ಭಾಗಮಂಡಲದ ಭಗಂಡೇಶ್ವರ ದೇವಸ್ಥಾನದ ಬಗ್ಗೆ ಕಿರು ಪರಿಚಯ.

ಜ್ಯೋತಿಷ್ಯ

ಕರ್ನಾಟಕದ ಜೀವನದಿ ಎಂದು ಕರೆಯಲ್ಪಡುವ ಕಾವೇರಿ ನದಿಯು ಭಾರತದ 7 ಪವಿತ್ರ ನದಿಗಳ ಪೈಕಿ ಪ್ರಮುಖವಾಗಿದೆ. ಕಾವೇರಿ ನದಿಯನ್ನು ದಕ್ಷಿಣದ ಗಂಗಾ ಎಂದು ಕರೆಯಲಾಗುತ್ತದೆ. ಒಟ್ಟಾರೆ 745 ಕಿಲೋಮೀಟರ್ ಉದ್ದವನ್ನು ಹೊಂದಿರುವ ಕಾವೇರಿ ನದಿಯು ಕರ್ನಾಟಕ ರಾಜ್ಯದ ಕೊಡಗಿನ ತಲಕಾವೇರಿಯಲ್ಲಿ ಉಗಮಗೊಂಡು ಕರ್ನಾಟಕ ಹಾಗೂ ತಮಿಳುನಾಡು ಜನರ ಬಾಯಾರಿಕೆಯನ್ನು ನೀಗಿಸುತ್ತಾ ಕೊನೆಗೆ ಬಂಗಾಳಕೊಲ್ಲಿ ಸಮುದ್ರಕ್ಕೆ ಸೇರುತ್ತದೆ. ಕಾವೇರಿ ನದಿಯು ಹಾದು ಹೋಗುವ ಮಾರ್ಗದಲ್ಲಿ ಹಲವಾರು ಪುಣ್ಯ ಕ್ಷೇತ್ರಗಳಿವೆ ಅದರಲ್ಲಿ ಕೊಡಗಿನ ಭಾಗಮಂಡಲವು ಅತಿ ಪ್ರಮುಖವಾದದ್ದು.

ಓಂ ಶ್ರೀ ಜಗನ್ಮಾತೆ ಕಟೀಲು ದುರ್ಗ ಪರಮೇಶ್ವರಿ ದೇವಿ ಆರಾಧಕರು ಜ್ಯೋತಿಷ್ಯರು ದೈವಜ್ಞ ಶ್ರೀ ಪ್ರಧಾನತಾಂತ್ರಿಕ್ ವಿಧ್ಯಾಧರ್ ನಕ್ಷತ್ರಿ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9036527301. ನಿಮ್ಮಧ್ವನಿಯ ಮೂಲಕ ನಿಮ್ಮಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆಸಾಲಬಾದೆ ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮವೈಫಲ್ಯ, ಹಾಗೂ ಸ್ತ್ರೀ-ಪುರುಷ ವ-ಶೀ-ಕ-ರ-ಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲಪ್ರಶ್ನೆ, ಅಷ್ಟಮಂಡಲಪ್ರಶ್ನೆ, ಕವಡೆ ಪ್ರಶ್ನೆ ಹಾಕಿ  ನಿಮ್ಮಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 90365 27301.

ತಲಕಾವೇರಿಯಲ್ಲಿ ಉಗಮಿಸುವ ಕಾವೇರಿಯು ಗುಪ್ತಗಾಮಿನಿಯಾಗಿ ಭಾಗಮಂಡಲವನ್ನು ತಲುಪುತ್ತದೆ. ಭಾಗಮಂಡಲದಲ್ಲಿ ಕನ್ನಿಕೆ ಹಾಗೂ ಸುಜ್ಯೋತಿ ನದಿಗಳನ್ನು ಸೇರಿಕೊಂಡು ಆ ಕ್ಷೇತ್ರದಲ್ಲಿ ತ್ರಿವೇಣಿ ಸಂಗಮ ಸೃಷ್ಟಿಗೆ ಕಾರಣವಾಗುತ್ತದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಮಾಡಲು ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ಪಿಂಡ ಪ್ರಧಾನಕ್ಕೆ ಕರ್ನಾಟಕದಲ್ಲಿ ಈ ಭಾಗಮಂಡಲ ಪ್ರಸಿದ್ಧಿಯಾಗಿದೆ. ಭಾಗಮಂಡಲದ ಸ್ವಲ್ಪ ದೂರದಲ್ಲಿ ಭಗಂಡೇಶ್ವರ ಎಂಬ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಈಶ್ವರ, ಸುಬ್ರಹ್ಮಣ್ಯ, ಮಹಾವಿಷ್ಣು ಹಾಗೂ ಗಣಪತಿಯ ವಿಗ್ರಹಗಳು ಪ್ರತಿಷ್ಠಾಪನೆಯಾಗಿದೆ.

ಸ್ಥಳ ಪುರಾಣದ ಪ್ರಕಾರ ಭಾಗಮಂಡಲವು ಸುಬ್ರಹ್ಮಣ್ಯ ಸ್ವಾಮಿಯ ನೆಲೆಯಾಗಿದ್ದು ಸ್ಕಂದ ಕ್ಷೇತ್ರವೆಂದು ಖ್ಯಾತಿಯನ್ನು ಪಡೆದುಕೊಂಡಿತ್ತು. ಭಗಂಡ ಮಹಾಮುನಿಗಳು ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿಯನ್ನು ಕುರಿತು ಘೋರ ತಪಸ್ಸನ್ನು ಆಚರಿಸಿ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಿದ್ದರು. ಇವರ ತಪಸ್ಸಿಗೆ ಸಂತೃಪ್ತಿಗೊಂಡು ಷಣ್ಮುಖ ದೇವರು ತಮ್ಮ ದಿವ್ಯ ನೆಲೆಯಾಗಿದ್ದ ಸ್ಕಂದ ಕ್ಷೇತ್ರವನ್ನು ಮಹಾಮುನಿಗಳಿಗೆ ಭೂ ದಾನವಾಗಿ ನೀಡಿದ್ದರು. ಅನಂತರ ಪ್ರಜೆಗಳ ಕ್ಷೇಮಕ್ಕಾಗಿ ಭಗಂಡ ಮುನಿಗಳು ಶಿವನ ವಿಗ್ರಹವನ್ನು ಸ್ಥಾಪಿಸಿ ಪೂಜಿಸಲು ಪ್ರಾರಂಭಿಸಿದರು. ಇದರಿಂದ ಈ ಕ್ಷೇತ್ರ ಭಗಂಡ ಕ್ಷೇತ್ರ ಎಂದು ಕರೆಸಿಕೊಂಡಿತು. ಕ್ರಮೇಣವಾಗಿ ಈ ಹೆಸರು ಭಾಗಮಂಡಲವಾಗಿ ಬದಲಾಯಿತು.

ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಗೆ ಭಕ್ತರು ಹೋಗುವ ಮೊದಲು ತ್ರಿವೇಣಿ ಸಂಗಮದಲ್ಲಿ ಸ್ನಾನವನ್ನು ಮಾಡಿ ತಲಕಾವೇರಿಗೆ ಭೇಟಿ ನೀಡುವುದು ಇಲ್ಲಿಯ ಪದ್ಧತಿ. ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ 17 ಅಥವಾ 18 ನೇ ತಾರೀಖಿನಂದು ಬರುವ ತುಲಾಸಂಕ್ರಮಣದ ದಿನದಂದು ಬೃಹತ್ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭಗಂಡೇಶ್ವರ ದೇವಾಲಯದಲ್ಲಿ ಮರದ ಆಕೃತಿಯ ಒಂದು ವಿಶಾಲವಾದ ತಟ್ಟೆ ಇದೆ. ತುಲಾ ಸಂಕ್ರಮಣ ಹಾಗೂ ಅದರ ಹಿಂದಿನ ದಿವಸ ಕೊಡಗಿನ ಜನರು ಪಡಿ ಅಕ್ಕಿಯನ್ನು ತಂದು ದೇವಸ್ಥಾನದ ಅಕ್ಷಯಪಾತ್ರೆಗೆ ತಂದು ಹಾಕುತ್ತಾರೆ. ದೇವಾಲಯಕ್ಕೆ ಬರುವ ಭಕ್ತಾದಿಗಳು ಅಕ್ಷಯ ಪಾತ್ರೆಯಲ್ಲಿರುವ ಪಡಿ ಅಕ್ಕಿಯನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಧವಸ ಧಾನ್ಯದ ಕೊರತೆ ಎಂದಿಗೂ ಬರುವುದಿಲ್ಲ ಎಂಬುದು ಭಕ್ತರ ನಂಬಿಕೆ.ಭಾಗಮಂಡಲ ಸುತ್ತಮುತ್ತ ತಲಕಾವೇರಿ, ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಶಿಬಿರ ಹೀಗೆ ಹಲವಾರು ಪ್ರೇಕ್ಷಕರು ನೋಡುವಂತಹ ಸ್ಥಳಗಳು ಇವೆ. ಆದ್ದರಿಂದ ಭಾಗಮಂಡಲಕ್ಕೆ ಭೇಟಿ ನೀಡುವರು ಈ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಿ ಕಣ್ತುಂಬಿಕೊಳ್ಳಬಹುದು.

Leave a Reply

Your email address will not be published. Required fields are marked *