ತುಗಳನ್ನು ದಾನ ಮಾಡುವುದು ತುಂಬ ಶ್ರೇಷ್ಠವಾಗಿರುತ್ತದೆ.

    ಆಷಾಢ ಮಾಸದಲ್ಲಿ ಹೆಣ್ಣು ದೇವರಿಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಶುಕ್ರವಾರದ ದಿನದಂದು ಅಮ್ಮನವರ ದರ್ಶನವನ್ನು ಮಾಡುವುದು ತುಂಬಾ ಒಳ್ಳೆಯದು.

  • ಬೆಲ್ಲದಚ್ಚಿನ ಮೇಲೆ ಮಣ್ಣಿನ ದೀಪವನ್ನು ಹಚ್ಚುವುದರಿಂದ ಏನು ಲಾಭ ದೊರೆಯಲಿದೆ ಎಂಬುದು ತಿಳಿದಿದೆಯೇ ನಿಮಗೆ ?

    ಸಾಮಾನ್ಯವಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಪ್ರತಿನಿತ್ಯವೂ ದೇವರಿಗೆ ಪೂಜೆಯನ್ನು ಮಾಡುತ್ತಾರೆ, ಅದರಲ್ಲೂ ಹಬ್ಬದ ದಿನದಂದು ವಿಶೇಷವಾಗಿ ಪೂಜೆಯನ್ನು ಮಾಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಹೆಣ್ಣುಮಕ್ಕಳು ಮಂಗಳಗೌರಿ ಪೂಜೆಯನ್ನು ಮಂಗಳವಾರದ ದಿನ ಹಾಗೂ ಶುಕ್ರವಾರ ಮಾಡುತ್ತಾರೆ. ಹಿಂದೂ ಧರ್ಮದಲ್ಲಿ ಪ್ರತಿನಿತ್ಯವೂ ದೇವರಿಗೆ ಭಕ್ತಿಯಿಂದ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಲಾಗುತ್ತದೆ.ಮೊದಲಿಗೆ ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಮೊದಲು ದೀಪವನ್ನು ಹಚ್ಚಿ ನಂತರ ಹಳೆಯ ಹೂವನ್ನು ತೆಗೆದು ಹೊಸದಾದ ಹೂವನ್ನು ಮುಡುಸಿ ಪೂಜೆಯನ್ನು ಮಾಡಬೇಕು. ಪ್ರತಿನಿತ್ಯ ಮನೆಯಲ್ಲಿ ದೀಪಾರಾಧನೆಯನ್ನು ಮಾಡುವುದರಿಂದ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ ಹಾಗೂ ದಾರಿದ್ರತನ ದೂರವಾಗುತ್ತದೆ.

    ಒಂದು ತಟ್ಟೆಯಲ್ಲಿ ಅರಿಶಿಣದ ಅಕ್ಕಿಕಾಳನ್ನು ತುಂಬಾ ಹಾಕಿ ನಂತರ ಎರಡು ಬೆಲ್ಲದ ಅಚ್ಚನ್ನು ತೆಗೆದುಕೊಂಡು ಅಕ್ಕಿಕಾಳಿನ ಮೇಲೆ ಇಡಬೇಕು. ಎರಡು ಸಣ್ಣದಾದ ಮಣ್ಣಿನ ದೀಪವನ್ನು ತೆಗೆದುಕೊಂಡು ಬೆಲ್ಲದಚ್ಚಿನ ಮೇಲೆ ಇಡಬೇಕು. 5 ಬತ್ತಿಯನ್ನು ತೆಗೆದುಕೊಂಡು ತುಪ್ಪದಿಂದ ನೆನಸಿ ಮಣ್ಣಿನ ದೀಪದ ಒಳಗೆ ತುಪ್ಪವನ್ನು ಹಾಕಿ ದೀಪವನ್ನು ಹಚ್ಚಬೇಕು. ಈ ರೀತಿಯಾಗಿ ದೀಪಾರಾಧನೆಯನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ ದೊರಕುತ್ತದೆ ಹಾಗೂ ಮನಸ್ಸಿನಲ್ಲಿ ಯಾವುದೇ ರೀತಿಯ ಗೊಂದಲಗಳಿದ್ದರೂ ನಿವಾರಣೆಯಾಗುತ್ತದೆ. ಈ ರೀತಿಯಾಗಿ ದೀಪವನ್ನು ಮುಂಜಾನೆ ಹಾಗೂ ಸಾಯಂಕಾಲ ಹಚ್ಚುವುದು ತುಂಬಾ ಒಳ್ಳೆಯದು.ಈ ದೀಪವನ್ನು ಶುಕ್ರವಾರದ ದಿನದಂದು ಹಚ್ಚುವುದರಿಂದ ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗುತ್ತದೆ ಹಾಗೂ ಮನೆಯಲ್ಲಿ ಸುಖ, ಶಾಂತಿ,ನೆಮ್ಮದಿ ನೆಲೆಸಿ ಸುಖಕರವಾದ ಜೀವನ ನಡೆಸಲು ಸಹಾಯಕವಾಗುತ್ತದೆ.

  • ಹಣದ ಸಮಸ್ಯೆ ಉದ್ಯೋಗ ಸಮಸ್ಯೆ ಇರುವವರು ಈ ಉಪಾಯವನ್ನು ಮಾಡಿದರೆ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ.

    ಒಂದು ವೇಳೆ ಹಣದ ಸಮಸ್ಯೆ, ಆರೋಗ್ಯ ಸಮಸ್ಯೆ, ಕಷ್ಟಪಟ್ಟು ಎಷ್ಟೇ ದುಡಿದರೂ ಹಣವು ಕೈಯಲ್ಲಿ ನಿಲ್ಲದೆ ಇರುವುದು ಮತ್ತು ಮಾಡುವಂಥ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಬೇಕೆಂದರೆ ಈ ಚಿಕ್ಕ ಕೆಲಸವನ್ನು ಮಾಡಬೇಕು.

    ಮೊದಲಿಗೆ ನಾಲ್ಕು ಅರಳಿ ಬೀಜವನ್ನು ಬಲ ಕೈಯಲ್ಲಿ ಹಿಡಿದುಕೊಂಡು ತಲೆಯ ಸುತ್ತ ಆಂಟಿ ಕ್ಲಾಕ್ ವೈಸ್ ಏಳು ಬಾರಿ ನಿವಾಳಿಸಿ ಕಾಗೆಗೆ ತಿನ್ನಲು ಇಡಬೇಕು. ಈ ಉಪಾಯವನ್ನು 7 ಶನಿವಾರ ಮಾಡಬೇಕು.ಇದರಿಂದ ನಿಮಗಿರುವ ಕಷ್ಟಗಳೆಲ್ಲ ದೂರವಾಗುತ್ತದೆ.

    ಒಂದು ವೇಳೆ ನೀವೇನಾದರೂ ವ್ಯಾಪಾರ ಮಾಡುತ್ತಿದ್ದರೆ ಅಥವಾ ಉದ್ಯೋಗವನ್ನು ಹುಡುಕುತ್ತಿದ್ದು ಯಾವ ಕೆಲಸವು ಸರಿಯಾಗಿ ಸಿಗುತ್ತಿಲ್ಲ ವೆಂದರೆ ಆ ವ್ಯಕ್ತಿಯು ಮಂಗಳವಾರ ದಿನದಂದು 4 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ಒಳಗೆ ಈ ಪರಿಹಾರವನ್ನು ಮಾಡಬಹುದು. ಮೊದಲಿಗೆ ಸ್ವಲ್ಪ ಅರಿಶಿನವನ್ನು ತಟ್ಟೆಯಲ್ಲಿ ಹಾಕಿ ನೆನೆಸಬೇಕು. ನಂತರ ತಾಮ್ರದ ತಟ್ಟೆ ಯಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು ಸ್ವಸ್ತಿಕ್ ಚಿಹ್ನೆಯನ್ನು ಬರೆದ ನಂತರ ಚಿಹ್ನೆಯ ನಾಲಕ್ಕು ಭಾಗಕ್ಕೂ 4 ಅರಳಿ ಬೀಜವನ್ನು ಇಡಬೇಕು. ಈ ರೀತಿ ಏಳು ವಾರಗಳ ಕಾಲ ಮಾಡಬೇಕು.ನಂತರ ನೀರನ್ನು ತಟ್ಟೆಗೆ ಹಾಕಿ ಯಾವುದಾದರೂ ಗಿಡದ ಬುಡಕ್ಕೆ ತಟ್ಟೆಯಲ್ಲಿರುವ ನೀರನ್ನು ಸುರಿಯಬೇಕು. ಇದರಿಂದ ವ್ಯಾಪಾರದಲ್ಲಿನ ಸಮಸ್ಯೆ , ಉದ್ಯೋಗ ಸಮಸ್ಯೆ ಹಾಗೂ ನಿಮಗಿರುವ ಸರ್ವ ಕಷ್ಟಗಳು ನಿವಾರಣೆಯಾಗುವುದರಲ್ಲಿ ಸಂಶಯವಿಲ್ಲ.ಮತ್ತೊಂದು ಉಪಾಯವೇನೆಂದರೆ ತಾಮ್ರದ ಲೋಟವನ್ನು ತೆಗೆದುಕೊಂಡು ಅದಕ್ಕೆ ನೀರನ್ನು ತುಂಬಿ ಅದರೊಳಗೆ ಮೂರು ಅರಳಿ ಬೀಜವನ್ನು ಹಾಕಬೇಕು. ಈ ಉಪಾಯವನ್ನು ಶನಿವಾರದ ದಿನದೊಂದು ಪ್ರಾರಂಭ ಮಾಡಬೇಕು. ಈ ಉಪಾಯವನ್ನು 21 ದಿನ ಮಾಡಬೇಕು. ಈ ಉಪಾಯವನ್ನು ಮಾಡಿದ ನಂತರ ಚಂಬಿನಲ್ಲಿ ಇದ್ದ ನೀರನ್ನು ಅರಳಿ ಮರದ ಬುಡಕ್ಕೆ ಹಾಕಿ ಮನೆಗೆ ಬರಬೇಕು. ಇದರಿಂದ ದುರಾದೃಷ್ಟ ಹೋಗಿ ಅದೃಷ್ಟವು ಬರುತ್ತದೆ.

    ಒಂದು ವೇಳೆ ವಿಪರೀತವಾಗಿ ಹಣದ ಸಮಸ್ಯೆ ಇರುವವರು ಕಡಲೆಕಾಯಿ ಬೀಜವನ್ನು ಮೊಸರಿನಲ್ಲಿ ನೆನಸಿ ನಾಯಿಗಳಿಗೆ ನೀಡಬೇಕು. ಒಂದು ವೇಳೆ ನೀವಿರುವ ಜಾಗದಲ್ಲಿ ನಾಯಿ ಇಲ್ಲದಿದ್ದರೆ ಅರಳಿ ಮರದ ಬುಡಕ್ಕೆ ಹಾಕಬಹುದು. ಇದರಿಂದ ನಿಮಗಿರುವ ಹಣದ ಸಮಸ್ಯೆಯು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಈ ಉಪಾಯವನ್ನು 7 ಶನಿವಾರ ಮಾಡಬೇಕು.

  • ನಕಾರಾತ್ಮಕ ಶಕ್ತಿ ದೂರವಾಗಿ ದೈವಿಕ ಶಕ್ತಿ ಹೆಚ್ಚಾಗಬೇಕೆಂದರೆ ಈ ಚಿಕ್ಕ ಪರಿಹಾರವನ್ನು ಮಾಡಿ.

    ಹಾಲಿನಿಂದ ಮಾಡುವ ಈ ಸಣ್ಣ ಉಪಾಯದಿಂದ ದೈವಿಕ ಶಕ್ತಿ ಹೆಚ್ಚುವುದರ ಜೊತೆಗೆ ಧನಸಂಪತ್ತು ಸಹ ವೃದ್ಧಿಯಾಗುತ್ತದೆ ಹಾಗೂ ಕುಟುಂಬದವರ ಜೊತೆಗಿರುವ ಸಣ್ಣ ಪುಟ್ಟ ಕಲಹಗಳು ನಿವಾರಣೆಯಾಗುತ್ತದೆ. ಈ ಪರಿಹಾರವನ್ನು ಸೋಮವಾರದ ದಿನ ಸಾಯಂಕಾಲ ಸಂಜೆ 5 ಗಂಟೆಯ ನಂತರ ಹಾಗೂ 7 ಗಂಟೆಯೊಳಗೆ ಮಾಡಬೇಕು. ಈ ಚಿಕ್ಕ ಪರಿಹಾರವನ್ನು ಐದು ಸೋಮವಾರಗಳ ಕಾಲ ಮಾಡಬೇಕು. ಈ ಪರಿಹಾರವನ್ನು ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿಯ ಸಂಚಲನವಾಗಳು ಪ್ರಾರಂಭವಾಗುತ್ತದೆ. ಈ ಉಪಾಯವನ್ನು ಗಂಡಸರಾಗಲಿ ಅಥವಾ ಹೆಂಗಸರಾಗಲಿ ಯಾರು ಬೇಕಾದರೂ ಮಾಡಬಹುದು. ಹೆಂಗಸರು ಮುಟ್ಟಾದ ಸಮಯದಲ್ಲಿ ಹಾಗೂ ಗರ್ಭಿಣಿ ಸ್ತ್ರೀಯರು ಈ ಉಪಾಯವನ್ನು ಮಾಡಬಾರದು.ಮೊದಲಿಗೆ ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಒಂದು ಬಟ್ಟಲಿಗೆ ಹಾಲನ್ನು ಹಾಕಿ ಅದರೊಳಗೆ 5 ರೂಪಾಯಿ ನಾಣ್ಯವನ್ನು ಹಾಕಬೇಕು. ಮತ್ತೆ ಇನ್ನೊಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಶುದ್ಧವಾದ ನೀರನ್ನು ಹಾಕಬೇಕು. ನೀರನ್ನು ಹಾಕಿದ ಬಟ್ಟಲಿನ ಮೇಲೆ ಹಾಲನ್ನು ಹಾಕಿದ ಬಟ್ಟಲನ್ನು ದೇವರ ಕೋಣೆಯಲ್ಲಿ ಇಡಬೇಕು. ನಂತರ ಸಾಯಂಕಾಲ ಯಾವುದಾದರೂ ಒಂದು ಹೂವಿನ ಗಿಡದ ಬುಡಕ್ಕೆ ಬೆಳಗ್ಗೆ ಬಟ್ಟಲಿನಲ್ಲಿ ಹಾಕಿದ್ದ ಹಾಲು ಹಾಗೂ ನೀರನ್ನು ಸುರಿದು ಸಾಂಬ್ರಾಣಿ ಹೊಗೆಯನ್ನು ಹಾಕಿ ನಿಮ್ಮ ಕೋರಿಕೆಗಳನ್ನು ಹೇಳಿಕೊಂಡು ಬರಬೇಕು.ಈ ರೀತಿ 5 ಸೋಮವಾರ ಮಾಡಿದ ಮೇಲೆ ಐದು ಬಟ್ಟಲಲ್ಲಿ ಹಾಕಿದ್ದ ಐದು ರೂಪಾಯಿ ನಾಣ್ಯವನ್ನು ಒಂದು ಬಟ್ಟೆಯೊಳಗೆ ಹಾಕಿ ಅದರ ಜೊತೆಗೆ ಪಚ್ಚ ಕರ್ಪೂರವನ್ನು ಹಾಕಿ ಆ ಬಟ್ಟೆಯನ್ನು ಕಟ್ಟಿ ಮನೆಯಲ್ಲಿ ಯಾವ ಜಾಗದಲ್ಲಿ ನೀವು ಹಣವನ್ನು ಇಡುತ್ತಿರೋ ಅಲ್ಲಿ ನಾಣ್ಯ ಹಾಗೂ ಪಚ್ಚ ಕರ್ಪೂರವನ್ನು ಹಾಕಿ ಕಟ್ಟಿದ್ದ ಬಟ್ಟೆಯನ್ನು ಇಡಬೇಕು. ಇದರಿಂದ ಮನೆಯಲ್ಲಿರುವ ಆರ್ಥಿಕ ಸಮಸ್ಯೆ ದೂರವಾಗಿ ಧನಸಂಪತ್ತು ವೃದ್ಧಿಯಾಗುತ್ತದೆ.

  • ಧನ ಸಂಪತ್ತು ವೃದ್ಧಿ ಆಗಬೇಕೆಂದರೆ ಈ ಚಿಕ್ಕ ಕೆಲಸವನ್ನು ಮಾಡಿ.

    ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಹೆಚ್ಚಾಗಿ ಹಣ ಸಂಪಾದನೆಯನ್ನು ಮಾಡಬೇಕು ಹಾಗೂ ಜೀವನದಲ್ಲಿ ಸುಖಕರವಾಗಿ ಜೀವನವನ್ನು ನಡೆಸಬೇಕೆಂಬ ಆಸೆ ಇದ್ದೇ ಇರುತ್ತದೆ. ಹಣ ಸಂಪಾದನೆಯನ್ನು ಎಲ್ಲರೂ ಮಾಡುತ್ತಾರೆ ಆದರೆ ಕೆಲವರಿಗೆ ಐಷಾರಾಮಿ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಹಣ ಸಂಪಾದನೆಯನ್ನು ಹೆಚ್ಚಿಸಲು ಹಾಗೂ ಹಲವಾರು ಕಡೆಯಿಂದ ಸಂಪತ್ತನ್ನು ಬರಮಾಡಿಕೊಳ್ಳಲು ಏನು ಮಾಡಬೇಕೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.ಮೊದಲಿಗೆ ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದನ್ನು ಮೂರು ಭಾಗ ಮಾಡಿಕೊಳ್ಳಬೇಕು, ನಂತರ ಒಂದು ಬಟ್ಟಲಿನಲ್ಲಿ ಕಾಯಿಸಿ ಆರಿಸಿದ ಹಾಲನ್ನು ತೆಗೆದುಕೊಳ್ಳಬೇಕು, ನಂತರ ಬಟ್ಟಲಿನಲ್ಲಿರುವ ಹಾಲಿನೊಳಗೆ ಕೆಂಪು ಬಟ್ಟೆಯನ್ನು ಅದ್ದಿ ದೇವರ ಕೋಣೆಯಲ್ಲಿ ಲಕ್ಷ್ಮೀದೇವಿಯ ಚಿತ್ರಪಟದ ಮುಂದೆ ಅಥವಾ ಗಣಪತಿಯ ಚಿತ್ರಪಟದ ಮುಂದೆ ಒಂದು ತಟ್ಟೆಯಲ್ಲಿ ಈ ಮೂರು ಕೆಂಪು ಬಟ್ಟೆಯನ್ನು ಇಟ್ಟು ಅದರ ಜೊತೆಗೆ ನಾಣ್ಯಗಳನ್ನು ಸಹ ಇಟ್ಟು ನಂತರ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಬೇಕು.

    ಪೂಜೆಯನ್ನು ಮಾಡಿದ ನಂತರ ತಟ್ಟೆಯಲ್ಲಿ ಇಟ್ಟಿದ್ದ ನಾಣ್ಯವನ್ನು ತೆಗೆದುಕೊಂಡು ಒಂದೊಂದು ಬಟ್ಟೆಗೆ ಒಂದೊಂದು ನಾಣ್ಯವನ್ನು ಹಾಕಿ ಕಟ್ಟಬೇಕು. ನಂತರ ಮೂರು ಕೆಂಪು ಬಟ್ಟೆಯನ್ನು ಸೇರಿಸಿ ಒಟ್ಟಾಗಿ ಗಂಟನ್ನು ಹಾಕಿಕೊಳ್ಳಬೇಕು. ನಂತರ ಮೂರು ಕೆಂಪು ಬಟ್ಟೆಯನ್ನು ಒಟ್ಟಿಗೆ ಕಟ್ಟಿದ ನಂತರ ಲಕ್ಷ್ಮೀದೇವಿಯ ಅಥವಾ ವಿಘ್ನವಿನಾಶಕ ಗಣಪತಿಯ ಮುಂದೆ ಇಟ್ಟು ಆರತಿಯನ್ನು ಮಾಡಿ ಪೂಜೆಯನ್ನು ಮಾಡಬೇಕು.
    ಈ ರೀತಿಯಾಗಿ ಪೂಜೆ ಮಾಡಿದ ಕೆಂಪು ಬಟ್ಟೆಯನ್ನು ಮನೆಯ ಮುಖ್ಯದ್ವಾರದ ಬಲಭಾಗದ ಮೇಲ್ಭಾಗದಲ್ಲಿ ಕಟ್ಟಬೇಕು. ಈ ರೀತಿಯಾಗಿ ಮಾಡುವುದರಿಂದ ಧನಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಹಣದ ಹರಿವು ಹಲವಾರು ಕಡೆಯಿಂದ ಬರಲು ಶುರುವಾಗುತ್ತದೆ.ಧನ ಸಂಪತ್ತನ್ನು ವೃದ್ಧಿಸಿಕೊಳ್ಳಲು ಮತ್ತೊಂದು ಪರಿಹಾರವೇನೆಂದರೆ ಅಮಾವಾಸ್ಯೆ ದಿನ ಒಂದು ಚಿಕ್ಕದಾದ ಮಡಿಕೆಯನ್ನು ತೆಗೆದುಕೊಂಡು ಅದರ ಒಳಗೆ ನೀರನ್ನು ಹಾಕಿ ಅದನ್ನು ಕೈಯಲ್ಲಿ ಹಿಡಿದುಕೊಂಡು ಹಣದ ಸಮಸ್ಯೆಗಳೆಲ್ಲ ದೂರವಾಗಲಿ ಹಾಗೂ ಹಲವಾರು ಕಡೆಯಿಂದ ಧನಸಂಪತ್ತು ಬರುವಂತಾಗಲಿ ಮತ್ತು ಸರ್ವ ಕಷ್ಟಗಳೆಲ್ಲ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿಕೊಂಡು ಯಾರು ಓಡಾಡದ ಜಾಗಕ್ಕೆ ಹೋಗಿ ಗುಂಡಿಯನ್ನು ತೆಗೆದು ಆ ಗುಂಡಿಯೊಳಗೆ ನೀವು ತೆಗೆದುಕೊಂಡು ಹೋಗಿರುವ ಮಡಿಕೆಯನ್ನು ಗುಂಡಿಯೊಳಗೆ ಹಾಕಿ ನಂತರ ಮಣ್ಣಿನಿಂದ ಮುಚ್ಚಿ ಹಿಂತಿರುಗಿ ನೋಡದೆ ಮನೆಗೆ ಬಂದು ಕೈಕಾಲುಗಳನ್ನು ತೊಳೆದುಕೊಂಡು ನಂತರ ಮನೆಯ ಒಳಗೆ ಪ್ರವೇಶವನ್ನು ಪಡೆದುಕೊಳ್ಳಬೇಕು. ಇದರಿಂದ ಧನಾಕರ್ಷಣೆ ಆಗುತ್ತದೆ ಹಾಗೂ ಹಲವಾರು ಕಡೆಯಿಂದ ಆದಾಯಗಳು ಬರಲು ಪ್ರಾರಂಭವಾಗುತ್ತದೆ.

  • ಯಾವ ದಿನ ಬಂಗಾರವನ್ನು ಖರೀದಿ ಮಾಡಿದರೆ ದುಪ್ಪಟ್ಟು ಆಗುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?

    ಸಾಮಾನ್ಯವಾಗಿ ಜನರು ಬಂಗಾರವನ್ನು ಖರೀದಿ ಮಾಡಲು ಶನಿವಾರ ಹಾಗೂ ಭಾನುವಾರದ ದಿನವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಆದರೆ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಭಾನುವಾರದಂದು ಯಾವುದೇ ಕಾರಣಕ್ಕೂ ಬಂಗಾರವನ್ನು ಖರೀದಿ ಮಾಡಬಾರದು. ಒಂದು ವೇಳೆ ಭಾನುವಾರ ದಿನದಂದು ಬಂಗಾರವನ್ನು ಖರೀದಿ ಮಾಡಿದ್ದಲ್ಲಿ ಖರೀದಿ ಮಾಡಿದ ಬಂಗಾರ ಹಾಗೂ ಮನೆಯಲ್ಲಿದ್ದ ಬಂಗಾರವು ನಶಿಸಿ ಹೋಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅದೇ ರೀತಿ ಶನಿವಾರದಂದು ಚಿನ್ನವನ್ನು ಖರೀದಿ ಮಾಡಿದರೆ ಕಳ್ಳತನವಾಗುತ್ತದೆ ಅಥವಾ ಬಂಗಾರವು ನಮ್ಮ ಹತ್ತಿರ ಉಳಿಯುವುದಿಲ್ಲ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಆದ್ದರಿಂದ ಬಂಗಾರವನ್ನು ಶನಿವಾರ ಹಾಗೂ ಭಾನುವಾರದ ದಿನದಂದು ಖರೀದಿ ಮಾಡಬಾರದು.ಬುಧವಾರ, ಗುರುವಾರ ಹಾಗೂ ಶುಕ್ರವಾರ ಬಂಗಾರವನ್ನು ಖರೀದಿ ಮಾಡಲು ಸೂಕ್ತವಾದ ದಿನ. ವಿಶೇಷವಾಗಿ ಗುರುವಾರದ ದಿನ ಪುಷ್ಯಮಿ ನಕ್ಷತ್ರ ಬಂದಾಗ ಬಂಗಾರವನ್ನು ಖರೀದಿ ಮಾಡಿದರೆ ತುಂಬಾ ಲಾಭದಾಯಕ ಎಂದು ಹೇಳಲಾಗಿದೆ. ಶುಕ್ರವಾರ ಪೂರ್ವಾಷಾಡ ನಕ್ಷತ್ರ ಬಂದಾಗ ಬಂಗಾರವನ್ನು ಖರೀದಿ ಮಾಡಿದರೆ ತುಂಬಾ ಸಹಾಯಕವಾಗುತ್ತದೆ. ಅದೇ ರೀತಿ ಬುಧವಾರ ಗುರುವಾರ ಹಾಗೂ ಶುಕ್ರವಾರ ದಿನದಂದು ಬಂಗಾರವನ್ನು ಧರಿಸಿದರೆ ಪುಣ್ಯಗಳು ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

    ಭಾನುವಾರ ಹಾಗೂ ಸೋಮವಾರ ಚಿಕ್ಕಮಕ್ಕಳಿಗೆ ಹಾಕಿರುವ ಬಂಗಾರವನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು. ಲಕ್ಷ್ಮೀದೇವಿಗೆ ತುಂಬಾ ಪ್ರಿಯವಾದಂತ ಒಡವೆಗಳನ್ನು ಸಾಯಂಕಾಲ ಅಥವಾ ಕತ್ತಲಾದ ಮೇಲೆ ಯಾರಿಗೂ ಕೊಡಬೇಡಿ.ಬಂಗಾರವು ವೃದ್ಧಿಸಬೇಕು ಎಂದರೆ ನಿಮ್ಮ ಮನೆಯ ಹತ್ತಿರ ಇರುವ ಬಾಳೆಹಣ್ಣಿನ ಗಿಡದ ಬುಡದ ಹತ್ತಿರ ಹೋಗಿ ಅಲ್ಲಿ ಬಾದಾಮಿ ಎಲೆಯನ್ನು ಇಟ್ಟು ಅಲ್ಲಿ ಲಕ್ಷ್ಮೀನಾರಾಯಣ ಸ್ವಾಮಿಯ ಚಿತ್ರಪಟವನ್ನು ಇಟ್ಟು ನಿಮ್ಮ ಹತ್ತಿರ ಇರುವ ಯಾವುದಾದರೂ ಒಡವೆಯನ್ನು ಚಿತ್ರಪಟದ ಮುಂದೆ ಇಟ್ಟು ದೀಪಾರಾಧನೆಯನ್ನು ಮಾಡಬೇಕು. ಈ ರೀತಿಯಾಗಿ ಪೂಜೆಯನ್ನು ಮಾಡುವುದರಿಂದ ಲಕ್ಷ್ಮೀನಾರಾಯಣಸ್ವಾಮಿಯ ಅನುಗ್ರಹದಿಂದ ನಿಮ್ಮ ಹತ್ತಿರ ಇರುವ ಬಂಗಾರ ವೃದ್ಧಿಸಲು ಸಹಾಯಕವಾಗುತ್ತದೆ.

    ಹಾಕಿಕೊಂಡಿರುವ ಬಂಗಾರವನ್ನು ತೆಗೆಯಬೇಕಾದರೆ ಮೊದಲಿಗೆ ಕಿವಿಯಲ್ಲಿರುವ ಬಂಗಾರವನ್ನು ತೆಗೆದು ನಂತರ ಕೈಯಲ್ಲಿರುವ ಬಂಗಾರವನ್ನು ತೆಗೆಯಬೇಕು. ಬಂಗಾರವನ್ನು ತೆಗೆಯಬೇಕಾದರೆ ಯಾವುದೇ ಕಾರಣಕ್ಕೂ ಹಾಸಿಗೆಯ ಮೇಲೆ ಇಡಬೇಡಿ, ಅದರ ಬದಲು ಬೆಳ್ಳಿತಟ್ಟೆ ಮೇಲೆ ಅಥವಾ ಬಾಳೆ ಎಲೆಯ ಮೇಲೆ ಎಲ್ಲಾ ಬಂಗಾರವನ್ನು ತೆಗೆದು ಮೇಲೆ ನಂತರ ಸುರಕ್ಷಿತವಾದ ಜಾಗದಲ್ಲಿ ಇಡಬೇಕು.

  • ಆರ್ಥಿಕ ಸಂಕಷ್ಟ, ಗಂಡ-ಹೆಂಡತಿಯ ನಡುವೆ ಹೊಂದಾಣಿಕೆ ಇಲ್ಲವೆಂದರೆ ಈ ಚಿಕ್ಕ ಕೆಲಸವನ್ನು ಮಾಡಿ.

    ಒಂದು ವೇಳೆ ಯಾರಿಗಾದರೂ ಆಕಸ್ಮಿಕವಾಗಿ ತೊಂದರೆ ಬಂದು ಆ ತೊಂದರೆಯಿಂದ 24 ಗಂಟೆಯೊಳಗೆ ಹೊರಬರಬೇಕಾಗುವಂತಹ ಪರಿಸ್ಥಿತಿಯಲ್ಲಿ ಇದ್ದರೆ ಉಪ್ಪಿನಿಂದ ಮಾಡುವ ಈ ಚಿಕ್ಕ ಕೆಲಸದಿಂದ ನಿಮ್ಮ ಸಮಸ್ಯೆಯು 24 ಗಂಟೆಯೊಳಗೆ ನಿವಾರಣೆಯಾಗುತ್ತದೆ.

    ಮೊದಲಿಗೆ ತೊಟ್ಟು ಇರುವಂತಹ 7 ಕೆಂಪು ಹಸಿಮೆಣಸಿನಕಾಯಿಯನ್ನು ತೆಗೆದುಕೊಳ್ಳಬೇಕು,ಸ್ವಲ್ಪ ಪ್ರಮಾಣದಲ್ಲಿ ಸಿಪ್ಪೆಯನ್ನು ತೆಗೆದ ಸಾಸಿವೆಯನ್ನು ತೆಗೆದುಕೊಳ್ಳಬೇಕು ಹಾಗೂ ಇದರ ಜೊತೆಗೆ ಕಲ್ಲು ಉಪ್ಪನ್ನು ತೆಗೆದುಕೊಳ್ಳಬೇಕು. ಈ ಮೂರು ವಸ್ತುಗಳನ್ನು ಮಿಶ್ರಣ ಮಾಡಿಕೊಂಡು ಬಲಕೈಯಲ್ಲಿ ಇಟ್ಟುಕೊಂಡು ಏಳು ಬಾರಿ ಕ್ಲಾಕ್ ವೈಸ್ ಹಾಗೂ ಆಂಟಿ ಕ್ಲಾಕ್ ವೈಸ್ ತಿರುಗಿಸಿ ನಿವಾಳಿಸಿ ದೃಷ್ಟಿಯನ್ನು ತೆಗೆದು ನೆಲದ ಮೇಲೆ ಹಾಕಿ ನಂತರ ಬೆಂಕಿಯನ್ನು ಹಚ್ಚಿ ಸುಡಬೇಕು. ಸುಟ್ಟ ನಂತರ ಅದರಿಂದ ಬಂದ ಬೂದಿಯನ್ನು ನಿರ್ಜನ ಪ್ರದೇಶದಲ್ಲಿ ಒಂದು ಗುಂಡಿಯನ್ನು ತೆಗೆದು ಗುಂಡಿಯೊಳಗೆ ಬೂದಿಯನ್ನು ಹಾಕಿ ಮುಚ್ಚಬೇಕು. ಮಣ್ಣಿನಿಂದ ಗುಂಡಿಯನ್ನು ಮುಚ್ಚಿದ ನಂತರ ಹಿಂತಿರುಗಿ ನೋಡಿದೆ ಮನೆಗೆ ಬರಬೇಕು. ಇದರಿಂದ ನಿಮಗಿರುವ ಸಮಸ್ಯೆಗಳು ಯಾವುದೇ ಇರಲಿ ಎಲ್ಲಾ ಸಮಸ್ಯೆಯು ಕೇವಲ 24 ಗಂಟೆಯ ಒಳಗೆ ನಿವಾರಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.ಒಂದು ವೇಳೆ ಆರ್ಥಿಕ ಸಮಸ್ಯೆಯಿಂದ ಹೊರ ಬರಬೇಕೆಂದರೆ ಪ್ರತಿನಿತ್ಯ ಸ್ನಾನ ಮಾಡುವಾಗ ನೀರಿಗೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಕಲ್ಲುಪ್ಪನ್ನು ಕರಗಿಸಿ ನಂತರ ಸ್ನಾನವನ್ನು ಮಾಡುವುದರಿಂದ ನಿಮಗೆ ಒದಗಿ ಬರುವ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ. ಯಾರು ಹಸುವಿಗೆ ಕಲ್ಲುಪ್ಪನ್ನು ನೆಕ್ಕಿಸುತ್ತಾರೋ ಅಂತವರಿಗೆ ಆರ್ಥಿಕ ಸಂಕಷ್ಟವು ಅತೀ ಶೀಘ್ರದಲ್ಲಿ ನಿವಾರಣೆಯಾಗುತ್ತದೆ.

    ಒಂದು ವೇಳೆ ಯಾವುದಾದರೂ ಒಂದು ಸಮಸ್ಯೆಯು ಅಥವಾ ದೋಷವು ಬೆನ್ನು ಬಿಡದೆ ಕಾಡುತ್ತಿದ್ದರೆ ಸೋಮವಾರ ದಿನದಂದು 6 ಘಂಟೆಯಿಂದ ಇಂದ 7 ಘಂಟೆಯ ಒಳಗೆ ಒಂದು ಹಿಡಿ ಉಪ್ಪನ್ನು ತೆಗೆದುಕೊಂಡು ನಲ್ಲಿಯ ಕೆಳಗೆ ಕೈಯನ್ನು ಇಟ್ಟುಕೊಂಡು ನೀರಿನ ಸಹಾಯದಿಂದ ಸ್ವಲ್ಪ ಸ್ವಲ್ಪ ಉಪ್ಪನ್ನು ಕೆಳಗೆ ಹಾಕುತ್ತ ಹೋಗಬೇಕು, ಹೀಗೆ ಮಾಡುವುದರಿಂದ ಆರ್ಥಿಕ ಸಂಕಷ್ಟ ಅಥವಾ ಸಮಸ್ಯೆ ಯಾವುದೇ ಇದ್ದರೂ ಕ್ರಮೇಣವಾಗಿ ಕಡಿಮೆಯಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸದೃಢರಾಗಬಹುದು.ಒಂದು ವೇಳೆ ಗಂಡ-ಹೆಂಡತಿಯ ನಡುವೆ ಸಂಬಂಧ ಸರಿಗಿಲ್ಲ ಎಂದರೆ 4 ಕಪ್ಪು ಮೆಣಸಿನಕಾಳು, 4 ಲವಂಗ ಹಾಗೂ ಸ್ವಲ್ಪ ಉಪ್ಪು, ಈ ಮೂರು ಪದಾರ್ಥಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಗಾಜಿನ ಬಟ್ಟಲಿಗೆ ಹಾಕಿ ಗಂಡ ಹೆಂಡತಿ ಮಲಗುವ ಕೋಣೆಯ ಯಾವುದಾದರೂ ಒಂದು ಮೂಲೆಯಲ್ಲಿ ಇಡುವುದರಿಂದ ಅವರಿಬ್ಬರ ನಡುವೆ ಇರುವ ಅಡಚಣೆ ದೂರವಾಗಿ ನೆಮ್ಮದಿಯಿಂದ ಹೊಂದಿಕೊಂಡು ಜೀವನವನ್ನು ನಡೆಸುತ್ತಾರೆ.