ಜ್ಯೋತಿಷ್ಯ

ಅಕ್ಷಯಪಾತ್ರೆಯನ್ನು ಹೇಗೆ ಸಿದ್ದ ಮಾಡಿಕೊಳ್ಳಬೇಕು ತಿಳಿದಿದೆಯೇ ನಿಮಗೆ ?

ಅಕ್ಷಯಪಾತ್ರೆಯನ್ನು ಸಿದ್ದ ಮಾಡಿಕೊಳ್ಳಬೇಕಾದರೆ ಒಂದು ಮಣ್ಣಿನ ಮಡಿಕೆಯನ್ನು ನಿಮಗೆ ಅನುಕೂಲವಾಗುವ ದಿನದಂದು ಮನೆಗೆ ತರಬೇಕು. ಮನೆಗೆ ಮಣ್ಣಿನ ಮಡಕೆಯನ್ನು ತಂದ ನಂತರ ಶುದ್ಧವಾದ ನೀರಿನಿಂದ ತೊಳೆಯಬೇಕು. ತದನಂತರ ಒಂದು ತಟ್ಟೆಯನ್ನು ತೆಗೆದುಕೊಂಡು ಅರಿಶಿನವನ್ನು ಹಾಕಬೇಕು. ಅರಿಶಿನಕ್ಕೆ ಕರ್ಪೂರ, ಪಚ್ಚಕರ್ಪೂರ, ಜವ್ವಾದಿ ಈ ಮೂರು ವಸ್ತುಗಳನ್ನು ಅರಿಶಿನಕ್ಕೆ ಹಾಕಿ ರೋಸ್ ವಾಟರ್ ನಿಂದ ಪೇಸ್ಟ್ ಮಾಡಿಕೊಂಡು ಮಡಿಕೆ ಸುತ್ತಾ ಲೇಪನ ಮಾಡಬೇಕು. ಲೇಪನ ಮಾಡಿದ ನಂತರ ಕುಂಕುಮದಿಂದ ಶ್ರೀಂ ಎಂದು ಬೊಟ್ಟನ್ನು ಇಡಬೇಕು.

ಅಕ್ಷಯ ಪಾತ್ರೆಗೆ ಮೊದಲಿಗೆ ಅರಿಶಿನ-ಕುಂಕುಮ, ಸ್ವಲ್ಪ ಪಚ್ಚಕರ್ಪೂರ, ಜವ್ವಾದಿ, ಕರ್ಪೂರ ಹಾಕಬೇಕು. ಈ ಪದಾರ್ಥಗಳನ್ನು ಹಾಕಿದ ನಂತರ ಸ್ವಲ್ಪ ಕಲ್ಲುಪ್ಪನ್ನು ಹಾಕಬೇಕು. ಕಲ್ಲುಪ್ಪನ್ನು ಹಾಕಿದ ನಂತರ ಒಂದು ವಸ್ತ್ರದಿಂದ ಮುಚ್ಚಬೇಕು. ಈ ರೀತಿ ಮಾಡಿದರೆ ಅಕ್ಷಯಪಾತ್ರೆ ಸಿದ್ಧವಾಗುತ್ತದೆ. ಇದರಿಂದ ಲಕ್ಷ್ಮೀದೇವಿಯು ಸ್ಥಿರವಾಗಿ ವಾಸಿಸಲು ಇಷ್ಟಪಡುತ್ತಾಳೆ.

ಈ ರೀತಿಯಾಗಿ ಅಕ್ಷಯಪಾತ್ರೆಯನ್ನು ಸಿದ್ದಮಾಡಿಕೊಂಡು ಪ್ರತಿನಿತ್ಯ ಮನೆಯಲ್ಲಿ ಪೂಜೆಯನ್ನು ಮಾಡುವುದರಿಂದ ಲಕ್ಷ್ಮೀದೇವಿ ಅನುಗ್ರಹವು ಪ್ರಾಪ್ತಿಯಾಗುತ್ತದೆ ಹಾಗೂ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಇದ್ದರೂ ಪರಿಹಾರವಾಗುತ್ತದೆ ಮತ್ತು ಬಾಕಿ ಬರಬೇಕಾಗಿದ್ದ ಹಣ ಕೈ ಸೇರುತ್ತದೆ ಮತ್ತು ಧನ ಸಂಪತ್ತು ವೃದ್ಧಿಯಾಗುತ್ತದೆ.

ಒಂದು ವೇಳೆ ಮನೆಯಲ್ಲಿ ಅನವಶ್ಯಕ ಖರ್ಚುಗಳು ಜಾಸ್ತಿಯಾಗುತ್ತಿವೆ ಮತ್ತು ಎಷ್ಟೇ ಸಂಪಾದನೆ ಮಾಡಿ ಹಣವನ್ನು ತಂದರು ಅದು ಕೈಯಲ್ಲಿ ನಿಲ್ಲುತ್ತಿಲ್ಲ ಎನ್ನುವವರು ಸಂಬಳ ತಂದ ದಿನದಂದು ಹಣವನ್ನು ಅಕ್ಷಯ ಪಾತ್ರೆಯ ಒಳಗೆ ಹಾಕಿ ತದನಂತರ ಉಪಯೋಗಿಸುವುದರಿಂದ ಅನವಶ್ಯಕ ಖರ್ಚುಗಳು ಕಡಿಮೆಯಾಗಿ ಧನ ಸಂಪತ್ತು ವೃದ್ಧಿಯಾಗುತ್ತದೆ.

ಸಾಲದಿಂದ ಕೊರಗುತ್ತಿರುವವರು ಶುಕ್ರವಾರದ ದಿನದಂದು ನಿಮ್ಮ ಹತ್ತಿರ ಎಷ್ಟು ಹಣ ಇರುತ್ತದೆಯೋ ಅಷ್ಟು ಹಣವನ್ನು ಅಕ್ಷಯಪಾತ್ರೆಗೆ ಹಾಕಿ ಮಂಗಳವಾರದಂದು ಆ ಹಣವನ್ನು ತೆಗೆದುಕೊಂಡು ಉಪಯೋಗಿಸುವುದರಿಂದ ಸಾಲಬಾಧೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.ಮಡಿಕೆಯಲ್ಲಿರುವ ಕಲ್ಲುಪ್ಪನ್ನು ಮೂರು ತಿಂಗಳಿಗೊಮ್ಮೆ ಬದಲಾಯಿಸಬೇಕು. ಕಲ್ಲುಪ್ಪನ್ನು ಬದಲಾಯಿಸುವಾಗ ಭಾನುವಾರ ದಿನದಂದು ಮಡಿಕೆಯಿಂದ ತೆಗೆದು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಈ ರೀತಿಯಾಗಿ ಮಾಡುವುದರಿಂದ ಅಕ್ಷಯ ಪಾತ್ರೆಯಿಂದ ನಿಮ್ಮ ಮನೆಯಲ್ಲಿ ಸುಖ,ಸಂತೋಷ ಅಕ್ಷಯವಾಗುತ್ತಿರುವುದುರಲ್ಲಿ ಸಂಶಯವಿಲ್ಲ.

admin

Share
Published by
admin

Recent Posts

ದಿನಭವಿಷ್ಯ18 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

2 weeks ago

ದಿನ ಭವಿಷ್ಯ14-12-2024

ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

2 weeks ago

ದಿನಭವಿಷ್ಯ 01 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

4 weeks ago

Dina Bhavishya | 22 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…

1 month ago

Dina Bhavishya | 21 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…

1 month ago

ದಿನ ಭವಿಷ್ಯ Dina Bhavishya | 20 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

1 month ago