ಮಾಟ ಮಂತ್ರ ಮನೆಗೆ ತಗಳ ಬಾರದು ಎಂದರೆ ಏನು ಮಾಡಬೇಕು ಎಂಬುದು ಗೊತ್ತೇ ?

ಜ್ಯೋತಿಷ್ಯ

ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಮಾಟ ಮಂತ್ರ ಪ್ರಯೋಗವಾಗಿದ್ದರೆ ಹಾಗೂ ಕೆಟ್ಟ ದೃಷ್ಟಿ ಬಿದ್ದಿದ್ದರೆ ಅದನ್ನು ಹೋಗಲಾಡಿಸಿ ಮನೆಯಲ್ಲಿ ಶಾಂತಿ ಹಾಗೂ ನೆಮ್ಮದಿ ದೊರಕಬೇಕು ಎಂದರೆ ನಾವು ಹೇಳುವ ಈ ಸರಳ ತಂತ್ರವನ್ನು ಪ್ರಯೋಗ ಮಾಡಿದರೆ ಈ ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

ಈ ಚಿಕ್ಕ ಕೆಲಸವನ್ನು ಮಂಗಳವಾರ ಅಥವಾ ಶುಕ್ರವಾರ ಅಥವಾ ಅಮಾವಾಸ್ಯೆಯ ದಿನ ಅಥವಾ ಹುಣ್ಣಿಮೆಯ ದಿನ ಮಾಡಬೇಕು. ಮೊದಲಿಗೆ ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಸ್ವಚ್ಛವಾದ ಎರಡು ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು, ತದನಂತರ ನಿಂಬೆಹಣ್ಣನ್ನು ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡಬೇಕು.

ಪೂಜೆಯನ್ನು ಮಾಡಿದ ನಂತರ ಕಲ್ಲುಪ್ಪು ಹಾಗೂ ಅರಿಶಿನ-ಕುಂಕುಮವನ್ನು ತೆಗೆದುಕೊಳ್ಳಬೇಕು.
ತದನಂತರ ಎರಡು ನಿಂಬೆಹಣ್ಣನ್ನು ನಾಲ್ಕು ಭಾಗ ಆಗುವಂತೆ ಮುಕ್ಕಾಲು ಭಾಗ ಕಟ್ ಮಾಡಬೇಕು.

ನಿಂಬೆಹಣ್ಣನ್ನು 4 ಭಾಗ ಮಾಡಿದ ನಂತರ ನಿಂಬೆಹಣ್ಣಿನ ಒಳಗೆ ಕಲ್ಲುಪ್ಪನ್ನು ಹಾಕಬೇಕು. ಕಲ್ಲುಪ್ಪನ್ನು ಹಾಕಿದ ನಂತರ ಅರಿಶಿನ-ಕುಂಕುಮವನ್ನು ನಿಂಬೆಹಣ್ಣಿನ ಒಳಗೆ ಹಾಕಬೇಕು. ತದನಂತರ ಮನೆಯ ಹೊಸ್ತಿಲಿನ ಎರಡು ಭಾಗಕ್ಕೂ ಎರಡು ನಿಂಬೆಹಣ್ಣನ್ನು ಇಡಬೇಕು. ತದನಂತರ ಮರುದಿನ ಹೊಸ್ತಿಲಿನ ಮೇಲೆ ಇಟ್ಟಿದ್ದ ನಿಂಬೆಹಣ್ಣನ್ನು ತೆಗೆದುಕೊಂಡು ಹನ್ನೊಂದು ಬಾರಿ ಇಳಿ ತೆಗೆಯಬೇಕು.ಇಳಿ ತೆಗೆದ ನಂತರ ಆ ನಿಂಬೆಹಣ್ಣನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬರಬೇಕು. ಈ ರೀತಿಯಾಗಿ ಮಾಡಿದರೆ ಮನೆಗೆ ಯಾವುದೇ ಕಾರಣಕ್ಕೂ ಮಾಟ-ಮಂತ್ರ ಎಂಬುದು ತಗಲುವುದಿಲ್ಲ ಹಾಗೂ ಯಾವ ವ್ಯಕ್ತಿಯ ಕೆಟ್ಟದೃಷ್ಟಿಯೂ ಸಹ ಬೀಳುವುದಿಲ್ಲ.

Leave a Reply

Your email address will not be published. Required fields are marked *