ಈ ಹಸು ಮಾಡಿರುವ ಕೆಲಸವನ್ನು ನೋಡಿ ಬೆಚ್ಚಿಬಿದ್ದಿರುವ ಊರಿನ ಜನ 

ಜ್ಯೋತಿಷ್ಯ

ತಮಿಳುನಾಡಿನ ತಾವರೆಪುರಂ ಎಂಬ ಒಂದು ಹಳ್ಳಿಯಲ್ಲಿ ಕಂದಸ್ವಾಮಿ ಎಂಬ ಒಬ್ಬ ರೈತನಿರುತ್ತಾನೆ, ಈತನು ಹಲವು ವರ್ಷಗಳಿಂದ ಒಂದು ಹಸುವನ್ನು ಪ್ರೀತಿಯಿಂದ ಸಾಕುತ್ತಿದ್ದನು. ಈ ಹಸು ಪ್ರತಿನಿತ್ಯ ಮುಂಜಾನೆ ಹಾಗೂ ಸಾಯಂಕಾಲ 5 ಲೀಟರ್ ಹಾಲನ್ನು ನೀಡುತ್ತಿತ್ತು. ಹಸುವಿನಿಂದ ಬಂದ ಹಾಲನ್ನು ಹಾಲಿನ ಡೈರಿಗೆ ಹಾಕಿ ಅದರಿಂದ ಬರುವ ಹಣದಿಂದ ತನ್ನ ಜೀವನವನ್ನು ನಡೆಸುತ್ತಿದ್ದನು. ಈ ಹಸು ಕೂಡ ಕಂದ ಸ್ವಾಮಿಯನ್ನು ಬಹಳ ಹಚ್ಚಿಕೊಂಡಿತ್ತು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಹೀಗಿರುವಾಗ ಒಂದು ದಿನ ಕಂದಸ್ವಾಮಿ ಯಾವುದೋ ಒಂದು ಕೆಲಸದ ನಿಮಿತ್ತ ಪಕ್ಕದ ಹಳ್ಳಿಗೆ ಹೋಗಿದ್ದನು, ಈ ರೀತಿ ಹೋಗಬೇಕಾದರೆ ಎರಡು ದಿನದಲ್ಲಿ ಮತ್ತೆ ಹಿಂದಿರುಗಿ ಮನೆಗೆ ಬರುತ್ತೇನೆ ಎಂದು ಅಂದುಕೊಂಡಿದ್ದನು, ಆದರೆ ಅಲ್ಲಿ ಕೆಲಸವನ್ನು ಮುಗಿಸಿ ಬರಲು ಐದು ದಿನ ತಡವಾಗುತ್ತದೆ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಹಸು ಆಹಾರವನ್ನು ತಿನ್ನದೆ, ನೀರನ್ನು ಸಹ ಕುಡಿಯದೆ ಹಾಗೆ ಇತ್ತು.

ಈ ವಿಷಯನ್ನು ಕಂದ ಸ್ವಾಮಿಯ ಮಕ್ಕಳು ಕಂದಸ್ವಾಮಿಗೆ ತಿಳಿಸಿದಾಗ ಕಂದಸ್ವಾಮಿ ತಮ್ಮ ಮಕ್ಕಳಿಗೆ ಹಸುವನ್ನು ಚೆನ್ನಾಗಿ ನೋಡಿಕೊಳ್ಳಿ ಕೆಲಸ ಮುಗಿದ ತಕ್ಷಣ ಬೇಗ ಬರುವುದಾಗಿ ತಿಳಿಸುತ್ತಾನೆ. ಆದರೆ ಈ ಸಮಯದಲ್ಲಿ ಹಸುವಿನ ಆರೋಗ್ಯ ತುಂಬಾ ಹದಗೆಡಲು ಪ್ರಾರಂಭವಾಯಿತು. ಆಗ ಕಂದ ಸ್ವಾಮಿಯ ಮಕ್ಕಳು ಪಶುವೈದ್ಯರನ್ನು ಮನೆಗೆ ಕರೆಸಿ ಹಸುವನ್ನು ತೋರಿಸುತ್ತಾರೆ. ಆಗ ವೈದ್ಯರು ಒಂದು ಚುಚ್ಚುಮದ್ದನ್ನು ನೀಡಿ ತೆರಳುತ್ತಾರೆ, ಆದರೆ ಮಾರನೆಯ ದಿನವೂ ಕೂಡ ಹಸು ಸುಸ್ತಾಗಿ ಮಲಗಿತ್ತು, ಇದನ್ನು ಕಂಡ ಕಂದ ಸ್ವಾಮಿಯ ಮಕ್ಕಳು ಮತ್ತೆ ಪಶುವೈದ್ಯರನ್ನು ಕರೆತಂದರು.

ಪಶುವೈದ್ಯರು ಹಸುವನ್ನು ನೋಡಿ ಒಂದು ಗ್ಲುಕೋಸ್ ಹಾಕಿದರು, ತದನಂತರ ಕೂಡ ಹಸು ಏಳದೇ ಇದ್ದ ಕಾರಣ ವೈದ್ಯರು ಕಂದ ಸ್ವಾಮಿಯ ಮಕ್ಕಳಿಗೆ ಹಸುವು ಇನ್ನು ಮುಂದೆ ಏಳುವುದಿಲ್ಲ ಯಾವುದಾದರೂ ಒಂದು ಕಸಾಯಿಖಾನೆಗೆ ಹಾಕಿಬಿಡಿ ಎಂದು ಹೇಳುತ್ತಾರೆ.

ಕಂದಸ್ವಾಮಿ ಮಕ್ಕಳು ಈ ವಿಷಯವನ್ನು ಕಂದ ಸ್ವಾಮಿಗೆ ತಿಳಿಸಿದ ತಕ್ಷಣ ಕೆಲಸವನ್ನು ಬಿಟ್ಟು ಮನೆಗೆ ಓಡಿ ಬರುತ್ತಾನೆ, ಕಂದಸ್ವಾಮಿ ಮನೆಗೆ ಬರುವುದನ್ನು ದೂರದಿಂದಲೇ ನೋಡಿದ ಹಸುವು ತಕ್ಷಣವೇ ಎದ್ದು ನಿಲ್ಲುತ್ತದೆ. ಇದನ್ನು ನೋಡಿದ ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಆಶ್ಚರ್ಯದ ಜೊತೆಗೆ ಸಂತೋಷವೂ ಆಗುತ್ತದೆ. ಇದಾದ ನಂತರ ಕಂದಸ್ವಾಮಿ ಹಸುವಿನ ಬಳಿ ಬಂದು ಹಸುವನ್ನು ಅಪ್ಪಿಕೊಳ್ಳುತ್ತಾನೆ.

ಕಂದಸ್ವಾಮಿ ಮನೆಗೆ ಬಂದ ನಂತರ ಮೂರು ದಿನದಲ್ಲಿ ಹಸು ಚೇತರಿಸಿಕೊಂಡು ಮೊದಲಿನಂತೆ ಆಗುತ್ತದೆ. ಅದಕ್ಕೆ ಹೇಳುವುದು ಪ್ರಾಣಿಗಳಿಗೆ ಮನುಷ್ಯನಿಗಿಂತ ನಿಯತ್ತು ಜಾಸ್ತಿ ಎಂದು.