Kannada Astrology

Category: ಜ್ಯೋತಿಷ್ಯ

  • ಹಣದ ಸಮಸ್ಯೆ ನಿವಾರಣೆಯಾಗಿ ಧನ ಸಂಪತ್ತು ವೃದ್ಧಿ ಆಗಬೇಕೆಂದರೆ ಈ ಮಂತ್ರವನ್ನು ಪಠಿಸಿ

    ಪ್ರತಿಯೊಬ್ಬರ ಜೀವನದಲ್ಲೂ ಹಣವು ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ, ಏಕೆಂದರೆ ಹಣವಿಲ್ಲದಿದ್ದರೆ ಯಾವ ಕೆಲಸ ಕಾರ್ಯಗಳನ್ನು ಹಾಗೂ ಜೀವನದಲ್ಲಿ ಯಾವುದನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಇನ್ನೂ ಹಲವರು ತಮಗಿರುವ ಹಲವಾರು ಕಷ್ಟಗಳಿಂದ ಹೊರಬಂದು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ವೃದ್ಧಿಸಿಕೊಳ್ಳಲು ತುಂಬಾ ಕಷ್ಟಪಡುತ್ತಿರುತ್ತಾರೆ. ಹಾಗಾದರೆ ಹಣದ ಸಮಸ್ಯೆಯನ್ನು ದೂರ ಮಾಡಬೇಕೆಂದರೆ ಕುಬೇರನ ಯಾವ ಮಂತ್ರವನ್ನು ಪಠಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಕುಬೇರನ ಈ ಮಂತ್ರವನ್ನು ಪ್ರತಿನಿತ್ಯ ಪೂಜೆಯ ಸಮಯದಲ್ಲಿ ಹೇಳುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಹಾಗೂ ಹಣದ ಹರಿವು ಕೂಡ ಹೆಚ್ಚಾಗುತ್ತದೆ ಎಂದರೆ ತಪ್ಪಾಗಲಾರದು. ಕುಬೇರನ ಈ ಮಂತ್ರವು ಬಹಳ ಶಕ್ತಿಶಾಲಿಯಾದ ಮಂತ್ರವಾಗಿದ್ದು, ಇದರಿಂದ ಯಾವುದೇ ರೀತಿಯ ಹಣದ ಸಮಸ್ಯೆ ಇದ್ದರೂ ಈ ಮಂತ್ರವನ್ನು ಪಠಿಸುವುದರಿಂದ ಕುಬೇರ ದೇವರು ಸಂತುಷ್ಟನಾಗಿ ನಿಮ್ಮ ಜೀವನದಲ್ಲಿ ಇರುವಂತ ಕಷ್ಟಗಳು ಹಾಗೂ ಹಣದ ಸಮಸ್ಯೆ ದೂರವಾಗಿ ಆರ್ಥಿಕ ಪರಿಸ್ಥಿತಿಯೂ ಸುಧಾರಣೆಯಾಗುತ್ತದೆ. ಕುಬೇರನ ಈ ಮಂತ್ರವನ್ನು ವಿಶೇಷವಾಗಿ ಮಂಗಳವಾರ ಹಾಗೂ ಶುಕ್ರವಾರ ದಿನದಂದು ಪಠಿಸಿದರೆ ತುಂಬಾ ಒಳ್ಳೆಯದು. ಒಂದು ವೇಳೆ ಈ ಮಂತ್ರವನ್ನು ಪ್ರತಿನಿತ್ಯ ಪಠಿಸಿದರೂ ಯಾವುದೇ ತೊಂದರೆ ಇಲ್ಲ.

    ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಕ್ಲೀಂ ವಿತ್ತೇಶ್ವರಾಯ ನಮಃ

    ಈ ಮೇಲಿನ ಕುಬೇರನ ಮಂತ್ರವನ್ನು ದೇವರಕೋಣೆಯಲ್ಲಿ ದೀಪವನ್ನು ಹಚ್ಚಿದ ನಂತರ ಗಣೇಶನ ಪೂಜೆಯನ್ನು ಮಾಡಿ ಕುಬೇರನ ಮಂತ್ರವನ್ನು ಪಠಿಸಬೇಕು.ಕುಬೇರನ ಮಂತ್ರವನ್ನು ಮಂಗಳವಾರ ಹಾಗೂ ಶುಕ್ರವಾರದಂದು 108 ಬಾರಿ ಪಠಿಸಬೇಕು. ಕುಬೇರನ ಈ ಮಂತ್ರವನ್ನು ಪಠಿಸುವುದರಿಂದ ಹಣದ ಸಮಸ್ಯೆಯು ದೂರವಾಗಿ ಆರ್ಥಿಕ ಪರಿಸ್ಥಿತಿಯು ಏಳಿಗೆಯನ್ನು ಕಾಣುತ್ತದೆ. ಆದ್ದರಿಂದ ಕುಬೇರನ ಮಂತ್ರವನ್ನು ಪ್ರತಿನಿತ್ಯ ಪೂಜೆ ಮಾಡುವ ಸಮಯದಲ್ಲಿ ಮರೆಯದೆ ಜಪಿಸಿದರೆ ಕುಬೇರನ ಅನುಗ್ರಹದಿಂದ ಕಷ್ಟಗಳೆಲ್ಲಾ ನಿವಾರಣೆಯಾಗಿ, ಹಣದ ಹರಿವು ಹೆಚ್ಚಾಗಿ ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಕುಟುಂಬದ ಜೊತೆ ಜೀವನವನ್ನು ನಡೆಸಬಹುದು ಎಂದರೆ ತಪ್ಪಾಗಲಾರದು.

  • ಚಿಕ್ಕಮಗಳೂರಿನ ಸೀತಾಳಯ್ಯನಗಿರಿ ಬೆಟ್ಟದ ಬಗ್ಗೆ ಕಿರು ಪರಿಚಯ.

    ಹಿಮಾಲಯ ಹಾಗೂ ನೀಲಗಿರಿ ಬೆಟ್ಟದ ಮಧ್ಯದ ಪ್ರದೇಶದಲ್ಲಿ ಇರುವ ಅತಿ ಎತ್ತರದ ಪರ್ವತ ಮುಳ್ಳಯ್ಯನಗಿರಿ. ಸಮುದ್ರಮಟ್ಟದಿಂದ 6312 ಅಡಿ ಎತ್ತರವಿರುವ ಮುಳ್ಳಯ್ಯನಗಿರಿ ಕರ್ನಾಟಕದ ಅತಿ ಎತ್ತರವಾದ ಪರ್ವತ. ಮುಳ್ಳಯ್ಯ ಸ್ವಾಮಿಯ ಗದ್ದುಗೆಯನ್ನು ಸಹ ಹೊಂದಿರುವ ಮುಳ್ಳಯ್ಯನಗಿರಿಗೆ ಭಕ್ತಾದಿಗಳು ಹೆಚ್ಚಾಗಿ ಆಗಮಿಸುತ್ತಿರುತ್ತಾರೆ. ಮುಳ್ಳಯ್ಯನಗಿರಿಗೂ ಮುಂಚೆ ಒಂದು ಪ್ರವಾಸಿತಾಣವೂ ಸಿಗಲಿದೆ ಹಾಗೂ ಮುಳ್ಳಯ್ಯನಗಿರಿಗೆ ಬರುವ ಭಕ್ತಾದಿಗಳು ಮೊದಲು ಅಲ್ಲಿಯ ಧಾರ್ಮಿಕ ಕ್ಷೇತ್ರವಾದ ಅಲ್ಲಿ ದೇವರ ದರ್ಶನವನ್ನು ಪಡೆದು ಮುಂದೆ ಸಾಗಬೇಕು ಎಂಬುದು ಅಲ್ಲಿಯ ಸ್ಥಳೀಯರ ಪದ್ಧತಿ. ಧಾರ್ಮಿಕ ಕ್ಷೇತ್ರವಾಗಿರುವ ಸೀತಾಳಯ್ಯನಗಿರಿ ಮುಳ್ಳಯ್ಯನಗಿರಿಯಷ್ಟೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ.ಮುಳ್ಳಯ್ಯನಗಿರಿ ತಲುಪುವ ಮೊದಲೇ ಸಿಗುವ ಗಿರಿಧಾಮ ಸೀತಾಳಯ್ಯನಗಿರಿ. ಸೀತಾಳಯ್ಯನ ಗಿರಿಯಲ್ಲಿ ಒಂದು ಮಠ ಹಾಗೂ ಸೀತಾಳ ಮಲ್ಲಿಕಾರ್ಜುನ ದೇವಸ್ಥಾನವನ್ನು ಹೊಂದಿದೆ. ಮುಳ್ಳಯ್ಯನಗಿರಿಗೆ ಹೋಗುವವರು ಮೊದಲು ಸೀತಾಳ ಮಲ್ಲಿಕಾರ್ಜುನರ ದರ್ಶನವನ್ನು ಪಡೆದು ನಂತರ ಮುಳ್ಳಯ್ಯನಗಿರಿ ಹೋಗುತ್ತಾರೆ. ಸೀತಾಳ ಮಲ್ಲಿಕಾರ್ಜುನಯ್ಯ ಅಲೆಯು ಶಿವನಿಗೆ ಮುಡಿಪಾಗಿದೆ. ಸೀತಾಳ ಮಲ್ಲಿಕಾರ್ಜುನ ವಿಗ್ರಹವು ಯಾವಾಗಲೂ ನೀರಿನಿಂದ ಆವೃತವಾಗಿರುತ್ತದೆ. ಅರ್ಚಕರು ಪೂಜೆ ಮಾಡುವಾಗ ವಿಗ್ರಹ ಸುತ್ತ ನೀರು ತುಂಬಿಕೊಳ್ಳುವುದು ಭಕ್ತಾದಿಗಳಿಗೆ ನೋಡಲು ಸಿಗುತ್ತದೆ. ಈ ದೇವಾಲಯದಿಂದ ಈ ಸ್ಥಳಕ್ಕೆ ಸೀತಾಳಯ್ಯನಗಿರಿ ಎಂಬ ಹೆಸರು ಕೂಡಾ ಬಂದಿದೆ.ಸೀತಾಳ ಮಲ್ಲಿಕಾರ್ಜುನ ಆಲಯದ ಎಡಭಾಗದಲ್ಲಿ ಒಂದು ಗುಹೆ ಇದೆ, ಈ ಗುಹೆಯು ಮುಳ್ಳಯ್ಯನಗಿರಿ ಬೆಟ್ಟದ ಮೇಲಿರುವ ಮುಳ್ಳಯ್ಯ ಸ್ವಾಮಿಯ ಗದ್ದುಗೆಗೆ ಸಂಪರ್ಕವನ್ನು ಕಲ್ಪಿಸುತ್ತದೆ ಎನ್ನಲಾಗುತ್ತದೆ. ಸೀತಾಳಯ್ಯನಗಿರಿ ಇಂದ ಮುಳ್ಳಯ್ಯನಗಿರಿಗೆ ತಲುಪಲು ರಸ್ತೆ ಮಾರ್ಗದ ಜೊತೆಗೆ ಕಾಲುದಾರಿಯ ಸಹ ಇದೆ. ಬಹಳಷ್ಟು ಭಕ್ತಾದಿಗಳು ಸೀತಾಳಯ್ಯನ ಗಿರಿಯಲ್ಲಿ ವಾಹನವನ್ನು ನಿಲ್ಲಿಸಿ ಅಲ್ಲಿಂದ 3 ಕಿಲೋಮೀಟರ್ ಕಾಲುದಾರಿಯಲ್ಲಿ ನಡೆದು ಮುಳ್ಳಯ್ಯನಗಿರಿಯನ್ನು ತಲುಪುತ್ತಾರೆ. ಈ ಸ್ಥಳದಲ್ಲಿ ಹಲವಾರು ಕನ್ನಡ ಸಿನಿಮಾದ ಚಿತ್ರೀಕರಣವೂ ಸಹ ನಡೆದಿದೆ. ಸೀತಾಳಯ್ಯನಗಿರಿಯು ಚಿಕ್ಕಮಗಳೂರಿನಿಂದ 19 ಕಿಲೋಮೀಟರ್ ದೂರವಿದೆ. ಕ್ಷಣ ಕ್ಷಣಕ್ಕೂ ಬದಲಾಗುವ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೀತಾಳಯ್ಯನಗಿರಿಗೆ ಆಗಮಿಸುತ್ತಾರೆ ಎಂದರೆ ತಪ್ಪಾಗಲಾರದು.

  • ಈ 3 ಹೆಸರಿನ ಹುಡುಗಿಯರನ್ನು ಮದುವೆಯಾದರೆ ಗಂಡನ ಅದೃಷ್ಟವೇ ಬದಲಾಗುತ್ತದೆ.

    ವ್ಯಕ್ತಿಯ ರಾಶಿ, ಜನ್ಮ ನಕ್ಷತ್ರ, ಕುಂಡಲಿಯ ಮೂಲಕ ಮುಂಬರುವ ಸಮಯದ ಬಗ್ಗೆ ತಿಳಿಯಲಾಗುತ್ತದೆ. ಆ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾನೋ ಅಥವಾ ಇಲ್ಲವೋ ಹಾಗೂ ಮುಂದಿನ ದಿನಗಳಲ್ಲಿ ಹೇಗೆ ಜೀವನವನ್ನು ನಡೆಸುತ್ತಾನೆ ಎಂಬುದು ಸಹ ತಿಳಿಯುತ್ತದೆ.ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದಲೇ ವ್ಯಕ್ತಿಯ ಸ್ವಭಾವ, ನಡವಳಿಕೆ ಹಾಗೂ ಹೇಗಿರುತ್ತಾನೆ ಎಂಬುದು ತಿಳಿಯುತ್ತದೆ. ಹೆಸರಿನ ಮೊದಲನೆಯ ಅಕ್ಷರವು ವ್ಯಾಪಾರದಲ್ಲಿ ಹಾಗೂ ಜೀವನದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಶಾಸ್ತ್ರಗಳ ಪ್ರಕಾರ ಕೆಲವೊಂದು ಹೆಸರನ್ನು ಇಟ್ಟುಕೊಂಡವರು ತುಂಬಾ ಅದೃಷ್ಟಶಾಲಿಗಳು ಆಗಿರುತ್ತಾರೆ. ಅಂತಹ ವ್ಯಕ್ತಿಯ ಜೀವನ ತುಂಬಾ ಸುಂದರವಾಗಿರುತ್ತದೆ ಆದರೆ ಈ ವ್ಯಕ್ತಿಯು ಯಾರ ಜೊತೆಗೆ ವಿವಾಹವಾಗುತ್ತಾನೋ ಅವರಿಗೂ ಅದೃಷ್ಟವನ್ನು ಹಾಗೂ ಸಂತಸವನ್ನು ತಂದುಕೊಡುತ್ತದೆ. ಹಾಗಾದರೆ ಆ ಮೂರು ಹೆಸರಿನ ಹುಡುಗಿಯರು ಯಾರು ಎಂದು ತಿಳಿದುಕೊಳ್ಳೋಣ ಬನ್ನಿ.‘ಅ’ ಅಕ್ಷರದಿಂದ ಶುರುವಾಗುವ ಹುಡುಗಿಯರು ಗಂಡನಿಗೆ ತುಂಬಾ ಭಾಗ್ಯವನ್ನು ತಂದುಕೊಡುತ್ತಾರೆ. ಈ ಅಕ್ಷರದ ಹೆಣ್ಣು ಮಕ್ಕಳು ಮಾತಿನಿಂದ ಹಾಗೂ ಮನಸ್ಸಿನಿಂದ ಸಂತೋಷವನ್ನು ತಂದುಕೊಡುತ್ತಾರೆ. ಇವರ ಒಳ್ಳೆಯ ಗುಣದಿಂದ ಎಲ್ಲರನ್ನು ಬೇಗ ಇವರ ಹತ್ತಿರ ಆಕರ್ಷಿಸಿಕೊಳ್ಳುತ್ತಾರೆ. ಈಕೆಯು ತನ್ನ ಗಂಡನಿಗಾಗಿ ಎಷ್ಟು ಬೇಕಾದರೂ ಶ್ರಮವನ್ನು ತೆಗೆದುಕೊಳ್ಳುತ್ತಾರೆ ಹಾಗೂ ಕುಟುಂಬವನ್ನು ಸಂತೋಷದಿಂದ ಸರಿದೂಗಿಸಿಕೊಂಡು ಹೋಗುತ್ತಾರೆ.

    ‘ಸ’ ಅಕ್ಷರದಿಂದ ಶುರುವಾಗುವ ಹುಡುಗಿಯರು ತುಂಬಾ ಸುಂದರವಾಗಿರುತ್ತಾರೆ ಹಾಗೂ ತುಂಬಾ ಮೃದು ಮನಸ್ಸಿನವರು ಆಗಿರುತ್ತಾರೆ. ಇಂಥ ಹುಡುಗಿಯರ ಜೊತೆ ಯಾವ ಹುಡುಗನ ಮದುವೆಯಾಗುತ್ತದೆಯೋ ಅವನು ತುಂಬಾ ಭಾಗ್ಯಶಾಲಿ ಆಗಿರುತ್ತಾನೆ ಹಾಗೂ ಅದೃಷ್ಟವಂತನೂ ಆಗಿರುತ್ತಾನೆ. ಈಕೆ ತಮ್ಮ ಸಂಗಾತಿಯೊಂದಿಗೆ ತುಂಬಾ ಪ್ರಾಮಾಣಿಕತೆಯಿಂದ ಇರುತ್ತಾರೆ.‘ಪ’ ಅಕ್ಷರದಿಂದ ಶುರುವಾಗುವ ಹುಡುಗಿಯರಲ್ಲಿ ಸ್ವಲ್ಪ ಸಿಡುಕುತನ ಇರುತ್ತದೆ, ಆದರೆ ಬೇಗನೆ ಸಮಾಧಾನಗೊಳ್ಳುತ್ತಾರೆ. ಈಕೆಯು ತಮ್ಮ ಪತಿಯನ್ನು ತುಂಬಾ ಪ್ರೀತಿಸುತ್ತಾರೆ ಹಾಗೂ ಇವರ ಜ್ಞಾಪಕಶಕ್ತಿಯು ತುಂಬಾ ಚೆನ್ನಾಗಿರುತ್ತದೆ. ಈಕೆ ತಮ್ಮ ಕುಟುಂಬದ ಬಗ್ಗೆ ಹೆಚ್ಚಾಗಿ ಕಾಳಜಿಯನ್ನು ವಹಿಸುತ್ತಾರೆ. ಗಂಡನ ಯಶಸ್ಸಿಗಾಗಿ ಯಾವುದೇ ಕಷ್ಟ ಬಂದರೂ ಹೆದರುವುದಿಲ್ಲ ಹಾಗೂ ಅಂದುಕೊಂಡಂತ ಕೆಲಸ ಕಾರ್ಯಗಳನ್ನು ಯಾವುದೇ ಕಾರಣಕ್ಕೂ ಮುಗಿಸದೇ ಬಿಡುವುದಿಲ್ಲ.

  • ಶ್ರೀ ಶಕ್ತಿ ಆಂಜನೇಯ ಸ್ವಾಮಿಯ ಆಶೀರ್ವಾದ ಆಷಾಢದಿಂದ ರಾಜಯೋಗ ಪ್ರಾರಂಭ ದಿನಭವಿಷ್ಯ..

    ಮೇಷ:- ನಿಮ್ಮಲ್ಲಿನ ಆತ್ಮವಿಶ್ವಾಸ ಮತ್ತು ನಿಮ್ಮ ಬಗೆಗಿನ ನಂಬಿಕೆ ಸ್ಥೈರ್ಯ ಧೈರ್ಯಗಳು ನಿಮಗೆ ಅನುಕೂಲವಾಗುವವು. ನೀವು ನಡೆಯುವ ದಾರಿಯಲ್ಲಿ ಯಾವುದೇ ಅಡೆತಡೆಗಳು ಕಂಡುಬರುವುದಿಲ್ಲ. ನಿಮ್ಮ ಸಹಾಯಕ್ಕೆ ಸ್ನೇಹಿತರು ನಿಮ್ಮೊಂದಿಗೆ ಹೆಜ್ಜೆ ಹಾಕುವರು.

    ವೃಷಭ:- ನಿಮ್ಮ ಮನಸ್ಸಿಗೆ ಸಂತೋಷ ಎನಿಸುವ ಕಾರ್ಯವು ಪೂರ್ಣಗೊಳ್ಳುವುದು. ಮಕ್ಕಳು ವಿದ್ಯಾಕಲಿಕೆಯಲ್ಲಿ ಪ್ರಗತಿ ತೋರಿ ನಿಮಗೆ ಹರ್ಷವನ್ನುಂಟು ಮಾಡುವರು. ಹಿರಿಯರ ಆಶೀರ್ವಾದವು ಬೇಗನೆ ದೊರೆಯುವುದು.

    ಮಿಥುನ:- ಬಹು ನಿರೀಕ್ಷಿತವಾದ ದೂರ ಪ್ರವಾಸ ಕುರಿತು ಮಾಹಿತಿ ಲಭ್ಯವಾಗುವುದು. ಆ ಮೂಲಕ ನಿಮ್ಮ ಬಹುದಿನದ ಕನಸು ನನಸಾಗುವುದು. ಹಣಕಾಸಿನ ಪರಿಸ್ಥಿತಿಯು ಅದಕ್ಕೆ ಪೂರಕವಾಗಿ ಲಭ್ಯವಾಗುವುದರಿಂದ ಹೆಚ್ಚು ಚಿಂತೆ ಪಡುವ ಅಗತ್ಯವಿಲ್ಲ.

    ಕಟಕ:- ಪರೋಪಕಾರಾರ್ಥಂ ಇದಂ ಶರೀರಂ ಎಂದು ಭಾವಿಸಿರುವ ನೀವು ಅನೇಕ ಜನರಿಗೆ ಸಹಾಯ ಹಸ್ತ ನೀಡುವಿರಿ. ಈ ನಿಮ್ಮ ಮನೋಭಾವನೆಯು ಸರ್ವ ಜನರಿಂದ ಮೆಚ್ಚುಗೆಗೆ ಪಾತ್ರವಾಗುವುದು. ಆದರೆ ಮಾತಿನಲ್ಲಿ ನಯ, ವಿನಯ ಇರಲಿ.

    ಸಿಂಹ:- ದೈಹಿಕ ಬಲದ ಜೊತೆಗೆ ಬುದ್ಧಿಯ ತೇಜಸ್ಸು ಹರಿತವಾದ್ದರಿಂದ ನಿಮ್ಮ ಊಹೆ ತರ್ಕಗಳು ಸರಿ ಎನಿಸುವುದು. ಇದರಿಂದ ನಿಮ್ಮ ಆಪ್ತರಿಂದ ಮೆಚ್ಚುಗೆಯನ್ನು ಪಡೆಯುವಿರಿ. ಆದರೆ ಕುಟುಂಬದ ಸದಸ್ಯರಿಂದ ಮೂದಲಿಕೆಗೆ ಗುರಿ ಆಗುವಿರಿ.

    ಕನ್ಯಾ:- ಎಷ್ಟೇ ಬುದ್ಧಿಶಾಲಿಯಾದರೂ ಎಲ್ಲಾ ವಿಷಯಗಳಲ್ಲೂ ಅಥವಾ ಎಲ್ಲಾ ರಂಗದಲ್ಲೂ ನೀವೇನು ಸರ್ವಜ್ಞರಲ್ಲ. ಹಾಗಾಗಿ ಅನ್ಯರ ಅನುಭವ ಮತ್ತು ಹಿತವಚನಗಳನ್ನು ಆಲಿಸಿದಲ್ಲಿ ನಿಮಗೆ ಒಳಿತಾಗುವುದು. ಆದಾಗ್ಯೂ ಜನರಲ್ಲಿ ನಿಮ್ಮ ಬಗ್ಗೆ ಗೌರವವಿರುತ್ತದೆ.

    ತುಲಾ:- ಹೊಸ ಜನರ ಪರಿಚಯದೊಂದಿಗೆ ಹೊಸದಾದ ಜವಾಬ್ದಾರಿ ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ರಾಜಕೀಯ ಇಲ್ಲವೆ ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆತು ಅದರಿಂದ ನಿಮ್ಮ ವ್ಯಾಪಾರ, ವ್ಯವಹಾರಗಳಿಗೆ ಹೆಚ್ಚಿನ ಅನುಕೂಲವಾಗುವವು.

    ವೃಶ್ಚಿಕ:- ನಿಮ್ಮ ಮಕ್ಕಳು ನಿಮಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರೆ ಅದರ ಹಿಂದೆ ಯಾವುದೋ ಮಹತ್ತರ ಬಯಕೆ ಈಡೇರಿಸಿಕೊಳ್ಳುವ ಇರಾದೆ ಇರುತ್ತದೆ. ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಅವರಿಗೆ ಸಹಾಯ ಮಾಡಿ. ಅವರೂ ಖುಷಿ ಪಡುವರು.

    ಧನುಸ್ಸು:- ನಿಮ್ಮ ಸಮಸ್ಯೆಗಳೇ ಸಾಕಷ್ಟು ಇರುವಾಗ ಪರರ ಸಂಕಷ್ಟಗಳಿಗೆ ಮರುಗಿ ಸಹಾಯ ಮಾಡಲು ಹೋಗಿ ನೀವೇ ಸಿಕ್ಕಿಹಾಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.

    ಮಕರ:- ಸರಿದಾರಿಯಲ್ಲಿದ್ದರೂ ಆಪ್ತರಿಂದ ಸಲಹೆ ಸೂಚನೆ ಪಡೆಯಿರಿ. ನಿಮ್ಮ ಆಂತರಿಕ ತುಮುಲಗಳ ನಿವಾರಣೆಗಾಗಿ ಮನೋನಿಯಾಮಕ ರುದ್ರದೇವರಲ್ಲಿ ಪ್ರಾರ್ಥಿಸಿಕೊಳ್ಳಿ. ನಿರುದ್ಯೋಗಿಗಳಿಗೆ ಸಣ್ಣಪುಟ್ಟ ನೌಕರಿ ದೊರೆಯುವ ಸಂಭವವಿರುತ್ತದೆ.

    ಮೀನ:- ನಿಮಗೆ ನೀವೇ ಗುರುವಾಗಿ ನಿಮ್ಮ ಇತಿಮಿತಿಯ ಬಗ್ಗೆ ತಿಳಿಯಿರಿ. ಇದರಿಂದ ಸಮಾಜದಲ್ಲಿ ನಿಮಗೆ ಗೌರವ ದೊರೆಯುವುದು. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ. ಹಾಗಾಗಿ ಹಣ ಖರ್ಚಿನ ಬಗ್ಗೆ ಕೈಬಿಗಿ ಹಿಡಿತವಿರಲಿ.

  • ಬೀರುವಿನ ಒಳಗೆ ಯಾವ ವಸ್ತುವನ್ನು ಇಟ್ಟರೆ ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?

    ಸಾಮಾನ್ಯವಾಗಿ ಬೀರುವನ್ನು ಕುಬೇರನ ಸ್ಥಾನವಾದ ಉತ್ತರದಿಕ್ಕಿನಲ್ಲಿ ಇಟ್ಟುಕೊಳ್ಳುತ್ತೇವೆ. ಲಕ್ಷ್ಮಿ ಹಾಗೂ ಕುಬೇರರ ದಿಕ್ಕಾಗಿರುವ ಉತ್ತರ ದಿಕ್ಕಿನ ಕಡೆ ಬೀರುವನ್ನು ಇಡುವುದರಿಂದ ಲಕ್ಷ್ಮೀದೇವಿಯ ಹಾಗೂ ಕುಬೇರನ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಬೀರುವಿನ ಒಳಗೆ ಯಾವ ವಸ್ತುವನ್ನು ಇಟ್ಟರೆ ಲಕ್ಷ್ಮೀದೇವಿ ಅನುಗ್ರಹದಿಂದ ಧನ ಸಂಪತ್ತು ವೃದ್ಧಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.ಬೀರುವಿನ ಒಳಗೆ ಬಿಳಿಯ ವಸ್ತ್ರದ ಮೇಲೆ ಅತಾರ್ ಎಂಬುವ ಸುಗಂಧ ದ್ರವ್ಯವನ್ನು ಲೇಪಿಸಿ ಅದರ ಮೇಲೆ ಹಣ,ಚಿನ್ನಾಭರಣ ಹಾಗೂ ಮುಖ್ಯವಾದ ಹಾಗೂ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಳ್ಳಬಹುದು. ಬಿಳಿ ವಸ್ತ್ರದ ಮೇಲೆ ಚಿನ್ನಾಭರಣ,ನಾಣ್ಯಗಳು,ಹಣ ಹಾಗೂ ಮುಖ್ಯವಾದ ಕಾಗದ ಪತ್ರಗಳು ಹೀಗೆ ಎಲ್ಲವನ್ನೂ ಒಟ್ಟಿಗೆ ಇಡಬಾರದು ಅದರ ಬದಲು ಒಂದೊಂದು ವಸ್ತುವನ್ನು ಒಂದೊಂದು ಕಡೆ ಬೇರೆ ಬೇರೆಯಾಗಿ ಇಡಬೇಕು.

    ಬೀರುವಿನ ಒಳಗೆ ಪಚ್ಚ ಕರ್ಪೂರವನ್ನು ಇಡುವುದರಿಂದ ಲಕ್ಷ್ಮೀದೇವಿ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಪಚ್ಚಕರ್ಪೂರದ ಜೊತೆಗೆ ಲಾವಂಚದ ಬೇರನ್ನು ಇಡುವುದರಿಂದ ಲಕ್ಷ್ಮೀದೇವಿ ಸಂತುಷ್ಟರಾಗುತ್ತಾರೆ. ಲಕ್ಷ್ಮೀದೇವಿಯು ಕಮಲದ ಹೂವಿನ ಮೇಲೆ ಕುಳಿತುಕೊಂಡು ಬಂಗಾರದ ನಾಣ್ಯವನ್ನು ಬಲ ಕೈಯಿಂದ ಸುರಿಸುತ್ತಿರುವ ಹಾಗೆ ಹಾಗೂ ಎರಡು ಆನೆಯು ಲಕ್ಷ್ಮೀದೇವಿಗೆ ಕ್ಷೀರಾಭಿಷೇಕ ಮಾಡುತ್ತಿರುವ ಚಿತ್ರಪಟವನ್ನು ಬೀರುವಿನ ಮೇಲೆ ಹಾಕಿಕೊಳ್ಳಬಹುದು. ಅದೇ ರೀತಿ ಅರಿಶಿನದಿಂದ ಸ್ವಸ್ತಿಕ್ ಗುರುತನ್ನು ಬರೆದುಕೊಂಡು ಅದರ ಕೆಳಗೆ ಶುಭಂ ಲಾಭಂ ಎಂದು ಬರೆದುಕೊಳ್ಳುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.

  • ದೈವಿಕ ಅಂಶವನ್ನು ಹೊಂದಿರುವ ನಿಂಬೆಹಣ್ಣನ್ನು ಯಾವೆಲ್ಲ ಕಾರ್ಯಗಳಿಗೆ ಉಪಯೋಗಿಸಲಾಗುತ್ತದೆ ಎಂದು ತಿಳಿದಿದೆಯೇ ನಿಮಗೆ

    ದೈವಿಕ ಅಂಶವನ್ನು ಹೊಂದಿರುವ ನಿಂಬೆಹಣ್ಣನ್ನು ಯಾವೆಲ್ಲ ಕಾರ್ಯಗಳಿಗೆ ಉಪಯೋಗಿಸಲಾಗುತ್ತದೆ ಎಂದು ತಿಳಿದಿದೆಯೇ ನಿಮಗೆ..ಯಾರಿಗೂ ತಿಳಿಯದ ಹಾಗೂ ಮನೆಯಲ್ಲಿ ಬೆಳಗುವ ವಸ್ತು ಮತ್ತು ಆ ವಸ್ತುವಿನಲ್ಲಿ ಸಾಕಷ್ಟು ದೈವಿಕ ಅಂಶವಿದೆ ಎಂದಾಗ ಅದರ ಉಪಯೋಗವನ್ನು ಪಡೆದುಕೊಳ್ಳಬಹುದು. ಹಾಗಾದರೆ ಆ ವಸ್ತು ಯಾವುದು ಹಾಗೂ ಅದರಿಂದ ಆಗುವ ಪ್ರಯೋಜನಗಳು ಏನು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ನಿಂಬೆಹಣ್ಣು ತುಂಬಾ ದೈವಿಕ ಶಕ್ತಿಯನ್ನು ಹೊಂದಿರುವ ವಸ್ತು. ಪ್ರತಿಯೊಂದು ಪೂಜೆಯಲ್ಲಿ ನಿಂಬೆಹಣ್ಣು ಇರಲೇಬೇಕು ಹಾಗೂ ಪ್ರತಿಯೊಬ್ಬರ ಮನೆಯಲ್ಲೂ ಈ ನಿಂಬೆಹಣ್ಣನ್ನು ಉಪಯೋಗಿಸಲಾಗುತ್ತದೆ. ನಿಂಬೆಹಣ್ಣನ್ನು ಉಪಯೋಗಿಸಿಕೊಂಡು ನಮ್ಮ ಮೇಲೆ ಪದೇ ಪದೇ ಕಲಹ ಮಾಡುವವರು, ಕಿರಿಕಿರಿ ಮಾಡುವವರು, ಎಲ್ಲೆ ಹೋಗಿ ಯಾರ ಜೊತೆ ಮಾತನಾಡಿದರು ಆ ಜಾಗದಲ್ಲಿ ಕಲಹ ಉಂಟಾಗುವುದು, ಮಿತ್ರರೆಲ್ಲ ಶತ್ರುಗಳಾಗಿ ಬದಲಾಗುತ್ತಿರುತ್ತಾರೆ, ಬಂಧುಮಿತ್ರರೊಡನೆ ಬೇಡದ ವಿಷಯಕ್ಕೆ ಕಲಹ ಉದ್ಭವವಾಗುವುದು, ಯಾವುದಾದರೂ ಶುಭಕಾರ್ಯಗಳಿಗೆ ಹೋದಾಗ ಜನರು ಭಿನ್ನವಾಗಿ ನಿಮ್ಮನ್ನು ನೋಡುವುದು ಹೀಗೆ ಈ ರೀತಿಯ ಹಲವಾರು ಸಮಸ್ಯೆಯಿಂದ ಬಳಲುತ್ತಿದ್ದರೆ ನಿಂಬೆಹಣ್ಣನ್ನು ಉಪಯೋಗಿಸಿಕೊಂಡು ನಿಮಗಿರುವ ಶತ್ರುಬಾಧೆ, ಬಂಧುಮಿತ್ರರೊಡನೆ ಆಗುತ್ತಿರುವ ಕಲಹಗಳನ್ನು ನಿವಾರಣೆ ಮಾಡಿಕೊಳ್ಳಬಹುದು.ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯಲ್ಲಿ ದೇವಿಗೆ 5 ನಿಂಬೆಹಣ್ಣಿನ ದೀಪವನ್ನು ಹಚ್ಚಬೇಕು. ದೇವಿಯ ದೇವಸ್ಥಾನದಲ್ಲಿ ದೇವಿಗೆ ದೀಪಾರಾಧನೆಯನ್ನು ಮಾಡಬೇಕು. 108 ಮಾಲೆಯ ದೀಪವನ್ನು ದೇವಿಗೆ ಕೊಡಬೇಕು. ಈ ರೀತಿಯ ವಿಶೇಷವಾದ ಪದ್ಧತಿಯಿಂದ ನಿಮಗಿರುವ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ನಿಂಬೆಹಣ್ಣಿನಲ್ಲಿ ಇಷ್ಟೊಂದು ಪವಿತ್ರತೆ ಹಾಗೂ ದೈವಿಕ ಶಕ್ತಿ ಇರುವುದರಿಂದ ಅದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಸಾಮಾನ್ಯವಾಗಿ ನಿಂಬೆಹಣ್ಣನ್ನು ಅಡುಗೆಗೆ ಉಪಯೋಗಿಸುತ್ತೇವೆ ಹಾಗೂ ದೃಷ್ಟಿ ದೋಷ ಪರಿಹಾರಕ್ಕೆ ಉಪಯೋಗಿಸುತ್ತೇವೆ ಮತ್ತು ದೈವಿಕ ಪೂಜೆಗಳಿಗೆ ನಿಂಬೆಹಣ್ಣು ಬಳಸಲಾಗುತ್ತದೆ. ಹಾಗಾಗಿ ನಿಂಬೆ ಹಣ್ಣನ್ನು ಉಪಯೋಗಿಸಿಕೊಂಡು ಶತ್ರುನಾಶವನ್ನು ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಾಗಲಾರದು.

  • ವಾಯುವ್ಯ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟರೆ ಜೀವನದ ದಿಕ್ಕೇ ಬದಲಾಗುತ್ತದೆ.

    ವಾಯುವ್ಯ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟರೆ ಜೀವನದ ದಿಕ್ಕೇ ಬದಲಾಗುತ್ತದೆ..ಸಾಮಾನ್ಯವಾಗಿ ಪ್ರತಿಯೊಬ್ಬರೂ ವಾಸ್ತು ಶಾಸ್ತ್ರದ ಪ್ರಕಾರವಾಗಿ ಮನೆಯನ್ನು ಕಟ್ಟಿಸುತ್ತಾರೆ. ಉತ್ತರ ಹಾಗೂ ಪಶ್ಚಿಮ ದಿಕ್ಕಿನ ಮಧ್ಯಭಾಗದಲ್ಲಿ ವಾಯುವ್ಯ ದಿಕ್ಕು ಬರುತ್ತದೆ. ವಾಯುವ್ಯ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಟ್ಟರೆ ಅದು ಲಾಭದಾಯಕವಾಗುತ್ತದೆ ಹಾಗೂ ಯಾವ ವಸ್ತುಗಳನ್ನು ಈ ದಿಕ್ಕಿನ ಕಡೆ ಇಡಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಸಾಮಾನ್ಯವಾಗಿ ವಾಯುವ್ಯ ದಿಕ್ಕಿಗೆ ಕೋಣೆಗಳನ್ನು ಕಟ್ಟಿ ಕೊಳ್ಳಲಾಗುತ್ತದೆ. ಚಂದ್ರದೇವನು ವಾಯುವ್ಯ ದಿಕ್ಕಿಗೆ ಅಧಿಪತಿಯಾಗಿರುವನು. ಆರೋಗ್ಯದ ಮೇಲೆ ಹಿಡಿತವನ್ನು ಸಾಧಿಸುವವನು ಚಂದ್ರನಾಗಿರುತ್ತಾನೆ. ಹಾಗಾಗಿ ಚಂದನ ಅನುಗ್ರಹ ಸಿಗಬೇಕೆಂದರೆ ವಾಯುವ್ಯ ದಿಕ್ಕನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕಾಗುತ್ತದೆ. ವಾಯುವ್ಯ ದಿಕ್ಕಿನಲ್ಲಿ ಸಾಮಾನ್ಯವಾಗಿ ಸ್ಟೋರ್ ರೂಮ್ ಅನ್ನು ಕಟ್ಟಬೇಕು ಎನ್ನುತ್ತಾರೆ. ಸ್ಟೋರ್ ರೂಮ್ ಅಲ್ಲಿ ಧವಸ ಧಾನ್ಯಗಳನ್ನು ಇಡುವುದರಿಂದ ಚಂದನ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಇದರಿಂದ ಬ್ಯಾಂಕಿನ ವ್ಯವಹಾರಗಳೆಲ್ಲ ಅಚ್ಚುಕಟ್ಟಾಗಿ ನಡೆಯುತ್ತದೆ.

    ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಸ್ಟೋರ್ ರೂಮ್ ಅನ್ನು ಬರುವ ಹಾಗೆ ಮಾಡಿದರೆ ಲಾಭದಾಯಕವಾಗುತ್ತದೆ. ವಾಯುವ್ಯ ದಿಕ್ಕಿನಲ್ಲಿ ಮಲಗುವುದರಿಂದ ಮಾನಸಿಕ ಚಿಂತನೆಗಳು ಜಾಸ್ತಿಯಾಗುತ್ತದೆ ಹಾಗೂ ಇದರಿಂದ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಪಶ್ಚಿಮ ವಾಯುವ್ಯ ದಿಕ್ಕಿನ ಕಡೆ ಬೇಳೆಕಾಳುಗಳನ್ನು ಇಡಬೇಕು. ಉತ್ತರ ವಾಯುವ್ಯ ದಿಕ್ಕಿನಲ್ಲಿ ನೀರಿನ ಟ್ಯಾಂಕ್ ಇಡುವುದು ಅಥವಾ ನೀರು ತುಂಬುವ ಸಂಪನ್ನು ಮಾಡಿಸಿಕೊಳ್ಳುವುದನ್ನು ಮಾಡಬಾರದು. ಇದರಿಂದ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
    ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ, ಶಾಂತಿಯಿಂದ ಇರುವುದಕ್ಕೆ ಯಾವುದೇ ಕಾರಣಕ್ಕೂ ವಾಯುವ್ಯ ದಿಕ್ಕನ್ನು ಆರಿಸಿ ಕೊಳ್ಳಬಾರದು. ಈ ದಿಕ್ಕನ್ನು ಬಿಟ್ಟು ಬೇರೆ ದಿಕ್ಕನ್ನು ಆಯ್ದುಕೊಂಡರೆ ಜೀವನದಲ್ಲಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು. ಹಾಗಾಗಿ ಮನೆಯನ್ನು ನಿರ್ಮಾಣ ಮಾಡಬೇಕಾದರೆ ಸಂಪೂರ್ಣವಾಗಿ ವಾಸ್ತುಶಾಸ್ತ್ರದ ಪ್ರಕಾರವಾಗಿ ನಿರ್ಮಾಣ ಮಾಡಿದರೆ ಸುಖಕರವಾದ ಜೀವನವನ್ನು ನಡೆಸಬಹುದು.

  • ಮಕ್ಕಳ ಜ್ಞಾಪಕಶಕ್ತಿ ವೃದ್ಧಿ, ಸಾಲಬಾಧೆ ಸಮಸ್ಯೆ ಗೆ ಈ ಪರಿಹಾರವನ್ನು ಮಾಡುವುದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

    ಮಕ್ಕಳ ಜ್ಞಾಪಕಶಕ್ತಿ ವೃದ್ಧಿ, ಸಾಲಬಾಧೆ ಸಮಸ್ಯೆ ಗೆ ಈ ಪರಿಹಾರವನ್ನು ಮಾಡುವುದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದ..ಸಾಲ ಬಾಧೆ ಸಮಸ್ಯೆ, ಮಕ್ಕಳು ಎಷ್ಟು ಓದಿದರೂ ಮರೆತು ಹೋಗುತ್ತಿರುವುದು, ಪತಿ-ಪತ್ನಿಯರ ನಡುವೆ ಕಲಹಗಳು ಉಂಟಾಗುವುದು, ಪಿತೃದೋಷ ಸಮಸ್ಯೆ ಹೀಗೆ ಇತ್ಯಾದಿ ಸಮಸ್ಯೆಗಳನ್ನು ದಾನ ಮಾಡುವುದರ ಮೂಲಕ ದೋಷವನ್ನು ಮುಕ್ತಗೊಳಿಸಿಕೊಳ್ಳಬಹುದು.

    ಯಾರಿಗಾದರೂ ಸಾಲಬಾದೆ ಜಾಸ್ತಿ ಇದ್ದರೆ ಮಂಗಳವಾರದ ದಿನದಂದು ಹೂವಿನ ಗಿಡವನ್ನು ದಾನವಾಗಿ ಕೊಟ್ಟರೆ ತುಂಬಾ ಒಳ್ಳೆಯದು. ಈ ರೀತಿಯಾಗಿ ದಾನವನ್ನು ಮಾಡುವುದರಿಂದ ಸಾಲ ಬಾದೆಯು ಕ್ರಮೇಣವಾಗಿ ಕಡಿಮೆಯಾಗುತ್ತ ಬರುತ್ತದೆ. ಹಾಗೆಯೇ ಬೇವಿನ ಮರ ಹಾಗೂ ಆಲದ ಮರದ ಬುಡಕ್ಕೆ ನೀರು ಹಾಕಿ 3 ಪ್ರದಕ್ಷಿಣೆ ಹಾಕುವುದರಿಂದ ತುಂಬಾ ಒಳ್ಳೆಯದಾಗುತ್ತದೆ.

    ಒಂದು ವೇಳೆ ಮಕ್ಕಳಿಗೆ ಜ್ಞಾಪಕ ಶಕ್ತಿ ಕಮ್ಮಿ ಆಗಿದ್ದರೆ ಅಥವಾ ಓದಿನಮೇಲೆ ಆಸಕ್ತಿ ಇಲ್ಲ ಎಂದರೆ ಸೀಬೆ ಹಣ್ಣನ್ನು ಮಕ್ಕಳ ಕೈಯಿಂದ ಬ್ರಾಹ್ಮಣರಿಗೆ ಕೊಡಿಸುವುದರಿಂದ ಮಕ್ಕಳಿಗೆ ತುಂಬಾ ಒಳ್ಳೆಯದಾಗುತ್ತದೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆಯು ಹೆಚ್ಚಾಗಿ ಓದಿನ ಕಡೆ ಆಸಕ್ತಿಯೂ ಬರುತ್ತದೆ.ಗುರುವಾರದ ದಿನದಂದು ಹಸಿರು ತರಕಾರಿಗಳನ್ನು ದಾನವಾಗಿ ಕೊಡುವುದರಿಂದ ಮಕ್ಕಳಿಗೆ ಗುರುವಿನ ಅನುಗ್ರಹ ಪ್ರಾಪ್ತಿಯಾಗುತ್ತದೆ.

    ಒಂದು ವೇಳೆ ಗಂಡ-ಹೆಂಡತಿಯ ನಡುವೆ ಹೊಂದಾಣಿಕೆ ಇಲ್ಲವೆಂದರೆ ಅಥವಾ ಕಲಹಗಳು ಪ್ರತಿನಿತ್ಯ ಆಗುತ್ತಿದೆ ಎಂದರೆ ಹತ್ತಿಯಿಂದ ಮಾಡಿದ ಬತ್ತಿಯನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಮುತ್ತೈದೆಯರಿಗೆ ಕೊಟ್ಟು ಅವರ ಪಾದವನ್ನು ಸ್ಪರ್ಶ ಮಾಡುವುದರಿಂದ ಸಮಸ್ಯೆಯೂ ಪರಿಹಾರವಾಗುತ್ತದೆ.ಪಿತೃ ದೋಷ ನಿವಾರಣೆ ಆಗಬೇಕೆಂದರೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೀರ್ಥ ದಾನವನ್ನು ಮಾಡುವುದರಿಂದ ಪಿತೃ ದೋಷ ನಿವಾರಣೆ ಆಗುತ್ತದೆ. ರಸ್ತೆಯಲ್ಲಿ ಯಾರಾದರೂ ಬಾಯಾರಿಕೆಯಿಂದ ಬಳಲುತ್ತಿದ್ದರೆ ಅವರಿಗೆ ತೀರ್ಥ ದಾನವನ್ನು ಕುಡಿಯುವ ನೀರಿನ ಮೂಲಕ ಕೊಟ್ಟರೆ ಪಿತೃ ದೋಷ ನಿವಾರಣೆಯಾಗುತ್ತದೆ.

    ಒಂದು ವೇಳೆ ಕೆಲಸದಲ್ಲಿ ಬಡ್ತಿ ಪಡೆಯಬೇಕು, ವ್ಯಾಪಾರ ಹಾಗೂ ವ್ಯವಹಾರದಲ್ಲಿ ಅಧಿಕ ಲಾಭವನ್ನು ಪಡೆಯಬೇಕೆಂದರೆ ದೇವಸ್ಥಾನದಲ್ಲಿ ದೀಪವನ್ನು ಹಚ್ಚುವುದಕ್ಕೆ ಎಣ್ಣೆಯನ್ನು ದಾನವಾಗಿ ಕೊಡಬೇಕು. ಹಾಗೆಯೆ ಕುಂಬಳಕಾಯಿಯನ್ನು ದಾನವಾಗಿ ಕೊಡುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ.

  • ಹಾವುಗಳು ಕನಸಿನಲ್ಲಿ ಕಂಡರೆ ಶುಭವೋ ಅಥವಾ ಅಶುಭವೋ ಎಂಬುದು ತಿಳಿದಿದೆಯೇ ನಿಮಗೆ..

    ಹಾವುಗಳು ಕನಸಿನಲ್ಲಿ ಕಂಡರೆ ಶುಭವೋ ಅಥವಾ ಅಶುಭವೋ ಎಂಬುದು ತಿಳಿದಿದೆಯೇ ನಿಮಗೆ..ಹಾವುಗಳು ಕನಸಿನಲ್ಲಿ ಕಂಡರೆ ಸಾಮಾನ್ಯವಾಗಿ ಜನರು ಹೆದರಿಕೊಳ್ಳುತ್ತಾರೆ, ಆದರೆ ಕೆಲವೊಂದು ಹಾವುಗಳು ಕನಸಿನಲ್ಲಿ ಬರುವುದರಿಂದ ರಾಜಯೋಗವನ್ನು ತಂದುಕೊಡುತ್ತದೆ. ಶ್ವೇತ ನಾಗ ಸರ್ಪ ಕನಸಿನಲ್ಲಿ ಕಂಡರೆ ವಿಶೇಷವಾಗಿ ರಾಜಯೋಗ ಪ್ರಾಪ್ತಿಯಾಗುತ್ತದೆ. ಕನಸಿನಲ್ಲಿ ಕಪ್ಪು ಹಾವು ಕಂಡರೆ ಧನ ಪ್ರಾಪ್ತಿಯಾಗುತ್ತದೆ ಎಂಬುದನ್ನು ಸಹ ಸೂಚಿಸುತ್ತದೆ.ಒಂದು ವೇಳೆ ಕನಸಿನಲ್ಲಿ ಹಾವು ಮರವನ್ನು ಏರುತ್ತಿರುವ ಹಾಗೆ ಕಂಡರೆ ನಿಮ್ಮ ಜೀವನದಲ್ಲಿ ಕಷ್ಟಗಳು ಕಡಿಮೆಯಾಗಿ ಏಳಿಗೆ ಎಂಬುದು ಪ್ರಾರಂಭಿಸುತ್ತದೆ. ಕ್ರಮೇಣವಾಗಿ ಧನ ಸಂಪತ್ತು ನಿಮ್ಮ ಹತ್ತಿರ ವೃದ್ಧಿಯಾಗುತ್ತಾ ಹೋಗುತ್ತದೆ. ಸಮಾಜದಲ್ಲಿ ಎಲ್ಲರೂ ಗುರುತಿಸುವಂತೆ ಕೀರ್ತಿಯನ್ನು ಪಡೆದುಕೊಳ್ಳುತ್ತಾರೆ ಎಂಬುದನ್ನು ಸೂಚಿಸುತ್ತದೆ.

    ಒಂದು ವೇಳೆ ಅದೇ ಹಾವು ಕನಸಿನಲ್ಲಿ ಮರದಿಂದ ಕೆಳಗೆ ಇಳಿಯುತ್ತಿರುವ ಹಾಗೆ ಕಂಡರೆ ನಿಮ್ಮ ಜೀವನದಲ್ಲಿ ಕಷ್ಟದ ದಿನಗಳು ಪ್ರಾರಂಭವಾಗುತ್ತದೆ ಹಾಗೂ ಕಷ್ಟಪಟ್ಟು ದುಡಿದ ಹಣ ಕ್ರಮೇಣವಾಗಿ ನಾಶವಾಗುತ್ತಾ ಹೋಗುತ್ತದೆ ಎಂಬುದನ್ನು ಸೂಚಿಸುತ್ತದೆ.ಒಂದು ವೇಳೆ ಎರಡು ಹಾವುಗಳು ಜಗಳ ಆಡುವ ಹಾಗೆ ಕನಸು ಕಂಡರೆ ಆ ವ್ಯಕ್ತಿಯು ಸಮಾಜದ ಒಳಿತಿಗಾಗಿ ಕಷ್ಟಪಡುತ್ತಾರೆ ಎಂಬುದನ್ನು ಸೂಚಿಸುತ್ತದೆ. ದೇವಾಲಯದಲ್ಲಿರುವ ಹಾವುಗಳು ಕನಸಿನಲ್ಲಿ ಕಂಡರೆ ದೇವರ ಅನುಗ್ರಹದಿಂದ ಧನ ಪ್ರಾಪ್ತಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಕನಸಿನಲ್ಲಿ ಹಾವುಗಳು ಹುತ್ತದ ಒಳಗೆ ಹೋಗುತ್ತಿದ್ದರೆ ಧನ ಪ್ರಾಪ್ತಿಯಾಗುತ್ತದೆ ಹಾಗೂ ಅದೇ ಹಾವು ಹುತ್ತದಿಂದ ಹೊರ ಬರುತ್ತಿದ್ದರೆ ಧನ ಸಂಪತ್ತು ನಾಶವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

    ಒಂದು ವೇಳೆ ಕನಸಿನಲ್ಲಿ ಸಾಕಷ್ಟು ಹಾವುಗಳು ಒಂದೇ ಸಲ ಕಂಡು ಬಂದರೆ ಪ್ರತಿ ಮಂಗಳವಾರದ ದಿನದಂದು ಸುಬ್ರಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸುವುದರಿಂದ ಮುಂದಿನ ದಿನದಲ್ಲಿ ಬರುವ ಸಂಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಒಂದು ವೇಳೆ ಸತ್ತುಹೋದ ಹಾವು ಕನಸಿನಲ್ಲಿ ಕಂಡರೆ ಯಾವುದೋ ದೋಷವು ಆ ವ್ಯಕ್ತಿಗೆ ಕಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ. ಈ ರೀತಿಯ ಸಂದರ್ಭದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಿ ರುದ್ರಾಭಿಷೇಕವನ್ನು ಮಾಡಿಸುವುದರಿಂದ ತುಂಬಾ ಒಳ್ಳೆಯದಾಗುತ್ತದೆ.ಒಂದು ವೇಳೆ ಹಾವು ಮೇಲಿಂದ ಕೆಳಗೆ ಬೀಳುವ ಹಾಗೆ ಕಾಣಿಸುತ್ತಿದ್ದರೆ ಮನೆಯಲ್ಲಿ ಯಾರಿಗಾದರೂ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಈ ರೀತಿಯಾದಾಗ ಶಿವನ ದೇವಸ್ಥಾನಕ್ಕೆ ಹೋಗಿ ರುದ್ರಾಭಿಷೇಕವನ್ನೂ ಮಾಡಿಸಿ ಮತ್ತು ಮೃತ್ಯುಂಜಯ ಹೋಮವನ್ನು ಮಾಡಿಸುವುದರಿಂದ ಮುಂದಿನ ದಿನಗಳಲ್ಲಿ ಬರುವ ಗಂಡಾಂತರಗಳಿಂದ ಅಥವಾ ಕಂಟಕಗಳಿಂದ ಪಾರಾಗಬಹುದು.

  • ಮನೆಯಿಂದ ಹೊರಹೋಗುವಾಗ ಈ ಎರಡು ವಸ್ತುಗಳನ್ನು ಸ್ಪರ್ಶಿಸಿದರೆ ಅಂದುಕೊಂಡಂತ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ.

    ಮನೆಯಿಂದ ಹೊರಹೋಗುವಾಗ ಈ ಎರಡು ವಸ್ತುಗಳನ್ನು ಸ್ಪರ್ಶಿಸಿದರೆ ಅಂದುಕೊಂಡಂತ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ..ಮನೆಯಿಂದ ಹೊರಗೆ ಹೊರಟಾಗ ಆಕಸ್ಮಿಕವಾಗಿ ಕಪ್ಪು ನಾಯಿ ಕಂಡರೆ ಅದರ ದರ್ಶನವನ್ನು ಪಡೆದುಕೊಳ್ಳುವುದು ತುಂಬಾ ಒಳ್ಳೆಯದು. ಕಪ್ಪು ನಾಯಿಯನ್ನು ನೋಡಿದರೆ ಮನಸ್ಸಿನಲ್ಲಿ ಅಂದುಕೊಂಡು ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗುತ್ತದೆ. ಯಾವುದಾದರೂ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಟಾಗ ಹಲ್ಲಿಯು ಲೊಚ್ಚುಗುಡುವ ಶಬ್ದವು ಹೆಚ್ಚಾಗಿ ಎಡ ಭಾಗದಿಂದ ಕೇಳಿದರೆ ವಿಶೇಷವಾಗಿ ತುಂಬಾ ಒಳ್ಳೆಯದಾಗುತ್ತದೆ. ಮನೆಯಿಂದ ಹೊರಟಾಗ ಆಕಸ್ಮಿಕವಾಗಿ ಸಮಸಂಖ್ಯೆಯಲ್ಲಿ ಬ್ರಾಹ್ಮಣರು ಸಿಕ್ಕಿದರೆ ತುಂಬಾ ಒಳ್ಳೆಯದು. ಸಮ ಸಂಖ್ಯೆ ಎಂದರೆ 2,4,6,8 ಹೀಗೆ ಬ್ರಾಹ್ಮಣರು ಏನಾದರೂ ಆಕಸ್ಮಿಕವಾಗಿ ಸಿಕ್ಕರೆ ಅಂದುಕೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗಿ ಪೂರ್ಣವಾಗುತ್ತದೆ.

    ಯಾವುದಾದರೂ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಟಾಗ ಎಲ್ಲಿಯಾದರೂ ಬಟ್ಟೆ ಸಿಕ್ಕಿಹಾಕಿಕೊಂಡು ಹರಿದು ಹೋದರೆ, ನೀವು ಅಂದುಕೊಂಡಂತ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ಯಶಸ್ವಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಇಲಿಯು ಗಣಪತಿಯ ವಾಹನ ವಾಗಿರುವುದರಿಂದ ಇಲಿಯು ಮನೆಯಲ್ಲಿದ್ದರೆ ಗಣಪತಿಯ ಅನುಗ್ರಹವು ಸದಾ ಕಾಲ ಆ ಮನೆಗೆ ಇರುತ್ತದೆ.

    ಕಂಚು ಮತ್ತು ಲೋಹದ ವಸ್ತುಗಳನ್ನು ಯಾವುದಾದರೂ ಮುಖ್ಯ ಕೆಲಸದ ಮೇಲೆ ಹೊರ ಹೋಗುವಾಗ ಈ ಎರಡು ವಸ್ತುಗಳನ್ನು ಸ್ಪರ್ಶಿಸಿ ಹೋದರೆ ಕೆಲಸಕಾರ್ಯಗಳಲ್ಲಿ ಯಾವುದೇ ರೀತಿಯ ವಿಘ್ನಗಳು ಆಗದೆ, ಅಡೆತಡೆಗಳು ಆಗದೆ, ಅಂದುಕೊಂಡಂತೆ ಕೆಲಸ ಕಾರ್ಯಗಳು ಯಶಸ್ವಿಯಾಗಿ ಸಂಪೂರ್ಣವಾಗುತ್ತದೆ. ಕೆಲವೊಂದು ಬಾರಿ ಮನೆಯಿಂದ ಹೊರಹೋಗುವಾಗ ಕೆಲವು ಪ್ರಾಣಿ ಪಕ್ಷಿಗಳು ಅಡ್ಡಬಂದರೆ ಅಪಶಕುನ ಎಂದು ಹೇಳಲಾಗುತ್ತದೆ. ಉದಾಹರಣೆಗೆ ಬೆಕ್ಕು, ಕಾಗೆ ಅಡ್ಡ ಬಂದಾಗ ಒಂದೆರಡು ನಿಮಿಷ ಅಲ್ಲೇ ನಿಂತು ಗಣಪತಿಯ ಓಂ ಗಂ ಗಣಪತಿಯೇ ನಮಃ ಮಂತ್ರವನ್ನು 11 ಬಾರಿ ಸ್ಮರಣೆಯನ್ನು ಮಾಡಿಕೊಂಡು ನಂತರ ಅಲ್ಲಿಂದ ಹೊರಟರೆ ಯಾವುದೇ ರೀತಿಯ ಅಡೆತಡೆಗಳು, ವಿಘ್ನಗಳು ಉಂಟಾಗುವುದಿಲ್ಲ.

    ಓಂ ಭಗವತೇ ನಮಃ ಎಂಬ ದೇವಿಯ ಮಂತ್ರವನ್ನು 11 ಬಾರಿ ಸ್ಮರಣೆಯನ್ನು ಮಾಡಿಕೊಂಡು ನಂತರ ಆ ಜಾಗದಿಂದ ಹೊರಡುವುದರಿಂದ ಮನಸ್ಸಿನಲ್ಲಿ ಅಂದುಕೊಂಡಂತ ಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಗಳಾಗದೆ ನಿರ್ವಿಘ್ನವಾಗಿ ನೆರವೇರುತ್ತದೆ.