ಸಾಮಾನ್ಯವಾಗಿ ಮನೆಯಲ್ಲಿ ಮಕ್ಕಳು ಹುಟ್ಟಿದರೆ ಮಕ್ಕಳಿಗೆ ಕಪ್ಪು ದಾರವನ್ನು ಅಥವಾ ಕಪ್ಪು ಬೊಟ್ಟನ್ನು ಇಡಲಾಗುತ್ತದೆ ಮತ್ತು ದೃಷ್ಟಿ ತೆಗೆಯುವಂತಹ ಕೆಲಸಗಳನ್ನು ಸಹ ಮಾಡಲಾಗುತ್ತದೆ. ಆದರೆ ಯಾಕೆ ಈ ರೀತಿ ಮಾಡುತ್ತಾರೆ ಎಂಬ ಹಿಂದಿನ ರಹಸ್ಯವನ್ನು ತಿಳಿದುಕೊಂಡಿದ್ದೀರಾ. ಹಾಗಾದರೆ ಕಪ್ಪು ದಾರ ದಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ.ಒಂದು ವೇಳೆ ನಿಮ್ಮ ಜೀವನದಲ್ಲಿ ಯಾವುದಾದರೂ ದುಷ್ಟಶಕ್ತಿ ಅನುಭವ ಆಗುತ್ತಿದ್ದರೆ ಅದರ ಕುಟುಂಬದಲ್ಲಿ ಅಶಾಂತಿಯ ಭಾವನೆಯು ನಿಮಗೆ ಮೂಡುತ್ತಿದ್ದರೆ ಕಪ್ಪು ದಾರದಿಂದ ಹಲವು ರೀತಿಯ ಪರಿಹಾರಗಳನ್ನು ಮಾಡಿಕೊಳ್ಳಬಹುದು. ಕಪ್ಪು ಬಣ್ಣ ನಕಾರಾತ್ಮ ಶಕ್ತಿಯನ್ನು ನಾಶ ಮಾಡುವ ಗುಣವನ್ನು ಹೊಂದಿರುತ್ತದೆ. ದುಷ್ಟಶಕ್ತಿಗಳಿಂದ ದೂರ ಇರಲು ಕಪ್ಪುದಾರ ತಪ್ಪು ಕೊಟ್ಟು ಹೀಗೆ ಕಪ್ಪುಬಣ್ಣದ ವಸ್ತುಗಳಿಂದ ಕೆಟ್ಟ ಶಕ್ತಿಗಳನ್ನು ದೂರವಿಡಲು ಕಪ್ಪು ದಾರ ತುಂಬಾ ಸಹಾಯಕಾರಿಯಾಗಿದೆ.
ಒಂದು ವೇಳೆ ನಿಮ್ಮ ಮನೆಯಲ್ಲಿ ಪ್ರತಿನಿತ್ಯ ಕಲಹಗಳು ಉಂಟಾಗುತ್ತಿದ್ದು ಅದರಿಂದ ಬೇಸತ್ತಿದ್ದರೆ ಶನಿವಾರದ ದಿನದಂದು ಶನೇಶ್ವರನ ದೇವಸ್ಥಾನಕ್ಕೆ ಹೋಗಿ 1ಮೀಟರ್ ಕಪ್ಪು ದಾರವನ್ನು ತೆಗೆದುಕೊಂಡು 108 ಗಂಟನ್ನು ಕಟ್ಟಬೇಕು. ಈಗ ಪ್ರತಿಯೊಂದು ಗಂಟನ್ನು ಕಟ್ಟುವಾಗ ಓಂ ಶನೇಶ್ವರಾಯ ನಮಃ ಎಂದು ಜಪ ಮಾಡಿಕೊಂಡು
ಕಟ್ಟಬೇಕು. ನಂತರ ಈ ಕಪ್ಪು ದಾರವನ್ನು ಮನೆಯ ಮುಖ್ಯದ್ವಾರದ ಬಳಿ ಕಟ್ಟಬೇಕು ಇದರಿಂದ ಕೆಟ್ಟ ದೃಷ್ಟಿಗಳು ದುಷ್ಟಶಕ್ತಿಗಳು ನನಗೆ ಪ್ರವೇಶವನ್ನು ಮಾಡುವುದಿಲ್ಲ.ಮನೇಲಿ ಕುಟುಂಬದವರ ಆರೋಗ್ಯ ಪದೇಪದೇ ಹದೆಗೆಡುತ್ತಿದ್ದರೆ, ಕಪ್ಪು ದಾರವನ್ನು ಮಂದಿರಕ್ಕೆ ತೆಗೆದುಕೊಂಡು ಹೋಗಿ ಸ್ವಲ್ಪ ಸಿಂಧೂರವನ್ನು ಹಚ್ಚಿ ನಿಮ್ಮ ಬಳಿ ಇಟ್ಟುಕೊಳ್ಳಬೇಕು, ಎಂಟನೇ ದಿನ ಈ ಕಪ್ಪು ದಾರವನ್ನು ಕುಟುಂಬದ ಸದಸ್ಯರ ಕಾಲಿಗೆ ಕಟ್ಟಬೇಕು. ಇದರಿಂದ ಇನ್ನೊಬ್ಬರ ಕೆಟ್ಟದೃಷ್ಟಿ ಯು ಅವರನ್ನು ಸ್ಪರ್ಶ ಮಾಡುವುದಿಲ್ಲ.
ಗರ್ಭಿಣಿ ಸ್ತ್ರೀಯರಿಗೆ ದೃಷ್ಟಿಯಾಗುವುದು ಸರ್ವೇ ಸಾಮಾನ್ಯ ಆದ್ದರಿಂದ ಕಪ್ಪು ದಾರವನ್ನು ಗರ್ಭಿಣಿ ಸ್ತ್ರೀಯರ ಸುತ್ತಳತೆಯ ಪ್ರಕಾರ ತೆಗೆದುಕೊಂಡು ತಲೆ ಮೇಲೆ ಮೂರು ಬಾರಿ ಸುತ್ತಿಸಿ ಯಾವುದಾದರೂ ಮರಕ್ಕೆ ಕಟ್ಟಬೇಕು ಅಥವಾ ಹರಿಯುವ ನದಿಗೆ ಆ ಕಪ್ಪು ದಾರವನ್ನು ಬಿಡಬೇಕು. ಈ ರೀತಿಯಾಗಿ ಮಾಡುವುದರಿಂದ ಗರ್ಭಿಣಿ ಸ್ತ್ರೀಯರ ಹಾಕಬೇಕಾದುದು ಯಾವುದೇ ರೀತಿಯ ಶಕ್ತಿಗಳು ಪ್ರವೇಶವನ್ನು ಮಾಡುವುದಿಲ್ಲ.