Kannada Astrology

Category: ಜ್ಯೋತಿಷ್ಯ

  • ಆರೋಗ್ಯವಂತ ವ್ಯಕ್ತಿ ಆಗಬೇಕೆಂದರೆ ಅಡುಗೆ ಕೋಣೆಯಲ್ಲಿ ಕುಳಿತುಕೊಂಡು ಊಟ ಮಾಡಬೇಕು.

    ಆರೋಗ್ಯವಂತ ವ್ಯಕ್ತಿ ಆಗಬೇಕೆಂದರೆ ಅಡುಗೆ ಕೋಣೆಯಲ್ಲಿ ಕುಳಿತುಕೊಂಡು ಊಟ ಮಾಡಬೇಕು..ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಕೆಲವೊಂದು ಸಲ ಮನೆಯಲ್ಲಿ ನಾವು ಇಟ್ಟುಕೊಳ್ಳುವ ಉಪಯೋಗಿಸದ ವಸ್ತುಗಳು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಆದ್ದರಿಂದ ಉಪಯೋಗಿಸದ ವಸ್ತುಗಳನ್ನು ಮನೆಯಿಂದ ಹೊರ ಹಾಕುವುದರಿಂದ ಮನೆಯು ಶಾಂತವಾಗುತ್ತದೆ ಹಾಗೂ ಮನಸ್ಸು ಶಾಂತವಾಗುತ್ತದೆ ಮತ್ತು ವಾಸ್ತು ದೋಷವು ನಿವಾರಣೆಯಾಗುತ್ತದೆ.ಆಗ್ನೇಯ ದಿಕ್ಕಿನಲ್ಲಿ ಅಡುಗೆ ಕೋಣೆಯನ್ನು ಕಟ್ಟಿಸಿ ಅಡುಗೆಯನ್ನು ಮಾಡಿ ಅಲ್ಲಿಯೇ ಎಲ್ಲರೂ ಕುಳಿತುಕೊಂಡು ಊಟ ಮಾಡುವುದು ತುಂಬಾ ಉತ್ತಮವಾದದ್ದು. ಅಡುಗೆ ಕೋಣೆಯಲ್ಲಿ ಕುಳಿತುಕೊಂಡು ಊಟ ಮಾಡುವುದರಿಂದ ಆಯಸ್ಸು ಹೆಚ್ಚಾಗುತ್ತದೆ ಹಾಗೂ ವ್ಯಕ್ತಿಯು ಅಭಿವೃದ್ಧಿಯನ್ನು ಕಾಣುತ್ತಾನೆ.ಅಡುಗೆ ಕೋಣೆಯಲ್ಲಿ ಮನೆಯ ಯಜಮಾನ ಕುಳಿತುಕೊಂಡ ಊಟ ಮಾಡುವುದರಿಂದ ಕೀರ್ತಿವಂತನು ಹಾಗೂ ಧನ ಸಂಪತ್ತನ್ನು ಗಳಿಸುವಂತಹವನಾಗುತ್ತಾನೆ. ಹಾಗೆಯೇ ಮಲಗುವ ಕೋಣೆಯನ್ನು ಸಹ ಶುದ್ಧವಾಗಿಟ್ಟುಕೊಳ್ಳಬೇಕು. ಪೂರ್ವ ಹಾಗೂ ದಕ್ಷಿಣದ ಕಡೆ ತಲೆಯನ್ನು ಹಾಕಿಕೊಂಡು ಮಲಗುವುದು ತುಂಬಾ ಉತ್ತಮ ಮತ್ತು ಉತ್ತರ ಹಾಗೂ ಪಶ್ಚಿಮ ದಿಕ್ಕಿನ ಕಡೆ ತಲೆ ಹಾಕಿಕೊಂಡು ಮಲಗಬಾರದು ಇದರಿಂದ ಅನೇಕ ರೀತಿಯ ಕಷ್ಟಗಳನ್ನು ನಾವೇ ತಂದುಕೊಳ್ಳುವಂತ ಪರಿಸ್ಥಿತಿ ಬರುತ್ತದೆ.ಪ್ರತಿಯೊಬ್ಬರ ಮನೆಯಲ್ಲೂ ಸ್ಪಟಿಕ ಮಣಿ ಇದ್ದರೆ ತುಂಬಾ ಒಳ್ಳೆಯದು ಏಕೆಂದರೆ ಯಾವುದೇ ರೀತಿಯ ವಾಸ್ತು ದೋಷವು ನಿಮ್ಮ ಮನೆಯಲ್ಲಿ ಉಂಟಾಗುವುದಿಲ್ಲ. ಪ್ರತಿನಿತ್ಯ ಮನೆಯಲ್ಲಿ ಶ್ಲೋಕವನ್ನು ಹೇಳುವುದು, ಭಕ್ತಿಗೀತೆಗಳನ್ನು ಹಾಡುವುದು ಅಥವಾ ಒಂದು ವೇಳೆ ಹಾಡಲು ಬರುವುದಿಲ್ಲವೆಂದರೆ ಮೊಬೈಲ್ ಅಲ್ಲಿ ಭಕ್ತಿಗೀತೆಗಳನ್ನು ಹಾಕಿಕೊಂಡು ಮುಂಜಾನೆ ಎದ್ದ ತಕ್ಷಣ ಕೇಳುವುದರಿಂದ ತುಂಬಾ ಒಳ್ಳೆಯದು. ಈ ರೀತಿ ಮಾಡುವುದರಿಂದ ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು.

  • ಧನ ಸಂಪತ್ತು ವೃದ್ಧಿ,ಪ್ರೇಮ ವಿಚಾರಕ್ಕೆ ಸೂಕ್ತ ಪರಿಹಾರ ವೀಳ್ಯದೆಲೆ ಹಾಗೂ ಗಂಧ…

    ಧನ ಸಂಪತ್ತು ವೃದ್ಧಿ,ಪ್ರೇಮ ವಿಚಾರಕ್ಕೆ ಸೂಕ್ತ ಪರಿಹಾರ ವೀಳ್ಯದೆಲೆ ಹಾಗೂ ಗಂಧ…ನಮ್ಮ ಮನಸ್ಸಿನಲ್ಲಿರುವ ಕೋರಿಕೆಗಳಾದ ಪ್ರೇಮ ವಿಚಾರ, ಧನ ಸಂಪತ್ತು ವೃದ್ಧಿ, ವಿವಾಹದ ಸಮಸ್ಯೆ, ಉದ್ಯೋಗದ ಸಮಸ್ಯೆಗೆ ಸೂಕ್ತ ಪರಿಹಾರ ತಾಂಬೂಲ ಪರಿಹಾರ. ಹಾಗಾದರೆ ಈ ತಾಂಬೂಲ ಪರಿಹಾರವನ್ನು ಯಾವ ಸಮಯದಲ್ಲಿ ಹಾಗೂ ಯಾವ ರೀತಿ ಮಾಡಬೇಕೆಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಮೊದಲಿಗೆ ಗಂಧಕ್ಕೆ ಸ್ವಲ್ಪ ನೀರನ್ನು ಹಾಕಿ ವೀಳ್ಯದೆಲೆಯ ಮೇಲೆ ಉಂಗುರದ ಬೆರಳಿನಿಂದ ರೀ ಎಂದು ಬರೆಯಬೇಕು. ಈ ರೀತಿ ವೀಳ್ಯದೆಲೆಯ ಮೇಲೆ ಬರೆದನಂತರ ಒಂಬತ್ತು ದಿನಗಳ ಕಾಲ ದೇವರಮುಂದೆ ಇಟ್ಟು ಪೂಜೆಯನ್ನು ಮಾಡಬೇಕು. ಪೂಜೆ ಮಾಡಿದ ವೀಳ್ಯದೆಲೆಯನ್ನು ಜೇಬಿನಲ್ಲಿ ಅಥವಾ ವ್ಯಾನಿಟಿ ಪರ್ಸಿನಲ್ಲಿ ಇಟ್ಟುಕೊಳ್ಳಬಹುದು.

    ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಶುದ್ದಿಯಾಗಿ ಲಕ್ಷ್ಮಿ ಅಥವಾ ಗಣಪತಿಯ ಫೋಟೋ ಮುಂದೆ ಉಪಾಯವನ್ನು ಮಾಡಬೇಕು.ವೀಳ್ಯದೆಲೆಯ ಮೇಲೆ ಎರಡು ಲವಂಗವನ್ನು ಇಟ್ಟು ಬಲ ಕೈಯಿಯ ಮೇಲೆ ವೀಳ್ಯದೆಲೆಯನ್ನು ಇಟ್ಟುಕೊಂಡು ಅದರ ಕೆಳಗೆ ಎಡಕೈಯನ್ನು ಇಟ್ಟುಕೊಂಡು ಮನಸ್ಸಿನಲ್ಲಿರುವ ನಿಮ್ಮ ಮುಖ್ಯವಾದ ಕೋರಿಕೆಯಾನ್ನು ಹೇಳಿಕೊಳ್ಳಬೇಕು. ಕೋರಿಕೆಯನ್ನು ಹೇಳಿದ ನಂತರ ವೀಳ್ಯದೆಲೆಯನ್ನು ದೇವರ ಫೋಟೋ ಮುಂದೆ ಇಡಬೇಕು. ವೀಳ್ಯದೆಲೆಯನ್ನು ಇಟ್ಟ ನಂತರ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಬೇಕು.ಸಾಯಂಕಾಲ ಮತ್ತೊಮ್ಮೆ ಕೈ ಕಾಲುಗಳನ್ನು ತೂಳೆದುಕೊಂಡು ಶುದ್ಧವಾಗಿ ದೇವರ ಮುಂದೆ ಹೋಗಿ ಮುಂಜಾನೆ ಲಕ್ಷ್ಮಿ ಅಥವಾ ಗಣಪತಿಯ ಫೋಟೋ ಮುಂದೆ ಇಟ್ಟಿರುವ ವೀಳ್ಯದೆಲೆಯನ್ನು ತೆಗೆದುಕೊಂಡು ಮಡಿಚಿ ವೀಳ್ಯದೆಲೆಯ ಮೇಲೆ ಎರಡು ಕರ್ಪೂರವನ್ನು ಇಟ್ಟು ಹಚ್ಚಬೇಕು. ಈ ಚಿಕ್ಕ ಕೆಲಸವನ್ನು ಯುಗಾದಿ ಹಬ್ಬದ ದಿನ ಮಾಡಿದರೆ ತುಂಬಾ ಉತ್ತಮವಾದದ್ದು. ಯುಗಾದಿ ಹಬ್ಬದ ದಿನ ಈ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಮಂಗಳವಾರ ಅಥವಾ ಶುಕ್ರವಾರದ ದಿನದಂದು ಮಾಡಬಹುದು. ನಂತರ ಯಾರೂ ತುಳಿಯದ ಜಾಗದಲ್ಲಿ ಕರ್ಪೂರದಿಂದ ಹಚ್ಚಿದ ವೀಳ್ಯದೆಲೆಯನ್ನು ಹಾಕಬೇಕು.

    ಈ ಪರಿಹಾರವನ್ನು ಶ್ರದ್ಧೆಯಿಂದ, ಭಕ್ತಿಯಿಂದ, ನಂಬಿಕೆಯಿಟ್ಟು ಮಾಡಿದರೆ ಖಚಿತವಾದ ಫಲಗಳು ಲಭಿಸುತ್ತದೆ. ಈ ಉಪಾಯವನ್ನು ಗರ್ಭಿಣಿ ಸ್ತ್ರೀಯರು ಹಾಗೂ ಹೆಂಗಸರು ಮುಟ್ಟಾದ ಸಮಯದಲ್ಲಿ ಮಾಡಬಾರದು.ಈ ಪರಿಹಾರದಿಂದ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳು ಈಡೇರುತ್ತವೆ.

  • ಋಣ ಬಾಧೆಯಿಂದ ಮುಕ್ತರಾಗಬೇಕೆಂದರೆ ಈ ಮಂತ್ರವನ್ನು ಪಠಿಸಿ.

    ಋಣಬಾಧೆ, ಸಾಲಬಾಧೆ ಇಂದ ಮುಕ್ತರಾಗಬೇಕು ಎಂದರೆ ಈ ಅದ್ಭುತವಾದ ಶಕ್ತಿಶಾಲಿ ಮಂತ್ರವನ್ನು ಹೇಳಬೇಕು. ಆಗ ಮಾತ್ರ ಋಣಭಾದೆ ಇಂದ ಮುಕ್ತರಾಗಲು ಹಲವಾರು ದಾರಿಗಳು ಸಿಗುತ್ತವೆ ಹಾಗೂ ಹಣದ ಸಮಸ್ಯೆಯಿಂದ ಹೊರಬರಲು ಈ ಮಂತ್ರ ತುಂಬಾ ಸಹಾಯಕವಾಗುತ್ತದೆ. ಹಾಗಾದರೆ ಆ ಮಂತ್ರ ಯಾವುದು ಹಾಗೂ ಅದನ್ನು ಯಾವ ಸಮಯದಲ್ಲಿ ಪಠಿಸಬೇಕು ಮತ್ತು ಎಷ್ಟು ಬಾರಿ ಪಠಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.ಈ ಮಂತ್ರ ಯಾವುದೆಂದರೆ ನರಸಿಂಹಸ್ವಾಮಿಯ ಋಣವಿಮೋಚನ ಸ್ತೋತ್ರ. ನರಸಿಂಹಸ್ವಾಮಿಯ ಋಣವಿಮೋಚನ ಸ್ತೋತ್ರ ಅನ್ನು ಪ್ರತಿನಿತ್ಯ ಸಮಯ ಸಿಕ್ಕಾಗಲೆಲ್ಲ ಹೇಳುವುದರಿಂದ ಋಣಬಾಧೆ, ಸಾಲದ ಸಮಸ್ಯೆ ಇಂದ ಮುಕ್ತರಾಗಬಹುದು. ಪೂರ್ವಾರ್ಜಿತ ಕರ್ಮಗಳು ಅಥವಾ ಈಗಿನ ಕಲಿಯುಗದಲ್ಲಿ ನಾವು ಮಾಡಿದ ತಪ್ಪುಗಳಿಂದ ಮುಕ್ತರಾಗಬಹುದು.
    ಓಂ ದೇವತಾ ಕಾರ್ಯ ಸಿದ್ಯರ್ಥಂ ಸ್ತಭಾ ಸ್ತಂಭ ಸಮುದ್ಭವಂ ಶ್ರೀ ನರಸಿಂಹಂ ಮಹಾವೀರ್ಯಂ ನಮಾಮಿ ಋಣವಿಮುಕ್ತಹೆ
    ಈ ಮೇಲಿನ ಮಂತ್ರವನ್ನು ಪ್ರತಿನಿತ್ಯ ಮುಂಜಾನೆ ಸ್ನಾನ ಮಾಡಿದ ನಂತರ 108 ಬಾರಿ ಪಠಿಸುವುದರಿಂದ ಅಥವಾ ಜಪ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಸಾಲದ ಸಮಸ್ಯೆ, ಋಣಬಾಧೆ ಸಮಸ್ಯೆ, ಹಣದ ಕೊರತೆ ಇದ್ದರೂ ನಿವಾರಣೆಯಾಗುತ್ತದೆ.ನರಸಿಂಹಸ್ವಾಮಿಯ ಋಣವಿಮೋಚನ ಮಂತ್ರವನ್ನು ಜಪ ಮಾಡುವುದರಿಂದ ತಕ್ಷಣವೇ ಹಣದ ಸಮಸ್ಯೆಯು ನಿವಾರಣೆಯಾಗುವುದಿಲ್ಲ ಅದರ ಬದಲಿಗೆ ನಿಮ್ಮ ಕೋರಿಕೆಗಳು ದೇವಾನುದೇವತೆಗಳಿಗೆ ತಲುಪಿ,ನಿಮ್ಮ ಕೋರಿಕೆಗಳು ಈಡೇರಲು ಹಲವಾರು ರೀತಿಯ ಮಾರ್ಗಗಳನ್ನು ದೇವರು ನಿಮಗೆ ತೋರಿಸುತ್ತಾರೆ. ಆದ್ದರಿಂದ ಈ ಮಂತ್ರವನ್ನು ಜಪ ಮಾಡುವುದಾದರೆ ಶ್ರದ್ಧೆಯಿಂದ ಭಕ್ತಿಯಿಂದ ಪಠಿಸಬೇಕು. ಈ ರೀತಿ ಶ್ರದ್ಧೆಯಿಂದ ಜಪ ಮಾಡಿದರೆ ನಿಮಗೆ ಇರುವ ಎಷ್ಟೇ ದೊಡ್ಡದಾದ ಸಾಲದ ಸಮಸ್ಯೆ ಅಥವಾ ಋಣಭಾದೆ ಇದ್ದರು ನಿವಾರಣೆಯಾಗಲು ಅಥವಾ ಮುಕ್ತಿಯನ್ನು ಹೊಂದಲು ನರಸಿಂಹಸ್ವಾಮಿ ಮಾರ್ಗವನ್ನು ಸೂಚಿಸುತ್ತಾರೆ.

  • ಯಾರಿಗೂ ಗೊತ್ತಾಗದೆ ಕೊಟ್ಟಿದ್ದ ಹಣವನ್ನು ಮರಳಿ ಪಡೆಯುವುದು ಹೇಗೆ ಎಂಬುದರ ಬಗ್ಗೆ ತಿಳಿದಿದೆಯೇ ?

    ಯಾರಿಗೂ ಗೊತ್ತಾಗದೆ ಕೊಟ್ಟಿದ್ದ ಹಣವನ್ನು ಮರಳಿ ಪಡೆಯುವುದು ಹೇಗೆ ಎಂಬುದರ ಬಗ್ಗೆ ತಿಳಿದಿದೆಯೇ..ಒಂದು ವೇಳೆ ಯಾರಾದರೂ ನಿಮ್ಮ ಹತ್ತಿರ ಬಂದು ಕಷ್ಟವನ್ನು ಹೇಳಿಕೊಂಡು ಹಣದ ಸಹಾಯವನ್ನು ಕೇಳಿದಾಗ ನಿಮ್ಮ ಮನಸ್ಸು ಕರಗಿ ನೀವು ಕಷ್ಟಪಟ್ಟು ದುಡಿದ ಹಣವನ್ನು ಕೊಟ್ಟಿರುತ್ತೀರಿ, ಅದರಲ್ಲೂ ಹೆಣ್ಣುಮಕ್ಕಳು ತನ್ನ ಗಂಡನಿಗೆ ತಿಳಿಯದೆ ಕೆಲವೊಂದು ಹಣದ ವ್ಯವಹಾರಗಳನ್ನು ಮಾಡಿರುತ್ತಾರೆ. ಈ ರೀತಿ ಕೆಲವೊಂದು ಸಲ ಹಣವನ್ನು ಬೇರೆಯವರ ಹತ್ತಿರ ಬಿಡಿಸಿಕೊಳ್ಳಲು ಸಾಧ್ಯವಾಗದೆ ಹಾಗೂ ಯಾರಿಗೂ ಹೇಳಿಕೊಳ್ಳಲೂ ಆಗದೆ ಕಷ್ಟಪಡುತ್ತಿರುತ್ತಾರೆ. ಈ ಹಣವನ್ನು ಮರಳಿ ಪಡೆಯುವುದಕ್ಕೆ ಯಾರ ಸಹಾಯವನ್ನು ಪಡೆದುಕೊಳ್ಳುವುದಕ್ಕೂ ಸಾಧ್ಯವಾಗದೆ ಮತ್ತು ಹಣವನ್ನು ಹಾಗೆ ಬಿಡಲು ಸಾಧ್ಯವಾಗದೆ ಇರುವ ಹೆಣ್ಣುಮಕ್ಕಳಿಗೆ ಈ ಪೂಜಾ ವಿಧಾನದಿಂದ ಶತ್ರುವಿನ ಮೂಲಧನ ಮರಳಿ ಸಿಗುತ್ತದೆ.ಕಾಳಬೈರವೇಶ್ವರನಿಗೆ ಕುಂಬಳಕಾಯಿ ದೀಪವನ್ನು ಹಚ್ಚುವುದರಿಂದ ಸಾಲಬಾದೆ ಅಥವಾ ಶತ್ರುವಿನ ಮೂಲಧನ ವಿಚಾರವಾಗಿ ಪ್ರಯೋಗವನ್ನು ಮಾಡಬೇಕಾಗುತ್ತದೆ. ಸೋಮವಾರ ಹಾಗೂ ಶುಕ್ರವಾರದ ದಿನದಂದು ವಿಶೇಷವಾಗಿ ರಾಹುಕಾಲದಲ್ಲಿ ಕಾಲಭೈರವೇಶ್ವರನ ಸನ್ನಿಧಾನದಲ್ಲಿ ಕುಂಬಳಕಾಯಿ ದೀಪವನ್ನು ಹಚ್ಚುವುದರಿಂದ ಲಕ್ಷ್ಮೀದೇವಿಯು ಪ್ರಾಪ್ತಿಯಾಗುತ್ತಾಳೆ. ಮುಖ್ಯವಾಗಿ ಮೂರು ಶುಕ್ರವಾರದಂದು ಹಾಗೂ ಮೂರು ಸೋಮವಾರದಂದು ಕಾಲಭೈರವೇಶ್ವರನಿಗೆ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚುವುದರಿಂದ ನಿಮ್ಮಿಂದ ಕೈಜಾರಿದ ಹಣ ನಿಮ್ಮ ಕೈ ಸೇರುವುದು ಖಚಿತ.

    ಕಾಲಭೈರವೇಶ್ವರನಿಗೆ ಈ ರೀತಿಯಾಗಿ ದೀಪವನ್ನು ಹಚ್ಚುವುದರಿಂದ ನಿಮ್ಮ ಶತ್ರುವಿನ ಮನಪರಿವರ್ತನೆಯಾಗಿ ಯಾವುದೋ ಒಂದು ರೂಪದಲ್ಲಿ ಅವನ ಅರಿವಿಗೆ ಬಂದು ನಿಮ್ಮಿಂದ ಪಡೆದುಕೊಂಡಿದ್ದ ಹಣವನ್ನು ಅವನೇ ಬಂದು ನಿಮಗೆ ಹಿಂತಿರುಗಿಸುತ್ತಾನೆ.

  • ದಾರಿಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕೆಂಬ ಅರಿವಿದೆಯೇ ?

    ಸಾಮಾನ್ಯವಾಗಿ ದಾರಿಯಲ್ಲಿ ಓಡಾಡುವಾಗ ಹಲವರಿಗೆ ನಾಣ್ಯಗಳು, ನೋಟುಗಳು ಸಿಗುತ್ತಿರುತ್ತವೆ. ಆದರೆ ಸಿಕ್ಕಿದ ಹಣವನ್ನು ಹಾಗೂ ನಾಣ್ಯವನ್ನು ಏನು ಮಾಡಬೇಕೆಂಬ ಅರಿವಿಲ್ಲದೆ ಕೆಲವರು ದೇವರ ಹುಂಡಿಗೆ ಹಾಕುತ್ತಾರೆ ಮತ್ತೆ ಕೆಲವರು ಲಕ್ಷ್ಮೀದೇವಿ ಅನುಗ್ರಹ ಎಂದು ತಮ್ಮ ಖರ್ಚಿಗೆ ಉಪಯೋಗಿಸಿಕೊಳ್ಳುತ್ತಾರೆ. ಹೀಗೆ ದಾರಿಯಲ್ಲಿ ಸಿಕ್ಕ ಹಣವನ್ನು ಖರ್ಚು ಮಾಡಬಾರದು ಹಾಗೂ ದೇವರ ಹುಂಡಿಗೂ ಹಾಕಬಾರದು. ಹಾಗಾದರೆ ದಾರಿಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.ಮೊದಲಿಗೆ ದಾರಿಯಲ್ಲಿ ಹೋಗುವಾಗ ನಾಣ್ಯಗಳು, ಹಣವು ಸಿಕ್ಕರೆ ಅದರ ಅರ್ಥ ಏನೆಂಬುದನ್ನು ತಿಳಿದುಕೊಳ್ಳಬೇಕು. ಒಂದು ವೇಳೆ ನಾಣ್ಯವು ಸಿಕ್ಕರೆ ಪೂರ್ವಜರ ಆಶೀರ್ವಾದ ಸಿಕ್ಕಂತೆ ಎಂಬ ಅರ್ಥವನ್ನು ಕೊಡುತ್ತದೆ. ನಾಣ್ಯಗಳು ಸಿಕ್ಕರೆ ಅದು ಶುಭಸೂಚನೆಯಾಗಿ ಇರುತ್ತದೆ. ನಿಂತುಹೋದ ಕೆಲಸ ಕಾರ್ಯಗಳು ಪರಿಪೂರ್ಣವಾಗುತ್ತದೆ, ಕೆಲಸದಲ್ಲಿ ಯಾವಾಗಲೂ ಪ್ರಗತಿ ಇರುತ್ತದೆ. ಹಣವು ಲಕ್ಷ್ಮಿಯ ಸಂಕೇತವಾಗಿರುವುದರಿಂದ ಶುಭ ಸೂಚನೆಯಾಗಿರುತ್ತದೆ.ಒಂದು ವೇಳೆ ನೀವು ಯಾವುದಾದರೂ ಕೆಲಸದ ಬಗ್ಗೆ ಯೋಚನೆ ಮಾಡಿಕೊಂಡು ಹೋಗುವಾಗ ಅಥವಾ ವ್ಯಾಪಾರದ ಬಗ್ಗೆ ಅಥವಾ ಕೆಲಸ ಹುಡುಕುವ ಯೋಜನೆಯನ್ನು ಹಾಕಿಕೊಂಡು ಹೋಗುವಾಗ ನಾಣ್ಯ ಅಥವಾ ನೋಟು ಸಿಕ್ಕರೆ ಅದು ಶುಭ ಸೂಚನೆಯಾಗಿರುತ್ತದೆ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿ ಹಾಗೂ ಕೆಲಸ ಹುಡುಕುತ್ತಿರುವವರಿಗೆ ಕೆಲಸವು ಸಿಗುತ್ತದೆ. ಜೀವನದಲ್ಲಿ ತುಂಬಾ ಕಷ್ಟ ಪಡುತ್ತಿದ್ದಾರೆ ಈ ನಾಣ್ಯದಿಂದ ಮುಂದಿನ ದಿನಗಳಲ್ಲಿ ಲಕ್ಷ್ಮಿಯ ಕೃಪೆಯಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬ ಸೂಚನೆಯನ್ನು ನೀಡುತ್ತದೆ.ಈ ನಾಣ್ಯವು ನಿಮಗೇನಾದರೂ ಮಂಗಳವಾರ ಹಾಗೂ ಶುಕ್ರವಾರ ದಿನ ಸಿಕ್ಕರೆ ಅದನ್ನು ಮನೆಗೆ ತೆಗೆದುಕೊಂಡು ಬಂದು ಹಾಲಿನಿಂದ ಅಥವಾ ಗೋಮೂತ್ರದಿಂದ ತೊಳೆದು ದೇವರಮುಂದೆ ಇಟ್ಟು ನಮಸ್ಕಾರ ಮಾಡಿ ಪ್ರತಿನಿತ್ಯ ಪೂಜೆ ಮಾಡುತ್ತಾ ಬರಬೇಕು. ಹೀಗೆ ಪ್ರತಿನಿತ್ಯ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ. ಈ ರೀತಿಯಾಗಿ ಸಿಕ್ಕ ನಾಣ್ಯವನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಲು ಹೋಗಬೇಡಿ. ಒಂದು ವೇಳೆ ನಿಮಗೆ ಏನಾದರೂ ದಾರಿಯಲ್ಲಿ ದೊಡ್ಡ ಮೊತ್ತದ ಹಣ ಅಥವಾ ಪರ್ಸ್ ಸಿಕ್ಕರೆ ಅದನ್ನು ಯಾರು ಕಳೆದುಕೊಂಡಿರುತ್ತಾರೋ ಅವರಿಗೆ ಹಿಂದಿರುಗಿಸಲು ಪ್ರಯತ್ನಪಡಿ ಏಕೆಂದರೆ ಅವರೇನಾದರೂ ನೊಂದಿಕೊಂಡರೆ ನಿಮಗೆ ಸಿಕ್ಕಿರುವ ದುಡ್ಡಿನಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಹಾಗೂ ಅದರಿಂದ ಕಷ್ಟದ ದಿನಗಳು ನಿಮ್ಮ ಜೀವನದಲ್ಲಿ ಪ್ರಾರಂಭವಾಗುತ್ತದೆ.

  • ಅಮಾವಾಸ್ಯೆ ದಿನ ಯಾವ ಕೆಲಸ ಮಾಡಬೇಕು ಹಾಗೂ ಯಾವ ಕೆಲಸ ಮಾಡಬಾರದು ಎಂಬುದು ತಿಳಿದಿದೆಯೇ ನಿಮಗೆ.

    ಸಾಮಾನ್ಯವಾಗಿ ಅಮಾವಾಸ್ಯೆ ಎಂಬುದು ಪ್ರತಿ ತಿಂಗಳಲ್ಲಿ ಒಂದು ಬಾರಿ ಬರುತ್ತದೆ. ಹಿಂದೂ ಧರ್ಮದಲ್ಲಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಕ್ಕೆ ವಿಶೇಷವಾದ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಅಮಾವಾಸ್ಯೆ ದಿನ ಯಾವ ಕೆಲಸಗಳನ್ನು ಮಾಡಬಾರದು ಹಾಗೂ ಮಾಡಿದರೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

    ಅಮಾವಾಸ್ಯೆ ದಿನ ಮುಂಜಾನೆ ಬೇಗ ಎದ್ದು ತಲೆಯಿಂದ ಸ್ನಾನವನ್ನು ಮಾಡಬೇಕು. ತಲೆಯಿಂದ ಸ್ನಾನ ಮಾಡಬೇಕಾದರೆ ಯಾವುದೇ ರೀತಿಯ ಶ್ಯಾಂಪೂ ಅಥವಾ ಸೀಗೆಕಾಯಿ ಅಥವಾ ಎಣ್ಣೆಯನ್ನು ಹಚ್ಚಿಕೊಂಡು ತಲೆಗೆ ಸ್ನಾನ ಮಾಡಬಾರದು. ಬರಿ ನೀರಿನಿಂದ ತಲೆಗೆ ಸ್ನಾನವನ್ನು ಸೂರ್ಯ ಉದಯಿಸುವದಕ್ಕಿಂತ ಮುಂಚೆ ಮಾಡಬೇಕು. ಅಮಾವಾಸ್ಯೆ ದಿನ ಮಧ್ಯಾಹ್ನದ ವೇಳೆಯಲ್ಲಿ ಭೋಜನವನ್ನು ಮಾಡಬೇಕು ಹಾಗೂ ರಾತ್ರಿ ವೇಳೆ ಲಘು ಉಪಹಾರವನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅಮಾವಾಸ್ಯೆ ದಿನ ಶೇವಿಂಗ್ ಮಾಡುವುದು, ಹೇರ್ ಕಟ್ ಮಾಡಿಸಿಕೊಳ್ಳುವುದು, ಉಗುರನ್ನು ಕತ್ತರಿಸುವುದು ನಿಷಿದ್ಧ. ಈ ರೀತಿಯ ತಪ್ಪನ್ನು ಮಾಡಿದರೆ ದರಿದ್ರ ದೇವತೆಯು ಮನೆಗೆ ಆವರಿಸಿಕೊಳ್ಳುತ್ತಾಳೆ ಎಂಬುದನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಅಮಾವಾಸ್ಯೆ ದಿನ ಮಧ್ಯಾಹ್ನದ ಸಮಯದಲ್ಲಿ ಹಾಗೂ ಮುಂಜಾನೆ 5 ರಿಂದ 6 ಗಂಟೆಯ ಸಮಯದಲ್ಲಿ ಹಾಗೂ ಸಾಯಂಕಾಲ 5 ರಿಂದ 6 ಗಂಟೆಯ ಸಮಯದಲ್ಲಿ ನಿದ್ದೆ ಮಾಡಬಾರದು. ಅಮಾವಾಸ್ಯೆ ದಿನ ಯಾವುದೇ ರೀತಿಯ ಹೊಸ ಕೆಲಸಗಳನ್ನು ಪ್ರಾರಂಭ ಮಾಡಬಾರದು ಹಾಗೂ ಇದರ ಜೊತೆಗೆ ಹಿಂದಿನ ಕೆಲಸವನ್ನು ಅಮಾವಾಸ್ಯೆ ದಿನ ಮುಗಿಸಬಾರದು.ಅಮಾವಾಸ್ಯೆ ದಿನ ಮನೆಯನ್ನು ಒರೆಸುವಾಗ ನೀರಿಗೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಮನೆಯನ್ನು ಒರೆಸಬೇಕು.ಅಮಾವಾಸ್ಯೆ ದಿನ ಬಡವರಿಗೆ ಅನ್ನದಾನ, ವಸ್ತ್ರದಾನ ಮಾಡುವುದರಿಂದ ಹಿರಿಯರ ಆಶೀರ್ವಾದ ಲಭಿಸಲಿದೆ ಹಾಗೂ ದೇವತೆಗಳ ಅನುಗ್ರಹ ಪ್ರಾಪ್ತಿಯಾಗಲಿದೆ. ಪಿತೃದೇವತೆಗಳಿಗೆ ದಕ್ಷಿಣ ದಿಕ್ಕಿನ ಕಡೆ ಮುಖವನ್ನು ಮಾಡಿಕೊಂಡು ಕಪ್ಪು ಎಳ್ಳನ್ನು ಕೈಯಲ್ಲಿ ಹಿಡಿದುಕೊಂಡು ತಾಮ್ರದ ಚೊಂಬಿನಿಂದ ನೀರನ್ನು ಹಾಕುತ್ತಾ ಪಿತೃಗಳಿಗೆ ಅರ್ಗ್ಯ ಬಿಡಬೇಕು. ಈ ರೀತಿ ಮಾಡುವುದರಿಂದ ಪಿತೃದೇವತೆಗಳ ಆಶೀರ್ವಾದದಿಂದ ಮನೆಯಲ್ಲಿ ಎಲ್ಲರ ಆರೋಗ್ಯವು ಚೆನ್ನಾಗಿರುತ್ತದೆ ಹಾಗೂ ಸುಖ-ಶಾಂತಿ-ನೆಮ್ಮದಿ ನೇಳೆಸುತ್ತದೆ. ಅಮಾವಾಸ್ಯೆ ದಿನ ಲಕ್ಷ್ಮೀದೇವಿಯ ಪೂಜೆಯನ್ನು ಮಾಡಬೇಕು ಇದರಿಂದ ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗಿ ಎಲ್ಲಾ ರೀತಿಯ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ. ಲಕ್ಷ್ಮಿ ದೇವಿಗೆ ತುಪ್ಪದ ದೀಪವನ್ನು ಹಚ್ಚಿ ನೈವೇದ್ಯವನ್ನು ಮಾಡಿ ಕುಂಕುಮಾರ್ಚನೆ ಅಷ್ಟೋತ್ತರ ಹೇಳುವುದರಿಂದ ಮನೆಯಲ್ಲಿರುವ ಸಂಪತ್ತು ದುಪ್ಪಟ್ಟಾಗುತ್ತದೆ ಹಾಗೂ ಮಾಡುವಂತ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು.

  • ಲಕ್ಷ್ಮೀದೇವಿ ಪೂಜೆಯನ್ನು ಯಾವ ಪ್ರಕಾರ ಹಾಗೂ ಯಾವ ದಿಕ್ಕಿನಲ್ಲಿ ಕುಳಿತುಕೊಂಡು ಮಾಡಬೇಕು ಎಂಬುದರ ಅರಿವಿದೆಯೆ.

    ಲಕ್ಷ್ಮೀದೇವಿ ಪೂಜೆಯನ್ನು ಯಾವ ಪ್ರಕಾರ ಹಾಗೂ ಯಾವ ದಿಕ್ಕಿನಲ್ಲಿ ಕುಳಿತುಕೊಂಡು ಮಾಡಬೇಕು ಎಂಬುದರ ಅರಿವಿದೆಯ..ಲಕ್ಷ್ಮಿ ಪೂಜೆಯನ್ನು ಮಾಡಬೇಕಾದರೆ ಯಾವ ದಿಕ್ಕಿನಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಬೇಕು ಹಾಗೂ ಪೂಜೆ ಮಾಡುವವರು ಯಾವ ದಿಕ್ಕಿನಲ್ಲಿ ಕುಳಿತುಕೊಂಡು ಪೂಜೆ ಮಾಡಬೇಕು ಎಂಬುದರ ಬಗ್ಗೆ ವಿಶೇಷವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಮನೆಯಲ್ಲಿ ಲಕ್ಷ್ಮೀದೇವಿಯನ್ನು ಯಾವ ದಿಕ್ಕಿಗೆ ಪ್ರತಿಷ್ಠಾಪನೆ ಮಾಡಬೇಕೆಂದರೆ ಉತ್ತರ ದಿಕ್ಕಿಗೆ. ಏಕೆಂದರೆ ಲಕ್ಷ್ಮಿಗೆ ತುಂಬಾ ಪ್ರಿಯವಾದ ದಿಕ್ಕು ಉತ್ತರ. ಆದ್ದರಿಂದ ಉತ್ತರ ದಿಕ್ಕಿನಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ಪೂಜೆ ಮಾಡುವವರು ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿಕೊಂಡು ಪೂಜೆಯನ್ನು ಮಾಡಬೇಕು. ಒಂದು ವೇಳೆ ನಿಮ್ಮ ದೇವರಕೋಣೆಯಲ್ಲಿ ಜಾಗದ ತೊಂದರೆ ಇದ್ದರೆ ಪೂರ್ವ ದಿಕ್ಕಿನಲ್ಲಿ ಕುಳಿತುಕೊಂಡು ಪೂಜೆಯನ್ನು ಮಾಡಬಹುದು. ಆದರೆ ಉತ್ತರ ದಿಕ್ಕಿನಲ್ಲಿ ಕುಳಿತುಕೊಂಡು ಪೂಜೆ ಮಾಡುವುದು ತುಂಬಾ ಒಳ್ಳೆಯದು.

    ಲಕ್ಷ್ಮಿ ದೇವಿಯ ಪೂಜೆ ಮಾಡುವುದಕ್ಕೂ ಮೊದಲು ಗಣೇಶನ ಪೂಜೆಯನ್ನು ಮಾಡಬೇಕು ಇದರಿಂದ ಲಕ್ಷ್ಮೀದೇವಿಗೆ ತುಂಬಾ ಇಷ್ಟವಾಗುತ್ತದೆ. ಆದ್ದರಿಂದ ಲಕ್ಷ್ಮೀದೇವಿಯ ಬಲಭಾಗದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಮೊದಲಿಗೆ ಗಣೇಶನ ಪೂಜೆಯನ್ನು ಮಾಡಬೇಕು. ಲಕ್ಷ್ಮೀ ದೇವಿಗೆ ತುಂಬಾ ಪ್ರಿಯವಾದ ಹೂವು ಕಮಲದ ಹೂವು. ಕಮಲದ ಹೂವು ಕೆಲವೊಂದು ಸಲ ಎಲ್ಲಾ ಕಡೆಯೂ ಸಿಗುವುದಿಲ್ಲ, ಆದ್ದರಿಂದ ಕೆಂಪು ಹೂವು,ಮಲ್ಲಿಗೆ ಹೂವು ಈ ರೀತಿ ಸುಗಂಧ ಭರಿತವಾದ ಹೂವುಗಳನ್ನು ಲಕ್ಷ್ಮೀದೇವಿಗೆ ಅರ್ಪಿಸಬೇಕು. ಈ ರೀತಿಯಾಗಿ ಪೂಜೆ ಮಾಡುವುದರಿಂದ ಲಕ್ಷ್ಮೀದೇವಿ ಶಾಶ್ವತವಾಗಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ಹಾಗೂ ನಿಮ್ಮ ಕೋರಿಕೆಗಳನ್ನು ಬಹಳ ಬೇಗ ಈಡೇರಿಸುತ್ತಾಳೆ.ಪ್ರತಿ ಶುಕ್ರವಾರದ ದಿನದಂದು ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡಬೇಕು. ಕೆಂಪು ಹೂವುಗಳಿಂದ, ಕುಂಕುಮದಿಂದ, ಹಸಿರು ಕುಂಕುಮಗಳಿಂದ ಲಕ್ಷ್ಮೀದೇವಿಗೆ ಅರ್ಚನೆಯನ್ನು ಮಾಡಬೇಕು. ಈ ರೀತಿಯಾಗಿ ಹೂವಿನಿಂದ, ಕುಂಕುಮದಿಂದ ಅರ್ಚನೆಯನ್ನು ಮಾಡುವುದರಿಂದ ಲಕ್ಷ್ಮಿ ದೇವಿಯು ಸಂತೃಪ್ತಳಾಗಿ ನಿಮ್ಮ ಮೇಲೆ ತನ್ನ ಅನುಗ್ರಹವನ್ನು ಇರಿಸುತ್ತಾಳೆ ಎಂದರೆ ತಪ್ಪಾಗಲಾರದು.

  • ಗೋಣಿಬೀಡು ಆದಿ ಸುಬ್ರಮಣ್ಯ ಸ್ವಾಮಿಯ ದೇವಸ್ಥಾನದ ಬಗ್ಗೆ ಕಿರು ಪರಿಚಯ.

    ನಾಗದೋಷ ಗಳಿಂದ ಉಂಟಾಗುವ ಸಂತಾನಹೀನತೆ, ಚರ್ಮರೋಗ, ವಿವಾಹ ವಿಳಂಬದ ಸಮಸ್ಯೆಗೆ ಪರಿಹಾರ ಬೇಕೆಂದರೆ ಸುಬ್ರಹ್ಮಣ್ಯಸ್ವಾಮಿಯು ನೆಲೆಸಿರುವ ಕ್ಷೇತ್ರಗಳಲ್ಲಿ ನಾಗಪ್ರತಿಷ್ಠೆ ,ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮುಂತಾದ ಕಾರ್ಯಗಳನ್ನು ನಡೆಸಬೇಕೆಂದು ನಮ್ಮ ಶಾಸ್ತ್ರಗಳು ತಿಳಿಸುತ್ತದೆ. ಕರ್ನಾಟಕದಲ್ಲಿ ಕುಕ್ಕೆ ಸುಬ್ರಮಣ್ಯ, ಘಾಟಿ ಸುಬ್ರಮಣ್ಯ, ನಾಗಲಮಡಿಕೆ ಸೇರಿದಂತೆ ಹಲವಾರು ಸುಬ್ರಮಣ್ಯ ಸ್ವಾಮಿಯ ಪುಣ್ಯ ಕ್ಷೇತ್ರಗಳಿವೆ.ಚಿಕ್ಕಮಗಳೂರಿನ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಹೇಮಾವತಿ ನದಿಯ ತೀರದಲ್ಲಿ ಗೋಣಿಬೀಡು ಎಂಬ ಸುಂದರ ತಾಣವಿದೆ. ಗೋಣಿಬೀಡು ತೀರದಿಂದ ಎರಡು ಕಿಲೋಮೀಟರ್ ದೂರದಲ್ಲಿ ಜಿ ಅಗ್ರಹಾರ ಎಂಬ ಗ್ರಾಮವಿದೆ. ಈ ಗ್ರಾಮ ನಮ್ಮ ಕರ್ನಾಟಕ ರಾಜ್ಯದಲ್ಲಿ ಪುರಾತನ ಸುಬ್ರಹ್ಮಣ್ಯ ಸ್ವಾಮಿಯ ಪುಣ್ಯ ಕ್ಷೇತ್ರದಿಂದ ಪ್ರಖ್ಯಾತಿಯನ್ನು ಪಡೆದು ಕೊಂಡಿದೆ. ಈ ಸುಬ್ರಮಣ್ಯ ಸ್ವಾಮಿಯ ದೇವಸ್ಥಾನವನ್ನು ಆದಿ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯ ,ಮಲೆನಾಡಿನ ಕುಕ್ಕೆ ಸುಬ್ರಮಣ್ಯ ದೇವಾಲಯ ಎಂದು ಕೂಡ ಕರೆಯಲಾಗುತ್ತದೆ.

    ಮಾಘಶುದ್ಧ ಷಷ್ಠಿಯನ್ನು ಕುಮಾರ ಷಷ್ಠಿ ಎಂದು ಕರೆಯಲಾಗುತ್ತದೆ. ಆ ದಿನ ಶ್ರೀ ಆದಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ರಥೋತ್ಸವ ಜರುಗುತ್ತದೆ. ರಥೋತ್ಸವದ ಸಂದರ್ಭದಲ್ಲಿ ಒಂದು ವಿಸ್ಮಯ ನಡೆಯುತ್ತದೆ. ರಥೋತ್ಸವ ಜರುಗುವ ಸಂದರ್ಭದಲ್ಲಿ ಗರುಡ ಪಕ್ಷಿಯು ಬಂದು ರಥವನ್ನು ಮೂರು ಸುತ್ತು ಹಾಕುತ್ತದೆ. ಈ ರೀತಿ ಗರುಡಪಕ್ಷಿ ಮೂರು ಸುತ್ತು ಹಾಕಿದ ನಂತರ ರಥೋತ್ಸವವನ್ನು ಮಾಡಲಾಗುತ್ತದೆ.

    ಹರಿಹರ ರಾಜನು ಮುಂಜಾನೆ ಹೇಮಾವತಿ ತಟದಲ್ಲಿ ಸ್ನಾನ ಮಾಡುತ್ತಿರುವಾಗ ನಾಗರ ವಿಗ್ರಹವು ದೊರೆಯುತ್ತದೆ. ಅದನ್ನು ಹೇಮಾವತಿಯ ದಂಡೆಯಮೇಲೆ ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸು ಎಂದು ಬ್ರಾಹ್ಮಣನು ರಾಜನಿಗೆ ಆಜ್ಞೆಯನ್ನು ಇಟ್ಟು ಅದೃಶ್ಯರಾಗುತ್ತಾರೆ. ರಾಜನು ವೃದ್ಧ ಬ್ರಾಹ್ಮಣನನ್ನು ತಿಳಿಸಿದ ಪ್ರಕಾರದಲ್ಲಿ ಹರಿಹರನು ಮರುದಿನ ಸ್ನಾನಕ್ಕೆ ಇಳಿದಾಗ ಏಳು ಹೆಡೆಯ ಸರ್ಪದ ವಿಗ್ರಹವು ದೊರೆಯುತ್ತದೆ. ನಂತರ ಪುರೋಹಿತರನ್ನು ಕರೆಸಿ ದೇವಾಲಯವನ್ನು ಕಟ್ಟಿಸಿ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ. ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿಯು ಆದಿಶೇಷನ ರೂಪದಲ್ಲಿರುವುದರಿಂದ ಈ ಕ್ಷೇತ್ರವನ್ನು ಆದಿ ಸುಬ್ರಮಣ್ಯ ಸ್ವಾಮಿಯ ಕ್ಷೇತ್ರ ಎಂದು ಹೇಳಲಾಗುತ್ತದೆ.ಚರ್ಮರೋಗದ ಸಮಸ್ಯೆ ಇದ್ದವರು ಈ ಕ್ಷೇತ್ರಕ್ಕೆ ಬಂದು ಹರಕೆಯನ್ನು ಹೊತ್ತುಕೊಂಡರೆ ಚರ್ಮರೋಗದ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಹರಕೆಯು ಮುಗಿದ ನಂತರ ದೇವಾಲಯದಲ್ಲಿ ಸಿಗುವ ಬೆಳ್ಳಿಯ ನಾಗರ ವಿಗ್ರಹವನ್ನು ದೇವರಿಗೆ ಅರ್ಪಿಸಲಾಗುತ್ತದೆ. ಮಕ್ಕಳಿಲ್ಲದ ದಂಪತಿಯರು ಈ ಕ್ಷೇತ್ರಕ್ಕೆ ಆಗಮಿಸಿ ನಾಗಪ್ರತಿಷ್ಠೆ ,ಸರ್ಪಸಂಸ್ಕಾರ ,ಆಶ್ಲೇಷ ಬಲಿ ಮುಂತಾದ ಕಾರ್ಯಕ್ರಮಗಳನ್ನು ಇಲ್ಲಿ ಜರುಗಿಸುತ್ತಾರೆ. ಇದರಿಂದ ಸಂತಾನಭಾಗ್ಯ ಕೂಡಿಬರಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ.

  • ಬಹಳಷ್ಟು ಸಂಕಷ್ಟಗಳ ನಿವಾರಣೆ ಮಾಡುವ ತೆಂಗಿನಕಾಯಿಯ ಬಗ್ಗೆ ತಿಳಿದಿದೆಯೇ ನಿಮಗೆ ?

    ಬಹಳಷ್ಟು ಸಂಕಷ್ಟಗಳ ನಿವಾರಣೆ ಮಾಡುವ ತೆಂಗಿನಕಾಯಿಯ ಬಗ್ಗೆ ತಿಳಿದಿದೆಯೇ ನಿಮಗೆ ? ಸಾಮಾನ್ಯವಾಗಿ ಧಾರ್ಮಿಕ ಕಾರ್ಯಗಳನ್ನು ನಡೆಸಬೇಕಾದರೆ ಮುಖ್ಯವಾಗಿ ಬೇಕಾಗಿರುವ ವಸ್ತುಗಳು ಅರಿಶಿನ, ಕುಂಕುಮ ಹಾಗೂ ತೆಂಗಿನಕಾಯಿ. ಯಾವುದೇ ಧಾರ್ಮಿಕ ಕಾರ್ಯವಾಗಲಿ ಅಥವಾ ಪೂಜೆಯಾಗಲಿ ನಾವು ಭಗವಂತನಲ್ಲಿ ಸಮರ್ಪಿಸಿ ಕೊಳ್ಳಬೇಕಾದರೆ ಈ ವಸ್ತುಗಳು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ತೆಂಗಿನಕಾಯಿ ಬರೀ ಪೂಜೆಗೆ ಮಾತ್ರವಲ್ಲದೆ ನಕಾರಾತ್ಮಕ ಶಕ್ತಿಯನ್ನು ಹೊರಹಾಕುವ ಶಕ್ತಿಯನ್ನು ಹೊಂದಿದೆ. ಜೀವನದಲ್ಲಿ ಇರುವಂತಹ ವಿವಿಧ ರೀತಿಯ ಸಂಕಷ್ಟಗಳನ್ನು ತೆಂಗಿನಕಾಯಿಯ ಮುಖಾಂತರ ಬಗೆಹರಿಸಿಕೊಳ್ಳಬಹುದು. ಹಾಗಾದರೆ ತೆಂಗಿನಕಾಯಿ ಇಂದ ಯಾವ ರೀತಿಯ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ತೆಂಗಿನಕಾಯಿ ಮೇಲೆ ಕುಂಕುಮದಿಂದ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಇಟ್ಟು ಬಂದರೆ ಬಹಳ ಬೇಗ ಫಲಗಳು ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಜಾತಕದಲ್ಲಿ ಶನಿ, ರಾಹು ಹಾಗೂ ಕೇತು ದೋಷಗಳು ನಿಮ್ಮನ್ನು ಕಾಡುತ್ತಿದ್ದರೆ ಒಣಗಿದ ತೆಂಗಿನಕಾಯಿಯನ್ನು ತೆಗೆದುಕೊಂಡು ಬಾಯಿಯ ಆಕಾರದಲ್ಲಿ ಕಟ್ ಮಾಡಿ, ಅದರ ಒಳಗೆ ಒಣಗಿದ ಐದು ಬಗೆಯ ಹಣ್ಣುಗಳನ್ನು ಹಾಗೂ 5 ಸಕ್ಕರೆ ಅಚ್ಚನ್ನು ಹಾಕಿ ತೆಂಗಿನಕಾಯಿಯ ಬಾಯನ್ನು ಮುಚ್ಚಿಟ್ಟು ಅಶ್ವತ್ ಕಟ್ಟೆಗೆ ಹೋಗಿ ಅಲ್ಲಿ ಮಣ್ಣನ್ನು ಅಗೆದು ಆ ಜಾಗದಲ್ಲಿ ತೆಂಗಿನಕಾಯಿಯನ್ನು ಮುಚ್ಚಿಟ್ಟು ಬನ್ನಿ. ತೆಂಗಿನಕಾಯಿಯನ್ನು ಮುಚ್ಚಿಟ್ಟ ನಂತರ ಹಿಂದೆ ತಿರುಗಿ ನೋಡದೆ ಅಶ್ವಥ್ ಕಟ್ಟೆಯಿಂದ ಮನೆಗೆ ಬನ್ನಿ.

    ಶುಕ್ರವಾರವೂ ಮಹಾಲಕ್ಷ್ಮಿಯ ದಿನವಾಗಿದ್ದು, ಒಂದು ವೇಳೆ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳು ಕಾಡುತ್ತಿದ್ದರೆ ಶುಕ್ರವಾರದ ದಿನ ಲಕ್ಷ್ಮಿಯ ದೇವಸ್ಥಾನಕ್ಕೆ ಹೋಗಿ ಜುಟ್ಟು ಇರುವ ತೆಂಗಿನಕಾಯಿಯನ್ನು ತೆಗೆದುಕೊಂಡು ಗುಲಾಬಿ ಕಮಲದ ಹೂವು, ಬಿಳಿಬಟ್ಟೆ ಹಾಗೂ ಮೊಸರನ್ನು ನೈವೇದ್ಯವಾಗಿ ಸಮರ್ಪಿಸಿ ದೇವರಿಗೆ ಕರ್ಪೂರದ ಆರತಿಯನ್ನು ಮಾಡಬೇಕು. ಈ ರೀತಿ ಶುಕ್ರವಾರದ ದಿನದಂದು ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ.

    ಯಾವುದೇ ಕೆಲಸವನ್ನು ಮಾಡಬೇಕಾದರೆ ಶ್ರದ್ಧೆ, ಭಕ್ತಿ ಮುಖ್ಯವಾಗಿರುತ್ತದೆ. ಆದ್ದರಿಂದ ಯಾವುದೇ ಪೂಜೆಯನ್ನು ಮಾಡಬೇಕಾದರೂ ನಂಬಿಕೆಯಿಂದ, ಶ್ರದ್ಧೆ , ಭಕ್ತಿಯಿಂದ ಪೂಜೆ ಮಾಡಿದರೆ ಜೀವನದಲ್ಲಿ ಅಡೆತಡೆಗಳು ದೂರವಾಗಿ ಯಶಸ್ಸನ್ನು ಕಾಣಬಹುದು.

  • ದೇವರ ಮುಂದೆ ಈ ರೀತಿ ಬೇಡಿಕೊಳ್ಳುವುದರಿಂದ ಕೋರಿಕೆಗಳು ಅಥವಾ ಇಷ್ಟಾರ್ಥಗಳು ಬಹುಬೇಗ ಪಲಿಸುತ್ತದೆ.

    ದೇವರ ಮುಂದೆ ಈ ರೀತಿ ಬೇಡಿಕೊಳ್ಳುವುದರಿಂದ ಕೋರಿಕೆಗಳು ಅಥವಾ ಇಷ್ಟಾರ್ಥಗಳು ಬಹುಬೇಗ ಪಲಿಸುತ್ತದೆ..ಜೀವನದಲ್ಲಿ ಕಷ್ಟ ಬಂದಾಗ ಪ್ರತಿಯೊಬ್ಬರು ಬೇಡಿಕೊಳ್ಳುವುದು ದೇವರಲ್ಲಿ. ಹಾಗೆಯೇ ಇನ್ನು ಕೆಲವರು ತಮ್ಮ ಕಷ್ಟಗಳು ಹಾಗೂ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಹರಕೆಗಳನ್ನು ಸಹ ಹೊತ್ತುಕೊಳ್ಳುತ್ತಾರೆ. ಕೋರಿಕೆಗಳು ಈಡೇರಿದ ನಂತರ ಕಾಣಿಕೆ ನೀಡುವುದಾಗಿ ಅಥವಾ ಮುಡಿಯನ್ನು ಕೊಡುವುದಾಗಿ ಹರಕೆಯನ್ನು ಹೊತ್ತುಕೊಳ್ಳುವುದು ಉಂಟು.

    ದೇವರ ಮುಂದೆ ನಮ್ಮ ಕಷ್ಟಗಳು ಹಾಗೂ ಇಚ್ಛೆಗಳನ್ನು ಹೇಳಿಕೊಂಡು ನಮ್ಮ ಕೋರಿಕೆಗಳನ್ನು ಇಡೇರಿಸು ಎಂದು ಕೇಳಿಕೊಳ್ಳುತ್ತೇವೆ. ಒಂದು ವೇಳೆ ದೇವರಿಗೆ ಕಾಣಿಕೆ ನೀಡುವುದಾಗಿಯೂ ಅಥವಾ ಮುಡಿಯನ್ನು ಕೊಡುವುದಾಗಿ ಹೇಳಿದರೆ ದೇವರಿಗೆ ಲಂಚ ಕೊಟ್ಟಂತೆ ಆಗುತ್ತದೆ, ಹಾಗಾಗಿ ನಿಮಗೇನಾದರೂ ಕಷ್ಟಗಳು ಇದ್ದರೆ ಭಕ್ತಿಯಿಂದ ದೇವರನ್ನು ಬೇಡಿಕೊಳ್ಳಬೇಕಾಗುತ್ತದೆ.

    ಒಂದು ವೇಳೆ ಉದ್ಯೋಗ ಹುಡುಕುತ್ತಿರುವವರು ಉದ್ಯೋಗ ಸಿಗಲಿ ಎಂದು ದೇವರಿಗೆ ಈ ರೀತಿಯಾಗಿ ಕೇಳಿಕೊಳ್ಳಬೇಕು. ದೇವರೇ ಈ ಉದ್ಯೋಗದ ಅವಶ್ಯಕತೆ ತುಂಬಾ ಇದೆ, ಈ ಕೆಲಸ ಸಿಕ್ಕರೆ ಸ್ವತಂತ್ರವಾಗಿ ನನ್ನ ಬದುಕನ್ನು ನಾನು ಕಟ್ಟಿಕೊಳ್ಳಬಹುದು ಹಾಗೂ ನನ್ನ ಮನೆಯವರಿಗೂ ಸಹ ಸಹಾಯವನ್ನು ಮಾಡಬಹುದು. ಇದರಿಂದ ಮನೆಯಲ್ಲಿರುವ ಕಷ್ಟಗಳು ಸಹ ಕಡಿಮೆಯಾಗುತ್ತದೆ ಆದ್ದರಿಂದ ದಯಮಾಡಿ ಈ ಕೆಲಸ ಸಿಗುವ ಹಾಗೆ ನೋಡಿಕೋ ದೇವರೇ ಎಂದು ಭಕ್ತಿಯಿಂದ ಬೇಡಿಕೊಳ್ಳಬೇಕು.

    ದೇವರು ನಿಮ್ಮ ಕೋರಿಕೆಗಳನ್ನು ಈಡೇರಿಸಿದ ನಂತರ ದೇವರ ಮೇಲೆ ಮುಂಚೆಯಿದ್ದ ಭಕ್ತಿಯ ತರವೇ ಕೋರಿಕೆಗಳು ಈಡೇರಿದ ನಂತರವೂ ಭಕ್ತಿ, ಪೂಜ್ಯಭಾವನೆ ಇರಬೇಕು. ಜೀವನದಲ್ಲಿ ಚೆನ್ನಾಗಿರುವ ವೇಳೆಯಲ್ಲಿ ದೇವರನ್ನು ಭಕ್ತಿಯಿಂದ ಪೂಜಿಸಿದರೆ ಮುಂದಿನ ದಿನಗಳಲ್ಲಿ ಕಷ್ಟಗಳು ಬರುವುದು ಕಡಿಮೆ ಇರುತ್ತದೆ. ಒಂದು ವೇಳೆ ಕೋರಿಕೆಗಳು ಈಡೇರಿದ ನಂತರ ದೇವರ ಬಳಿ ಹೋಗಲೇ ಇಲ್ಲವೆಂದರೆ ದೇವರು ಕಷ್ಟಗಳನ್ನು ಪುನಃ ಕೊಡುತ್ತಾನೆ. ಆದ್ದರಿಂದ ಭಕ್ತಿಯಿಂದ ದೇವರಲ್ಲಿ ಬೇಡಿಕೊಂಡರೆ ಎಂತಹ ಕಷ್ಟಗಳನ್ನು ಮತ್ತು ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬಹುದು.