ಮಹಾಲಯ ಅಮಾವಾಸ್ಯೆ ಅಥವಾ ಪಿತೃಪಕ್ಷದ ದಿನದಂದು ಯಾವ ಪ್ರಾಣಿಗಳಿಗೆ ಆಹಾರ ನೀಡಲಾಗುತ್ತದೆ ಗೊತ್ತೇ ನಿಮಗೆ ?

ಜ್ಯೋತಿಷ್ಯ

ಅಕ್ಟೋಬರ್ 6 ವಿಶೇಷವಾದ ಮಹಾಲಯ ಅಮಾವಾಸ್ಯೆ ಮತ್ತು ಸರ್ವಪಿತೃ ಅಮಾವಾಸ್ಯೆ ಎಂದು ಕೂಡ ಕರೆಯಲಾಗುತ್ತದೆ. ಬಹಳ ಶಕ್ತಿಶಾಲಿಯಾದ ಅಮಾವಾಸ್ಯೆ ದಿನ ಪೂಜಾ ವಿಧಿವಿಧಾನಗಳು ಯಾವ ರೀತಿ ಇರಬೇಕು ಮತ್ತು ಇದರಿಂದ ಸಿಗುವ ಪ್ರಯೋಜನಗಳು ಏನು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಭಾದ್ರಪದ ಮಾಸದ ಕೃಷ್ಣ ಅಮಾವಾಸ್ಯೆ ದಿನದಂದು ಸರ್ವಪಿತೃ ಅಮವಾಸ್ಯೆ,ಮಹಾಲಯ ಅಮವಾಸ್ಯೆ ಎಂದು ಕೂಡ ಹೇಳಲಾಗುತ್ತದೆ. ಆ ದಿನ ಶ್ರಾದ್ಧ, ತರ್ಪಣ, ಪಿಂಡ ದಾನ ಹೀಗೆ ಇತ್ಯಾದಿ ಕೆಲಸಗಳನ್ನು ಮಾಡಿದ ನಂತರ ಆಹಾರವನ್ನು ನೀಡುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ. ಈ ವರ್ಷ ಅಕ್ಟೋಬರ್ 6 ರಂದು ಸರ್ವಪಿತೃ ಅಮವಾಸ್ಯೆ ಆಚರಿಸಲಾಗುತ್ತದೆ. ಈ ದಿನ ಪಿತೃಗಳನ್ನು ನರಕದಿಂದ ರಕ್ಷಿಸುವ ಕಾರ್ಯ ಎಂದು ಶಾಸ್ತ್ರಗಳು ಹೇಳುತ್ತವೆ.

ಈ ದಿನ ಮಾಡುವ ಕೆಲಸದಿಂದ ಮಗನನ್ನು ಪಿತೃ ದೋಷದಿಂದ ಮುಕ್ತಗೊಳಿಸುತ್ತದೆ. ಈ ದಿನ ಗೋವು ಬಲಿ, ಶ್ವಾನ ಬಲಿ, ಕಾಗೆ ಬಲಿ ಹೀಗೆ ಎಲ್ಲಾ ಪ್ರಾಣಿಗಳಿಗೆ ಆಹಾರವನ್ನು ನೀಡಬೇಕಾಗುತ್ತದೆ. ಈ ಪ್ರಾಣಿಗಳು ಆಹಾರವನ್ನು ಸ್ವೀಕರಿಸಿದರೆ ಪಿತೃಗಳು ತೃಪ್ತಿಯಾಗುತ್ತಾರೆ ಎಂಬ ನಂಬಿಕೆ ಇದೆ. ತದನಂತರ ಬ್ರಾಹ್ಮಣರಿಗೆ ಆಹಾರವನ್ನು ನೀಡಲಾಗುತ್ತದೆ. ಈ ದಿನ ಎಲ್ಲರಿಗೂ ಬಟ್ಟೆ ಹಾಗೂ ದಕ್ಷಿಣೆಯನ್ನು ನೀಡಲಾಗುತ್ತದೆ. ಈ ರೀತಿ ಮಾಡುವುದರಿಂದ ಜೀವನದಲ್ಲಿರುವ ತೊಂದರೆಗಳು ದೂರವಾಗುತ್ತದೆ.

ಬುಧವಾರದ ದಿನ ಮನೆಯಲ್ಲಿ ಮಾಡಿದ ಆಹಾರವನ್ನು ಪ್ರಾಣಿಗಳಿಗೆ ನೀಡುವುದರಿಂದ ಎಲ್ಲವೂ ಕೂಡ ಒಳ್ಳೆಯದಾಗುತ್ತದೆ ಮತ್ತು ಹಿರಿಯರಿಂದಲೂ ಆಶೀರ್ವಾದ ದೊರಕುತ್ತದೆ. ಬಹುಮುಖ್ಯವಾಗಿ ಅರಳಿ ಮರಕ್ಕೆ ಅರ್ಪಿಸುವುದರಿಂದ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು. ಅರಳಿ ಮರಕ್ಕೆ ಆಹಾರವನ್ನು ಅರ್ಪಿಸಿದ ನಂತರ ಶ್ರದ್ಧಾಭಕ್ತಿಯಿಂದ ಪೂಜೆಯನ್ನು ಸಲ್ಲಿಸಬೇಕು. ಒಂದು ಪಾತ್ರೆಯಲ್ಲಿ ಹಾಲು,ಉಪ್ಪು,ನೀರು,ಎಳ್ಳು , ಬಾರ್ಲಿ ಮತ್ತು ಜೇನುತುಪ್ಪ ಇದನ್ನು ಮಿಶ್ರಣಮಾಡಿ ಅರಳಿಮರದ ಬೇರಿಗೆ ಅರ್ಪಿಸಬೇಕು. ಅರ್ಪಿಸಿದ ನಂತರ ಭಗವಂತನಾದ ವಿಷ್ಣು ಹಾಗೂ ಶ್ರೀಕೃಷ್ಣನನ್ನು ಸ್ಮರಿಸಬೇಕು ಇದರಿಂದ ಅವರು ಸಂತುಷ್ಟರಾಗುತ್ತಾರೆ. ನಂತರ ಮನೆಯ ಮುಖ್ಯ ದ್ವಾರದ ಬಾಗಿಲ ಬಳಿ ಎಡಕ್ಕೆ ಹಾಗೂ ಬಲಕ್ಕೆ ಒಂದು ದೀಪವನ್ನು ಹಚ್ಚಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಹಿರಿಯರ ಆಶೀರ್ವಾದ ದೊರಕುತ್ತದೆ.

Leave a Reply

Your email address will not be published. Required fields are marked *