ಚಿಂತೆ ಬಿಡಿ ಕಾಮಾಕ್ಷಿ ದೀಪದ ಮಹತ್ವ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕಾಮಾಕ್ಷಿ ದೀಪವನ್ನು ಬೆಳಗಿಸಲಾಗುತ್ತದೆ. ಶುಕ್ರವಾರ, ಅಮಾವಾಸ್ಯೆಯ ದಿನ, ಪೂರ್ಣಿಮೆಯ ದಿನ ಹಾಗೂ ವಿಶೇಷವಾದ ದಿನಗಳಲ್ಲಿ ಕಾಮಾಕ್ಷಿ ದೀಪವನ್ನು ಹಚ್ಚುವುದು ಸರ್ವೇಸಾಮಾನ್ಯವಾಗಿದೆ. ಕಾಮಾಕ್ಷಿ ದೀಪವನ್ನು ಪ್ರತಿನಿತ್ಯ ಯಾವ ಸಮಯದಲ್ಲಿ ಹಚ್ಚಿದರೆ ಲಾಭದಾಯಕ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ದೀಪದ ಮೇಲ್ಬಾಗದಲ್ಲಿ ಕಾಮಾಕ್ಷಿ ದೇವರ ಪ್ರತಿಮೆ ಇರುವ ಚಿತ್ರವೇ ಕಾಮಾಕ್ಷಿ ದೀಪ. ಸಾಮಾನ್ಯವಾಗಿ ಕಾಮಾಕ್ಷಿ ದೀಪ ಕಂಚಿಯಲ್ಲಿ ಸಿಗುತ್ತದೆ. ಈಗ ಎಲ್ಲಾ ಕಡೆ ದೀಪದ ಮೇಲ್ಭಾಗದಲ್ಲಿ ಲಕ್ಷ್ಮೀದೇವಿಯು ಕಮಲದ ಹೂವಿನ ಮೇಲೆ ಕುಳಿತುಕೊಂಡು ಎರಡು ಕಡೆ ಆನೆಯು ಕ್ಷೀರಾಭಿಷೇಕ ಮಾಡುತ್ತಿರುವ ಹಾಗೆ ದೀಪವು ಸಿಗುತ್ತದೆ. ಈ ದೀಪವನ್ನು ಗಜ ಲಕ್ಷ್ಮಿ ಕಾಮಾಕ್ಷಿ ದೀಪ ಎಂದು ಕರೆಯಲಾಗುತ್ತದೆ.

ಕಾಮಾಕ್ಷಿ ದೀಪವನ್ನು ಮುಂಜಾನೆ 5 ಗಂಟೆಯಿಂದ 6 ಗಂಟೆ ಒಳಗೆ ಹಚ್ಚಬೇಕು. ಈ ರೀತಿಯಾಗಿ ಹಚ್ಚುವುದರಿಂದ ಮನೆಯಲ್ಲಿ ಶಾಂತಿ ದೊರೆಯುತ್ತದೆ ಹಾಗೂ ಲಕ್ಷ್ಮಿದೇವಿಯ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಕಾಮಾಕ್ಷಿ ದೀಪವನ್ನು ಸಾಯಂಕಾಲ 6 ಗಂಟೆಯಿಂದ ಇಂದ 7 ಗಂಟೆ ಒಳಗೆ ಹಚ್ಚಬೇಕು. ಈ ಸಮಯದಲ್ಲಿ ಹಚ್ಚುವುದರಿಂದ ಲಕ್ಷ್ಮೀದೇವಿಯ ಸಂಪೂರ್ಣ ಕೃಪೆಯು ಲಭಿಸುತ್ತದೆ.

ಮೊದಲಿಗೆ ಕಾಮಾಕ್ಷಿ ದೀಪವನ್ನು ಶುದ್ಧ ನೀರಿನಿಂದ ತೊಳೆದು ನಂತರ ಒರೆಸಿ ಇಡಬೇಕು. ಕಾಮಾಕ್ಷಿ ದೀಪವನ್ನು ತಾಮ್ರದ ಅಥವಾ ಹಿತ್ತಾಳೆಯ ತಟ್ಟೆಯ ಒಳಗಡೆ ಇಡಬೇಕು. ತಟ್ಟೆಯ ಒಳಗೆ ಷಟ್ಕೋನದ ರಂಗೋಲಿಯನ್ನು ಬಿಡಿಸಿ ಅಥವಾ ಸ್ವಸ್ತಿಕ್ ಗುರುತನ್ನು ಬಿಡಿಸಬೇಕು. ತದನಂತರ ಎಂಟು ವಿಲ್ಯೆದಳೆ ತೆಗೆದುಕೊಂಡು ಸುತ್ತಲೂ ಹರಡಬೇಕು. ಕಮಲದ ಹೂವಿನ ರೀತಿ ಅಲಂಕಾರವನ್ನು ಮಾಡಬೇಕು. ಮಧ್ಯದ ವೀಳ್ಯದೆಲೆಯ ಮೇಲೆ ಸ್ವಲ್ಪ ಅಕ್ಕಿಯನ್ನು ಹಾಕಿ ಅರಿಶಿಣ, ಕುಂಕುಮದಿಂದ ಅಲಂಕಾರ ಮಾಡಿ ಕಾಮಾಕ್ಷಿ ದೀಪವನ್ನು ಇಡಬೇಕು.ಒಂದು ಬತ್ತಿಯನ್ನು ಹಾಕಿ ಕಾಮಾಕ್ಷಿ ದೀಪವನ್ನು ಹಚ್ಚಬೇಕು. ವಿಶೇಷವಾಗಿ ತುಪ್ಪದಿಂದ ದೀಪವನ್ನು ಅಮ್ಮನವರಿಗೆ ಹಚ್ಚಬೇಕು. ಒಂದು ವೇಳೆ ತುಪ್ಪದಿಂದ ಹಚ್ಚಲು ಸಾಧ್ಯವಾಗದಿದ್ದರೆ ಎಳ್ಳೆಣ್ಣೆಯಿಂದ ಕೂಡ ದೀಪವನ್ನು ಹಚ್ಚಬಹುದು. ಸಂಧ್ಯಾಕಾಲದಲ್ಲಿ ದೀಪವನ್ನು ಹಚ್ಚುವುದು ಬಹಳ ಶುಭ ಹಾಗೂ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಸಹ ತಡೆಗಟ್ಟುತ್ತದೆ. ಬೆಲ್ಲದಿಂದ ಮಾಡಿದ ಪದಾರ್ಥವನ್ನು ನೈವೇದ್ಯವನ್ನಾಗಿ ಇಟ್ಟರೆ ಬಹಳ ಒಳ್ಳೆಯದು.

Leave a Reply

Your email address will not be published. Required fields are marked *