Your cart is currently empty!
Author: 53721pwpadmin
ನಾಯಿಯ ಜನ್ಮ ದೊರಕುವುದಕ್ಕೆ ಏನು ಕಾರಣ ಎಂದು ತಿಳಿದಿದೆಯೇ ನಿಮಗೆ ?
ಮನುಷ್ಯನ ಸಾವಿನ ನಂತರ ಅವನ ಕರ್ಮಗಳ ಅನುಸಾರವಾಗಿ ಮುಂದಿನ ಜನ್ಮದಲ್ಲಿ ಯಾವುದಾದರೂ ಒಂದು ರೂಪದಲ್ಲಿ ಜನ್ಮವು ದೊರಕುತ್ತದೆ. ಯಾವ ಮನುಷ್ಯನು ಜೀವಿತಕಾಲದಲ್ಲಿ ಬಹಳಷ್ಟು ಪಾಪದ ಕೆಲಸಗಳನ್ನು ಮಾಡುತ್ತಾನೋ ಆ ವ್ಯಕ್ತಿಗೆ ಮುಂದಿನ ಜನ್ಮದಲ್ಲಿ ತನ್ನ ನೋವನ್ನು ಬೇರೆಯವರೊಂದಿಗೆ ಹೇಳಿಕೊಳ್ಳುವುದಕ್ಕೂ ಸಾಧ್ಯವಾಗದ ರೀತಿ ಜನ್ಮವು ಸಿಗುತ್ತದೆ.
ಭವಂತ ಶ್ರೀರಾಮನಿಗೆ ಸಭೆಯಲ್ಲಿ ಕೂತಿರುವಾಗ ಒಂದು ನಾಯಿಯು ಅಳುತ್ತಿರುವ ಶಬ್ದವು ಕೇಳಿಬರುತ್ತದೆ, ಆದರೆ ದ್ವಾರಪಾಲಕರು ಆ ನಾಯಿಯನ್ನು ಓಡಿಸುತ್ತಾರೆ. ಆದರೆ ಮರುದಿನ ಮತ್ತೆ ನಾಯಿಯು ಸಭೆಯ ಹತ್ತಿರ ಬಂದು ಅಳುವುದಕ್ಕೆ ಪ್ರಾರಂಭಿಸುತ್ತದೆ, ಆದರೆ ದ್ವಾರಪಾಲಕರು ಮತ್ತೆ ಅದನ್ನು ಓಡಿಸುತ್ತಾರೆ. ಸಭೆಯ ಮೂರನೇ ದಿನವೂ ರಾಮನಿಗೆ ನಾಯಿಯು ಅಳುವ ಶಬ್ದ ಕೇಳಿಬರುತ್ತದೆ. ಆಗ ಶ್ರೀರಾಮರು ದ್ವಾರಪಾಲಕರಿಗೆ ನಾಯಿಯನ್ನು ಸಭೆಯ ಒಳಗೆ ಬರಲು ಬಿಡುವುದಕ್ಕೆ ಹೇಳುತ್ತಾರೆ.
ನಾಯಿಯು ದ್ವಾರಪಾಲಕರಿಗೆ ಹಿಂದಿನ ಜನ್ಮದಲ್ಲಿ ಮಾಡಿದ್ದ ಪಾಪ ಕರ್ಮದಿಂದ ನನಗೆ ಈ ಜನ್ಮದಲ್ಲಿ ನಾಯಿಯ ರೂಪ ದೊರಕಿದೆ ಆದ್ದರಿಂದ ದೇವಾಲಯಗಳಲ್ಲಿ ಅಥವಾ ಯಜ್ಞವನ್ನು ಮಾಡುವ ಸ್ಥಳಗಳಲ್ಲಿ , ರಾಜ ಸಭೆಗಳಲ್ಲಿ ಹೋಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಪ್ರಭು ಶ್ರೀರಾಮರಿಗೆ ಇಲ್ಲೇ ಬಂದು ಭೇಟಿ ಮಾಡಲು ಹೇಳಿ ಎಂದು ಹೇಳಿತು ನಾಯಿ.ದ್ವಾರಪಾಲಕರು ಈ ವಿಷಯವನ್ನು ಶ್ರೀರಾಮನಿಗೆ ತಿಳಿಸಿದಾಗ ಶ್ರೀರಾಮರು ನಾಯಿ ಇರುವ ಸ್ಥಳಕ್ಕೆ ಬರುತ್ತಾರೆ, ಆಗ ನಾಯಿ ಶ್ರೀರಾಮನಿಗೆ ನಾನು ಯಾವುದೇ ತಪ್ಪನ್ನು ಮಾಡಿಲ್ಲ ಹಾಗಿದ್ದರೂ ಒಬ್ಬ ಸನ್ಯಾಸಿ ನನ್ನ ಕಾಲಿಗೆ ಕಲ್ಲಿನಿಂದ ಹೊಡೆದಿದ್ದಾರೆ ಅದರಿಂದ ಕಾಲಿಗೆ ಪೆಟ್ಟಾಗಿ ತುಂಬಾ ನೋವಾಗುತ್ತಿದೆ ಎಂದು ಹೇಳುತ್ತದೆ.
ನಾಯಿಯ ಮಾತನ್ನು ಆಲಿಸಿದ ಶ್ರೀರಾಮರು ಸನ್ಯಾಸಿಯನ್ನು ಕರೆಸುತ್ತಾರೆ. ಸನ್ಯಾಸಿಯು ಶ್ರೀರಾಮರಿಗೆ ಈ ರೀತಿ ಹೇಳುತ್ತಾರೆ, ನಾನು ಭಿಕ್ಷೆಯನ್ನು ಬೇಡುತ್ತಿದ್ದಾಗ ಈ ನಾಯಿ ನನ್ನ ಅನ್ನವನ್ನು ಸ್ಪರ್ಶ ಮಾಡಿತ್ತು. ಆಗ ಮಧ್ಯಾಹ್ನ ವಾಗಿದ್ದರಿಂದ ತುಂಬಾ ಹಸಿವಾಗಿತ್ತು ಆ ಕ್ಷಣದಲ್ಲಿ ಈ ನಾಯಿ ಸ್ಪರ್ಶ ಮಾಡಿದ್ದರಿಂದ ಕೋಪ ಬಂದು ಹೊಡೆದೆ ಎಂದು ಹೇಳಿದರು. ಆಗ ಶ್ರೀರಾಮರು ನಾಯಿ ಹತ್ತಿರ ಸನ್ಯಾಸಿಯು ತಪ್ಪು ಮಾಡಿದ್ದಾರೆ ನೀನು ಯಾವ ಶಿಕ್ಷೆಯನ್ನು ಬೇಕಾದರೂ ಕೊಡಬಹುದು ಎಂದು ಹೇಳುತ್ತಾರೆ.ನಾಯಿಯು ಶ್ರೀ ರಾಮರಿಗೆ ಆ ಸನ್ಯಾಸಿಯನ್ನು ಯಾವುದಾದರೂ ಸೇವಾ ಮಂದಿರದ ಮಾಲೀಕನಾಗಿ ಮಾಡಿ ಎಂದು ಹೇಳುತ್ತದೆ. ನಂತರ ಶ್ರೀರಾಮರು ನಾಯಿಯ ಮಾತಿನ ಪ್ರಕಾರ ಸನ್ಯಾಸಿಯನ್ನು ಒಂದು ಸೇವಾ ಮಂದಿರದ ಮಾಲೀಕನಾಗಿ ಮಾಡುತ್ತಾರೆ. ಇದನ್ನು ಕಂಡ ಜನರು ನಿಮಗೆ ಸನ್ಯಾಸಿ ಹೊಡೆದಿದ್ದರು ಈ ರೀತಿಯ ವರ ದಾನವನ್ನು ಯಾಕೆ ಕೇಳಿದಿರಿ ಎಂದಾಗ ನಾಯಿಯು ಯಾರೂ ಬ್ರಾಹ್ಮಣರಿಗೆ ಕೊಡುವ ವಸ್ತುಗಳನ್ನು ಕಳವು ಮಾಡುತ್ತಾರೆ, ಕೆಟ್ಟ ದಾರಿಯಲ್ಲಿ ಹೋಗಿ ಧನ ಸಂಪತ್ತನ್ನು ಗಳಿಸುತ್ತಾರೆ ಈ ರೀತಿ ವ್ಯಕ್ತಿಗಳು ಸತ್ತು ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತಾರೆ. ಆಗ ನಾಯಿಯು ಹಿಂದಿನ ಜನ್ಮದಲ್ಲಿ ನಾನು ಮಠದ ಋಷಿಯಾಗಿದ್ದೆ, ಆದರೆ ನಾನು ಮಾಡಿದ ಪಾಪ ಕರ್ಮಗಳಿಂದ ನನಗೆ ಈ ಜನ್ಮದಲ್ಲಿ ನಾಯಿಯ ರೂಪ ದೊರೆತಿದೆ. ಆದ್ದರಿಂದ ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಕೆಲಸಗಳಿಗಾಗಿ ಪ್ರಾಯಶ್ಚಿತವಾಗಿ ಆ ಸನ್ಯಾಸಿಗೆ ಸೇವಾಮಂದಿರದ ಮಾಲೀಕನಾಗಿ ಪಶುಪಕ್ಷಿಗಳಿಗೆ ಹಾಗೂ ಕಡುಬಡವರಿಗೆ ಎಲ್ಲಾ ತರಹದ ದಾನವನ್ನು ಮಾಡಲಿ ಎಂದು ಇಚ್ಛೆ ಪಟ್ಟೆ ಎಂದು ಹೇಳುತ್ತದೆ.
ವಾರದ ಏಳು ದಿನ ಯಾವ ಯಾವ ಮಂತ್ರವನ್ನು ಜಪಿಸಬೇಕು ಎಂಬುದು ತಿಳಿದಿದೆಯೇ ನಿಮಗೆ ?
ಒಂದು ವೇಳೆ ಪ್ರತಿದಿನವೂ ನಾವು ಚೆನ್ನಾಗಿರಬೇಕು ಎಂದರೆ ಮೊದಲಿಗೆ ನಮ್ಮ ಮನಸ್ಸು ಸ್ವಚ್ಛವಾಗಿರಬೇಕು, ಶಾಂತಿಯಿಂದ ಇರಬೇಕು. ನಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಬೇಕೆಂದರೆ ದೈವಬಲ ಎಂಬುದು ನಮ್ಮ ಜೊತೆ ಇರಬೇಕು. ದೇವರನ್ನು 24 ಗಂಟೆಗಳ ಕಾಲ ಪೂಜಿಸಬೇಕು ಎಂಬುದು ಇಲ್ಲ, ಆದರೆ ಮುಂಜಾನೆ ಸ್ನಾನವನ್ನು ಮಾಡಿ ಕೆಲವು ಸಮಯ ದೇವರ ಮಂತ್ರವನ್ನು ಭಕ್ತಿಯಿಂದ ಜಪಿಸಿದರೆ ಸಾಕು ಭಗವಂತನು ಸಂತುಷ್ಟನಾಗುತ್ತಾನೆ. ಹಾಗಾದರೆ ವಾರದ ಏಳು ದಿನ ಯಾವ ಯಾವ ಮಂತ್ರವನ್ನು ಜಪಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.
ಭಾನುವಾರ ಶಕ್ತಿದೇವತೆ ಹಾಗೂ ಸೂರ್ಯದೇವನ ದಿನ ಎಂದು ಕರೆಯಲಾಗುತ್ತದೆ. ಹಾಗಾಗಿ ಭಾನುವಾರದಂದು ದುರ್ಗಾದೇವಿಯನ್ನು ಸ್ಮರಿಸಿಕೊಂಡು ಓಂ ದುರ್ಗಾಯ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸುವುದರಿಂದ ದುರ್ಗಾದೇವಿಯ ಅನುಗ್ರಹಕ್ಕೆ ಪ್ರಾಪ್ತಿಯಾಗಬಹುದು. ಹಾಗೆಯೇ ಭಾನುವಾರದಂದು ಓಂ ಸೂರ್ಯದೇವಾಯ ನಮಃ ಎಂಬ ಮಂತ್ರವನ್ನು ಜಪಿಸುವುದು ಒಳ್ಳೆಯದು. ಸೂರ್ಯದೇವನ ಏಳು ಕುದುರೆಗಳು ವಾರದ ಏಳು ದಿನಗಳನ್ನು ಸೂಚಿಸುತ್ತದೆ.
ಸೋಮವಾರ ಶಿವನ ಆರಾಧನೆಯ ದಿನವಾಗಿದೆ ಹಾಗಾಗಿ ಶಿವನ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜಪಿಸುವುದರಿಂದ ಕಷ್ಟಗಳೆಲ್ಲ ಕರಗಿ ಹೋಗುತ್ತದೆ. ಯಾವ ವ್ಯಕ್ತಿಯು ಈ ಮಂತ್ರವನ್ನು ಪ್ರತಿನಿತ್ಯ ಜಪಿಸುತ್ತಾನೋ ಅವನಿಗೆ ಕಷ್ಟಗಳು ಹತ್ತಿರವೂ ಸುಳಿಯುವುದಿಲ್ಲ. ಶಿವನ ಈ ಮಂತ್ರವು 5 ಅಕ್ಷರಗಳಿಂದ ಕೂಡಿದೆ. ಈ 5 ಅಕ್ಷರವೂ ಭೂಮಿ,ನೀರು, ಬೆಂಕಿ, ಗಾಳಿ ಹಾಗೂ ಆಕಾಶವನ್ನು ಸೂಚಿಸುತ್ತದೆ ಮತ್ತು ಇವುಗಳನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ.
ಮಂಗಳವಾರ ಆಂಜನೇಯಸ್ವಾಮಿಗೆ ಅರ್ಪಿತವಾದ ದಿನವಾಗಿದೆ. ಮಂಗಳವಾರದಂದು ಓಂ ಶ್ರೀ ಹನುಮತೇ ನಮಃ ಹಾಗೂ ಹನುಮನ್ ಗಾಯತ್ರಿ ಮಂತ್ರವನ್ನು ಯಾರು ಜಪಿಸುತ್ತಾರೋ ಅವರೇ ಪುಣ್ಯವಂತರು ಹಾಗೂ ಅವರು ಮಾಡುವ ಕೆಲಸಕಾರ್ಯಗಳಲ್ಲಿ ಯಶಸ್ಸು ಎಂಬುದು ಕಟ್ಟಿಟ್ಟ ಬುತ್ತಿ.
ಬುದುವಾರ ವಿಘ್ನವಿನಾಶಕ ಗಣೇಶನನ್ನು ನೆನೆಯುವ ದಿನ. ಓಂ ಶ್ರೀ ಗಣೇಶಾಯ ನಮಃ ಎಂಬ ಮಂತ್ರವನ್ನು ಹೇಳಿಕೊಂಡು ಭಗವಂತನನ್ನು ಪೂಜಿಸಬೇಕು. ಯಾರ ಮನೆಯಲ್ಲಿ ಪ್ರತಿನಿತ್ಯ ಈ ಮಂತ್ರವನ್ನು ಜಪಿಸುತ್ತಾರೋ ಅಂತವರು ಸುಖ-ಶಾಂತಿ ಹಾಗೂ ನೆಮ್ಮದಿಯಿಂದ ಜೀವನವನ್ನು ನಡೆಸಬಹುದು.
ಗುರುವಾರ ಮಹಾವಿಷ್ಣು, ರಾಘವೇಂದ್ರ ಸ್ವಾಮಿಯ ಹಾಗೂ ಸಾಯಿಬಾಬಾ ದೇವರ ಪೂಜಿಸುವ ದಿನ. ಮಹಾವಿಷ್ಣುವನ್ನು ಸ್ಮರಿಸಿಕೊಂಡು ಓಂ ನಮೋ ನಾರಾಯಣಾಯ ನಮಃ ಮಂತ್ರ ಹೇಳಬೇಕು. ಗುರುರಾಯರನ್ನು ನೆನಪಿಸಿಕೊಂಡು ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ಮಂತ್ರವನ್ನು ಹೇಳಬೇಕು. ಸಾಯಿಬಾಬಾರನ್ನು ನೆನಪಿಸಿಕೊಂಡು ಶಾಂತಚಿತ್ತ ಮಹಾ ಪ್ರಜ್ಞೆ ಸಾಯಿನಾಥ ದಯಾ ಧನ ದಯಾಸಿಂಧು ಸತ್ಯ ಸ್ವರೂಪ ಮಾಯಾತಮವಿನಾಶನ ಎಂಬ ಶ್ಲೋಕವನ್ನು ಸ್ಮರಣೆ ಮಾಡಬೇಕು.
ಶುಕ್ರವಾರ ಮಹಾಲಕ್ಷ್ಮಿಯ ದಿನ. ಓಂ ಶ್ರೀ ಮಹಾಲಕ್ಷ್ಮಿಚ ವಿದ್ಮಹೆ ವಿಷ್ಣು ಪತ್ನೈಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಎಂಬ ಮಂತ್ರವನ್ನು ಹೇಳುವುದರಿಂದ ಮನಸ್ಸು ಹಾಗೂ ಮನೆಯೂ ಬೆಳಗುತ್ತದೆ.
ಶನಿವಾರ ಶನಿದೇವರಿಗೆ ಅರ್ಪಿತವಾದ ದಿನ. ಹಂ ಹನುಮತೇ ರುದ್ರಾತ್ಮಕಾಯ ಹುಂ ಘಟ್ ಓಂ ಶನಿದೇವಾಯ ನಮಃ ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ ಛಾಯಾ ಮಾರ್ತಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ಎಂಬ ಮಂತ್ರವನ್ನು ಜಪಿಸುವುದರಿಂದ ಶನೇಶ್ವರ ಹಾಗೂ ಆಂಜನೇಯನ ಕೃಪಾಕಟಾಕ್ಷವೂ ಲಭಿಸುತ್ತದೆ.
ದೇವರ ಪೂಜೆಯನ್ನು ಹೇಗೆ ಮಾಡಬೇಕೆಂದು ತಿಳಿದಿದೆಯೇ ನಿಮಗೆ ?
ಕೆಲವೊಂದು ಅಪಾರ್ಟ್ಮೆಂಟ್ ಮನೆಗಳಲ್ಲಿ ದೇವರನ್ನ ಪೂಜಿಸುವುದಕ್ಕೆ ಎಂದು ಪ್ರತ್ಯೇಕವಾದ ಕೊಠಡಿ ಇರುವುದಿಲ್ಲ, ಇನ್ನು ಕೆಲವರ ಮನೆಯಲ್ಲಿ ದೇವರ ಕೋಣೆಯನ್ನು ಪ್ರತ್ಯೇಕವಾಗಿ ಕಟ್ಟುವುದಕ್ಕೆ ಜಾಗವಿರುವುದಿಲ್ಲ ಎಂದರೆ ಆಗ ಆ ಮನೆಯಲ್ಲಿ ವಾಸಿಸುವುದು ಎಷ್ಟು ಯೋಗ್ಯ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.
ಮೊಟ್ಟಮೊದಲಿಗೆ ಹೊಸದಾಗಿ ಮನೆಯನ್ನು ಕಟ್ಟುವುದಾದರೆ ಪ್ರತ್ಯೇಕವಾಗಿ ದೇವರ ಕೋಣೆಯನ್ನು ಕಟ್ಟಲೇಬೇಕು. ಮನೆಗೆ ಯಜಮಾನನು ಕಷ್ಟಪಟ್ಟು ದುಡಿಯುವ ಗಂಡನಲ್ಲ, ಮನೆಗೆ ಯಜಮಾನನು ಕುಲದೇವರು ಅಥವಾ ಮನೆದೇವರು. ಯಾವಾಗ ಮನೆದೇವರು ತೃಪ್ತಿಯಿಂದ ಇರುತ್ತಾರೆ ಆಗ ಮಾತ್ರ ಯಜಮಾನನು ತೃಪ್ತಿಯಿಂದ ಜೀವನವನ್ನು ನಡೆಸಬಹುದು. ಆದ್ದರಿಂದ ಸ್ವಂತ ಮನೆಯನ್ನು ಕಟ್ಟುತ್ತಿದ್ದರೆ ಪ್ರತ್ಯೇಕವಾಗಿ ದೇವರ ಕೋಣೆಯನ್ನು ಕಟ್ಟುವುದು ಅತಿಮುಖ್ಯ.
ಒಂದು ವೇಳೆ ಯಾರಾದರೂ ಬಾಡಿಗೆ ಮನೆಯಲ್ಲಿದ್ದು ಅಲ್ಲಿ ದೇವರ ಮನೆಯು ಇಲ್ಲವೆಂದರೆ ಪ್ಲೇವುಡ್ನಲ್ಲಿ ಮಾಡಿಸಿ ಯಾವುದೋ ಒಂದು ಗೋಡೆ ಮೇಲೆ ನೇತು ಹಾಕಬೇಡಿ ಅದರ ಬದಲು ಕೆಳಗಿನ ಹಂತದಿಂದ ಬರುವಹಾಗೆ ದೇವರನ್ನು ಪೂಜಿಸಬೇಕು. ಯಾವತ್ತೂ ಕೂಡ ಪೂಜೆಯನ್ನು ನಿಂತುಕೊಂಡು ಮಾಡಬಾರದು. ಕೇವಲ ಮಂಗಳಾರತಿ, ಪ್ರದಕ್ಷಿಣೆ, ನಮಸ್ಕಾರ ಹಾಗೂ ಪ್ರಾರ್ಥನೆಯ ಸಮಯದಲ್ಲಿ ಮಾತ್ರ ನಿಂತುಕೊಳ್ಳಬೇಕು. ಪೂಜೆಯನ್ನು ಯಾವಾಗಲೂ ಕುಳಿತುಕೊಂಡು ನಿಧಾನವಾಗಿ, ನಿಸ್ಸಂದೇಹವಾಗಿ, ಸಂತೃಪ್ತಿಯಿಂದ, ಭಕ್ತಿಯಿಂದ ದೇವರ ಪೂಜೆಯನ್ನು ಮಾಡಬೇಕು.
ಯಾವ ರೀತಿ ಮನುಷ್ಯನಿಗೆ ಏಕಾಂತ ಬೇಕೋ ಅದೇ ರೀತಿ ದೇವರನ್ನು ಪೂಜೆ ಮಾಡುವುದಕ್ಕೂ ಒಂದು ಪ್ರತ್ಯೇಕವಾದ ಸ್ಥಳವಿರಬೇಕು. ಹಾಗಾಗಿ ಪ್ರತ್ಯೇಕವಾದ ದೇವರ ಕೊಠಡಿಯನ್ನು ಕಟ್ಟಿ ಅಲ್ಲಿ ಕುಲದೇವರು ಅಥವಾ ಮನೆ ದೇವರನ್ನು ಪೂಜೆ ಮಾಡುವುದರಿಂದ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು.
ಈ ಒಂದು ವಸ್ತುವನ್ನು ದಾನವಾಗಿ ನೀಡುವುದರಿಂದ ಶನಿಕಾಟ ಕಡಿಮೆಯಾಗುತ್ತಾ ಬರುತ್ತದೆ.
ಪ್ರತಿಯೊಬ್ಬ ಮನುಷ್ಯನಿಗೂ ಐಷಾರಾಮಿ ಜೀವನವನ್ನು ನಡೆಸಬೇಕೆಂಬ ಆಸೆ ಇರುತ್ತದೆ. ಆದರೆ ನಾವು ಮಾಡುವ ಪಾಪ-ಪುಣ್ಯದ ಕೆಲಸಗಳನ್ನು ಬರೆದಿಡುವುದು ಶನಿಮಹಾತ್ಮ. ನಾವು ಮಾಡಿದ ಕೆಲಸಗಳ ಅನುಸಾರವಾಗಿ ಶನಿ ದೇವರು ಪ್ರತಿಯೊಂದು ಸಮಯದಲ್ಲಿ ಯಾರಿಗೆ ಏನು ಲಭಿಸಬೇಕು ಎಂಬುದನ್ನು ತಿಳಿದುಕೊಂಡು ಆ ವ್ಯಕ್ತಿಗೆ ಕಷ್ಟವನ್ನು ಆಗಲಿ ಅಥವಾ ಸುಖವನ್ನು ಆಗಲಿ ನೀಡುತ್ತಿರುತ್ತಾರೆ. ಆದರೆ ಕೆಲವರು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಅವರಿಗೆ ಯಶಸ್ಸು ದೊರೆಯುತ್ತಿರುವುದಿಲ್ಲ ಹಾಗೂ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿರುತ್ತದೆ ಇದಕ್ಕೆಲ್ಲ ಕಾರಣವೇನೆಂದರೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳು ಈ ಜನ್ಮದಲ್ಲಿ ಅವರಿಗೆ ಕಷ್ಟ ಪಡುವಂತೆ ಮಾಡಿರುತ್ತದೆ.
ನವಗ್ರಹದಲ್ಲಿ ಶನಿಮಹಾತ್ಮನಿಗೆ ಅಧಿಪತಿ ಯಾಗಿರುವುದು ಎಳ್ಳು. ಹಾಗಾಗಿ ಎಳ್ಳನ್ನು ದಾನವಾಗಿ ಕೊಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ಬ್ರಾಹ್ಮಣರಿಗೆ ಶನಿವಾರದ ದಿನದಂದು ಎಲೆ,ಅಡಿಕೆ, ಬಾಳೆ ಹಣ್ಣು ಹಾಗೂ ಎಳ್ಳನ್ನು ದಾನ ಕೊಡುವ ಸಮಯದಲ್ಲಿ ನಾಣ್ಯವನ್ನು ಕೊಟ್ಟರೆ ತುಂಬಾ ಒಳ್ಳೆಯದಾಗುತ್ತದೆ.
ಒಂದು ವೇಳೆ ನಿಮಗೆ ಮೇಲೆ ಹೇಳಿರುವ ಪದಾರ್ಥಗಳಿಂದ ಬ್ರಾಹ್ಮಣರಿಗೆ ದಾನವನ್ನು ಕೊಡುವುದಕ್ಕೆ ಸಾಧ್ಯವಾಗದಿದ್ದರೆ ಶನಿವಾರದಂದು ಕಪ್ಪು ಬಟ್ಟೆಯಲ್ಲಿ ಕಪ್ಪು ಎಳ್ಳನ್ನು ನಿಮ್ಮ ಕೈಯಿಂದ ತೆಗೆದುಕೊಂಡು ಹೋಗಿ ಹರಿಯುವ ನೀರಿಗೆ ಬಿಟ್ಟರೆ ಬಹಳ ಒಳ್ಳೆಯದಾಗುತ್ತದೆ. ಆದ್ದರಿಂದ ಶನಿ ದೋಷವಿದ್ದವರು ಮೇಲೆ ತಿಳಿಸಲಾಗಿರುವ ಯಾವುದಾದರೂ ಒಂದು ದಾನವನ್ನು ಮಾಡುವುದರಿಂದ ಶನಿ ದೋಷವು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.
ನವಗ್ರಹಗಳ ದೋಷ ನಿವಾರಣೆಗೆ ಈ ಉಪಾಯವನ್ನು ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ
ಪ್ರತಿಯೊಬ್ಬರಿಗೂ ತಾವು ಕೆಲಸ ಮಾಡುವ ಕ್ಷೇತ್ರದಲ್ಲಿ ಉನ್ನತಿಯನ್ನು ಪಡೆದುಕೊಳ್ಳಬೇಕು ಹಾಗೂ ಜೀವನದಲ್ಲಿ ಏಳಿಗೆಯನ್ನು ಸಾಧಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಒಂದು ವೇಳೆ ನವಗ್ರಹಗಳ ಸಹಾಯವು ಇದ್ದರೆ ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ಅಖಂಡ ಯಶಸ್ಸನ್ನು ಕಾಣಬಹುದು.
ನವರತ್ನದ ಉಂಗುರವನ್ನು ಹಾಕಿಕೊಂಡರೆ ನವಗ್ರಹಗಳ ಬೆಂಬಲವೂ ದೊರೆಯುತ್ತದೆ. ಆದರೆ ಕೆಲವೊಂದು ರಾಶಿಯವರಿಗೆ ಈ ಉಂಗುರವು ಸರಿ ಬರುವುದಿಲ್ಲ. ಕೆಲವರು ನವರತ್ನದ ಉಂಗುರವನ್ನು ಚಿನ್ನದಿಂದ ಮಾಡಿಸಿಕೊಳ್ಳುತ್ತಾರೆ ಇನ್ನೂ ಕೆಲವರು ಅವರ ಶಕ್ತಿಯನುಸಾರ ಯಾವುದರಲ್ಲಿ ಆಗುತ್ತದೆಯೋ ಅದರಲ್ಲಿ ಮಾಡಿಸಿಕೊಳ್ಳುತ್ತಾರೆ.
ನವಗ್ರಹಗಳ ದೋಷ ನಿವಾರಣೆಗೆ ಮಣ್ಣಿನಿಂದ ಮಾಡಿದ ಮಡಕೆಯನ್ನು ತೆಗೆದುಕೊಂಡು ಅದರಲ್ಲಿ ನವಗ್ರಹಗಳ ಧಾನ್ಯವನ್ನು ಹಾಕಿಕೊಳ್ಳಬೇಕು.ಸೂರ್ಯ ಗ್ರಹಕ್ಕೆ ಗೋಧಿಯನ್ನು, ಚಂದ್ರಗ್ರಹಕ್ಕೆ ಅಕ್ಕಿಯನ್ನು, ಕುಜನಿಗೆ ತೊಗರಿಬೇಳೆ, ಬುದನಿಗೆ ಹೆಸರುಕಾಳು, ಗುರುವಿಗೆ ಕಡಲೆಕಾಳು, ಶುಕ್ರನಿಗೆ ಅವರೆಕಾಳು, ಶನಿ ಗ್ರಹಕ್ಕೆ ಎಳ್ಳು, ರಾಹುವಿಗೆ ಉದ್ದಿನ ಕಾಳು, ಕೇತುವಿಗೆ ಹುರುಳಿಕಾಳನ್ನು ಇಡಲಾಗುತ್ತದೆ. ಈ ರೀತಿಯಾಗಿ 9 ದಾನ್ಯಗಳನ್ನು ಹಾಗೂ ನವ ತೈಲವನ್ನು ಅಥವಾ ಎಳ್ಳೆಣ್ಣೆಯನ್ನು ಅಥವಾ ಹಸುವಿನ ತುಪ್ಪ ವನ್ನು ಮಣ್ಣಿನಿಂದ ಮಾಡಿದ ಮಡಿಕೆಯಲ್ಲಿ ಹಾಕಬೇಕು.
ನಂತರ ಮಣ್ಣಿನ ಮಡಕೆ ಒಳಗೆ ನವ ಬತ್ತಿಯನ್ನು ಹಾಕಿ ನಿಮ್ಮ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ ನವಗ್ರಹದ ಮುಂದೆ ಸೂರ್ಯ ಉದಯಿಸುವ ದಿಕ್ಕಿನಲ್ಲಿ ದೀಪಾರಾಧನೆಯನ್ನು ಮಾಡಬೇಕು. ಶಕ್ತಿ ಅನುಸಾರ ದೇವರಿಗೆ ನೈವೇದ್ಯವನ್ನು ಇಡಬೇಕು. ದೀಪಾರಾಧನ ಮಾಡಬೇಕಾದರೆ ಓಂ ಭಗವತೇ ಗ್ರಹಾದಿಪತಿಯೇ ಸೂರ್ಯಗ್ರಹಾಯೇ ನಮಃ ಎಂಬ ಮಂತ್ರವನ್ನು ಪಠಿಸಿದರೆ ತುಂಬಾ ಒಳ್ಳೆಯದು.
ಗೋಮತಿ ಚಕ್ರವನ್ನು ಕೊರಳಿನಲ್ಲಿ ಧರಿಸಿದರೆ ಏನೆಲ್ಲಾ ಪ್ರಯೋಜನಗಳು ಲಭಿಸುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?
ಪ್ರತಿಯೊಬ್ಬರಿಗೂ ತಾವು ಮಾಡುವ ಉದ್ಯೋಗದಲ್ಲಿ ಉನ್ನತಿಯನ್ನು ಪಡೆದುಕೊಳ್ಳಬೇಕು ಎಂಬ ಆಸೆ ಇರುತ್ತದೆ.ಇನ್ನು ಕೆಲವರಿಗೆ ಎಷ್ಟು ವರ್ಷದಿಂದ ಕಷ್ಟ ಪಟ್ಟು ದುಡಿದರು ಬಡ್ತಿಯನ್ನು ಪಡೆದುಕೊಳ್ಳಲು ಸಾದ್ಯವಾಗುತ್ತಿಲ್ಲ ಎಂದು ಕೊರಗುತ್ತಿರುತ್ತಾರೆ. ಗೋಮತಿ ಚಕ್ರದಿಂದ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. ಒಟ್ಟಾರೆಯಾಗಿ ಗೋಮತಿ ಚಕ್ರದಿಂದ ನಾವು ಮಾಡುವ ಕೆಲಸದಲ್ಲಿ ಉನ್ನತಿಯನ್ನು ಹಾಗೂ ಯಶಸ್ಸನ್ನು ಕಾಣಬಹುದು.
ಶುಕ್ರವಾರ ದಿನ ಲಕ್ಷ್ಮಿಯ ಅನುಗ್ರಹವಿರುವುದರಿಂದ ಗೋಮತಿ ಚಕ್ರವನ್ನು ಶುಕ್ರವಾರದ ದಿನದಂದು ಖರೀದಿ ಮಾಡಿ ಮನೆಗೆ ತರಬೇಕು. ಗೋಮತಿ ಚಕ್ರವನ್ನು ತಂದ ನಂತರ ಶುದ್ಧವಾದ ನೀರಿನಿಂದ ತೊಳೆದು ಪ್ರತಿನಿತ್ಯ ದೇವರಿಗೆ ಹೇಗೆ ಪೂಜೆ ಮಾಡುತ್ತೇವೆ ಹಾಗೆ ದೇವರಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು. ಒಂದರ ಮೇಲಂತೆ ಒಂದು ಹೀಗೆ ಮೂರು ಗೋಮತಿ ಚಕ್ರವನ್ನು ಇಟ್ಟು ಪೂಜೆ ಮಾಡಿ ನಂತರ ಕೊರಳಿಗೆ ಹಾಕಿಕೊಳ್ಳಬೇಕು. ಒಂದು ವೇಳೆ ಕೊರಳಲ್ಲಿ ಹಾಕಿಕೊಳ್ಳಲು ಸಾಧ್ಯವಾಗದಿದ್ದರೆ ಪರ್ಸ್ ಅಲ್ಲೂ ಕೂಡ ಇಟ್ಟುಕೊಳ್ಳಬಹುದು.
ಗೋಮತಿ ಚಕ್ರವನ್ನು ಹಾಕಿಕೊಳ್ಳುವುದಕ್ಕೆ ಮುಂಚೆ ಬುದ್ದಿಮಾಂದ್ಯ ಮಕ್ಕಳಿಗೆ ಅಥವಾ ನೆನಪಿನ ಶಕ್ತಿ ಕಮ್ಮಿ ಇರುವಂತಹ ಮಕ್ಕಳಿಗೆ ಹಾಲನ್ನು ಅಥವಾ ಹಾಲಿನಿಂದ ಮಾಡಿದ ಪದಾರ್ಥವನ್ನು ಅಥವಾ ಅನ್ನವನ್ನು ದಾನದ ರೂಪದಲ್ಲಿ ಕೊಟ್ಟರೆ ತುಂಬಾ ಒಳ್ಳೆಯದು. ಮಾಂಸಾಹಾರ ಸೇವನೆ ಮಾಡುವವರು ಮಾಂಸಾಹಾರವನ್ನು ತಿನ್ನುವ ದಿನ ಗೋಮತಿ ಚಕ್ರವನ್ನು ಕೊರಳಿನಿಂದ ತೆಗೆದು ಒಂದು ಕಡೆ ಇಟ್ಟು ನಂತರ ಮಾಂಸ ಆಹಾರ ಸೇವನೆ ಮಾಡಬೇಕು. ಅದೇ ರೀತಿ ರಾತ್ರಿ ಮಲಗುವ ಮುನ್ನ ಗೋಮತಿ ಚಕ್ರವನ್ನು ತೆಗೆದು ಇಟ್ಟು ಮರುದಿನ ಸ್ನಾನವನ್ನು ಮಾಡಿ ಪೂಜೆಯನ್ನು ಮಾಡಿ ನಂತರ ಗೋಮತಿ ಚಕ್ರವನ್ನು ಕೊರಳಿನಲ್ಲಿ ಧರಿಸಿಕೊಳ್ಳಬೇಕು.
ಗೋಮತಿ ಚಕ್ರವನ್ನು ಧರಿಸುವುದರಿಂದ ಲಕ್ಷ್ಮೀದೇವಿಯ ಕೃಪೆಯು ನಮ್ಮ ಮೇಲಿರಲಿದ್ದು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಹಾಯಕವಾಗುತ್ತದೆ ಎಂದರೆ ತಪ್ಪಾಗಲಾರದು. ಇದರಿಂದ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ಅಧಿಕ ಲಾಭ ದೊರೆಯುತ್ತದೆ ಹಾಗೂ ಉದ್ಯೋಗದಲ್ಲಿ ಉನ್ನತಿಯನ್ನು ಪಡೆದುಕೊಳ್ಳುತ್ತಾರೆ.
ಆತ್ಮಗಳು ಎಲ್ಲಿ ವಾಸವಾಗಿರುತ್ತದೆ ಹಾಗೂ ಯಾರಿಗೆ ತೊಂದರೆ ಕೊಡುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?
ಸಾಮಾನ್ಯವಾಗಿ ಕೆಲವೊಬ್ಬರು ಸ್ಮಶಾನಕ್ಕೆ ಹೋಗುವುದಕ್ಕೆ ಹೆದರುತ್ತಾರೆ ಹಾಗೂ ಸತ್ತ ಹೆಣವನ್ನು ನೋಡುವುದಕ್ಕೂ ಭಯಪಡುತ್ತಾರೆ, ಮತ್ತೆ ಇನ್ನು ಕೆಲವರಿಗೆ ಸತ್ತವರನ್ನು ಕೊನೆಯ ಬಾರಿ ಕಣ್ತುಂಬ ನೋಡಿಕೊಳ್ಳಬೇಕು ಹಾಗೂ ಅವಕಾಶ ಸಿಕ್ಕರೆ ಅವರ ಕಾರ್ಯಗಳನ್ನು ಮಾಡಬೇಕು ಎಂಬ ಆಸೆ ಇರುತ್ತದೆ. ಈ ರೀತಿಯ ಗುಣವನ್ನು ಹೊಂದಿರುವ ವ್ಯಕ್ತಿಯು ದೈವಾಂಶವನ್ನು ಹೊಂದಿರುತ್ತಾನೆ ಹಾಗೂ ಶಿವ ಗಣದಲ್ಲಿ ಇರುವಂತಹ ಒಂದು ಗಣ ಆ ವ್ಯಕ್ತಿಯಲ್ಲಿ ಇರುತ್ತದೆ.
ಸ್ಮಶಾನದ ಒಳಭಾಗದಲ್ಲಿ ಯಾವುದೇ ಆತ್ಮವು ವಾಸವಾಗಿ ಇರುವುದಿಲ್ಲ. ಸ್ಮಶಾನದ ಒಳಗಡೆ ಶಿವನ ತತ್ವ ಹಾಗೂ ಶಿವಗಣಗಳು ಇರುತ್ತವೆ. ಶಿವನ ಸ್ವರೂಪವಾಗಿರುವ ಕಾಲಭೈರವ, ಮಹಾಮುನಿಗಳು, ಮಹಾಋಷಿಗಳು ಹಾಗೂ ಶಿವನಿರುವ ಸ್ಥಳವಾಗಿರುವುದರಿಂದ ಅಮಾವಾಸ್ಯೆ ದಿನ ಮಾತ್ರ ಕಾಳಿಯು ಸ್ಮಶಾನ ಪ್ರವೇಶ ಮಾಡುತ್ತಾಳೆ. ಆತ್ಮಗಳು ಎಂದಿಗೂ ಸ್ಮಶಾನದ ಒಳಗಡೆ ವಾಸ ಮಾಡುವುದಿಲ್ಲ.
ಆತ್ಮಗಳು ಸ್ಮಶಾನದಿಂದ ಹೊರಗಡೆ ಜನರ ಅಕ್ಕಪಕ್ಕದಲ್ಲೇ ಇರುತ್ತದೆ. ಆತ್ಮಗಳು ವಾಸಮಾಡುವುದು ಮನೆಯಲ್ಲಿ, ಮನೆಯ ಮೆಟ್ಟಿಲಿನ ಕೆಳಗಡೆ, ಉಪಯೋಗ ಮಾಡದಂತಹ ಜಾಗದಲ್ಲಿ, ಹಳೆಯ ಕಟ್ಟಡವಾಗಿ ನಿಂತಿರುವ ಮನೆಗಳಲ್ಲಿ, ತುಂಬಾ ಇಷ್ಟವಾದ ಮರಗಳಲ್ಲಿ ಹಾಗೂ ಮರದ ಪೊಟರೆಗಳಲ್ಲಿ ವಾಸವಾಗಿರುತ್ತದೆ. ಹಸು, ಎಮ್ಮೆಯನ್ನು ಕಟ್ಟುವ ಜಾಗವಾದ ಕೊಠಕೆಯಲ್ಲಿ, ಮನೆಯ ಅಟ್ಟದ ಮೇಲೆ ಈ ರೀತಿ ಗೌಪ್ಯವಾದ ಸ್ಥಳದಲ್ಲಿ ಮನುಷ್ಯರನ್ನು ನೋಡಿ ಹೆದರಿ ವಾಸವಾಗಿರುತ್ತವೆ. ಈ ರೀತಿಯಾದ ಆತ್ಮಗಳು ಮನುಷ್ಯನಿಗೆ ಯಾವ ತೊಂದರೆಯನ್ನು ಕೊಡುವುದಿಲ್ಲ.
ಕೆಲವೊಂದು ಆತ್ಮಗಳು ಕೆಲವರಿಗೆ ಉದ್ದೇಶಪೂರ್ವಕವಾಗಿಯೇ ತೊಂದರೆಯನ್ನು ಕೊಡಬೇಕೆಂದು ಬಂದಿರುತ್ತದೆ ಹಾಗೂ ಆ ಸಂದರ್ಭದಲ್ಲಿ ಆ ವ್ಯಕ್ತಿಗೆ ಆತ್ಮ ಗಳಿಂದ ತೊಂದರೆಯುಂಟಾಗುತ್ತದೆ. ಹಾಗಾಗಿ ಆತ್ಮಗಳು ನಮ್ಮ ಜೊತೆಯೇ ಇರುವಂಥವವು ಅದಕ್ಕೆ ಹೆದರುವ ಅವಶ್ಯಕತೆ ಇಲ್ಲ ಹಾಗೂ ಆತ್ಮಗಳು ಸ್ಮಶಾನದ ಒಳಗಡೆ ಎಂದೂ ವಾಸವನ್ನು ಮಾಡುವುದಿಲ್ಲ ಏಕೆಂದರೆ ಅದು ಶಿವನ ವಾಸಸ್ಥಾನ ವಾಗಿರುವುದರಿಂದ ಸ್ಮಶಾನದಿಂದ ಹೊರಗಡೆ ಆತ್ಮಗಳು ವಾಸವಾಗಿರುತ್ತವೆ.
ಈ ಸಮಸ್ಯೆಯಿಂದ ಹೊರಬರಬೇಕೆಂದರೆ ಪ್ರೇತ ಉಚ್ಚಾಟನೆ ಮಂತ್ರವನ್ನು ಹಾಕಿಕೊಳ್ಳಬೇಕು ಹಾಗೂ ಮನೆದೇವರು ಅಥವಾ ಕುಲದೇವರ ಮೇಲೆ ನಂಬಿಕೆಯನ್ನು ಇಟ್ಟು ಪೂಜೆ ಮಾಡಬೇಕು. ಶುಕ್ರವಾರದ ದಿನದಂದು ಮನೆಯಲ್ಲಿ ಧೂಪವನ್ನು ಹೆಚ್ಚಾಗಿ ಹಚ್ಚಬೇಕು.
ಪಾಪ ಪುಣ್ಯಗಳ ಅನುಸಾರವಾಗಿ ಈ ಜನ್ಮದಲ್ಲಿ ಮಕ್ಕಳು ಹುಟ್ಟುತ್ತಾರೆ ಎಂಬುದು ತಿಳಿದಿದೆಯೇ ನಿಮಗೆ
ಹುಟ್ಟು ಎಂಬುದು ನಮ್ಮ ಕೈಯಲ್ಲಿ ಇರುವುದಿಲ್ಲ ಹಾಗೆಯೇ ಯಾರ ಮನೆಯಲ್ಲಿ ಹುಟ್ಟುತ್ತೇವೆ ಹಾಗೂ ಯಾರ ಮಕ್ಕಳಾಗಿ ಹುಟ್ಟುತ್ತೇವೆ ಎಂಬುದು ತಿಳಿದಿರುವುದಿಲ್ಲ, ಆದರೆ ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯದ ಕೆಲಸಗಳಿಂದ ಒಳ್ಳೆಯ ಮನೆತನದಲ್ಲಿ ಹುಟ್ಟುತ್ತೇವೆ ಎಂದರೆ ತಪ್ಪಾಗಲಾರದು. ಸ್ನೇಹಿತರು ಸಿಗುವುದು,ಬಂಧುಮಿತ್ರರು ದೊರಕುವುದೆಲ್ಲ ಹಿಂದಿನ ಜನ್ಮದಲ್ಲಿ ನಮಗೆ ಅವರೊಂದಿಗಿರುವ ಒಡನಾಟದಿಂದಾಗಿ ಈ ಜನ್ಮದಲ್ಲಿ ಅದು ಲಭ್ಯವಾಗುತ್ತದೆ.
ಹಿಂದಿನ ಜನ್ಮದಲ್ಲಿ ನಾವು ಮಾಡಿದ ಪಾಪ ಕರ್ಮಗಳ ಅನುಸಾರವಾಗಿ ಈ ಜನ್ಮದಲ್ಲಿ ಮಕ್ಕಳು ಹುಟ್ಟುತ್ತವೆ. ಒಂದು ವೇಳೆ ಹಿಂದಿನ ಜನ್ಮದಲ್ಲಿ ನಿಮ್ಮ ಸ್ನೇಹಿತರಿಗೆ ಅಥವಾ ಬಂಧುಮಿತ್ರರಿಗೆ ಧನ ಹಾನಿ ಅಥವಾ ಆರ್ಥಿಕ ಪರಿಸ್ಥಿತಿಗೆ ಧಕ್ಕೆ ಬರುವಂತೆ, ತೊಂದರೆಯಾಗುವಂತೆ ಮಾಡಿದ್ದರೆ ಹಾಗೂ ತೊಂದರೆಯಿಂದ ಸ್ನೇಹಿತರ ಅಥವಾ ಬಂಧುಮಿತ್ರರು ಸಾಕಷ್ಟು ನೋವನ್ನು ಅನುಭವಿಸಿದ್ದರೆ, ಈ ಜನ್ಮದಲ್ಲಿ ಅವರು ಕಾಯಿಲೆಯನ್ನು ಹೊತ್ತುಕೊಂಡು ಬರುವ ಪುತ್ರರಾಗಿ ಜನಿಸುತ್ತಾರೆ. ಈ ಪುತ್ರ ಜನನದಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಹಾಗೂ ಆರ್ಥಿಕ ಪರಿಸ್ಥಿತಿಯು ಹದಗೆಡುತ್ತದೆ.
ಒಂದು ವೇಳೆ ಹಿಂದಿನ ಜನ್ಮದಲ್ಲಿ ನೀವು ಯಾರಿಗಾದರೂ ಶತ್ರುಗಳ ರೀತಿ ಕಾಟ ಕೊಟ್ಟಿದ್ದರೆ, ಈ ಜನ್ಮದಲ್ಲಿ ಅವರು ನಿಮ್ಮ ಮಕ್ಕಳಾಗಿ ಜನಿಸಿ ನೀವು ಹಿಂದಿನ ಜನ್ಮದಲ್ಲಿ ಅವರ ಮೇಲೆ ಸಾಧಿಸಿದ ದ್ವೇಷವನ್ನು ಈ ಜನ್ಮದಲ್ಲಿ ಅವರು ತೀರಿಸಿಕೊಳ್ಳುತ್ತಾರೆ. ಈ ರೀತಿಯ ಮಕ್ಕಳು ಜೀವನಪರ್ಯಂತ ಒಂದಲ್ಲ ಒಂದು ಕಷ್ಟವನ್ನು ಕೊಡುತ್ತಿರುತ್ತಾರೆ.
ಒಂದು ವೇಳೆ ಹಿಂದಿನ ಜನ್ಮದಲ್ಲಿ ತಂದೆ-ತಾಯಿಯರನ್ನು ಚೆನ್ನಾಗಿ ನೋಡಿಕೊಂಡಿಲ್ಲವೆಂದರೆ, ಈ ಜನ್ಮದಲ್ಲಿ ಹುಟ್ಟುವ ಪುತ್ರರು ಕೂಡ ಸೋಂಬೇರಿಯಾಗಿ ಹುಟ್ಟುತ್ತಾರೆ ಹಾಗೂ ಪುತ್ರರು ವಿವಾಹವಾದ ನಂತರ ತಂದೆ ತಾಯಿಯನ್ನು ದೂರ ಮಾಡುತ್ತಾರೆ.
ಒಂದು ವೇಳೆ ಹಿಂದಿನ ಜನ್ಮದಲ್ಲಿ ನೀವು ಗುರುಹಿರಿಯರನ್ನು ಗೌರವಿಸಿ, ತಂದೆ-ತಾಯಿಯರನ್ನು ಪ್ರೀತಿಯಿಂದ ನೋಡಿಕೊಂಡಿದ್ದರೆ ಹಾಗೂ ಜನರಿಗೆ ಅನುಕೂಲವಾಗುವಂತಹ ಕೆಲಸವನ್ನು ಮಾಡಿದ್ದರೆ, ಈ ಜನ್ಮದಲ್ಲಿ ಒಳ್ಳೆಯ ಪುತ್ರರಾಗಿ ಜನಿಸುತ್ತಾರೆ ಹಾಗೂ ಅವರಿಂದ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಳ್ಳುವಂತೆ ಆಗುತ್ತದೆ. ಈ ಪುತ್ರರು ಜೀವನಪರ್ಯಂತ ತಂದೆ-ತಾಯಿಯನ್ನು ಗೌರವದಿಂದ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು.
ಈ ತಪ್ಪನ್ನು ಮಾಡಿದರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಹಾಗೂ ಜೀವನದಲ್ಲಿ ಏಳಿಗೆಯನ್ನು ಕಾಣಲು ಸಾಧ್ಯವಾಗುವುದಿಲ್ಲ.
ಶಿವಪುರಾಣದ ಪುಸ್ತಕದಲ್ಲಿ ಶಿವನ ಪ್ರಕಾರ ಯಾವ ಕೆಲಸವನ್ನು ಮಾಡಬೇಕು ಹಾಗೂ ಯಾವ ಕೆಲಸವನ್ನು ಮಾಡಬಾರದು ಎಂದು ಉಲ್ಲೇಖಿಸಲಾಗಿದೆ. ಶಿವನ ಪ್ರಕಾರ ಜೀವನದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಹಾಗೂ ಯಾವ ಕೆಲಸವನ್ನು ಮಾಡುವುದರಿಂದ ಶಿವನ ಕೃಪೆಯು ಲಭಿಸುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಒಂದು ವೇಳೆ ಯಾರಾದರೂ ಚೆನ್ನಾಗಿದ್ದರೆ ಅವರನ್ನು ಕೆಟ್ಟ ಭಾವನೆಯಿಂದ ನೋಡುವುದು ಹಾಗೂ ವ್ಯಕ್ತಿಯು ಜೀವನದಲ್ಲಿ ಏಳಿಗೆಯನ್ನು ಪಡೆಯುತ್ತಿದ್ದರೆ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುವುದು ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಸದೃಡರಾಗುತ್ತಿದ್ದಾರೆ ಅವರನ್ನು ತುಳಿಯಲು ಪ್ರಯತ್ನಿಸುವುದರ ಬಗ್ಗೆ ಯೋಚನೆ ಮಾಡುವುದರಿಂದ ಎಂದಿಗೂ ಶಿವನ ಅನುಗ್ರಹಕ್ಕೆ ಪ್ರಾಪ್ತಿಯಾಗಲು ಸಾಧ್ಯವಾಗುವುದಿಲ್ಲ.
ಒಂದು ವೇಳೆ ನೀವು ಆಡುವ ಮಾತಿನಿಂದ ಇನ್ನೊಬ್ಬ ವ್ಯಕ್ತಿಗೆ ನೋವುಂಟು ಮಾಡಿದರೆ ಅಥವಾ ದುಃಖ ತರುವಂತೆ ಮಾತನಾಡಿದರೆ ಮತ್ತು ವ್ಯಕ್ತಿಯ ಬಗ್ಗೆ ಕೆಟ್ಟ ಮಾತುಗಳನ್ನು ಆಡುವುದರಿಂದ ದೊಡ್ಡ ಪಾಪವಾಗುತ್ತದೆ, ಇದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುವ ಪರಿಸ್ಥಿತಿಯು ನಿರ್ಮಾಣವಾಗುತ್ತದೆ.
ಪ್ರಾಣಿಗಳ ಹಿಂಸೆ ಮಾಡುವುದು ದೊಡ್ಡ ಪಾಪವಾಗುತ್ತದೆ. ಒಂದು ವೇಳೆ ಸಣ್ಣ ಸಣ್ಣ ಪ್ರಾಣಿಗಳಿಗೆ ಅಥವಾ ಪಕ್ಷಿಗಳಿಗೆ ಹಿಂಸೆ ಕೊಡುವುದು,ತೊಂದರೆ ಕೊಡುವುದನ್ನು ಮಾಡುತ್ತಿದ್ದರೆ ಅದು ಕೂಡ ಪಾಪವಾಗುತ್ತದೆ.ಇದರಿಂದ ಶಿವನ ಕೋಪಕ್ಕೆ ಗುರಿಯಾಗಿ ಜೀವನದಲ್ಲಿ ಸಾಕಷ್ಟು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಒಂದು ವೇಳೆ ನೀವು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಆ ತಪ್ಪನ್ನು ಅಥವಾ ಅಪರಾಧವನ್ನು ಇನ್ನೊಬ್ಬರ ಮೇಲೆ ಹಾಕುವುದರಿಂದ ಅವರಿಗೆ ಸಾಕಷ್ಟು ನೋವಾಗುತ್ತದೆ ಹಾಗೂ ಇದು ನಿಮಗೆ ತಿಳಿದಿರುವುದಿಲ್ಲ. ಆದ್ದರಿಂದ ಈ ರೀತಿಯಾಗಿ ತಪ್ಪನ್ನು ಮಾಡಿದರೆ ಒಳ್ಳೆಯ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಈ ತಪ್ಪನ್ನು ಮಾಡುವುದರಿಂದ ಶಿವನು ಕೋಪಗೊಳ್ಳುತ್ತಾನೆ ಹಾಗೂ ಶಿವನ ಅನುಗ್ರಹವು ಎಂದಿಗೂ ಪ್ರಾಪ್ತಿಯಾಗುವುದಿಲ್ಲ.
ಈ ತಪ್ಪನ್ನು ಮಾಡಿದರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಹಾಗೂ ಜೀವನದಲ್ಲಿ ಏಳಿಗೆಯನ್ನು ಕಾಣಲು ಸಾಧ್ಯವಾಗುವುದಿಲ್ಲ.
ಶಿವಪುರಾಣದ ಪುಸ್ತಕದಲ್ಲಿ ಶಿವನ ಪ್ರಕಾರ ಯಾವ ಕೆಲಸವನ್ನು ಮಾಡಬೇಕು ಹಾಗೂ ಯಾವ ಕೆಲಸವನ್ನು ಮಾಡಬಾರದು ಎಂದು ಉಲ್ಲೇಖಿಸಲಾಗಿದೆ. ಶಿವನ ಪ್ರಕಾರ ಜೀವನದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಹಾಗೂ ಯಾವ ಕೆಲಸವನ್ನು ಮಾಡುವುದರಿಂದ ಶಿವನ ಕೃಪೆಯು ಲಭಿಸುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಒಂದು ವೇಳೆ ಯಾರಾದರೂ ಚೆನ್ನಾಗಿದ್ದರೆ ಅವರನ್ನು ಕೆಟ್ಟ ಭಾವನೆಯಿಂದ ನೋಡುವುದು ಹಾಗೂ ವ್ಯಕ್ತಿಯು ಜೀವನದಲ್ಲಿ ಏಳಿಗೆಯನ್ನು ಪಡೆಯುತ್ತಿದ್ದರೆ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುವುದು ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಸದೃಡರಾಗುತ್ತಿದ್ದಾರೆ ಅವರನ್ನು ತುಳಿಯಲು ಪ್ರಯತ್ನಿಸುವುದರ ಬಗ್ಗೆ ಯೋಚನೆ ಮಾಡುವುದರಿಂದ ಎಂದಿಗೂ ಶಿವನ ಅನುಗ್ರಹಕ್ಕೆ ಪ್ರಾಪ್ತಿಯಾಗಲು ಸಾಧ್ಯವಾಗುವುದಿಲ್ಲ.
ಒಂದು ವೇಳೆ ನೀವು ಆಡುವ ಮಾತಿನಿಂದ ಇನ್ನೊಬ್ಬ ವ್ಯಕ್ತಿಗೆ ನೋವುಂಟು ಮಾಡಿದರೆ ಅಥವಾ ದುಃಖ ತರುವಂತೆ ಮಾತನಾಡಿದರೆ ಮತ್ತು ವ್ಯಕ್ತಿಯ ಬಗ್ಗೆ ಕೆಟ್ಟ ಮಾತುಗಳನ್ನು ಆಡುವುದರಿಂದ ದೊಡ್ಡ ಪಾಪವಾಗುತ್ತದೆ, ಇದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುವ ಪರಿಸ್ಥಿತಿಯು ನಿರ್ಮಾಣವಾಗುತ್ತದೆ.
ಪ್ರಾಣಿಗಳ ಹಿಂಸೆ ಮಾಡುವುದು ದೊಡ್ಡ ಪಾಪವಾಗುತ್ತದೆ. ಒಂದು ವೇಳೆ ಸಣ್ಣ ಸಣ್ಣ ಪ್ರಾಣಿಗಳಿಗೆ ಅಥವಾ ಪಕ್ಷಿಗಳಿಗೆ ಹಿಂಸೆ ಕೊಡುವುದು,ತೊಂದರೆ ಕೊಡುವುದನ್ನು ಮಾಡುತ್ತಿದ್ದರೆ ಅದು ಕೂಡ ಪಾಪವಾಗುತ್ತದೆ.ಇದರಿಂದ ಶಿವನ ಕೋಪಕ್ಕೆ ಗುರಿಯಾಗಿ ಜೀವನದಲ್ಲಿ ಸಾಕಷ್ಟು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಒಂದು ವೇಳೆ ನೀವು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಆ ತಪ್ಪನ್ನು ಅಥವಾ ಅಪರಾಧವನ್ನು ಇನ್ನೊಬ್ಬರ ಮೇಲೆ ಹಾಕುವುದರಿಂದ ಅವರಿಗೆ ಸಾಕಷ್ಟು ನೋವಾಗುತ್ತದೆ ಹಾಗೂ ಇದು ನಿಮಗೆ ತಿಳಿದಿರುವುದಿಲ್ಲ. ಆದ್ದರಿಂದ ಈ ರೀತಿಯಾಗಿ ತಪ್ಪನ್ನು ಮಾಡಿದರೆ ಒಳ್ಳೆಯ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಈ ತಪ್ಪನ್ನು ಮಾಡುವುದರಿಂದ ಶಿವನು ಕೋಪಗೊಳ್ಳುತ್ತಾನೆ ಹಾಗೂ ಶಿವನ ಅನುಗ್ರಹವು ಎಂದಿಗೂ ಪ್ರಾಪ್ತಿಯಾಗುವುದಿಲ್ಲ.