ದೇವರ ಕೋಣೆಯಲ್ಲಿ ದೇವರ ವಿಗ್ರಹಗಳನ್ನು ಯಾವ ರೀತಿ ಇಡಬೇಕು ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ದೇವರಕೋಣೆ ಇದ್ದೇ ಇರುತ್ತದೆ. ಮನೆಯಲ್ಲಿ ಪ್ರತಿನಿತ್ಯ ದೇವರಿಗೆ ಪೂಜೆಯನ್ನು ಮಾಡುವುದರಿಂದ ಸುಖ,ಶಾಂತಿ, ನೆಮ್ಮದಿ ಎಂಬುದು ಲಭಿಸುತ್ತದೆ. ಪ್ರತಿನಿತ್ಯ ಪೂಜೆ ಮಾಡುವುದರಿಂದ ನಕರಾತ್ಮಕ ಶಕ್ತಿ ಮನೆಯಿಂದ ಹೊರಗೆ ಹೋಗುತ್ತದೆ. ಈ ರೀತಿಯಾಗಿ ಉಪಯೋಗ ವಾಗಬೇಕಾದರೆ ದೇವರ ಕೋಣೆಯಲ್ಲಿ ದೇವರನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಇದು ಸಾಧ್ಯ. ಒಂದು ವೇಳೆ ದೇವರಕೋಣೆಯಲ್ಲಿ ದೇವರನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟಿಲ್ಲವಾದರೆ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.

ಶಾಸ್ತ್ರಗಳ ಪ್ರಕಾರ ಕೆಲವೊಂದು ದೇವರ ವಿಗ್ರಹ ಅಥವಾ ಚಿತ್ರಪಟವನ್ನು ಅಕ್ಕಪಕ್ಕದಲ್ಲಿ ಇಡಬಾರದು. ನಮ್ಮ ಮನೆಯಲ್ಲಿರುವ ದೇವರಕೋಣೆಯು ತುಂಬಾ ಪವಿತ್ರತೆಯಿಂದ ಕೂಡಿರುತ್ತದೆ. ದೇವರ ಕೋಣೆ ಈಶಾನ್ಯ ದಿಕ್ಕಿನಲ್ಲಿ ಇದ್ದರೆ ತುಂಬಾ ಉತ್ತಮ ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ. ದೇವರ ಕೋಣೆಯಲ್ಲಿ ಕೇವಲ ದೇವರ ವಿಗ್ರಹ ಇಡಬೇಕು ಅದರ ಹೊರತಾಗಿ ಬೇರೆ ಯಾವುದೇ ಚಿತ್ರಪಟವನ್ನು ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ ಸಾಧು-ಸಂತರ ಚಿತ್ರಪಟವನ್ನು ದೇವರಕೋಣೆಯಲ್ಲಿ ಇಡುವುದು ತಪ್ಪು ಎಂದು ಉಲ್ಲೇಖಿಸಲಾಗಿದೆ. ಒಂದೇ ದೇವರ ನಾಲ್ಕೈದು ವಿಗ್ರಹ ಅಥವಾ ಚಿತ್ರಪಟವನ್ನು ದೇವರ ಕೋಣೆಯಲ್ಲಿ ಇಡಬಾರದು.

ದೇವರ ಕೋಣೆಯಲ್ಲಿ ದೇವರ ಮೂರ್ತಿಗಳು ಕುಳಿತುಕೊಂಡ ಭಂಗಿಯಲ್ಲಿ ಇರಬೇಕು. ಒಂದು ವೇಳೆ ದೇವರು ನಿಂತುಕೊಂಡ ಭಂಗಿಯಲ್ಲಿ ಇದ್ದರೆ ಆಗ ದೇವರು ನಿಮ್ಮ ಮನೆಯಲ್ಲಿ ವಾಸ ಮಾಡುವುದಿಲ್ಲ, ಆದ್ದರಿಂದ ದೇವರ ಮೂರ್ತಿಗಳು ಕುಳಿತುಕೊಂಡು ಭಂಗಿಯಲ್ಲಿ ಇರಬೇಕು ಮತ್ತು ದೇವರ ಕೋಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಗಣಪತಿ ಜೊತೆ ಲಕ್ಷ್ಮೀದೇವಿಯನ್ನು ಇಟ್ಟರೆ ತುಂಬಾ ಶುಭದಾಯಕವಾಗಿರುತ್ತದೆ. ಈ ರೀತಿ ಇಡುವುದರಿಂದ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಧನ ವೃದ್ಧಿಯಾಗುತ್ತದೆ. ಇದೇ ರೀತಿ ವಿಷ್ಣುದೇವರ ವಿಗ್ರಹದ ಜೊತೆ ಲಕ್ಷ್ಮಿ ದೇವಿಯ ವಿಗ್ರಹವನ್ನು ಇಟ್ಟರೆ ಒಳ್ಳೆಯದಾಗುತ್ತದೆ. ಇದರಿಂದ ದಾಂಪತ್ಯದಲ್ಲಿ ಯಾವುದೇ ಬಿರುಕುಗಳು ಮೂಡುವುದಿಲ್ಲ. ಹಾಗೆ ಯಾವುದೇ ಕಾರಣಕ್ಕೂ ಶ್ರೀಕೃಷ್ಣನ ಒಂಟಿ ವಿಗ್ರಹವನ್ನು ಇಡಬಾರದು, ಯಾವಾಗಲೂ ರಾಧಾಕೃಷ್ಣ ಅಥವಾ ಗೋವಿನ ಜೊತೆ ಶ್ರೀಕೃಷ್ಣನ ಚಿತ್ರಪಟವನ್ನು ಇಡಬೇಕು.

ಆಂಜನೇಯ ಸ್ವಾಮಿಯ ಜೊತೆಗೆ ಭಗವಂತನಾದ ಶ್ರೀರಾಮನ ಚಿತ್ರಪಟದ ಮೂರ್ತಿ ಇರುವಂತೆ ಇಡಬೇಕು. ಒಂದು ವೇಳೆ ಆಂಜನೇಯ ಸ್ವಾಮಿ ಹಾಗೂ ಶ್ರೀ ರಾಮರ ಆಶೀರ್ವಾದ ದೊರೆತರೆ ಎಲ್ಲಾ ಸಂಕಷ್ಟಗಳಿಂದ ಲೂ ಮುಕ್ತಿಯನ್ನು ಪಡೆದುಕೊಳ್ಳಬಹುದು. ಶಿವ-ಪಾರ್ವತಿಯ ಚಿತ್ರಪಟವನ್ನು ಇಟ್ಟು ಪೂಜೆ ಮಾಡುವುದರಿಂದ ಮನೆಗೆ ಶುಭದಾಯಕವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರಣಕ್ಕೂ ಶನಿದೇವರ, ಕಾಲಭೈರವ,ನಟರಾಜರ ಚಿತ್ರಪಟ ಅಥವಾ ವಿಗ್ರಹಗಳನ್ನು ಮರೆತರು ಇಡಬಾರದು.