ಯಾವ ರಾಶಿಯವರಿಗೆ ಈ ತಿಂಗಳಲ್ಲಿ ರಾಜ ಯೋಗ ಪ್ರಾಪ್ತಿಯಾಗುತ್ತದೆ ಎಂಬುದು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಅಕ್ಟೋಬರ್ 1ನೇ ತಾರೀಖಿನಿಂದ 9 ನೇ ತಾರೀಖಿನವರೆಗೆ ಈ 8 ರಾಶಿಯವರಿಗೆ ಗಜಕೇಸರಿ ಯೋಗವಿದ್ದು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ನಮ್ಮ ಜೀವನದಲ್ಲಿ ನಡೆಯುವ ಒಳಿತು ಕೆಡಕುಗಳಿಗೆ ನಮ್ಮ ರಾಶಿಯಲ್ಲಿ ಆಗುವ ಬದಲಾವಣೆ ಕಾರಣ ಎಂದರೆ ತಪ್ಪಾಗಲಾರದು. ರಾಶಿಚಕ್ರದಲ್ಲಿ ಬದಲಾವಣೆಯಾದಂತೆ ನಮ್ಮ ಜೀವನದಲ್ಲೂ ಸಹ ಏರುಪೇರು ಆಗುತ್ತದೆ. ರಾಶಿಚಕ್ರದಲ್ಲಿ ಏರುಪೇರು ಆಗುವುದರಿಂದ ಕೆಲವೊಂದು ರಾಶಿಯವರಿಗೆ ಒಳ್ಳೆಯದಾದರೆ ಮತ್ತೆ ಕೆಲ ರಾಶಿಯವರಿಗೆ ಕೆಡಕು ಉಂಟಾಗುತ್ತದೆ. ಅಕ್ಟೋಬರ್ 1 ನೇ ತಾರೀಖಿನಿಂದ 9ನೇ ತಾರೀಖಿನವರೆಗೆ ಈ 8 ರಾಶಿಯವರಿಗೆ ರಾಜಯೋಗವಿದೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ ಗಜಕೇಸರಿಯೋಗ ಇರುವ ಆ 8 ರಾಶಿಗಳು ಯಾವುವು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ತುಲಾ ರಾಶಿ..ಈ ರಾಶಿಯವರಿಗೆ ಬಹಳಷ್ಟು ಧನ ಪ್ರಾಪ್ತಿಯಾಗುತ್ತದೆ ಮತ್ತು ಲಕ್ಷ್ಮೀದೇವಿ ಈ ರಾಶಿಯವರಿಗೆ ಒಲಿಯುತ್ತಾಳೆ. ವ್ಯಾಪಾರ ಹಾಗೂ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಉತ್ತಮವಾದ ಲಾಭ ದೊರಕಲಿದೆ. ನೀವು ಮಾಡುವ ಕೆಲಸದಲ್ಲಿ ಶ್ರದ್ಧೆಯಿದ್ದರೆ, ಪ್ರಾಮಾಣಿಕತೆ ಇದ್ದರೆ ತುಂಬಾ ಎತ್ತರಕ್ಕೆ ಬೆಳೆಯುತ್ತೀರ.

ಮಿಥುನ ರಾಶಿ..ಈ ರಾಶಿಯವರಿಗೆ ಈ ಹಿಂದಿನವರಗೆ ವ್ಯಾಪಾರದಲ್ಲಿ ಸಿಗದ ಲಾಭವು ಮುಂದಿನ ದಿನಗಳಲ್ಲಿ ದೊರಕಲಿದೆ. ನೀವು ತೆಗೆದುಕೊಳ್ಳುವ ಒಂದು ನಿರ್ಧಾರದಿಂದ ನಿಮ್ಮ ಜೀವನವೇ ಬದಲಾಗುತ್ತದೆ, ಆದ್ದರಿಂದ ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾ ಎಚ್ಚರದಿಂದ ಇದ್ದರೆ ಒಳಿತು.

ಸಿಂಹ ರಾಶಿ..ಈ ರಾಶಿಯವರಿಗೆ ಈಗ ಉತ್ತಮವಾದ ಸಮಯ ಬಂದಿದೆ, ಆದ್ದರಿಂದ ನಿಮಗೆ ಸಿಗುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಮತ್ತು ಕೋಪ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿಕೊಂಡರೆ ಅಧಿಕವಾದ ಲಾಭವನ್ನು ಪಡೆದುಕೊಳ್ಳಬಹುದು.

ವೃಷಿಕ ರಾಶಿ ಮತ್ತು ಮೀನ ರಾಶಿ..ಈ ಎರಡು ರಾಶಿಯವರಿಗೆ ಉತ್ತಮವಾದ ಧನ ಲಾಭವಾಗಲಿದೆ. ಒಂದು ವೇಳೆ ವ್ಯವಸಾಯದ ಕೆಲಸ ಮಾಡುತ್ತಿದ್ದರೆ ಈ ತಿಂಗಳು ಉತ್ತಮವಾದ ಲಾಭವನ್ನು ಗಳಿಸಬಹುದು. ಆದರೆ ಮುಖ್ಯವಾಗಿ ಆರೋಗ್ಯದ ಕಡೆ ಗಮನಹರಿಸುವುದು ಒಳ್ಳೆಯದು.

ವೃಷಭ ರಾಶಿ ಮತ್ತು ಕಟಕ ರಾಶಿ..ಈ ರಾಶಿಯವರಿಗೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಹೆಚ್ಚಾಗಿದೆ ಮತ್ತು ಈಗ ಮಾಡುತ್ತಿರುವ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆಯೂ ಇದೆ. ಈ ರಾಶಿಯವರು ಬಡವರಿಗೆ ಸಹಾಯವನ್ನು ಮಾಡಿದರೆ ಅದರ ಪ್ರತಿಫಲವೂ ಮುಂದಿನ ದಿನಗಳಲ್ಲಿ ಸಿಗುತ್ತದೆ.

ಕನ್ಯಾ ರಾಶಿ..ಈ ರಾಶಿಯವರು ಇಲ್ಲಿಯವರೆಗೆ ಮಹಿಳೆಯರಿಂದ ತುಂಬಾ ಕಷ್ಟವನ್ನು ಪಟ್ಟಿರುತ್ತಾರೆ, ಆದರೆ ಆ ಕಷ್ಟಗಳೆಲ್ಲ ಇಂದು ಮುಗಿದು ಸಂತೋಷವಾದ ಜೀವನವನ್ನು ನಡೆಸುವ ಕಾಲ ಬಂದಿದೆ. ಆದಷ್ಟು ಮಹಿಳೆಯರಿಗೆ ಹಣವನ್ನು ಖರ್ಚು ಮಾಡುವುದನ್ನು ಕಡಿಮೆ ಮಾಡಿದರೆ ಈ ರಾಶಿಯವರಿಗೆ ಒಳ್ಳೆಯದು.

Leave a Reply

Your email address will not be published. Required fields are marked *