ದಾರಿಯಲ್ಲಿ ಸಿಗುವ ಹಣ ಏನನ್ನು ಸೂಚಿಸುತ್ತದೆ ತಿಳಿದಿದೆಯಾ ನಿಮಗೆ.

ಜ್ಯೋತಿಷ್ಯ

ದಾರಿಯಲ್ಲಿ ಸಿಗುವ ಹಣ ಏನನ್ನು ಸೂಚಿಸುತ್ತದೆ ತಿಳಿದಿದೆಯಾ ನಿಮಗೆ.

ಈ ಕಾಲದಲ್ಲಿ ಕಷ್ಟಪಟ್ಟು ದುಡಿದವರಿಗೆ ಮಾತ್ರ ಗೊತ್ತಿರುತ್ತದೆ ದುಡ್ಡಿನ ಬೆಲೆ ಏನು ಎಂದು. ನಾವು ಜೀವನದಲ್ಲಿ ಹಣ, ಚಿನ್ನ, ಪರ್ಸ್ ಇತ್ಯಾದಿ ವಸ್ತುಗಳನ್ನು ತುಂಬಾ ಜೋಪಾನವಾಗಿ ಇಟ್ಟುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಈ ವಸ್ತುಗಳನ್ನು ಕಳೆದುಕೊಳ್ಳುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ಕಳೆದುಹೋದ ವಸ್ತುಗಳನ್ನು ಹೇಗೆ ಪಡೆಯಬಹುದೆಂದು ತಿಳಿದುಕೊಳ್ಳೋಣ ಬನ್ನಿ.

ಧನ ಸಂಪತ್ತು ಎಂಬುದು ಮನುಷ್ಯನ ಜೀವನದಲ್ಲಿ ಅತಿಮುಖ್ಯವಾದ ಸಂಪತ್ತು. ಕೆಲವು ಜನರಿಗೆ ಹಣ ಇಲ್ಲದಿದ್ದರೆ ದೈನಂದಿನ ಜೀವನವನ್ನು ನಡೆಸುವುದಕ್ಕೂ ಕಷ್ಟಪಡುತ್ತಾರೆ. ಒಂದು ವೇಳೆ ದಾರಿಯಲ್ಲಿ ನಿಮಗೇನಾದರೂ ಹಣವಿರುವುದು ಕಂಡುಬಂದರೆ ಅದು ಈಶ್ವರನ ಸಂಕೇತವಾಗಿರುತ್ತದೆ.

ಒಂದು ವೇಳೆ ನಿಮಗೇನಾದರೂ ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ನಾಣ್ಯಗಳು ಬಿದ್ದಿರುವುದು ಕಂಡು ಬಂದರೆ ಇದು ತಾಯಿ ಲಕ್ಷ್ಮೀದೇವಿ ನೀಡುತ್ತಿರುವ ಸಂಕೇತವಾಗಿರುತ್ತದೆ ಮತ್ತು ಲಕ್ಷ್ಮಿ ದೇವಿಯ ಕೃಪೆ ನಿಮಗೆ ಸಿಗಲಿದೆ ಎಂಬರ್ಥವನ್ನು ಕೂಡ ಕೊಡುತ್ತದೆ. ಒಂದು ಬೇಳೆ ನಾಣ್ಯವನ್ನು ಎತ್ತಿಕೊಂಡು ನಿಮ್ಮ ಹತ್ತಿರ ಇಟ್ಟುಕೊಂಡರೆ ಶುಭ ಫಲ ನಿಮಗೆ  ಲಭಿಸಲಿದೆ.

ಒಂದುವೇಳೆ ದಾರಿಯಲ್ಲಿ ನಿಮಗೇನಾದರೂ ಹಣ ಸಿಕ್ಕರೆ ಯಾವುದೇ ಕಾರಣಕ್ಕೂ ಮನೆಗೆ ತೆಗೆದುಕೊಂಡು ಹೋಗಬೇಡಿ ಅದರ ಬದಲು ವಾರಸುದಾರರಿಗೆ ತಲುಪುವುದಕ್ಕೆ ಪ್ರಯತ್ನಪಡಿ ಅದು ಸಾಧ್ಯವಾಗದಿದ್ದರೆ ದೇವರ ಹುಂಡಿಗೆ ಆ ಹಣವನ್ನು ಹಾಕಿ. ಏಕೆಂದರೆ ಆ ಹಣ ನಿಮ್ಮ ಮನೆಯಲ್ಲಿ ಸೇರಿಕೊಂಡರೆ ನಕಾರಾತ್ಮಕ ಶಕ್ತಿ ಸಂಚಲನ ಜಾಸ್ತಿಯಾಗುತ್ತದೆ ಮತ್ತು ಕುಟುಂಬದ ಸದಸ್ಯರ ಮೇಲೆ ನಕಾರಾತ್ಮಕ ಭಾವನೆಯನ್ನು ಮೂಡಿಸುತ್ತದೆ.

ಒಂದು ವೇಳೆ ನೀವೇನಾದರೂ ವಸ್ತುವನ್ನು ಕಳೆದುಕೊಂಡರೆ ವಾಸ್ತುಶಾಸ್ತ್ರದ ಪ್ರಕಾರ ಈ ಮಂತ್ರವನ್ನು ಹೇಳಿ ಅದನ್ನು ಮರಳಿ ಪಡೆಯುವ ಅವಕಾಶವಿರುತ್ತದೆ. ಹಾಗಾದರೆ ಆ ಮಂತ್ರ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.

ಓಂ ಕ ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹು ಸಹಸ್ರ ವಾನ್ ಹ್ರೀಂ ತಸ್ಯ ಸ್ಮರಣಾದೇವ ಹತಂ ನಷ್ಟಂಚ  ಲಭ್ಯತೆ ಕ್ರೋಮ್ ಸಹಸ್ರಾರ ಹುಂಪಟ್ ಕ್ರೋಮ್ ಹ್ರೀಂ ಓಂ.

ಈ ಮಂತ್ರವನ್ನು ಪಠಿಸಿದ್ದೇ ಆದಲ್ಲಿ ಕಳೆದು ಹೋದ ವಸ್ತುಗಳು ಸಿಗುವ ಅವಕಾಶ ಜಾಸ್ತಿ ಇರುತ್ತದೆ.

Leave a Reply

Your email address will not be published. Required fields are marked *