ಅಂಗೈಯಲ್ಲಿ ಯಾವ ಚಿಹ್ನೆ ಇದ್ದರೆ ಏನನ್ನು ಸೂಚಿಸುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಭಾರತೀಯ ಸಂಸ್ಕೃತಿಯಲ್ಲಿ ಭವಿಷ್ಯವನ್ನು ತಿಳಿದುಕೊಳ್ಳಲು ಹಲವಾರು ವಿಧಗಳನ್ನು ತಿಳಿಸಲಾಗಿದೆ, ಅದರಲ್ಲಿ ಸಾಮುದ್ರಿಕ ಶಾಸ್ತ್ರವು ಭವಿಷ್ಯವನ್ನು ನೋಡುವುದರಲ್ಲಿ ಒಂದು ಪ್ರಾಚೀನ ಕಾಲದ ವೈಜ್ಞಾನಿಕ ಪದ್ಧತಿಯಾಗಿದೆ. ಲಕ್ಷ್ಮೀದೇವಿ ತನ್ನ ಪತಿಯಾದ ವಿಷ್ಣುವಿಗೆ ಹೇಳಿದ ಶಾಸ್ತ್ರವಾಗಿದೆ ಸಾಮುದ್ರಿಕ ಶಾಸ್ತ್ರ. ದೇಹದಲ್ಲಿ ಮತ್ತು ಕೈಯಲ್ಲಿರುವ ರೇಖೆಗಳ ಮೂಲಕ ಈ ಶಾಸ್ತ್ರ ವಿಕಾಸವಾಗಿದೆ. ಹಾಗಾದರೆ ಅಂಗೈಯಲ್ಲಿರುವ ರೇಖೆಗಳು ಏನನ್ನು ಸೂಚಿಸುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

ಪಂಡಿತ್ ದ್ವಾರಕನಾಥ್ ಶಾಸ್ತ್ರೀ,  ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ,ತಾಂಬೂಲಪ್ರಶ್,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707.

ಅಂಗೈಯಲ್ಲಿ ಶಂಕದ ಚಿತ್ರ ಇದ್ದರೆ ವಿಶೇಷವಾದ ಧನಪ್ರಾಪ್ತಿಯನ್ನು ಸೂಚಿಸುತ್ತದೆ ಹಾಗೂ ಹಣಕಾಸಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಯಶಸ್ಸನ್ನು ಕಾಣುತ್ತೀರಾ ಎಂದು ಹೇಳಲಾಗುತ್ತದೆ. ಅಂದುಕೊಂಡ ಕೆಲಸವನ್ನು ಯಶಸ್ವಿಯಾಗಿ ಸಂಪೂರ್ಣ ಮಾಡುತ್ತಾರೆ ಶಂಕದ ಚಿಹ್ನೆ ಇದ್ದವರು ಎಂದು ಉಲ್ಲೇಖಿಸಲಾಗಿದೆ.

ಒಂದು ವೇಳೆ ಅಂಗೈಯಲ್ಲಿ ಮೀನಿನ ಆಕಾರದ ಚಿಹ್ನೆ ಇದ್ದರೆ ಅಂತವರು ತುಂಬ ಅದೃಷ್ಟಶಾಲಿಯಾಗಿರುತ್ತಾರೆ. ಅದೇ ರೀತಿ ಅಂಗೈಯಲ್ಲಿ ಮಂದಿರದ ಚಿಹ್ನೆ ಇದ್ದರೆ ಅವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಹಾಗೂ ಗೌರವ ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಅಂಗೈಯಲ್ಲಿ ಸ್ವಸ್ತಿಕ್ ಚಿಹ್ನೆ ಇದ್ದರೆ ಅವರಿಗೆ ದೇವರ ಮೇಲೆ ಅಪಾರವಾದ ನಂಬಿಕೆ ಇರುತ್ತದೆ. ಸ್ವಸ್ತಿಕ್ ಚಿಹ್ನೆ ಇದ್ದವರನ್ನು ದೇವರು ಕಷ್ಟ ಕಾಲದಲ್ಲಿ ಕೈ ಹಿಡಿಯುತ್ತಾನೆ ಎಂದು ಹೇಳಲಾಗುತ್ತದೆ.

ಒಂದು ವೇಳೆ ಅನಾಮಿಕ ಬೆರಳು ಉದ್ದವಿದ್ದರೆ ಅವರ ಜಾತಕದಲ್ಲಿ ಸೂರ್ಯದೇವನು ತುಂಬಾ ಶ್ರೇಷ್ಠ ಆಗಿರುತ್ತಾರೆ. ಕೈಯಿನ ಮಧ್ಯದ ಬೆರಳು ಎಲ್ಲಾ ಬೆರಳುಗಳಿಂದ ಉದ್ದವಿದ್ದರೆ ಅಂತ ವ್ಯಕ್ತಿಯು ತುಂಬಾ ಕಷ್ಟ ಪಟ್ಟು ಜೀವನದಲ್ಲಿ ಮೇಲೆ ಬರುತ್ತಾರೆ ಹಾಗೂ ತಮ್ಮ ಶ್ರಮದಿಂದಲೇ ಹಣವನ್ನು ಸಂಪಾದನೆ ಮಾಡುತ್ತಾರೆ. ಒಂದು ವೇಳೆ ಅಂಗೈಯ ಹೆಬ್ಬೆರಳು ತುಂಬಾ ಉದ್ದವಿದ್ದರೆ ಕಲೆಯ ಕ್ಷೇತ್ರದಲ್ಲಿ ಅದ್ಭುತವಾದ ಹೆಸರನ್ನು ಗಳಿಸುತ್ತಾರೆ.

ಅನಾಮಿಕ ಬೆರಳಿನಲ್ಲಿ ಅರ್ಧಚಂದ್ರಾಕೃತಿ ಇದ್ದರೆ ಸಮಾಜದಲ್ಲಿ ತುಂಬಾ ಗೌರವ ಪ್ರಾಪ್ತಿಯಾಗುತ್ತದೆ. ಮಧ್ಯದ ಬೆರಳಿನಲ್ಲಿ ಚಂದ್ರಾಕೃತಿ ಇದ್ದರೆ ವ್ಯಾಪಾರ ಹಾಗೂ ವ್ಯವಸಾಯದಲ್ಲಿ ಧನ ಪ್ರಾಪ್ತಿಯನ್ನು ಗಳಿಸುತ್ತಾರೆ. ಹೆಬ್ಬೆರಳಿನಲ್ಲಿ ಅರ್ಧ ಚಂದ್ರಾಕೃತಿ ಇದ್ದರೆ ನಾಯಕತ್ವದ ಗುಣಗಳು ಹೆಚ್ಚಾಗಿರುತ್ತದೆ ಮತ್ತು ಸಮಾಜದಲ್ಲಿ ಉತ್ತಮವಾದ ಗೌರವ ಪ್ರಾಪ್ತಿಯಾಗುತ್ತದೆ. ಕಿರುಬೆರಳಿನಲ್ಲಿ ಅರ್ಧಚಂದ್ರಾಕೃತಿ ಇದ್ದರೆ ಅಂತವರು ತುಂಬಾ ಅದೃಷ್ಟಶಾಲಿ ಆಗಿರುತ್ತಾರೆ ಹಾಗೂ ಜೀವನದಲ್ಲಿ ಯಾವುದೇ ಕಷ್ಟಗಳು ಬಂದರೂ ಅದರಿಂದ ಹೇಗೆ ಹೊರಬರಬೇಕು ಎಂಬುದು ಅವರಿಗೆ ತಿಳಿದಿರುತ್ತದೆ. ಒಂದು ವೇಳೆ ಎಲ್ಲಾ ಬೆರಳುಗಳಲ್ಲಿ ಅರ್ಧಚಂದ್ರಾಕೃತಿ ಇದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಲು ಬಹಳಷ್ಟು ಸಂಘರ್ಷವನ್ನು ಮಾಡಬೇಕಾಗುತ್ತದೆ. ಒಂದು ವೇಳೆ ಯಾವ ಬೆರಳಿನಲ್ಲೂ ಸಹ ಅರ್ಧಚಂದ್ರಾಕೃತಿ ಚಿಹ್ನೆ ಇಲ್ಲದಿದ್ದರೆ ಅಂಥವರು ಕೋಪದ ಸ್ವಭಾವ ಹೊಂದಿರುತ್ತಾರೆ ಮತ್ತು ತುಂಬಾ ಬುದ್ಧಿವಂತರು ಆಗಿರುತ್ತಾರೆ.

ಪಂಡಿತ್ ದ್ವಾರಕನಾಥ್ ಶಾಸ್ತ್ರೀ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ,ತಾಂಬೂಲಪ್ರಶ್,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707.

Leave a Reply

Your email address will not be published. Required fields are marked *