ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಎಂದರೆ ದೇವರಕೋಣೆಯಲ್ಲಿ ಯಾವ ಚಿತ್ರಪಟವನ್ನು ಇಡಬೇಕು ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಮನುಷ್ಯನ ದೇಹದಲ್ಲಿ ಹೃದಯ ಎಂಬುದು ಎಷ್ಟು ಮುಖ್ಯವೋ ಅದೇ ರೀತಿ ಮನೆಯಲ್ಲಿ ದೇವರ ಕೋಣೆಯು ಅತಿ ಮುಖ್ಯ. ಆದ್ದರಿಂದ ದೇವರ ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಇದ್ದರೆ ಕಷ್ಟ ಎಂಬುದು ಬೆನ್ನುಹತ್ತಿದ ಬೇತಾಳದಂತೆ ಯಾವಾಗಲೂ ನಿಮ್ಮ ಜೊತೆ ಬರುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಕಲಹಗಳು ಹೆಚ್ಚಾಗುತ್ತದೆ, ಗಂಡ ಹೆಂಡತಿಯರ ನಡುವೆ ಭಿನ್ನಾಭಿಪ್ರಾಯಗಳು ಬರಲು ಶುರುವಾಗುತ್ತದೆ. ಹಾಗಾದರೆ ದೇವರಕೋಣೆಯಲ್ಲಿ ಯಾವ ಎರಡು ವಸ್ತುಗಳನ್ನು ಇಡಬಾರದು ಹಾಗೂ ಯಾವ ಕಾರಣಕ್ಕಾಗಿ ಇಡಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ದೇವರ ಕೋಣೆಯಲ್ಲಿ ದೇವರಿಗೆ ಮುಡಿಸಿದ ಹೂವನ್ನು ಚೆನ್ನಾಗಿದೆ ಎಂದು ಎರಡು-ಮೂರು ದಿನ ಹೂವನ್ನು ಬದಲಾಯಿಸದೆ ಹಾಗೆ ಬಿಡಬಾರದು. ಅದರಲ್ಲೂ ದೇವರಕೋಣೆಯಲ್ಲಿ ವಿಗ್ರಹಗಳನ್ನು ಇದ್ದರೆ ಕೆಲವೊಂದು ನಿಯಮಗಳನ್ನು ಹಾಗೂ ಅಭಿಷೇಕಗಳನ್ನು ಮಾಡಬೇಕಾಗುತ್ತದೆ. ಒಂದು ವೇಳೆ ವಿಗ್ರಹಗಳನ್ನು ಇಟ್ಟುಕೊಂಡು ಅಭಿಷೇಕವನ್ನು ಮಾಡದಿದ್ದರೆ ಕೆಲವೊಂದು ದೋಷಕ್ಕೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಪ್ರತಿನಿತ್ಯ ದೇವರಿಗೆ ಪೂಜೆಯನ್ನು ಮಾಡಬೇಕು ಹಾಗೂ ದೇವರಿಗೆ ಇಟ್ಟ ನೈವೇದ್ಯವನ್ನು ಮನೆಯ ಸದಸ್ಯರನ್ನು ಬಿಟ್ಟು ಬೇರೆ ಯಾರಿಗೂ ಕೊಡಬಾರದು.

ಮನೆಯಲ್ಲಿ ಉಗ್ರನರಸಿಂಹನ ಚಿತ್ರಪಟವನ್ನು ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು. ಒಂದು ವೇಳೆ ಮನೆಯಲ್ಲಿ ಇಟ್ಟುಕೊಂಡರೆ ಕಷ್ಟಗಳನ್ನು ನಾವೇ ತಂದುಕೊಂಡಂತೆ ಆಗುತ್ತದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ,ನೆಮ್ಮದಿ ಹಾಳಾಗುತ್ತದೆ ಹಾಗೂ ಕಲಹಗಳು ಪ್ರಾರಂಭವಾಗುತ್ತದೆ. ಆದ್ದರಿಂದ ಮನಃಶಾಂತಿ ನೀಡುವ ದೇವರ ಚಿತ್ರಪಟವನ್ನು ಇಟ್ಟುಕೊಳ್ಳುವುದು ಉತ್ತಮ. ಆದ್ದರಿಂದ ದೇವರಿಗೆ ಅಲಂಕಾರ ಮಾಡಿದ ಹೂವನ್ನು ಎರಡರಿಂದ ಮೂರು ದಿನ ಹಾಗೆ ಬಿಟ್ಟರೆ ದೋಷಕ್ಕೆ ಗುರಿಯಾಗಬೇಕಾಗುತ್ತದೆ.

ಮನೆಯಲ್ಲಿ ವೆಂಕಟೇಶ್ವರ ಸ್ವಾಮಿಯ ಚಿತ್ರಪಟ,ಮಹಾಲಕ್ಷ್ಮಿಯ ಚಿತ್ರಪಟ ಮತ್ತು ಗುರುಗಳ ಚಿತ್ರಪಟವನ್ನು ಇಟ್ಟುಕೊಂಡರೆ ತುಂಬಾ ಒಳ್ಳೆಯದು. ಯಾವುದೇ ಕಾರಣಕ್ಕೂ ಉಗ್ರ ಸ್ವರೂಪದಲ್ಲಿರುವ ದುರ್ಗಾದೇವಿ,ಕಾಲಭೈರವ, ಉಗ್ರ ನರಸಿಂಹ ಸ್ವಾಮಿಯ ಚಿತ್ರಪಟವನ್ನು ಇಟ್ಟುಕೊಳ್ಳಬಾರದು. ಈ ರೀತಿಯಾಗಿ ಮೇಲೆ ಹೇಳಿರುವ ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಸುಖ,ಶಾಂತಿ,ನೆಮ್ಮದಿ ಎಂಬುದು ನೆಲೆಸುತ್ತದೆ.

Leave a Reply

Your email address will not be published. Required fields are marked *