ನಾಯಿಯ ಜನ್ಮ ದೊರಕುವುದಕ್ಕೆ ಏನು ಕಾರಣ ಎಂದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಮನುಷ್ಯನ ಸಾವಿನ ನಂತರ ಅವನ ಕರ್ಮಗಳ ಅನುಸಾರವಾಗಿ ಮುಂದಿನ ಜನ್ಮದಲ್ಲಿ ಯಾವುದಾದರೂ ಒಂದು ರೂಪದಲ್ಲಿ ಜನ್ಮವು ದೊರಕುತ್ತದೆ. ಯಾವ ಮನುಷ್ಯನು ಜೀವಿತಕಾಲದಲ್ಲಿ ಬಹಳಷ್ಟು ಪಾಪದ ಕೆಲಸಗಳನ್ನು ಮಾಡುತ್ತಾನೋ ಆ ವ್ಯಕ್ತಿಗೆ ಮುಂದಿನ ಜನ್ಮದಲ್ಲಿ ತನ್ನ ನೋವನ್ನು ಬೇರೆಯವರೊಂದಿಗೆ ಹೇಳಿಕೊಳ್ಳುವುದಕ್ಕೂ ಸಾಧ್ಯವಾಗದ ರೀತಿ ಜನ್ಮವು ಸಿಗುತ್ತದೆ.ಭವಂತ ಶ್ರೀರಾಮನಿಗೆ ಸಭೆಯಲ್ಲಿ ಕೂತಿರುವಾಗ ಒಂದು ನಾಯಿಯು ಅಳುತ್ತಿರುವ ಶಬ್ದವು ಕೇಳಿಬರುತ್ತದೆ, ಆದರೆ ದ್ವಾರಪಾಲಕರು ಆ ನಾಯಿಯನ್ನು ಓಡಿಸುತ್ತಾರೆ. ಆದರೆ ಮರುದಿನ ಮತ್ತೆ ನಾಯಿಯು ಸಭೆಯ ಹತ್ತಿರ ಬಂದು ಅಳುವುದಕ್ಕೆ ಪ್ರಾರಂಭಿಸುತ್ತದೆ, ಆದರೆ ದ್ವಾರಪಾಲಕರು ಮತ್ತೆ ಅದನ್ನು ಓಡಿಸುತ್ತಾರೆ. ಸಭೆಯ ಮೂರನೇ ದಿನವೂ ರಾಮನಿಗೆ ನಾಯಿಯು ಅಳುವ ಶಬ್ದ ಕೇಳಿಬರುತ್ತದೆ. ಆಗ ಶ್ರೀರಾಮರು ದ್ವಾರಪಾಲಕರಿಗೆ ನಾಯಿಯನ್ನು ಸಭೆಯ ಒಳಗೆ ಬರಲು ಬಿಡುವುದಕ್ಕೆ ಹೇಳುತ್ತಾರೆ.
ನಾಯಿಯು ದ್ವಾರಪಾಲಕರಿಗೆ ಹಿಂದಿನ ಜನ್ಮದಲ್ಲಿ ಮಾಡಿದ್ದ ಪಾಪ ಕರ್ಮದಿಂದ ನನಗೆ ಈ ಜನ್ಮದಲ್ಲಿ ನಾಯಿಯ ರೂಪ ದೊರಕಿದೆ ಆದ್ದರಿಂದ ದೇವಾಲಯಗಳಲ್ಲಿ ಅಥವಾ ಯಜ್ಞವನ್ನು ಮಾಡುವ ಸ್ಥಳಗಳಲ್ಲಿ , ರಾಜ ಸಭೆಗಳಲ್ಲಿ ಹೋಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಪ್ರಭು ಶ್ರೀರಾಮರಿಗೆ ಇಲ್ಲೇ ಬಂದು ಭೇಟಿ ಮಾಡಲು ಹೇಳಿ ಎಂದು ಹೇಳಿತು ನಾಯಿ.

ದ್ವಾರಪಾಲಕರು ಈ ವಿಷಯವನ್ನು ಶ್ರೀರಾಮನಿಗೆ ತಿಳಿಸಿದಾಗ ಶ್ರೀರಾಮರು ನಾಯಿ ಇರುವ ಸ್ಥಳಕ್ಕೆ ಬರುತ್ತಾರೆ, ಆಗ ನಾಯಿ ಶ್ರೀರಾಮನಿಗೆ ನಾನು ಯಾವುದೇ ತಪ್ಪನ್ನು ಮಾಡಿಲ್ಲ ಹಾಗಿದ್ದರೂ ಒಬ್ಬ ಸನ್ಯಾಸಿ ನನ್ನ ಕಾಲಿಗೆ ಕಲ್ಲಿನಿಂದ ಹೊಡೆದಿದ್ದಾರೆ ಅದರಿಂದ ಕಾಲಿಗೆ ಪೆಟ್ಟಾಗಿ ತುಂಬಾ ನೋವಾಗುತ್ತಿದೆ ಎಂದು ಹೇಳುತ್ತದೆ.
ನಾಯಿಯ ಮಾತನ್ನು ಆಲಿಸಿದ ಶ್ರೀರಾಮರು ಸನ್ಯಾಸಿಯನ್ನು ಕರೆಸುತ್ತಾರೆ. ಸನ್ಯಾಸಿಯು ಶ್ರೀರಾಮರಿಗೆ ಈ ರೀತಿ ಹೇಳುತ್ತಾರೆ, ನಾನು ಭಿಕ್ಷೆಯನ್ನು ಬೇಡುತ್ತಿದ್ದಾಗ ಈ ನಾಯಿ ನನ್ನ ಅನ್ನವನ್ನು ಸ್ಪರ್ಶ ಮಾಡಿತ್ತು. ಆಗ ಮಧ್ಯಾಹ್ನ ವಾಗಿದ್ದರಿಂದ ತುಂಬಾ ಹಸಿವಾಗಿತ್ತು ಆ ಕ್ಷಣದಲ್ಲಿ ಈ ನಾಯಿ ಸ್ಪರ್ಶ ಮಾಡಿದ್ದರಿಂದ ಕೋಪ ಬಂದು ಹೊಡೆದೆ ಎಂದು ಹೇಳಿದರು. ಆಗ ಶ್ರೀರಾಮರು ನಾಯಿ ಹತ್ತಿರ ಸನ್ಯಾಸಿಯು ತಪ್ಪು ಮಾಡಿದ್ದಾರೆ ನೀನು ಯಾವ ಶಿಕ್ಷೆಯನ್ನು ಬೇಕಾದರೂ ಕೊಡಬಹುದು ಎಂದು ಹೇಳುತ್ತಾರೆ.ನಾಯಿಯು ಶ್ರೀ ರಾಮರಿಗೆ ಆ ಸನ್ಯಾಸಿಯನ್ನು ಯಾವುದಾದರೂ ಸೇವಾ ಮಂದಿರದ ಮಾಲೀಕನಾಗಿ ಮಾಡಿ ಎಂದು ಹೇಳುತ್ತದೆ. ನಂತರ ಶ್ರೀರಾಮರು ನಾಯಿಯ ಮಾತಿನ ಪ್ರಕಾರ ಸನ್ಯಾಸಿಯನ್ನು ಒಂದು ಸೇವಾ ಮಂದಿರದ ಮಾಲೀಕನಾಗಿ ಮಾಡುತ್ತಾರೆ. ಇದನ್ನು ಕಂಡ ಜನರು ನಿಮಗೆ ಸನ್ಯಾಸಿ ಹೊಡೆದಿದ್ದರು ಈ ರೀತಿಯ ವರ ದಾನವನ್ನು ಯಾಕೆ ಕೇಳಿದಿರಿ ಎಂದಾಗ ನಾಯಿಯು ಯಾರೂ ಬ್ರಾಹ್ಮಣರಿಗೆ ಕೊಡುವ ವಸ್ತುಗಳನ್ನು ಕಳವು ಮಾಡುತ್ತಾರೆ, ಕೆಟ್ಟ ದಾರಿಯಲ್ಲಿ ಹೋಗಿ ಧನ ಸಂಪತ್ತನ್ನು ಗಳಿಸುತ್ತಾರೆ ಈ ರೀತಿ ವ್ಯಕ್ತಿಗಳು ಸತ್ತು ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತಾರೆ. ಆಗ ನಾಯಿಯು ಹಿಂದಿನ ಜನ್ಮದಲ್ಲಿ ನಾನು ಮಠದ ಋಷಿಯಾಗಿದ್ದೆ, ಆದರೆ ನಾನು ಮಾಡಿದ ಪಾಪ ಕರ್ಮಗಳಿಂದ ನನಗೆ ಈ ಜನ್ಮದಲ್ಲಿ ನಾಯಿಯ ರೂಪ ದೊರೆತಿದೆ. ಆದ್ದರಿಂದ ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಕೆಲಸಗಳಿಗಾಗಿ ಪ್ರಾಯಶ್ಚಿತವಾಗಿ ಆ ಸನ್ಯಾಸಿಗೆ ಸೇವಾಮಂದಿರದ ಮಾಲೀಕನಾಗಿ ಪಶುಪಕ್ಷಿಗಳಿಗೆ ಹಾಗೂ ಕಡುಬಡವರಿಗೆ ಎಲ್ಲಾ ತರಹದ ದಾನವನ್ನು ಮಾಡಲಿ ಎಂದು ಇಚ್ಛೆ ಪಟ್ಟೆ ಎಂದು ಹೇಳುತ್ತದೆ.