Uncategorized

ಮುಂಡ್ಕೂರು ದುರ್ಗಾಪರಮೇಶ್ವರಿ ದೇವಾಲಯದ ಬಗ್ಗೆ ಕಿರು ಪರಿಚಯ

ಕರ್ನಾಟಕ ರಾಜ್ಯದಲ್ಲಿ ಹಲವಾರು ದುರ್ಗಾಪರಮೇಶ್ವರಿ ದೇವಸ್ಥಾನಗಳು ನೋಡಲು ಸಿಗುತ್ತದೆ. ಸಪ್ತಮಾತೃಕೆಯರ ದೇವಿಯಲ್ಲಿ ಪ್ರಮುಖವಾಗಿರುವ ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳೋಣ ಬನ್ನಿ.

ಮುಂಡ್ಕೂರು ಎಂಬುದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಾಂಭವಿ ನದಿಯ ತಟದಲ್ಲಿರುವ ಒಂದು ಸುಂದರವಾದ ಗ್ರಾಮ. ಈ ಗ್ರಾಮವು ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯದಿಂದ ಪ್ರಖ್ಯಾತಿಯನ್ನು ಪಡೆದು ಕೊಂಡಿದೆ. ಉಡುಪಿ ಜಿಲ್ಲೆಯ ಪ್ರಾಚೀನವಾದ ದೇವಸ್ಥಾನಗಳ ಪಟ್ಟಿಯಲ್ಲಿ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಾಲಯವೂ ಸೇರಿದೆ. ಈ ದೇವಸ್ಥಾನದ ಸುತ್ತ ನಾಲ್ಕು ಭಾಗದಲ್ಲೂ ಶಿವನ ಆಲಯವಿರುವುದು ವಿಶೇಷವಾದ ಸಂಗತಿ.


ಸ್ಥಳ ಪುರಾಣದ ಪ್ರಕಾರ ಮುಂಡ್ಕೂರು ಅಲ್ಲಿ ಮುಂಡಾಸುರ ಎಂಬ ರಾಕ್ಷಸನನ್ನು ದುರ್ಗಾಪರಮೇಶ್ವರಿ ದೇವಿಯು ಸಂಹರಿಸಿದ್ದಾರೆ, ಆದ್ದರಿಂದ ಈ ಗ್ರಾಮಕ್ಕೆ ಮುಂಡ್ಕೂರು ಎಂಬ ಹೆಸರು ಬಂದಿದೆ. ತದನಂತರ ಈ ಸ್ಥಳದ ಮಹಿಮೆಯನ್ನು ಅರಿತು ಭಾರ್ಗವ ಮಹರ್ಷಿಗಳು ಮುಂಡ್ಕೂರು ಅಲ್ಲಿ ದುರ್ಗಾಪರಮೇಶ್ವರಿ ದೇವಿಯ ವಿಗ್ರಹವನ್ನು ಪಕ್ಷಿಮ ಮುಖವಾಗಿ ಪ್ರತಿಷ್ಠಾಪಿಸುತ್ತಾರೆ. ಈ ದುರ್ಗಾ ಪರಮೇಶ್ವರಿ ದೇವಿಯು ಉಡುಪಿ ಜಿಲ್ಲೆಯ ಹಲವಾರು ಬ್ರಾಹ್ಮಣರ ಕುಟುಂಬಗಳಿಗೆ ಕುಲದೇವರಾಗಿದ್ದಾರೆ.

ಮುಂಡ್ಕೂರ್ ಗ್ರಾಮವನ್ನು ಆಳುತ್ತಿದ್ದ ವೀರವರ್ಮ ಎಂಬ ರಾಜನು ದೇವರ ವಿಗ್ರಹದ ಕೆಳಗೆ ಇದ್ದ ಅಪಾರ ಸಂಪತ್ತನ್ನು ದೋಚಲು ಮೂರ್ತಿಯನ್ನು ಅಲುಗಾಡಿಸಿ ಸಂಪತ್ತನ್ನೆಲ್ಲ ಲೂಟಿಮಾಡಿ ತದನಂತರ ಅಮ್ಮನವರ ವಿಗ್ರಹವನ್ನು ಪೂರ್ವಾಭಿಮುಖವಾಗಿ ಪ್ರತಿಷ್ಟಾಪಿಸುತ್ತಾನೆ. ಕೆಟ್ಟ ಚಟಗಳಿಂದ ತನ್ನ ಅಪಾರ ಸಂಪತ್ತನ್ನು ನಷ್ಟ ಮಾಡಿಕೊಂಡು ತದನಂತರ ಪ್ರಜೆಗಳ ಹತ್ತಿರ ಲೂಟಿ ಮಾಡಲು ಪ್ರಾರಂಭ ಮಾಡುತ್ತಾನೆ. ಕಾಂತಬಾರೆ ಮತ್ತು ಭೂತಬಾರೆ ಎಂಬ ಅವಳಿ ಸಹೋದರರಿಗೆ ದುರ್ಗಾಪರಮೇಶ್ವರಿ ದೇವಿಯು ಖಡ್ಗವನ್ನು ನೀಡುತ್ತಾರೆ. ಈ ಸಹೋದರರು ದುಷ್ಟ ರಾಜನನ್ನು ಸಂಹರಿಸಿ ಮೂಡಬಿದರೆಯ ಚೌಡರ ಆಡಳಿತಕ್ಕೆ ಒಪ್ಪಿಸುತ್ತಾರೆ.

ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ವಿಗ್ರಹ ಎರಡೂವರೆ ಅಡಿ ಉದ್ದವಿದ್ದು ನಿಂತ ಭಂಗಿಯಲ್ಲಿದೆ. ಈ ದೇವಿಯ ಮುಖದಲ್ಲಿ ಅಪಾರವಾದ ತೇಜಸ್ಸು ಕಂಡುಬರುತ್ತದೆ. ಮುಂಡ್ಕೂರು ದುರ್ಗಾಪರಮೇಶ್ವರಿ ದೇವಿಗೆ ಮಲ್ಲಿಗೆ ಹೂವು ಎಂದರೆ ಅಪಾರ ಪ್ರೀತಿ ಆದ್ದರಿಂದ ಈ ದೇವಿಗೆ ಮಲ್ಲಿಗೆ ಹೂವನ್ನು ಅರ್ಪಿಸಿದರೆ ಯಾವುದೇ ಕೋರಿಕೆಗಳಿದ್ದರೂ ಅವು ನೆರವೇರುತ್ತದೆ.
ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ವಾರ್ಷಿಕ ಮಹೋತ್ಸವ ಜಾತ್ರೆ ಜರುಗುತ್ತದೆ, ಆ ಸಮಯದಲ್ಲಿ ಅಪಾರವಾದ ಭಕ್ತಾದಿಗಳು ಇಲ್ಲಿಗೆ ಬಂದು ದೇವಿಯ ದರ್ಶನವನ್ನು ಪಡೆದುಕೊಳ್ಳುತ್ತಾರೆ.

admin

Share
Published by
admin

Recent Posts

ದಿನಭವಿಷ್ಯ18 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

1 week ago

ದಿನ ಭವಿಷ್ಯ14-12-2024

ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

2 weeks ago

ದಿನಭವಿಷ್ಯ 01 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

4 weeks ago

Dina Bhavishya | 22 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…

1 month ago

Dina Bhavishya | 21 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…

1 month ago

ದಿನ ಭವಿಷ್ಯ Dina Bhavishya | 20 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

1 month ago