ದೇವರಿಗೆ ಆರತಿಯನ್ನು ಮನೆಯಲ್ಲಿ ಹೇಗೆ ಮಾಡಬೇಕು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ದೇವರಿಗೆ ಆರತಿಯನ್ನು ಮನೆಯಲ್ಲಿ ಹೇಗೆ ಮಾಡಬೇಕು ತಿಳಿದಿದೆಯೇ ನಿಮಗೆ  ಹಿಂದೂ ಧರ್ಮದಲ್ಲಿ ನಡೆದುಕೊಂಡು ಬಂದ ಹಲವು ಪರಂಪರೆ ಹಾಗೂ ವಿಧಿವಿಧಾನಗಳಲ್ಲಿ ಆರತಿಯು ಒಂದು. ಎಷ್ಟು ಭಕ್ತಿಯಿಂದ ಆರತಿಯನ್ನು ಮಾಡುತ್ತೇವೋ ಅದಕ್ಕೆ ಅಷ್ಟೇ ಪ್ರತಿಫಲ ಸಿಗುತ್ತದೆ. ಆರತಿಯ ಸಮಯದಲ್ಲಿ ಸಕಾರಾತ್ಮಕ ಶಕ್ತಿ ಸಂಚರಿಸುತ್ತದೆ. ಯಾವುದೇ ಮಂತ್ರ ಬರದಿದ್ದರೂ ಭಕ್ತಿಯಿಂದ ಆರತಿಯನ್ನು ಮಾಡಿದರೆ ದೇವರು ನಿಮ್ಮ ಪೂಜೆಯನ್ನು ಸ್ವೀಕರಿಸುತ್ತಾನೆ ಎಂದು ಸ್ಕಂದ ಪುರಾಣದಲ್ಲಿ ತಿಳಿಸಲಾಗಿದೆ.

ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.

ಪೂಜೆಯ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಆರತಿಯನ್ನು ಮಾಡುವುದು ಪದ್ಧತಿ. ದೇವರಿಗೆ ಗಂಧದಕಡ್ಡಿ ರೂಪದಲ್ಲಿ, ದೂಪದ ರೂಪದಲ್ಲಿ ಹಾಗೂ ದೀಪಗಳ ರೂಪದಲ್ಲಿ ಆರತಿಯನ್ನು ವೃತ್ತಾಕಾರದಲ್ಲಿ ಮಾಡಲಾಗುತ್ತದೆ. ಹಿಂದಿನ ಕಾಲದಲ್ಲಿ ವಿದ್ಯುಚ್ಛಕ್ತಿ ಇಲ್ಲದ ಕಾರಣ ದೇವಸ್ಥಾನದ ಗರ್ಭಗುಡಿಯಲ್ಲಿ ಮಹಾಮಂಗಳಾರತಿಯನ್ನು ಮಾಡಲಾಗುತ್ತಿತ್ತು. ದೇವರಿಗೆ ಆರತಿಯನ್ನು ಬೆಳಗುವವರನ್ನು ಸಕಾರಾತ್ಮಕದ ಕವಚ ಆವರಿಸುತ್ತದೆ.

ಕಾರ್ಯ ಸಫಲತೆಯನ್ನು ಪಡೆದುಕೊಳ್ಳಲು ತುಪ್ಪದ ಆರತಿಯನ್ನು ಮಾಡಲಾಗುತ್ತದೆ. ಯಾವುದೇ ಕೆಲಸಕಾರ್ಯಗಳಲ್ಲಿ ಅಡೆತಡೆ ಆಗಬಾರದೆಂದರೆ ತುಪ್ಪದ ದೀಪವನ್ನು ಹಚ್ಚಬೇಕು. ದೇವರ ಆಹ್ವಾನಕ್ಕೆ ಕರ್ಪೂರದ ಆರತಿಯನ್ನು ಮಾಡಲಾಗುತ್ತದೆ. ಕರ್ಪೂರದ ಗಮ ವಾತಾವರಣವನ್ನು ಶುದ್ಧಿ ಮಾಡುತ್ತದೆ. ಮಂಗಳಾರತಿಯನ್ನು ಮಾಡಬೇಕಾದರೆ ಘಂಟೆಯನ್ನು ಬಾರಿಸುವುದು ಮತ್ತು ಆ ಸಮಯದಲ್ಲಿ ಶಂಕ ಧ್ವನಿ ಮುಳುಗುವುದರಿಂದ ಮನಸ್ಸು ಒಂದು ಕಡೆ ಕೇಂದ್ರೀಕೃತವಾಗಿ ಹೊಸ ಚೈತನ್ಯ ಮೂಡುತ್ತದೆ.

ವಿಶೇಷವಾದ ಸಮಯದಲ್ಲಿ ಐದು ವಸ್ತುಗಳಿಂದ ಆರತಿಯನ್ನು ಮಾಡಬಹುದು. ಧೂಪ, ದೀಪ, ಶುಷಿಯಾದ ವಸ್ತ್ರದಿಂದ, ಕರ್ಪೂರದಿಂದ, ನೀರಿನಿಂದಲೂ ಕೂಡ ಆರತಿಯನ್ನು ಮಾಡಬಹುದು. ಆರತಿಯನ್ನು ಮಾಡಬೇಕಾದಾಗ ಓಂ ಆಕೃತಿ ಬರುವ ಹಾಗೆ ಆರತಿಯನ್ನು ಮಾಡಬೇಕು. ಆರತಿಯನ್ನು ನಮ್ಮ ಎಡಭಾಗದಿಂದ ಪ್ರಾರಂಭಿಸಿ ಬಲಭಾಗಕ್ಕೆ ತರಬೇಕು. ಮೊದಲು ದೇವರ ಪಾದಗಳಿಗೆ 4 ಬಾರಿ, ನಾಭಿಯ ಬಳಿ 2 ಸಾರಿ, ಮುಖದ ಬಳಿ 1 ಸಾರಿ, ಮೂರ್ತಿ ಬಳಿ 7 ಬಾರಿ ಆರತಿಯನ್ನು ಮಾಡಬೇಕು. ಆರತಿ ಆದನಂತರ ತಟ್ಟೆಯ 4 ಬದಿಗೆ ಜಲವನ್ನು ಪ್ರೋಕ್ಷಣೆ ಮಾಡಬೇಕು. ಇದರಿಂದ ಆರತಿ ಶಾಂತವಾಗುತ್ತದೆ. ಬೇರೆಬೇರೆ ದೇವರುಗಳಿಗೆ ಆರತಿಯನ್ನು ಮಾಡಬೇಕಾದರೆ ತಿರುಗಿಸುವ ಸಂಖ್ಯೆ ಬೇರೆ ಬೇರೆ ಇದೆ.ಶಿವನಿಗೆ 3 ಬಾರಿ ಅಥವಾ 5 ಬಾರಿ, ಗಣಪತಿಗೆ 4 ಬಾರಿ, ವಿಷ್ಣುವಿಗೆ 12 ಬಾರಿ, ಸೂರ್ಯನಿಗೆ 7 ಬಾರಿ, ದೇವಿ ದುರ್ಗೆಗೆ 9 ಬಾರಿ ಆರತಿಯನ್ನು ಮಾಡಬೇಕು. ಪ್ರತಿನಿತ್ಯ ಮನೆಯಲ್ಲಿ 2 ಬಾರಿ ಆರತಿಯನ್ನು ಮಾಡುವುದು ಒಳಿತು. ಒಂದು ಆರತಿಯನ್ನು ಪ್ರಾತಃಕಾಲದಲ್ಲಿ ಮತ್ತೊಂದು ಆರತಿಯನ್ನು ಸಾಯಂಕಾಲ ಮಾಡಬಹುದು.

 

Leave a Reply

Your email address will not be published. Required fields are marked *