ನವಗ್ರಹಗಳ ದೋಷ ನಿವಾರಣೆಗೆ ಈ ಉಪಾಯವನ್ನು ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ

ಜ್ಯೋತಿಷ್ಯ

ಪ್ರತಿಯೊಬ್ಬರಿಗೂ ತಾವು ಕೆಲಸ ಮಾಡುವ ಕ್ಷೇತ್ರದಲ್ಲಿ ಉನ್ನತಿಯನ್ನು ಪಡೆದುಕೊಳ್ಳಬೇಕು ಹಾಗೂ ಜೀವನದಲ್ಲಿ ಏಳಿಗೆಯನ್ನು ಸಾಧಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಒಂದು ವೇಳೆ ನವಗ್ರಹಗಳ ಸಹಾಯವು ಇದ್ದರೆ ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ಅಖಂಡ ಯಶಸ್ಸನ್ನು ಕಾಣಬಹುದು.

ನವರತ್ನದ ಉಂಗುರವನ್ನು ಹಾಕಿಕೊಂಡರೆ ನವಗ್ರಹಗಳ ಬೆಂಬಲವೂ ದೊರೆಯುತ್ತದೆ. ಆದರೆ ಕೆಲವೊಂದು ರಾಶಿಯವರಿಗೆ ಈ ಉಂಗುರವು ಸರಿ ಬರುವುದಿಲ್ಲ. ಕೆಲವರು ನವರತ್ನದ ಉಂಗುರವನ್ನು ಚಿನ್ನದಿಂದ ಮಾಡಿಸಿಕೊಳ್ಳುತ್ತಾರೆ ಇನ್ನೂ ಕೆಲವರು ಅವರ ಶಕ್ತಿಯನುಸಾರ ಯಾವುದರಲ್ಲಿ ಆಗುತ್ತದೆಯೋ ಅದರಲ್ಲಿ ಮಾಡಿಸಿಕೊಳ್ಳುತ್ತಾರೆ.
ನವಗ್ರಹಗಳ ದೋಷ ನಿವಾರಣೆಗೆ ಮಣ್ಣಿನಿಂದ ಮಾಡಿದ ಮಡಕೆಯನ್ನು ತೆಗೆದುಕೊಂಡು ಅದರಲ್ಲಿ ನವಗ್ರಹಗಳ ಧಾನ್ಯವನ್ನು ಹಾಕಿಕೊಳ್ಳಬೇಕು.ಸೂರ್ಯ ಗ್ರಹಕ್ಕೆ ಗೋಧಿಯನ್ನು, ಚಂದ್ರಗ್ರಹಕ್ಕೆ ಅಕ್ಕಿಯನ್ನು, ಕುಜನಿಗೆ ತೊಗರಿಬೇಳೆ, ಬುದನಿಗೆ ಹೆಸರುಕಾಳು, ಗುರುವಿಗೆ ಕಡಲೆಕಾಳು, ಶುಕ್ರನಿಗೆ ಅವರೆಕಾಳು, ಶನಿ ಗ್ರಹಕ್ಕೆ ಎಳ್ಳು, ರಾಹುವಿಗೆ ಉದ್ದಿನ ಕಾಳು, ಕೇತುವಿಗೆ ಹುರುಳಿಕಾಳನ್ನು ಇಡಲಾಗುತ್ತದೆ. ಈ ರೀತಿಯಾಗಿ 9 ದಾನ್ಯಗಳನ್ನು ಹಾಗೂ ನವ ತೈಲವನ್ನು ಅಥವಾ ಎಳ್ಳೆಣ್ಣೆಯನ್ನು ಅಥವಾ ಹಸುವಿನ ತುಪ್ಪ ವನ್ನು ಮಣ್ಣಿನಿಂದ ಮಾಡಿದ ಮಡಿಕೆಯಲ್ಲಿ ಹಾಕಬೇಕು.

ನಂತರ ಮಣ್ಣಿನ ಮಡಕೆ ಒಳಗೆ ನವ ಬತ್ತಿಯನ್ನು ಹಾಕಿ ನಿಮ್ಮ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ ನವಗ್ರಹದ ಮುಂದೆ ಸೂರ್ಯ ಉದಯಿಸುವ ದಿಕ್ಕಿನಲ್ಲಿ ದೀಪಾರಾಧನೆಯನ್ನು ಮಾಡಬೇಕು. ಶಕ್ತಿ ಅನುಸಾರ ದೇವರಿಗೆ ನೈವೇದ್ಯವನ್ನು ಇಡಬೇಕು. ದೀಪಾರಾಧನ ಮಾಡಬೇಕಾದರೆ ಓಂ ಭಗವತೇ ಗ್ರಹಾದಿಪತಿಯೇ ಸೂರ್ಯಗ್ರಹಾಯೇ ನಮಃ ಎಂಬ ಮಂತ್ರವನ್ನು ಪಠಿಸಿದರೆ ತುಂಬಾ ಒಳ್ಳೆಯದು.

Leave a Reply

Your email address will not be published. Required fields are marked *