ಸಾಮಾನ್ಯವಾಗಿ ಪ್ರತಿಯೊಬ್ಬರ ರಾಶಿಯಲ್ಲಿ ಶನಿದೋಷ ಎಂಬುದು ಇದ್ದೇ ಇರುತ್ತದೆ. 12 ರಾಶಿಗಳಿಗೆ ಒಂದಲ್ಲ ಒಂದು ಸಮಯದಲ್ಲಿ ಶನಿಯ ದೋಷವು ಬಂದೇ ಬರುತ್ತದೆ. ಶನಿ ದೋಷವಿದ್ದರೆ ಕೆಲವೊಂದು ಸಲ ಯಾವುದೇ ಕೆಲಸ ಮಾಡಿದರು ಅದು ಸಂಪೂರ್ಣವಾಗುವುದಿಲ್ಲ ಅಥವಾ ನಷ್ಟದಾಯಕವಾಗಿರುತ್ತದೆ. ಹಾಗಾದರೆ ಶನಿ ದೋಷಕ್ಕೆ ಪರಿಹಾರ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.ಮೇಷ ರಾಶಿ..ಮೇಷ ರಾಶಿಯವರು ಶನಿದೋಷದಿಂದ ಮುಕ್ತರಾಗಬೇಕೆಂದರೆ ಶನಿವಾರದ ದಿನದಂದು ದೇವಸ್ಥಾನದಲ್ಲಿರುವ ನವಗ್ರಹ ಮಂಟಪಕ್ಕೆ ಹೋಗಿ 27 ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು. ಇದರಿಂದ ಶನಿ ದೋಷವು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.
ವೃಷಭ ರಾಶಿ..ವೃಷಭ ರಾಶಿಯವರು ಶನಿವಾರದ ದಿನದಂದು ಬನ್ನಿ ಮರದ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಉಪ್ಪನ್ನು ಸವರಿ ನವಗ್ರಹದಲ್ಲಿರುವ ಶನಿ ದೇವರ ಮುಂದೆ ಇಟ್ಟು 9 ಬಾರಿ ಪ್ರದಕ್ಷಿಣೆಯನ್ನು ಹಾಕುವುದರಿಂದ ಒಳ್ಳೆಯದಾಗುತ್ತದೆ.
ಮಿಥುನ ರಾಶಿ..ಶನಿವಾರದಂದು ಕಪ್ಪು ಎಳ್ಳನ್ನು ಶನಿದೇವರ ಮುಂದೆ ಇಡಬೇಕು. ಒಂದು ವೇಳೆ ಸಾಧ್ಯವಾದರೆ ಶನಿವಾರದ ದಿನದೊಂದು ಎಲ್ಲೆಣ್ಣೆ ಇಂದ ಶನಿ ದೇವರ ವಿಗ್ರಹಕ್ಕೆ ಸವಾರಿ ಬರುವುದರಿಂದ ತುಂಬಾ ಒಳ್ಳೆಯದು.ಕಟಕ ರಾಶಿ..ಶಿವನಿಗೆ ಅಭಿಷೇಕವನ್ನು ಮಾಡುವಾಗ ಹಾಲಿಗೆ ಸ್ವಲ್ಪ ಕಪ್ಪು ಎಳ್ಳನ್ನು ಮಿಶ್ರಣ ಮಾಡಿ ನಂತರ ಅಭಿಷೇಕ ಮಾಡುವುದು ತುಂಬಾ ಒಳ್ಳೆಯದು.
ಸಿಂಹ ರಾಶಿ..ಈ ರಾಶಿಯವರು ಶನಿವಾರದ ದಿನದಂದು ಕೆಂಪು ದಾಸವಾಳದ ಹೂವನ್ನು ತೆಗೆದುಕೊಂಡು ಆಂಜನೇಯಸ್ವಾಮಿಗೆ ಅರ್ಪಿಸಿದರೆ ತುಂಬಾ ಒಳ್ಳೆಯದು.
ಕನ್ಯಾ ರಾಶಿ..ಈ ರಾಶಿಯವರು ಶನಿವಾರದ ದಿನದೊಂದು ವೆಂಕಟೇಶ್ವರ ಸ್ವಾಮಿಗೆ ತುಳಸಿ ದಳವನ್ನು ಅರ್ಪಿಸಿದರೆ ತುಂಬಾ ಒಳ್ಳೆಯದು.
ತುಲಾ ರಾಶಿ..ಎಲ್ಲೆಣ್ಣೆ ಇಂದ 8 ಬತ್ತಿಯನ್ನು ಹಾಕಿ ಮನೆಯ ಹಜಾರದಲ್ಲಿ ಅಥವಾ ಹಾಲಿನಲ್ಲಿ ದೀಪವನ್ನು ಹಚ್ಚುವುದರಿಂದ ಈ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ.
ವೃಶ್ಚಿಕ ರಾಶ..ಈ ರಾಶಿಯವರು ಸಿಂಧೂರ ಮತ್ತು ಎಲ್ಲೆಣ್ಣೆ ಮಿಶ್ರಣ ಮಾಡಿ ಆಂಜನೇಯಸ್ವಾಮಿಗೆ ಲೇಪಿಸಿ ನಂತರ ಅದನ್ನು ಹಣೆಗೆ ಇಟ್ಟುಕೊಂಡರೆ ತುಂಬಾ ಒಳ್ಳೆಯದು.
ಧನಸ್ಸು ರಾಶಿ..ಅರಳಿ ಮರಕ್ಕೆ 8 ಪ್ರದಕ್ಷಿಣೆಯನ್ನು ಹಾಕಿಕೊಂಡು ಬಂದರೆ ಈ ರಾಶಿಯವರಿಗೆ ತುಂಬಾ ಒಳ್ಳೆಯದಾಗುತ್ತದೆ.
ಮಕರ ರಾಶಿ..ಶನಿವಾರದ ದಿನದಂದು ಬನ್ನಿ ಮರದ ಕೆಳಗೆ ಕಪ್ಪುಗಾಜಿನ ಬಳೆಯಿಟ್ಟು 8 ಪ್ರದಕ್ಷಿಣೆಯನ್ನು ಹಾಕಿದರೆ ತುಂಬಾ ಒಳ್ಳೆಯದು.
ಕುಂಭ ರಾಶಿ..ಕುಂಭರಾಶಿಯವರು ಬನ್ನಿಮರಕ್ಕೆ 8 ಬತ್ತಿಯ ದೀಪವನ್ನು ಹಚ್ಚಿ 8 ಪ್ರದಕ್ಷಿಣೆಯನ್ನು ಹಾಕಬೇಕು. ಶಿವನಿಗೆ ಹಾಲು ಮತ್ತು ಎಳ್ಳನ್ನು ಮಿಶ್ರಣ ಮಾಡಿ ಅಭಿಷೇಕ ಮಾಡುವುದು ತುಂಬಾ ಒಳ್ಳೆಯದು.
ಮೀನ ರಾಶಿ..ಶನಿವಾರ ದಿನದಂದು ಶಿವನಿಗೆ ಹಾಲು ಮತ್ತು ಎಳ್ಳನ್ನು ಮಿಶ್ರಣ ಮಾಡಿ ಅಭಿಷೇಕ ಮಾಡುವುದು ತುಂಬಾ ಒಳ್ಳೆಯದು.
ಪ್ರತಿ ಶನಿವಾರ ಮೇಲೆ ಹೇಳಿರುವ ರಾಶಿಯವರು ನಿಯಮವನ್ನು ಪಾಲಿಸಿದರೆ ಎಲ್ಲಾ ದೋಷ ನಿವಾರಣೆಯಾಗಿ ಸುಖಕರವಾಗಿ ಜೀವನವನ್ನು ನಡೆಸಬಹುದು.