ರಾತ್ರಿ ಮಲಗುವಾಗ ತಲೆಕೆಳಗೆ ಒಂದು ರೂಪಾಯಿಯ ನಾಣ್ಯವನ್ನು ಇಟ್ಟುಕೊಂಡರೆ ಸಿಗುವ ಲಾಭಗಳು ತಿಳಿದಿದೆಯೇ ನಿಮಗೆ.

ಜ್ಯೋತಿಷ್ಯ

ಒಂದು ರೂಪಾಯಿಯ ನಾಣ್ಯಕ್ಕೆ ನಿಮ್ಮ ಜೀವನವನ್ನು ಬದಲಾಯಿಸುವ ಶಕ್ತಿ ಇದೆ ಎಂದರೆ ತಪ್ಪಾಗಲಾರದು. ಒಂದು ರೂಪಾಯಿಯ ನಾಣ್ಯದಿಂದ ಸಾಕಷ್ಟು ಲಾಭಗಳಿವೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ನಮ್ಮ ಶರೀರದ ಮಾನಸಿಕ, ಶಾರೀರಿಕ ಸಮಸ್ಯೆಗಳನ್ನು ಸಹ ಬಗೆಹರಿಸುತ್ತದೆ ಈ ಒಂದು ರೂಪಾಯಿಯ ನಾಣ್ಯ. ಹಾಗಾದರೆ ಒಂದು ರೂಪಾಯಿಯ ನಾಣ್ಯದಿಂದ ಏನೆಲ್ಲ ಲಾಭಗಳಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿ, ದುಷ್ಟಶಕ್ತಿಗಳ ಪ್ರಭಾವ ಹೆಚ್ಚಿ ಮನೆಯ ಮೇಲೆ ಪ್ರಭಾವವನ್ನು ಬೀರುತ್ತಿದ್ದರೆ ಮತ್ತು ಅದರಲ್ಲೂ ಹೆಚ್ಚಾಗಿ ಮಕ್ಕಳ ಮೇಲೆ ಪ್ರಭಾವವನ್ನು ಬೀರುತ್ತಿದ್ದರೆ ಕೇವಲ ಒಂದೇ ಒಂದು ರೂಪಾಯಿಯ ನಾಣ್ಯದಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ಒಂದು ವೇಳೆ ಬೇರೆಯವರ ಕೆಟ್ಟದೃಷ್ಟಿ, ನರದೃಷ್ಟಿ, ಆರೋಗ್ಯ ದೃಷ್ಟಿ ನಿಮ್ಮನ್ನು ಕಾಡುತ್ತಿದ್ದರೆ ರಾತ್ರಿ ಮಲಗುವಾಗ ಒಂದು ರೂಪಾಯಿಯ ನಾಣ್ಯವನ್ನು ತೆಗೆದುಕೊಂಡು ಕಾಲಿನಿಂದ ತಲೆಯ ತನಕ ಹಾಗೂ ತಲೆಯಿಂದ ಕಾಲಿನ ತನಕ ಏಳು ಬಾರಿ ನಿವಾಳಿಸಿ ಯಾರೂ ಕೂಡ ನೋಡದ ಹಾಗೆ ಒಂದು ರೂಪಾಯಿಯ ನಾಣ್ಯವನ್ನು ಬಚ್ಚಿ ಇಡಬೇಕು. ಈ ಕೆಲಸವನ್ನು ಮಾಡಬೇಕಾದರೆ ಯಾರೂ ಕೂಡ ನಿಮ್ಮನ್ನು ನೋಡಬಾರದು. ರಾತ್ರಿ ಕಳೆದ ನಂತರ ಮರುದಿನ ಹರಿಯುವ ನದಿಯಲ್ಲಿ ಅಥವಾ ಹರಿಯುವ ನೀರಿನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಆ ಒಂದು ರೂಪಾಯಿಯ ನಾಣ್ಯವನ್ನು ತೇಲಿ ಬಿಡಬೇಕು.

ಈ ರೀತಿಯಾಗಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ದುಷ್ಟಶಕ್ತಿಗಳ ಪ್ರಭಾವವು ನಿವಾರಣೆಯಾಗುತ್ತದೆ. ಒಂದು ವೇಳೆ ಹರಿಯುವ ನದಿಯಲ್ಲಿ ಬಿಡಲು ಸಾಧ್ಯವಾಗದಿದ್ದರೆ, ಆಗ ಒಂದು ರೂಪಾಯಿಯ ನಾಣ್ಯವನ್ನು ಯಾರು ಓಡಾಡದೆ ಇರುವ ಜಾಗದಲ್ಲಿ ಒಂದು ಗುಂಡಿಯನ್ನು ತೆಗೆದು ನಾಣ್ಯವನ್ನು ಅಲ್ಲಿ ಹಾಕಿ ನಂತರ ಮಣ್ಣಿನಿಂದ ಮುಚ್ಚಬೇಕು. ಈ ಕೆಲಸವನ್ನು ಮಾಡಬೇಕಾದರೆ ಯಾರ ಹತ್ತಿರವೂ ಕೆಲಸದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಬಾರದು ಹಾಗೂ ಈ ಕೆಲಸವನ್ನು ಮಾಡಬೇಕಾದರೆ ಯಾರೂ ಕೂಡ ನೋಡಬಾರದು. ಈ ರೀತಿಯಾಗಿ ಮಾಡುವುದರಿಂದ ನಿಮಗಿರುವ ಎಲ್ಲಾ ಕಷ್ಟಗಳು ದೂರವಾಗುತ್ತದೆ ಮತ್ತು ನೀವು ಜೀವನವನ್ನು ಸುಖ-ಶಾಂತಿ ಹಾಗೂ ನೆಮ್ಮದಿಯಿಂದ ನಡೆಸಬಹುದು.

Leave a Reply

Your email address will not be published. Required fields are marked *