ಉದ್ಯೋಗದಲ್ಲಿ ಬಡ್ತಿ ಸಿಗಬೇಕೆಂದರೆ ಏನು ಮಾಡಬೇಕೆಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಪ್ರತಿಯೊಬ್ಬರಿಗೂ ತಾವು ಮಾಡುವ ಕೆಲಸದಲ್ಲಿ ಉನ್ನತಿ ದೊರಕಬೇಕು ಹಾಗೂ ಬಡ್ತಿ ಸಿಗಬೇಕೆಂಬ ಆಸೆ ಇದ್ದೇ ಇರುತ್ತದೆ. ಆದ್ದರಿಂದ ಉದ್ಯೋಗದಲ್ಲಿ ಬಡ್ತಿ ಸಿಗಬೇಕೆಂದರೆ ಯಾವ ರೀತಿಯ ಪೂಜೆಯನ್ನು ಮಾಡಿದರೆ ಬಡ್ತಿ ದೊರಕುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಗೋಮತಿ ಚಕ್ರವು ಸಮುದ್ರದ ಪ್ರಾಂತ್ಯದಲ್ಲಿ ಸಿಗುವ ವಸ್ತುವಾಗಿದೆ. ಸಮುದ್ರದ ಪ್ರಾಂತ್ಯದಲ್ಲಿ ಸಿಗುವ ಕಾರಣದಿಂದಾಗಿ ಗೋಮತಿ ಚಕ್ರವು ಲಕ್ಷ್ಮಿ ದೇವಿಗೆ ಪ್ರಿಯವಾದದ್ದು. ಮೊದಲಿಗೆ ಮೂರು ಗೋಮತಿ ಚಕ್ರವನ್ನು ತೆಗೆದುಕೊಂಡು ಬೆಳ್ಳಿಯಿಂದ ಕೋಟಿಂಗ್ ಮಾಡಿ ಲಾಕೆಟ್ ಮಾಡಿಕೊಂಡು ಇಟ್ಟುಕೊಳ್ಳಬೇಕು.

ಶುಕ್ರವಾರದ ದಿನದಂದು ದೇವರಕೋಣೆಯಲ್ಲಿ ಲಕ್ಷ್ಮೀದೇವಿಯ ಚಿತ್ರಪಟದ ಮುಂದೆ ಗೋಮತಿ ಚಕ್ರವನ್ನು ಇಟ್ಟು ದೀಪವನ್ನು ಹಚ್ಚಿ ಅರಿಶಿನ-ಕುಂಕುಮವನ್ನು ಹಾಕಿ ನೈವೇದ್ಯವನ್ನು ಸಮರ್ಪಣೆ ಮಾಡಿ ತದನಂತರ ಪೂಜೆಯನ್ನು ಮಾಡಿ ಗೋಮತಿ ಚಕ್ರದಿಂದ ಮಾಡಲ್ಪಟ್ಟ ಡಾಲರ್ ಅಥವಾ ರಾಕೆಟ್ ಅನ್ನು ಧರಿಸಿಕೊಳ್ಳಬೇಕು.

ಗೋಮತಿ ಚಕ್ರದಿಂದ ಮಾಡಿದ ಹಾರವನ್ನು ಅಥವಾ ರಾಕೆಟ್ ಅನ್ನು ಮಾಂಸಹಾರವನ್ನು ಸೇವಿಸಿದ ದಿನ ಹಾಕಿಕೊಳ್ಳಬಾರದು. ರಾತ್ರಿಯ ಸಮಯದಲ್ಲಿ ಮಲಗುವಾಗ ಗೋಮತಿ ಚಕ್ರದಿಂದ ಮಾಡಿದ ಸರವನ್ನು ತೆಗೆದಿಟ್ಟು ಮಲಗಬೇಕು. ಶುಕ್ರವಾರದ ದಿನ ಹಾಲಿನಿಂದ ಮಾಡಿದ ಪದಾರ್ಥವನ್ನು ಅಥವಾ ಅನ್ನದಿಂದ ಮಾಡಿದ ಆಹಾರವನ್ನು ಬುದ್ದಿಮಾಂದ್ಯ ಮಕ್ಕಳಿಗೆ ಅಥವಾ ಕಡುಬಡವರಿಗೆ ಕೊಡುವುದರಿಂದ ಕಾರ್ಯವು ಸಂಪೂರ್ಣವಾಗುತ್ತದೆ.ಈ ರೀತಿಯಾಗಿ ಮಾಡುವುದರಿಂದ ನಾವು ಮಾಡುವ ಕೆಲಸದಲ್ಲಿ ಸುಲಭವಾಗಿ ಬಡ್ತಿಯನ್ನು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *