ಶತ್ರು ದೋಷವು ಸಂಪೂರ್ಣವಾಗಿ ನಿವಾರಣೆಯಾಗಬೇಕಾದರೆ ಏನು ಮಾಡಬೇಕೆಂದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ನರಸಿಂಹ ಸ್ವಾಮಿಯನ್ನು ಕೆಲವೊಂದು ವಿಧಾನಗಳಿಂದ ಪೂಜೆ ಮಾಡಿದ್ದೇ ಆದಲ್ಲಿ ಶತ್ರುಗಳ ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಸಿರಿಸಂಪತ್ತಿನ ಜೀವನವನ್ನು ನಡೆಸಬೇಕೆಂದರೆ ಲಕ್ಷ್ಮೀನರಸಿಂಹಸ್ವಾಮಿ ಅನುಗ್ರಹವು ಮುಖ್ಯವಾಗಿರುತ್ತದೆ. ಹಾಗಾದರೆ ನರಸಿಂಹಸ್ವಾಮಿ ಯನ್ನು ಯಾವ ವಿಧವಾಗಿ ಪೂಜೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ನರಸಿಂಹಸ್ವಾಮಿಗೆ ತುಂಬಾ ಪ್ರಿಯವಾದ ವಾರವೆಂದರೆ ಮಂಗಳವಾರ, ಹಾಗಾಗಿ ಮಂಗಳವಾರದ ದಿನದಂದು ಮನೆಯಲ್ಲಿ ನರಸಿಂಹಸ್ವಾಮಿಯ ಚಿತ್ರಪಟ ಅಥವಾ ವಿಗ್ರಹವನ್ನು ಇಟ್ಟು ಪೂಜೆ ಮಾಡುವವರಿದ್ದರೆ ತುಂಬಾ ಒಳ್ಳೆಯದು. ಈ ವಿಧಾನವನ್ನು ಅನುಸರಿಸಿಕೊಂಡು ನರಸಿಂಹಸ್ವಾಮಿಯ ಪೂಜೆಯನ್ನು ಮಂಗಳವಾರದ ದಿನದಂದು ಮಾಡುವುದರಿಂದ ಸಂಪೂರ್ಣವಾಗಿ ಶತ್ರುಬಾಧೆ ಎಂಬುದು ನಿವಾರಣೆಯಾಗುತ್ತದೆ.ಮೊದಲಿಗೆ ಮಂಗಳವಾರದ ದಿನದಂದು ಮನೆಯನ್ನು ಶುಚಿ ಮಾಡಿ ನರಸಿಂಹಸ್ವಾಮಿಗೆ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಿ, ಕೆಂಪು ಅಕ್ಷತೆ ಯಿಂದ ಅರ್ಚನೆಯನ್ನು ಮಾಡಿ, ಕೆಂಪು ಹೂವುಗಳಿಂದ ಅಲಂಕಾರವನ್ನು ಮಾಡಿ ಪೂಜೆಯನ್ನು ಮಾಡಬೇಕು.

ನರಸಿಂಹ ಸ್ವಾಮಿಗೆ ಪೂಜೆಯನ್ನು ಮಾಡಬೇಕಾದರೆ ಓಂ ನರಸಿಂಹಾಯ ನಮಃ ಎಂಬ ಮಂತ್ರವನ್ನು 108 ಬಾರಿ ಜಪ ಮಾಡಿ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು. ನರಸಿಂಹ ಸ್ವಾಮಿಗೆ ತುಂಬಾ ಪ್ರಿಯವಾಗಿರುವುದು ಹೆಸರುಬೇಳೆಯ ಪಾನಕ. ಆದ್ದರಿಂದ ಹೆಸರುಬೇಳೆಯ ಪಾನಕವನ್ನು ನೈವೇದ್ಯವಾಗಿ ಇಟ್ಟು, ನೈವೇದ್ಯ ಮಾಡಿದ ಪಾನಕವನ್ನು ಕಡು ಬಡವರಿಗೆ ಹಂಚಿ ಅದನ್ನು ನಂತರ ನೀವು ಸೇವಿಸುವುದರಿಂದ ನರಸಿಂಹಸ್ವಾಮಿಯ ಸಂಪೂರ್ಣ ಅನುಗ್ರಹವು ಪ್ರಾಪ್ತಿಯಾಗುತ್ತದೆ.ಸರ್ವ ಶತ್ರುವು ಸಂಪೂರ್ಣವಾಗಿ ನಿವಾರಣೆಯಾಗಬೇಕು ಎಂದರೆ ನರಸಿಂಹಸ್ವಾಮಿಯ ಸುದರ್ಶನ ಮಂತ್ರವನ್ನು ಹೇಳುವುದರಿಂದ ಸರ್ವ ಶತ್ರು ದೋಷಗಳು ನಿವಾರಣೆಯಾಗುತ್ತದೆ. ಈ ಪೂಜೆಯನ್ನು ಪ್ರತಿವಾರವೂ ಮಾಡುವುದರಿಂದ ಸಂಪೂರ್ಣವಾಗಿ ಶತ್ರು ದೋಷವು ನಿವಾರಣೆಯಾಗುತ್ತದೆ. ಮಂಗಳವಾರದ ದಿನದಂದು ಸುದರ್ಶನ ಮಂತ್ರದ ಜೊತೆಗೆ ನರಸಿಂಹ ಕರಾವಲಂಬ ಸ್ತೋತ್ರವನ್ನು ಹೇಳುವುದರಿಂದ ಯಾವುದೇ ದುಷ್ಟಶಕ್ತಿಗಳ ಪ್ರಭಾವವು ಬೀಳುವುದಿಲ್ಲ,ಇದರ ಜೊತೆಗೆ ನರದೃಷ್ಟಿ,ನರ ದೋಷ,ಶತ್ರು ದೋಷವೆಲ್ಲವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

Leave a Reply

Your email address will not be published. Required fields are marked *