ಮಂಗಳವಾರದ ದಿನ ಯಾವ ಐದು ನಿಯಮಗಳನ್ನು ಪಾಲಿಸಿದರೆ ಜೀವನ ಸುಖಕರವಾಗಿರುತ್ತದೆ ಎಂಬುದು ತಿಳಿದಿದೆಯೇ.

ಜ್ಯೋತಿಷ್ಯ

ಮಂಗಳವಾರದ ದಿನದಂದು ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ನಿಮ್ಮ ಜಾತಕದಲ್ಲಿರುವ ಕುಜ ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು. ಕುಜ ದೋಷದಿಂದ ಅನುಭವಿಸುವ ತೊಂದರೆಗಳಿಂದ ನಿವಾರಣೆ ಮಾಡಿಕೊಳ್ಳಬೇಕೆಂದರೆ ಮಂಗಳವಾರದ ದಿನದಂದು ಈ ಚಿಕ್ಕ ಕೆಲಸವನ್ನು ಮಾಡಬೇಕು.
ಮಂಗಳವಾರ ಎಂಬುದು ಕುಜನ ವಾರವಾಗಿದೆ. ಆದ್ದರಿಂದ ಕುಜದೋಷ ಎಂಬುದು ಸ್ತ್ರೀಯರಿಗೆ ಆಗಲಿ ಅಥವಾ ಪುರುಷರಿಗಾಗಳಿ ಇದ್ದರೆ ವಿವಾಹದ ಕಾರ್ಯದಲ್ಲಿ ವಿಳಂಬವಾಗುತ್ತದೆ, ಒಂದು ವೇಳೆ ವಿವಾಹವಾದರು ನಂತರದ ದಿನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕುಜದೋಷವಿದ್ದರೆ ಸ್ತ್ರೀಯರಿಗೆ ಮಾಂಗಲ್ಯ ಕಂಠಕ ಇರುತ್ತದೆ, ಪುರುಷರಿಗೆ ಆದರೆ ಪೂರ್ಣ ಆಯಸ್ಸು ಸಿಗುವುದಿಲ್ಲ. ಹಾಗಾದರೆ ಮಂಗಳವಾರದ ದಿನದಂದು ಕುಜ ದೋಷ ಇದ್ದವರು ಯಾವ ರೀತಿಯ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.ಕುಜದೋಷ ಇದ್ದವರು ಮಂಗಳವಾರ ದಿನ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ತಲೆಗೆ ಸ್ನಾನವನ್ನು ಮಾಡಿ ಮಂಗಳನಿಗೆ ಪ್ರಿಯವಾದಂತ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಬೇಕು. ಕೆಂಪು ಬಣ್ಣದ ವಸ್ತ್ರವನ್ನು ಧರಿಸಿಕೊಂಡು ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನವನ್ನು ಪಡೆದುಕೊಳ್ಳಬೇಕು.
ಓಂ ಸಂ ಶರವಣಭವಾಯ ನಮಃ ಎಂಬ ಮಂತ್ರವನ್ನು ಮಂಗಳವಾರ ದಿನದಂದು 108 ಬಾರಿ ಜಪಿಸುವುದರಿಂದ ಜೀವನದಲ್ಲಿ ಬಹಳಷ್ಟು ಒಳ್ಳೆಯದಾಗುತ್ತದೆ. ಮಂಗಳವಾರ ದಿನದಂದು ಸುಬ್ರಹ್ಮಣ್ಯಸ್ವಾಮಿಗೆ ತೊಗರಿಬೇಳೆ ಯಿಂದ ಮಾಡಿದ ವಸ್ತುವನ್ನು ನೈವೇದ್ಯವಾಗಿ ಇಡುವುದು ತುಂಬಾ ಒಳ್ಳೆಯದು. ಒಂದು ವೇಳೆ ಬ್ರಾಹ್ಮಣರು ಸಿಕ್ಕರೆ ಬ್ರಾಹ್ಮಣರಿಗೆ ತೊಗರಿಬೇಳೆಯನ್ನು ದಾನಮಾಡುವುದು ಶ್ರೇಷ್ಟಕರವಾಗಿರುತ್ತದೆ.

ಯಾರ ಜಾತಕದಲ್ಲಿ ಕುಜದೋಷವಿರುತ್ತದೆಯೋ ಅಂಥವರು ಯಾವುದೇ ಕಾರಣಕ್ಕೂ ಮಂಗಳವಾರದ ದಿನದಂದು ಆಸ್ಪತ್ರೆಗೆ ಹೋಗಬಾರದು ಹಾಗೂ ಯಾವುದೇ ರೀತಿಯ ಆಪರೇಷನ್ ಅನ್ನು ಮಾಡಿಸಿಕೊಳ್ಳಬಾರದು. ಮಂಗಳವಾರದ ದಿನ ಮಾಡಿಸಿದರೆ ಪುನಹ ಅದೇ ರೀತಿಯ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕುಜದೋಷವಿದ್ದವರು ಮಂಗಳವಾರದ ದಿನದಂದು ಯಾವುದೇ ಕಾರಣಕ್ಕೂ ಮಾಂಸಹಾರದ ಪದಾರ್ಥಗಳನ್ನು ಸೇವಿಸಬಾರದು. ಈ ಎಲ್ಲಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇ ಆದಲ್ಲಿ ಕುಜದೋಷದ ಪ್ರಭಾವವು ಕಡಿಮೆಯಾಗುತ್ತದೆ ಎಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *