ಗುಹ್ಯಾ ಅಗಸ್ತ್ಯೇಶ್ವರ ಶಿವಲಿಂಗದ ಬಗ್ಗೆ ಕಿರು-ಪರಿಚಯ.

ಜ್ಯೋತಿಷ್ಯ

ಭಾರತೀಯ ಹಿಂದೂ ಪುರಾಣಗಳಲ್ಲಿ ಪ್ರಾರ್ಥನೆ ಮಾಡುವ 7 ಪುಣ್ಯನದಿಗಳಲ್ಲಿ ಕಾವೇರಿಯೂ ಸಹ ಪ್ರಮುಖವಾಗಿದೆ. ನಮ್ಮ ದೇಶದಲ್ಲಿ ಗಂಗಾನದಿಯನ್ನು ಪವಿತ್ರ ನದಿ ಎಂದು ಹೇಗೆ ವರ್ಣಿಸುತ್ತಾರೋ ಅದೇ ರೀತಿ ದಕ್ಷಿಣದಲ್ಲಿ ಕಾವೇರಿ ನದಿಯನ್ನು ಪುಣ್ಯನದಿ ಎಂದು ವರ್ಣಿಸಲಾಗುತ್ತದೆ. ಕಾವೇರಿ ನದಿಯನ್ನು ದಕ್ಷಿಣ ಗಂಗೆಯೆಂದು ಕೂಡ ಕರೆಯಲಾಗುತ್ತದೆ.ಕಾವೇರಿ ನದಿಯು ಹರಿಯುವ ಸ್ಥಳದಲೆಲ್ಲ ಹಲವಾರು ಪುಣ್ಯಕ್ಷೇತ್ರಗಳನ್ನು ಸೃಷ್ಟಿ ಮಾಡಿದೆ. ಆ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಅಗಸ್ತ್ಯೇಶ್ವರ ಪುಣ್ಯಕ್ಷೇತ್ರದ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳೋಣ ಬನ್ನಿ.

ಈ ಕ್ಷೇತ್ರಕ್ಕೆ ಗುಹ್ಯಾ ಅಗಸ್ತ್ಯೇಶ್ವರ ಎಂಬ ಹೆಸರು ಬರಲು ಹಲವು ಕಾರಣಗಳನ್ನು ಅಲ್ಲಿಯ ಸ್ಥಳೀಯರು ತಿಳಿಸಿದ್ದಾರೆ. ಗುಹ್ಯ ಎಂದರೆ ಗುಟ್ಟು. ಭಗವಂತನಾದ ಮಹಾವಿಷ್ಣು ಈ ಕ್ಷೇತ್ರದಲ್ಲಿ ಗುಟ್ಟಾಗಿ ಅಡಗಿಕೊಂಡಿದ್ದರಿಂದ ಈ ಕ್ಷೇತ್ರಕ್ಕೆ ಗುಹ್ಯ ಎಂಬ ಹೆಸರು ಬಂದಿದೆಯೆಂದು ತಿಳಿಯುತ್ತದೆ. ಇನ್ನು ಕೆಲವರ ಪ್ರಕಾರ ಈ ಕ್ಷೇತ್ರದಲ್ಲಿರುವ ಗುಹೆಗಳಲ್ಲಿ ಋಷಿಮುನಿಗಳು ತಪಸ್ಸು ಮಾಡಿದ್ದ ಕಾರಣದಿಂದಾಗಿ ಈ ಹೆಸರು ಬಂದಿದೆ ಎಂದು ಉಲ್ಲೇಖಿಸಲಾಗಿದೆ.

ಈ ಕ್ಷೇತ್ರದಲ್ಲಿರುವ ಶಿವಲಿಂಗವನ್ನು ಅಗಸ್ತ್ಯ ಮಹರ್ಷಿಗಳೇ ಸ್ಥಾಪಿಸಿದ್ದಾರೆ ಎಂಬ ಉಲ್ಲೇಖವೂ ಇದೆ. ಕಾವೇರಿ ನದಿಯಲ್ಲಿ ಅಗಸ್ತ್ಯ ಮಹರ್ಷಿಗಳ ಕಮಂಡಲ ಕೆಳಗೆ ಬಿದ್ದು ಕಾವೇರಿ ನದಿ ಉಗಮವಾಗುತ್ತದೆ. ಹೀಗೆ ಉಗಮಿಸಿದ ಕಾವೇರಿ ನದಿ ಬಹಳ ರಭಸವಾಗಿ ಹರಿಯಲು ಪ್ರಾರಂಭಿಸುತ್ತದೆ. ಆ ಕಮಂಡಲವನ್ನು ಮತ್ತೆ ತೆಗೆದುಕೊಳ್ಳಲು ಮಹರ್ಷಿಗಳು ನದಿಯ ಹಿಂದೆ ಧಾವಿಸುತ್ತಾರೆ. ನದಿಯನ್ನು ಒಳಿಸಿಕೊಳ್ಳಲು ಮರಳಿನಿಂದ ಅಲ್ಲಲ್ಲಿ ಶಿವಲಿಂಗವನ್ನು ಮಾಡುತ್ತಾರೆ. ಆದರೆ ಕಾವೇರಿ ನದಿಯು ಇದ್ಯಾವುದಕ್ಕೂ ಮಣಿಯದೆ ಮುಂದಕ್ಕೆ ಸಾಗುತ್ತಾಳೆ.

ಗುಹೆಗೆ ಆಗಮಿಸಿದ ಅಗಸ್ತ್ಯ ಮಹರ್ಷಿಗಳು ಅಂತಿಮವಾಗಿ ಸಪ್ತ ಋಷಿಗಳನ್ನು ಪ್ರಾರ್ಥಿಸುತ್ತಾರೆ. ಸಪ್ತಋಷಿಗಳು ಪ್ರತ್ಯಕ್ಷರಾಗಿ ಕಾವೇರಿ ನದಿಯನ್ನು ನಿಲ್ಲುವಂತೆ ಕೋರಿಕೊಳ್ಳುತ್ತಾರೆ. ಸಪ್ತ ಋಷಿಗಳ ಕೋರಿಕೆಯನ್ನು ಒಪ್ಪಿಕೊಂಡ ಕಾವೇರಿ ನದಿಯು ಸ್ವಲ್ಪಕಾಲ ಗುಹ್ಯ ದಲ್ಲಿ ನೆಲೆಸುತ್ತಾಳೆ ಮತ್ತು ಆ ಸಂಧರ್ಬದಲ್ಲಿ ಸಂದಾನದ ಮಾತುಕತೆಯೂ ನಡೆಯುತ್ತದೆ. ಆದರೆ ಕಾವೇರಿ ನದಿಯು ನಾನು ಲೋಕಕಲ್ಯಾಣಕ್ಕಾಗಿ ಜನಿಸಿರುವುದರಿಂದ ತನ್ನನ್ನು ತಡೆಯಬೇಡಿ ಎಂದು ಮುಂದಕ್ಕೆ ಸಾಗುತ್ತಾಳೆ.

ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.

ತದನಂತರ ಅಗಸ್ತ್ಯ ಮಹರ್ಷಿಗಳು ಸಂಧಾನ ನಡೆದ ಜಾಗದಲ್ಲಿ ಶಿವಲಿಂಗವನ್ನು ನಿರ್ಮಿಸಿ ಪೂಜೆಯನ್ನು ಮಾಡುತ್ತಾರೆ. ಅದುವೇ ಗುಹ್ಯದ ಅಗಸ್ತ್ಯೇಶ್ವರ ಶಿವಲಿಂಗ. ದೀಪಾವಳಿಯ ಸಂದರ್ಭದಲ್ಲಿ ಗುಹ್ಯದ ಕ್ಷೇತ್ರದಲ್ಲಿ ತೀರ್ಥ ಸ್ನಾನ ಮಾಡಿದರೆ ಪಾಪಗಳೆಲ್ಲವು ಕಳೆದು ಹೋಗುತ್ತದೆ ಎಂಬ ನಂಬಿಕೆಯೂ ಇದೆ.

Leave a Reply

Your email address will not be published. Required fields are marked *