ಈ ತಪ್ಪುಗಳನ್ನು ಮಾಡಿದರೆ ದರಿದ್ರತನ ಬರುವುದು ಖಂಡಿತ.

ಜ್ಯೋತಿಷ್ಯ

ನಾವು ಮನೆಯಲ್ಲಿ ತಿಳಿದೋ ಅಥವಾ ತಿಳಿಯದೆಯೋ ಮಾಡುವ ಕೆಲ ತಪ್ಪಿನಿಂದ ದರಿದ್ರತನ, ಬಡತನ ಎಂಬುದು ಆವರಿಸುತ್ತದೆ. ಹಾಗಾದರೆ ಯಾವ ತಪ್ಪುಗಳನ್ನು ಮನೆಯಲ್ಲಿ ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.
ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅಂದರೆ ನಿಮಗೆ ಎಷ್ಟು ಆದಾಯ ಬರುತ್ತದೆಯೋ ಅದರಲ್ಲಿ ಸ್ವಲ್ಪ ಹಣವನ್ನು ತೆಗೆದುಕೊಂಡು ಖರ್ಚು ಮಾಡಬೇಕು. ಒಂದು ವೇಳೆ ಆದಾಯಕ್ಕಿಂತ ಹೆಚ್ಚಿಗೆ ಹಣವನ್ನು ಖರ್ಚು ಮಾಡಿದರೆ ಆ ಕ್ಷಣಕ್ಕೆ ಅದು ಚೆನ್ನಾಗಿದ್ದರೂ ಕಷ್ಟದ ಕಾಲದಲ್ಲಿ ಯಾರು ಕೂಡ ನಿಮ್ಮ ಜೊತೆ ಬರುವುದಿಲ್ಲ ಆದ್ದರಿಂದ ಎಷ್ಟು ಸಂಪಾದನೆ ಮಾಡುತ್ತಿರೋ ಅಷ್ಟರಲ್ಲಿ ಖರ್ಚು ಮಾಡಿದರೆ ಉತ್ತಮ.

ಕಿತ್ತೋಗಿರೋ ಬಾಚಣಿಗೆಯನ್ನು ಮನೆಯಲ್ಲಿ ಉಪಯೋಗಿಸುವುದರಿಂದ ದರಿದ್ರತನ ಬರುತ್ತದೆ. ಮಲಗುವಾಗ ಹಾಸಿಗೆಗೆ ಮುಖವನ್ನು ಹಾಕಿಕೊಂಡು ಉಲ್ಟಾ ಮಲಗುವುದು ದರಿದ್ರತನಕ್ಕೆ ಕಾರಣವಾಗುತ್ತದೆ. ಒಂದು ವೇಳೆ ನೀವು ಶ್ರೀಮಂತರಾಗಿದ್ದು ಅಥವಾ ಆರ್ಥಿಕವಾಗಿ ಸದೃಢರಾಗಿದ್ದರೂ ಹರಿದ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ದರಿದ್ರತನ ಬರುತ್ತದೆ. ಹೆಂಗಸರು ತಮ್ಮ ಮಕ್ಕಳ ಜಡೆಯನ್ನು ಕಟ್ಟುವಾಗ ನಿಂತುಕೊಂಡು ಕಟ್ಟಬಾರದು, ಅದರ ಬದಲು ಕುಳಿತುಕೊಂಡು ಜುಟ್ಟನ್ನು ಕಟ್ಟಬೇಕು.

ಕತ್ತಲಲ್ಲಿ ಕುಳಿತುಕೊಂಡು ಊಟ ಮಾಡಬಾರದು ಏಕೆಂದರೆ ಈ ರೀತಿ ಕತ್ತಲಲ್ಲಿ ಊಟ ಮಾಡುವುದು ಕೇವಲ ರಾಕ್ಷಸರು ಮಾತ್ರ. ಈ ರೀತಿ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ. ಸೂರ್ಯ ಮುಳುಗಿದ ನಂತರ ಯಾವುದೇ ಕಾರಣಕ್ಕೂ ಮನೆಯಲ್ಲಿ ಕಸವನ್ನು ಗುಡಿಸ ಬೇಡಿ, ಏಕೆಂದರೆ ಇದರಿಂದ ದರಿದ್ರತನ ಎಂಬುದು ಪ್ರಾಪ್ತಿಯಾಗುತ್ತದೆ ಹಾಗೂ ಲಕ್ಷ್ಮೀದೇವಿ ಮನೆಯನ್ನು ಬಿಟ್ಟು ಹೊರಟು ಹೋಗುತ್ತಾಳೆ.

ಸದಾಕಾಲ ಯಾವಾಗಲೂ ಮನೆಯಲ್ಲಿ ಆಣೆ, ಪ್ರಮಾಣಗಳನ್ನು ಮಾಡಬಾರದು. ಒಂದು ವೇಳೆ ಆಣೆ ಪ್ರಮಾಣ ಮಾಡಿದರೆ ಅದನ್ನು ಯಾವುದೇ ಕಾರಣಕ್ಕೂ ಮುರಿಯಬಾರದು. ಒಂದು ವೇಳೆ ಮುರಿದರೆ ಇದರಿಂದ ಸಾಕಷ್ಟು ಕೆಟ್ಟ ಪರಿಣಾಮಗಳನ್ನು ಜೀವನದಲ್ಲಿ ಅನುಭವಿಸಬೇಕಾಗುತ್ತದೆ. ಮನೆಯಲ್ಲಿ ನಕಾರಾತ್ಮಕವಾಗಿ ಯೋಚನೆ ಮಾಡುವುದನ್ನು ಬಿಡಬೇಕು. ತಂದೆತಾಯಿಯನ್ನು ದೇವರ ಸಮಾನ ಎಂದು ಹೇಳಲಾಗುತ್ತದೆ, ಆದ್ದರಿಂದ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಒಂದುವೇಳೆ ಅವರನ್ನು ಬೈಯ್ಯುವುದು, ಸಿಡುಕುವುದು ಮಾಡಿದರೆ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಆದರೆ ನಿಮಗೆ ಇದರಿಂದ ಕೆಟ್ಟ ಪರಿಣಾಮಗಳು ಬೀರುತ್ತವೆ.

Leave a Reply

Your email address will not be published. Required fields are marked *