ದರಿದ್ರತನ ನಿವಾರಣೆ ಹಾಗೂ ಮನೆಯ ಅಭಿವೃದ್ಧಿಗೆ ಏನು ಮಾಡಬೇಕು ಎಂಬುದು ತಿಳಿದಿದೆಯೆ ನಿಮಗೆ..ದರಿದ್ರ ನಿವಾರಣೆ ಹಾಗೂ ಮನೆಯು ಏಳಿಗೆ ಆಗಬೇಕು ಎಂದರೆ ಅದು ಹೆಣ್ಣುಮಕ್ಕಳಿಂದ ಮಾತ್ರ ಸಾಧ್ಯ ಎಂದರೆ ತಪ್ಪಾಗಲಾರದು. ಆದ್ದರಿಂದ ಹೆಣ್ಣುಮಕ್ಕಳು 5 ಕೆಂಪುಬಣ್ಣದ ದಾಸವಾಳದ ಹೂವನ್ನು ತೆಗೆದುಕೊಂಡು ಕೆಂಪು ವಸ್ತ್ರದ ಮೇಲೆ ಹೂವನ್ನು ಇಡಬೇಕು.
ತದನಂತರ ಕಾಮಾಕ್ಷಿ ದೀಪವನ್ನು ಅಥವಾ ಮಣ್ಣಿನ ದೀಪವನ್ನು ತೆಗೆದುಕೊಂಡು ಅದರಲ್ಲಿ ಬೇವಿನ ಎಣ್ಣೆಯನ್ನು ಹಾಕಿ ದೀಪಕ್ಕೆ ಬತ್ತಿಯನ್ನು ಹಾಕಬೇಕಾದರೆ ಕುಂಕುಮದ ಸಹಾಯದಿಂದ ಬತ್ತಿಯನ್ನು ಕೆಂಪುಬಣ್ಣ ಮಾಡಿಕೊಳ್ಳಬೇಕು. ಇದಾದ ನಂತರ ದೀಪದಲ್ಲಿರುವ ಎಣ್ಣೆಗೂ ಸಹ ಸ್ವಲ್ಪ ಕುಂಕುಮವನ್ನು ಹಾಕಬೇಕು ಮತ್ತು ಇದರ ಜೊತೆಗೆ ಪೂಜೆ ಮಾಡುವ ಹೆಣ್ಣುಮಕ್ಕಳು ಕೆಂಪು ವಸ್ತ್ರವನ್ನು ಧರಿಸಿರಬೇಕು.
ಈ ಪೂಜೆಯನ್ನು ಮಂಗಳವಾರದ ದಿನ ಮಾಡುವುದರಿಂದ ನಿಮ್ಮ ಎಲ್ಲಾ ಕೋರಿಕೆಗಳು ಮತ್ತು ಸಕಲ ಇಷ್ಟಾರ್ಥಗಳು ನೆರವೇರುತ್ತದೆ. ಇದರಿಂದ ಜೀವನದಲ್ಲಿ ದರಿದ್ರತನ ದೂರವಾಗಿ ಸುಖ,ಶಾಂತಿ, ನೆಮ್ಮದಿ ಹಾಗೆ ಸಂಪತ್ತು ಕೂಡ ಸಮೃದ್ಧಿಯಾಗುತ್ತದೆ. ಇಷ್ಟೇ ಅಲ್ಲದೆ ಮನೆಯ ಯಜಮಾನನ ಆಯಸ್ಸನ್ನು ಕೂಡ ಹೆಚ್ಚಿಗೆ ಮಾಡುತ್ತದೆ.
ಈ ಐದು ಕೆಂಪು ಆಕೃತಿ ಕುಜ ತತ್ವ, ದುರ್ಗ ತತ್ವ, ಶತ್ರು ಸಂಹಾರಕ ಆದ್ದರಿಂದ ಮನೆಯಲ್ಲಿ ಹೆಣ್ಣು ಮಕ್ಕಳು ಈ ಮೇಲೆ ಹೇಳಿರುವ ಹಾಗೆ ಪೂಜೆ ಮಾಡಿದರೆ ದರಿದ್ರ ತನದಿಂದ ಮುಕ್ತಿಯನ್ನು ಪಡೆದುಕೊಂಡು ಸಕಲ ಇಷ್ಟಾರ್ಥಗಳನ್ನು ಪಡೆದುಕೊಳ್ಳಬಹುದು.