Your cart is currently empty!
ಹೆಣ್ಣುಮಕ್ಕಳು ಈ ತಪ್ಪನ್ನು ಮಾಡಿದರೆ ಮನೆಗೆ ದರಿದ್ರತನ ಬರುವುದು ಖಚಿತ.
ಸ್ತ್ರೀಯರು ಮಾಡುವ ಈ ನಾಲ್ಕು ತಪ್ಪುಗಳಿಂದ ಮನೆ ಹಾಗೂ ಗಂಡನು ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಹಾಗೂ ಜೀವನವೇ ನಾಶವಾಗುತ್ತದೆ. ಮನುಷ್ಯನಿಗೆ ಜೀವನದಲ್ಲಿ ಗುರಿ ಇರಬೇಕು, ಇಲ್ಲವಾದರೆ ಜೀವನವು ಸಾರ್ಥಕತೆಯಾಗುವುದಿಲ್ಲ. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಕಷ್ಟು ಅಡೆತಡೆಗಳು ಬರುತ್ತದೆ, ಕೆಲವೊಂದು ಬಾರಿ ಅಡೆತಡೆಗಳು ಬರುವುದಕ್ಕೆ ನಾವು ಮಾಡುವಂತ ಕೆಲವೊಂದು ತಪ್ಪುಗಳು ಕಾರಣವಾಗುತ್ತದೆ. ಹಿಂದಿನ ಜನ್ಮದಲ್ಲಿ ಮಾಡಿದ ಕೆಲವೊಂದು ತಪ್ಪುಗಳಿಂದ ಈ ಜನ್ಮದಲ್ಲಿ ಕಷ್ಟವನ್ನು ಅನುಭವಿಸುವಂತಹ ಪರಿಸ್ಥಿತಿ ಬರುತ್ತದೆ ಎಂದರೆ ತಪ್ಪಾಗಲಾರದು. ಪುರಾಣಗಳ ಪ್ರಕಾರ ಸ್ತ್ರೀಯು ಮಾಡುವ ಕೆಲವೊಂದು ತಪ್ಪುಗಳಿಂದ ಮನೆ ಹಾಗೂ ಗಂಡನು ಬೀದಿಗೆ ಬಿದ್ದರು ಆಶ್ಚರ್ಯಪಡುವಂತ್ತಿಲ್ಲ ಹಾಗೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದರೆ ತಪ್ಪಾಗಲಾರದು.ಸ್ತ್ರೀಯು ಮಾಡುವ ಈ ತಪ್ಪುಗಳಿಂದ ಗಂಡನು ಹಾಗೂ ಆತನ ಮನೆಯವರು ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ವ್ಯಾಪಾರ-ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುವಂತೆ ಆಗುತ್ತದೆ.
ಮೊದಲಿಗೆ ಹೆಣ್ಣುಮಕ್ಕಳು ಪ್ರತಿನಿತ್ಯ ತಡವಾಗಿ ಏಳುವುದು, ಈ ರೀತಿ ಹೆಣ್ಣು ಮಕ್ಕಳು ತಡವಾಗಿ ಏಳುವುದರಿಂದ ಮನೆಗೆ ದರಿದ್ರತನ ತಂದುಕೊಡುತ್ತದೆ ಹಾಗೂ ಇದು ಒಳ್ಳೆಯದು ಅಲ್ಲ. ಹೆಣ್ಣುಮಕ್ಕಳು ಪ್ರತಿನಿತ್ಯ ಮುಂಜಾನೆ ಬೇಗನೆ ಏಳುವುದರಿಂದ ಮನೆಯಲ್ಲಿ ಬದಲಾವಣೆಯ ಬೆಳಕು ಮೂಡುತ್ತದೆ ಹಾಗೂ ಒಳ್ಳೆಯದಾಗುತ್ತದೆ.
ಮನೆಯಲ್ಲಿ ಹೆಣ್ಣುಮಕ್ಕಳು ಕೆಟ್ಟ ಪದವನ್ನು ಉಪಯೋಗಿಸಿ ಮಾತನಾಡಬಾರದು ಹಾಗೂ ಮುಖವನ್ನು ಗಂಟು ಹಾಕಿಕೊಂಡು ಕೂತುಕೊಳ್ಳಬಾರದು. ಪುರಾಣಗಳ ಪ್ರಕಾರ ಹೆಣ್ಣುಮಕ್ಕಳು ಈ ರೀತಿಯ ನಡವಳಿಕೆಯನ್ನು ಇಟ್ಟುಕೊಂಡಿದ್ದರೆ ಮನೆಯು ಏಳಿಗೆ ಆಗಲು ಸಾಧ್ಯವಿಲ್ಲ.
ಯಾರ ಮನೆಯಲ್ಲಿ ಕಲಹ ಮಾಡುವ, ಜಗಳ ಮಾಡುವ ಹೆಣ್ಣುಮಕ್ಕಳು ಇರುತ್ತಾರೋ ಅಲ್ಲಿ ಲಕ್ಷ್ಮೀದೇವಿಯು ವಾಸಿಸುವುದಿಲ್ಲ. ಮನೆಯಲ್ಲಿರುವ ಹೆಣ್ಣು ಮಕ್ಕಳು ಯಾವಾಗಲೂ ಸಂತೋಷದಿಂದ ನಗುನಗುತ್ತಾ ಇರಬೇಕು. ಆದ್ದರಿಂದ ಯಾರ ಮನೆಯಲ್ಲಿ ಹೆಣ್ಣು ಮಕ್ಕಳು ನಗುನಗುತ್ತಾ ಸಂತೋಷದಿಂದ ಇರುತ್ತಾರೋ ಆ ಮನೆಯಲ್ಲಿ ಏಳಿಗೆಯನ್ನು ಕಾಣಬಹುದು.
ಹೆಣ್ಣು ಮಕ್ಕಳು ಬಳಸುವ ಬಳೆ ಹಾಗೂ ಗೆಜ್ಜೆಯನ್ನು ಬೇರೆಯವರಿಗೆ ಕೊಡಬಾರದು. ಒಂದು ವೇಳೆ ಈ ವಸ್ತುಗಳನ್ನು ಬೇರೆಯವರಿಗೆ ಕೊಟ್ಟರೆ ಲಕ್ಷ್ಮೀದೇವಿಯನ್ನು ಬೇರೆಯವರಿಗೆ ಕೊಟ್ಟಂತೆ ಆಗುತ್ತದೆ. ಹೆಣ್ಣುಮಕ್ಕಳು ಮನೆಯನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಯಾರ ಮನೆಯು ಸ್ವಚ್ಛತೆಯಿಂದ ಕೂಡಿರುತ್ತದೆಯೋ ಆ ಮನೆಯಲ್ಲಿ ಲಕ್ಷ್ಮೀದೇವಿಯು ವಾಸ ಮಾಡುತ್ತಾಳೆ. ಆದ್ದರಿಂದ ಮನೆಯು ಏಳಿಗೆಯನ್ನು ಕಾಣಬೇಕೆಂದರೆ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಮೇಲೆ ಹೇಳಲಾಗಿರುವ ತಪ್ಪನ್ನು ಮಾಡಬಾರದು.