Your cart is currently empty!
Author: 53721pwpadmin
ದ್ವಾದಶ ರಾಶಿಗಳಲ್ಲಿ ಶನಿ ದೋಷವಿದ್ದರೆ ಏನು ಮಾಡಬೇಕು ತಿಳಿದಿದೆಯೇ ನಿಮಗೆ ?
ಸಾಮಾನ್ಯವಾಗಿ ಪ್ರತಿಯೊಬ್ಬರ ರಾಶಿಯಲ್ಲಿ ಶನಿದೋಷ ಎಂಬುದು ಇದ್ದೇ ಇರುತ್ತದೆ. 12 ರಾಶಿಗಳಿಗೆ ಒಂದಲ್ಲ ಒಂದು ಸಮಯದಲ್ಲಿ ಶನಿಯ ದೋಷವು ಬಂದೇ ಬರುತ್ತದೆ. ಶನಿ ದೋಷವಿದ್ದರೆ ಕೆಲವೊಂದು ಸಲ ಯಾವುದೇ ಕೆಲಸ ಮಾಡಿದರು ಅದು ಸಂಪೂರ್ಣವಾಗುವುದಿಲ್ಲ ಅಥವಾ ನಷ್ಟದಾಯಕವಾಗಿರುತ್ತದೆ. ಹಾಗಾದರೆ ಶನಿ ದೋಷಕ್ಕೆ ಪರಿಹಾರ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮೇಷ ರಾಶಿ..ಮೇಷ ರಾಶಿಯವರು ಶನಿದೋಷದಿಂದ ಮುಕ್ತರಾಗಬೇಕೆಂದರೆ ಶನಿವಾರದ ದಿನದಂದು ದೇವಸ್ಥಾನದಲ್ಲಿರುವ ನವಗ್ರಹ ಮಂಟಪಕ್ಕೆ ಹೋಗಿ 27 ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು. ಇದರಿಂದ ಶನಿ ದೋಷವು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.
ವೃಷಭ ರಾಶಿ..ವೃಷಭ ರಾಶಿಯವರು ಶನಿವಾರದ ದಿನದಂದು ಬನ್ನಿ ಮರದ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಉಪ್ಪನ್ನು ಸವರಿ ನವಗ್ರಹದಲ್ಲಿರುವ ಶನಿ ದೇವರ ಮುಂದೆ ಇಟ್ಟು 9 ಬಾರಿ ಪ್ರದಕ್ಷಿಣೆಯನ್ನು ಹಾಕುವುದರಿಂದ ಒಳ್ಳೆಯದಾಗುತ್ತದೆ.
ಮಿಥುನ ರಾಶಿ..ಶನಿವಾರದಂದು ಕಪ್ಪು ಎಳ್ಳನ್ನು ಶನಿದೇವರ ಮುಂದೆ ಇಡಬೇಕು. ಒಂದು ವೇಳೆ ಸಾಧ್ಯವಾದರೆ ಶನಿವಾರದ ದಿನದೊಂದು ಎಲ್ಲೆಣ್ಣೆ ಇಂದ ಶನಿ ದೇವರ ವಿಗ್ರಹಕ್ಕೆ ಸವಾರಿ ಬರುವುದರಿಂದ ತುಂಬಾ ಒಳ್ಳೆಯದು.
ಕಟಕ ರಾಶಿ..ಶಿವನಿಗೆ ಅಭಿಷೇಕವನ್ನು ಮಾಡುವಾಗ ಹಾಲಿಗೆ ಸ್ವಲ್ಪ ಕಪ್ಪು ಎಳ್ಳನ್ನು ಮಿಶ್ರಣ ಮಾಡಿ ನಂತರ ಅಭಿಷೇಕ ಮಾಡುವುದು ತುಂಬಾ ಒಳ್ಳೆಯದು.
ಸಿಂಹ ರಾಶಿ..ಈ ರಾಶಿಯವರು ಶನಿವಾರದ ದಿನದಂದು ಕೆಂಪು ದಾಸವಾಳದ ಹೂವನ್ನು ತೆಗೆದುಕೊಂಡು ಆಂಜನೇಯಸ್ವಾಮಿಗೆ ಅರ್ಪಿಸಿದರೆ ತುಂಬಾ ಒಳ್ಳೆಯದು.
ಕನ್ಯಾ ರಾಶಿ..ಈ ರಾಶಿಯವರು ಶನಿವಾರದ ದಿನದೊಂದು ವೆಂಕಟೇಶ್ವರ ಸ್ವಾಮಿಗೆ ತುಳಸಿ ದಳವನ್ನು ಅರ್ಪಿಸಿದರೆ ತುಂಬಾ ಒಳ್ಳೆಯದು.
ತುಲಾ ರಾಶಿ..ಎಲ್ಲೆಣ್ಣೆ ಇಂದ 8 ಬತ್ತಿಯನ್ನು ಹಾಕಿ ಮನೆಯ ಹಜಾರದಲ್ಲಿ ಅಥವಾ ಹಾಲಿನಲ್ಲಿ ದೀಪವನ್ನು ಹಚ್ಚುವುದರಿಂದ ಈ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ.
ವೃಶ್ಚಿಕ ರಾಶ..ಈ ರಾಶಿಯವರು ಸಿಂಧೂರ ಮತ್ತು ಎಲ್ಲೆಣ್ಣೆ ಮಿಶ್ರಣ ಮಾಡಿ ಆಂಜನೇಯಸ್ವಾಮಿಗೆ ಲೇಪಿಸಿ ನಂತರ ಅದನ್ನು ಹಣೆಗೆ ಇಟ್ಟುಕೊಂಡರೆ ತುಂಬಾ ಒಳ್ಳೆಯದು.
ಧನಸ್ಸು ರಾಶಿ..ಅರಳಿ ಮರಕ್ಕೆ 8 ಪ್ರದಕ್ಷಿಣೆಯನ್ನು ಹಾಕಿಕೊಂಡು ಬಂದರೆ ಈ ರಾಶಿಯವರಿಗೆ ತುಂಬಾ ಒಳ್ಳೆಯದಾಗುತ್ತದೆ.
ಮಕರ ರಾಶಿ..ಶನಿವಾರದ ದಿನದಂದು ಬನ್ನಿ ಮರದ ಕೆಳಗೆ ಕಪ್ಪುಗಾಜಿನ ಬಳೆಯಿಟ್ಟು 8 ಪ್ರದಕ್ಷಿಣೆಯನ್ನು ಹಾಕಿದರೆ ತುಂಬಾ ಒಳ್ಳೆಯದು.
ಕುಂಭ ರಾಶಿ..ಕುಂಭರಾಶಿಯವರು ಬನ್ನಿಮರಕ್ಕೆ 8 ಬತ್ತಿಯ ದೀಪವನ್ನು ಹಚ್ಚಿ 8 ಪ್ರದಕ್ಷಿಣೆಯನ್ನು ಹಾಕಬೇಕು. ಶಿವನಿಗೆ ಹಾಲು ಮತ್ತು ಎಳ್ಳನ್ನು ಮಿಶ್ರಣ ಮಾಡಿ ಅಭಿಷೇಕ ಮಾಡುವುದು ತುಂಬಾ ಒಳ್ಳೆಯದು.
ಮೀನ ರಾಶಿ..ಶನಿವಾರ ದಿನದಂದು ಶಿವನಿಗೆ ಹಾಲು ಮತ್ತು ಎಳ್ಳನ್ನು ಮಿಶ್ರಣ ಮಾಡಿ ಅಭಿಷೇಕ ಮಾಡುವುದು ತುಂಬಾ ಒಳ್ಳೆಯದು.
ಪ್ರತಿ ಶನಿವಾರ ಮೇಲೆ ಹೇಳಿರುವ ರಾಶಿಯವರು ನಿಯಮವನ್ನು ಪಾಲಿಸಿದರೆ ಎಲ್ಲಾ ದೋಷ ನಿವಾರಣೆಯಾಗಿ ಸುಖಕರವಾಗಿ ಜೀವನವನ್ನು ನಡೆಸಬಹುದು.
ಅಮಾವಾಸ್ಯೆ ದಿನ ಈ ಪರಿಹಾರ ಮಾಡಿದರೆ ನರ ದೃಷ್ಟಿ ಹಾಗೂ ಕೆಟ್ಟ ದೃಷ್ಟಿಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು
ಅಮಾವಾಸ್ಯೆ ದಿನ ಈ ಪರಿಹಾರ ಮಾಡಿದರೆ ನರ ದೃಷ್ಟಿ ಹಾಗೂ ಕೆಟ್ಟ ದೃಷ್ಟಿಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದ..ಅಮಾವಾಸ್ಯೆಯ ದಿನದಂದು ಈ ಸರಳ ಪರಿಹಾರವನ್ನು ಮಾಡಿದರೆ ಎಂತಹದ್ದೇ ನರದೃಷ್ಟಿ, ಕೆಟ್ಟದೃಷ್ಟಿ ಹಾಗೂ ದುಷ್ಟಶಕ್ತಿ ಪ್ರಭಾವದಿಂದ ಮುಕ್ತರಾಗಬಹುದು. ಹಾಗಾದರೆ ಈ ಸರಳ ಪರಿಹಾರವನ್ನು ಯಾವ ರೀತಿ ಹಾಗೂ ಯಾವ ಸಮಯದಲ್ಲಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಅಮಾವಾಸ್ಯೆ ದಿನದಂದು ಮನೆಯ ಬಾಗಿಲಿನ ಹೊರಗಡೆ ನಿಂತುಕೊಂಡು ನಿಂಬೆಹಣ್ಣನ್ನು ಎರಡು ಕೈಯಲ್ಲಿ ಹಿಡಿದುಕೊಂಡು ಬಲಭಾಗದಿಂದ ಮೂರು ಬಾರಿ ವೃತ್ತಾಕಾರವಾಗಿ ನಿವಾಳಿಸಬೇಕು.ತದನಂತರ ನಿಂಬೆಹಣ್ಣನ್ನು ಚಾಕುವಿನ ಸಹಾಯದಿಂದ ಎರಡು ಭಾಗ ಮಾಡಿಕೊಳ್ಳಬೇಕು. ನಿಂಬೆಹಣ್ಣನ್ನು ಭಾಗ ಮಾಡಿಕೊಂಡ ನಂತರ ಕುಂಕುಮದಲ್ಲಿ ನಿಂಬೆಹಣ್ಣನ್ನು ಅದ್ದಬೇಕು. ಭಾಗ ಮಾಡಿಕೊಂಡ ಎರಡು ನಿಂಬೆ ಹೋಳಿಗೆ ಸಂಪೂರ್ಣವಾಗಿ ಕುಂಕುಮವನ್ನು ಅದ್ದಬೇಕು.
ನಿಂಬೆಹಣ್ಣು ದೃಷ್ಟಿಯನ್ನು ನಿವಾಳಿಸುವುದಕ್ಕೆ ಮತ್ತು ದುಷ್ಟಶಕ್ತಿಯನ್ನು ಮಟ್ಟ ಹಾಕುವುದಕ್ಕೆ ತುಂಬಾ ಸಹಾಯಕಾರಿಯಾಗಿದೆ. ಈ ಪರಿಹಾರವನ್ನು ಅಮಾವಾಸ್ಯೆಯ ದಿನ ರಾತ್ರಿ 9 ಗಂಟೆಯ ನಂತರ ಮಾಡಬೇಕಾಗುತ್ತದೆ. ಈ ಪರಿಹಾರವನ್ನು ಮಾಡಬೇಕಾದರೆ ಯಾರು ನೋಡದೆ ಇದ್ದರೆ ತುಂಬಾ ಒಳ್ಳೆಯದು. ಭಾಗ ಮಾಡಿಕೊಂಡ ನಿಂಬೆ ಹೋಳಿಗೆ ಕುಂಕುಮ ಹಚ್ಚಿದ ನಂತರ ಅದರ ಮೇಲೆ 2 ಒಣ ಮೆಣಸಿಕಾಯಿ ಇಡಬೇಕು.
ತದನಂತರ ಮನೆಯ ಹೊಸ್ತಿಲಿನ ಎಡಭಾಗಕ್ಕೆ ಒಂದು ನಿಂಬೆ ಹೋಳನ್ನು ಹಾಗೂ ಮತ್ತೊಂದನ್ನು ಬಲಭಾಗಕ್ಕೆ ಇಡಬೇಕು. ಈ ಕೆಲಸ ಮಾಡಿದ ನಂತರ ಮರುದಿನ ಮುಂಜಾನೆ ಬೇಗ ಎದ್ದು ಹೊಸ್ತಿಲಿನ ಎರಡೂ ಭಾಗದಲ್ಲಿ ಇಟ್ಟಿದ್ದ ನಿಂಬೆ ಹೋಳನ್ನು ತೆಗೆದುಕೊಂಡು ಯಾರು ಓಡಾಡದೆ ಇರುವ ಜಾಗದಲ್ಲಿ ಹಾಕಬೇಕು. ನಿಂಬೆ ಹೋಳನ್ನು ಯಾರು ಓಡಾಡದೆ ಇರುವ ಜಾಗದಲ್ಲಿ ಹಾಕಿದ ನಂತರ ಮನೆಗೆ ಬಂದು ತಲೆಯಿಂದ ಸ್ನಾನ ಮಾಡಿದರೆ ತುಂಬಾ ಒಳ್ಳೆಯದು. ಈ ರೀತಿಯಾಗಿ ಮಾಡುವುದರಿಂದ ನರದೃಷ್ಟಿ, ಕೆಟ್ಟ ದೃಷ್ಟಿ ಅಥವಾ ನಿಮ್ಮ ಮನೆಯ ಮೇಲೆ ದುಷ್ಟಶಕ್ತಿಯ ಪ್ರಭಾವ ಬಿದಿದ್ದರೆ ಮತ್ತು ಮನೆಯ ಯಜಮಾನ ಕಷ್ಟಪಟ್ಟು ದುಡಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಎಂದರೆ ಈ ಪರಿಹಾರ ಮಾಡುವುದರಿಂದ ಎಲ್ಲ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.
ಸಮಸ್ಯೆಗಳು ಕೋರಿಕೆಗಳು ಏನೇ ಇದ್ದರೂ ಈ ಪರಿಹಾರದಿಂದ ಮುಕ್ತಿ ದೊರೆಯುತ್ತದೆ.
ದರಿದ್ರತನ, ಅನಾರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ವ್ಯಾಪಾರದಲ್ಲಿ ನಷ್ಟ, ಶತ್ರು ಕಾಟದ ಸಮಸ್ಯೆ ಇದ್ದವರು ಈ ಪರಿಹಾರವನ್ನು ಶುಕ್ರವಾರದ ದಿನದಂದು ರಾತ್ರಿ ವೇಳೆಯಲ್ಲಿ ಸ್ನಾನವನ್ನು ಮಾಡಿ ನಂತರ ಈ ಉಪಾಯವನ್ನು ಮಾಡಬಹುದು. ಈ ಪರಿಹಾರಕ್ಕೆ ಬೇಕಾಗಿರುವ ಸಾಮಾಗ್ರಿಗಳು ಅರಿಶಿನ-ಕುಂಕುಮ, ಒಂದು ಲೋಟ ನೀರು, ಕಾಡಿಗೆ ಮತ್ತು ಬಿಳಿಹಾಳೆ. ಈ ಪರಿಹಾರವನ್ನು ಪುರುಷರಾಗಲಿ ಸ್ತ್ರೀಯರು ಆಗಲಿ ಯಾರು ಬೇಕಾದರೂ ಮಾಡಬಹುದು ಹಾಗೂ ಋತು ಚಕ್ರದಲ್ಲಿರುವ ಸ್ತ್ರೀಯರು ಸಹ ಈ ಪರಿಹಾರವನ್ನು ಮಾಡಬಹುದು.
ನಿಮಗಿರುವ ಸಮಸ್ಯೆಯನ್ನು ಹೇಳಿಕೊಂಡು ಬಲಕೈಯಿ ಇಂದ ಸ್ವಲ್ಪ ಅರಿಶಿನವನ್ನು ಒಂದು ಪ್ಲೇಟ್ ಗೆ ಹಾಕಿಕೊಳ್ಳಬೇಕು ನಂತರ ಅರಿಶಿನಕ್ಕೆ ಸ್ವಲ್ಪ ನೀರನ್ನು ಹಾಕಬೇಕು. ಅರಿಶಿನ ಮತ್ತು ನೀರನ್ನು ಮಿಶ್ರಣ ಮಾಡಿದ ನಂತರ ಬಲಗೈ ಉಂಗುರದ ಬೆರಳಿನಿಂದ ನಿಮ್ಮ ಸಮಸ್ಯೆಯನ್ನು ಬಿಳಿ ಹಾಳೆಯ ಮೇಲೆ ಬರೆಯಬೇಕು.
ಒಂದು ವೇಳೆ ನಿಮಗೆ ಏನಾದರೂ ಕೋರಿಕೆ ಇದ್ದರೆ ಮೊದಲಿಗೆ ಸ್ವಲ್ಪ ಕುಂಕುಮವನ್ನು ಒಂದು ಪ್ಲೇಟ್ ಗೆ ಹಾಕಿಕೊಳ್ಳಬೇಕು. ನಂತರ ಕುಂಕುಮಕ್ಕೆ ಸ್ವಲ್ಪ ನೀರನ್ನು ಹಾಕಿ ಮಿಶ್ರಣ ಮಾಡಬೇಕು. ಮಿಶ್ರಣ ಮಾಡಿದ ನಂತರ ಬಲಗೈಯ ಉಂಗುರ ಬೆರಳಿನಿಂದ ಕೋರಿಕೆಗಳನ್ನು ಬಿಳಿಹಾಳೆಯ ಮೇಲೆ ಬರೆಯಬೇಕು.
ಒಂದು ವೇಳೆ ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಅಥವಾ ಕೋರಿಕೆ , ಶತ್ರು ಬಾಧೆ ಇಂದ ಮುಕ್ತಿಯನ್ನು ಪಡೆದು ಕೊಳ್ಳಬೇಕೆಂದರೆ ಕಾಡಿಗೆಯಿಂದ ಬಿಳಿ ಹಾಳೆಯ ಮೇಲೆ ಹೆಸರನ್ನು ಬರೆಯಬೇಕು ಅಥವಾ ಸಮಸ್ಯೆಯಿದ್ದರೆ ಸಮಸ್ಯೆಯನ್ನು ಬರೆಯಬೇಕು ಅಥವಾ ಕೋರಿಕೆ ಇದ್ದರೆ ಕೋರಿಕೆಯನ್ನು ಸಹ ಬರೆಯಬೇಕು.
ಸಮಸ್ಯೆ, ಕೋರಿಕೆಯನ್ನು ಬಿಳಿಹಾಳೆಯ ಮೇಲೆ ಬರೆದ ನಂತರ ಬಿಳಿ ಹಾಳೆಯನ್ನು ಸಂಪೂರ್ಣವಾಗಿ ಮಡಚಿ ಇಡಬೇಕು. ನಂತರ ಮಂಚದಲ್ಲಿ ನಾವು ಯಾವ ಭಾಗಕ್ಕೆ ಕಾಲನ್ನು ಹಾಕಿಕೊಂಡು ಮಲಗುತ್ತೇವೋ ಆ ಭಾಗದಲ್ಲಿ ಹಾಸಿಗೆಯ ಕೆಳಗೆ ಮಡಚಿರುವ ಬಿಳಿ ಹಾಳೆಯನ್ನು ಇಡಬೇಕು. ನಂತರ ಬೆಳಗ್ಗೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಹಾಸಿಗೆಯ ಕೆಳಗಡೆ ಇರುವ ಬಿಳಿ ಹಾಳೆಯನ್ನು ತೆಗೆದುಕೊಂಡು ಯಾರು ಓಡಾಡದೆ ಇರುವ ಜಾಗದಲ್ಲಿ ಗುಂಡಿಯನ್ನು ತೆಗೆದು ಹಾಳೆಯನ್ನು ಅಲ್ಲಿ ಹಾಕಿ ಮುಚ್ಚಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಅರಳಿಮರದ ಬುಡಕ್ಕೆ ಹಾಕಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಕ್ರಮೇಣವಾಗಿ ಕಡಿಮೆಯಾಗುತ್ತದೆ.
ಮೆಣಸಿನಕಾಯಿ ಹಾಗೂ ಸೂಜಿಯಿಂದ ನೀವು ಇಷ್ಟಪಟ್ಟ ವ್ಯಕ್ತಿಯ ಮೇಲೆ ವಶೀಕರಣವನ್ನು ಹೇಗೆ ಮಾಡುತ್ತಾರೆ ಗೊತ್ತೇ ನಿಮಗೆ ?
ಮೆಣಸಿನಕಾಯಿ ಹಾಗೂ ಸೂಜಿಯಿಂದ ನೀವು ಇಷ್ಟಪಟ್ಟ ವ್ಯಕ್ತಿಯ ಮೇಲೆ ವಶೀಕರಣವನ್ನು ಹೇಗೆ ಮಾಡುತ್ತಾರೆ ಗೊತ್ತೇ ನಿಮಗೆ..ಮೆಣಸಿನಕಾಯಿ ಹಾಗೂ ಸೂಜಿಯಿಂದ ಯಾವ ಸ್ತ್ರೀಯನ್ನು ಆಗಲಿ ಅಥವಾ ಪುರುಷರನ್ನು ಆಗಲಿ ವಶೀಕರಣ ಮಾಡಬಹುದು. ಈ ತಂತ್ರವನ್ನು ಪ್ರಯೋಗಿಸಿದರೆ ನೀವು ಇಷ್ಟಪಡುವಂತವರು ಕೇವಲ 24 ಗಂಟೆಯೊಳಗೆ ನಿಮ್ಮ ಕೈವಶವಾಗುತ್ತಾರೆ. ಈ ತಂತ್ರವನ್ನು ಭಾನುವಾರದ ದಿನ ರಾತ್ರಿಯ ಸಮಯದಲ್ಲಿ ಮಾಡಬೇಕು. ಈ ತಂತ್ರವನ್ನು ಮಾಡಲು ಕೇವಲ ಸೂಜಿ ಹಾಗೂ ಮೆಣಸಿನಕಾಯಿ ಸಾಕು.ಈ ತಂತ್ರವನ್ನು ಪ್ರಯೋಗಿಸುವಾಗ ನಾವು ಹೇಳುವ ಶಕ್ತಿಶಾಲಿ ಪದವನ್ನು ಜಪಿಸಬೇಕು. ಈ ಶಕ್ತಿಶಾಲಿ ವಶೀಕರಣದ ಪದ ಯಾವುದೆಂದರೆ ಮರ್ಥಾಷಿರ್. ಈ ವಶೀಕರಣದ ಪದವನ್ನು ಏಳು ಬಾರಿ ಪಠಿಸಬೇಕು. ಈ ವಶೀಕರಣದ ಮಂತ್ರವನ್ನು ಪಠಿಸಿದ ಬಳಿಕ ಮೂರು ಬಾರಿ ಸೂಜಿಯಿಂದ ಮೆಣಸಿನಕಾಯಿಯನ್ನು ಚುಚ್ಚಬೇಕು. ಸೂಜಿಯಿಂದ ಮೆಣಸಿನಕಾಯಿಗೆ ಚುಚ್ಚ ಬೇಕಾದರೆ ನೀವು ಯಾವ ವ್ಯಕ್ತಿಯನ್ನು ಕೈವಶ ಮಾಡಿಕೊಳ್ಳಬೇಕು ಎಂದು ಅಂದುಕೊಂಡಿರುತ್ತೀರೋ ಅವರ ಹೆಸರನ್ನು ಹೇಳಿಕೊಳ್ಳಬೇಕು. ತದನಂತರ ಮೆಣಸಿನಕಾಯಿಯ ಮಧ್ಯಭಾಗಕ್ಕೆ ಸೂಜಿಯನ್ನು ಚುಚ್ಚಿ ಇಡಬೇಕು.
ಸೂಜಿಯನ್ನು ಹಸಿಮೆಣಸಿನಕಾಯಿಗೆ ಚುಚ್ಚಿದ ನಂತರ ನೀವು ಇಷ್ಟಪಡುವ ವ್ಯಕ್ತಿಯ ಮನೆಯ ಮುಂಭಾಗ ಮಣ್ಣಿನಲ್ಲಿ ಹೂತು ಹಾಕಬೇಕು.ಇದರಿಂದ ನೀವು ಇಷ್ಟಪಟ್ಟವರು ಕೇವಲ 24 ಗಂಟೆಯ ಒಳಗೆ ನಿಮ್ಮ ಕೈ ವಶವಾಗುವುದು ನಿಶ್ಚಿತ. ಈ ವಶೀಕರಣದ ಪ್ರಯೋಗವನ್ನು ಒಳ್ಳೆಯ ಕೆಲಸಕ್ಕೆ ಮಾಡಿ ಅದರಿಂದ ಫಲವು ಖಚಿತವಾಗಿ ದೊರೆಯುತ್ತದೆ.
ಇಷ್ಟಪಟ್ಟವರನ್ನು ನಿಮ್ಮ ಕೈವಶ ಮಾಡಿಕೊಳ್ಳುವುದಕ್ಕೆ ಈ ಒಂದು ವಸ್ತು ಇದ್ದರೆ ಸಾಕು.
ಇಷ್ಟಪಟ್ಟವರನ್ನು ನಿಮ್ಮ ಕೈವಶ ಮಾಡಿಕೊಳ್ಳುವುದಕ್ಕೆ ಈ ಒಂದು ವಸ್ತು ಇದ್ದರೆ ಸಾಕು ಮೆಂತ್ಯದ ಕಾಲಿನಿಂದ ಇಷ್ಟಪಟ್ಟವರನ್ನು ಕೈ ವಶ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಸ್ವಲ್ಪ ಮೆಂತ್ಯದ ಕಾಳನ್ನು ತೆಗೆದುಕೊಂಡು ಬಲ ಕೈಯಿಯ ಮುಷ್ಟಿಯಲ್ಲಿ ಹಿಡಿದುಕೊಳ್ಳಬೇಕು. ನಂತರ ನಾವು ಹೇಳುವ ಈ ಮಂತ್ರವನ್ನು ಕಪ್ಪು ಇಂಕಿನ ಪೆನ್ನಿನ ಸಹಾಯದಿಂದ ಬಿಳಿ ಹಾಳೆಯ ಮೇಲೆ ಬರೆಯಬೇಕು. ಬಿಳಿ ಹಾಳೆಯ ಮೇಲೆ ಬರೆದಿರುವ ಮಂತ್ರವನ್ನು 21 ಬಾರಿ ಜಪಿಸಬೇಕು ಮತ್ತು ನೀವು ಯಾರನ್ನು ಕೈವಶ ಮಾಡಿಕೊಳ್ಳಬೇಕು ಎಂದು ಅಂದುಕೊಂಡಿರುತ್ತೀರೋ ಅವರನ್ನು ಮನಸ್ಸಿನಲ್ಲಿ ನೆನಪಿಸಿಕೊಳ್ಳಬೇಕು. ಈ ರೀತಿಯಾಗಿ ಕಟ್ಟುನಿಟ್ಟಾಗಿ ನಿಯಮವನ್ನು ಪಾಲಿಸುವುದರಿಂದ ನೀವು ಇಷ್ಟ ಪಟ್ಟವರು ಆದಷ್ಟು ಬೇಗ ನಿಮ್ಮ ಕೈವಶ ಆಗುತ್ತಾರೆ.
ಓಂ ನಮೋ ಚಾಮುಂಡಾಯ ಕುರು ಕುರು ಸ್ವಾಹ.. ಈ ಮೇಲಿನ ವಶೀಕರಣ ಮಂತ್ರವನ್ನು ಒಂದು ಬಿಳಿಯ ಹಾಳೆಯ ಮೇಲೆ ಬರೆದು ಈ ವಶೀಕರಣ ಮಂತ್ರವನ್ನು 21 ಬಾರಿ ನಂಬಿಕೆ ಇಟ್ಟು ಶ್ರದ್ಧೆಯಿಂದ ಪಠಿಸಬೇಕು. ಈ ವಶೀಕರಣ ಮಂತ್ರ ವನ್ನು ಪಠಿಸಬೇಕಾದರೆ ನೀವು ಇಷ್ಟಪಡುವವರನ್ನು ಅಥವಾ ಯಾರನ್ನು ವಶೀಕರಣ ಮಾಡಿ ಕೈವಶ ಮಾಡಿಕೊಳ್ಳಬೇಕು ಎಂದು ಅಂದುಕೊಂಡಿರುತ್ತೀರೋ ಅವರ ಹೆಸರನ್ನು ಮನಸ್ಸಿನಲ್ಲಿ ಸ್ಮರಿಸಿಕೊಳ್ಳಬೇಕು. ಈ ರೀತಿಯಾಗಿ ನಂಬಿಕೆ ಇಟ್ಟು ಶ್ರದ್ಧೆಯಿಂದ ಈ ಕೆಲಸವನ್ನು ಮಾಡಿದ್ದೇ ಆದಲ್ಲಿ ನೀವು ಇಷ್ಟ ಪಟ್ಟವರು ಬಹಳ ಬೇಗ ನಿಮ್ಮ ಕೈವಶವಾಗುವುದರಲ್ಲಿ ಸಂಶಯವೇ ಇಲ್ಲ. ಒಂದು ವೇಳೆ ಈ ಕೆಲಸವನ್ನು ಅಪನಂಬಿಕೆ ಇಟ್ಟು ಮಾಡಿದರೆ ಈ ಮಂತ್ರವು ಫಲಪ್ರದವಾಗುವುದಿಲ್ಲ. ದಯವಿಟ್ಟು ವಶೀಕರಣ ಮಂತ್ರವನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಉಪಯೋಗಿಸಿದರೆ ಫಲಪ್ರದವಾಗುವುದು ಖಚಿತ.
ಮನೆಯಲ್ಲಿ ಮಾಟ ಮಂತ್ರ ಪ್ರಯೋಗವಾಗಿದ್ದರೆ ಅದನ್ನು ಹೇಗೆ ತಿಳಿದುಕೊಳ್ಳುವುದು ಎಂಬುದು ಗೊತ್ತೇ ನಿಮಗೆ ?
ಮನೆಯಲ್ಲಿ ಮಾಟ ಮಂತ್ರ ಪ್ರಯೋಗವಾಗಿದ್ದರೆ ಅದನ್ನು ಹೇಗೆ ತಿಳಿದುಕೊಳ್ಳುವುದು ಎಂಬುದು ಗೊತ್ತೇ ನಿಮಗೆ..ಒಂದು ವೇಳೆ ನಿಮ್ಮ ಮನೆಯಲ್ಲಿ ಮಕ್ಕಳು ,ಗಂಡ, ಹೆಂಡತಿ ಹಾಗೂ ಮನೆಯ ಎಲ್ಲಾ ಸದಸ್ಯರಿಗೂ ಮಾನಸಿಕ ಗೊಂದಲವಾಗುವುದು,ಬಂಧುಗಳಿಂದ ತೊಂದರೆಯಾಗುವುದು, ಎಷ್ಟೇ ಸಂಪಾದನೆ ಮಾಡಿಕೊಂಡು ಮನೆಗೆ ಬಂದರೂ ಮನೆಯಲ್ಲಿ ಶಾಂತಿ,ನೆಮ್ಮದಿ ಇಲ್ಲದೆ ಇರುವುದು ಮತ್ತು ಮನೆಯಲ್ಲಿ ಭಗವಂತನ ಪೂಜೆಯನ್ನು ಮಾಡುವುದಕ್ಕೂ ಆಸಕ್ತಿ ಬಾರದೆ ಇರುವುದು. ಮನೆ ಯಜಮಾನ ಹಾಗೂ ಮಕ್ಕಳ ಮುಖದಲ್ಲಿ ಮಂದಬುದ್ಧಿ, ಮಂದ ಜ್ಞಾನ, ಅತಿಯಾದ ನಿದ್ದೆ ,ಮಹಾಕೋಪ ಹಾಗೂ ದರಿದ್ರ ಲಕ್ಷಣಗಳು ಆವರಿಸಿಕೊಂಡಿದ್ದರೆ ಮಾಟ-ಮಂತ್ರ ಪ್ರಯೋಗವಾಗಿದೆ ಎಂಬುದನ್ನು ತಿಳಿಸುತ್ತದೆ.
ಮನೆಯ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದರೆ ಮನೆಯ ಈಶಾನ್ಯ ಭಾಗದಲ್ಲಿ ಎಲ್ಲರೂ ಸಹ ತುಳಸಿ ಗಿಡವನ್ನು ಇಟ್ಟು ಪೂಜೆ ಮಾಡುತ್ತಿರುತ್ತಾರೆ. ಆದ್ದರಿಂದ ಒಂದು ವಾರಗಳ ಕಾಲ ತುಳಸಿ ಗಿಡವನ್ನು ಗಮನಿಸುತ್ತಾ ಬಂದರೆ ನಿಮಗೆ ತಿಳಿಯುತ್ತದೆ ದುಷ್ಟ ಶಕ್ತಿಯ ಪ್ರಭಾವ ನಿಮ್ಮ ಮೇಲೆ ಎಷ್ಟು ಬೀಳುತ್ತದೆಯೋ ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಪ್ರಭಾವ ತುಳಸಿ ಗಿಡದ ಮೇಲೆ ಬೀಳುತ್ತಾ ಬರುತ್ತದೆ.
ಮನೆಯ ಮುಂಭಾಗದಲ್ಲಿ ತುಳಸಿ ಗಿಡ ಇರುವುದರಿಂದ ಶೇಕಡ 90 ಭಾಗ ಅದರ ಮೇಲೆ ಬಿದ್ದು ಉಳಿದ 10 ಭಾಗ ಮಾತ್ರ ಮನೆಯ ಅಥವಾ ಮನೆಯ ಸದಸ್ಯರ ಮೇಲೆ ಪ್ರಭಾವ ಬೀರುತ್ತದೆ. 90 ಭಾಗ ತುಳಸಿ ಗಿಡದ ಮೇಲೆ ದುಷ್ಟ ಶಕ್ತಿಯ ಪ್ರಭಾವ ಬೀರುವುದರಿಂದ ತುಳಸಿ ಗಿಡ ಒಣಗಿ ಉದುರಿಹೋಗಿ ಅಲ್ಲೇ ಸೇರುತ್ತದೆ. ಆಗ ದರಿದ್ರತನ ಎಂಬುದು ಮನೆಗೆ ಪ್ರವೇಶವಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಆದ್ದರಿಂದ ಆ ಸಮಯದಲ್ಲಿ ಸ್ವಲ್ಪ ಎಚ್ಚರದಿಂದ ಜೀವನವನ್ನು ನಡೆಸುವುದು ತುಂಬಾ ಒಳ್ಳೆಯದು.
ಶತ್ರು ನಾಶವಾಗಬೇಕೆಂದರೆ ಏನು ಮಾಡಬೇಕೆಂಬುದು ತಿಳಿದಿದೆಯೇ ನಿಮಗೆ ?
ಈಗಿನ ಪ್ರಪಂಚದಲ್ಲಿ ಒಬ್ಬ ವ್ಯಕ್ತಿ ಆರ್ಥಿಕವಾಗಿ ಸದೃಢನಾಗುತ್ತಿದ್ದಾನೆ ಎಂದರೆ ಶತ್ರು ದೃಷ್ಟಿ ಅವನ ಬೆನ್ನ ಹಿಂದೆ ಬಂದು ಬಿಡುತ್ತದೆ. ಶತ್ರು ದೃಷ್ಟಿಗಳಲ್ಲೂ ಹಲವಾರು ವಿಧಾನಗಳಿವೆ ಅದರಲ್ಲಿ ಬಂದು ಶತ್ರು ದೃಷ್ಟಿ , ಸ್ತ್ರೀ ಶತ್ರು ದೃಷ್ಟಿ, ಪುರುಷ ಶತ್ರು ದೃಷ್ಟಿ ಹಾಗೂ ವ್ಯಾಪಾರ ಮಾಡುವ ಸ್ಥಳಗಳಲ್ಲೂ ಸಹ ಶತ್ರು ದೃಷ್ಟಿಯಾಗುತ್ತದೆ.
ಒಂದು ವೇಳೆ ಶತ್ರುಗಳಿಂದ ತೊಂದರೆಯಾಗುತ್ತಿದ್ದರೆ, ನೀವು ಕೊಟ್ಟಿರುವ ಹಣ ಕಾಸಿನಿಂದ ಪ್ರಾಣ ಭಯವಾಗುತ್ತಿದೆ ಎಂದರೆ, ವ್ಯವಹಾರದ ಸ್ಥಳ,ಮನೆಯಲ್ಲಿ ಹಾಗೂ ಬಂಧು ಬಳಗದಲ್ಲಿ ಶತ್ರುಗಳ ಕಾಟ ಜಾಸ್ತಿಯಾಗಿದ್ದರೆ ಈ ಪರಿಹಾರವನ್ನು ಮಾಡುವುದರಿಂದ ಎಲ್ಲಾ ರೀತಿಯ ಶತ್ರು ದೃಷ್ಟಿಯಿಂದ ಮುಕ್ತರಾಗಬಹುದು. ಹಾಗಾದರೆ ಆ ಸರಳ ಪರಿಹಾರ ಯಾವುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಎಳ್ಳು ಎಂಬುದು ಶನಿ ತತ್ವವನ್ನು ತೋರುತ್ತದೆ. ಎಳ್ಳೆಣ್ಣೆ ಹಾಗೂ ಅರಳೆಣ್ಣೆ ಈ ಎರಡು ಎಣ್ಣೆಯು ಶನಿ ತತ್ವ ಹಾಗೂ ರಾಹು ತತ್ವವನ್ನು ತೋರುತ್ತದೆ. ಮತ್ತೊಂದು ವಿಶೇಷವಾದ ಎಣ್ಣೆ ಎಂದರೆ ಬೇವಿನ ಎಣ್ಣೆ.ಆದ್ದರಿಂದ ಈ ಮೂರು ಎಣ್ಣೆಯನ್ನು ಮಿಶ್ರಣ ಮಾಡಿದರೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಪಾರ್ವತಿಗೆ ಹೋಲಿಕೆ ಮಾಡಲಾಗುತ್ತದೆ. ಇದೇ ರೀತಿ ಈ ಮೂರು ಎಣ್ಣೆಗೆ ಶನಿ, ರಾಹು ಹಾಗೂ ಕೇತುವಿಗೆ ಹೋಲಿಸಲಾಗುತ್ತದೆ. ಅಂದರೆ ಪಾಪ ನಿಗ್ರಹ ಗ್ರಹಗಳು ಎಂಬ ಅರ್ಥವನ್ನು ಕೊಡುತ್ತದೆ.
ಈ ಎಣ್ಣೆಯನ್ನು ಪ್ರತಿ ಮಂಗಳವಾರ ,ಶುಕ್ರವಾರ ಮತ್ತು ಭಾನುವಾರ ನಿಮ್ಮ ಮನೆಯಲ್ಲಿ ರಾತ್ರಿಯ ವೇಳೆ ಎಲ್ಲರೂ ಮಲಗಿರುವ ಸಂದರ್ಭದಲ್ಲಿ ಮನೆಯ ಹಜಾರದಲ್ಲಿ ಅಥವಾ ದೇವರ ಕೋಣೆಯಲ್ಲಿ ಶತ್ರುಗಳ ಹೆಸರನ್ನು ಸ್ಮರಿಸಿಕೊಂಡು ದೀಪವನ್ನು ಹಚ್ಚುವುದರಿಂದ ಶತ್ರುಗಳು ನಾಶವಾಗುವ ಸಂಭವ ಹೆಚ್ಚಾಗಿರುತ್ತದೆ. ಅದೇ ರೀತಿ ದುರ್ಗೆಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ನೀವು ಹಚ್ಚುವ ದೀಪದ ಬತ್ತಿಗೆ ಕುಂಕುಮವನ್ನು ಮಿಶ್ರಣಮಾಡಿ ಹಚ್ಚಬೇಕು. ಮತ್ತೊಂದು ಪರಿಹಾರವೆಂದರೆ ಇದೇ ಮೂರು ಎಣ್ಣೆಯನ್ನು ಉಪಯೋಗಿಸಿ ನಿಮಗೆ ಇಷ್ಟವಾದ ದುರ್ಗಿಯ ಸನ್ನಿಧಿಗೆ ಹೋಗಿ ಶತ್ರುಗಳ ಹೆಸರನ್ನು ಹೇಳಿಕೊಂಡು ದೀಪವನ್ನು ಹಚ್ಚಬೇಕು. ಇದರಿಂದ ಶತ್ರುಗಳ ನಾಶ, ಶತ್ರು ದೋಷ ಎಲ್ಲವೂ ಪರಿಹಾರವಾಗುತ್ತದೆ.
ಆರ್ಥಿಕ ಸಮಸ್ಯೆಗೆ, ಹಣದ ಸಮಸ್ಯೆಗೆ ಸೂಕ್ತ ಪರಿಹಾರ ಕರಿಮೆಣಸಿನ ಕಾಳು.
ಸಾಲಬಾಧೆ, ಹಣದ ಸಮಸ್ಯೆ,ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿ ಅದರಿಂದ ಹೊರಬರಬೇಕೆಂದರೆ ಕರಿಮೆಣಸಿನ ಕಾಳಿನಿಂದ ಈ ಉಪಾಯವನ್ನು ಮಾಡುವುದರಿಂದ ಆದಷ್ಟು ಬೇಗ ನಿಮ್ಮ ಆರ್ಥಿಕ ಸಂಕಷ್ಟದಿಂದ ಹಾಗೂ ಇನ್ನಿತರ ಕಷ್ಟಗಳಿಂದ ಹೊರಬರಬಹುದು. ಹಾಗಾದರೆ ಈ ಕರಿಮೆಣಸಿನ ಕಾಳಿನಿಂದ ಯಾವ ರೀತಿ ಉಪಾಯವನ್ನು ಮಾಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.
ಈ ಉಪಾಯವನ್ನು 5 ಭಾನುವಾರಗಳ ಕಾಲ ಮಾಡುವುದರಿಂದ ಸಾಲಬಾಧೆ,ಆರ್ಥಿಕ ಸಂಕಷ್ಟ, ಹಣದ ಸಮಸ್ಯೆಯಿಂದ ಮುಕ್ತರಾಗಿ ಲಕ್ಷ್ಮೀದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು. ಒಂದು ವೇಳೆ 5 ಭಾನುವಾರಗಳ ಕಾಲ ಮಾಡಲು ಸಾಧ್ಯವಾಗದಿದ್ದರೆ ಒಂದು ಅಮಾವಾಸ್ಯೆ ದಿನ ಮಾಡುವುದರಿಂದ ಐದು ಭಾನುವಾರಗಳ ಕಾಲ ಮಾಡಿದ ಫಲವು ಲಭಿಸುತ್ತದೆ ಎಂದು ತಾಂತ್ರಿಕ ಭಾಗದಲ್ಲಿ ಹೇಳಲಾಗಿದೆ.ಕರಿಮೆಣಸಿನ ಕಾಳು ಪ್ರಕೃತಿಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಸಹಾಯ ಮಾಡುವ ಶಕ್ತಿಯನ್ನು ಹೊಂದಿದೆ.
ಮೊದಲಿಗೆ 9 ಕರಿ ಮೆಣಸಿನ ಕಾಳನ್ನು ತೆಗೆದುಕೊಂಡು ಮನೆಯಿಂದ ಹೊರಭಾಗಕ್ಕೆ ಬರಬೇಕು. ಬಲ ಕೈಯಲ್ಲಿ ಇರುವ ಕರಿ ಮೆಣಸಿನ ಕಾಳನ್ನು ಎಡ ಕೈಯಿಗೆ ಹಾಕಿಕೊಳ್ಳಬೇಕು, ನಂತರ ಒಂದೊಂದು ಕರಿ ಮೆಣಸಿನ ಕಾಳನ್ನು ತೆಗೆದುಕೊಂಡು ಓಂ ಎಂದು ಹೇಳಿ ಪೂರ್ವ ದಿಕ್ಕಿನ ಕಡೆಗೆ ಎಸೆಯಬೇಕು ನಂತರ ಮತ್ತೊಂದು ಕರಿ ಮೆಣಸಿನ ಕಾಳನ್ನು ತೆಗೆದುಕೊಂಡು ಪಕ್ಷಿಮ ದಿಕ್ಕಿನ ಕಡೆಗೆ ಎಸೆಯಬೇಕು. ಹಾಗೆಯೇ ಮತ್ತೊಂದು ಕರಿ ಮೆಣಸಿನ ಕಾಳನ್ನು ಉತ್ತರದಿಕ್ಕಿಗೆ ಹಾಗೂ ಇನ್ನೊಂದು ಕರಿಮೆಣಸಿನ ಕಾಳನ್ನು ದಕ್ಷಿಣ ದಿಕ್ಕಿಗೆ ಎಸೆಯಬೇಕು. ಅದೇ ರೀತಿ ಈಶಾನ್ಯ, ವಾಯುವ್ಯ, ಆಗ್ನೇಯ ಹಾಗೂ ನೈಋತ್ಯ ದಿಕ್ಕಿಗೆ ಓಂ ಎಂದು ಹೇಳಿ ಒಂದೊಂದು ಕರಿ ಮೆಣಸಿನ ಕಾಳನ್ನು ಎಸೆಯಬೇಕು. ಎಲ್ಲಾ ದಿಕ್ಕಿಗೂ ಹಾಕಿದ ನಂತರ ಉಳಿದ ಒಂದು ಕರಿ ಮೆಣಸಿನ ಕಾಳನ್ನು ಆಕಾಶವನ್ನು ನೋಡುತ್ತಾ ಓಂ ಎಂದು ಹೇಳಿ ಆಕಾಶದ ಕಡೆ ಎಸೆಯಬೇಕು.
ಈ ಪರಿಹಾರವನ್ನು ಸಾಯಂಕಾಲ 6 ಘಂಟೆಯ ನಂತರ ಹಾಗೂ 9 ಘಂಟೆಯೊಲಗೆ ಮಾಡಬೇಕು. ಈ ರೀತಿಯಾಗಿ ಮಾಡಿದ ನಂತರ ಕೈಕಾಲುಗಳನ್ನು ತೊಳೆದುಕೊಂಡು ನಂತರ ಮನೆಗೆ ಪ್ರವೇಶವನ್ನು ಪಡೆಯಬೇಕು. ಇದರಿಂದ ಸಾಲಬಾಧೆ, ಹಣದ ಸಮಸ್ಯೆ, ಆರ್ಥಿಕ ಸಂಕಷ್ಟವು ನಿವಾರಣೆಯಾಗಿ ಸುಖಕರವಾಗಿ ಜೀವನವನ್ನು ನಡೆಸಬಹುದು.
ಒಂದು ವೇಳೆ ಕೆಲಸ ಮಾಡುವ ಜಾಗದಲ್ಲಿ ಯಾರೂ ಕೂಡ ನಿಮ್ಮ ಮಾತನ್ನು ಕೇಳುತ್ತಿಲ್ಲ ಎಂದರೆ ಮನೆಯಿಂದ ಹೊರಗೆ ಹೋಗುವಾಗ 9 ಕರಿ ಮೆಣಸಿನ ಕಾಳನ್ನು ಬಾಯಲ್ಲಿ ಹಾಕಿಕೊಂಡು ಅಗಿಯುತ್ತಾ ಹೋಗುವುದರಿಂದ ನಿಮ್ಮ ಸುತ್ತಮುತ್ತಲಿನಲ್ಲಿರುವವರು ಬದಲಾವಣೆಯಾಗಿ ನಿಮ್ಮ ಮಾತನ್ನು ಕೇಳುವ ಹಾಗೆ ಆಗುತ್ತಾರೆ.
ಒಂದು ವೇಳೆ ವಿಪರೀತವಾಗಿ ಶತ್ರುಗಳ ಕಾಟ ಜಾಸ್ತಿಯಿದ್ದರೆ ಮನೆಯಿಂದ ಹೊರಹೋಗುವಾಗ ಅವರ ಹೆಸರನ್ನು ಹೇಳಿ 9 ಕರಿ ಮೆಣಸಿನ ಕಾಳನ್ನು ಅಗ್ನಿಯಲ್ಲಿ ದಹಿಸಿ ಅದರಿಂದ ಬಂದ ಬೂದಿಯನ್ನು ಕಸದ ಬುಟ್ಟಿಗೆ ಹಾಕಿ ಹೋಗುವುದರಿಂದ ಶತ್ರು ಕಾಟ ನಿವಾರಣೆಯಾಗುತ್ತದೆ.
ತುಪ್ಪದಿಂದ ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಹೇಗೆ ಪಡೆದುಕೊಳ್ಳಬಹುದು ತಿಳಿದಿದೆಯೇ ನಿಮಗೆ ?
ಸಾಮಾನ್ಯವಾಗಿ ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸಬೇಕೆಂದರೆ ಅಥವಾ ಆರ್ಥಿಕ ಪರಿಸ್ಥಿತಿ ಸದೃಢವಾಗಬೇಕು ಎಂದರೆ ಅಥವಾ ಧನ ಸಂಪತ್ತನ್ನು ಗಳಿಸಬೇಕೆಂದರೆ ಲಕ್ಷ್ಮಿ ಅನುಗ್ರಹವು ಬೇಕೇ ಬೇಕು. ಆದ್ದರಿಂದ ಲಕ್ಷ್ಮೀದೇವಿಗೆ ತುಂಬ ಪ್ರಿಯವಾದದ್ದು ತುಪ್ಪದ ದೀಪ. ಆದ್ದರಿಂದ ಮಂಗಳವಾರ, ಶುಕ್ರವಾರ ಹಾಗೂ ವಿಶೇಷವಾದ ದಿನದಂದು ತುಪ್ಪದ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು.
ಸಾಮಾನ್ಯವಾಗಿ ತುಪ್ಪವನ್ನು ಅಂಗಡಿಯಿಂದ ಖರೀದಿ ಮಾಡಿಕೊಂಡು ತಂದ ನಂತರ ಪ್ರತಿನಿತ್ಯ ದೇವರಿಗೆ ತುಪ್ಪದ ದೀಪವನ್ನು ಹಚ್ಚಲಾಗುತ್ತದೆ. ತುಪ್ಪದ ಡಬ್ಬ ಖಾಲಿಯಾದ ನಂತರ ಅದನ್ನು ಶುದ್ಧವಾಗಿ ತೊಳೆದು ನಂತರ ಅದನ್ನು ಒರೆಸಿ ಅದರ ಒಳಗೆ ದೊಡ್ಡದಾದ ಒಂದು ಏಲಕ್ಕಿಯನ್ನು ಹಾಗೂ ಸ್ವಲ್ಪ ಅರಿಶಿನವನ್ನು ಹಾಕಿ ದೇವರ ಕೋಣೆಯಲ್ಲಿ ಲಕ್ಷ್ಮೀದೇವಿಯ ಚಿತ್ರಪಟದ ಮುಂದೆ ಇಡಬೇಕು. ಪ್ರತಿನಿತ್ಯ ಪೂಜೆ ಮಾಡುವಾಗ ಒಂದೊಂದು ನಾಣ್ಯವನ್ನು ಡಬ್ಬಿಯ ಒಳಗೆ ಹಾಕುತ್ತಾ ಬರಬೇಕು. ಒಂದು ಬಾರಿ ಆ ಡಬ್ಬವು ತುಂಬಿದ ನಂತರ ಪೂಜೆಯನ್ನು ಮಾಡಿ ಬೀರುವಿನ ಒಳಗೆ ಚಿನ್ನದ ನಾಣ್ಯಗಳು ಅಥವಾ ಆಭರಣಗಳನ್ನು ಇಡುವ ಜಾಗದಲ್ಲಿ ಇಡಬೇಕು. ಇದರಿಂದ ಧನ ಸಂಪತ್ತು ವೃದ್ದಿಯಾಗುತ್ತದೆ,ಆರ್ಥಿಕ ಸಂಕಷ್ಟ ನಿವಾರಣೆಯಾಗುತ್ತದೆ ಹಾಗೂ ಲಕ್ಷ್ಮಿದೇವಿಯ ಅನುಗ್ರಹವು ಪ್ರಾಪ್ತಿಯಾಗುತ್ತದೆ.
ಹಾಗೆಯೇ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಹೆಚ್ಚು ಹಣವನ್ನು ಸಂಪಾದನೆ ಮಾಡಬೇಕು ಹಾಗೂ ಯಾವಾಗಲೂ ಕೈಯಲ್ಲಿ ದುಡ್ಡು ಇರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಈ ರೀತಿ ಆಸೆ ಇದ್ದವರು ಎರಡು 20 ರೂಪಾಯಿ ನೋಟನ್ನು ತೆಗೆದುಕೊಂಡು ದೇವರಕೋಣೆಯಲ್ಲಿ ಲಕ್ಷ್ಮಿ ದೇವಿಯ ಚಿತ್ರಪಟದ ಮುಂದೆ ಇಟ್ಟು ತುಪ್ಪದಿಂದ ದೀಪವನ್ನು ಹಚ್ಚಬೇಕು. ದೀಪವನ್ನು ಹಚ್ಚಿದ ನಂತರ 20 ರೂಪಾಯಿಯ ಎರಡು ನೋಟಿಗೆ ಗಂಧ,ಕುಂಕುಮ ಹಾಗೂ ಅರಿಶಿನವನ್ನು ಹಚ್ಚಬೇಕು. ಈ ರೀತಿಯಾಗಿ ಲೇಪನ ಮಾಡಿದ ನಂತರ ಲಕ್ಷ್ಮೀದೇವಿಗೆ ಹಾಗೂ ನೀವು ಇಟ್ಟಿರುವಂತಹ ನೋಟಿಗೂ ಪೂಜೆಯನ್ನು ಮಾಡಬೇಕು. ಪೂಜೆಯನ್ನು ಮಾಡಿದ ನಂತರ ಆ ನೋಟನ್ನು ಹುಡುಗರಾದರೆ ತಮ್ಮ ಪರ್ಸ್ ಒಳಗೆ ಒಂದು ವೇಳೆ ಹುಡುಗಿಯರಾದರೆ ವ್ಯಾನಿಟಿ ಬ್ಯಾಗ ಅಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಲಕ್ಷ್ಮೀದೇವಿಯ ಅನುಗ್ರಹ ಪ್ರಾಪ್ತಿಯಾಗಿ ಧನಸಂಪತ್ತು ವೃದ್ಧಿಯಾಗುತ್ತದೆ. ಈ ರೀತಿಯಾಗಿ ಪೂಜೆ ಮಾಡಿದ ನೋಟನ್ನು ಯಾವುದೇ ಕಾರಣಕ್ಕೂ ಯಾರಿಗೂ ಕೊಡಬಾರದು ಹಾಗೂ ಉಪಯೋಗಿಸಬಾರದು.
ಈ ಒಂದು ವಸ್ತುವನ್ನು ಲಕ್ಷ್ಮಿ ದೇವಿಯ ಮುಂದೆ ಇಟ್ಟು ಪೂಜೆ ಮಾಡಿದರೆ ಹಣದ ಸಮಸ್ಯೆಗಳೆಲ್ಲ ದೂರವಾಗುತ್ತದೆ.
ನಮಗೆ ಬರಬೇಕಾಗಿರುವ ಬಾಕಿ ಹಣವು ಬರಬೇಕಾದರೆ ಹಾಗೂ ಆರ್ಥಿಕ ಸಂಕಷ್ಟವು ದೂರವಾಗಿ ಸದೃಢರಾಗಬೇಕು ಮತ್ತು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದರೆ ಯಾವ ರೀತಿ ಏಲಕ್ಕಿಯ ಕಾಯಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಏಲಕ್ಕಿ ಕಾಯಿ ನವಗ್ರಹದಲ್ಲಿ ಶುಕ್ರಗ್ರಹಕ್ಕೆ ತುಂಬ ಪ್ರಿಯವಾದದ್ದು. ಶುಕ್ರನಿಗೆ ಅಧಿಪತ್ಯ ದೇವತೆ ಯಾರೆಂದರೆ ಲಕ್ಷ್ಮಿ. ಆದ್ದರಿಂದ ದೊಡ್ಡದಾದ ಏಲಕ್ಕಿ ಕಾಯನ್ನು, ಕೆಂಪು ದಾರವನ್ನು ಹಾಗೂ ಕೆಂಪು ವಸ್ತ್ರವನ್ನು ತೆಗೆದುಕೊಂಡು ಈ ಪರಿಹಾರವನ್ನು ಶುಕ್ರವಾರದ ದಿನದಂದು ಮಾಡಬೇಕು.
ಮೊದಲಿಗೆ ಶುಕ್ರವಾರ ದಿನ ಏಲಕ್ಕಿ ಕಾಯಿ ಪೌಡರ್ ಅನ್ನು ಸ್ನಾನ ಮಾಡುವ ನೀರಿಗೆ ಹಾಕಿ ಐದು ನಿಮಿಷಗಳ ಕಾಲ ಬಿಟ್ಟು ನಂತರ ಸ್ನಾನ ಮಾಡಬೇಕು. ನಂತರ ಒಂದು ಏಲಕ್ಕಿ ಕಾಯನ್ನು ತೆಗೆದುಕೊಂಡು ಕೆಂಪು ದಾರದಲ್ಲಿ ಗಂಟನ್ನು ಹಾಕಿಕೊಳ್ಳಬೇಕು. ಒಂದು ಏಳಕ್ಕಿಯ ಕಾಯಿಯನ್ನು ಕಟ್ಟಿದ ನಂತರ ಮೂರು ಗಂಟನ್ನು ಹಾಕಿ ನಂತರ ಇದೇ ರೀತಿ ಉಳಿದ 4 ಏಲಕ್ಕಿಯ ಕಾಯಿಯನ್ನು ಕಟ್ಟಬೇಕು. ಈ ರೀತಿಯಾಗಿ ಏಲಕ್ಕಿಯ ಕಾಯನ್ನು ಕಟ್ಟಿದ ನಂತರ ಲಕ್ಷ್ಮೀದೇವಿ ಚಿತ್ರಪಟದ ಮುಂದೆ ಇರುವ ಕೆಂಪು ವಸ್ತ್ರದ ಮೇಲೆ ಇಟ್ಟು ತುಪ್ಪದಿಂದ ಅಥವಾ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಬೇಕು.
ಪೂಜೆಯನ್ನು ಮಾಡಿದ ನಂತರ ಕೆಂಪು ವಸ್ತ್ರವನ್ನು ಗಂಟುಕಟ್ಟಿ ಮನೆಯ ಬೀರುವಿನ ಒಳಗೆ ಇಟ್ಟುಕೊಳ್ಳಬೇಕು. ಇದರಿಂದ ಲಕ್ಷ್ಮೀದೇವಿ ಅನುಗ್ರಹವು ಪ್ರಾಪ್ತಿಯಾಗಿ ನಿಮಗಿರುವ ಸಾಲಬಾಧೆ, ಹಣದ ಸಮಸ್ಯೆ ಹಾಗೂ ಬೇರೆಯವರಿಗೆ ಕೊಟ್ಟಿರುವ ದುಡ್ಡು ಹಿಂತಿರುಗಿ ಬರುತ್ತದೆ. ಪ್ರತಿ ಶುಕ್ರವಾರ ಬೀರುವಿನಲ್ಲಿ ಇಟ್ಟಿರುವ ಕೆಂಪು ವಸ್ತ್ರದ ಗಂಟನ್ನು ತೆಗೆದು ದೇವರ ಕೋಣೆಯಲ್ಲಿ ಲಕ್ಷ್ಮೀದೇವಿ ಚಿತ್ರಪಟದ ಮುಂದೆ ಇಟ್ಟು ಧೂಪದಿಂದ ಪೂಜೆಯನ್ನು ಮಾಡಿ ನಂತರ ಮತ್ತೆ ಬೀರುವಿನ ಒಳಗೆ ಇಡಬೇಕು. ಈ ರೀತಿ ಮಾಡುವುದರಿಂದ ಆರ್ಥಿಕ ಸಂಕಷ್ಟವು ದೂರವಾಗಿ ಜೀವನದಲ್ಲಿ ಸದೃಢರಾಗಬಹುದು.