ಮನೆಯಲ್ಲಿ ಈ ಸುಲಭ ಪರಿಹಾರವನ್ನು ಮಾಡಿದರೆ ದೌರ್ಭಾಗ್ಯ ದೂರವಾಗಿ ಸೌಭಾಗ್ಯ ದೊರೆಯುತ್ತದೆ

ಜ್ಯೋತಿಷ್ಯ

ಕೆಲವರು ಜೀವನದಲ್ಲಿ ಯಾವ ರೀತಿಯ ಸಮಸ್ಯೆಗಳು ಇರುತ್ತವೆ ಎಂದರೆ ಎಷ್ಟು ಶ್ರಮವಹಿಸಿ ಕೆಲಸವನ್ನು ಮಾಡಿದರೂ ಯಾವ ಕೆಲಸವೂ ಯಶಸ್ವಿಯಾಗುವುದಿಲ್ಲ. ಒಂದು ವೇಳೆ ಯಾವುದಾದರೂ ಹೊಸದಾದ ಕೆಲಸವನ್ನು ಮಾಡಲು ಪ್ರಾರಂಭಿಸಿದರೆ ಮಾಡುವ ಮೊದಲೇ ಸೋಲನ್ನು ಒಪ್ಪಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಈ ಒಂದು ಪ್ರಯೋಗವನ್ನು ಮಾಡಿದರೆ ನಿಮ್ಮ ಸಂಕಷ್ಟಗಳೆಲ್ಲ ದೂರವಾಗಿ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು.

ದೌರ್ಭಾಗ್ಯ ಎಂಬುದು ಒಂದು ಬಾರಿ ಬಂದರೆ ಎಲ್ಲವನ್ನು ನಾಶಮಾಡಿ ಬಿಡುತ್ತದೆ. ಆದರೆ ಯಾವ ಜಾಗದಲ್ಲಿ ಸೌಭಾಗ್ಯ ಎಂಬುದು ಇರುತ್ತದೆಯೋ ಅಲ್ಲಿ ಪ್ರೀತಿ, ಸುಖ, ಶಾಂತಿ, ನೆಮ್ಮದಿ ಇರುತ್ತದೆ. ಸಾಮಾನ್ಯವಾಗಿ ಈ ಕೆಲವೊಂದು ತೊಂದರೆಗಳು ಪಿತೃದೋಷದಿಂದ ಬರುತ್ತದೆ. ಪಿತೃ ದೋಷದ ಕಾರಣದಿಂದಾಗಿ ರಾಹು, ಕೇತುವಿನ ಗ್ರಹಗಳು ತೊಂದರೆಯನ್ನು ನೀಡಲು ಪ್ರಾರಂಭ ಮಾಡುತ್ತವೆ.

ಯಾರ ಜೀವನದಲ್ಲಿ ರಾಹು, ಕೇತುವಿನ ಪ್ರವೇಶವಾಗಿರುತ್ತದೆಯೋ ಅವರು ವ್ಯಸನಕ್ಕೆ ದಾಸರಾಗಿರುತ್ತಾರೆ. ಆದ್ದರಿಂದ ಈ ರೀತಿಯ ಎಲ್ಲ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕೆಂದರೆ ನಾವು ಹೇಳುವ ಪರಿಹಾರವನ್ನು ಮಾಡಿದರೆ ಪಿತೃ ದೋಷ, ರಾಹು, ಕೇತುವಿನ ದೋಷದಿಂದ ಮುಕ್ತಿ ಪಡೆದುಕೊಳ್ಳಬಹುದು.

ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಳ್ಳಬೇಕು ತದನಂತರ ರಾತ್ರಿ ಮಲಗುವ ಮುನ್ನ ಒಂದು ಚಮಚ ಸಕ್ಕರೆಯನ್ನು ಪಾತ್ರೆಯ ಒಳಗೆ ಹಾಕಬೇಕು. ಸಕ್ಕರೆಯನ್ನು ಪಾತ್ರೆಗೆ ಹಾಕಿದ ನಂತರ ನೀವು ಮಲಗುವ ತಲೆಯ ಭಾಗದ ಹತ್ತಿರ ಇಟ್ಟುಕೊಳ್ಳಬೇಕು. ಮುಂಜಾನೆ ಎದ್ದ ನಂತರ ಎರಡು ಕೈಗಳನ್ನು ಜೋಡಿಸಿ ದೇವರನ್ನು ಸ್ಮರಿಸಿಕೊಳ್ಳಬೇಕು, ತದನಂತರ ನಿಮ್ಮ ಎರಡು ಅಂಗೈಯನ್ನು ಮುಖಕ್ಕೆ ಸವರಿಕೊಳ್ಳಬೇಕು. ತದನಂತರ ಪಾತ್ರೆಯಲ್ಲಿ ಇಟ್ಟಿದ್ದ ಸಕ್ಕರೆಯನ್ನು ತೆಗೆದುಕೊಂಡು ಹೋಗಿ ಇರುವೆಗಳ ಗೂಡಿನ ಬಳಿ ಹಾಕಬೇಕು. ಈ ರೀತಿಯಾಗಿ ಪ್ರತಿನಿತ್ಯ 11 ದಿನದವರೆಗೂ ಮಾಡಬೇಕಾಗುತ್ತದೆ. ಈ ಪ್ರಯೋಗವನ್ನು ಮಾಡುವುದರಿಂದ ಪಿತೃಗಳ ವಿಶೇಷವಾದ ಆಶೀರ್ವಾದ ಹಾಗೆಯೇ ರಾಹು ಕೇತುವಿನ ಆಶೀರ್ವಾದವೂ ದೊರೆಯುತ್ತದೆ.

Leave a Reply

Your email address will not be published. Required fields are marked *