ಜಾತಕದಲ್ಲಿ ಗಜಕೇಸರಿ ಯೋಗ ಏನನ್ನು ಸೂಚಿಸುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಗಜಕೇಸರಿಯಲ್ಲಿ ಗಜ ಎಂದರೆ ಆನೆ, ಕೇಸರಿ ಎಂದರೆ ಸಿಂಹ. ಒಂದು ವೇಳೆ ಜಾತಕದಲ್ಲಿ ಗಜಕೇಸರಿ ಯೋಗವಿದ್ದರೆ ಆ ವ್ಯಕ್ತಿಯು ಯಾವ ರೀತಿ ಫಲವನ್ನು ಅನುಭವಿಸುತ್ತಾನೆ, ಜಾತಕದಲ್ಲಿ ಯಾವ ಮನೆಯಲ್ಲಿ ಇದ್ದಾಗ ಉನ್ನತಿಯನ್ನು ಪಡೆದುಕೊಳ್ಳುತ್ತಾನೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಮುಖ್ಯವಾಗಿ ಗಜಕೇಸರಿಯೋಗ ಜಾತಕದಲ್ಲಿ ಬರುವಂತದ್ದು ಗುರು ಹಾಗೂ ಚಂದ್ರನ ಸಂಯೋಗದಿಂದ. ಆದ್ದರಿಂದ ಗುರು ಹಾಗೂ ಚಂದ್ರನ ಸಂಯೋಗದಿಂದ ಜಾತಕದಲ್ಲಿ ಗಜಕೇಸರಿಯೋಗ ಉದ್ಭವವಾಗುತ್ತದೆ. ಜಾತಕದಲ್ಲಿ ಗಜಕೇಸರಿ ಯೋಗ ಇದ್ದರೆ ಅಂತವರು ಬಹಳ ಬಲಿಷ್ಠರಾಗಿರುತ್ತಾರೆ ಹಾಗೂ ಮಾಡುವಂತಹ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಇಂತಹ ವ್ಯಕ್ತಿಗಳು ಸ್ವತಂತ್ರವಾಗಿ ಕೆಲಸವನ್ನು ಮಾಡುತ್ತಾರೆ ಹಾಗೂ ಯಾರ ಮೇಲೂ ಅವಲಂಬಿತರಾಗಿ ಇರುವುದಿಲ್ಲ. ಇಂತಹ ವ್ಯಕ್ತಿಗಳು ಕೆಲಸ ಮಾಡುವ ಕ್ಷೇತ್ರದಲ್ಲಿ ತಮ್ಮ ಎದುರಿಗೆ ಇರುವ ವ್ಯಕ್ತಿಗಳನ್ನು ಕಾಲಡಿಯಲ್ಲಿ ಇಟ್ಟು ಕೆಲಸವನ್ನು ಮಾಡಿಸುತ್ತಿರುತ್ತಾರೆ ಮತ್ತು ಇವರಿಗೆ ಯಾರು ಕೂಡ ವೈರಿಗಳು ಇರುವುದಿಲ್ಲ.

ಮುಖ್ಯವಾಗಿ ಜಾತಕದಲ್ಲಿ ಗುರು ಮತ್ತು ಚಂದ್ರ ಲಗ್ನದಲ್ಲಿ ಇದ್ದಾಗ ವ್ಯಕ್ತಿಯು ತುಂಬಾ ಪ್ರಭಾವಶಾಲಿಯಾಗಿರುತ್ತಾನೆ. ಯಾವುದೇ ಕೆಲಸವನ್ನು ವಹಿಸಿದರು ಬಹಳ ಬೇಗ ಯಶಸ್ವಿಯಾಗಿ ಮುಗಿಸುತ್ತಾನೆ. ಒಂದು ವೇಳೆ ಗಜಕೇಸರಿಯೋಗ ಪಂಚಮ ಸ್ಥಾನದಲ್ಲಿ ಬಂದಾಗ ಆ ಮಗುವಿನ ಜನನದಿಂದಾಗಿ ಆ ಮನೆಯು ಏಳಿಗೆಯನ್ನು ಕಾಣುತ್ತದೆ. ಒಂದು ವೇಳೆ ಸಪ್ತಮ ಸ್ಥಾನದಲ್ಲಿ ಗಜಕೇಸರಿ ಯೋಗ ಬಂದರೆ ಉತ್ತಮವಾದ ಸ್ತ್ರೀಯೊಂದಿಗೆ ಈತನ ವಿವಾಹವಾಗುತ್ತದೆ ಹಾಗೂ ಆ ಸ್ತ್ರೀ ಇಂದ ಉನ್ನತಮಟ್ಟಕ್ಕೆ ಹೋಗುತ್ತಾನೆ. ಒಂದು ವೇಳೆ ಲಗ್ನದಿಂದ ಹತ್ತನೇ ಸ್ಥಾನದಲ್ಲಿ ಗಜಕೇಸರಿ ಯೋಗ ಬಂದಾಗ ಶಿಕ್ಷಣದ ಕ್ಷೇತ್ರದಲ್ಲಿ ಉನ್ನತವಾದ ಸ್ಥಾನವನ್ನು ಏರುತ್ತಾನೆ ಹಾಗೇ ಸಣ್ಣ ಕೈಗಾರಿಕೆಗಳಲ್ಲಿ ಉನ್ನತ ಅಭಿವೃದ್ಧಿಯನ್ನು ಕಾಣುತ್ತಾನೆ.ಗಜಕೇಸರಿ ಯೋಗ 9 ನೇ ಸ್ಥಾನದಲ್ಲಿ ಅಂದರೆ ಭಾಗ್ಯ ಸ್ಥಾನದಲ್ಲಿ ಇದ್ದರೆ ಹೊರದೇಶಕ್ಕೆ ಹೋಗಿ ಹೆಸರು ಮಾಡುತ್ತಾರೆ. ಒಂದು ವೇಳೆ 11 ನೇ ಸ್ಥಾನದಲ್ಲಿ ಗಜಕೇಸರಿ ಯೋಗವು ಬಂದರೆ ಆ ವ್ಯಕ್ತಿಯು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ, ಅಂದರೆ ಮಾಡಿದ ಕೆಲಸಗಳೆಲ್ಲ ಅಡೆತಡೆ ಇಲ್ಲದೆ ಯಶಸ್ವಿಯಾಗಿ ಪೂರ್ಣವಾಗುತ್ತದೆ.

ಒಂದು ವೇಳೆ ಗಜಕೇಸರಿಯೋಗ ಇದ್ದು ಯಾವುದೇ ಫಲವು ಸಿಗುತ್ತಿಲ್ಲವೆಂದರೆ ಹಾಗೂ ಗಜಕೇಸರಿ ಯೋಗವು 6,8 ಮತ್ತು 12ನೇ ಸ್ಥಾನದಲ್ಲಿ ಬಂದಾಗ ನೀಚಭಂಗವಾಗುತ್ತದೆ. ಅಂದರೆ ಗಜಕೇಸರಿಯೋಗ ಇದ್ದರು ಪ್ರಯೋಜನಕ್ಕೆ ಬರುವುದಿಲ್ಲ. 6,8 ಹಾಗೂ 12 ನೇ ಸ್ಥಾನವನ್ನು ರೋಗ, ಋಣ, ಭಯ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಸ್ಥಾನದಲ್ಲಿ ಗಜಕೇಸರಿ ಯೋಗ ಇದ್ದರೆ ಯಾವುದೇ ಪ್ರಯೋಜನ ಆಗುವುದಿಲ್ಲ.

Leave a Reply

Your email address will not be published. Required fields are marked *