Your cart is currently empty!
Author: 53721pwpadmin
ಮನೆಯಲ್ಲಿರುವ ಎಲ್ಲಾ ಕಷ್ಟಗಳು ದೂರವಾಗಬೇಕು ಎಂದರೆ ಐಶ್ವರ್ಯ ಕಾಳಿಕಾದೇವಿಯ ಚಿತ್ರಪಟವನ್ನು ಇಟ್ಟುಕೊಳ್ಳಿ.
ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರು ಸಂತೋಷದಿಂದ ಬಾಳಬೇಕು, ಯಾರ ಕೆಟ್ಟದೃಷ್ಟಿಯು ಮನೆಗೆ ತಾಗಬಾರದು, ಮನೆ ಯಜಮಾನನು ಒಳ್ಳೆಯ ರೀತಿಯಿಂದ ಧನ ಸಂಪತ್ತನ್ನು ಪಡೆದುಕೊಳ್ಳಬೇಕು ಹಾಗೂ ಕುಟುಂಬದ ಸದಸ್ಯರೆಲ್ಲರೂ ಆರೋಗ್ಯವಂತರಾಗಿರಬೇಕು ಎಂದು ಆಶಿಸುವುದು ಸರ್ವೇ ಸಾಮಾನ್ಯ. ಮನೆ ಯಜಮಾನನು ಹಾಗೂ ಕುಟುಂಬದವರು ಸುಖವಾಗಿ ಇರಬೇಕೆಂದರೆ ಐಶ್ವರ್ಯ ಕಾಳಿಕಾ ದೇವಿ ಫೋಟೋವನ್ನು ಅಥವಾ ಚಿತ್ರಪಟವನ್ನು ಮನೆಯಲ್ಲಿ ಇಡಬೇಕು.
ಐಶ್ವರ್ಯ ಕಾಳಿಕಾ ದೇವಿ ಬಹಳ ಶಕ್ತಿವಂತಳು ಹಾಗೂ ಅವಳು ಮನೆ ಯಜಮಾನನಿಂದ ಹಿಡಿದು ಪುಟ್ಟ ಮಕ್ಕಳನ್ನು ಕಾಯುತ್ತಾಳೆ. ನರ ದೋಷ, ನರದೃಷ್ಟಿ, ಕೆಟ್ಟದೃಷ್ಟಿ ಹೀಗೆ ಹಲವಾರು ರೀತಿಯ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕೆಂದರೆ ಮನೆಯಲ್ಲಿ ಐಶ್ವರ್ಯ ಕಾಳಿಕಾದೇವಿಯ ಚಿತ್ರಪಟವನ್ನು ಇಟ್ಟುಕೊಳ್ಳಬೇಕು.
ಐಶ್ವರ್ಯ ಕಾಳಿಕಾದೇವಿಯ ಚಿತ್ರಪಟವನ್ನು ಮನೆಯ ಮುಖ್ಯ ದ್ವಾರದ ಮೇಲೆ ಹಾಕಬೇಕು. ಇದರಿಂದ ಯಾವುದೇ ದುಷ್ಟಶಕ್ತಿಗಳು ಮನೆಯೊಳಗೆ ಪ್ರವೇಶವನ್ನು ಮಾಡುವುದಿಲ್ಲ. ದೇವಿಯ ಮೇಲೆ ನಂಬಿಕೆಯನ್ನಿಟ್ಟು ಚಿತ್ರಪಟವನ್ನು ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಹಾಕಿದರೆ ಶುಭಫಲವನ್ನು ನೀಡುತ್ತಾರೆ. ಒಳ್ಳೆಯ ಮನಸ್ಸಿನಿಂದ ಹಾಗೂ ಭಕ್ತಿಯಿಂದ ಭಗವಂತನನ್ನು ಬೇಡಿಕೊಂಡರೆ ಯಾವುದೇ ಸಮಯದಲ್ಲಾದರೂ ಸರಿ ಭಗವಂತನು ನಮ್ಮನ್ನು ಕೈಬಿಡುವುದಿಲ್ಲ.
ಐಶ್ವರ್ಯ ಕಾಳಿಕಾದೇವಿಯಿಂದ ಧನ ಸಂಪತ್ತು ಲಭಿಸುತ್ತದೆ. ದೇವಿಯ ಚಿತ್ರಪಟವನ್ನು ಶುಕ್ರವಾರದಂದು ಅಥವಾ ಅಮಾವಾಸ್ಯೆ ದಿನದಂದು ತಂದರೆ ತುಂಬಾ ಒಳ್ಳೆಯದು. ಐಶ್ವರ್ಯ ಕಾಳಿಕಾದೇವಿಯ ಮಂತ್ರವನ್ನು 108 ಬಾರಿ ಜಪಿಸಿದರೆ ತುಂಬಾ ಒಳ್ಳೆಯದು. ಒಂದು ವೇಳೆ 108 ಬಾರಿ ಹೇಳುವುದಕ್ಕೆ ಸಮಯವಿಲ್ಲವೆಂದರೆ ಕನಿಷ್ಠ 21 ಬಾರಿ ಜಪಿಸಬೇಕು.
ಓಂ ಹಿಂ ರಿಂ ಕ್ಲೀಮ್ ಶ್ರೀ ಐಶ್ವರ್ಯ ಕಾಳಿಕಾಯೆ ನಮಃ
ಈ ಮೇಲಿನ ಮಂತ್ರವನ್ನು ಜಪಿಸುವುದರಿಂದ ಧನಸಂಪತ್ತು ವೃದ್ಧಿಯಾಗುತ್ತದೆ ಹಾಗೂ ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದು ಮತ್ತು ಕೈಗೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಈ ಮಂತ್ರದಿಂದ ಮನೆಯಲ್ಲಿರುವ ವಾಸ್ತು ದೋಷ ನಿವಾರಣೆಯಾಗುತ್ತದೆ ಹಾಗೂ ಯಾವುದೇ ರೀತಿಯ ದುಷ್ಟ ಶಕ್ತಿಗಳ ಪ್ರಭಾವವು ಮನೆಯ ಮೇಲೆ ಬೀಳುವುದಿಲ್ಲ.
ಉದ್ಯೋಗ ಸಮಸ್ಯೆ, ಪ್ರೀತಿ ಪ್ರೇಮ ಕಲಹಕ್ಕೆ ಇಲ್ಲಿದೆ ಸೂಕ್ತ ಪರಿಹಾರ..
ಸಾಲಬಾಧೆ, ಹಣದ ಸಮಸ್ಯೆ, ಉದ್ಯೋಗ, ವಿದ್ಯಾಭ್ಯಾಸದಲ್ಲಿ ತೊಂದರೆ ಹಾಗೂ ಪ್ರೀತಿಯ ವಿಚಾರದಲ್ಲಿ ತೊಂದರೆಗಳು ಇದ್ದರೆ ಈ ಚಿಕ್ಕ ಕೆಲಸ ಮಾಡುವುದರಿಂದ ನಿವಾರಣೆಯಾಗುತ್ತದೆ.
ಒಂದು ಒಳ್ಳೆ ಮನೆಯಲ್ಲಿ ಯಾವಾಗಲೂ ಕಲಹಗಳು, ವಾಸ್ತು ಸಮಸ್ಯೆ, ಯಾವುದೇ ಕೆಲಸವನ್ನು ಮಾಡಲು ಹೋದರೂ ಅಡೆತಡೆಗಳು ಆಗುತ್ತಿದ್ದರೆ ಅಂಥವರು ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಈ ಚಿಕ್ಕ ಕೆಲಸವನ್ನು ಮಾಡಬೇಕು. ಅರಿಶಿನವನ್ನು ಮನೆಯಲ್ಲಿರುವ ಎಲ್ಲಾ ಮೂಲೆಗಳಿಗೂ ಹಾಕಬೇಕು. ಇದರಿಂದ ವಾಸ್ತು ದೋಷ ಹಾಗೂ ನಕಾರಾತ್ಮಕ ಶಕ್ತಿಯ ದೋಷದಿಂದ ದುರವಾಗಬಹುದು ಹಾಗೂ ಧನ ಸಂಪತ್ತಿನ ಸಮಸ್ಯೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.ಗುರುವಾರದಂದು ಅರಿಶಿಣವನ್ನು ನೀರಿನಲ್ಲಿ ಮಿಕ್ಸ್ ಮಾಡಿ ಬೇವಿನ ಎಲೆಯಿಂದ ಮನೆಯಲ್ಲಿರುವ ಎಲ್ಲಾ ಕೋಣೆಗಳಿಗೆ ಹಾಕಬೇಕು, ಇದರಿಂದ ನಕಾರಾತ್ಮಕ ಶಕ್ತಿ ಹಾಗೂ ಧನ ಸಂಪತ್ತಿನ ಸಮಸ್ಯೆಗಳು ದೂರವಾಗುತ್ತದೆ. ಸಾಮಾನ್ಯವಾಗಿ ಕೆಲವರಿಗೆ ರಾತ್ರಿ ವೇಳೆ ಮಲಗಿದ್ದ ಸಂದರ್ಭದಲ್ಲಿ ಕೆಟ್ಟ ಕನಸುಗಳು ಬೀಳುತ್ತದೆ. ಕೆಲವರಿಗೆ ಕೆಟ್ಟ ಕನಸು ಬಿದ್ದಾಗ ನಿದ್ದೆ ಬರುವುದಿಲ್ಲ ಹಾಗೂ ಭಯವಾಗುತ್ತಿರುತ್ತದೆ. ಹೀಗೆ ಭಯ ಬಂದಾಗ ಹಳದಿ ಹಾಗೂ ಕೆಂಪು ದಾರವನ್ನು ಅರಿಶಿಣದ ಕೊಂಬಿಗೆ ಸುತ್ತಬೇಕು. ಹಳದಿ ಹಾಗೂ ಕೆಂಪು ದಾರವನ್ನು ಅರಿಶಿಣದ ಕೊಂಬಿಗೆ ಸುತ್ತಿದ ನಂತರ ಮಲಗುವ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಈ ರೀತಿಯಾಗಿ 15 ದಿನ ಪ್ರತಿನಿತ್ಯವೂ ಮಾಡಬೇಕು ನಂತರ ಅರಿಶಿನದ ಕೊಂಬನ್ನು ಮಣ್ಣಿನಲ್ಲಿ ಮುಚ್ಚಬೇಕು. ಈ ರೀತಿಯಾಗಿ ಮಾಡಿದಾಗ ಕೆಟ್ಟ ಕನಸು ಬಿದ್ದಾಗ ಭಯವಾಗುವುದಿಲ್ಲ ಹಾಗೂ ಚೆನ್ನಾಗಿ ನಿದ್ರೆ ಮಾಡಬಹುದು.
ಒಂದು ವೇಳೆ ಕುಟುಂಬದಲ್ಲಿ ಏನಾದರೂ ಸಮಸ್ಯೆ ಇದ್ದರೆ ಶುಕ್ರವಾರ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದೇವರ ಕೋಣೆಯಲ್ಲಿ ಪೂರ್ವಾಭಿಮುಖವಾಗಿ ಕುಳಿತುಕೊಂಡು ಒಂದು ತಟ್ಟೆಯಲ್ಲಿ ಅರಿಶಿನದ ಕೊಂಬನ್ನು ಇಟ್ಟು ಪೂಜಿಸಬೇಕು. ಪ್ರೀತಿಸುತ್ತಿರುವವರ ಹೆಸರನ್ನು ಸ್ಮರಿಸಿಕೊಂಡು ಮಂತ್ರವನ್ನು ಪಠಿಸುವುದರಿಂದ ಆ ವ್ಯಕ್ತಿಯ ಪ್ರೀತಿಯು ಲಭಿಸುತ್ತದೆ.
ಓಂ ಕ್ಲಿಂ ಕೃಷ್ಣಾಯ ನಮಃ
ಈ ಮೇಲಿನ ಮಂತ್ರವನ್ನು 108 ಬಾರಿ ಪಠಿಸಬೇಕು. ಈ ಮಂತ್ರವನ್ನು ಪಠಿಸಿದ ನಂತರ ತಟ್ಟೆಯಲ್ಲಿದ್ದ ಅರಿಶಿನದ ಕೊಂಬನ್ನು ಪುಡಿಮಾಡಿ ಒಂದು ಡಬ್ಬದಲ್ಲಿ ಇಡಬೇಕು. ಈ ಪರಿಹಾರವನ್ನು ಶುಕ್ರವಾರ ದಿನದಂದು ಮಾತ್ರ ಮಾಡಬೇಕು. ಮನೆಯಲ್ಲಿರುವ ಸದಸ್ಯರು ಒಂದು ವೇಳೆ ಯಾವುದಾದರೂ ಸಣ್ಣ ಸಣ್ಣ ವಿಷಯಕ್ಕೂ ಕೋಪಗೊಳ್ಳುತ್ತಿದ್ದರೆ ಅರಿಶಿನದ ಪುಡಿಗೆ ರೋಜ್ ವಾಟರ್ ಅನ್ನು ಹಾಕಿಕೊಂಡು ಹಣೆಗೆ ಇಟ್ಟುಕೊಳ್ಳಬೇಕು. ಇದರಿಂದ ಕೋಪಗೊಳ್ಳುವುದು ಕಡಿಮೆಯಾಗುತ್ತದೆ ಹಾಗೂ ಸಂತೋಷದಿಂದ ಜೀವನವನ್ನು ನಡೆಸಬಹುದು.
ಈ ಮೇಲಿನ ಎಲ್ಲಾ ಉಪಾಯವನ್ನು ಗಂಡಸರಾಗಲಿ ಹೆಂಗಸರಾಗಲಿ ಮಾಡಬಹುದು ಮತ್ತು ಹೆಂಗಸರು ಋತುಚಕ್ರದಲ್ಲಿ ಇದ್ದಾಗ ಯಾವುದೇ ಕಾರಣಕ್ಕೂ ಮಾಡಬಾರದು.ವಿಧವೆಯರು ಶುಭಕಾರ್ಯಗಳಿಗೆ ಹೋದರೆ ಅದು ಶುಭವೋ ಅಥವಾ ಅಶುಭವೋ ತಿಳಿದಿದೆಯೇ ನಿಮಗೆ ?
ಹುಟ್ಟು ಮತ್ತು ಸಾವು ಎಂಬುದು ಯಾರ ಕೈಯಲ್ಲೂ ಇರುವುದಿಲ್ಲ, ಆದ್ದರಿಂದ ಹಿರಿಯರು ಹೇಳುವುದು ಹುಟ್ಟು ಉಚಿತ ಸಾವು ಖಚಿತ ಎಂದು. ವ್ಯಕ್ತಿಯು ಸತ್ತ ಮೇಲೆ ಅವನು ಸಂಪಾದನೆ ಮಾಡಿದ ಹಣ ವನ್ನಾಗಲಿ,ವಾಹನವನ್ನು ಆಗಲಿ ಅಥವಾ ಚಿನ್ನಾಭರಣವನ್ನು ಆಗಲಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆದರೆ ವ್ಯಕ್ತಿಯು ಸತ್ತ ನಂತರ ಅವನು ಮಾಡಿದ ಪಾಪ ಕರ್ಮಗಳನ್ನು ತೆಗೆದುಕೊಂಡು ಹೋಗುತ್ತಾನೆ. ಪತಿಯು ಸತ್ತ ನಂತರ ಯಾವ ರೀತಿ ಪತ್ನಿಯನ್ನು ವಿಧವೆ ಎಂದು ಕರೆಯುತ್ತೇವೋ ಹಾಗೆಯೇ ಒಂದು ವೇಳೆ ಪತ್ನಿಯು ಸತ್ತರೆ ಗಂಡನನ್ನು ವಿಧುರ ಎಂದು ಕರೆಯಲಾಗುತ್ತದೆ.
ಒಂದು ಹೆಣ್ಣಿಗೆ ಗಂಡನು ಸತ್ತ ನಂತರ ಅರಿಶಿನ ಕುಂಕುಮ ಕೊಡುವುದಕ್ಕೂ ಹಾಗೂ ಶುಭ ಸಮಾರಂಭಗಳಲ್ಲಿ ಆರತಿ ಮಾಡುವುದಕ್ಕೆ ಕರೆಯುವುದಿಲ್ಲವೂ ಅದೇ ರೀತಿ ಪತ್ನಿಯು ಸತ್ತು ಹೋಗಿದ್ದರೆ ಗಂಡನನ್ನು ಯಾವುದೇ ರೀತಿಯ ಒಳ್ಳೆಯ ಕೆಲಸವನ್ನು ಶುಭಕಾರ್ಯದಲ್ಲಿ ಮಾಡಲು ಕರೆಯುವುದಿಲ್ಲ, ಏಕೆಂದರೆ ಪತಿಯೂ ಕೂಡ ಆಶುಭನಾಗಿರುತ್ತಾನೆ.
ಒಂದು ಹೆಣ್ಣು ಹುಟ್ಟಿದರೆ ಅರಿಶಿನ ಕುಂಕುಮ ಶೋಭಿತಳಾದಳು ಎಂದು ಹೇಳಲಾಗುತ್ತದೆ. ಮದುವೆಯಾದಾಗ ಅರಿಶಿನ ಕುಂಕುಮವನ್ನು ಯಾರೂ ಕೊಡುವುದಿಲ್ಲ, ಹುಟ್ಟಿದ ತಕ್ಷಣವೇ ಅವಳು ಅದನ್ನು ಗಳಿಸಿರುತ್ತಾಳೆ. ಆದ್ದರಿಂದ ಒಂದು ವೇಳೆ ಗಂಡನ ಸತ್ತು ಹೋದರು ಅರಿಶಿನ-ಕುಂಕುಮವನ್ನು ಇಟ್ಟುಕೊಳ್ಳಬಹುದು ಆದರೆ ಅಲಂಕಾರವನ್ನು ಮಾಡಿಕೊಳ್ಳಬಾರದು.ಒಂದು ವೇಳೆ ಅಲಂಕಾರ ಮಾಡಿಕೊಂಡರೆ ಶಾಸ್ತ್ರದ ವಿರುದ್ಧವಾಗುತ್ತದೆ.ಒಂದು ವೇಳೆ ಪತಿಯು ಸತ್ತು ಹೋಗಿದ್ದರೆ ಪತ್ನಿಯ ಕೈಯಲ್ಲಿ ಮೊದಲನೇ ಶುಭಕಾರ್ಯವನ್ನು ಮಾಡಿಸುವುದಿಲ್ಲ. ಹಾಗೆಯೇ ಪತ್ನಿ ಸತ್ತು ಹೋಗಿದ್ದಾರೆ ಪತಿಯ ಕೈಯಲ್ಲಿ ಯಾವುದೇ ರೀತಿಯ ಮೊದಲನೆಯ ಶುಭಕಾರ್ಯವನ್ನು ಮಾಡಿಸುವುದಿಲ್ಲ. ಏಕೆಂದರೆ ಇವೆರಡೂ ವಿಷಯಗಳು ಅತಿ ಮುಖ್ಯವಾಗಿರುತ್ತದೆ ಒಂದು ವೇಳೆ ಮಾಡಿಸಿದರೆ ಅದು ಶಾಸ್ತ್ರದ ವಿರುದ್ಧವಾಗಿರುತ್ತದೆ. ಹಾಗೆಂದು ಯಾವುದೇ ಕಾರಣಕ್ಕೂ ಅಂತವರ ಮನಸ್ಸನ್ನು ನೋಯಿಸಬಾರದು ಮತ್ತು ಅವರಿಗೂ ಒಂದು ಒಳ್ಳೆಯ ಸ್ಥಾನಮಾನವನ್ನು ನೀಡಬೇಕು.
ಕಾಲಿನಲ್ಲಿರುವ ಉದ್ದವಾದ ಬೆರಳಿನ ರಹಸ್ಯ ತಿಳಿದಿದೆಯೇ ನಿಮಗೆ ?
ಸಾಮಾನ್ಯವಾಗಿ ಕಾಲಿನಲ್ಲಿರುವ ಬೆರಳುಗಳು ನೇರವಾಗಿ ಸಮನಾಗಿರುತ್ತದೆ. ಆದರೆ ಕೆಲ ಜನರ ಕಾಲಿನ ಬೆರಳುಗಳು ಅಂಕುಡೊಂಕಾಗಿ ಇರುತ್ತದೆ. ಕೆಲವೊಮ್ಮೆ ಕಾಲಿನ ಹೆಬ್ಬೆರಳಿಗಿಂತ ಕಿರು ಬೆರಳುಗಳು ಎತ್ತರವಾಗಿರುತ್ತದೆ. ಆದ್ದರಿಂದ ಕಾಲಿನ ಬೆರಳುಗಳಿಗೆ ವಿಭಿನ್ನವಾದ ಮಹತ್ವವಿರುತ್ತದೆ. ಶಾಸ್ತ್ರಗಳ ಪ್ರಕಾರ ದೇಹದಲ್ಲಿರುವ ಪ್ರತಿಯೊಂದು ಅಂಗವೂ ಅವರವರ ಬಗ್ಗೆ ತಿಳಿಸಿಕೊಡುತ್ತದೆ. ಒಂದು ವೇಳೆ ವ್ಯಕ್ತಿಯ ಶರೀರದ ಅಂಗಗಳನ್ನು ಸರಿಯಾಗಿ ಗಮನಿಸಿದರೆ ಆ ವ್ಯಕ್ತಿಯ ಬಗ್ಗೆ ಹಲವಾರು ರಹಸ್ಯಗಳು ಗೊತ್ತಾಗುತ್ತದೆ. ಇದರಿಂದ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ಹಾಗೂ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಹಾಗಾದರೆ ಕಾಲಿನಲ್ಲಿರುವ ಉದ್ದವಾದ ಬೆರಳು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಒಂದು ವೇಳೆ ಯಾವ ವ್ಯಕ್ತಿಯ ಕಾಲಿನ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿದ್ದು ಮತ್ತು ಉಳಿದೆಲ್ಲ ಬೆರಳುಗಳು ಚಿಕ್ಕದಾಗಿದ್ದರೆ ಆ ವ್ಯಕ್ತಿಯು ತುಂಬಾ ಶಕ್ತಿಶಾಲಿಯಾಗಿರುತ್ತಾರೆ. ಯಾವುದಾದರೂ ಹೊಸ ಆಲೋಚನೆಯಿಂದ ಸಾಧನೆಯನ್ನು ಮಾಡಲು ತುಂಬಾ ಉತ್ಸುಕರಾಗಿರುತ್ತಾರೆ. ಇಂಥವರು ಅಂದುಕೊಂಡ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ.
ಒಂದು ವೇಳೆ ಕಾಲಿನ ಹೆಬ್ಬೆರಳಿನ ಪಕ್ಕದ ಬೆರಳು ಚಿಕ್ಕದಾಗಿದ್ದರೆ ಅಂತಹ ವ್ಯಕ್ತಿಗಳು ಜೀವನದಲ್ಲಿ ಎಂದಿಗೂ ಖುಷಿಯಾಗಿರುತ್ತಾರೆ. ಒಂದು ವೇಳೆ ಹೆಬ್ಬೆರಳಿನ ಪಕ್ಕದ ಬೆರಳು ಸಮನಾಗಿದ್ದರೆ ಅಂದರೆ ಹೆಬ್ಬೆರಳು ಹಾಗೂ ಪಕ್ಕದ ಬೆರಳು ಒಂದೇ ಸಮವಿದ್ದು ಹಾಗೂ ಉಳಿದೆಲ್ಲ ಬೆರಳುಗಳು ಚಿಕ್ಕದಾಗಿದ್ದರೆ ಅಂತಹ ವ್ಯಕ್ತಿಗಳು ಸಮಾಜದಲ್ಲಿ ದೊಡ್ಡ ಹೆಸರನ್ನು ಸಂಪಾದಿಸುತ್ತಾರೆ ಎಂದು ಸೂಚಿಸುತ್ತದೆ. ಇಂಥ ವ್ಯಕ್ತಿಗಳು ಶಾಂತ ಸ್ವಭಾವದಿಂದ ಕೂಡಿರುತ್ತಾರೆ ಹಾಗೂ ಯಾರೊಂದಿಗೂ ವಿನಾಕಾರಣ ಜಗಳವನ್ನು ಮಾಡುವುದಿಲ್ಲ.
ಒಂದು ವೇಳೆ ಕಾಲಿನ ಬೆರಳುಗಳು ಯಾವ ವ್ಯಕ್ತಿಯಲ್ಲಿ ಇಳಿಮುಖವಾಗಿ ಹೋಗಿರುತ್ತದೆಯೋ ಅಂತ ವ್ಯಕ್ತಿಗಳು ತಮ್ಮ ಶ್ರೇಷ್ಟತೆಯನ್ನು ತೋರಿಸಿಕೊಳ್ಳಲು ಶ್ರಮವಹಿಸುತ್ತಾರೆ, ಅಧಿಕಾರದ ಮಾತುಗಳನ್ನು ಜಾಸ್ತಿಯಾಗಿ ಆಡುತ್ತಾರೆ, ಇಂತಹ ವ್ಯಕ್ತಿಗಳು ಏನು ಯೋಚನೆ ಮಾಡುತ್ತಾರೋ ಅದು ಸರಿ ಎಂದು ಭಾವಿಸುತ್ತಾರೆ. ಒಂದು ವೇಳೆ ಇಂಥ ವ್ಯಕ್ತಿಗಳ ಮಾತನ್ನು ಮನೆಯಲ್ಲಿ ಕೇಳದಿದ್ದರೆ ಅವರ ಮೇಲೆ ಕೋಪಗೊಳ್ಳುತ್ತಾರೆ.
ಆಕಸ್ಮಿಕವಾಗಿ ಸಾವನ್ನಪ್ಪಿದರೆ ಏನಾಗುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?
ಪ್ರತಿನಿತ್ಯ ಓಡಾಡುವ ಹಾಗೆ ಆ ದಿನವೂ ವಾಹನದಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಅಪಘಾತವಾಗಿ ಮರಣವನ್ನು ಹೊಂದಿದರೆ ಜನರು ಹೇಳುತ್ತಾರೆ ಇವತ್ತು ವಾಹನದಲ್ಲಿ ಹೋಗಿಲ್ಲ ಅಂದಿದ್ದರೆ ಅಪಘಾತವಾಗುತ್ತಿರಲಿಲ್ಲ ಎಂದು ಕಾರಣವನ್ನು ಹೇಳುತ್ತಾರೆ. ಯಾವುದೇ ರೀತಿಯ ದುರ್ಘಟನೆ ಗಳಿಂದ ಆಕಸ್ಮಿಕವಾಗಿ ಮರಣವಾದರೆ ಜನರು ಹಲವಾರು ರೀತಿಯಲ್ಲಿ ಮಾತನಾಡಿಕೊಳ್ಳುತ್ತಾರೆ.
ರಾಮಚರಿತ ಮಾಸದಲ್ಲಿ ಈ ರೀತಿ ಬರೆಯಲಾಗಿದೆ ನಮ್ಮ ನಿಮ್ಮ ಜೊತೆಗೆ ಏನು ಆಗಬೇಕಾಗಿದೆಯೋ ಅದು ನಡೆದೇ ನಡೆಯುತ್ತದೆ. ಯಾವ ಕಾರ್ಯವೂ ನಮ್ಮಿಂದ ಆಗಬಾರದು ಎಂದು ಇರುತ್ತದೆಯೊ ಅದು ಎಂದಿಗೂ ನಮ್ಮ ಕೈಯಿಂದ ಆಗುವುದಿಲ್ಲ. ಮರಣವು ಕೂಡ ವಿಧಿಯ ಅನುಸಾರ ಹೇಗೆ ಬರೆದಿದೆಯೋ ಹಾಗೆ ಆಗುವುದು. ಹುಟ್ಟುವುದು ಹಾಗೂ ಮರಣ ಹೊಂದುವುದು ಮೊದಲೆ ನಿಶ್ಚಯವಾಗಿರುತ್ತದೆ. ಹಾಗಾದರೆ ಎಲ್ಲರಲ್ಲೂ ಮೂಡುವ ಸಂಶಯವೇನೆಂದರೆ ಅಕಾಲಿಕ ಮರಣ ಯಾಕೆ ಆಗುತ್ತದೆ ಎಂದು.
ಶಾಸ್ತ್ರಗಳ ಪ್ರಕಾರ ಯಾವ ವ್ಯಕ್ತಿ ಮುಂಜಾನೆ ಎದ್ದ ತಕ್ಷಣ ಭಗವಂತನನ್ನು ಪೂಜೆ ಮಾಡಿ ನಮಸ್ಕರಿಸಿ ಚರಣ ಅಮೃತವನ್ನು ಸೇವಿಸಿ ಯಾರು ಮನೆಯಿಂದ ಹೊರಗೆ ಹೋಗುತ್ತಾರೋ ಅವರಿಗೆ ಎಂದಿಗೂ ಅಕಾಲಿಕ ಮೃತ್ಯು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಅಕಾಲಿಕ ಮೃತ್ಯು ಎಂದರೆ ಆಕಸ್ಮಿಕವಾಗಿ ರಸ್ತೆಯಲ್ಲಿ ಅಪಘಾತವಾಗುವುದು ಅಥವಾ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಹೋಗುವುದು ಇದನ್ನು ಜನರು ಅಕಾಲಿಕ ಮರಣ ಎಂದು ಹೇಳುತ್ತಾರೆ. ಶಾಸ್ತ್ರಗಳ ಪ್ರಕಾರ ಅಕಾಲಿಕ ಮರಣ ಎಂದು ಯಾವುದು ಇಲ್ಲ ಎಲ್ಲವೂ ಪೂರ್ವ ನಿಶ್ಚಿತವಾಗಿರುತ್ತದೆ.
ಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ ಒಂದು ವೇಳೆ ಯಾರಾದರೂ ಒಬ್ಬ ವ್ಯಕ್ತಿಯನ್ನು ಸಾಯಿಸಿದರೆ, ಆ ವ್ಯಕ್ತಿಯು ಪ್ರೇತಗಳು ಆಗುತ್ತಾರೆ. ಒಂದು ವೇಳೆ ವ್ಯಕ್ತಿಯು ಜೀವನವನ್ನು ಪಾರದರ್ಶಕವಾಗಿ, ಜನರಿಗೋಸ್ಕರ ಕೆಲಸವನ್ನು ಮಾಡಿ ನಿಸ್ವಾರ್ಥ ಭಾವನೆಯಿಂದ ಜೀವನ ನಡೆಸುತ್ತಿದ್ದರೆ ಹಾಗೂ ಒಂದು ವೇಳೆ ಆ ವ್ಯಕ್ತಿ ಆಕಸ್ಮಿಕವಾಗಿ ಸತ್ತರೆ ಅವನು ಭಗವಂತನ ಪಾದವನ್ನು ಸೇರುತ್ತಾನೆ ಎಂದು ಹೇಳಲಾಗಿದೆ. ಯಾವ ವ್ಯಕ್ತಿಯು ತಂದೆ-ತಾಯಿಯನ್ನು ಅವಮಾನ ಮಾಡುತ್ತಾರೋ, ಹಿರಿಯರಿಗೆ ಗೌರವ ಕೊಡುವುದಿಲ್ಲವೋ, ಭಗವಂತನನ್ನು ನಂಬುವುದಿಲ್ಲವೋ, ಜೀವನದಲ್ಲಿ ಯಾವ ವ್ಯಕ್ತಿಯು ಬರೀ ಕೆಟ್ಟ ಕೆಲಸವನ್ನೇ ಮಾಡುತ್ತಾ ಬರುತ್ತಾನೋ ಇಂತಹ ವ್ಯಕ್ತಿಯು ಆಕಸ್ಮಿಕವಾಗಿ ಮರಣವನ್ನು ಹೊಂದಿದರೆ ಪ್ರೇತಾತ್ಮವಾಗಿ ಇನ್ನುಳಿದ ಜೀವನವನ್ನು ಕಳೆಯಬೇಕಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಭೂತವು ಮನುಷ್ಯನನ್ನು ಪ್ರವೇಶ ಮಾಡಿದರೆ ಗೋಚರಿಸುವ ಲಕ್ಷಣಗಳು ಯಾವುವು ಎಂದು ತಿಳಿದಿದೆಯೇ ?
ದೈವ ಇರುವುದು ಎಷ್ಟು ಸತ್ಯವೋ ಅಷ್ಟೇ ಆತ್ಮವು ಇರುವುದು ಸತ್ಯ. ದೇವರು ನಮ್ಮ ಮೇಲೆ ದೃಷ್ಟಿಯನ್ನು ಇಟ್ಟು ನಮ್ಮನ್ನು ರಕ್ಷಣೆ ಮಾಡುತ್ತಾರೆ ಎಂಬುದು ನಂಬಿಕೆ. ಅದೇ ರೀತಿ ಒಬ್ಬ ವ್ಯಕ್ತಿ ಬದುಕಿದ್ದಾಗ ಅವರನ್ನು ತುಂಬಾ ಆತ್ಮೀಯತೆಯಿಂದ ಪ್ರೀತಿಸುತ್ತೇವೆ, ಆದರೆ ಅದೇ ವ್ಯಕ್ತಿ ಸತ್ತ ಬಳಿಕ ಒಬ್ಬರ ಮೇಲೆ ಪ್ರವೇಶ ಪಡೆಯುತ್ತಿದ್ದಾನೆ ಎಂದರೆ ಈ ಕೆಲವೊಂದು ಗುಣ ಲಕ್ಷಣಗಳು ಗೋಚರಿಸುತ್ತವೆ. ಈ ರೀತಿಯಾಗಿ ಲಕ್ಷಣಗಳು ಕಂಡುಬಂದರೆ ಭೂತವು ಪ್ರವೇಶವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ ಅಥವಾ ಪ್ರೇತಾತ್ಮ ಯಾವುದೋ ಒಂದು ಉದ್ದೇಶವನ್ನು ಇಟ್ಟುಕೊಂಡು ನಿಮ್ಮನ್ನು ಪ್ರವೇಶ ಮಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ.
ಭೂತ ಪ್ರೇತಗಳು ಆವರಿಸಿದರೆ ವ್ಯಕ್ತಿಯು ಹೇಗಿರುತ್ತಾನೆ ಎಂದರೆ ಏಕಾಂತವಾಗಿ ಕೋಣೆಯಲ್ಲಿ ಒಬ್ಬರೇ ಇರುತ್ತಾರೆ, ಒಬ್ಬರೇ ಕುಳಿತುಕೊಂಡು ನರಳುತ್ತಿರುತ್ತಾರೆ ಅಥವಾ ದುಃಖ ಪಡುತ್ತಿರುತ್ತಾರೆ, ಯಾರೊಂದಿಗೂ ಸೇರುವುದಿಲ್ಲ, ಯಾರೊಬ್ಬರ ಜೊತೆ ಮಾತನಾಡುವಾಗ ಆಕಸ್ಮಿಕವಾಗಿ ಸಿಟ್ಟುಗೊಳ್ಳುತ್ತಾರೆ, ಏನು ಮಾತನಾಡುತ್ತಿರುತ್ತೇನೆ ಎಂಬುದು ಅರಿವಿರುವುದಿಲ್ಲ, ನಗುನಗುತ್ತಾ ಅಳುತ್ತಿರುತ್ತಾರೆ, ಆತ್ಮ ವ್ಯಕ್ತಿಯನ್ನು ನೋಡಿ ಹೆದರುತ್ತದೆ, ಒಂದು ವೇಳೆ ಆತ್ಮವು ವ್ಯಕ್ತಿಯನ್ನು ಪ್ರವೇಶ ಮಾಡುತ್ತಿದೆ ಎಂದರೆ ತನ್ನ ರಕ್ಷಣೆಗಾಗಿ ಪ್ರವೇಶ ಮಾಡುತ್ತದೆ.
ಕೆಲವು ಆತ್ಮಗಳು ರಕ್ಷಣೆಗಾಗಿ ಬಂದು ಸೇರುತ್ತವೆ, ಮತ್ತೆ ಕೆಲವು ಆತ್ಮಗಳು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಬಂದು ಸೇರುತ್ತವೆ, ಮತ್ತೆ ಇನ್ನು ಕೆಲವು ಆತ್ಮಗಳು ಶತ್ರು ದೃಷ್ಟಿಯಿಟ್ಟುಕೊಂಡು ಬಂದು ಸೇರುತ್ತವೆ. ಆತ್ಮವು ಒಬ್ಬ ವ್ಯಕ್ತಿಯನ್ನು ಪ್ರವೇಶ ಮಾಡಿದಾಗ ಆತನು ಎಲ್ಲರಿಂದ ದೂರ ಇರಲು ಇಚ್ಛಿಸುತ್ತಾನೆ, ಊಟದ ಸಮಯದಲ್ಲಿ ಏನಾದರೂ ಕಿರಿಕಿರಿ ಮಾಡುತ್ತಾರೆ, ಇಷ್ಟವಾದ ಊಟವನ್ನು ಬಹಳಷ್ಟು ಇಚ್ಚೆ ಪಡುತ್ತಾನೆ, ಊಟವನ್ನು ಸೇವಿಸಬೇಕಾದಾಗ ರಾಕ್ಷಸರ ರೀತಿ ಸೇವಿಸುತ್ತಾನೇ, ಯಾವುದೇ ಕೆಲಸ ಕಾರ್ಯಕ್ಕೂ ಹೋಗದೆ ಯಾವಾಗಲೂ ಮನೆಯಲ್ಲಿ ಕೂತಿರುತ್ತಾರೆ, ಪ್ರತಿನಿತ್ಯ ಸ್ನಾನ ಮಾಡಬೇಕು ಎಂದು ಅನಿಸುವುದಿಲ್ಲ, ಬಟ್ಟೆಯನ್ನು ಬದಲಾಯಿಸಬೇಕು ಎಂದು ಅನಿಸುವುದಿಲ್ಲ, ರಾತ್ರಿಯ ಸಮಯದಲ್ಲಿ ಒಬ್ಬರೇ ಮಾತನಾಡಿಕೊಳ್ಳುತ್ತಿರುತ್ತಾರೆ ಅಥವಾ ಅಳುತ್ತಿರುತ್ತಾರೆ ಈ ರೀತಿಯ ಸಮಸ್ಯೆ ಇದ್ದಾಗ ಪ್ರೇತ ಉಚ್ಚಾಟನೆಯನ್ನು ಮಾಡಬೇಕು.
ಮಕ್ಕಳ ಮೇಲೆ ವಾಮಾಚಾರವಾಗಿದ್ದರೆ ಗುಣಲಕ್ಷಣಗಳು ಹೇಗಿರುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?
ಒಂದು ವೇಳೆ ಮಕ್ಕಳ ಮೇಲೆ ಕೆಟ್ಟದೃಷ್ಟಿ ಬಿದ್ದು ವಾಮಾಚಾರ ನಡೆದರೆ ಆ ಮಕ್ಕಳ ದೇಹವು ಒಣಗುತ್ತ ಹೋಗುತ್ತದೆ, ಊಟದ ಮೇಲೆ ಯಾವುದೇ ರೀತಿಯ ಆಸಕ್ತಿ ಇರುವುದಿಲ್ಲ, ತಂದೆ-ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ, ಮಾನಸಿಕವಾಗಿ ನರಳುತ್ತಿರುತ್ತಾರೆ, ವಿದ್ಯಾಭ್ಯಾಸದ ಕಡೆ ಆಸಕ್ತಿ ಇರುವುದಿಲ್ಲ, ಕುಟುಂಬದವರು ಯಾವುದಾದರೂ ಶುಭ ಸಮಾರಂಭಕ್ಕೆ ಹೋಗಬೇಕೆಂದರೆ ಅಡೆತಡೆಗಳು ಉಂಟಾಗುತ್ತದೆ, ಬೆಳಿಗ್ಗೆ ಎಷ್ಟು ಸಮಯ ಕಳೆದರೂ ಏಳದೆ ಹಾಸಿಗೆಯ ಮೇಲೆ ಇರುತ್ತಾರೆ, ಮಲಗಿರುವಂತ ಸ್ಥಿತಿಯಲ್ಲಿ ಯಾವಾಗಲೂ ಇರುತ್ತಾರೆ, ಇದು ಮಹಾ ದರಿದ್ರವನ್ನು ತಂದುಕೊಡುತ್ತದೆ ಹಾಗೂ ಅವರ ವೇಷಭೂಷಣಗಳು, ಹಾವಭಾವ ಎಲ್ಲವೂ ದರಿದ್ರತನದ ಕಡೆ ಬರುತ್ತದೆ. ತಂದೆ-ತಾಯಿ ಯಾವುದೇ ಒಂದು ಸಣ್ಣ ವಿಷಯವನ್ನು ಹೇಳಿದರೂ ಅವರ ಮೇಲೆ ಕಲಹ ಮಾಡುವುದು ಅಥವಾ ಕೋಪ ಆವೇಶ ಗಳಿಂದ ವರ್ತನೆ ಮಾಡುತ್ತಾರೆ ಇವೆಲ್ಲವೂ ಮಕ್ಕಳ ಮೇಲೆ ಬಲವಾಗಿ ವಾಮಾಚಾರ ನಡೆದಿದೆ ಎಂಬುದನ್ನು ಸೂಚಿಸುತ್ತದೆ.
ವಾಮಾಚಾರ ಏಕೆ ಮಾಡುತ್ತಾರೆ ಎಂದರೆ ನಿಮ್ಮ ಏಳಿಗೆಯನ್ನು, ಅಭಿವೃದ್ಧಿಯನ್ನು ಸಹಿಸಲಾಗದೆ ಹಾಗೂ ಮನೆಯ ಮೇಲಿರುವ ಶತ್ರು ದೃಷ್ಟಿ ಹಾಗೂ ನಾಶ ಮಾಡಲೇಬೇಕು ಎಂದು ಕಾಯುತ್ತಿರುವವರು ಈ ಪ್ರಯೋಗಕ್ಕೆ ಮುಂದಾಗುತ್ತಾರೆ. ಈ ಪ್ರಭಾವದಿಂದ ಹೆಚ್ಚಾಗಿ ನರಳುವ ವ್ಯಕ್ತಿಯೆಂದರೆ ತಂದೆ ತಾಯಿ, ಏಕೆಂದರೆ ಮಕ್ಕಳಿಗೆ ಏನೇ ಆದರೂ ತಂದೆ-ತಾಯಿಗೆ ಅದನ್ನು ಸಹಿಸಲು ಸಾಧ್ಯವಾಗುವುದಿಲ್ಲ.
ಇದರಿಂದ ಮಕ್ಕಳಲ್ಲಿ ಕೋಪ, ಆವೇಶ, ಮೊಂಡುತನ ಈ ರೀತಿ ಲಕ್ಷಣಗಳು ಕಂಡು ಬಂದಾಗ ತಂದೆ-ತಾಯಿಯರು ಎಚ್ಚರವಹಿಸಬೇಕು, ಏಕೆಂದರೆ ಒಂದು ವೇಳೆ ವಾಮಾಚಾರ ನಡೆದರೆ ದುಶ್ಚಟಗಳಿಗೆ ಮುಂದಾಗುತ್ತಾರೆ, ಪದೇ ಪದೇ ಮರಣ ವಾಗಬೇಕು ಎಂದು ಅಪೇಕ್ಷಿಸುತ್ತಾರೆ, ಮನೆಯನ್ನು ಬಿಟ್ಟು ಹೋಗಬೇಕು ಎಂದು ಅನ್ನಿಸುತ್ತಿರುತ್ತದೆ, ಒಂಟಿಯಾಗಿ ಇರಬೇಕು ಎಂದೆನಿಸುತ್ತದೆ, ತಂದೆತಾಯಿಯನ್ನು ದ್ವೇಷದ ಸ್ವಭಾವದಿಂದ ನೋಡುವಂತ ಆಗುತ್ತಾರೆ, ವಾಹನದಿಂದ ಪದೇಪದೇ ಬೀಳುತ್ತಿರುತ್ತಾರೆ, ವಾರದಲ್ಲಿ ಒಂದೆರಡು ದಿನ ಮಾತ್ರ ಆರಾಮಾಗಿ ಇರುತ್ತಾರೆ ಇನ್ನು ಮಿಕ್ಕಿದ ದಿನವೆಲ್ಲ ನರಕಯಾತನೆಯನ್ನು ಅನುಭವಿಸುತ್ತಿರುತ್ತಾರೆ. ಆದ್ದರಿಂದ ಈ ಗುಣ ಲಕ್ಷಣಗಳು ಕಂಡುಬಂದರೆ ತಂದೆ-ತಾಯಿಯರು ಎಚ್ಚರದಿಂದ ಇರಬೇಕು.
ಹಣದ ಸಮಸ್ಯೆ ನಿವಾರಣೆಯಾಗಿ ಧನ ಸಂಪತ್ತು ವೃದ್ಧಿ ಆಗಬೇಕೆಂದರೆ ಈ ಮಂತ್ರವನ್ನು ಪಠಿಸಿ
ಪ್ರತಿಯೊಬ್ಬರ ಜೀವನದಲ್ಲೂ ಹಣವು ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ, ಏಕೆಂದರೆ ಹಣವಿಲ್ಲದಿದ್ದರೆ ಯಾವ ಕೆಲಸ ಕಾರ್ಯಗಳನ್ನು ಹಾಗೂ ಜೀವನದಲ್ಲಿ ಯಾವುದನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಇನ್ನೂ ಹಲವರು ತಮಗಿರುವ ಹಲವಾರು ಕಷ್ಟಗಳಿಂದ ಹೊರಬಂದು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ವೃದ್ಧಿಸಿಕೊಳ್ಳಲು ತುಂಬಾ ಕಷ್ಟಪಡುತ್ತಿರುತ್ತಾರೆ. ಹಾಗಾದರೆ ಹಣದ ಸಮಸ್ಯೆಯನ್ನು ದೂರ ಮಾಡಬೇಕೆಂದರೆ ಕುಬೇರನ ಯಾವ ಮಂತ್ರವನ್ನು ಪಠಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಕುಬೇರನ ಈ ಮಂತ್ರವನ್ನು ಪ್ರತಿನಿತ್ಯ ಪೂಜೆಯ ಸಮಯದಲ್ಲಿ ಹೇಳುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಹಾಗೂ ಹಣದ ಹರಿವು ಕೂಡ ಹೆಚ್ಚಾಗುತ್ತದೆ ಎಂದರೆ ತಪ್ಪಾಗಲಾರದು. ಕುಬೇರನ ಈ ಮಂತ್ರವು ಬಹಳ ಶಕ್ತಿಶಾಲಿಯಾದ ಮಂತ್ರವಾಗಿದ್ದು, ಇದರಿಂದ ಯಾವುದೇ ರೀತಿಯ ಹಣದ ಸಮಸ್ಯೆ ಇದ್ದರೂ ಈ ಮಂತ್ರವನ್ನು ಪಠಿಸುವುದರಿಂದ ಕುಬೇರ ದೇವರು ಸಂತುಷ್ಟನಾಗಿ ನಿಮ್ಮ ಜೀವನದಲ್ಲಿ ಇರುವಂತ ಕಷ್ಟಗಳು ಹಾಗೂ ಹಣದ ಸಮಸ್ಯೆ ದೂರವಾಗಿ ಆರ್ಥಿಕ ಪರಿಸ್ಥಿತಿಯೂ ಸುಧಾರಣೆಯಾಗುತ್ತದೆ. ಕುಬೇರನ ಈ ಮಂತ್ರವನ್ನು ವಿಶೇಷವಾಗಿ ಮಂಗಳವಾರ ಹಾಗೂ ಶುಕ್ರವಾರ ದಿನದಂದು ಪಠಿಸಿದರೆ ತುಂಬಾ ಒಳ್ಳೆಯದು. ಒಂದು ವೇಳೆ ಈ ಮಂತ್ರವನ್ನು ಪ್ರತಿನಿತ್ಯ ಪಠಿಸಿದರೂ ಯಾವುದೇ ತೊಂದರೆ ಇಲ್ಲ.
ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಕ್ಲೀಂ ವಿತ್ತೇಶ್ವರಾಯ ನಮಃ
ಈ ಮೇಲಿನ ಕುಬೇರನ ಮಂತ್ರವನ್ನು ದೇವರಕೋಣೆಯಲ್ಲಿ ದೀಪವನ್ನು ಹಚ್ಚಿದ ನಂತರ ಗಣೇಶನ ಪೂಜೆಯನ್ನು ಮಾಡಿ ಕುಬೇರನ ಮಂತ್ರವನ್ನು ಪಠಿಸಬೇಕು.ಕುಬೇರನ ಮಂತ್ರವನ್ನು ಮಂಗಳವಾರ ಹಾಗೂ ಶುಕ್ರವಾರದಂದು 108 ಬಾರಿ ಪಠಿಸಬೇಕು. ಕುಬೇರನ ಈ ಮಂತ್ರವನ್ನು ಪಠಿಸುವುದರಿಂದ ಹಣದ ಸಮಸ್ಯೆಯು ದೂರವಾಗಿ ಆರ್ಥಿಕ ಪರಿಸ್ಥಿತಿಯು ಏಳಿಗೆಯನ್ನು ಕಾಣುತ್ತದೆ. ಆದ್ದರಿಂದ ಕುಬೇರನ ಮಂತ್ರವನ್ನು ಪ್ರತಿನಿತ್ಯ ಪೂಜೆ ಮಾಡುವ ಸಮಯದಲ್ಲಿ ಮರೆಯದೆ ಜಪಿಸಿದರೆ ಕುಬೇರನ ಅನುಗ್ರಹದಿಂದ ಕಷ್ಟಗಳೆಲ್ಲಾ ನಿವಾರಣೆಯಾಗಿ, ಹಣದ ಹರಿವು ಹೆಚ್ಚಾಗಿ ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಕುಟುಂಬದ ಜೊತೆ ಜೀವನವನ್ನು ನಡೆಸಬಹುದು ಎಂದರೆ ತಪ್ಪಾಗಲಾರದು.
ಚಿಕ್ಕಮಗಳೂರಿನ ಸೀತಾಳಯ್ಯನಗಿರಿ ಬೆಟ್ಟದ ಬಗ್ಗೆ ಕಿರು ಪರಿಚಯ.
ಹಿಮಾಲಯ ಹಾಗೂ ನೀಲಗಿರಿ ಬೆಟ್ಟದ ಮಧ್ಯದ ಪ್ರದೇಶದಲ್ಲಿ ಇರುವ ಅತಿ ಎತ್ತರದ ಪರ್ವತ ಮುಳ್ಳಯ್ಯನಗಿರಿ. ಸಮುದ್ರಮಟ್ಟದಿಂದ 6312 ಅಡಿ ಎತ್ತರವಿರುವ ಮುಳ್ಳಯ್ಯನಗಿರಿ ಕರ್ನಾಟಕದ ಅತಿ ಎತ್ತರವಾದ ಪರ್ವತ. ಮುಳ್ಳಯ್ಯ ಸ್ವಾಮಿಯ ಗದ್ದುಗೆಯನ್ನು ಸಹ ಹೊಂದಿರುವ ಮುಳ್ಳಯ್ಯನಗಿರಿಗೆ ಭಕ್ತಾದಿಗಳು ಹೆಚ್ಚಾಗಿ ಆಗಮಿಸುತ್ತಿರುತ್ತಾರೆ. ಮುಳ್ಳಯ್ಯನಗಿರಿಗೂ ಮುಂಚೆ ಒಂದು ಪ್ರವಾಸಿತಾಣವೂ ಸಿಗಲಿದೆ ಹಾಗೂ ಮುಳ್ಳಯ್ಯನಗಿರಿಗೆ ಬರುವ ಭಕ್ತಾದಿಗಳು ಮೊದಲು ಅಲ್ಲಿಯ ಧಾರ್ಮಿಕ ಕ್ಷೇತ್ರವಾದ ಅಲ್ಲಿ ದೇವರ ದರ್ಶನವನ್ನು ಪಡೆದು ಮುಂದೆ ಸಾಗಬೇಕು ಎಂಬುದು ಅಲ್ಲಿಯ ಸ್ಥಳೀಯರ ಪದ್ಧತಿ. ಧಾರ್ಮಿಕ ಕ್ಷೇತ್ರವಾಗಿರುವ ಸೀತಾಳಯ್ಯನಗಿರಿ ಮುಳ್ಳಯ್ಯನಗಿರಿಯಷ್ಟೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ.
ಮುಳ್ಳಯ್ಯನಗಿರಿ ತಲುಪುವ ಮೊದಲೇ ಸಿಗುವ ಗಿರಿಧಾಮ ಸೀತಾಳಯ್ಯನಗಿರಿ. ಸೀತಾಳಯ್ಯನ ಗಿರಿಯಲ್ಲಿ ಒಂದು ಮಠ ಹಾಗೂ ಸೀತಾಳ ಮಲ್ಲಿಕಾರ್ಜುನ ದೇವಸ್ಥಾನವನ್ನು ಹೊಂದಿದೆ. ಮುಳ್ಳಯ್ಯನಗಿರಿಗೆ ಹೋಗುವವರು ಮೊದಲು ಸೀತಾಳ ಮಲ್ಲಿಕಾರ್ಜುನರ ದರ್ಶನವನ್ನು ಪಡೆದು ನಂತರ ಮುಳ್ಳಯ್ಯನಗಿರಿ ಹೋಗುತ್ತಾರೆ. ಸೀತಾಳ ಮಲ್ಲಿಕಾರ್ಜುನಯ್ಯ ಅಲೆಯು ಶಿವನಿಗೆ ಮುಡಿಪಾಗಿದೆ. ಸೀತಾಳ ಮಲ್ಲಿಕಾರ್ಜುನ ವಿಗ್ರಹವು ಯಾವಾಗಲೂ ನೀರಿನಿಂದ ಆವೃತವಾಗಿರುತ್ತದೆ. ಅರ್ಚಕರು ಪೂಜೆ ಮಾಡುವಾಗ ವಿಗ್ರಹ ಸುತ್ತ ನೀರು ತುಂಬಿಕೊಳ್ಳುವುದು ಭಕ್ತಾದಿಗಳಿಗೆ ನೋಡಲು ಸಿಗುತ್ತದೆ. ಈ ದೇವಾಲಯದಿಂದ ಈ ಸ್ಥಳಕ್ಕೆ ಸೀತಾಳಯ್ಯನಗಿರಿ ಎಂಬ ಹೆಸರು ಕೂಡಾ ಬಂದಿದೆ.
ಸೀತಾಳ ಮಲ್ಲಿಕಾರ್ಜುನ ಆಲಯದ ಎಡಭಾಗದಲ್ಲಿ ಒಂದು ಗುಹೆ ಇದೆ, ಈ ಗುಹೆಯು ಮುಳ್ಳಯ್ಯನಗಿರಿ ಬೆಟ್ಟದ ಮೇಲಿರುವ ಮುಳ್ಳಯ್ಯ ಸ್ವಾಮಿಯ ಗದ್ದುಗೆಗೆ ಸಂಪರ್ಕವನ್ನು ಕಲ್ಪಿಸುತ್ತದೆ ಎನ್ನಲಾಗುತ್ತದೆ. ಸೀತಾಳಯ್ಯನಗಿರಿ ಇಂದ ಮುಳ್ಳಯ್ಯನಗಿರಿಗೆ ತಲುಪಲು ರಸ್ತೆ ಮಾರ್ಗದ ಜೊತೆಗೆ ಕಾಲುದಾರಿಯ ಸಹ ಇದೆ. ಬಹಳಷ್ಟು ಭಕ್ತಾದಿಗಳು ಸೀತಾಳಯ್ಯನ ಗಿರಿಯಲ್ಲಿ ವಾಹನವನ್ನು ನಿಲ್ಲಿಸಿ ಅಲ್ಲಿಂದ 3 ಕಿಲೋಮೀಟರ್ ಕಾಲುದಾರಿಯಲ್ಲಿ ನಡೆದು ಮುಳ್ಳಯ್ಯನಗಿರಿಯನ್ನು ತಲುಪುತ್ತಾರೆ. ಈ ಸ್ಥಳದಲ್ಲಿ ಹಲವಾರು ಕನ್ನಡ ಸಿನಿಮಾದ ಚಿತ್ರೀಕರಣವೂ ಸಹ ನಡೆದಿದೆ. ಸೀತಾಳಯ್ಯನಗಿರಿಯು ಚಿಕ್ಕಮಗಳೂರಿನಿಂದ 19 ಕಿಲೋಮೀಟರ್ ದೂರವಿದೆ. ಕ್ಷಣ ಕ್ಷಣಕ್ಕೂ ಬದಲಾಗುವ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೀತಾಳಯ್ಯನಗಿರಿಗೆ ಆಗಮಿಸುತ್ತಾರೆ ಎಂದರೆ ತಪ್ಪಾಗಲಾರದು.
ಈ 3 ಹೆಸರಿನ ಹುಡುಗಿಯರನ್ನು ಮದುವೆಯಾದರೆ ಗಂಡನ ಅದೃಷ್ಟವೇ ಬದಲಾಗುತ್ತದೆ.
ವ್ಯಕ್ತಿಯ ರಾಶಿ, ಜನ್ಮ ನಕ್ಷತ್ರ, ಕುಂಡಲಿಯ ಮೂಲಕ ಮುಂಬರುವ ಸಮಯದ ಬಗ್ಗೆ ತಿಳಿಯಲಾಗುತ್ತದೆ. ಆ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾನೋ ಅಥವಾ ಇಲ್ಲವೋ ಹಾಗೂ ಮುಂದಿನ ದಿನಗಳಲ್ಲಿ ಹೇಗೆ ಜೀವನವನ್ನು ನಡೆಸುತ್ತಾನೆ ಎಂಬುದು ಸಹ ತಿಳಿಯುತ್ತದೆ.ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದಲೇ ವ್ಯಕ್ತಿಯ ಸ್ವಭಾವ, ನಡವಳಿಕೆ ಹಾಗೂ ಹೇಗಿರುತ್ತಾನೆ ಎಂಬುದು ತಿಳಿಯುತ್ತದೆ. ಹೆಸರಿನ ಮೊದಲನೆಯ ಅಕ್ಷರವು ವ್ಯಾಪಾರದಲ್ಲಿ ಹಾಗೂ ಜೀವನದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಶಾಸ್ತ್ರಗಳ ಪ್ರಕಾರ ಕೆಲವೊಂದು ಹೆಸರನ್ನು ಇಟ್ಟುಕೊಂಡವರು ತುಂಬಾ ಅದೃಷ್ಟಶಾಲಿಗಳು ಆಗಿರುತ್ತಾರೆ. ಅಂತಹ ವ್ಯಕ್ತಿಯ ಜೀವನ ತುಂಬಾ ಸುಂದರವಾಗಿರುತ್ತದೆ ಆದರೆ ಈ ವ್ಯಕ್ತಿಯು ಯಾರ ಜೊತೆಗೆ ವಿವಾಹವಾಗುತ್ತಾನೋ ಅವರಿಗೂ ಅದೃಷ್ಟವನ್ನು ಹಾಗೂ ಸಂತಸವನ್ನು ತಂದುಕೊಡುತ್ತದೆ. ಹಾಗಾದರೆ ಆ ಮೂರು ಹೆಸರಿನ ಹುಡುಗಿಯರು ಯಾರು ಎಂದು ತಿಳಿದುಕೊಳ್ಳೋಣ ಬನ್ನಿ.
‘ಅ’ ಅಕ್ಷರದಿಂದ ಶುರುವಾಗುವ ಹುಡುಗಿಯರು ಗಂಡನಿಗೆ ತುಂಬಾ ಭಾಗ್ಯವನ್ನು ತಂದುಕೊಡುತ್ತಾರೆ. ಈ ಅಕ್ಷರದ ಹೆಣ್ಣು ಮಕ್ಕಳು ಮಾತಿನಿಂದ ಹಾಗೂ ಮನಸ್ಸಿನಿಂದ ಸಂತೋಷವನ್ನು ತಂದುಕೊಡುತ್ತಾರೆ. ಇವರ ಒಳ್ಳೆಯ ಗುಣದಿಂದ ಎಲ್ಲರನ್ನು ಬೇಗ ಇವರ ಹತ್ತಿರ ಆಕರ್ಷಿಸಿಕೊಳ್ಳುತ್ತಾರೆ. ಈಕೆಯು ತನ್ನ ಗಂಡನಿಗಾಗಿ ಎಷ್ಟು ಬೇಕಾದರೂ ಶ್ರಮವನ್ನು ತೆಗೆದುಕೊಳ್ಳುತ್ತಾರೆ ಹಾಗೂ ಕುಟುಂಬವನ್ನು ಸಂತೋಷದಿಂದ ಸರಿದೂಗಿಸಿಕೊಂಡು ಹೋಗುತ್ತಾರೆ.
‘ಸ’ ಅಕ್ಷರದಿಂದ ಶುರುವಾಗುವ ಹುಡುಗಿಯರು ತುಂಬಾ ಸುಂದರವಾಗಿರುತ್ತಾರೆ ಹಾಗೂ ತುಂಬಾ ಮೃದು ಮನಸ್ಸಿನವರು ಆಗಿರುತ್ತಾರೆ. ಇಂಥ ಹುಡುಗಿಯರ ಜೊತೆ ಯಾವ ಹುಡುಗನ ಮದುವೆಯಾಗುತ್ತದೆಯೋ ಅವನು ತುಂಬಾ ಭಾಗ್ಯಶಾಲಿ ಆಗಿರುತ್ತಾನೆ ಹಾಗೂ ಅದೃಷ್ಟವಂತನೂ ಆಗಿರುತ್ತಾನೆ. ಈಕೆ ತಮ್ಮ ಸಂಗಾತಿಯೊಂದಿಗೆ ತುಂಬಾ ಪ್ರಾಮಾಣಿಕತೆಯಿಂದ ಇರುತ್ತಾರೆ.
‘ಪ’ ಅಕ್ಷರದಿಂದ ಶುರುವಾಗುವ ಹುಡುಗಿಯರಲ್ಲಿ ಸ್ವಲ್ಪ ಸಿಡುಕುತನ ಇರುತ್ತದೆ, ಆದರೆ ಬೇಗನೆ ಸಮಾಧಾನಗೊಳ್ಳುತ್ತಾರೆ. ಈಕೆಯು ತಮ್ಮ ಪತಿಯನ್ನು ತುಂಬಾ ಪ್ರೀತಿಸುತ್ತಾರೆ ಹಾಗೂ ಇವರ ಜ್ಞಾಪಕಶಕ್ತಿಯು ತುಂಬಾ ಚೆನ್ನಾಗಿರುತ್ತದೆ. ಈಕೆ ತಮ್ಮ ಕುಟುಂಬದ ಬಗ್ಗೆ ಹೆಚ್ಚಾಗಿ ಕಾಳಜಿಯನ್ನು ವಹಿಸುತ್ತಾರೆ. ಗಂಡನ ಯಶಸ್ಸಿಗಾಗಿ ಯಾವುದೇ ಕಷ್ಟ ಬಂದರೂ ಹೆದರುವುದಿಲ್ಲ ಹಾಗೂ ಅಂದುಕೊಂಡಂತ ಕೆಲಸ ಕಾರ್ಯಗಳನ್ನು ಯಾವುದೇ ಕಾರಣಕ್ಕೂ ಮುಗಿಸದೇ ಬಿಡುವುದಿಲ್ಲ.