Your cart is currently empty!
Author: 53721pwpadmin
ಈ ಮೂರು ದಿನದಲ್ಲಿ ಈ ಒಂದು ವಸ್ತುವಿನಿಂದ ಸುಲಭ ಪರಿಹಾರವನ್ನು ಮಾಡಿದರೆ ಶತ್ರುನಾಶ ಖಚಿತ.
ಯಾವಾಗಲೂ ಹಾಗೆ ಶತ್ರುಗಳು ಎಲ್ಲಿರುತ್ತಾರೋ ಎಂಬುದು ತಿಳಿಯುವುದಿಲ್ಲ, ಕೆಲಸ ಮಾಡುವ ಜಾಗದಲ್ಲಿ, ಕಚೇರಿಗಳಲ್ಲಿ ಹಾಗೂ ನೀವು ಜೀವನದಲ್ಲಿ ಏಳಿಗೆಯನ್ನು ಕಾಣುತ್ತಿದ್ದರೆ ಅದನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿರುವುದಿಲ್ಲ. ಇದರಿಂದ ನಿಮ್ಮ ಮೇಲೆ ಶಟ್ರುತ್ವವನ್ನು ಬೆಳೆಸಿಕೊಳ್ಳುತ್ತಾರೆ.ಹಾಗಾದರೆ ಈ ರೀತಿಯ ಶತ್ರುಗಳನ್ನು ಯಾವ ರೀತಿ ಸಂಹಾರ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ನಿಂಬೆಹಣ್ಣನ್ನು ತೆಗೆದುಕೊಂಡು ಮೂರರಿಂದ ನಾಲ್ಕು ದಿನಗಳ ಕಾಲ ಒಣಗಿಸಬೇಕು. ಮೂರರಿಂದ ನಾಲ್ಕು ದಿನ ಒಣಗಿಸಿದ ಮೇಲೆ ಆ ನಿಂಬೆಹಣ್ಣಿನ ಮೇಲೆ ನಿಮ್ಮ ಶತ್ರುವಿನ ಹೆಸರನ್ನು ಬರೆಯಬೇಕು. ಒಂದುವೇಳೆ ಆ ಶತ್ರು ಪುರುಷರು ಆಗಿರಲಿ ಅಥವಾ ಸ್ತ್ರೀಯರು ಆಗಿರಲಿ ಯಾರಾದರೂ ಸರಿ ಅವರ ಹೆಸರನ್ನು ಬರೆಯಬೇಕು. ಶತ್ರುನಾಶವನ್ನು ಅಥವಾ ಈ ಪ್ರಯೋಗವನ್ನು ವಾರದ ಕೊನೆಯ ದಿನಗಳಾದ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮಾಡಬೇಕು.
ಈ ಮೂರು ದಿನಗಳಲ್ಲಿ ಮಾಡುವುದರಿಂದ ಶತ್ರುಗಳ ನಾಶವು ಖಚಿತವಾಗಿ ಆಗುತ್ತದೆ ಹಾಗೂ ಕೇವಲ ಎರಡೇ ದಿನದಲ್ಲಿ ಶತ್ರು ನಾಶ ಆಗಿರುವ ಬಗ್ಗೆ ಬದಲಾವಣೆಯನ್ನು ನಿಮ್ಮ ಜೀವನದಲ್ಲಿ ಕಾಣಬಹುದು. ಆದ್ದರಿಂದ ಈ ನಿಂಬೆ ಹಣ್ಣಿನ ಮೇಲೆ ಶತ್ರುವಿನ ಹೆಸರನ್ನು ಬರೆದ ಮೇಲೆ ನೀವು ಮಲಗುವ ಕೋಣೆಯಲ್ಲಿ ದಿಂಬಿನ ಕೆಳಭಾಗದಲ್ಲಿ ಇಟ್ಟುಕೊಳ್ಳಬೇಕು, ಈ ರೀತಿ ನಿಂಬೆಹಣ್ಣನ್ನು ಇಟ್ಟುಕೊಳ್ಳುವುದರಿಂದ ಕೇವಲ ಎರಡೇ ದಿನದಲ್ಲಿ ಶತ್ರುನಾಶ ಆಗುತ್ತದೆ.
ಅಕ್ಷಯಪಾತ್ರೆಯನ್ನು ಹೇಗೆ ಸಿದ್ದ ಮಾಡಿಕೊಳ್ಳಬೇಕು ತಿಳಿದಿದೆಯೇ ನಿಮಗೆ ?
ಅಕ್ಷಯಪಾತ್ರೆಯನ್ನು ಸಿದ್ದ ಮಾಡಿಕೊಳ್ಳಬೇಕಾದರೆ ಒಂದು ಮಣ್ಣಿನ ಮಡಿಕೆಯನ್ನು ನಿಮಗೆ ಅನುಕೂಲವಾಗುವ ದಿನದಂದು ಮನೆಗೆ ತರಬೇಕು. ಮನೆಗೆ ಮಣ್ಣಿನ ಮಡಕೆಯನ್ನು ತಂದ ನಂತರ ಶುದ್ಧವಾದ ನೀರಿನಿಂದ ತೊಳೆಯಬೇಕು. ತದನಂತರ ಒಂದು ತಟ್ಟೆಯನ್ನು ತೆಗೆದುಕೊಂಡು ಅರಿಶಿನವನ್ನು ಹಾಕಬೇಕು. ಅರಿಶಿನಕ್ಕೆ ಕರ್ಪೂರ, ಪಚ್ಚಕರ್ಪೂರ, ಜವ್ವಾದಿ ಈ ಮೂರು ವಸ್ತುಗಳನ್ನು ಅರಿಶಿನಕ್ಕೆ ಹಾಕಿ ರೋಸ್ ವಾಟರ್ ನಿಂದ ಪೇಸ್ಟ್ ಮಾಡಿಕೊಂಡು ಮಡಿಕೆ ಸುತ್ತಾ ಲೇಪನ ಮಾಡಬೇಕು. ಲೇಪನ ಮಾಡಿದ ನಂತರ ಕುಂಕುಮದಿಂದ ಶ್ರೀಂ ಎಂದು ಬೊಟ್ಟನ್ನು ಇಡಬೇಕು.
ಅಕ್ಷಯ ಪಾತ್ರೆಗೆ ಮೊದಲಿಗೆ ಅರಿಶಿನ-ಕುಂಕುಮ, ಸ್ವಲ್ಪ ಪಚ್ಚಕರ್ಪೂರ, ಜವ್ವಾದಿ, ಕರ್ಪೂರ ಹಾಕಬೇಕು. ಈ ಪದಾರ್ಥಗಳನ್ನು ಹಾಕಿದ ನಂತರ ಸ್ವಲ್ಪ ಕಲ್ಲುಪ್ಪನ್ನು ಹಾಕಬೇಕು. ಕಲ್ಲುಪ್ಪನ್ನು ಹಾಕಿದ ನಂತರ ಒಂದು ವಸ್ತ್ರದಿಂದ ಮುಚ್ಚಬೇಕು. ಈ ರೀತಿ ಮಾಡಿದರೆ ಅಕ್ಷಯಪಾತ್ರೆ ಸಿದ್ಧವಾಗುತ್ತದೆ. ಇದರಿಂದ ಲಕ್ಷ್ಮೀದೇವಿಯು ಸ್ಥಿರವಾಗಿ ವಾಸಿಸಲು ಇಷ್ಟಪಡುತ್ತಾಳೆ.
ಈ ರೀತಿಯಾಗಿ ಅಕ್ಷಯಪಾತ್ರೆಯನ್ನು ಸಿದ್ದಮಾಡಿಕೊಂಡು ಪ್ರತಿನಿತ್ಯ ಮನೆಯಲ್ಲಿ ಪೂಜೆಯನ್ನು ಮಾಡುವುದರಿಂದ ಲಕ್ಷ್ಮೀದೇವಿ ಅನುಗ್ರಹವು ಪ್ರಾಪ್ತಿಯಾಗುತ್ತದೆ ಹಾಗೂ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಇದ್ದರೂ ಪರಿಹಾರವಾಗುತ್ತದೆ ಮತ್ತು ಬಾಕಿ ಬರಬೇಕಾಗಿದ್ದ ಹಣ ಕೈ ಸೇರುತ್ತದೆ ಮತ್ತು ಧನ ಸಂಪತ್ತು ವೃದ್ಧಿಯಾಗುತ್ತದೆ.
ಒಂದು ವೇಳೆ ಮನೆಯಲ್ಲಿ ಅನವಶ್ಯಕ ಖರ್ಚುಗಳು ಜಾಸ್ತಿಯಾಗುತ್ತಿವೆ ಮತ್ತು ಎಷ್ಟೇ ಸಂಪಾದನೆ ಮಾಡಿ ಹಣವನ್ನು ತಂದರು ಅದು ಕೈಯಲ್ಲಿ ನಿಲ್ಲುತ್ತಿಲ್ಲ ಎನ್ನುವವರು ಸಂಬಳ ತಂದ ದಿನದಂದು ಹಣವನ್ನು ಅಕ್ಷಯ ಪಾತ್ರೆಯ ಒಳಗೆ ಹಾಕಿ ತದನಂತರ ಉಪಯೋಗಿಸುವುದರಿಂದ ಅನವಶ್ಯಕ ಖರ್ಚುಗಳು ಕಡಿಮೆಯಾಗಿ ಧನ ಸಂಪತ್ತು ವೃದ್ಧಿಯಾಗುತ್ತದೆ.
ಸಾಲದಿಂದ ಕೊರಗುತ್ತಿರುವವರು ಶುಕ್ರವಾರದ ದಿನದಂದು ನಿಮ್ಮ ಹತ್ತಿರ ಎಷ್ಟು ಹಣ ಇರುತ್ತದೆಯೋ ಅಷ್ಟು ಹಣವನ್ನು ಅಕ್ಷಯಪಾತ್ರೆಗೆ ಹಾಕಿ ಮಂಗಳವಾರದಂದು ಆ ಹಣವನ್ನು ತೆಗೆದುಕೊಂಡು ಉಪಯೋಗಿಸುವುದರಿಂದ ಸಾಲಬಾಧೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.
ಮಡಿಕೆಯಲ್ಲಿರುವ ಕಲ್ಲುಪ್ಪನ್ನು ಮೂರು ತಿಂಗಳಿಗೊಮ್ಮೆ ಬದಲಾಯಿಸಬೇಕು. ಕಲ್ಲುಪ್ಪನ್ನು ಬದಲಾಯಿಸುವಾಗ ಭಾನುವಾರ ದಿನದಂದು ಮಡಿಕೆಯಿಂದ ತೆಗೆದು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಈ ರೀತಿಯಾಗಿ ಮಾಡುವುದರಿಂದ ಅಕ್ಷಯ ಪಾತ್ರೆಯಿಂದ ನಿಮ್ಮ ಮನೆಯಲ್ಲಿ ಸುಖ,ಸಂತೋಷ ಅಕ್ಷಯವಾಗುತ್ತಿರುವುದುರಲ್ಲಿ ಸಂಶಯವಿಲ್ಲ.
ಈ ಮಂತ್ರ ಜಪಿಸಿದರೆ ಕಳೆದುಕೊಂಡ ಹಣ ಬಂಗಾರಗಳು ಮರಳಿ ಬರುತ್ತದೆ.
ಕೆಲವೊಂದು ಬಾರಿ ಕೆಲವೊಬ್ಬರು ತಾವು ಸಂಪಾದಿಸಿದ ಹಣವನ್ನು ಸಂಪೂರ್ಣವಾಗಿ ಕಳೆದುಕೊಂಡಿರುತ್ತಾರೆ ಅಥವಾ ಬಂಗಾರವನ್ನು ಯಾರಾದರೂ ಕಳ್ಳತನ ಮಾಡಿರುತ್ತಾರೆ.ಇನ್ನೂ ಕೆಲವೊಂದು ಬಾರಿ ಸಂಕಷ್ಟಗಳು ಬಂದಾಗ ಬಂಗಾರವನ್ನು ಅಡವಿಟ್ಟು ಅದನ್ನು ಬಿಡಿಸಿಕೊಳ್ಳಲಾಗದೆ ಕಳೆದುಕೊಂಡಿರುತ್ತೇವೆ. ವ್ಯಕ್ತಿಗಳನ್ನು ಹೊರತುಪಡಿಸಿ ನಾವು ಸಾಕಿದ ಹಸುಗಳು, ನಾಯಿಗಳು ಕಳೆದು ಹೋದರು ಮನುಷ್ಯನಿಗೆ ತುಂಬಾ ಬೇಸರವಾಗುತ್ತದೆ ಯಾಕೆಂದರೆ ಅವುಗಳ ಜೊತೆಗೆ ಭಾವನಾತ್ಮಕವಾಗಿ ಸಂಬಂಧವನ್ನು ಹೊಂದಿರುತ್ತಾನೆ. ಆದ್ದರಿಂದ ಈ ಮಂತ್ರವನ್ನು ಜಪಿಸಿದರೆ ಕಳೆದುಹೋದ ವಸ್ತುಗಳು, ವ್ಯಕ್ತಿಗಳು, ಸಾಕುಪ್ರಾಣಿಗಳು ನಿಮ್ಮ ಕೈ ಸೇರುತ್ತದೆ.
ಕಾರ್ತಿವೀರ್ಯಾರ್ಜುನ ನಾಮಮ್ ರಾಜಬಾಹು ಸಹಸ್ರ ಮುಖಂ ತಸ್ಮೈ ಸ್ಮರಣಮಾರ್ಥ ಗದಂ ನಷ್ಟ ಲಭ್ಯತೆ. ಈ ಮೇಲಿನ ಮಂತ್ರವನ್ನು ಜಪಿಸುವುದರಿಂದ ನೀವು ಕಳೆದುಕೊಂಡಿರುವ ವಸ್ತುವಾಗಲಿ, ಹಣವಾಗಲಿ, ಒಡವೆ ಆಗಲಿ ಅಥವಾ ವ್ಯಕ್ತಿಗಳಾಗಲಿ ಅಥವಾ ಸಾಕುಪ್ರಾಣಿಗಳು ಆಗಲಿ ಒಂದು ವೇಳೆ ಕಾಣೆಯಾಗಿದ್ದರೆ ಅಥವಾ ಕಳೆದು ಹೋಗಿದ್ದರೆ ಅವುಗಳನ್ನು ಹಿಂತಿರುಗಿ ಪಡೆದುಕೊಳ್ಳಬಹುದು.
ಹಣವನ್ನು ಯಾರಿಗಾದರೂ ಕೊಟ್ಟಿ ಕಳೆದುಕೊಳ್ಳಬಾರದು ಎಂದು ಜಾಗೃತಿ ವಹಿಸುವುದಾದರೆ ಕೆಲವೊಂದು ನಕ್ಷತ್ರಗಳು ಬಂದಾಗ ಯಾರಿಗೂ ಹಣವನ್ನು ನೀಡಬಾರದು. ಒಂದು ವೇಳೆ ಈ 5 ನಕ್ಷತ್ರಗಳು ಬಂದಾಗ ಹಣವನ್ನು ಆಗಲಿ ಅಥವಾ ಯಾವುದಾದರೂ ವಸ್ತುವನ್ನಾಗಲಿ ಅವರಿಗೆ ನೀಡಿದರೆ ಅದು ಎಂದಿಗೂ ಹಿಂತಿರುಗಿ ಬರುವುದಿಲ್ಲ. ಹಾಗಾದರೆ ಆ 5 ನಕ್ಷತ್ರಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.
ಭರಣಿ ನಕ್ಷತ್ರ, ಹಸ್ತ ನಕ್ಷತ್ರ, ಮಕರ ನಕ್ಷತ್ರ, ಪೂರ್ವಭಾದ್ರ ನಕ್ಷತ್ರ ಮತ್ತು ಮೂಲ ನಕ್ಷತ್ರ ಬಂದಾಗ ಯಾವುದೇ ಕಾರಣಕ್ಕೂ ಯಾರಿಗೂ ಹಣವನ್ನು ನೀಡಬೇಡಿ. ಈ ರೀತಿಯಾಗಿ ಜಾಗೃತಿ ವಹಿಸಿ ಜೀವದಲ್ಲಿ ನಡೆದರೆ ಸುಖಕರವಾಗಿ ಜೀವನವನ್ನು ನಡೆಸಬಹುದು.ನೀವು ಇಷ್ಟಪಟ್ಟವರನ್ನು ಲವಂಗದಿಂದ ವಶೀಕರಣವನ್ನು ಹೇಗೆ ಮಾಡಬಹುದು ಎಂದು ತಿಳಿದಿದೆಯೇ ನಿಮಗೆ ?
ನೀವು ಇಷ್ಟಪಟ್ಟವರನ್ನು ಲವಂಗದಿಂದ ವಶೀಕರಣವನ್ನು ಹೇಗೆ ಮಾಡಬಹುದು ಎಂದು ತಿಳಿದಿದೆಯೇ ನಿಮಗೆ…ಲವಂಗದಿಂದ ವಶೀಕರಣ ಮಾಡಿದರೆ ನೀವು ಯಾರನ್ನು ಇಷ್ಟಪಡುತ್ತಿರೋ ಅವರನ್ನು ನಿಮ್ಮ ಕೈವಶ ಮಾಡಿಕೊಳ್ಳಬಹುದು. ಹಾಗಾದರೆ ಈ ತಂತ್ರವನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಲವಂಗವನ್ನು ಕೈಯಿಯ ಮುಷ್ಟಿಯಲ್ಲಿ ಹಿಡಿದುಕೊಂಡು ನೀವು ಯಾರನ್ನು ಇಷ್ಟಪಡುತ್ತಿರುತ್ತೀರೋ ಅಥವಾ ಯಾರನ್ನು ನಿಮ್ಮ ಕೈವಶ ಮಾಡಿಕೊಳ್ಳಬೇಕು ಎಂದು ಅಂದುಕೊಂಡಿರುತ್ತೀರೋ ಅವರ ಹೆಸರನ್ನು ಮನಸ್ಸಿನಲ್ಲಿ ಜಪಿಸಿಕೊಂಡು ನಾವು ಹೇಳುವ ಈ ಶಕ್ತಿಶಾಲಿ ವಶೀಕರಣದ ಈ ಒಂದು ಪದವನ್ನು ಪಠಿಸಬೇಕು. ಹಾಗಾದರೆ ವಶೀಕರಣದ ಆ ಒಂದು ಪದ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.
ನೀವು ಇಷ್ಟಪಟ್ಟವರನ್ನು ಒಲಿಸಿಕೊಳ್ಳುವ ವಶೀಕರಣದ ಆ ಒಂದು ಪದ ಯಾವುದೆಂದರೆ ಓಂ ನಮೋ ಗಂಧರ್ವ ಸಂಮೋಹಿನಿ ಕುರು ಕುರು ವಶ ಸ್ವಾಹ.
ಈ ವಶೀಕರಣದ ಪದವನ್ನು ಪ್ರಯೋಗ ಮಾಡಬೇಕಾದರೆ 21 ಬಾರಿ ಜಪಿಸಬೇಕು. 21 ಬಾರಿ ಜಪಿಸಿದ ಮೇಲೆ ನಿಮ್ಮ ಕೈಯಿಯ ಮುಷ್ಟಿಯಲ್ಲಿ ಇರುವ ಲವಂಗವನ್ನು ನಿಮ್ಮ ನಾಲಿಗೆಯ ಮೇಲೆ ಇಟ್ಟುಕೊಳ್ಳಬೇಕು. ಈ ರೀತಿಯಾಗಿ ವಶೀಕರಣ ವನ್ನು ಮಾಡಿದರೆ ನೀವು ಇಷ್ಟಪಡುವವರು ಅಥವಾ ಪ್ರೀತಿಸುವವರು ಕೇವಲ 24 ಗಂಟೆಯೊಳಗೆ ನಿಮ್ಮ ಕೈವಶ ಆಗುತ್ತಾರೆ.
ಈ ವಶೀಕರಣ ಪ್ರಯೋಗವನ್ನು ಕೇವಲ ಒಳ್ಳೆಯ ಕೆಲಸಗಳಿಗೆ ಮಾತ್ರ ಪ್ರಯೋಗಿಸಿ ಕೆಟ್ಟ ಕೆಲಸಕ್ಕೆ ಪ್ರಯೋಗಿಸ ಬೇಡಿ. ಒಂದು ವೇಳೆ ಒಳ್ಳೆಯ ಕೆಲಸಕ್ಕೆ ಪ್ರಯೋಗಿಸಿದರೆ ಫಲಪ್ರದವಾಗುವುದು.
ಆರ್ಥಿಕ ಸಂಕಷ್ಟದಿಂದ ಹೊರಬರಲು ಈ ಒಂದು ವಸ್ತು ಇದ್ದರೆ ಸಾಕು.
ಯಾವುದೇ ರೀತಿಯ ಆರ್ಥಿಕ ಸಂಕಷ್ಟದ ಸಮಸ್ಯೆಯಿಂದ ಹೊರಬರಬೇಕೆಂದರೆ ಮನೆಯಲ್ಲಿಯೇ ಈ ಒಂದು ವಸ್ತುವಿನಿಂದ ಪರಿಹಾರವನ್ನು ಮಾಡಿಕೊಂಡರೆ ಆರ್ಥಿಕ ಸಮಸ್ಯೆಯಿಂದ ಹೊರಬರುವುದಲ್ಲದೆ ಶ್ರೀ ಮಹಾವಿಷ್ಣುವಿನ ಕೃಪೆಗೂ ಸಹ ಪಾತ್ರರಾಗಬಹುದು.
ಪಚ್ಚಕರ್ಪೂರ ಎಂಬುದು ಮಹಾವಿಷ್ಣು ಹಾಗೂ ಶ್ರೀನಿವಾಸ ದೇವರಿಗೆ ಬಹಳ ಪ್ರಿಯವಾದದ್ದು. ಪಚ್ಚ ಕರ್ಪೂರದಿಂದ ಈ ಪರಿಹಾರವನ್ನು ಮಾಡುವುದರಿಂದ ವಿಷ್ಣುವಿನ ಜೊತೆಗೆ ಲಕ್ಷ್ಮಿ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಇದರಿಂದ ನಿಮಗಿರುವ ಯಾವುದೇ ಸಣ್ಣಪುಟ್ಟ ಆರ್ಥಿಕ ಸಮಸ್ಯೆಗಳಿದ್ದರೂ ಅದು ಕೂಡ ಬಗೆಹರಿಯುತ್ತದೆ. ಈ ಪರಿಹಾರವನ್ನು ಬುಧವಾರ ಅಥವಾ ಶುಕ್ರವಾರ ದಿನದಂದು ಮಾಡಬೇಕು.
ಬುಧವಾರ ಅಥವಾ ಶುಕ್ರವಾರ ದಿನ ಆಯ್ಕೆ ಮಾಡಿಕೊಂಡ ನಂತರ ಮೊದಲಿಗೆ ಸ್ನಾನವನ್ನು ಮಾಡಿ ಹಳದಿ ಬಣ್ಣದ ವಸ್ತ್ರ ಅಥವಾ ಬಿಳಿ ಬಣ್ಣದ ವಸ್ತ್ರವನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಬಿಳಿ ಬಣ್ಣದ ವಸ್ತ್ರವನ್ನು ತೆಗೆದುಕೊಂಡರೆ ಅದಕ್ಕೆ ಅರಿಶಿಣವನ್ನು ಸವರಬೇಕು. ತದ ನಂತರ ವಸ್ತ್ರದ ಒಳಗೆ ಪಚ್ಚ ಕರ್ಪೂರವನ್ನು ಹಾಕಿ ಗಂಟನ್ನು ಕಟ್ಟಿ ದೇವರಕೋಣೆಯಲ್ಲಿ ಒಂದು ಹಿತ್ತಾಳೆಯ ತಟ್ಟೆಯ ಮೇಲೆ ಓಂ ಅಥವಾ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಉತ್ತರ ದಿಕ್ಕಿನಲ್ಲಿ ಇಡಬೇಕು. ಪ್ರತಿನಿತ್ಯ ಪೂಜೆ ಮಾಡುವಾಗ ಹಳದಿ ಬಣ್ಣದ ವಸ್ತ್ರಕ್ಕೂ ಧೂಪವನ್ನು ತೋರಿಸಬೇಕು. ಹಾಗೆಯೇ ಪಚ್ಚ ಕರ್ಪೂರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಸಹಾಯವಾಗುತ್ತದೆ.
ಒಂದು ವೇಳೆ ದೇವರಕೋಣೆಯಲ್ಲಿ ಜಾಗವಿಲ್ಲವೆಂದರೆ ಯಾವುದಾದರೂ ಕೋಣೆಯಲ್ಲಿ ಪೀಠದ ರೀತಿ ಮಾಡಿಕೊಂಡು ಅಲ್ಲಿ ಹಳದಿ ವಸ್ತ್ರದ ಪಚ್ಚಕರ್ಪೂರದ ಗಂಟನ್ನು ಇಟ್ಟು ಪ್ರತಿನಿತ್ಯ ಪೂಜೆ ಮಾಡುವಾಗ ಧೂಪವನ್ನು ಹಳದಿ ವಸ್ತ್ರದ ಗಂಟಿಗೆ ತೋರಿಸಬೇಕು. ಇದರಿಂದ ನಿಮಗಿರುವ ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ.
ವ್ಯಾಪಾರ ಮಾಡುವವರು ವ್ಯಾಪಾರ ಮಾಡುವ ಸ್ಥಳದಲ್ಲಿ ಹಳದಿಬಣ್ಣದ ಪಚ್ಚಕರ್ಪೂರದ ಗಂಟನ್ನು ಇಟ್ಟು ಪ್ರತಿನಿತ್ಯ ಪೂಜೆ ಮಾಡುವುದರಿಂದ ವ್ಯಾಪಾರದಲ್ಲಿ ಚಮತ್ಕಾರವನ್ನು ಕಾಣಬಹುದು ಮತ್ತು ಅಧಿಕ ಲಾಭವನ್ನು ಗಳಿಸಬಹುದು.
ಗಂಧವನ್ನು ತೆಗೆದುಕೊಂಡು ಒಂದು ಹಿತ್ತಾಳೆಯ ತಟ್ಟೆಯಲ್ಲಿ ಸ್ವಲ್ಪ ನೀರಿನೊಂದಿಗೆ ಪೇಸ್ಟ್ ಮಾಡಿಕೊಂಡು ನಂತರ ಒಂದೊಂದು ರೂಪಾಯಿಯ 8 ನಾಣ್ಯವನ್ನು ತೆಗೆದುಕೊಂಡು ಅಷ್ಟ ಲಕ್ಷ್ಮಿಯರ ಸಂಕೇತ ಎಂದು ಭಾವಿಸಿಕೊಂಡು 8 ನಾಣ್ಯವನ್ನು ತಟ್ಟೆ ಸುತ್ತ ಜೋಡಿಸಬೇಕು. ತದನಂತರ ಹಿತ್ತಾಳೆ ತಟ್ಟೆಯನ್ನು ದೇವರಕೋಣೆಯಲ್ಲಿ ಇಟ್ಟು ಪ್ರತಿನಿತ್ಯ ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಯ ಅನುಗ್ರಹವು ಪ್ರಾಪ್ತಿಯಾಗಿ ಧನ ಸಂಪತ್ತು, ಐಶ್ವರ್ಯಗಳು ವೃದ್ಧಿಸುತ್ತದೆ.
ನಿತ್ಯ ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಬೇಕೆಂದರೆ ಲಲಿತಾ ದೇವಿಯ ಈ ಮಂತ್ರವನ್ನು ಜಪಿಸಿ.
ನಾವು ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸು ಸಿಗಬೇಕೆಂದರೆ ಮತ್ತು ಅರ್ಧಕ್ಕೆ ನಿಂತುಹೋಗಿರುವ ಕೆಲಸಗಳು ಯಾವುದೇ ವಿಘ್ನಗಳು ಅಥವಾ ಅಡೆತಡೆಯಿಲ್ಲದೆ ಸಂಪೂರ್ಣವಾಗಬೇಕೆಂದರೆ ಲಲಿತಾ ದೇವಿಯ ಈ ಮಂತ್ರವನ್ನು ಜಪಿಸುವುದರಿಂದ ನೀವು ಮಾಡುವಂತಹ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ. ಲಲಿತಾ ದೇವಿಗೆ ಮೂರು ಶುಕ್ರವಾರಗಳು ಕಮಲದ ಹೂವನ್ನು ಅರ್ಪಿಸಿ ಕುಂಕುಮಾರ್ಚನೆ ಮಾಡುವುದು ತುಂಬಾ ಒಳ್ಳೆಯದು ಮತ್ತು ಶ್ರೇಯಸ್ಕರವಾಗಿರುತ್ತದೆ.
ಓಂ ಭಾವನಗಮ್ಮಾಯೇ ನಮಃ ಮೊದಲಿಗೆ ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ನಂತರ ದೇವರ ಕೋಣೆಯನ್ನು ಸ್ವಚ್ಛಮಾಡಿ ತದ ನಂತರ ಅಲಂಕಾರವನ್ನು ಮಾಡಿ ಈ ಮಂತ್ರವನ್ನು ಮೂರು ಶುಕ್ರವಾರ ಗಳು 108 ಬಾರಿ ಜಪಿಸುತ್ತಾ ಲಲಿತಾ ದೇವಿಯ ಚಿತ್ರಪಟಕ್ಕೆ ಅಥವಾ ವಿಗ್ರಹಕ್ಕೆ ಕುಂಕುಮಾರ್ಚನೆ ಅಥವಾ ಪುಷ್ಪಾರ್ಚನೆ ಮಾಡಬೇಕು.
ಒಂದು ವೇಳೆ ಪ್ರತಿದಿನ ಈ ಮಂತ್ರವನ್ನು ಜಪಿಸಿ ಪೂಜೆ ಮಾಡಿದರೆ ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭವನ್ನು ಗಳಿಸಬಹುದು. ಯಾವ ವ್ಯಕ್ತಿಯು ಪ್ರತಿನಿತ್ಯ ಈ ಪೂಜೆಯನ್ನು ಮಾಡಿ ಮಂತ್ರವನ್ನು ಜಪಿಸಿ ಹೊರಗೆ ಹೋಗುತ್ತಾನೋ ಅವನಿಗೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಅಖಂಡ ಯಶಸ್ಸು ದೊರೆಯುತ್ತದೆ. ಒಂದು ವೇಳೆ ಪ್ರತಿನಿತ್ಯ 108 ಬಾರಿ ಜಪಿಸಲು ಸಾಧ್ಯವಾಗದಿದ್ದರೆ ಕನಿಷ್ಠ 21 ಬಾರಿ ಜಪಿಸುವುದು ಒಳ್ಳೆಯದು.
ಒಂದು ವೇಳೆ ಯಾರಿಗಾದರೂ ಮನಸ್ಸಿನಲ್ಲಿ ನೆಮ್ಮದಿ, ಮನೆಯಲ್ಲಿ ಸಂತೋಷವಿಲ್ಲವೆಂದರೆ ಅವರು ಲಲಿತ ದೇವಿಗೆ ಶರಣಾಗಿ ಈ ಮಂತ್ರವನ್ನು 21 ಬಾರಿ ಜಪಿಸಿ ತದನಂತರ ರಾತ್ರಿ ಮಲಗುವುದರಿಂದ ಸಕಲ ಸಂಕಷ್ಟಗಳು ಕೂಡ ನಿವಾರಣೆಯಾಗುವುದರಲ್ಲಿ ಸಂಶಯವಿಲ್ಲ.
ಪ್ರೇಮಿಗಳು 18 ಶುಕ್ರವಾರಗಳ ಕಾಲ ಈ ಮಂತ್ರವನ್ನು 108 ಬಾರಿ ಜಪಿಸಬೇಕು. 18 ಶುಕ್ರವಾರಗಳು ಮುಗಿದ ಮೇಲೆ ಲಲಿತಾ ದೇವಿಯ ಸನ್ನಿಧಿಗೆ ಹೋಗಿ ಪ್ರದಕ್ಷಿಣೆ ಹಾಕಿ ಅಲ್ಲಿ ಕೊಡುವ ಪ್ರಸಾದವನ್ನು ಮನೆಗೆ ತಂದು ತಾವು ಸೇವಿಸಿ ಕುಟುಂಬದ ಸದಸ್ಯರಿಗೂ ಕೊಡುವುದರಿಂದ ಪ್ರೀತಿಯ ವಿಚಾರದಲ್ಲಿ ಕೆಲಸವು ಸಲೀಸಾಗಿ ಆಗುತ್ತದೆ.ರಾಜಕೀಯ ಕ್ಷೇತ್ರದಲ್ಲಿರುವವರು ವಾರದಲ್ಲಿ ಒಂದು ದಿನ ಲಲಿತಾ ದೇವಿಗೆ ಕಮಲದ ಹೂವಿನಿಂದ ಪೂಜೆ ಮಾಡಿಸುವುದರಿಂದ ರಾಜಕೀಯದಲ್ಲಿ ಅವರಿಗೆ ಏಳಿಗೆಯು ಆಗುತ್ತದೆ. ಲಲಿತಾ ದೇವಿಗೆ ಶ್ರದ್ಧೆಯಿಂದ, ಭಕ್ತಿಯಿಂದ ನಂಬಿಕೆ ಇಟ್ಟು ಪೂಜೆ ಮಾಡಿದರೆ ಎಲ್ಲಾ ಸಂಕಷ್ಟಗಳನ್ನು ತಾಯಿಯು ದೂರ ಮಾಡುತ್ತಾರೆ.
ಮನೆಯಲ್ಲಿ ಲಕ್ಷ್ಮೀದೇವಿ ಸ್ಥಿರವಾಗಿ ವಾಸಿಸಬೇಕೆಂದರೆ ಈ ರೀತಿ ಮಾಡಿ.
ಮನೆಯಲ್ಲಿ ಲಕ್ಷ್ಮೀದೇವಿ ಸ್ಥಿರವಾಗಿ ವಾಸಿಸ ಬೇಕೆಂದರೆ ಮನೆಯಲ್ಲಿ ವಾಸ್ತು ದೋಷ, ಜಾತಕದಲ್ಲಿ ದೋಷ, ಸೂರ್ಯ ಗ್ರಹ, ಶುಕ್ರ ಗ್ರಹ, ಕುಜ ಗ್ರಹ, ಕೇತು, ಶನಿ ಪ್ರಭಾವ ಬಲಹೀನ ವಾಗಿದ್ದು ಮತ್ತು ಆರ್ಥಿಕ ಸಮಸ್ಯೆ ಇದ್ದರೆ ಮನಸ್ಸಿಗೆ ಶಾಂತಿ ಇರುವುದಿಲ್ಲ. ಈ ಪರಿಹಾರವನ್ನು ಮಾಡುವುದರಿಂದ ಅನವಶ್ಯಕ ಖರ್ಚುಗಳು ಕಡಿಮೆಯಾಗಿ ಧನ ಲಾಭವಾಗುತ್ತದೆ ಮತ್ತು ಲಕ್ಷ್ಮೀದೇವಿಯ ಸ್ಥಿರವಾಗಿ ವಾಸಿಸುತ್ತಾಳೆ.
ಈ ಪರಿಹಾರವನ್ನು ಮಂಗಳವಾರ ಹಾಗೂ ಭಾನುವಾರ ದಿನದಂದು ಮಾಡಬೇಕು. ಈ ಪರಿಹಾರವನ್ನು ಮಂಗಳವಾರ ಹಾಗೂ ಭಾನುವಾರ ಸಂಜೆ 5 ಗಂಟೆಯಿಂದ 6 ಗಂಟೆಯ ಒಳಗೆ ಮಾಡಬೇಕು. ಈ ಉಪಾಯವನ್ನು 7 ಮಂಗಳವಾರ ಅಥವಾ 7 ಭಾನುವಾರ ಮಾಡಬೇಕು.
ಮೊದಲಿಗೆ ಒಂದು ಹಿತ್ತಾಳೆಯ ತಟ್ಟೆಯ ಒಳಗೆ ಕಲ್ಲುಪ್ಪನ್ನು ಹಾಕಬೇಕು, ತದನಂತರ ಅದರ ಮೇಲೆ ಒಂದು ಮಣ್ಣಿನ ದೀಪವನ್ನು ಇಡಬೇಕು. ಮಣ್ಣಿನ ದೀಪಕ್ಕೆ ಸಣ್ಣದಾಗಿ ಹೆಚ್ಚಿದ 7 ಪೀಸ್ ಬೆಲ್ಲವನ್ನು , 7 ಲವಂಗವನ್ನು , 7 ಕರಿಮೆಣಸಿನ ಕಾಳು ಮತ್ತು 7 ಕರ್ಪೂರ ಹಾಕಬೇಕು. ತದ ನಂತರ ಮಣ್ಣಿನ ದೀಪಕ್ಕೆ 7 ಬಾರಿ ಸ್ವಲ್ಪ-ಸ್ವಲ್ಪ ಹಸುವಿನ ತುಪ್ಪವನ್ನು ಹಾಕಬೇಕು.
ಹಸುವಿನ ತುಪ್ಪವನ್ನು ದೀಪಕ್ಕೆ ಹಾಕಿದ ನಂತರ ಇಷ್ಟ ದೇವತೆಯನ್ನು ಅಥವಾ ಕುಲದೇವರನ್ನು ಸ್ಮರಣೆ ಮಾಡಿಕೊಂಡು ಮತ್ತು ಕೋರಿಕೆಗಳು ಅಥವಾ ಸಮಸ್ಯೆಗಳು ಇದ್ದರೆ ಹೇಳಿಕೊಂಡು ದೀಪವನ್ನು ಹಚ್ಚಬೇಕು. ಈ ಕೆಲಸವನ್ನು ಮನೆಯ ಮುಖ್ಯದ್ವಾರದ ಬಳಿ ಮಾಡಬೇಕು ಹಾಗೂ ಸ್ತ್ರೀಯರು ಮುಟ್ಟಾದ ಸಮಯದಲ್ಲಿ ಈ ಉಪಾಯವನ್ನು ಮಾಡಬಾರದು.
ದೀಪವು ಸಂಪೂರ್ಣವಾಗಿ ಉರಿದ ನಂತರ ಒಂದು ಕವರಿನ ಒಳಗೆ ಕಲ್ಲುಪ್ಪನ್ನು ಹಾಕಿಕೊಂಡು ಹಾಗೂ ದೀಪ ಉರಿದ ನಂತರ ದೀಪದ ಒಳಗಿರುವ ಬೂದಿಯನ್ನು ಹಾಕಿಕೊಂಡು ಯಾರು ಓಡಾಡದೆ ಇರುವ ನಿರ್ಜನವಾದ ಪ್ರದೇಶದಲ್ಲಿ ಯಾರೂ ತುಳಿಯದ ಹಾಗೆ ಅದನ್ನು ಎಸೆದು ಬರಬೇಕು. ಒಂದು ವೇಳೆ ನಿರ್ಜನವಾದ ಪ್ರದೇಶ ಇಲ್ಲದಿದ್ದರೆ ಹರಿಯುವ ನೀರಿನಲ್ಲಿ ಬಿಟ್ಟು ಬರಬಹುದು.
ಈ ರೀತಿಯಾಗಿ ಮಾಡುವುದರಿಂದ ಲಕ್ಷ್ಮೀದೇವಿ ಸ್ಥಿರವಾಗಿ ಮನೆಯಲ್ಲಿ ನೆಲೆಸುತ್ತಾಳೆ ಹಾಗೂ ಮನೆಯಲ್ಲಿ ಶಾಂತಿಯ ವಾತಾವರಣ ಮೂಡುತ್ತದೆ ಹಾಗೂ ಕಷ್ಟಗಳೆಲ್ಲ ನಿವಾರಣೆಯಾಗಿ ಧನ ಸಂಪತ್ತು ಪ್ರಾಪ್ತಿಯಾಗಿ ಸುಖಕರವಾದ ಜೀವನವನ್ನು ನಡೆಸುವಂತೆ ಆಗುತ್ತದೆ.
ಮನೆಯಲ್ಲಿ ಲಕ್ಷ್ಮೀದೇವಿ ಸ್ಥಿರವಾಗಿ ವಾಸಿಸಬೇಕೆಂದರೆ ಈ ರೀತಿ ಮಾಡಿ.
ಮನೆಯಲ್ಲಿ ಲಕ್ಷ್ಮೀದೇವಿ ಸ್ಥಿರವಾಗಿ ವಾಸಿಸ ಬೇಕೆಂದರೆ ಮನೆಯಲ್ಲಿ ವಾಸ್ತು ದೋಷ, ಜಾತಕದಲ್ಲಿ ದೋಷ, ಸೂರ್ಯ ಗ್ರಹ, ಶುಕ್ರ ಗ್ರಹ, ಕುಜ ಗ್ರಹ, ಕೇತು, ಶನಿ ಪ್ರಭಾವ ಬಲಹೀನ ವಾಗಿದ್ದು ಮತ್ತು ಆರ್ಥಿಕ ಸಮಸ್ಯೆ ಇದ್ದರೆ ಮನಸ್ಸಿಗೆ ಶಾಂತಿ ಇರುವುದಿಲ್ಲ. ಈ ಪರಿಹಾರವನ್ನು ಮಾಡುವುದರಿಂದ ಅನವಶ್ಯಕ ಖರ್ಚುಗಳು ಕಡಿಮೆಯಾಗಿ ಧನ ಲಾಭವಾಗುತ್ತದೆ ಮತ್ತು ಲಕ್ಷ್ಮೀದೇವಿಯ ಸ್ಥಿರವಾಗಿ ವಾಸಿಸುತ್ತಾಳೆ.
ಈ ಪರಿಹಾರವನ್ನು ಮಂಗಳವಾರ ಹಾಗೂ ಭಾನುವಾರ ದಿನದಂದು ಮಾಡಬೇಕು. ಈ ಪರಿಹಾರವನ್ನು ಮಂಗಳವಾರ ಹಾಗೂ ಭಾನುವಾರ ಸಂಜೆ 5 ಗಂಟೆಯಿಂದ 6 ಗಂಟೆಯ ಒಳಗೆ ಮಾಡಬೇಕು. ಈ ಉಪಾಯವನ್ನು 7 ಮಂಗಳವಾರ ಅಥವಾ 7 ಭಾನುವಾರ ಮಾಡಬೇಕು.
ಮೊದಲಿಗೆ ಒಂದು ಹಿತ್ತಾಳೆಯ ತಟ್ಟೆಯ ಒಳಗೆ ಕಲ್ಲುಪ್ಪನ್ನು ಹಾಕಬೇಕು, ತದನಂತರ ಅದರ ಮೇಲೆ ಒಂದು ಮಣ್ಣಿನ ದೀಪವನ್ನು ಇಡಬೇಕು. ಮಣ್ಣಿನ ದೀಪಕ್ಕೆ ಸಣ್ಣದಾಗಿ ಹೆಚ್ಚಿದ 7 ಪೀಸ್ ಬೆಲ್ಲವನ್ನು , 7 ಲವಂಗವನ್ನು , 7 ಕರಿಮೆಣಸಿನ ಕಾಳು ಮತ್ತು 7 ಕರ್ಪೂರ ಹಾಕಬೇಕು. ತದ ನಂತರ ಮಣ್ಣಿನ ದೀಪಕ್ಕೆ 7 ಬಾರಿ ಸ್ವಲ್ಪ-ಸ್ವಲ್ಪ ಹಸುವಿನ ತುಪ್ಪವನ್ನು ಹಾಕಬೇಕು.
ಹಸುವಿನ ತುಪ್ಪವನ್ನು ದೀಪಕ್ಕೆ ಹಾಕಿದ ನಂತರ ಇಷ್ಟ ದೇವತೆಯನ್ನು ಅಥವಾ ಕುಲದೇವರನ್ನು ಸ್ಮರಣೆ ಮಾಡಿಕೊಂಡು ಮತ್ತು ಕೋರಿಕೆಗಳು ಅಥವಾ ಸಮಸ್ಯೆಗಳು ಇದ್ದರೆ ಹೇಳಿಕೊಂಡು ದೀಪವನ್ನು ಹಚ್ಚಬೇಕು. ಈ ಕೆಲಸವನ್ನು ಮನೆಯ ಮುಖ್ಯದ್ವಾರದ ಬಳಿ ಮಾಡಬೇಕು ಹಾಗೂ ಸ್ತ್ರೀಯರು ಮುಟ್ಟಾದ ಸಮಯದಲ್ಲಿ ಈ ಉಪಾಯವನ್ನು ಮಾಡಬಾರದು.
ದೀಪವು ಸಂಪೂರ್ಣವಾಗಿ ಉರಿದ ನಂತರ ಒಂದು ಕವರಿನ ಒಳಗೆ ಕಲ್ಲುಪ್ಪನ್ನು ಹಾಕಿಕೊಂಡು ಹಾಗೂ ದೀಪ ಉರಿದ ನಂತರ ದೀಪದ ಒಳಗಿರುವ ಬೂದಿಯನ್ನು ಹಾಕಿಕೊಂಡು ಯಾರು ಓಡಾಡದೆ ಇರುವ ನಿರ್ಜನವಾದ ಪ್ರದೇಶದಲ್ಲಿ ಯಾರೂ ತುಳಿಯದ ಹಾಗೆ ಅದನ್ನು ಎಸೆದು ಬರಬೇಕು. ಒಂದು ವೇಳೆ ನಿರ್ಜನವಾದ ಪ್ರದೇಶ ಇಲ್ಲದಿದ್ದರೆ ಹರಿಯುವ ನೀರಿನಲ್ಲಿ ಬಿಟ್ಟು ಬರಬಹುದು.
ಈ ರೀತಿಯಾಗಿ ಮಾಡುವುದರಿಂದ ಲಕ್ಷ್ಮೀದೇವಿ ಸ್ಥಿರವಾಗಿ ಮನೆಯಲ್ಲಿ ನೆಲೆಸುತ್ತಾಳೆ ಹಾಗೂ ಮನೆಯಲ್ಲಿ ಶಾಂತಿಯ ವಾತಾವರಣ ಮೂಡುತ್ತದೆ ಹಾಗೂ ಕಷ್ಟಗಳೆಲ್ಲ ನಿವಾರಣೆಯಾಗಿ ಧನ ಸಂಪತ್ತು ಪ್ರಾಪ್ತಿಯಾಗಿ ಸುಖಕರವಾದ ಜೀವನವನ್ನು ನಡೆಸುವಂತೆ ಆಗುತ್ತದೆ.
ಯಾವ ರೀತಿ ಪೂಜೆಯನ್ನು ಮಾಡಿದರೆ ಲಲಿತಾದೇವಿಯು ಪ್ರಾಪ್ತಿಯಾಗುತ್ತಾರೆ ತಿಳಿದಿದೆಯೇ ನಿಮಗೆ ?
ಲಲಿತಾ ದೇವಿಯನ್ನು ಒಲಿಸಿಕೊಳ್ಳಬೇಕು ಎಂದರೆ ಪೂಜೆ ಮಾಡಬೇಕಾದರೆ ಈ ಮಂತ್ರವನ್ನು ಪಠಿಸುವುದರಿಂದ ಲಲಿತಾ ದೇವಿಯು ಬಹಳ ಬೇಗ ಒಲಿಯುತ್ತಾಳೆ ಹಾಗೂ ಬಂಗಾರದ ಯೋಗವನ್ನು ಕರುಣಿಸುತ್ತಾಳೆ.ಒಂದು ವೇಳೆ ಯಾವುದೇ ಕೆಲಸ ಮಾಡಿದರೂ ಯಶಸ್ಸು ದೊರೆಯುತ್ತಿಲ್ಲ ಹಾಗೂ ಜೀವನದಲ್ಲಿ ಬರೀ ಅಶುಭ ಫಲವೇ ದೊರೆಯುತ್ತಿದೆ ಎಂಬುವವರು ಈ ಲಲಿತಾ ದೇವಿಯನ್ನು ಪೂಜಿಸುವುದರಿಂದ ಸಕಲ ಸಂಕಷ್ಟಗಳೂ ನಿವಾರಣೆಯಾಗುತ್ತದೆ.
ಸಾಮಾನ್ಯವಾಗಿ ಪ್ರತಿನಿತ್ಯ ಪೂಜೆ ಮಾಡುವ ಹಾಗೆ ದೇವರಕೋಣೆಯಲ್ಲಿ ಲಲಿತ ದೇವಿಯ ವಿಗ್ರಹ ಅಥವಾ ಚಿತ್ರಪಟವನ್ನು ಇಟ್ಟು ಭಕ್ತಿಯಿಂದ ಅದಕ್ಕೆ ಕುಂಕುಮಾರ್ಚನೆ ಅಥವಾ ಪುಷ್ಪಾರ್ಚನೆ ಮಾಡಬೇಕು. ಈ ಪೂಜೆಯನ್ನು ಬಹಳ ಶ್ರದ್ಧೆಯಿಂದ ಭಕ್ತಿಯಿಂದ 41 ದಿನಗಳ ಕಾಲ ಮಡಿಯಿಂದ ಮಾಡುವ ಪೂಜೆಯಾಗಿದೆ.
ಅಮ್ಮನವರಿಗೆ ಪ್ರಿಯವಾದಂತ ದಿನವಾದ ಶುಕ್ರವಾರದಂದು ಈ ಪೂಜೆಯನ್ನು ಶುರುಮಾಡಬೇಕು. ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಇನ್ನು ವಿವಾಹವಾಗಿಲ್ಲವೆಂದರೆ ಅಥವಾ ವಿವಾಹದಲ್ಲಿ ವಿಳಂಬವಾಗುತ್ತಿದ್ದರೆ ಲಲಿತಾ ದೇವಿಗೆ ನೈವೇದ್ಯವನ್ನು ಇಟ್ಟು ಪೂಜೆಯನ್ನು ಮಾಡಿ ನಂತರ ನೈವೇದ್ಯವನ್ನು ತಾವು ಸೇವಿಸಿ ಮತ್ತು ಕುಟುಂಬದವರಿಗೂ ಕೊಡಬೇಕು. ಇದರಿಂದ ವಿವಾಹದ ಅಡೆತಡೆಗಳೆಲ್ಲ ದೂರವಾಗಿ ಕಂಕಣಭಾಗ್ಯ ಕೂಡಿ ಬರಲಿದೆ.
ಓಂ ಭದ್ರ ಪ್ರಿಯಾಯೇ ನಮಃ ಈ ಮೇಲಿನ ಮಂತ್ರವನ್ನು 108 ಬಾರಿ 41 ದಿನಗಳ ಕಾಲ ಲಲಿತಾ ದೇವಿಯ ಪೂಜೆಯನ್ನು ಮಾಡುವಾಗ ಜಪಿಸುವುದರಿಂದ ಲಲಿತದೇವಿಯು ನೀವು ಮಾಡಿದ ಪೂಜೆಗೆ ಸಂತುಷ್ಟರಾಗುತ್ತಾರೆ ಹಾಗೂ ಬಂಗಾರದ ಯೋಗವನ್ನು ಕರುಣಿಸುತ್ತಾರೆ ಮತ್ತು ಸಂಕಷ್ಟಗಳನ್ನು ನಿವಾರಿಸುತ್ತಾರೆ.
ದ್ವಾದಶ ರಾಶಿಗಳಲ್ಲಿ ಶನಿ ದೋಷವಿದ್ದರೆ ಏನು ಮಾಡಬೇಕು ತಿಳಿದಿದೆಯೇ ನಿಮಗೆ ?
ಸಾಮಾನ್ಯವಾಗಿ ಪ್ರತಿಯೊಬ್ಬರ ರಾಶಿಯಲ್ಲಿ ಶನಿದೋಷ ಎಂಬುದು ಇದ್ದೇ ಇರುತ್ತದೆ. 12 ರಾಶಿಗಳಿಗೆ ಒಂದಲ್ಲ ಒಂದು ಸಮಯದಲ್ಲಿ ಶನಿಯ ದೋಷವು ಬಂದೇ ಬರುತ್ತದೆ. ಶನಿ ದೋಷವಿದ್ದರೆ ಕೆಲವೊಂದು ಸಲ ಯಾವುದೇ ಕೆಲಸ ಮಾಡಿದರು ಅದು ಸಂಪೂರ್ಣವಾಗುವುದಿಲ್ಲ ಅಥವಾ ನಷ್ಟದಾಯಕವಾಗಿರುತ್ತದೆ. ಹಾಗಾದರೆ ಶನಿ ದೋಷಕ್ಕೆ ಪರಿಹಾರ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮೇಷ ರಾಶಿ..ಮೇಷ ರಾಶಿಯವರು ಶನಿದೋಷದಿಂದ ಮುಕ್ತರಾಗಬೇಕೆಂದರೆ ಶನಿವಾರದ ದಿನದಂದು ದೇವಸ್ಥಾನದಲ್ಲಿರುವ ನವಗ್ರಹ ಮಂಟಪಕ್ಕೆ ಹೋಗಿ 27 ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು. ಇದರಿಂದ ಶನಿ ದೋಷವು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.
ವೃಷಭ ರಾಶಿ..ವೃಷಭ ರಾಶಿಯವರು ಶನಿವಾರದ ದಿನದಂದು ಬನ್ನಿ ಮರದ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಉಪ್ಪನ್ನು ಸವರಿ ನವಗ್ರಹದಲ್ಲಿರುವ ಶನಿ ದೇವರ ಮುಂದೆ ಇಟ್ಟು 9 ಬಾರಿ ಪ್ರದಕ್ಷಿಣೆಯನ್ನು ಹಾಕುವುದರಿಂದ ಒಳ್ಳೆಯದಾಗುತ್ತದೆ.
ಮಿಥುನ ರಾಶಿ..ಶನಿವಾರದಂದು ಕಪ್ಪು ಎಳ್ಳನ್ನು ಶನಿದೇವರ ಮುಂದೆ ಇಡಬೇಕು. ಒಂದು ವೇಳೆ ಸಾಧ್ಯವಾದರೆ ಶನಿವಾರದ ದಿನದೊಂದು ಎಲ್ಲೆಣ್ಣೆ ಇಂದ ಶನಿ ದೇವರ ವಿಗ್ರಹಕ್ಕೆ ಸವಾರಿ ಬರುವುದರಿಂದ ತುಂಬಾ ಒಳ್ಳೆಯದು.
ಕಟಕ ರಾಶಿ..ಶಿವನಿಗೆ ಅಭಿಷೇಕವನ್ನು ಮಾಡುವಾಗ ಹಾಲಿಗೆ ಸ್ವಲ್ಪ ಕಪ್ಪು ಎಳ್ಳನ್ನು ಮಿಶ್ರಣ ಮಾಡಿ ನಂತರ ಅಭಿಷೇಕ ಮಾಡುವುದು ತುಂಬಾ ಒಳ್ಳೆಯದು.
ಸಿಂಹ ರಾಶಿ..ಈ ರಾಶಿಯವರು ಶನಿವಾರದ ದಿನದಂದು ಕೆಂಪು ದಾಸವಾಳದ ಹೂವನ್ನು ತೆಗೆದುಕೊಂಡು ಆಂಜನೇಯಸ್ವಾಮಿಗೆ ಅರ್ಪಿಸಿದರೆ ತುಂಬಾ ಒಳ್ಳೆಯದು.
ಕನ್ಯಾ ರಾಶಿ..ಈ ರಾಶಿಯವರು ಶನಿವಾರದ ದಿನದೊಂದು ವೆಂಕಟೇಶ್ವರ ಸ್ವಾಮಿಗೆ ತುಳಸಿ ದಳವನ್ನು ಅರ್ಪಿಸಿದರೆ ತುಂಬಾ ಒಳ್ಳೆಯದು.
ತುಲಾ ರಾಶಿ..ಎಲ್ಲೆಣ್ಣೆ ಇಂದ 8 ಬತ್ತಿಯನ್ನು ಹಾಕಿ ಮನೆಯ ಹಜಾರದಲ್ಲಿ ಅಥವಾ ಹಾಲಿನಲ್ಲಿ ದೀಪವನ್ನು ಹಚ್ಚುವುದರಿಂದ ಈ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ.
ವೃಶ್ಚಿಕ ರಾಶ..ಈ ರಾಶಿಯವರು ಸಿಂಧೂರ ಮತ್ತು ಎಲ್ಲೆಣ್ಣೆ ಮಿಶ್ರಣ ಮಾಡಿ ಆಂಜನೇಯಸ್ವಾಮಿಗೆ ಲೇಪಿಸಿ ನಂತರ ಅದನ್ನು ಹಣೆಗೆ ಇಟ್ಟುಕೊಂಡರೆ ತುಂಬಾ ಒಳ್ಳೆಯದು.
ಧನಸ್ಸು ರಾಶಿ..ಅರಳಿ ಮರಕ್ಕೆ 8 ಪ್ರದಕ್ಷಿಣೆಯನ್ನು ಹಾಕಿಕೊಂಡು ಬಂದರೆ ಈ ರಾಶಿಯವರಿಗೆ ತುಂಬಾ ಒಳ್ಳೆಯದಾಗುತ್ತದೆ.
ಮಕರ ರಾಶಿ..ಶನಿವಾರದ ದಿನದಂದು ಬನ್ನಿ ಮರದ ಕೆಳಗೆ ಕಪ್ಪುಗಾಜಿನ ಬಳೆಯಿಟ್ಟು 8 ಪ್ರದಕ್ಷಿಣೆಯನ್ನು ಹಾಕಿದರೆ ತುಂಬಾ ಒಳ್ಳೆಯದು.
ಕುಂಭ ರಾಶಿ..ಕುಂಭರಾಶಿಯವರು ಬನ್ನಿಮರಕ್ಕೆ 8 ಬತ್ತಿಯ ದೀಪವನ್ನು ಹಚ್ಚಿ 8 ಪ್ರದಕ್ಷಿಣೆಯನ್ನು ಹಾಕಬೇಕು. ಶಿವನಿಗೆ ಹಾಲು ಮತ್ತು ಎಳ್ಳನ್ನು ಮಿಶ್ರಣ ಮಾಡಿ ಅಭಿಷೇಕ ಮಾಡುವುದು ತುಂಬಾ ಒಳ್ಳೆಯದು.
ಮೀನ ರಾಶಿ..ಶನಿವಾರ ದಿನದಂದು ಶಿವನಿಗೆ ಹಾಲು ಮತ್ತು ಎಳ್ಳನ್ನು ಮಿಶ್ರಣ ಮಾಡಿ ಅಭಿಷೇಕ ಮಾಡುವುದು ತುಂಬಾ ಒಳ್ಳೆಯದು.
ಪ್ರತಿ ಶನಿವಾರ ಮೇಲೆ ಹೇಳಿರುವ ರಾಶಿಯವರು ನಿಯಮವನ್ನು ಪಾಲಿಸಿದರೆ ಎಲ್ಲಾ ದೋಷ ನಿವಾರಣೆಯಾಗಿ ಸುಖಕರವಾಗಿ ಜೀವನವನ್ನು ನಡೆಸಬಹುದು.