ಗಡಿದಂ ಕ್ಷೇತ್ರದ ಶ್ರೀಲಕ್ಷ್ಮೀವೆಂಕಟರಮಣ ಸ್ವಾಮಿಯ ಕಿರು ಪರಿಚಯ ಬೆಂಗಳೂರಿನಿಂದ 92 ಕಿಲೋಮೀಟರ್ ದೂರವಿರುವ ಗಡಿದಂ ಕ್ಷೇತ್ರವು ಮಹಾವಿಷ್ಣುವಿನ ಪವಿತ್ರ ಕ್ಷೇತ್ರವಾಗಿದೆ. ಗಡಿದಂ ಕ್ಷೇತ್ರದಲ್ಲಿ ಈ ಹಿಂದೆ ಅನೇಕ ಋಷಿಗಳು ಯಜ್ಞಗಳನ್ನು ಮಾಡಿರುವ ಕಾರಣ ಈ ಕ್ಷೇತ್ರ ಪವಿತ್ರ್ಯತೆಯನ್ನು ಪಡೆದುಕೊಂಡಿದೆ. ಗಡಿದಂ ಕ್ಷೇತ್ರದಲ್ಲಿರುವ ವೆಂಕಟರಮನ ದೇವರು ತಿರುಪತಿ ತಿಮ್ಮಪ್ಪನ ವರ್ಚಸ್ಸನ್ನು ಹೊಂದಿದ್ದಾರೆ. ಅತ್ಯಂತ ಪುರಾತನ ಕಾಲದ ಗಡಿದಂ ಕ್ಷೇತ್ರವು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಭಕ್ತರ ಆಶ್ರಯಧಾಮ ಎಂದು ಕರೆಸಿಕೊಂಡಿದೆ. ಆದ್ದರಿಂದ ಈ ಕ್ಷೇತ್ರವು ಎರಡನೇ ತಿರುಪತಿ ಎಂದು ಪ್ರಖ್ಯಾತಿಯನ್ನು ಸಹ ಪಡೆದುಕೊಂಡಿದೆ.
ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆಕರೆ ಮಾಡಿರಿ 9663953892 ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳುಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳುಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹಈ ಕೂಡಲೇ ಕರೆ ಮಾಡಿರಿ 9663 953892.
ಈ ಕ್ಷೇತ್ರವು ಹಿಂದೆ ದಟ್ಟ ಅರಣ್ಯ ಪ್ರದೇಶವಾಗಿತ್ತು. ಭೀಮಸೇನ ಹಾಗೂ ಹಿಡಂಬಿ ಪುತ್ರ ಘಟೋದ್ಗಜನು ತನ್ನ ತಾಯಿಯೊಂದಿಗೆ ಇದೇ ಬೆಟ್ಟದ ಒಂದು ಭಾಗದಲ್ಲಿ ವಾಸವಿದ್ದರು. ಆತನ ತಲೆಯು ಬೋಳಾಗಿ ಗಡಿಗೆ ರೂಪದಲ್ಲಿ ಇದ್ದದ್ದರಿಂದ ಈ ಕ್ಷೇತ್ರಕ್ಕೆ ಗಡಿದಂ ಎಂಬ ಹೆಸರು ಬಂದಿತು. ಗಡಿದಂ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯು ಮಹಾಭಾರತದ ಕಾಲದಲ್ಲಿ ನಿರ್ಮಾಣ ಮಾಡಲ್ಪಟ್ಟಿದೆ. ಮಹಾಭಾರತದ ದಿನಗಳು ಕಳೆದ ನಂತರ ಇಲ್ಲಿಯ ದೇವಸ್ಥಾನವು ನಶಿಸಿ ಹೋಗಿರುತ್ತದೆ ಮತ್ತು ಇಲ್ಲಿನ ವಿಗ್ರಹವು ಹುತ್ತದಿಂದ ಆವರಿಸಲ್ಪಟ್ಟಿರುತ್ತದೆ. ಸಾವಿರಾರು ವರ್ಷಗಳ ನಂತರ ಚೋಳರ ಒಬ್ಬ ರಾಜನಿಗೆ ಈ ವಿಗ್ರಹವು ಕನಸಿನಲ್ಲಿ ಬರುತ್ತದೆ. ಅನಂತರ ವಿಗ್ರಹ ಇರುವ ಸ್ಥಳವನ್ನು ಪತ್ತೆ ಮಾಡಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
ದೇವಾಲಯದ ಗರ್ಭಗುಡಿಯಲ್ಲಿ ಶ್ರೀ ವೆಂಕಟರಮಣ ಸ್ವಾಮಿಯ ಮೂಲವಿಗ್ರಹವನ್ನು ಗರುಡ ಪೀಠದ ಮೇಲೆ ನಿಲ್ಲಿಸಲಾಗಿದೆ. ಅಕ್ಕಪಕ್ಕದಲ್ಲಿ ಶ್ರೀದೇವಿ ಹಾಗೂ ಭೂದೇವಿ ದೇವರುಗಳು ಶೋಭಿಸುತ್ತಾರೆ. ವೆಂಕಟರಮಣ ಸ್ವಾಮಿಯು ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾ ಇಲ್ಲಿ ರಾರಾಜಿಸುತ್ತಿದ್ದಾರೆ. ಜಾತಕದಲ್ಲಿಯ ಸರ್ಪ ದೋಷ ನಿವಾರಣೆಗೆ ವೆಂಕಟರಮಣ ಸ್ವಾಮಿಯ ಸೇವೆ ಮಾಡುವುದರಿಂದ ಪರಿಹಾರ ಲಭಿಸುತ್ತದೆ. ಈ ದೇವಾಲಯದಲ್ಲಿ 4 ಗೋಪುರಗಳಿವೆ. ಪೂರ್ವದಲ್ಲಿರುವ ಗೋಪುರವು 108 ಅಡಿ ಎತ್ತರವಿದೆ. ಈ ದೇವಸ್ಥಾನದ ಹತ್ತಿರ 600 ವರ್ಷಗಳ ಹಿಂದಿನ ಕಾಲದ ಆಲದ ಮರವಿದೆ. ಈ ಆಲದ ಮರವು ಸರ್ಪಾಕಾರದಲ್ಲಿ ಬೇರುಗಳನ್ನು ಹೊಂದಿರುವುದು ಒಂದು ವಿಸ್ಮಯದ ಸಂಗತಿಯಾಗಿದೆ. ದೇವಾಲಯದ ಮುಂದೆ ಬೃಹತ್ತಾಕಾರದ ಆಂಜನೇಯ ಮೂರ್ತಿ ಹಾಗೂ ಸಪ್ತಮಾತೃಕೆಯರನ್ನು ಕಾಣಬಹುದು.
ಈ ದೇವಸ್ಥಾನದಲ್ಲಿ ಮದುವೆ, ನಿಶ್ಚಿತಾರ್ಥ ಹೀಗೆ ಹಲವಾರು ಶುಭ ಸಮಾರಂಭಗಳು ನಡೆಯುತ್ತದೆ. ಬರೀ ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹೀಗೆ ಹಲವಾರು ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳು ಗಡಿದಂ ಕ್ಷೇತ್ರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಪಡೆದು ಪುನೀತರಾಗುತ್ತಾರೆ.