ಕಾಂಚಿಪುರಂನ ಕಂಚಿ ಏಕಾಂಬರೇಶ್ವರ ದೇವಸ್ಥಾನದ ಬಗ್ಗೆ ಕಿರು ಪರಿಚಯ..ಜಗತ್ತಿನ ಪ್ರತಿಯೊಂದು ಜೀವಿಯ ಭೌತಿಕ ಶರೀರವು ವಾಯು, ಜಲ, ಅಗ್ನಿ, ಭೂಮಿ, ಆಕಾಶ ಎಂಬ ಐದು ಅಂಶಗಳ ಸಂಯೋಜನೆಯಿಂದ ಮಾಡಲ್ಪಟ್ಟಿರುತ್ತದೆ. ಈ ಐದು ಅಂಶಗಳನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ. ಪ್ರಕೃತಿಯ ಐದು ಪಂಚಭೂತಗಳನ್ನು 5 ಶಿವಲಿಂಗಗಳು ಪ್ರತಿನಿಧಿಸುತ್ತವೆ. ವಿಶೇಷವೇನೆಂದರೆ 5 ಪಂಚಭೂತಗಳನ್ನು ಪ್ರತಿನಿಧಿಸುವ 5 ಶಿವಾಲಯ ಇರುವುದು ದಕ್ಷಿಣ ಭಾರತದಲ್ಲಿ. 5 ಶಿವಲಿಂಗ ಕ್ಷೇತ್ರಗಳಲ್ಲಿ 4 ಕ್ಷೇತ್ರಗಳು ತಮಿಳುನಾಡು ರಾಜ್ಯದಲ್ಲಿ ಇದ್ದರೆ ಮತ್ತೊಂದು ಆಂಧ್ರ ಪ್ರದೇಶದಲ್ಲಿದೆ. ಈ ಪಂಚಭೂತ ಶಿವ ಕ್ಷೇತ್ರಗಳೆಂದರೆ ಕಾಳಹಸ್ತಿ, ಶ್ರೀ ಅರುಣಾಚಲೇಶ್ವರ, ತಿಲೈ ನಟರಾಜಾಲಯ, ಜಂಬುಕೇಶ್ವರ ಮತ್ತು ಏಕಾಂಬರೇಶ್ವರ ದೇವಸ್ಥಾನ.
ಏಕಾಂಬರೇಶ್ವರ ದೇವಾಲಯ ಕಾಂಚಿಪುರಂನ ಅತಿ ದೊಡ್ಡ ದೇವಾಲಯ, ಈ ದೇವಸ್ಥಾನದ ಗೋಪುರವು 59 ಮೀಟರ್ ಎತ್ತರವಿದೆ. ಈ ಗೋಪುರವು ದೇಶದ ಅತಿ ಎತ್ತರವಾದ ಗೋಪುರವಾಗಿದೆ. ಈ ದೇವಸ್ಥಾನದಲ್ಲಿ ಎರಡು ಕಲ್ಯಾಣಿಗಳಿವೆ. ದೇವಸ್ಥಾನದ ಒಂದು ಕಲ್ಯಾಣಿಯನ್ನು ಕಂಬೈ ತೀರ್ಥ ಎಂದು ಕರೆಯಲಾಗುತ್ತದೆ. ಕಂಬೈ ತೀರ್ಥಕ್ಕೂ ಹಾಗೂ ಗಂಗಾನದಿಗು ಸಂಪರ್ಕವಿದೆ ಎಂದು ಭಾವಿಸಲಾಗುತ್ತದೆ. ದೇವಸ್ಥಾನದಲ್ಲಿ ಏಕಾಂಬರೇಶ್ವರ ಎಂದು ಕರೆಯಲ್ಪಡುವ ಶಿವಲಿಂಗವಿದೆ. ಈ ಶಿವಲಿಂಗವನ್ನು ಪಾರ್ವತಿ ದೇವಿ ಪ್ರತಿಷ್ಠಾಪನೆ ಮಾಡಿದ್ದಾರೆ ಎಂಬ ನಂಬಿಕೆ ಇದೆ.
ಈ ಶಿವಲಿಂಗವು ಪಂಚಭೂತಗಳಲ್ಲಿ ಒಂದಾದ ಪೃಥ್ವಿಯ ಸಂಕೇತವಾಗಿದೆ. ದೇವಸ್ಥಾನದ ಸುತ್ತಲೂ 1008 ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ದೇವಸ್ಥಾನದ ವಿಶಾಲ ಮಂಟಪವು 1000 ಮಂಟಪಗಳಿಂದ ಕೂಡಿದೆ.ಈ ದೇವಸ್ಥಾನದ ಮತ್ತೊಂದು ವಿಶೇಷವೇನೆಂದರೆ ಮಾರ್ಚ್ 19, 20, 21 ನೇ ತಾರೀಖಿನಂದು ಸೂರ್ಯನ ಕಿರಣಗಳು ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತದೆ. ಅಲ್ಲಿರುವ ಶಿವಲಿಂಗಕ್ಕೆ ಏಕಾಂಬರೇಶ್ವರ ಎಂಬ ಹೆಸರು ಬರಲು ಅಲ್ಲಿರುವ ಮಾವಿನ ಮರವೆ ಕಾರಣ. ಏಕ ಎಂದರೆ ಒಂದು, ಅಂಬರ ಎಂದರೆ ಮಾವಿನ ಮರ ಎಂದರ್ಥ ದೇವಸ್ಥಾನದ ಹಿಂಬದಿಯಲ್ಲಿ 3500 ವರ್ಷದ ಹಿಂದಿನ ಪುರಾತನ ಕಾಲದ ಮಾವಿನ ಮರವಿದೆ. ಈ ಮಾವಿನ ಮರದಲ್ಲಿ ಇರುವ 4 ಕೊಂಬೆಗಳು 4 ವೇದಗಳನ್ನು ಪ್ರತಿನಿಧಿಸುತ್ತದೆ. ಪಾರ್ವತಿ ದೇವಿಯು ಇದೇ ಮರದ ಕೆಳಗೆ ಕುಳಿತುಕೊಂಡು ಶಿವನನ್ನು ಜಪಿಸಿ ಹಾಗೂ ಅವರನ್ನು ಮೆಚ್ಚಿಸಿ ಮದುವೆಯಾದರೂ ಎಂಬ ನಂಬಿಕೆಯು ಕೂಡ ಇದೆ.
ಶಿವಪರಮಾತ್ಮ ಕಾಮಾಕ್ಷಿಯನ್ನು ಪರೀಕ್ಷಿಸಲೆಂದು ಗಂಗೆಯನ್ನು ದಕ್ಷಿಣ ಕಡೆ ಹರಿಸಲು ಕಳುಹಿಸಿಕೊಡುತ್ತಾರೆ. ಆಗ ತನ್ನ ಹತ್ತಿರ ಉಕ್ಕಿ ಬರುತ್ತಿದ್ದ ಗಂಗೆಯನ್ನು ಕಾಮಾಕ್ಷಿದೇವಿಯು ಕಾಳಿ ಸ್ವರೂಪವನ್ನು ತಾಳಿ ತನ್ನ ಕಪಾಲದಲ್ಲಿ ತುಂಬಿಕೊಳ್ಳುತ್ತಾರೆ. ಆಗ ಶಿವಪರಮಾತ್ಮ ಅಲ್ಲಿಯೇ ಹರಿಯುತ್ತಿದ್ದ ವೇದಾವತಿ ಎಂಬ ನದಿಯಲ್ಲಿ ಪ್ರವಾಹವನ್ನು ಸೃಷ್ಟಿಸುತ್ತಾರೆ. ಕಾಮಾಕ್ಷಿ ದೇವಿಯು ಮರಳಿನಿಂದ ಮಾಡಿದ್ದ ಶಿವಲಿಂಗವು ನೀರಿನಲ್ಲಿ ಕೊಚ್ಚಿ ಹೋಗುವುದೆಂಬ ಭಯದಿಂದ ಲಿಂಗವನ್ನು ತಬ್ಬಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಕಾಮಾಕ್ಷಿ ದೇವಿಯ ಬಳೆಯ ಗುರುತು ಶಿವಲಿಂಗದ ಮೇಲೆ ಬೀಳುತ್ತದೆ. ಆಗ ಕಾಮಾಕ್ಷಿ ದೇವಿಯ ಭಕ್ತಿಗೆ ಮೆಚ್ಚಿ ಶಿವ ಪರಮಾತ್ಮ ಧರೆಗೆ ಬಂದು ಕಾಮಾಕ್ಷಿಯನ್ನು ಮದುವೆಯಾಗುತ್ತಾರೆ. ಕಂಚಿಯ ಏಕಾಂಬರೇಶ್ವರ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುವುದಿಲ್ಲ, ಇಡೀ ಭಾರತದಲ್ಲಿ ಅಭಿಷೇಕವನ್ನು ಮಾಡದ ಶಿವ ದೇವಸ್ಥಾನವೆಂದರೆ ಅದು ಕಂಚಿಯ ಏಕಾಂಬರೇಶ್ವರ ದೇವಸ್ಥಾನ. ಎಲ್ಲಾ ಶಿವನ ದೇವಸ್ಥಾನದಲ್ಲಿ ಶಿವನ ಜೊತೆ ಪಾರ್ವತಿದೇವಿ ಇರುತ್ತಾರೆ ಆದರೆ ಈ ದೇವಸ್ಥಾನದಲ್ಲಿ ಪಾರ್ವತಿದೇವಿ ಇಲ್ಲ ಅದರ ಬದಲಾಗಿ ಕಾಮಾಕ್ಷಿ ದೇವಿಯ ಪ್ರತ್ಯೇಕ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಪೂಜಿಸಿದರೆ ಜನನ ಮರಣದ ಚಕ್ರದಿಂದ ಮುಕ್ತಿಯನ್ನು ಪಡೆಯಬಹುದು ಎನ್ನಲಾಗುತ್ತದೆ.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…