ಯಾವ ಕಾರಣಕ್ಕೆ ದುರ್ಗಾ ಪಾರಾಯಣ ಹಾಗೂ ಸುದರ್ಶನ ಉಚ್ಚಾಟನ ಪೂಜೆ ಮಾಡಲಾಗುತ್ತದೆ ಗೊತ್ತೇ ನಿಮಗೆ ?

ಜ್ಯೋತಿಷ್ಯ

ವಾಮಾಚಾರ ಆಗಿರುವಂತಹ ಮನೆಯಲ್ಲಿ ಎಲ್ಲಾ ಸಂಕಷ್ಟಗಳು, ದರಿದ್ರಗಳು ನಿವಾರಣೆಯಾಗಲಿ ಎಂದು ವಿಶೇಷವಾಗಿ ದುರ್ಗಾ ಪಾರಾಯಣ, ಸುದರ್ಶನ ಉಚ್ಚಾಟನ ವಿಧಾನ ಮಾಡಲಾಗುತ್ತದೆ. ದುರ್ಗಾ ಪಾರಾಯಣ ಎಂದರೆ ಮನೆಯಲ್ಲಿರುವ ಎಲ್ಲರ ಹೆಸರ ಮೇಲೆ ದುರ್ಗ ಸ್ತಂಭನ ಮಾಡಿ ದುರ್ಗಾ ಪಾರಾಯಣ ಮಾಡುವಂತದ್ದು ವಿಧಾನ.

ದುರ್ಗಾ ಪಾರಾಯಣ ಮಾಡಿದ ನಂತರ ಸುದರ್ಶನ ಉಚ್ಚಾಟನ ವಿಧಾನ ಮಾಡಲಾಗುತ್ತದೆ. ಯಾವ ವ್ಯಕ್ತಿಗೆ ವಾಮಾಚಾರ ಆಗಿರುತ್ತದೆ ಆ ವ್ಯಕ್ತಿಯನ್ನು ಹೋಮದ ಕುಂಡದಲ್ಲಿ ಕೂರಿಸಿಕೊಂಡು ವಿಶೇಷವಾದ ಮಂತ್ರಗಳಿಂದ ಉಚ್ಛಾಟನೆ ಮಾಡಿ ಅದೇ ವ್ಯಕ್ತಿಗೆ ತೀರ್ಥ ಸ್ನಾನವನ್ನು ಮಾಡಿಸಿ ಮನೆಯ ಹೊಸ್ತಿಲಿನಿಂದ ಆಚೆ ಕೂರಿಸಿ ಸುದರ್ಶನ ಉಚ್ಚಾಟನ ವಿಧಾನ ಎಂದು ಮಾಡಲಾಗುತ್ತದೆ.

ಈ ಉಚ್ಚಾಟನೆಯನ್ನು ಮಾಡುವುದರಿಂದ ಇಡೀ ಮನೆಯ ವಾತಾವರಣ ಪರಿವರ್ತನೆಯಾಗುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ಆಗಿರುವಂತಹ ವಾಮಾಚಾರ, ದುಷ್ಟಶಕ್ತಿ ಹಾಗೂ ಕೆಟ್ಟದೃಷ್ಟಿ ಎಲ್ಲವೂ ನಿವಾರಣೆಯಾಗುತ್ತದೆ. ಈ ಪೂಜೆಯನ್ನು ಮಾಡಿದ ಕೆಲವು ನಿಮಿಷಗಳ ನಂತರ ವ್ಯಕ್ತಿಯ ಹಾವ, ಭಾವ, ವಿಚಾರ ಹೀಗೆ ಎಲ್ಲವೂ ಪರಿವರ್ತನೆಯಾಗುತ್ತದೆ.

ವಾಮಾಚಾರ ಆಗಿರುವಂತವರಿಗೆ ವಿಶಿಷ್ಟವಾಗಿ ಮನೆಯಲ್ಲಿ ನರಳುತ್ತಿದ್ದರೆ ಇದಕ್ಕೆಲ್ಲ ಸೂಕ್ತ ಪರಿಹಾರವೆಂದರೆ ದುರ್ಗಾ ಪಾರಾಯಣ ಹಾಗೂ ಸುದರ್ಶನ ಉಚ್ಚಾಟನ ಪೂಜಾ.ಈ ಪೂಜೆಯನ್ನು ಕೆಲವು ವಿಧಿವಿಧಾನಗಳಿಂದ ಮಾಡಬೇಕಾಗುತ್ತದೆ. ಈ ಪರಿಹಾರವನ್ನು ಮಾಡಿಕೊಂಡರೆ ಕೆಟ್ಟ ದೃಷ್ಟಿ,ದುಷ್ಟಶಕ್ತಿ ಹಾಗೂ ವಾಮಾಚಾರ ಹೀಗೆ ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *