Kannada Astrology

Category: ಜ್ಯೋತಿಷ್ಯ

  • ಆರ್ಥಿಕ ಸಮಸ್ಯೆಗೆ, ಹಣದ ಸಮಸ್ಯೆಗೆ ಸೂಕ್ತ ಪರಿಹಾರ ಕರಿಮೆಣಸಿನ ಕಾಳು.

    ಸಾಲಬಾಧೆ, ಹಣದ ಸಮಸ್ಯೆ,ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿ ಅದರಿಂದ ಹೊರಬರಬೇಕೆಂದರೆ ಕರಿಮೆಣಸಿನ ಕಾಳಿನಿಂದ ಈ ಉಪಾಯವನ್ನು ಮಾಡುವುದರಿಂದ ಆದಷ್ಟು ಬೇಗ ನಿಮ್ಮ ಆರ್ಥಿಕ ಸಂಕಷ್ಟದಿಂದ ಹಾಗೂ ಇನ್ನಿತರ ಕಷ್ಟಗಳಿಂದ ಹೊರಬರಬಹುದು. ಹಾಗಾದರೆ ಈ ಕರಿಮೆಣಸಿನ ಕಾಳಿನಿಂದ ಯಾವ ರೀತಿ ಉಪಾಯವನ್ನು ಮಾಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.ಈ ಉಪಾಯವನ್ನು 5 ಭಾನುವಾರಗಳ ಕಾಲ ಮಾಡುವುದರಿಂದ ಸಾಲಬಾಧೆ,ಆರ್ಥಿಕ ಸಂಕಷ್ಟ, ಹಣದ ಸಮಸ್ಯೆಯಿಂದ ಮುಕ್ತರಾಗಿ ಲಕ್ಷ್ಮೀದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು. ಒಂದು ವೇಳೆ 5 ಭಾನುವಾರಗಳ ಕಾಲ ಮಾಡಲು ಸಾಧ್ಯವಾಗದಿದ್ದರೆ ಒಂದು ಅಮಾವಾಸ್ಯೆ ದಿನ ಮಾಡುವುದರಿಂದ ಐದು ಭಾನುವಾರಗಳ ಕಾಲ ಮಾಡಿದ ಫಲವು ಲಭಿಸುತ್ತದೆ ಎಂದು ತಾಂತ್ರಿಕ ಭಾಗದಲ್ಲಿ ಹೇಳಲಾಗಿದೆ.ಕರಿಮೆಣಸಿನ ಕಾಳು ಪ್ರಕೃತಿಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಸಹಾಯ ಮಾಡುವ ಶಕ್ತಿಯನ್ನು ಹೊಂದಿದೆ.

    ಮೊದಲಿಗೆ 9 ಕರಿ ಮೆಣಸಿನ ಕಾಳನ್ನು ತೆಗೆದುಕೊಂಡು ಮನೆಯಿಂದ ಹೊರಭಾಗಕ್ಕೆ ಬರಬೇಕು. ಬಲ ಕೈಯಲ್ಲಿ ಇರುವ ಕರಿ ಮೆಣಸಿನ ಕಾಳನ್ನು ಎಡ ಕೈಯಿಗೆ ಹಾಕಿಕೊಳ್ಳಬೇಕು, ನಂತರ ಒಂದೊಂದು ಕರಿ ಮೆಣಸಿನ ಕಾಳನ್ನು ತೆಗೆದುಕೊಂಡು ಓಂ ಎಂದು ಹೇಳಿ ಪೂರ್ವ ದಿಕ್ಕಿನ ಕಡೆಗೆ ಎಸೆಯಬೇಕು ನಂತರ ಮತ್ತೊಂದು ಕರಿ ಮೆಣಸಿನ ಕಾಳನ್ನು ತೆಗೆದುಕೊಂಡು ಪಕ್ಷಿಮ ದಿಕ್ಕಿನ ಕಡೆಗೆ ಎಸೆಯಬೇಕು. ಹಾಗೆಯೇ ಮತ್ತೊಂದು ಕರಿ ಮೆಣಸಿನ ಕಾಳನ್ನು ಉತ್ತರದಿಕ್ಕಿಗೆ ಹಾಗೂ ಇನ್ನೊಂದು ಕರಿಮೆಣಸಿನ ಕಾಳನ್ನು ದಕ್ಷಿಣ ದಿಕ್ಕಿಗೆ ಎಸೆಯಬೇಕು. ಅದೇ ರೀತಿ ಈಶಾನ್ಯ, ವಾಯುವ್ಯ, ಆಗ್ನೇಯ ಹಾಗೂ ನೈಋತ್ಯ ದಿಕ್ಕಿಗೆ ಓಂ ಎಂದು ಹೇಳಿ ಒಂದೊಂದು ಕರಿ ಮೆಣಸಿನ ಕಾಳನ್ನು ಎಸೆಯಬೇಕು. ಎಲ್ಲಾ ದಿಕ್ಕಿಗೂ ಹಾಕಿದ ನಂತರ ಉಳಿದ ಒಂದು ಕರಿ ಮೆಣಸಿನ ಕಾಳನ್ನು ಆಕಾಶವನ್ನು ನೋಡುತ್ತಾ ಓಂ ಎಂದು ಹೇಳಿ ಆಕಾಶದ ಕಡೆ ಎಸೆಯಬೇಕು.ಈ ಪರಿಹಾರವನ್ನು ಸಾಯಂಕಾಲ 6 ಘಂಟೆಯ ನಂತರ ಹಾಗೂ 9 ಘಂಟೆಯೊಲಗೆ ಮಾಡಬೇಕು. ಈ ರೀತಿಯಾಗಿ ಮಾಡಿದ ನಂತರ ಕೈಕಾಲುಗಳನ್ನು ತೊಳೆದುಕೊಂಡು ನಂತರ ಮನೆಗೆ ಪ್ರವೇಶವನ್ನು ಪಡೆಯಬೇಕು. ಇದರಿಂದ ಸಾಲಬಾಧೆ, ಹಣದ ಸಮಸ್ಯೆ, ಆರ್ಥಿಕ ಸಂಕಷ್ಟವು ನಿವಾರಣೆಯಾಗಿ ಸುಖಕರವಾಗಿ ಜೀವನವನ್ನು ನಡೆಸಬಹುದು.

    ಒಂದು ವೇಳೆ ಕೆಲಸ ಮಾಡುವ ಜಾಗದಲ್ಲಿ ಯಾರೂ ಕೂಡ ನಿಮ್ಮ ಮಾತನ್ನು ಕೇಳುತ್ತಿಲ್ಲ ಎಂದರೆ ಮನೆಯಿಂದ ಹೊರಗೆ ಹೋಗುವಾಗ 9 ಕರಿ ಮೆಣಸಿನ ಕಾಳನ್ನು ಬಾಯಲ್ಲಿ ಹಾಕಿಕೊಂಡು ಅಗಿಯುತ್ತಾ ಹೋಗುವುದರಿಂದ ನಿಮ್ಮ ಸುತ್ತಮುತ್ತಲಿನಲ್ಲಿರುವವರು ಬದಲಾವಣೆಯಾಗಿ ನಿಮ್ಮ ಮಾತನ್ನು ಕೇಳುವ ಹಾಗೆ ಆಗುತ್ತಾರೆ.

    ಒಂದು ವೇಳೆ ವಿಪರೀತವಾಗಿ ಶತ್ರುಗಳ ಕಾಟ ಜಾಸ್ತಿಯಿದ್ದರೆ ಮನೆಯಿಂದ ಹೊರಹೋಗುವಾಗ ಅವರ ಹೆಸರನ್ನು ಹೇಳಿ 9 ಕರಿ ಮೆಣಸಿನ ಕಾಳನ್ನು ಅಗ್ನಿಯಲ್ಲಿ ದಹಿಸಿ ಅದರಿಂದ ಬಂದ ಬೂದಿಯನ್ನು ಕಸದ ಬುಟ್ಟಿಗೆ ಹಾಕಿ ಹೋಗುವುದರಿಂದ ಶತ್ರು ಕಾಟ ನಿವಾರಣೆಯಾಗುತ್ತದೆ.

  • ತುಪ್ಪದಿಂದ ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಹೇಗೆ ಪಡೆದುಕೊಳ್ಳಬಹುದು ತಿಳಿದಿದೆಯೇ ನಿಮಗೆ ?

    ಸಾಮಾನ್ಯವಾಗಿ ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸಬೇಕೆಂದರೆ ಅಥವಾ ಆರ್ಥಿಕ ಪರಿಸ್ಥಿತಿ ಸದೃಢವಾಗಬೇಕು ಎಂದರೆ ಅಥವಾ ಧನ ಸಂಪತ್ತನ್ನು ಗಳಿಸಬೇಕೆಂದರೆ ಲಕ್ಷ್ಮಿ ಅನುಗ್ರಹವು ಬೇಕೇ ಬೇಕು. ಆದ್ದರಿಂದ ಲಕ್ಷ್ಮೀದೇವಿಗೆ ತುಂಬ ಪ್ರಿಯವಾದದ್ದು ತುಪ್ಪದ ದೀಪ. ಆದ್ದರಿಂದ ಮಂಗಳವಾರ, ಶುಕ್ರವಾರ ಹಾಗೂ ವಿಶೇಷವಾದ ದಿನದಂದು ತುಪ್ಪದ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು.ಸಾಮಾನ್ಯವಾಗಿ ತುಪ್ಪವನ್ನು ಅಂಗಡಿಯಿಂದ ಖರೀದಿ ಮಾಡಿಕೊಂಡು ತಂದ ನಂತರ ಪ್ರತಿನಿತ್ಯ ದೇವರಿಗೆ ತುಪ್ಪದ ದೀಪವನ್ನು ಹಚ್ಚಲಾಗುತ್ತದೆ. ತುಪ್ಪದ ಡಬ್ಬ ಖಾಲಿಯಾದ ನಂತರ ಅದನ್ನು ಶುದ್ಧವಾಗಿ ತೊಳೆದು ನಂತರ ಅದನ್ನು ಒರೆಸಿ ಅದರ ಒಳಗೆ ದೊಡ್ಡದಾದ ಒಂದು ಏಲಕ್ಕಿಯನ್ನು ಹಾಗೂ ಸ್ವಲ್ಪ ಅರಿಶಿನವನ್ನು ಹಾಕಿ ದೇವರ ಕೋಣೆಯಲ್ಲಿ ಲಕ್ಷ್ಮೀದೇವಿಯ ಚಿತ್ರಪಟದ ಮುಂದೆ ಇಡಬೇಕು. ಪ್ರತಿನಿತ್ಯ ಪೂಜೆ ಮಾಡುವಾಗ ಒಂದೊಂದು ನಾಣ್ಯವನ್ನು ಡಬ್ಬಿಯ ಒಳಗೆ ಹಾಕುತ್ತಾ ಬರಬೇಕು. ಒಂದು ಬಾರಿ ಆ ಡಬ್ಬವು ತುಂಬಿದ ನಂತರ ಪೂಜೆಯನ್ನು ಮಾಡಿ ಬೀರುವಿನ ಒಳಗೆ ಚಿನ್ನದ ನಾಣ್ಯಗಳು ಅಥವಾ ಆಭರಣಗಳನ್ನು ಇಡುವ ಜಾಗದಲ್ಲಿ ಇಡಬೇಕು. ಇದರಿಂದ ಧನ ಸಂಪತ್ತು ವೃದ್ದಿಯಾಗುತ್ತದೆ,ಆರ್ಥಿಕ ಸಂಕಷ್ಟ ನಿವಾರಣೆಯಾಗುತ್ತದೆ ಹಾಗೂ ಲಕ್ಷ್ಮಿದೇವಿಯ ಅನುಗ್ರಹವು ಪ್ರಾಪ್ತಿಯಾಗುತ್ತದೆ.ಹಾಗೆಯೇ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಹೆಚ್ಚು ಹಣವನ್ನು ಸಂಪಾದನೆ ಮಾಡಬೇಕು ಹಾಗೂ ಯಾವಾಗಲೂ ಕೈಯಲ್ಲಿ ದುಡ್ಡು ಇರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಈ ರೀತಿ ಆಸೆ ಇದ್ದವರು ಎರಡು 20 ರೂಪಾಯಿ ನೋಟನ್ನು ತೆಗೆದುಕೊಂಡು ದೇವರಕೋಣೆಯಲ್ಲಿ ಲಕ್ಷ್ಮಿ ದೇವಿಯ ಚಿತ್ರಪಟದ ಮುಂದೆ ಇಟ್ಟು ತುಪ್ಪದಿಂದ ದೀಪವನ್ನು ಹಚ್ಚಬೇಕು. ದೀಪವನ್ನು ಹಚ್ಚಿದ ನಂತರ 20 ರೂಪಾಯಿಯ ಎರಡು ನೋಟಿಗೆ ಗಂಧ,ಕುಂಕುಮ ಹಾಗೂ ಅರಿಶಿನವನ್ನು ಹಚ್ಚಬೇಕು. ಈ ರೀತಿಯಾಗಿ ಲೇಪನ ಮಾಡಿದ ನಂತರ ಲಕ್ಷ್ಮೀದೇವಿಗೆ ಹಾಗೂ ನೀವು ಇಟ್ಟಿರುವಂತಹ ನೋಟಿಗೂ ಪೂಜೆಯನ್ನು ಮಾಡಬೇಕು. ಪೂಜೆಯನ್ನು ಮಾಡಿದ ನಂತರ ಆ ನೋಟನ್ನು ಹುಡುಗರಾದರೆ ತಮ್ಮ ಪರ್ಸ್ ಒಳಗೆ ಒಂದು ವೇಳೆ ಹುಡುಗಿಯರಾದರೆ ವ್ಯಾನಿಟಿ ಬ್ಯಾಗ ಅಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಲಕ್ಷ್ಮೀದೇವಿಯ ಅನುಗ್ರಹ ಪ್ರಾಪ್ತಿಯಾಗಿ ಧನಸಂಪತ್ತು ವೃದ್ಧಿಯಾಗುತ್ತದೆ. ಈ ರೀತಿಯಾಗಿ ಪೂಜೆ ಮಾಡಿದ ನೋಟನ್ನು ಯಾವುದೇ ಕಾರಣಕ್ಕೂ ಯಾರಿಗೂ ಕೊಡಬಾರದು ಹಾಗೂ ಉಪಯೋಗಿಸಬಾರದು.

  • ಈ ಒಂದು ವಸ್ತುವನ್ನು ಲಕ್ಷ್ಮಿ ದೇವಿಯ ಮುಂದೆ ಇಟ್ಟು ಪೂಜೆ ಮಾಡಿದರೆ ಹಣದ ಸಮಸ್ಯೆಗಳೆಲ್ಲ ದೂರವಾಗುತ್ತದೆ.

    ನಮಗೆ ಬರಬೇಕಾಗಿರುವ ಬಾಕಿ ಹಣವು ಬರಬೇಕಾದರೆ ಹಾಗೂ ಆರ್ಥಿಕ ಸಂಕಷ್ಟವು ದೂರವಾಗಿ ಸದೃಢರಾಗಬೇಕು ಮತ್ತು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದರೆ ಯಾವ ರೀತಿ ಏಲಕ್ಕಿಯ ಕಾಯಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

    ಏಲಕ್ಕಿ ಕಾಯಿ ನವಗ್ರಹದಲ್ಲಿ ಶುಕ್ರಗ್ರಹಕ್ಕೆ ತುಂಬ ಪ್ರಿಯವಾದದ್ದು. ಶುಕ್ರನಿಗೆ ಅಧಿಪತ್ಯ ದೇವತೆ ಯಾರೆಂದರೆ ಲಕ್ಷ್ಮಿ. ಆದ್ದರಿಂದ ದೊಡ್ಡದಾದ ಏಲಕ್ಕಿ ಕಾಯನ್ನು, ಕೆಂಪು ದಾರವನ್ನು ಹಾಗೂ ಕೆಂಪು ವಸ್ತ್ರವನ್ನು ತೆಗೆದುಕೊಂಡು ಈ ಪರಿಹಾರವನ್ನು ಶುಕ್ರವಾರದ ದಿನದಂದು ಮಾಡಬೇಕು.ಮೊದಲಿಗೆ ಶುಕ್ರವಾರ ದಿನ ಏಲಕ್ಕಿ ಕಾಯಿ ಪೌಡರ್ ಅನ್ನು ಸ್ನಾನ ಮಾಡುವ ನೀರಿಗೆ ಹಾಕಿ ಐದು ನಿಮಿಷಗಳ ಕಾಲ ಬಿಟ್ಟು ನಂತರ ಸ್ನಾನ ಮಾಡಬೇಕು. ನಂತರ ಒಂದು ಏಲಕ್ಕಿ ಕಾಯನ್ನು ತೆಗೆದುಕೊಂಡು ಕೆಂಪು ದಾರದಲ್ಲಿ ಗಂಟನ್ನು ಹಾಕಿಕೊಳ್ಳಬೇಕು. ಒಂದು ಏಳಕ್ಕಿಯ ಕಾಯಿಯನ್ನು ಕಟ್ಟಿದ ನಂತರ ಮೂರು ಗಂಟನ್ನು ಹಾಕಿ ನಂತರ ಇದೇ ರೀತಿ ಉಳಿದ 4 ಏಲಕ್ಕಿಯ ಕಾಯಿಯನ್ನು ಕಟ್ಟಬೇಕು. ಈ ರೀತಿಯಾಗಿ ಏಲಕ್ಕಿಯ ಕಾಯನ್ನು ಕಟ್ಟಿದ ನಂತರ ಲಕ್ಷ್ಮೀದೇವಿ ಚಿತ್ರಪಟದ ಮುಂದೆ ಇರುವ ಕೆಂಪು ವಸ್ತ್ರದ ಮೇಲೆ ಇಟ್ಟು ತುಪ್ಪದಿಂದ ಅಥವಾ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಬೇಕು.

    ಪೂಜೆಯನ್ನು ಮಾಡಿದ ನಂತರ ಕೆಂಪು ವಸ್ತ್ರವನ್ನು ಗಂಟುಕಟ್ಟಿ ಮನೆಯ ಬೀರುವಿನ ಒಳಗೆ ಇಟ್ಟುಕೊಳ್ಳಬೇಕು. ಇದರಿಂದ ಲಕ್ಷ್ಮೀದೇವಿ ಅನುಗ್ರಹವು ಪ್ರಾಪ್ತಿಯಾಗಿ ನಿಮಗಿರುವ ಸಾಲಬಾಧೆ, ಹಣದ ಸಮಸ್ಯೆ ಹಾಗೂ ಬೇರೆಯವರಿಗೆ ಕೊಟ್ಟಿರುವ ದುಡ್ಡು ಹಿಂತಿರುಗಿ ಬರುತ್ತದೆ. ಪ್ರತಿ ಶುಕ್ರವಾರ ಬೀರುವಿನಲ್ಲಿ ಇಟ್ಟಿರುವ ಕೆಂಪು ವಸ್ತ್ರದ ಗಂಟನ್ನು ತೆಗೆದು ದೇವರ ಕೋಣೆಯಲ್ಲಿ ಲಕ್ಷ್ಮೀದೇವಿ ಚಿತ್ರಪಟದ ಮುಂದೆ ಇಟ್ಟು ಧೂಪದಿಂದ ಪೂಜೆಯನ್ನು ಮಾಡಿ ನಂತರ ಮತ್ತೆ ಬೀರುವಿನ ಒಳಗೆ ಇಡಬೇಕು. ಈ ರೀತಿ ಮಾಡುವುದರಿಂದ ಆರ್ಥಿಕ ಸಂಕಷ್ಟವು ದೂರವಾಗಿ ಜೀವನದಲ್ಲಿ ಸದೃಢರಾಗಬಹುದು.

  • ಜಾತಕದಲ್ಲಿ ಗಜಕೇಸರಿ ಯೋಗ ಏನನ್ನು ಸೂಚಿಸುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?

    ಗಜಕೇಸರಿಯಲ್ಲಿ ಗಜ ಎಂದರೆ ಆನೆ, ಕೇಸರಿ ಎಂದರೆ ಸಿಂಹ. ಒಂದು ವೇಳೆ ಜಾತಕದಲ್ಲಿ ಗಜಕೇಸರಿ ಯೋಗವಿದ್ದರೆ ಆ ವ್ಯಕ್ತಿಯು ಯಾವ ರೀತಿ ಫಲವನ್ನು ಅನುಭವಿಸುತ್ತಾನೆ, ಜಾತಕದಲ್ಲಿ ಯಾವ ಮನೆಯಲ್ಲಿ ಇದ್ದಾಗ ಉನ್ನತಿಯನ್ನು ಪಡೆದುಕೊಳ್ಳುತ್ತಾನೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಮುಖ್ಯವಾಗಿ ಗಜಕೇಸರಿಯೋಗ ಜಾತಕದಲ್ಲಿ ಬರುವಂತದ್ದು ಗುರು ಹಾಗೂ ಚಂದ್ರನ ಸಂಯೋಗದಿಂದ. ಆದ್ದರಿಂದ ಗುರು ಹಾಗೂ ಚಂದ್ರನ ಸಂಯೋಗದಿಂದ ಜಾತಕದಲ್ಲಿ ಗಜಕೇಸರಿಯೋಗ ಉದ್ಭವವಾಗುತ್ತದೆ. ಜಾತಕದಲ್ಲಿ ಗಜಕೇಸರಿ ಯೋಗ ಇದ್ದರೆ ಅಂತವರು ಬಹಳ ಬಲಿಷ್ಠರಾಗಿರುತ್ತಾರೆ ಹಾಗೂ ಮಾಡುವಂತಹ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಇಂತಹ ವ್ಯಕ್ತಿಗಳು ಸ್ವತಂತ್ರವಾಗಿ ಕೆಲಸವನ್ನು ಮಾಡುತ್ತಾರೆ ಹಾಗೂ ಯಾರ ಮೇಲೂ ಅವಲಂಬಿತರಾಗಿ ಇರುವುದಿಲ್ಲ. ಇಂತಹ ವ್ಯಕ್ತಿಗಳು ಕೆಲಸ ಮಾಡುವ ಕ್ಷೇತ್ರದಲ್ಲಿ ತಮ್ಮ ಎದುರಿಗೆ ಇರುವ ವ್ಯಕ್ತಿಗಳನ್ನು ಕಾಲಡಿಯಲ್ಲಿ ಇಟ್ಟು ಕೆಲಸವನ್ನು ಮಾಡಿಸುತ್ತಿರುತ್ತಾರೆ ಮತ್ತು ಇವರಿಗೆ ಯಾರು ಕೂಡ ವೈರಿಗಳು ಇರುವುದಿಲ್ಲ.

    ಮುಖ್ಯವಾಗಿ ಜಾತಕದಲ್ಲಿ ಗುರು ಮತ್ತು ಚಂದ್ರ ಲಗ್ನದಲ್ಲಿ ಇದ್ದಾಗ ವ್ಯಕ್ತಿಯು ತುಂಬಾ ಪ್ರಭಾವಶಾಲಿಯಾಗಿರುತ್ತಾನೆ. ಯಾವುದೇ ಕೆಲಸವನ್ನು ವಹಿಸಿದರು ಬಹಳ ಬೇಗ ಯಶಸ್ವಿಯಾಗಿ ಮುಗಿಸುತ್ತಾನೆ. ಒಂದು ವೇಳೆ ಗಜಕೇಸರಿಯೋಗ ಪಂಚಮ ಸ್ಥಾನದಲ್ಲಿ ಬಂದಾಗ ಆ ಮಗುವಿನ ಜನನದಿಂದಾಗಿ ಆ ಮನೆಯು ಏಳಿಗೆಯನ್ನು ಕಾಣುತ್ತದೆ. ಒಂದು ವೇಳೆ ಸಪ್ತಮ ಸ್ಥಾನದಲ್ಲಿ ಗಜಕೇಸರಿ ಯೋಗ ಬಂದರೆ ಉತ್ತಮವಾದ ಸ್ತ್ರೀಯೊಂದಿಗೆ ಈತನ ವಿವಾಹವಾಗುತ್ತದೆ ಹಾಗೂ ಆ ಸ್ತ್ರೀ ಇಂದ ಉನ್ನತಮಟ್ಟಕ್ಕೆ ಹೋಗುತ್ತಾನೆ. ಒಂದು ವೇಳೆ ಲಗ್ನದಿಂದ ಹತ್ತನೇ ಸ್ಥಾನದಲ್ಲಿ ಗಜಕೇಸರಿ ಯೋಗ ಬಂದಾಗ ಶಿಕ್ಷಣದ ಕ್ಷೇತ್ರದಲ್ಲಿ ಉನ್ನತವಾದ ಸ್ಥಾನವನ್ನು ಏರುತ್ತಾನೆ ಹಾಗೇ ಸಣ್ಣ ಕೈಗಾರಿಕೆಗಳಲ್ಲಿ ಉನ್ನತ ಅಭಿವೃದ್ಧಿಯನ್ನು ಕಾಣುತ್ತಾನೆ.ಗಜಕೇಸರಿ ಯೋಗ 9 ನೇ ಸ್ಥಾನದಲ್ಲಿ ಅಂದರೆ ಭಾಗ್ಯ ಸ್ಥಾನದಲ್ಲಿ ಇದ್ದರೆ ಹೊರದೇಶಕ್ಕೆ ಹೋಗಿ ಹೆಸರು ಮಾಡುತ್ತಾರೆ. ಒಂದು ವೇಳೆ 11 ನೇ ಸ್ಥಾನದಲ್ಲಿ ಗಜಕೇಸರಿ ಯೋಗವು ಬಂದರೆ ಆ ವ್ಯಕ್ತಿಯು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ, ಅಂದರೆ ಮಾಡಿದ ಕೆಲಸಗಳೆಲ್ಲ ಅಡೆತಡೆ ಇಲ್ಲದೆ ಯಶಸ್ವಿಯಾಗಿ ಪೂರ್ಣವಾಗುತ್ತದೆ.

    ಒಂದು ವೇಳೆ ಗಜಕೇಸರಿಯೋಗ ಇದ್ದು ಯಾವುದೇ ಫಲವು ಸಿಗುತ್ತಿಲ್ಲವೆಂದರೆ ಹಾಗೂ ಗಜಕೇಸರಿ ಯೋಗವು 6,8 ಮತ್ತು 12ನೇ ಸ್ಥಾನದಲ್ಲಿ ಬಂದಾಗ ನೀಚಭಂಗವಾಗುತ್ತದೆ. ಅಂದರೆ ಗಜಕೇಸರಿಯೋಗ ಇದ್ದರು ಪ್ರಯೋಜನಕ್ಕೆ ಬರುವುದಿಲ್ಲ. 6,8 ಹಾಗೂ 12 ನೇ ಸ್ಥಾನವನ್ನು ರೋಗ, ಋಣ, ಭಯ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಸ್ಥಾನದಲ್ಲಿ ಗಜಕೇಸರಿ ಯೋಗ ಇದ್ದರೆ ಯಾವುದೇ ಪ್ರಯೋಜನ ಆಗುವುದಿಲ್ಲ.

  • ಚಿಂತೆ ಬಿಡಿ ಕಾಮಾಕ್ಷಿ ದೀಪದ ಮಹತ್ವ ತಿಳಿದಿದೆಯೇ ನಿಮಗೆ ?

    ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕಾಮಾಕ್ಷಿ ದೀಪವನ್ನು ಬೆಳಗಿಸಲಾಗುತ್ತದೆ. ಶುಕ್ರವಾರ, ಅಮಾವಾಸ್ಯೆಯ ದಿನ, ಪೂರ್ಣಿಮೆಯ ದಿನ ಹಾಗೂ ವಿಶೇಷವಾದ ದಿನಗಳಲ್ಲಿ ಕಾಮಾಕ್ಷಿ ದೀಪವನ್ನು ಹಚ್ಚುವುದು ಸರ್ವೇಸಾಮಾನ್ಯವಾಗಿದೆ. ಕಾಮಾಕ್ಷಿ ದೀಪವನ್ನು ಪ್ರತಿನಿತ್ಯ ಯಾವ ಸಮಯದಲ್ಲಿ ಹಚ್ಚಿದರೆ ಲಾಭದಾಯಕ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ದೀಪದ ಮೇಲ್ಬಾಗದಲ್ಲಿ ಕಾಮಾಕ್ಷಿ ದೇವರ ಪ್ರತಿಮೆ ಇರುವ ಚಿತ್ರವೇ ಕಾಮಾಕ್ಷಿ ದೀಪ. ಸಾಮಾನ್ಯವಾಗಿ ಕಾಮಾಕ್ಷಿ ದೀಪ ಕಂಚಿಯಲ್ಲಿ ಸಿಗುತ್ತದೆ. ಈಗ ಎಲ್ಲಾ ಕಡೆ ದೀಪದ ಮೇಲ್ಭಾಗದಲ್ಲಿ ಲಕ್ಷ್ಮೀದೇವಿಯು ಕಮಲದ ಹೂವಿನ ಮೇಲೆ ಕುಳಿತುಕೊಂಡು ಎರಡು ಕಡೆ ಆನೆಯು ಕ್ಷೀರಾಭಿಷೇಕ ಮಾಡುತ್ತಿರುವ ಹಾಗೆ ದೀಪವು ಸಿಗುತ್ತದೆ. ಈ ದೀಪವನ್ನು ಗಜ ಲಕ್ಷ್ಮಿ ಕಾಮಾಕ್ಷಿ ದೀಪ ಎಂದು ಕರೆಯಲಾಗುತ್ತದೆ.

    ಕಾಮಾಕ್ಷಿ ದೀಪವನ್ನು ಮುಂಜಾನೆ 5 ಗಂಟೆಯಿಂದ 6 ಗಂಟೆ ಒಳಗೆ ಹಚ್ಚಬೇಕು. ಈ ರೀತಿಯಾಗಿ ಹಚ್ಚುವುದರಿಂದ ಮನೆಯಲ್ಲಿ ಶಾಂತಿ ದೊರೆಯುತ್ತದೆ ಹಾಗೂ ಲಕ್ಷ್ಮಿದೇವಿಯ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಕಾಮಾಕ್ಷಿ ದೀಪವನ್ನು ಸಾಯಂಕಾಲ 6 ಗಂಟೆಯಿಂದ ಇಂದ 7 ಗಂಟೆ ಒಳಗೆ ಹಚ್ಚಬೇಕು. ಈ ಸಮಯದಲ್ಲಿ ಹಚ್ಚುವುದರಿಂದ ಲಕ್ಷ್ಮೀದೇವಿಯ ಸಂಪೂರ್ಣ ಕೃಪೆಯು ಲಭಿಸುತ್ತದೆ.

    ಮೊದಲಿಗೆ ಕಾಮಾಕ್ಷಿ ದೀಪವನ್ನು ಶುದ್ಧ ನೀರಿನಿಂದ ತೊಳೆದು ನಂತರ ಒರೆಸಿ ಇಡಬೇಕು. ಕಾಮಾಕ್ಷಿ ದೀಪವನ್ನು ತಾಮ್ರದ ಅಥವಾ ಹಿತ್ತಾಳೆಯ ತಟ್ಟೆಯ ಒಳಗಡೆ ಇಡಬೇಕು. ತಟ್ಟೆಯ ಒಳಗೆ ಷಟ್ಕೋನದ ರಂಗೋಲಿಯನ್ನು ಬಿಡಿಸಿ ಅಥವಾ ಸ್ವಸ್ತಿಕ್ ಗುರುತನ್ನು ಬಿಡಿಸಬೇಕು. ತದನಂತರ ಎಂಟು ವಿಲ್ಯೆದಳೆ ತೆಗೆದುಕೊಂಡು ಸುತ್ತಲೂ ಹರಡಬೇಕು. ಕಮಲದ ಹೂವಿನ ರೀತಿ ಅಲಂಕಾರವನ್ನು ಮಾಡಬೇಕು. ಮಧ್ಯದ ವೀಳ್ಯದೆಲೆಯ ಮೇಲೆ ಸ್ವಲ್ಪ ಅಕ್ಕಿಯನ್ನು ಹಾಕಿ ಅರಿಶಿಣ, ಕುಂಕುಮದಿಂದ ಅಲಂಕಾರ ಮಾಡಿ ಕಾಮಾಕ್ಷಿ ದೀಪವನ್ನು ಇಡಬೇಕು.ಒಂದು ಬತ್ತಿಯನ್ನು ಹಾಕಿ ಕಾಮಾಕ್ಷಿ ದೀಪವನ್ನು ಹಚ್ಚಬೇಕು. ವಿಶೇಷವಾಗಿ ತುಪ್ಪದಿಂದ ದೀಪವನ್ನು ಅಮ್ಮನವರಿಗೆ ಹಚ್ಚಬೇಕು. ಒಂದು ವೇಳೆ ತುಪ್ಪದಿಂದ ಹಚ್ಚಲು ಸಾಧ್ಯವಾಗದಿದ್ದರೆ ಎಳ್ಳೆಣ್ಣೆಯಿಂದ ಕೂಡ ದೀಪವನ್ನು ಹಚ್ಚಬಹುದು. ಸಂಧ್ಯಾಕಾಲದಲ್ಲಿ ದೀಪವನ್ನು ಹಚ್ಚುವುದು ಬಹಳ ಶುಭ ಹಾಗೂ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಸಹ ತಡೆಗಟ್ಟುತ್ತದೆ. ಬೆಲ್ಲದಿಂದ ಮಾಡಿದ ಪದಾರ್ಥವನ್ನು ನೈವೇದ್ಯವನ್ನಾಗಿ ಇಟ್ಟರೆ ಬಹಳ ಒಳ್ಳೆಯದು.

  • ಈ ಪದಾರ್ಥದಿಂದ ಮಾಡಿದ ನೈವೇದ್ಯವನ್ನು ಸೇವಿಸುವುದರಿಂದ ಕಷ್ಟಗಳೆಲ್ಲ ದೂರವಾಗುತ್ತದೆ.

    ಜಾತಕದಲ್ಲಿ ಕುಜನು ನೀಚ ಸ್ಥಾನದಲ್ಲಿದ್ದು, ಎಂತಹದ್ದೆ ಕೆಲಸವನ್ನು ಮಾಡಿದರು ಮನೆಯಲ್ಲಿ ಕಿರಿಕಿರಿಯಾಗುವುದು ಹಾಗೂ ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಹಣ ಕೈಯಲ್ಲಿ ನಿಲ್ಲದೆ ಇರುವುದು ಹಾಗೂ ಮನೆಯಲ್ಲಿ ತುಂಬಾ ಕೆಳಮಟ್ಟದಿಂದ ಅಥವಾ ಕೀಳಾಗಿ ನೋಡುವುದು ಮಾಡಿದಾಗ ಈ ಮೂರು ವಸ್ತುಗಳಿಂದ ನಿಮ್ಮ ಎಲ್ಲಾ ದೋಷವನ್ನು ಪರಿಹಾರ ಮಾಡಿಕೊಳ್ಳಬಹುದು. ಈ ಕೆಲಸವನ್ನು ನಂಬಿಕೆಯಿಟ್ಟು ಮಾಡಬೇಕು ಒಂದು ವೇಳೆ ಅಪನಂಬಿಕೆಯಿಂದ ಮಾಡಿದರೆ ಫಲಪ್ರದವಾಗುವುದಿಲ್ಲ.

    ಈ ಕೆಲಸವನ್ನು ಮುಂಜಾನೆ 4 ಘಂಟೆಯಿಂದ 8 ಘಂಟೆಯೊಳಗೆ ಮಾಡಬೇಕು. ಒಂದು ವೇಳೆ ಮುಂಜಾನೆ ಮಾಡಲು ಸಾಧ್ಯವಾಗದಿದ್ದರೆ ಸಾಯಂಕಾಲ 6 ಘಂಟೆಯ ನಂತರ ಹಾಗೂ 9 ಘಂಟೆಯೊಳಗೆ ಮಾಡಬಹುದು. ಈ ಕೆಲಸವನ್ನು ಏಳು ಸೋಮವಾರಗಳು ಕಾಲ ಮಾಡಬೇಕು ಹಾಗೂ ಹೆಂಗಸರು ಮುಟ್ಟಾದ ಸಂದರ್ಭದಲ್ಲಿ ಮಾಡಬಾರದು.

    ಮೊದಲಿಗೆ ಒಂದು ಬಟ್ಟಲಿನಲ್ಲಿ ಗೋಧಿಹಿಟ್ಟು, ಹಸುವಿನ ತುಪ್ಪ ಹಾಗೂ ಸ್ವಲ್ಪ ಬೆಲ್ಲವನ್ನು ತೆಗೆದುಕೊಳ್ಳಬೇಕು. ನಂತರ ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟು , ತುಪ್ಪ ಹಾಗೂ ಬೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಮೂರು ಉಂಡೆಯನ್ನು ಮಾಡಿಕೊಳ್ಳಬೇಕು. ಈ ರೀತಿಯಾಗಿ ಮಾಡಿಕೊಂಡ ಮೂರು ಉಂಡೆಯನ್ನು ನಿಮ್ಮ ಕಷ್ಟಗಳು, ಕೋರಿಕೆಗಳನ್ನು ಹೇಳಿಕೊಂಡು ಇಷ್ಟದೇವತೆ ಅಥವಾ ಕುಲದೇವರಿಗೆ ನೈವೇದ್ಯ ವನ್ನಾಗಿ ಇಡಬೇಕು. ದೇವರಿಗೆ ನೈವೇದ್ಯವನ್ನು ಇಟ್ಟನಂತರ ಕುಟುಂಬದ ಸದಸ್ಯರು ಉಂಡೆಯನ್ನು ಸೇವಿಸಬಹುದು. ಒಂದು ವೇಳೆ ಉಂಡೆ ಮಿಕ್ಕಿದ್ದರೆ ಹಸುವಿಗೆ ತಿನ್ನಿಸಬಹುದು.ಈ ರೀತಿಯಾಗಿ ಮಾಡುವುದರಿಂದ ಜಾತಕದಲ್ಲಿ ಕುಜ ಗ್ರಹವು ನೀಚನಿದ್ದರೆ ಕಡಿಮೆಯಾಗುತ್ತ ಬರುತ್ತದೆ. ಒಂದು ವೇಳೆ ನಂಬಿಕೆಯಿಟ್ಟು ಈ ಕೆಲಸವನ್ನು ಮಾಡಿದರೆ ಯಶಸ್ಸು ಖಂಡಿತ ದೊರೆಯುತ್ತದೆ. ಏಳು ವಾರಗಳ ಕಾಲ ಈ ಪರಿಹಾರವನ್ನು ಮಾಡಬೇಕು. ಮೊದಲೆರಡು ಸೋಮವಾರ ಮಾಡಿದಾಗ ನಿಮಗೆ ಫಲಿತಾಂಶ ಬರುವುದು ಕಾಣುತ್ತದೆ.

  • ದೃಷ್ಟಿ ದೋಷ ನಿವಾರಣೆಯನ್ನು ಮನೆಯಲ್ಲಿ ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಎಂಬುದು ತಿಳಿದಿದೆಯೇ ನಿಮಗೆ ?

    ಭಾನುವಾರ ಹಾಗೂ ಅಮಾವಾಸ್ಯೆ ದಿನದಂದು ದೃಷ್ಟಿದೋಷ,ನರ ದೋಷ,ನರ ದೃಷ್ಠಿಯನ್ನು ಮನೆಯಲ್ಲಿಯೇ ನಿವಾರಿಸಿಕೊಳ್ಳಬಹುದು. ವ್ಯಾಪಾರ, ವ್ಯವಹಾರ ಗಂಡ-ಹೆಂಡತಿ ಕಲಹ, ದೃಷ್ಟಿದೋಷ ಇದ್ದಾಗ ಅಮಾವಾಸ್ಯೆ ಹಾಗೂ ಭಾನುವಾರ ದಿನದಂದು ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಎಲ್ಲಾ ದೋಷವು ನಿವಾರಣೆಯಾಗುತ್ತದೆ.

    ದೃಷ್ಟಿದೋಷವನ್ನು ತೆಗೆಯಲು ಅಮಾವಾಸ್ಯೆ, ಭಾನುವಾರ ಹಾಗೂ ಪೂರ್ಣಿಮೆಯ ದಿನ ತುಂಬಾ ಒಳ್ಳೆಯದು. ಮೊದಲಿಗೆ ಒಂದು ಪ್ಲೇಟ್ ಅಲ್ಲಿ ನೀರನ್ನು ಹಾಕಿ ಅದಕ್ಕೆ ಅರಿಶಿನವನ್ನು ಹಾಕಬೇಕು, ಅರಿಶಿಣವನ್ನು ಹಾಕಿದ ನಂತರ ಸ್ವಲ್ಪ ಸುಣ್ಣವನ್ನು ಹಾಕಬೇಕು ನಂತರ ಒಂದು ಹಿಡಿ ಕಲ್ಲುಪ್ಪನ್ನು ಹಾಕಬೇಕು. ಕಲ್ಲುಪ್ಪನ್ನು ಹಾಕಿದ ನಂತರ ಸ್ವಲ್ಪ ಅರಿಶಿಣ ಹಾಗೂ ಸ್ವಲ್ಪ ಕುಂಕುಮವನ್ನು ಮತ್ತೆ ಹಾಕಬೇಕು. ನಂತರ ನಿಂಬೆಹಣ್ಣನ್ನು ನಾಲ್ಕು ಭಾಗ ಮಾಡಿಕೊಳ್ಳಬೇಕು. ನಾಲ್ಕು ಭಾಗ ಮಾಡಿಕೊಂಡ ನಂತರ ಅರಿಶಿನವನ್ನು ನಿಂಬೆಹಣ್ಣಿನ ಒಳಗೆ ತುಂಬಬೇಕು ನಂತರ ಕುಂಕುಮವನ್ನು ಸಹ ನಿಂಬೆಹಣ್ಣಿನ ಒಳಗೆ ತುಂಬಬೇಕು. ನಂತರ ನಿಂಬೆಹಣ್ಣಿನ ಒಳಗೆ ಹಾಕಿರುವ ವಸ್ತುವನ್ನು ಮಿಶ್ರಣ ಮಾಡಿಕೊಳ್ಳಬೇಕು. ನಂತರ ಕಲ್ಲುಪ್ಪನ್ನು ನಿಂಬೆಹಣ್ಣಿನ ಒಳಗೆ ಹಾಕಿ ತಟ್ಟೆಯಲ್ಲಿ ಇಡಬೇಕು. ನಿಂಬೆಹಣ್ಣಿನ ಮೇಲೆ ಒಂದು ಕರ್ಪೂರವನ್ನು ಇಟ್ಟು ಹಚ್ಚಬೇಕು. ಕರ್ಪೂರವನ್ನು ಹಚ್ಚಿದ ನಂತರ ಅದರ ಮೇಲೆ ನಾಲ್ಕು ಲವಂಗವನ್ನು ಹಾಕಬೇಕು. ನಂತರ ಪುನಹ ಮತ್ತೊಂದು ಕರ್ಪೂರವನ್ನು ಅದರ ಮೇಲೆ ಇಡಬೇಕು.ನಂತರ ಮನೆಯ ಮುಖ್ಯದ್ವಾರದ ಬಾಗಿಲಿಗೆ ಮೂರು ಬಾರಿ ಎಡದಿಂದ ಬಲಕ್ಕೆ , ಬಲದಿಂದ ಎಡಕ್ಕೆ ನಿವಾಲಿಸಬೇಕು. ನಿವಾಳಿಸಿದ ನಂತರ ಯಾರೂ ತುಳಿಯದ ಜಾಗದಲ್ಲಿ ಅದನ್ನು ಹಾಕಿ ಬರಬೇಕು. ನಿರ್ಜನ ಪ್ರದೇಶದಲ್ಲಿ ಯಾರು ಓಡಾಡದ ಜಾಗದಲ್ಲಿ ಅದನ್ನು ಚೆಲ್ಲಿ ಹಿಂತಿರುಗಿ ನೋಡದೆ ಬರಬೇಕು. ಮನೆಗೆ ಬಂದ ನಂತರ ಮನೆಯ ಹೊರಗಡೆ ಕೈಕಾಲುಗಳನ್ನು ತೊಳೆದುಕೊಂಡು ನಂತರ ಸ್ನಾನದ ಮನೆಯಲ್ಲಿ ಬಟ್ಟೆಯನ್ನು ನೆನೆಸುವ ನೀರಿಗೆ ಸ್ವಲ್ಪ ಕಲ್ಲುಪ್ಪನ್ನು ಹಾಗೂ ಅರಿಶಿಣವನ್ನು ಹಾಕಬೇಕು. ನಂತರ ನೀವು ಹಾಕಿಕೊಂಡಿರುವ ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಬೇರೆ ಬಟ್ಟೆಯನ್ನು ಹಾಕಿಕೊಂಡು ಬರಬೇಕು.
    ಈ ರೀತಿಯಾಗಿ ಪರಿಹಾರವನ್ನು ಅಮವಾಸ್ಯೆಯ ದಿನ, ಭಾನುವಾರದ ದಿನ ಹಾಗೂ ಪೂರ್ಣಿಮೆಯ ದಿನ ಮಾಡುವುದರಿಂದ ಎಂತಹದೇ ನರದೃಷ್ಟಿ ,ನರ ದೋಷ, ಕೆಟ್ಟ ದೃಷ್ಟಿ, ದೃಷ್ಟಿ ದೋಷ ಇದ್ದರೂ ನಿವಾರಣೆಯಾಗುವುದರಲ್ಲಿ ಸಂಶಯವಿಲ್ಲ.

  • ಯಾವ ಬಣ್ಣದ ಬಳೆಗಳನ್ನು ಹೆಣ್ಣುಮಕ್ಕಳು ಹಾಕಿಕೊಂಡರೆ ಶ್ರೇಷ್ಠಕರ ಎಂಬುದು ತಿಳಿದಿದೆಯೇ ನಿಮಗೆ ?

    ಸಾಮಾನ್ಯವಾಗಿ ಮಹಿಳೆಯರು ಗಾಜಿನ ಬಳೆಗಳನ್ನು ಕೈಯಲ್ಲಿ ಹಾಕಿಕೊಳ್ಳುತ್ತಾರೆ. ಆದರೆ ಮಹಿಳೆಯರು ಕೆಲವೊಂದು ಸಲ ತಾವು ಹಾಕಿಕೊಳ್ಳುವ ವಿಧ ವಿಧವಾದ ಬಣ್ಣಗಳ ಬಳೆಗಳಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ. ಆದ್ದರಿಂದ ಮಹಿಳೆಯರು ಯಾವ ಬಣ್ಣದ ಬಳೆಗಳನ್ನು ಹಾಕಿಕೊಂಡರೆ ಉತ್ತಮ ಎಂದು ತಿಳಿದುಕೊಳ್ಳೋಣ ಬನ್ನಿ.ಮಹಿಳೆಯರು ಕೆಂಪು ಹಾಗೂ ಹಸಿರು ಬಣ್ಣದ ಬಳೆಗಳನ್ನು ಹಾಕಿಕೊಂಡರೆ ತುಂಬಾ ಉತ್ತಮ. ಏಕೆಂದರೆ ಕೆಂಪು ಹಾಗೂ ಹಸಿರು ಬಣ್ಣದ ಬಳೆಗಳನ್ನು ಲಕ್ಷ್ಮಿ ದೇವಿಯ ಪೂಜೆಗೆ ಇಡಲಾಗುತ್ತದೆ ಇದರಿಂದ ಲಕ್ಷ್ಮೀದೇವಿಯ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಈ ಬಣ್ಣದ ಬಳೆಗಳನ್ನು ಹಾಕಿಕೊಳ್ಳುವುದರಿಂದ ಮನಸ್ಸು ಹಾಗೂ ಮನೆಯು ಶಾಂತಿಯಿಂದ ಕೂಡಿರುತ್ತದೆ ಹಾಗೂ ಆ ಮಹಿಳೆಯು ಎಂತಹದ್ದೇ ಕಷ್ಟ ಬಂದರೂ ಧೈರ್ಯವಾಗಿ ಎದುರಿಸಿಕೊಂಡು ಹೋಗುವುದರಲ್ಲಿ ಸಮರ್ಥರಾಗಿರುತ್ತಾರೆ. ಸಾಮಾನ್ಯವಾಗಿ ಕೆಂಪು ಹಾಗೂ ಹಸಿರು ಬಣ್ಣದ ಬಳೆಗಳನ್ನು ಪೂಜೆಗೂ ಸಹ ಬಳಸಲಾಗುತ್ತದೆ ಆದ್ದರಿಂದ ಕೆಂಪು ಹಾಗೂ ಹಸಿರು ಬಣ್ಣದ ಬಳೆಗಳನ್ನು ಧರಿಸುವುದರಿಂದ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ.ಮಹಿಳೆಯರು ಡಾರ್ಕ್ ನೀಲಿಬಣ್ಣ, ಬೂದು ಬಣ್ಣ, ಗುಲಾಬಿ ಬಣ್ಣದ ಬಳೆಗಳನ್ನು ಧರಿಸಿದರೆ ಸಮಸ್ಯೆಗಳು ಕಾಡಲು ಶುರುವಾಗುತ್ತದೆ ಎಂದು ಹೇಳಲಾಗುತ್ತದೆ. ಈ ತರಹದ ಬಳೆಗಳನ್ನು ಧರಿಸುವುದರಿಂದ ಗಂಡ-ಹೆಂಡತಿಯ ನಡುವೆ ಕಲಹಗಳು ಉದ್ಭವವಾಗುತ್ತದೆ. ಆದ್ದರಿಂದ ಕೆಂಪು ಹಾಗೂ ಹಸಿರು ಬಣ್ಣದ ಬಳೆಗಳನ್ನು ಹಾಕಿಕೊಳ್ಳುವುದು ಒಳ್ಳೆಯದು.

    ಒಂದು ವೇಳೆ ನೀವು ಶ್ರೀಮಂತರಾಗಿದ್ದು ಬಂಗಾರದ ಬಳೆಗಳನ್ನು ಹಾಕಿಕೊಳ್ಳುವುದಾದರೆ ಬಂಗಾರದ ಬಳೆಗಳ ಜೊತೆಗೆ ಗಾಜಿನ ಬಳೆಗಳನ್ನು ಹಾಕಿಕೊಳ್ಳುವುದು ತುಂಬಾ ಒಳ್ಳೆಯದು. ಗಾಜಿನ ಬಳೆಯನ್ನು ಹಾಕಿಕೊಳ್ಳುವುದರಿಂದ ಲಕ್ಷ್ಮೀದೇವಿಯು ಸಂತೋಷ ಪಡುತ್ತಾಳೆ.

    ಹೊರಗಿನ ಪ್ರಪಂಚದವರನ್ನು ಖುಷಿಯಾಗಿ ಇಡುವುದಕ್ಕೆ ಬಳೆಯನ್ನು ಹಾಕಿಕೊಳ್ಳುವುದರ ಬದಲು ಮನೆಯಲ್ಲಿರುವ ಸದಸ್ಯರ ಶಾಂತಿ, ನೆಮ್ಮದಿ ಹಾಗೂ ಸುಖಕರವಾಗಿ ಜೀವನವನ್ನು ನಡೆಸಲು ಗಾಜಿನ ಬಳೆಗಳನ್ನು ಹಾಕಿಕೊಳ್ಳಬೇಕು. ಆದ್ದರಿಂದ ಕೆಂಪು ಹಾಗೂ ಹಸಿರು ಬಣ್ಣದ ಬಳೆಗಳನ್ನು ಮಹಿಳೆಯರು ಹಾಕಿಕೊಳ್ಳುವುದರಿಂದ ಮನಃಶಾಂತಿ ಜೊತೆಗೆ ಮನೆಯಲ್ಲಿರುವ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ.

  • ಭಗವಂತನ ಅನುಗ್ರಹ ಬೇಕೆಂದರೆ ಈ ಮೂರು ಗಿಡಗಳನ್ನು ಮನೆಯ ಅಂಗಳದಲ್ಲಿ ಬೆಳೆಸಿ.

    ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ದೇವರಿಗೆ ಹೂವನ್ನು ಮೂಡಿಸಲು ಕೆಲವೊಂದು ಗಿಡಗಳನ್ನು ಹಾಕಿಕೊಂಡಿರುತ್ತಾರೆ. ಹಾಗಾಗಿ ನಿಮ್ಮ ಮನೆಯ ಆವರಣದಲ್ಲಿ ಈ ಮೂರು ಗಿಡಗಳನ್ನು ಬೆಳೆಸಿದ್ದರೆ ಖಂಡಿತವಾಗಿಯೂ ಲಕ್ಷ್ಮೀನಾರಾಯಣ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಹಾಗಾದರೆ ಯಾವ ಮೂರು ಗಿಡಗಳನ್ನು ಮನೆಯಲ್ಲಿ ಬೆಳೆಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

    ಮನೆಯಲ್ಲಿ ತುಳಸಿ ಗಿಡವು ಇದ್ದರೆ ತುಂಬಾ ಒಳ್ಳೆಯದು. ತುಳಸಿ ಗಿಡವು ಇರುವುದರಿಂದ ಮನೆಗೆ ಯಾವ ದುಷ್ಟ ಶಕ್ತಿಯು ಪ್ರವೇಶ ಮಾಡದಂತೆ ತಡೆಯುತ್ತದೆ. ವಿಷ್ಣು ಸ್ವರೂಪವಾದ ನಾರಾಯಣ ದೇವರು ನಲ್ಲಿಕಾಯಿ ಗಿಡದಲ್ಲಿ ಇರುವುದರಿಂದ ನಲ್ಲಿಕಾಯಿ ಗಿಡವನ್ನು ಬೆಳೆಸುವುದು ಒಳ್ಳೆಯದು. ಬಿಲ್ಪತ್ರೆ ಗಿಡದಲ್ಲಿ ಲಕ್ಷ್ಮೀದೇವಿ ಇರುವುದರಿಂದ ಬಿಲ್ಪತ್ರೆ ಗಿಡವನ್ನು ಮನೆಯಂಗಳದಲ್ಲಿ ಬೆಳೆಸುವುದು ಉತ್ತಮ. ಹಾಗಾಗಿ ಮನೆಯ ಅಂಗಳದಲ್ಲಿ ಈ ಮೂರು ಗಿಡಗಳು ಇದ್ದರೆ ನಾವು ಅದೃಷ್ಟವಂತರು ಎಂದು ತಿಳಿದುಕೊಳ್ಳಬಹುದು.

    ಲಕ್ಷ್ಮೀದೇವಿಗೆ ತುಂಬಾ ಪ್ರಿಯವಾದ ಹೂವೆಂದರೆ ಸಂಪಿಗೆ ಹಾಗೂ ಮಲ್ಲಿಗೆ. ಆದ್ದರಿಂದ ಮಲ್ಲಿಗೆ ಹೂವಿಗೆ ಮನೆಯಲ್ಲಿ ಗಂಧವನ್ನು ತೇಯ್ದು ಹೂವಿಗೆ ಹಚ್ಚಿ ಲಕ್ಷ್ಮಿ ದೇವಿಗೆ ಮುಡಿಸುವುದರಿಂದ ಲಕ್ಷ್ಮೀದೇವಿ ಶಾಶ್ವತವಾಗಿ ಮನೆಯಲ್ಲಿ ನೆಳೆಸುತ್ತಾಳೆ. ಲಕ್ಷ್ಮೀದೇವಿಯು ಭೂದೇವಿಗೆ ದಾಳಿಂಬೆ ಗಿಡವನ್ನು ಯಾರ ಮನೆಯಲ್ಲಿ ಬೆಳೆಸುತ್ತಾರೋ ಅಂಥವರ ಮನೆಯಲ್ಲಿ ಸಂತಾನ ಪ್ರಾಪ್ತಿಗೆ ಯಾವುದೇ ರೀತಿಯ ತೊಂದರೆಯನ್ನು ಕೊಡುವುದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ದಾಳಿಂಬೆ ಗಿಡವನ್ನು ಬೆಳೆಸುವುದು ಒಳ್ಳೆಯದು.ಆಂಜನೇಯನಿಗೆ ಪ್ರಿಯವಾದ ಬಾಳೆಹಣ್ಣಿನ ಗಿಡವನ್ನು ಮನೆಯ ಆವರಣದಲ್ಲಿ ಹಾಕುವುದರಿಂದ ಆಂಜನೇಯಸ್ವಾಮಿಯ ರಕ್ಷಣೆಯೂ ಸಹ ದೊರೆಯುತ್ತದೆ. ಲಕ್ಷ್ಮೀದೇವಿ ಬಿಲ್ವಪತ್ರದ ಗಿಡದ ಕೆಳಗೆ ಕುಳಿತುಕೊಂಡು ಸಹಸ್ರಾರು ವರ್ಷಗಳ ಕಾಲ ತಪಸ್ಸನ್ನು ಮಾಡಿ ಅಲ್ಲಿಯೇ ಐಕ್ಯವಾಗಿರುವುದರಿಂದ ಬಿಲ್ವಪತ್ರದ ಗಿಡವು ತುಂಬಾ ಶ್ರೇಷ್ಠವಾಗಿದೆ.

    ಆದ್ದರಿಂದ ಮೇಲೆ ಹೇಳಿರುವ ಗಿಡಗಳನ್ನು ಮನೆಯ ಅಂಗಳದಲ್ಲಿ ಬೆಳೆಸುವುದರಿಂದ ಭಗವಂತನ ಅನುಗ್ರಹವು ಪ್ರಾಪ್ತಿಯಾಗುತ್ತದೆ ಹಾಗೂ ಸುಖ,ಶಾಂತಿ, ನೆಮ್ಮದಿಯಿಂದ ಜೀವನವನ್ನು ನಡೆಸಲು ಸಹಾಯಕವಾಗುತ್ತದೆ.

  • ಮನೆಯಲ್ಲಿ ದೀಪವನ್ನು ಏಕೆ ಹಚ್ಚುತ್ತಾರೆ ಎಂಬುದು ತಿಳಿದಿದೆಯೇ ನಿಮಗೆ ?

    ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಪ್ರತಿನಿತ್ಯವೂ ದೀಪಾರಾಧನೆಯನ್ನು ಮಾಡಲಾಗುತ್ತದೆ. ಅದೇ ರೀತಿ ಸಾಯಂಕಾಲವೂ ದೇವರ ಮುಂದೆ ದೀಪವನ್ನು ಹಚ್ಚಲಾಗುತ್ತದೆ. ದೀಪಾರಾಧನೆಯನ್ನು ಪ್ರತಿನಿತ್ಯ ಏಕೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಪ್ರತಿನಿತ್ಯ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಮನಸ್ಸಿನಲ್ಲಿ, ಅಂತರಾತ್ಮದಲ್ಲಿ ಬೆಳಕು ಉಂಟಾಗುತ್ತದೆ. ದೀಪವನ್ನು ಬೆಳಗಿಸುವುದರಿಂದ ಜೀವನದ ಜ್ಯೋತಿಯು ಬೆಳಗುತ್ತದೆ ಎಂದು ಹೇಳಲಾಗುತ್ತದೆ. ಯಾವುದಾದರೂ ಸಮಸ್ಯೆಯು ಎದುರಾದಾಗ ದೀಪವನ್ನು ಹಚ್ಚುವುದರಿಂದ ಮನಸ್ಸಿಗೆ ಶಾಂತಿಯೂ ಸಹ ದೊರಕುತ್ತದೆ.
    ದೀಪಾರಾಧನೆಯನ್ನು ಪ್ರತಿನಿತ್ಯ ಮಾಡುವುದರಿಂದ ಕುಂಡಲಿ ಶಕ್ತಿ ಜಾಗೃತವಾಗಿ ಅದರ ಮೂಲಕ ಅಗ್ನಿ ಪ್ರವೇಯ ಉಂಟಾಗಿ ಅದರಿಂದ ಜ್ಯೋತಿ ಪ್ರಭೆಯು ಉಂಟಾಗುತ್ತದೆ. ಜ್ಯೋತಿಯ ಇನ್ನೊಂದು ಸ್ವರೂಪ ವಾಗಿರುವವನೇ ಸುಬ್ರಮಣ್ಯಸ್ವಾಮಿ. ಆದ್ದರಿಂದ ದೀಪಾರಾಧನೆಯನ್ನು ಮಾಡಿದರೆ ಶಿವನ ಕುಟುಂಬಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ.ಹಸುವಿನ ತುಪ್ಪದಿಂದ ದೀಪವನ್ನು ಹಚ್ಚುವುದಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಆದರೆ ಕೆಲವರಿಗೆ ತುಪ್ಪದಿಂದ ದೀಪವನ್ನು ಹಚ್ಚಲು ಸಾಧ್ಯವಾಗುತ್ತಿರುವುದಿಲ್ಲ, ಆಗ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಬಹುದು. ತುಪ್ಪದ ದೀಪವನ್ನು ಹಚ್ಚುವುದರಿಂದ ಧನ ಸಂಪತ್ತು ಕೂಡ ವೃದ್ಧಿಯಾಗುತ್ತದೆ. ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಹಾಗೂ ಆಯಸ್ಸು ವೃದ್ಧಿಯಾಗುತ್ತದೆ.

    ಒಂದು ಬತ್ತಿಯಿಂದ ದೀಪವನ್ನು ಹಚ್ಚುವುದು ಮನೆಯಲ್ಲಿ ಯಾರಾದರೂ ಮರಣ ಹೊಂದಿದಾಗ. ಆದ್ದರಿಂದ ಒಂದು ಬತ್ತಿಯ ದೀಪವು ಸಾವಿನ ಸಂಕೇತವನ್ನು ಸೂಚಿಸುತ್ತದೆ.ಎರಡು ಬತ್ತಿಯಿಂದ ದೀಪವನ್ನು ಹಚ್ಚುವುದು ದೇಹ ಮತ್ತು ಆತ್ಮವು ಸಮ್ಮಿಲನವಾಗುವುದಕ್ಕೆ ಹಚ್ಚಲಾಗುತ್ತದೆ. ಮೂರು ಬತ್ತಿಯಿಂದ ದೀಪವನ್ನು ಹಚ್ಚುವುದರಿಂದ ದೇಹ ಆತ್ಮ ಮತ್ತು ಪರಮಾತ್ಮ ಈ 3 ಲೀನವಾಗುವುದಕ್ಕೆ ಸಹಾಯಕವಾಗುತ್ತದೆ.

    ಹೀಗಾಗಿ ಪ್ರತಿನಿತ್ಯ ಮನೆಯಲ್ಲಿ ದೀಪವನ್ನು ಹಚ್ಚಿ ಪೂಜೆಯನ್ನು ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯುವುದಲ್ಲದೆ ಭಗವಂತನ ಕೃಪೆಗೆ ಪಾತ್ರರಾಗಬಹುದು.