ಧನ ವೃದ್ಧಿ ಆಗಬೇಕೆಂದರೆ ಬೆರಳಿನ ಉಗುರನ್ನು ಏನು ಮಾಡಬೇಕು ಎಂಬುದು ತಿಳಿದಿದೆಯೆ ನಿಮಗೆ ?

ಜ್ಯೋತಿಷ್ಯ

ಭಗವಂತನಾದ ಮಹಾಶಿವನು ಈ ಬ್ರಹ್ಮಾಂಡದ ಗುರು ಕೂಡ ಆಗಿದ್ದಾರೆ, ಯಾವ ವ್ಯಕ್ತಿಯ ಮೇಲೆ ಭಗವಂತನಾದ ಮಹಾಶಿವನ ಕೈ ಇರುತ್ತದೆಯೋ ಅವರ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ ಹಾಗೂ ಇಂತಹ ವ್ಯಕ್ತಿಗಳು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ ಹಾಗೂ ಸುಖ-ಶಾಂತಿ ಹಾಗೂ ನೆಮ್ಮದಿಯಿಂದ ಜೀವನವನ್ನು ನಡೆಸುತ್ತಾರೆ.

ಕೆಲವರು ಬೆರಳಿನ ಉಗುರನ್ನು ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಕತ್ತರಿಸುತ್ತಾರೆ.ಆದರೆ ಬೆರಳಿನ ಉಗುರುಗಳಲ್ಲಿ ಶಕ್ತಿಗಳು ಅಡಗಿರುತ್ತವೆ ಎಂಬುದು ಬಹಳ ಕಡಿಮೆ ಜನರಿಗೆ ತಿಳಿದಿರುತ್ತದೆ. ತಂತ್ರಗಳಲ್ಲಿ ಬಟ್ಟೆಗಳು,ಕೂದಲು ಹಾಗೆ ಬೆರಳಿನ ಉಗುರುಗಳನ್ನು ಬಳಸಲಾಗುತ್ತದೆ. ಒಂದು ವೇಳೆ ಹಲವಾರು ದಿನಗಳಿಂದ ನಿಮ್ಮಲ್ಲಿ ಏನಾದರೂ ರೋಗವೂ ಕಾಡುತ್ತಿದ್ದರೆ ಹಾಗೂ ಅವುಗಳಿಂದ ಮುಕ್ತಿ ದೊರಕುತ್ತಿಲ್ಲ ಎಂದರೆ ಅಥವಾ ಶತ್ರುಗಳು ಪದೇಪದೇ ತೊಂದರೆಯನ್ನು ನೀಡುತ್ತಿದ್ದರೆ ಮತ್ತು ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಹೋದಾಗ ನಿಮಗೆ ಯಶಸ್ಸು ಎಂಬುದು ದೊರಕುತ್ತಿಲ್ಲವಾದರೆ ನಿಮ್ಮನ್ನು ನಕಾರಾತ್ಮಕ ಶಕ್ತಿಯು ಆವರಿಸಿಕೊಂಡಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ನಕಾರಾತ್ಮಕ ಶಕ್ತಿಯು ದೂರವಾಗ ಬೇಕೆಂದರೆ ರವಿವಾರದ ದಿನದಂದು ನಿಮ್ಮ ಬೆರಳುಗಳನ್ನು ಕತ್ತರಿಸಬೇಕು. ಬೆರಳಿನ ಉಗುರುಗಳನ್ನು ಮಂಗಳವಾರ ವಾಗಲಿ, ಗುರುವಾರ ವಾಗಲಿ ಮತ್ತು ಶನಿವಾರದ ದಿನದಂದು ಕತ್ತರಿಸಬಾರದು. ಒಂದು ವೇಳೆ ಈ ದಿನದಂದು ಬೆರಳಿನ ಉಗುರುಗಳನ್ನು ಕತ್ತರಿಸಿದರೆ ದೌರ್ಭಾಗ್ಯ ಎಂಬುದು ನಿಮ್ಮನ್ನು ಬೇಗನೆ ಆವರಿಸಿಕೊಳ್ಳುತ್ತದೆ. ಕೇವಲ ರವಿವಾರ ಹಾಗೂ ಬುಧವಾರದ ದಿನದಂದು ಉಗುರನ್ನು ಕತ್ತರಿಸಬಹುದು.

ಮೊದಲಿಗೆ ಎರಡು ಕೈಯಿಯ ಬೆರಳಿನ ಉಗುರುಗಳನ್ನು ಕತ್ತರಿಸಬೇಕು ತದನಂತರ ಎರಡು ಕಾಲಿನ ಬೆರಳಿನ ಉಗುರುಗಳನ್ನು ಕತ್ತರಿಸಬೇಕು. ಹೀಗೆ ರವಿವಾರ ದಿನದಂದು ಕತ್ತರಿಸಿದ ಉಗುರನ್ನು 41 ಬಾರಿ ನಿವಾಳಿಸಬೇಕು. ಈ ಪ್ರಯೋಗವನ್ನು ಸೂರ್ಯನು ಮುಳುಗುವ ಹೊತ್ತಿನಲ್ಲಿ ಮಾಡಬೇಕು. ತದನಂತರ ನಿವಾಳಿಸಿದ ಉಗುರನ್ನು ಬೆಂಕಿಯಲ್ಲಿ ಹಾಕಿ ಸುಟ್ಟುಬಿಡಬೇಕು.

ಈ ರೀತಿಯ ಪ್ರಯೋಗವನ್ನು ಮಾಡುವುದರಿಂದ ನಿಮಗಿರುವ ಶತ್ರುಗಳು ದೂರವಾಗುತ್ತಾರೆ ಹಾಗೂ ಬೆರಳಿನ ಉಗುರನ್ನು ಯಾವುದಾದರೂ ಸಸ್ಯದ ಕೆಳಗೆ ಅಥವಾ ಪಾಟ್ ಅಲ್ಲಿ ಹಾಕುವುದು ಉತ್ತಮ. ಈ ರೀತಿ ಮಾಡುವುದರಿಂದ ವ್ಯಾಪಾರದಲ್ಲಿ ಅಭಿವೃದ್ಧಿ ಮತ್ತು ಹಣಕಾಸಿನಲ್ಲಿ ಏಳಿಗೆಯನ್ನು ಕಾಣಬಹುದು.

Leave a Reply

Your email address will not be published. Required fields are marked *