ಯಾವ ವಸ್ತುಗಳು ಮನೆಯಲ್ಲಿದ್ದರೆ ಲಕ್ಷ್ಮೀದೇವಿ ಸದಾಕಾಲ ನೆಲೆಸಿರುತ್ತಾಳೆ ಎಂಬುದು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಯಾವ ವಸ್ತುಗಳು ಮನೆಯಲ್ಲಿದ್ದರೆ ಲಕ್ಷ್ಮೀದೇವಿ ಸದಾಕಾಲ ನೆಲೆಸಿರುತ್ತಾಳೆ ಎಂಬುದು ಗೊತ್ತೇ ನಿಮಗೆ ಒಂದು ವೇಳೆ ನಿಮ್ಮ ಮನೆಯಲ್ಲಿ ಸದಾ ಕಾಲ ಲಕ್ಷ್ಮೀದೇವಿ ವಾಸಮಾಡಬೇಕು ಹಾಗೂ ಆರ್ಥಿಕವಾಗಿ ಸದೃಢವಾಗಿರಬೇಕೆಂದರೆ ಈ ಮೂರು ವಸ್ತುಗಳನ್ನು ನೀವು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು. ಹಾಗಾದರೆ ಮನೆಯಲ್ಲಿ ಇಟ್ಟುಕೊಳ್ಳಬೇಕಾದ ಆ 3 ವಸ್ತುಗಳು ಯಾವುವು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲನೆಯದಾಗಿ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ತುಂಬಾ ಒಳ್ಳೆಯದಾಗುತ್ತದೆ. ಆಂಜನೇಯ ಸ್ವಾಮಿಯ ಮೂರ್ತಿಯನ್ನು ಇಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಸಹಾಯಕವಾಗುತ್ತದೆ. ಆದ್ದರಿಂದ ಯಾರ ಮನೆಯಲ್ಲಿ ಆಂಜನೇಯಸ್ವಾಮಿಯ ಚಿತ್ರಪಟ ಅಥವಾ ಆಂಜನೇಯ ಸ್ವಾಮಿಯ ಮೂರ್ತಿ ಇರುತ್ತದೆಯೋ ಅಲ್ಲಿ ಲಕ್ಷ್ಮೀದೇವಿ ಸದಾಕಾಲ ವಾಸ ಮಾಡುತ್ತಾರೆ. ಆಂಜನೇಯ ಸ್ವಾಮಿಯ ಚಿತ್ರಪಟ ಅಥವಾ ಮೂರ್ತಿಯನ್ನು ದಕ್ಷಿಣ ಪಕ್ಷಿಮ ದಿಕ್ಕಿಗೆ ಇಟ್ಟರೆ ಸಂಪೂರ್ಣ ಅನುಗ್ರಹವನ್ನು ಪಡೆದುಕೊಳ್ಳಬಹುದು.ಎರಡನೆಯದಾಗಿ ವಾಸ್ತುದೇವನ ಚಿತ್ರಪಟವನ್ನು ಇಡುವುದರಿಂದ ಮನೆಯಲ್ಲಿ ವಾಸ್ತು ದೋಷವಿದ್ದರೆ ನಿವಾರಣೆಯಾಗುತ್ತದೆ. ಆದ್ದರಿಂದ ವಾಸ್ತುದೇವನ ಚಿತ್ರಪಟವನ್ನು ಮನೆಯ ಬಾಗಿಲನ ಮೇಲೆ ಇಡಬೇಕಾಗುತ್ತದೆ. ಇದರಿಂದ ಮನೆಯಲ್ಲಿರುವ ವಾಸ್ತು ದೋಷದ ಪ್ರಭಾವವು ಕಡಿಮೆಯಾಗುತ್ತ ಬರುತ್ತದೆ.

ಮಡಿಕೆಯನ್ನು ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ. ಆದ್ದರಿಂದ ಮಡಿಕೆಯಲ್ಲಿ ಯಾವಾಗಲೂ ನೀರು ಇಡಬೇಕು. ಆದ್ದರಿಂದ ಮನೆಯಲ್ಲಿ ಮಡಿಕೆಯನ್ನು ತಂದಿಟ್ಟು ಪ್ರತಿನಿತ್ಯ 1 ಲೋಟ ಮಡಿಕೆಯ ನೀರನ್ನು ಕುಡಿದರೆ ತುಂಬಾ ಒಳ್ಳೆಯದಾಗುತ್ತದೆ. ಮನೆಯಲ್ಲಿ ಮಡಿಕೆ ಇರುವುದರಿಂದ ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಬಹುದು.

Leave a Reply

Your email address will not be published. Required fields are marked *