ಈ 5 ವಸ್ತುಗಳು ಮನೆಯಲ್ಲಿದ್ದರೆ ಬಡತನ ಎಂಬುದು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.

ಜ್ಯೋತಿಷ್ಯ

ಈ 5 ವಸ್ತುಗಳು ಮನೆಯಲ್ಲಿದ್ದರೆ ಬಡತನ ಎಂಬುದು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ..ಎಷ್ಟೋ ಜನ ಕಡುಬಡವರು ಈ 5 ವಸ್ತುಗಳನ್ನು ಅವರ ಬಳಿ ಇಟ್ಟುಕೊಂಡು ಶ್ರೀಮಂತರಾಗಿದ್ದಾರೆ. ನಂಬಿಕೆಯಿಂದಲೇ ಈ ಜಗತ್ತು ನಡೆಯುವುದು ಹಾಗೂ ನಂಬಿಕೆಯೇ ಎಲ್ಲರ ಶಕ್ತಿಯಾಗಿದೆ. ಈಗಿನ ಪ್ರಪಂಚದಲ್ಲಿ ಕೆಲವರು ಐಷಾರಾಮಿ ಜೀವನವನ್ನು ಇನ್ನೂ ಕೆಲವರು ಸಾಧಾರಣ ಜನಜೀವನವನ್ನು ಹಾಗೂ ಮತ್ತೆ ಕೆಲವರು ಬಡವರಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಕೆಲವೊಂದು ಬಾರಿ ವಾಸ್ತುದೋಷದ ಪರಿಣಾಮವಾಗಿ ಶ್ರೀಮಂತರಾಗಿದ್ದವರು ಕಡುಬಡವರಾಗಿ ಜೀವನವನ್ನು ನಡೆಸಬೇಕಾಗುತ್ತದೆ. ಬಡವರಾಗಿದ್ದವರು ಶ್ರೀಮಂತರಾಗಬೇಕು ಎಂದರೆ ಯಾವ 5 ವಸ್ತುಗಳನ್ನು ಅವರ ಮನೆಯಲ್ಲಿ ಇಟ್ಟುಕೊಳ್ಳಬೇಕು. ಹಾಗಾದರೆ ಆ 5 ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.

ಯಾರಿಗೆ ಭಗವಂತನಾದ ಗಣೇಶನ ಮೇಲೆ ನಂಬಿಕೆ ಇರುತ್ತದೆಯೋ ಅಂಥವರ ಜೀವನದಲ್ಲಿ ಯಾವುದೇ ರೀತಿಯ ಅಡೆತಡೆಗಳು, ತೊಂದರೆಗಳು, ವಿಘ್ನಗಳು ಬರುವುದಿಲ್ಲ. ಹಾಗಾಗಿ ಗಣೇಶನನ್ನು ವಿಘ್ನವಿನಾಶಕ ಎಂದು ಕರೆಯುತ್ತಾರೆ. ಧನ ಸಂಪತ್ತಿನ ಕಷ್ಟವನ್ನು ದೂರಮಾಡಲು ನೃತ್ಯ ಮಾಡುತ್ತಿರುವ ಗಣಪತಿಯ ಮೂರ್ತಿಯನ್ನು ತೆಗೆದುಕೊಂಡು ಬಂದು ಮನೆಯ ಮುಖ್ಯದ್ವಾರದ ಕಡೆ ದೃಷ್ಟಿ ಇರುವಂತೆ ಇಡಬೇಕು. ಮುಂಜಾನೆ ಎದ್ದ ತಕ್ಷಣ ಗಣೇಶನ ಮೂರ್ತಿಗೆ ನಮಸ್ಕಾರವನ್ನು ಮಾಡಬೇಕು. ಈ ರೀತಿಯಾಗಿ ಮಾಡುವುದರಿಂದ ನಿಂತುಹೋದ ಕೆಲಸಗಳು ಪರಿಪೂರ್ಣವಾಗುತ್ತದೆ ಹಾಗೂ ಧನ ಸಂಪತ್ತು ವೃದ್ಧಿಯಾಗುತ್ತದೆ.ವಾಸ್ತುವಿನ ದೋಷವನ್ನು ನಿವಾರಣೆ ಮಾಡಲು ಕೊಳಲು ತುಂಬಾ ಸಹಾಯಕಾರಿಯಾಗಿದೆ. ಆರ್ಥಿಕ ಪರಿಸ್ಥಿತಿಯನ್ನು ನೀವು ಸುಸ್ಥಿತಿಗೆ ತರಲು ಚಿಕ್ಕದಾದ ಬೆಳ್ಳಿಯ ಕೊಳಲನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ ಕೊಳಲು ಮನೆಯಲ್ಲಿದ್ದರೆ ಸಾಕ್ಷಾತ್ ಲಕ್ಷ್ಮೀದೇವಿ ವಾಸವಾಗಿರುತ್ತಾರೆ. ಇದರಿಂದ ವಾಸ್ತುದೋಷ ನಿವಾರಣೆಯಾಗಿ ಧನಸಂಪತ್ತು ಎಂಬುದು ವೃದ್ಧಿಯಾಗಲು ಶುರುವಾಗುತ್ತದೆ.

ಶಂಖವು ವಾಸ್ತುದೋಷವನ್ನು ನಿವಾರಣೆ ಮಾಡುವ ಅದ್ಭುತ ಶಕ್ತಿಯನ್ನು ಹೊಂದಿದೆ.ಯಾರ ಮನೆಯಲ್ಲಿ ಶಂಖವನ್ನು ಕೈಯಲ್ಲಿ ಹಿಡಿದುಕೊಂಡಿರುವ ಲಕ್ಷ್ಮೀದೇವಿ ಇರುತ್ತದೆಯೋ ಅಲ್ಲಿ ತಾಯಿ ಲಕ್ಷ್ಮೀದೇವಿ ವಾಸವಾಗಿರುತ್ತಾರೆ ಹಾಗೂ ದುಡ್ಡಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗುವುದಿಲ್ಲ.
ಧನ ಸಂಪತ್ತು ವೃದ್ಧಿ ಆಗಲು ತಾಯಿ ಲಕ್ಷ್ಮೀದೇವಿಯ ಜೊತೆಗೆ ಕುಬೇರ ದೇವರ ಫೋಟೋ ಅಥವಾ ವಿಗ್ರಹವಿದ್ದರೆ ತುಂಬಾ ಒಳ್ಳೆಯದು. ಕುಬೇರ ದೇವರು ಉತ್ತರದಿಕ್ಕಿಗೆ ಮಹಾರಾಜರಾಗಿದ್ದಾರೆ, ಆದ್ದರಿಂದ ಕುಬೇರ ದೇವರನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ವಾಸ್ತು ದೋಷವನ್ನು ನಿವಾರಣೆ ಮಾಡಲು ಪ್ರತಿನಿತ್ಯ ಒಂದು ಕರ್ಪೂರವನ್ನು ನಿಯಮಿತವಾಗಿ ಹಚ್ಚುವುದರಿಂದ ಕೆಟ್ಟ ಶಕ್ತಿಗಳು ನಾಶವಾಗುತ್ತದೆ ಹಾಗೂ ವಾಸ್ತು ದೋಷವು ನಿವಾರಣೆಯಾಗುತ್ತದೆ.

Leave a Reply

Your email address will not be published. Required fields are marked *