ಮನೆಯ ಮುಖ್ಯದ್ವಾರದ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ.

ಜ್ಯೋತಿಷ್ಯ

ಮನೆಯಲ್ಲಿರುವ ಮುಖ್ಯದ್ವಾರವು ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಮನೆಯ ಮುಖ್ಯದ್ವಾರವು ಎಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದರೆ ಮನೆಗೆ ಯಾರಾದರೂ ಬರಬೇಕಾದರೆ ಈ ಪ್ರವೇಶದ್ವಾರದಲ್ಲೇ ಬರಬೇಕು ಹಾಗೂ ದೇವಾನುದೇವತೆಗಳು ಪ್ರವೇಶವನ್ನು ಮಾಡಬೇಕಾದರೂ ಮುಖ್ಯದ್ವಾರದಿಂದ ಪ್ರವೇಶವನ್ನು ಪಡೆದುಕೊಳ್ಳುತ್ತಾರೆ. ಇಷ್ಟೇ ಅಲ್ಲದೆ ವಾಸ್ತು ಶಾಸ್ತ್ರಗಳ ಪ್ರಕಾರ ಮನೆಯ ಮುಖ್ಯದ್ವಾರ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಾಗಾದರೆ ಮನೆ ಮುಖ್ಯದ್ವಾರದ ಬಳಿ ಯಾವ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮನೆಯ ಮುಖ್ಯದ್ವಾರವನ್ನು ಎಷ್ಟು ಸ್ವಚ್ಛವಾಗಿ ಇಡುತ್ತಿರೋ ಅಷ್ಟು ಒಳ್ಳೆಯದು. ಏಕೆಂದರೆ ಲಕ್ಷ್ಮೀ ದೇವತೆಗೆ ಸ್ವಚ್ಛತೆ ಎಂದರೆ ಬಹಳ ಇಷ್ಟ ಆದ್ದರಿಂದ ಸ್ವಚ್ಛತೆಯಿಂದ ಮುಖ್ಯದ್ವಾರವು ಇದ್ದರೆ ಲಕ್ಷ್ಮೀದೇವಿಯು ಮನೆಗೆ ಪ್ರವೇಶವನ್ನು ಮಾಡುತ್ತಾರೆ. ಯಾವುದೇ ಕಾರಣಕ್ಕೂ ಮನೆಯ ಮುಖ್ಯ ದ್ವಾರದ ಮುಂದೆ ಚಪ್ಪಲಿಯನ್ನು ಬಿಡಬೇಡಿ ಏಕೆಂದರೆ ಚಪ್ಪಲಿಯನ್ನು ನೋಡಿದರೆ ಲಕ್ಷ್ಮೀದೇವಿಯು ಮನೆಗೆ ಪ್ರವೇಶವನ್ನು ಮಾಡುವುದಿಲ್ಲ, ಆದ್ದರಿಂದ ಚಪ್ಪಲಿಯನ್ನು ಮನೆಯ ಮುಖ್ಯದ್ವಾರದವನ್ನು ಹೊರತುಪಡಿಸಿ ಬೇರೆ ಜಾಗದಲ್ಲಿ ಇಟ್ಟರೆ ಒಳ್ಳೆಯದು.

ಮನೆಯ ಮುಖ್ಯದ್ವಾರದ ಮುಂದೆ ರಂಗೋಲಿಯನ್ನು ಬಿಡಿಸಿದರೆ ತುಂಬಾ ಒಳ್ಳೆಯದು ಇದರಿಂದ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಹಾಗೂ ಇದರಿಂದ ನೀವು ಅಂದುಕೊಂಡು ಮಾಡುವ ಕೆಲಸಗಳಲ್ಲಿ ಅಡೆತಡೆಗಳು ಬರುವುದಿಲ್ಲ. ಮನೆಯ ಮುಖ್ಯದ್ವಾರದ ಬಾಗಿಲಿಗೆ ಮಾವಿನ ಎಲೆಯ ತೋರಣವನ್ನು ವಾರಕ್ಕೊಮ್ಮೆ ಕಟ್ಟುವುದರಿಂದ ತುಂಬಾ ಒಳ್ಳೆಯದು. ಮನೆಯ ಮುಖ್ಯದ್ವಾರದ ಬಳಿ ಕತ್ತಲು ಇದ್ದರೆ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ಆದ್ದರಿಂದ ಮನೆಯ ಮುಖ್ಯ ದ್ವಾರದ ಬಳಿ ಒಂದು ಬಲ್ಬ್ ಹಾಕಿದರೆ ಉತ್ತಮ.


ಮನೆ ಮುಖ್ಯದ್ವಾರದ ಗೋಡೆಯ ಮೇಲೆ ಕೆಲವರು ದೇವರ ಚಿತ್ರಪಟವನ್ನು ಹಾಕುತ್ತಾರೆ. ದೇವರ ಚಿತ್ರಪಟ ಹಾಕುವುದು ತಪ್ಪಲ್ಲ ಆದರೆ ಸರಿಯಾದ ಮಾರ್ಗದಲ್ಲಿ ಹಾಕಿದರೆ ಒಳ್ಳೆಯದಾಗುತ್ತದೆ.ದೇವರ ಚಿತ್ರಪಟವನ್ನು ಯಾವಾಗಲೂ ಮುಖ್ಯ ದ್ವಾರದ ಒಳಗೆ ಹಾಕಬೇಕು. ಒಂದು ವೇಳೆ ಮನೆಯ ಹೊರಗಡೆ ಹಾಕಿದರೆ ದೇವರು ಮನೆಯಿಂದ ಹೊರಗೆ ಹೋಗುವ ಹಾಗೆ ಭಾವಿಸುತ್ತದೆ ಮತ್ತು ಇದರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಯಾವುದಾದರೂ ದೇವರ ಚಿತ್ರಪಟ ಅಥವಾ ಮೂರ್ತಿಯನ್ನು ಹಾಕುವುದಾದರೆ ಮನೆಯ ಒಳಗೆ ಹಾಕುವುದು ಉತ್ತಮ.